Author: kannadanewsnow09

ಬೆಂಗಳೂರು: ರಾಜ್ಯ ಸರ್ಕಾರದಿಂದ ಜಾತಿ ಜನಗಣತಿಯ ವರದಿಯ ಬಗ್ಗೆ ನಿರ್ಧಾರ ಕೈಗೊಳ್ಳುವಂತ ಸಲುವಾಗಿ ಜೂನ್.12ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ನಿಗದಿ ಪಡಿಸಿದೆ ಎನ್ನಲಾಗುತ್ತಿದೆ. ಇದಲ್ಲದೇ ಜೂನ್.19ರಂದು ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆಯನ್ನು ನಿಗದಿ ಪಡಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದ್ದು, ದಿನಾಂಕ 12-06-2025ರ ಗುರುವಾರ ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟದ ವಿಶೇಷ ಸಭೆಯನ್ನು ವಿಧಾನಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ ಕರೆಯಲಾಗಿದೆ ಎಂದಿದೆ. ಈ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಕುರಿತಂತೆ ಚರ್ಚಿಸಲಾಗುತ್ತದೆ ಎಂಬುದಾಗಿ ತಿಳಿಸಿದೆ. ಜೂನ್.19ಕ್ಕೆ ನಂದಿ ಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ನಿಗದಿ ಇನ್ನೂ ದಿನಾಂಕ 19-06-2025ರ ಗುರುವಾರದಂದು ಮಧ್ಯಾಹ್ನ 12 ಗಂಟೆಗೆ ಸಚಿವ ಸಂಪುಟದ 2025ನೇ ಸಾಲಿನ 13ನೇ ಸಭೆಯನ್ನು ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿರುವಂತ ಮಯೂರ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಹೇಳಿದೆ.

Read More

ಬ್ರಹ್ಮಾವರ: ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ನೀಡಲು ವ್ಯಕ್ತಿಯೊಬ್ಬರಿಂದ 20000 ಲಂಚದ ಹಣ ಸ್ವೀಕರಿಸುತ್ತಿದ್ದಾಗಲೇ ಮೆಸ್ಕಾಂ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಬ್ರಹ್ಮಾಣವರದ ಮೆಸ್ಕಾಂ ಸಹಾಯಕ ಇಂಜಿನಿಯರ್ ಅಶೋಕ್ ಪೂಜಾರಿ ಎಂಬುವರೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ. ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಳೆದ ತಿಂಗಳು ಸ್ಥಳ ಪರಿಶೀಲನೆ ನಡೆಸಿದ್ದಂತ ಮೆಸ್ಕಾಂ ಸಹಾಯಕ ಇಂಜಿನಿಯರ್ ಅಶೋಕ್ ಪೂಜಾರಿ, ಆ ಬಳಿಕ ಮನೆ ಮಾಲೀಕ ದಿನೇಶ್ ಪೂಜಾರಿಗೆ 20,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದಿನೇಶ್ ಪೂಜಾರಿ ದೂರು ನೀಡಿದ್ದರು. ಇಂದು ಲಂಚದ ಹಣವಾದಂತ 20,000 ಪಡೆಯುತ್ತಿದ್ದಂತ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ಮೂಲಕ ರೆಡ್ ಹ್ಯಾಂಡ್ ಆಗಿ ಮೆಸ್ಕಾಂ ಎಇ ಅಶೋಕ್ ಪೂಜಾರಿ ಹಿಡಿದಿದ್ದಾರೆ. ಆ ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Read More

ಬೆಂಗಳೂರು: ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ಭಾರತ ಗೌರವ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ನೀವು 10,000 ಪಾವತಿಸಿದ್ರೇ, 5000 ಸರ್ಕಾರವೇ ಭರಿಸಲಿದೆ. ಧಾರ್ಮಿಕ ದತ್ತಿ ಇಲಾಖೆಯಿಂದ ಕರ್ನಾಟಕ ಭಾರತ ಗೌರವ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ತಿರುವನಂತಪುರಂ ಕ್ಷೇತ್ರಗಳನ್ನು ಒಳಗೊಂಡ 6 ದಿನಗಳ ಪ್ರವಾಸ ಇದಾಗಿದೆ. ಈ ಪ್ಯಾಕೇಜ್‌ಗೆ ಒಟ್ಟು ₹15,000 ತಗುಲಲಿದ್ದು, ಈ ಪೈಕಿ ಕರ್ನಾಟಕ ಸರ್ಕಾರದ ವತಿಯಿಂದ ₹5,000 ಭರಿಸಲಾಗುತ್ತದೆ. ಯಾತ್ರಾರ್ಥಿಗಳು ಬುಕ್ಕಿಂಗ್‌ ಮೊತ್ತವಾಗಿ ₹10,000 ಮಾತ್ರ ಪಾವತಿಸಬೇಕಾಗುತ್ತದೆ. 3 ಟೈರ್‌ ಎ.ಸಿ. ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನದ ವ್ಯವಸ್ಥೆ ಇರುತ್ತದೆ. ಪ್ರತಿ ಕೋಚ್‌ಗೆ ಪ್ರವಾಸ ಮಾರ್ಗದರ್ಶಕರು, ರೈಲಿನಲ್ಲಿ ಭದ್ರತಾ ವ್ಯವಸ್ಥೆ ಇರುತ್ತದೆ. ಟಿಕೆಟ್‌ ಬುಕ್ಕಿಂಗ್‌ಗಾಗಿ https://irctctourism.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅಥವಾ 9363488229 ಗೆ ಕರೆ ಮಾಡಬಹುದು. https://twitter.com/KarnatakaVarthe/status/1930896541004485045

Read More

ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ ಸಿ ಬಿ ಸಂಭ್ರಮಾಚರಣೆಯ ವೇಳೆಯಲ್ಲಿ ಕಾಲ್ತುಳಿತ ದುರಂತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು. ಈ ಪ್ರಕರಣದ ಬಗ್ಗೆ ವಿಪಕ್ಷಗಳ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸುತ್ತಿದ್ದಾರೆ. ಇಂತಹ ಬಿಜೆಪಿ-ಜೆಡಿಎಸ್ ನಾಯಕರಿಗೆ ಮಾಜಿ ಪರಿಷತ್ ಸದಸ್ಯ ರಮೇಶ್ ಬಾಬು ಈ ಕೆಳಗಿನಂತೆ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕರ್ನಾಟಕ ಜೆಡಿಎಸ್ ಮತ್ತು ಬಿಜೆಪಿ ಪಕ್ಷದಿಂದ  ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ ರವರೆ, ಸೂತಕದ ಮನೆಯಲ್ಲಿ ರಾಜಕಾರಣ ಮಾಡಲು ಮಂತ್ರಿ ಪದವಿಯ ಅಧಿಕಾರ ಕಿತ್ತುಕೊಂಡು ನಾಮಕವಾಸ್ತೆ ಮಂತ್ರಿಯಾಗಿ ನರೇಂದ್ರ ಮೋದಿ ಕೇಂದ್ರ ಸರ್ಕಾರದಲ್ಲಿ ನಿಮ್ಮನ್ನು ಇಟ್ಟು ಕೊಂಡಿದ್ದಾರೆಯೇ? ನಿಮ್ಮ ಹತಾಷೆ ಕೋಪ ಯಾರ ಮೇಲೆ? ಎಂದು ಪ್ರಶ್ನಿಸಿದ್ದಾರೆ. ಡಾ. ರಾಜ್‌ಕುಮಾರ್ ಅವರ ಅಂತ್ಯಕ್ರಿಯಾ ಮೆರವಣಿಗೆಯಲ್ಲಿ ಸಂಭವಿಸಿದ ಹಿಂಸಾಚಾರ ಮತ್ತು ಸಾವುಗಳ ಕುರಿತು – ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅವರ ಹೊಣೆಗಾರಿಕೆ ಹಿನ್ನಲೆ:…

Read More

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಧಾರುಣ ಘಟನೆ ಎನ್ನುವಂತೆ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ತಾಯಿಯೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ಬಳಿಯ ರಂಗಧಾಮ ಕೆರೆಗೆ ಹಾರಿ ಇಬ್ಬರು ಮಕ್ಕಳೊಂದಿಗೆ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃರನ್ನು ತಾಯಿ ಲಾವಣ್ಯ(30), ಮಕ್ಕಳಾದಂತ ನಿಹಾರಿಕಾ (12), ನೇಹಾ (9) ಎಂಬುದಾಗಿ ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಬೆಂಗಳೂರು: ನನ್ನ ಪತ್ನಿ ಆರ್ ಸಿ ಬಿಯ ನಿಖಿಲ್ ಸೋಸಲೆಯನ್ನು ಸಿಎಂ ಸಿದ್ಧರಾಮಯ್ಯ ಆದೇಶ ಅನುಸಾರವಾಗಿ ಕಾನೂನು ಭಾಹಿರವಾಗಿ ಬಂಧಿಸಿದ್ದಾರೆ. ಅವರನ್ನು ಬಿಡುಗಡೆಗೆ ಆದೇಶಿಸುವಂತೆ ನಿಖಿಲ್ ಸೋಸಲೆ ಪತ್ನಿ ಮಾಳವಿಕಾ ನಾಯ್ಕ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಂತೆ ಅವರು ಸಿಎಂ ಆದೇಶಾನುಸಾರ ತಮ್ಮ ಪತ್ನಿಯನ್ನು ಕಾನೂನು ಭಾಹಿರವಾಗಿ ಬಂಧನ ಮಾಡಲಾಗಿದೆ. ಹೀಗಾಗಿ ಬಿಡುಗಡೆ ಕೋರಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಸಿಎಂ ಸಿದ್ಧರಾಮಯ್ಯ ಆದೇಶದ ಅನುಸಾರವಾಗಿ ಆರ್ ಸಿ ಬಿಯ ನಿಖಿಲ್ ಸೋಸಲೆ ಬಂಧನ ಮಾಡಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಭಾಗಿಯಾಗಿದ್ದರು ಎಂಬುದಾಗಿ ರಿಟ್ ಅರ್ಜಿಯಲ್ಲಿ ನಿಖಿಲ್ ಸೋಸಲೆ ಪತ್ನಿ ಮಾಳವಿಕಾ ನಾಯ್ಕ್ ಗಂಭೀರ ಆರೋಪ ಮಾಡಿದ್ದಾರೆ. ಪತ್ನಿ, ಎರಡು ವರ್ಷದ ಮಗುವಿನೊಂದಿಗೆ ಪ್ರಯಾಣಿಸುವ ವೇಳೆಯಲ್ಲಿ ಕೆ ಐ ಎಎಲ್ ನಲ್ಲಿ ಪೊಲೀಸರು ಕಾನೂನು ಬಾಹಿರವಾಗಿ ಬಂಧಿಸಿದ್ದಾರೆ. ಯಾವುದೇ ತನಿಖೆಯನ್ನೂ ನಡೆಸದೇ ಸಿಎಂ ಆದೇಶಾನುಸಾರ ಬಂಧಿಸಿದ್ದಾರೆ.…

Read More

ಬೆಳಗಾವಿ: 18 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿದ ಆರ್ ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಮೃತಪಟ್ಟ ಕುಟುಂಬದವರಿಗೆ ಕೆಎಸ್ಸಿಎ ಹಾಗೂ ಆರ್ ಸಿಬಿ ಮ್ಯಾನೇಜ್ಮೆಂಟ್ ವತಿಯಿಂದ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಆಗ್ರಹಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಅಭಿಮಾನಿಗಳ ಸಾವು ನೋವು ತಂದಿದೆ. ಆರ್ ಸಿಬಿ ಹಾಗೂ ಕೆ ಎಸ್ಸಿಎ‌ ಹೆಚ್ಚಿನ ಪರಿಹಾರ ಕೊಡಬೇಕು ಎಂದರು. ಈ ಪ್ರಕರಣದಲ್ಲಿ ವಿರೋಧ ಪಕ್ಷಗಳು ಜನರ ದಾರಿ ತಪ್ಪಿಸುತ್ತಿವೆ. ನಮ್ಮ ಹಿರಿಯರು ಇದಕ್ಕೆ ತಕ್ಕ ಉತ್ತರ ಕೊಡಲಿದ್ದಾರೆ. ರಾಜಕಾರಣಕ್ಕಿಂತ ಘಟನೆ ಯಾಕೆ ಆಯಿತು ಎಂಬುದು ಗೊತ್ತಾಗಬೇಕು. ಇಂಥ ದುರ್ಘಟನೆ ನಡೆದಿದ್ದು ನಿಜಕ್ಕೂ ದುರದೃಷ್ಟಕರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Read More

ನವದೆಹಲಿ: ಸುಪ್ರೀಂ ಕೋರ್ಟ್ ಶುಕ್ರವಾರ ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE)ಗೆ ಆಗಸ್ಟ್ 3 ರಂದು NEET-PG 2025 ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಪರೀಕ್ಷೆ ನಡೆಸಲು NBE ಎರಡು ತಿಂಗಳಿಗಿಂತ ಹೆಚ್ಚು ಸಮಯ ಕೋರಿದ್ದನ್ನು ಆರಂಭದಲ್ಲಿ ಪ್ರಶ್ನಿಸಿದ ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು, ಆಗಸ್ಟ್ 3 ರಂದು NEET-PG 2025 ಪರೀಕ್ಷೆಯನ್ನು ನಡೆಸಲು ಉಲ್ಲೇಖಿಸಲಾದ ಕಾರಣಗಳು ಸರಿಯಾಗಿವೆ ಎಂದು ಹೇಳಿದೆ. ಆದಾಗ್ಯೂ, NEET-PG 2025 ಪರೀಕ್ಷೆಯನ್ನು ನಡೆಸಲು NBE ಗೆ ಹೆಚ್ಚಿನ ಸಮಯವನ್ನು ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಮೇ 30 ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಬೇಕಾಗಿದೆ ಮತ್ತು ಆದ್ದರಿಂದ, ಒಂದೇ ಬಾರಿಗೆ ಪರೀಕ್ಷೆಯನ್ನು ನಡೆಸಲು ಸುಮಾರು 1,000 ಪರೀಕ್ಷಾ ಕೇಂದ್ರಗಳು ಬೇಕಾಗುತ್ತವೆ ಎಂದು NBE ವಾದಿಸಿತು. ಜೂನ್ 15 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಆಗಸ್ಟ್ 3 ರಂದು…

Read More

ಬೆಂಗಳೂರು: ವ್ಯಕ್ತಿಯೊಬ್ಬರು ಕೆಐಎಡಿಬಿಗೆ ಸಲ್ಲಿಸಿದ್ದಂತ ಸ್ಕೆಚ್ ಗೆ ಅನುಮೋದನೆ ನೀಡಲು 1.50 ಲಕ್ಷಕ್ಕೆ ಲಂಚಕ್ಕೆ ಬೇಡಿಕೆ ಇಟ್ಟು, ಪಡೆಯುತ್ತಿದ್ದಂತ ವೇಳೆಯಲ್ಲಿ ಸೂಪರ್ ವೈಸರ್ ಒಪ್ಪರು ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ರವಿ ಎಂಬುವರು ಬೆಂಗಳೂರಿನ ಕೆಐಎಡಿಬಿಗೆ ಸ್ಕೆಚ್ ತಯಾರಿಸಿ ಅನುಮೋದನೆಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಅನುಮೋದಿಸೋದಕ್ಕೆ ಕೆಐಎಡಿಬಿ ಸರ್ವೆ ಸೂಪರ್ ವೈಸರ್ ನರೇಂದ್ರ ಕುಮಾರ್ ಎಂಬುವರು 1.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ರವಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಬೆಂಗಳೂರಿನ ಲೋಕಾಯುಕ್ತ ಎಸ್ಪಿ ಡಾ.ವಂಶಿ ಕೃಷ್ಣ ಮೇಲ್ವಿಚಾರಣೆಯಲ್ಲಿ ಪಿಐ ಅನೀಲ್ ಕುಮಾರ್, ಪ್ರಶಾಂತ್, ಅಂಜನ್ ಕುಮಾರ್ ನೇತೃತ್ವದ ತಂಡವು ಕೆಐಎಡಿಬಿ ಸರ್ವೆ ಮೇಲ್ವಿಚಾರಕ ನರೇಂದ್ರ ಕುಮಾರ್ ಲಂಚದ ಹಣವಾಗಿ 1.50 ಲಕ್ಷ ಪಡೆಯುತ್ತಿದ್ದಂತ ಸಂದರ್ಭದಲ್ಲಿ ದಾಳಿ ನಡೆಸಿದೆ. ದಾಳಿಯ ಸಂದರ್ಭದಲ್ಲಿ ಬೆಂಗಳೂರಿನ ಕೆಐಎಡಿಬಿ ಸರ್ವೆ ಮೇಲ್ವಿಚಾರಕ ನರೇಂದ್ರ ಕುಮಾರ್ ಪಡೆಯುತ್ತಿದ್ದಂತ 1.50 ಲಕ್ಷ ಲಂಚದ ಹಣವನ್ನು ರೆಡ್…

Read More

ಶಿವಮೊಗ್ಗ: ಜಿಲ್ಲೆಯ ಸಾಗರದ ದೇಶಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶ್ರೀಧರ್ ಮೂರ್ತಿ ಅವರು ಹೃದಯಾಘಾತದಿಂದ ಇಂದು ದಿಢೀರ್ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ದೇಶಿ ಫೌಂಡೇಶನ್ ಸಂಸ್ಥೆ ನಿರ್ಮಿಸಿ, ಸಾಮಾಜಿಕ ಹೋರಾಟದಲ್ಲಿ ತೊಡಗಿದ್ದವರು ಶ್ರೀಧರ್ ಮೂರ್ತಿ. ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಬಿಜೆಪಿ ಪಕ್ಷ ಸೇರಿ ತಮ್ಮ ರಾಜಕೀಯ, ಸಾಮಾಜಿಕ ಕೆಲಸ ಮುಂದುವರೆಸಿದ್ದರು. ಇಂದು ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಟ್ಟು, ಮನೆಗೆ ವಾಪಾಸ್ ಆದ ವೇಳೆ ಗೇಟಿನ ಮುಂಭಾಗದಲ್ಲಿ ದಿಢೀರ್ ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಸಾಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪರೀಕ್ಷೆಗೆ ಒಳಪಡಿಸಿದಂತ ವೈದ್ಯರು ಶ್ರೀಧರ್ ಮೂರ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಇದೀಗ ಸಾಗರದಲ್ಲಿ ಸಾಮಾಜಿಕ ಹೋರಾಟ ಮಾಡುತ್ತಾ ಗುರುತಿಸಿಕೊಂಡಿದ್ದ ದೇಶೀ ಬ್ರಿಗೇಡ್, ದೇಶಿ ಫೌಂಡೇಶನ್ ಸಂಸ್ಥಾಪಕ ಶ್ರೀಧರ್ ಮೂರ್ತಿ ಇನ್ನಿಲ್ಲವಾಗಿದ್ದಾರೆ.

Read More