Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಶಿವಮೊಗ್ಗ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮೆಸ್ಕಾಂ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ಸಭೆಯಲ್ಲಿ ಟಿಸಿ ಸಮಸ್ಯೆ ನಿವಾರಿಸಿ ರೈತರಿಗೆ ಸಕಾಲದಲ್ಲಿ ಟಿಸಿ ಸರಬರಾಜು ಮಾಡುವಂತೆ ಖಡಕ್ ಸೂಚನೆ ನೀಡಿದರು. ಇಂದು ಸಾಗರ ಶಾಸಕ ಮತ್ತು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಸಭೆಯ ಪ್ರಮುಖ ಹೈಲೈಟ್ಸ್ * ಹೊಸನಗರ ತಾಲ್ಲೂಕು ಈ ಹಿಂದೆ 20 ಎಂ.ವಿ.ಎ ಇತ್ತು ಅದು ಸುಟ್ಟುಹೋಗಿರುವುದರಿಂದ, ತುರ್ತಾಗಿ 10 ಎಂ.ವಿ.ಎ ಹಾಕಿದ್ದೀರಿ ಆದರೆ 20 ಎಂ.ವಿ.ಎ ಬೇಕಾಗಿದ್ದು ಇದರಿಂದ ಈಗ ಸಮರ್ಪಕವಾಗಿ ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ ಕೂಡಲೇ 20 ಎಂ.ವಿ.ಎ ಅಳವಡಿಸಲು ಕ್ರಮ ವಹಿಸುವುದು. * 25 ಕೆ.ವಿ ಯ ಟಿ.ಸಿಗಳನ್ನು 63 ಕೆ.ವಿ ಗಳನ್ನಾಗಿ ಉನ್ನತೀಕರಿಸುವ ಬಗ್ಗೆ. ಬೇಡಿಕೆಗೆ ತಕ್ಕಂತೆ ರಿಪೇರಿ ಆಗದೇ ಇರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. * ಟಿ.ಸಿ ಗಳ ಕೊರತೆ…

Read More

ಬೆಂಗಳೂರು: ಮೆಟ್ರೋ ಪ್ರಯಾಣದರ ಏರಿಕೆಯನ್ನು ಹಿಂಪಡೆಯಬೇಕೆಂದು ಶಾಸಕ ರವಿ ಸುಬ್ರಹ್ಮಣ್ಯ ಅವರು ಆಗ್ರಹಿಸಿದ್ದಾರೆ. ಬಿಜೆಪಿ ನಿಯೋಗವು ಇಂದು ಮೆಟ್ರೋ ಎಂ.ಡಿ. ಭೇಟಿಯಾಗಿದೆ. ಇಲ್ಲಿ ದೇಶದಲ್ಲೇ ಮೆಟ್ರೋ ದರ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ. ಇದನ್ನು ಖಂಡಿಸುತ್ತೇವೆ. ಮೆಟ್ರೋ ಸಂಪಾದನೆ ಮಾಡುವ ಇಲಾಖೆ ಅಲ್ಲ, ಸೇವಾ ವಲಯ ಇದು; ನಗರದ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಮೆಟ್ರೊ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಏಕಾಏಕಿ ದರ ಏರಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಈಗಾಗಲೇ ರಾಜ್ಯ ಸರ್ಕಾರ ಜನರ ಮೇಲೆ ದರ ಏರಿಕೆಯ ಬರೆ ಎಳೆದಿದೆ. ಈಗ ಮೆಟ್ರೋ ದರ 46% ಏರಿಕೆ ಮಾಡಿ ಪ್ರಹಾರ ಮಾಡಲಾಗಿದೆ ಎಂದ ಅವರು, ಮೆಟ್ರೋ ನಿಲ್ದಾಣಗಳಲ್ಲಿ ಜನರಿಗೆ ಅಗತ್ಯ ಅನುಕೂಲಗಳನ್ನೂ ಮೆಟ್ರೋ ಮಾಡಲಿ ಎಂದು ಒತ್ತಾಯಿಸಿದರು. ಮೆಟ್ರೋ ಸಾರ್ವಜನಿಕರಿಗಾಗಿ ಇದೆ. ಲಾಭವನ್ನೇ ನೋಡುವುದು ಸರಿಯಲ್ಲ; ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಬೇಕು ಎಂಬ ದೃಷ್ಟಿಯಿಂದ ಇದು ಜಾರಿಯಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಪ್ರಯಾಣದರ ಹೆಚ್ಚಳ…

Read More

ಬೆಂಗಳೂರು: ಇಂದಿನಿಂದ ಜಾರಿಗೆ ಬರುವಂತೆ ಬಿಎಂಆರ್ ಸಿಎಲ್ ನಮ್ಮ ಮೆಟ್ರೋ ದರವನ್ನು ಏರಿಕೆ ಮಾಡಲಾಗಿತ್ತು. ಶೇ.47ರಷ್ಟು ದರವನ್ನು ಹೆಚ್ಚಳ ಮಾಡಿದ್ದರಿಂದ ಪ್ರಯಾಣಿಕರಿಗೆ ಭಾರಿ ಹೊರೆಯಾದಂತೆ ಆಗಿದೆ. ಈ ದರವನ್ನು ಇಳಿಕೆ ಮಾಡದೇ ಇದ್ದರೇ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಬೆಂಗಳೂರು ನಗರ ಘಟಕವು ಬಿಎಂಆರ್ ಸಿಎಲ್ ಗೆ ಪತ್ರ ಬರೆದು ಎಚ್ಚರಿಕೆ ನೀಡಿದೆ. ಇಂದು ಬಿಎಂಆರ್ ಸಿಎಲ್ ಗೆ ಪತ್ರ ಬರೆದಿರುವಂತ ಬೆಂಗಳೂರು ನಗರ ಬಿಜೆಪಿ ಘಟಕವು, ಮೆಟ್ರೋ ರೈಲು ಸಂಚಾರ ದರವನ್ನು ತೀವ್ರವಾಗಿ ಹೆಚ್ಚಳ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ನಗರದ ಜನತೆಗೆ ಬಹು ದೊಡ್ಡ ಆಘಾತವನ್ನು ನೀಡಿದೆ. ಬೆಂಗಳೂರು ನಗರದ ನಾಗರಿಕರ ಮೇಲೆ ಒಂದಾದ ಮೇಲೆ ಒಂದು ದರ ಏರಿಕೆಯ ಗದಾ ಪ್ರಹಾರ ರಾಜ್ಯ ಸರ್ಕಾರ ಮಾಡುತ್ತಿರುವುದು ಇವರ ಜನವಿರೋಧಿ ನೀತಿಯನ್ನು ಬಯಲು ಮಾಡಿದೆ ಎಂಬುದಾಗಿ ಕಿಡಿಕಾರಿದೆ. ಒಂದೂವರೆ ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಜನತೆಯು ಕೇವಲ ವಿವಿಧ ಸೇವೆಗಳ ದರ ಏರಿಕೆಯನ್ನು ಕಾಣುತ್ತಿದ್ದಾರೆಯೇ ವಿನಹ ಸೇವೆಯ ಗುಣಮಟ್ಟದಲ್ಲಿ ಮಾತ್ರ ಏರಿಕೆ…

Read More

ಬೆಂಗಳೂರು: ಮುಡಾ ಹಗರಣ ಸಂಬಂಧ ಸಚಿವ ಬೈರತಿ ಸುರೇಶ್ ಹಾಗೂ ಸಿಎಂ ಪತ್ನಿ ಪಾರ್ವತಿಯವರಿಗೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದರು. ಈ ಸಮನ್ಸ್ ಗೆ ಹೈಕೋರ್ಟ್ ಫೆಬ್ರವರಿ 20ರವರೆಗೆ ತಡೆಯಾಜ್ಞೆ ವಿಸ್ತರಿಸಿ ಆದೇಶಿಸಿದೆ. ಇಂದು ಸಿಎಂ ಸಿದ್ಧರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಇಡಿ ಸಮನ್ಸ್ ರದ್ದುಕೋರಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಪೀಠವು ನಡೆಸಿತು. ವಾದ ಪ್ರತಿವಾದ ಆಲಿಸಿದಂತ ನ್ಯಾಯಪೀಠವು, ಫೆಬ್ರವರಿ 20ಕ್ಕೆ ವಿಚಾರಣೆ ನಿಗದಿ ಪಡಿಸಿದೆ. ಅಲ್ಲದೇ ಅಲ್ಲಿಯವರೆಗೆ ಇಡಿ ಸಮನ್ಸ್ ಗೆ ತಡೆಯಾಜ್ಞೆಯನ್ನು ವಿಸ್ತರಿಸಿ ಆದೇಶಿಸಿದೆ. ಹೀಗಾಗಿ ಸಿಎಂ ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದೆ. https://kannadanewsnow.com/kannada/minister-mahadevappa-should-discuss-the-injustice-done-to-valmiki-samaj-r-ashoka/ https://kannadanewsnow.com/kannada/muda-scam-14-plots-have-nothing-to-do-with-byrathi-suresh-says-cv-nagesh/

Read More

ಬೆಂಗಳೂರು: ಮುಡಾ ಹಗರಣ ಸಂಬಂಧ ಸಚಿವ ಭೈರತಿ ಸುರೇಶ್ ಅವರಿಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿ ಶಾಕ್ ನೀಡಿದ್ದರು. ಈ ಸಮನ್ಸ್ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಪೀಠ ಆರಂಭಿಸಿದೆ. ಇಂದು ಹೈಕೋರ್ಟ್ ನಲ್ಲಿ ಸಚಿವ ಭೈರತಿ ಸುರೇಶ್ ಇಡಿ ಸಮನ್ಸ್ ರದ್ದುಕೋರಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಸಚಿವ ಭೈರತಿ ಸುರೇಶ್ ಪರವಾಗಿ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸುತ್ತಿದ್ದಾರೆ. ಡಿಬಿ ನಟೇಶ್ ವಿರುದ್ಧ ಶೋಧ, ಜಪ್ತಿ ಆದೇಶವನ್ನು ರದ್ದುಗೊಳಿಸಿದೆ. ಇಡಿ ಬಗ್ಗೆ ಕ್ರಮ ಕೈಗೊಳ್ಳುವ ಸ್ವಾತಂತ್ರ್ಯವನ್ನು ಹೈಕೋರ್ಟ್ ಗೆ ನೀಡಲಾಗಿದೆ ಎಂಬುದಾಗಿ ವಾದಿಸಿದರು. ಇಡಿ ತನಿಖಾಧಿಗಳು ನಮೂನೆಯೊಂದನ್ನು ಕಳುಹಿಸಿದ್ದಾರೆ. ಇದರಲ್ಲಿ ಭೈರತಿ ಕುಟುಂಬದವರು, ಉದ್ಯೋಗಿಗಳ ಇತರರ ವಿವರ ಕೇಳಿದ್ದಾರೆ. ಇದು ಅವರ ಖಾಸಗಿತನದ ಸ್ಪಷ್ಟ ಉಲ್ಲಂಘನೆ ಎಂಬುದಾಗಿ ವಾದಿಸಿದರು. ಇನ್ನೂ ವಾದ ಪ್ರತಿವಾದ ನಡೆಯುತ್ತಿದ್ದು, ಹೈಕೋರ್ಟ್ ತೀರ್ಪು ಏನು ಎಂಬುದನ್ನು ಕಾದು ನೋಡಬೇಕಿದೆ. https://kannadanewsnow.com/kannada/muda-scam-14-plots-have-nothing-to-do-with-byrathi-suresh-says-cv-nagesh/ https://kannadanewsnow.com/kannada/minister-mahadevappa-should-discuss-the-injustice-done-to-valmiki-samaj-r-ashoka/

Read More

ಬೆಂಗಳೂರು: ಸಚಿವ ಡಾ.ಮಹಾದೇವಪ್ಪ ಅವರೇ ವಾಲ್ಮೀಕಿ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ ಮಾಡುವುದು ಉತ್ತಮ ಅಲ್ಲವೇ ಅಂತ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಸ್ವಾಮಿ ಹೆಚ್.ಸಿ ಮಹಾದೇವಪ್ಪ ಅವರೇ, ತಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಅಣಬೆಗಳಂತೆ ತೆಲೆ ಎತ್ತುವ ಎಡಬಿಡಂಗಿ ಬುದ್ದಿಜೀವಿಗಳ ಅಧಿಕಪ್ರಸಂಗಿತನ ನೋಡಿ ನೋಡಿ ಕನ್ನಡಿಗರಿಗೆ ಸಾಕಾಗಿದೆ ಎಂದಿದ್ದಾರೆ. ಈಗ ಇನ್ನೊಂದು ಅನಾವಶ್ಯಕ ಚರ್ಚೆ ಹುಟ್ಟುಕಾಕುವ ಮೂಲಕ ತಾವು ಮತ್ತೊಬ್ಬ ಬುದ್ಧಿಜೀವಿ ಆಗಲು ಪ್ರಯತ್ನ ಪಡಬೇಡಿ ಎಂಬುದಾಗಿ ತಿಳಿಸಿದ್ದಾರೆ. ಬುದ್ಧ, ಬಸವ, ಅಂಬೇಡ್ಕರರ ಹೆಸರು ಹೇಳಿಕೊಂಡು ರಾಜಕೀಯ ಮಾಡಿ ಅಧಿಕಾರ ಅನುಭವಿಸುವುದು ದೊಡ್ಡದಲ್ಲ. ಅಧಿಕಾರವಿದ್ದಾಗ ಆ ಮಹನೀಯರ ಹಾದಿಯಲ್ಲಿ ನಡೆದು ಪ್ರಾಮಾಣಿಕವಾಗಿ ಜನಸೇವೆ ಮಾಡುವುದು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದ್ದಾರೆ. ವಾಲ್ಮೀಕಿಯ ರಾಮನ ಬಗ್ಗೆ ಚರ್ಚೆ ಆಗುವುದಕ್ಕಿಂತ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ, ಅದರಿಂದ ವಾಲ್ಮೀಕಿ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಚರ್ಚೆ…

Read More

ಬಳ್ಳಾರಿ : 2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ರೂ.7,550/- ರ ಜೊತೆಗೆ ರಾಜ್ಯ ಸರ್ಕಾರದ ಪ್ರೋತಾಹ ಧನ ರೂ.450/- ಪ್ರತಿ ಕ್ವಿಂಟಾಲ್ ಗೆ, ಸೇರಿ ಒಟ್ಟು ರೂ.8,000/- ಪ್ರತಿ ಕ್ವಿಂಟಾಲ್ ರಂತೆ ತೊಗರಿ ಖರೀದಿಸಲು ಜವಳಿ, ಕಬ್ಬು ಅಭಿವೃಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಶಿವಾನಂದ ಪಾಟೀಲ್ ಅವರು ಕಳೆದ ಜನವರಿ ಮಾಹೆಯಲ್ಲಿ ಭರವಸೆ ನೀಡಿದ್ದರು. ಈ ಸಂಬಂಧ ಮುಖ್ಯ ಮಂತ್ರಿಗಳು ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆಯೂ ಸಹ ಸಹಮತಿ ನೀಡಿದೆ. ಈ ಕುರಿತು ಸಂಭದಿಸಿದ ಇಲಾಖೆಗೆ ತಕ್ಷಣದಿಂದ ಅನುಷ್ಠಾನಗೊಳಿಸಲು ಸೂಕ್ತ ನಿರ್ದೇಶನ ನೀಡಲಾಗಿದೆ. ರಾಜ್ಯದ ಪ್ರಮುಖ ತೊಗರಿ ಬೆಳೆಯುವ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಅಂದಾಜು 330 ಖರೀದಿ ಕೇಂದ್ರಗಳು ಪ್ರಾರಂಭಿಸಲಾಗಿದ್ದು,…

Read More

ಬೆಂಗಳೂರು : ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ವೇಳೆ ಯಾವುದೇ ರೀತಿಯ ರಾಜಕೀಯ ಚರ್ಚೆಗಳನ್ನು ಮಾಡಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಮತ್ತು ನಮ್ಮ ಕುಟುಂಬ ಒಂದೇ. ರಾಜಕೀಯವನ್ನು ಹೊರತುಪಡಿಸಿ ನನಗೆ ಅವರು ಹಿರಿಯ ಅಣ್ಣ ಇದ್ದ ಹಾಗೇ. ನಾನು ಆಗಾಗ್ಗೆ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಈ ವೇಳೆ ಕುಟುಂಬದ ವಿಚಾರಗಳನ್ನು ಮಾತಾಡುತ್ತೇವೆ. ಭೇಟಿಯಾದಾಗಲೆಲ್ಲ ರಾಜಕೀಯ ವಿಚಾರಗಳನ್ನು ಮಾತನಾಡಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಿನ್ನೆ ಭೇಟಿ ವೇಳೆಯು ಸಹ ಯಾವುದೇ ರಾಜಕೀಯ ಚರ್ಚೆಯನ್ನು ಮಾಡಿಲ್ಲ. ಕುಟುಂಬದ ಅನೇಕ ವಿಚಾರಗಳನ್ನು ಮಾತಾಡಿಕೊಂಡಿದ್ದೇವೆ. ಅದಕ್ಕೆ ಹೆಚ್ಚು ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ. ಒಂದೇ ಒಂದು ಶಬ್ದವನ್ನು ರಾಜಕೀಯದ ಬಗ್ಗೆ ಮಾತಾಡಿಲ್ಲ ಎಂದು ಹೇಳಿದರು. ದೆಹಲಿ ನಾಯಕರ ಭೇಟಿ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೆಹಲಿಗೆ ಹೋಗುತ್ತೇನೆ. ಅದರಲ್ಲಿ ಏನು ತೊಂದರೆ ಇದೆ. ನಮ್ಮ…

Read More

ಬೆಂಗಳೂರು: ಬಂಗಾರಪೇಟೆ-ಮಾರಿಕುಪ್ಪಂ ನಿಲ್ದಾಣಗಳ ಮಧ್ಯ ಇರುವ ಸೇತುವೆಯ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ, 2 ಮೆಮು ರೈಲುಗಳ ಸಂಚಾರ ರದ್ದು ಮತ್ತು 2 ಮೆಮು ರೈಲುಗಳ ಸಂಚಾರ ಭಾಗಶಃ ರದ್ದುಗೊಳಿಸಲಾಗುತ್ತಿದೆ. ವಿವರಗಳು ಈ ಕೆಳಗಿನಂತಿವೆ: ಈ ಕುರಿತಂತೆ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಮಾಹಿತಿ ಹಂಚಿಕೊಂಡಿದ್ದು, ಈ ಕೆಳಗಿನ ಮೆಮು ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ. 1. ರೈಲು ಸಂಖ್ಯೆ 66517 ಮಾರಿಕುಪ್ಪಂ-ಬಂಗಾರಪೇಟೆ ಮೆಮು ರೈಲನ್ನು ಫೆಬ್ರವರಿ 15, 22 ಮತ್ತು ಮಾರ್ಚ್ 08, 2025 ರಂದು ರದ್ದುಗೊಳಿಸಲಾಗಿದೆ. 2. ರೈಲು ಸಂಖ್ಯೆ 66518 ಬಂಗಾರಪೇಟೆ-ಮಾರಿಕುಪ್ಪಂ ಮೆಮು ರೈಲನ್ನು ಫೆಬ್ರವರಿ 16, 23 ಮತ್ತು ಮಾರ್ಚ್ 09, 2025 ರಂದು ರದ್ದುಗೊಳಿಸಲಾಗಿದೆ. ಭಾಗಶಃ ರದ್ದು: 1. ರೈಲು ಸಂಖ್ಯೆ 66520 ಕೆಎಸ್ಆರ್ ಬೆಂಗಳೂರು-ಮಾರಿಕುಪ್ಪಂ ಮೆಮು ರೈಲು ಫೆಬ್ರವರಿ 15, 22 ಮತ್ತು ಮಾರ್ಚ್ 08, 2025 ರಂದು ಬಂಗಾರಪೇಟೆ ಮತ್ತು ಮಾರಿಕುಪ್ಪಂ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ…

Read More

ಹಾವೇರಿ: ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ವ್ಯಕ್ತಿಯೊಬ್ಬರನ್ನು ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂಬುದಾಗಿ ಹೇಳಿ, ಶವವನ್ನು ಕೊಂಡೊಯ್ಯುವಂತೆ ವೈದ್ಯರು ತಿಳಿಸಿದ್ದಾರೆ. ಕುಟುಂಬಸ್ಥರು ಕಣ್ಣೀರು ಹಾಕುತ್ತಲೇ ಆಸ್ಪತ್ರೆಯಿಂದ ಊರಿಗೆ ಕರೆದೊಯ್ಯುವಾಗ ಡಾಬಾ ಬಂತು ನೋಡು ಊಟ ಮಾಡ್ತೀಯ ಎಂದಿದ್ದೇ ತಡ ವ್ಯಕ್ತಿ ಊಸಿರಾಡಿದಂತ ವಿಚಿತ್ರ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕು ಬಂಕಾಪುರದಲ್ಲೇ ಇಂತದ್ದೊಂದು ವಿಚಿತ್ರ ಘಟನೆ ನಡೆದಿರೋದು. ಬಂಕಾಪುರದ ಬಿಷ್ಟಪ್ಪ ಗುಡಿಮನಿ(45) ಅವರು ಕಳೆದ ಮೂರು ನಾಲ್ಕು ದಿನಗಳ ಹಿಂದೆ ಬಿಳಿ ಕಾಮಾಲೆ ರೋಗದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿರುವುದಾಗಿ ವೈದ್ಯರು ದೃಢಪಟಿಸಿ, ಊರಿಗೆ ಶವ ಕೊಂಡೊಯ್ಯುವಂತೆ ಸೂಚಿಸಿದ್ದರು. ವೈದ್ಯರ ಸೂಚನೆಯಿಂದ ಬಂಕಾಪುರ ಗ್ರಾಮಕ್ಕೆ ಮೃತ ಬಿಷ್ಟಪ್ಪ ಗುಡಿಮನಿಯ ಶವವನ್ನು ಕರೆ ತರುತ್ತಿದ್ದಂತ ವೇಳೆಯಲ್ಲಿ ಕುಟುಂಬಸ್ಥರು ಡಾಬಾ ಬಂತು ನೋಡು, ಊಟ ಮಾಡುತ್ತೀಯಾ ಅಂತ ಕಣ್ಣೀರಿಡುತ್ತಲೇ ಕೇಳಿದ್ದಾರೆ. ಈ ವೇಳೆಯಲ್ಲಿ ಮೃತ ಬಿಷ್ಟಪ್ಪ ಗುಡಿಮನಿ ಉಸಿರಾಡಿದ್ದಾನೆ. ಈ ಘಟನೆಯಿಂದ ಕುಟುಂಬಸ್ಥರೇ ಕಕ್ಕಾಬಿಕ್ಕಿಯಾಗಿದ್ದಾರೆ. ಕೂಡಲೇ…

Read More