Author: kannadanewsnow09

ವೀಳ್ಯದೆಲೆಯನ್ನು ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಹಿರಿಯರು ತಿನ್ನುವುದನ್ನು ನೋಡಿದ್ದೇವೆ. ಆದರೆ ಇದನ್ನು ದೇವರಿಗೂ ಅರ್ಪಿಸಲಾಗುತ್ತದೆ ಎನ್ನುವುದು ಕೆಲವರಿಗೆ ಮಾತ್ರ ತಿಳಿದಿದೆ. ಕೆಲವೊಂದು ಸಂಪ್ರಧಾಯಗಳ ಪ್ರಕಾರ ಊಟದ ನಂತರ ವೀಳ್ಯದೆಲೆಯನ್ನು ಸೇವಿಸುತ್ತಾರೆ. ವೀಳ್ಯದೆಲೆಯಲ್ಲಿ ಔಷಧೀಯ ಗುಣವೂ ಕೂಡ ಇದೆ ಎಂಬೂದನ್ನು ವಿಜ್ಞಾನ ತಿಳಿಸಿದೆ. ಹಿಂದೂ ಧರ್ಮದಲ್ಲಿ ವೀಳ್ಯದೆಲೆ ಮತ್ತು ಅಡಿಕೆಯನ್ನು ಹೆಚ್ಚಿನ ಪೂಜೆ ಹಾಗೂ ದೇವರ ಕಾರ್ಯಕ್ರಮಗಳಲ್ಲಿ ಉಪಯೋಗಿಸುತ್ತಾರೆ. ಈ ವೀಳ್ಯದೆಲೆ ಮತ್ತು ಅಡಿಕೆಯನ್ನು ದೇವರಿಗೆ ಅರ್ಪಿಸುವುದರಿಂದಾಗುವ ಉಪಯೋಗವೇನು ಗೊತ್ತಾ.? ಯಾವ ಕಾರಣಕ್ಕಾಗಿ ವೀಳ್ಯದೆಲೆ ಹಾಗೂ ಅಡಿಕೆಯನ್ನು ದೇವರಿಗೆ ಅರ್ಪಿಸಲಾಗುತ್ತದೆ ನೋಡಿ: ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ…

Read More

ಬೆಂಗಳೂರು : ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ 2025-26 ನೇ ಸಾಲಿನ ವಿವಿಧ ಯೋಜನೆಗಳಾದ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸ್ವಾವಂಭಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ,(ಬ್ಯಾಂಕುಗಳ ಸಹಯೋಗದೊಂದಿಗೆ) ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ, ಸ್ವಾತಂತ್ರ್ಯ ಮಹೋತ್ಸವದ ಅಮೃತ ಮುನ್ನಡೆ ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗ-3ರಲ್ಲಿ ಬರುವ ಒಕ್ಕಲಿಗ ಸಮುದಾಯಗಳಿಗೆ ಸೇರಿದ ಕ್ರಮ ಸಂಖ್ಯೆ 1(ಎ) ಯಿಂದ (ಟಿ) ವರೆಗೆ ನಮೂದಾಗಿರುವ ಸಮುದಾಯಕ್ಕೆ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಲಿಂಗಾಯಿತ, ಕಾಡುಗೊಲ್ಲ, ಮರಾಠ, ಮತ್ತು ಇದರ ಉಪಜಾತಿಗಳನ್ನು ಹೊರತುಪಡಿಸಿ)ಸೇರಿದ ಆಸಕ್ತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.   ನಿಗಮವು ಅನುಷ್ಠಾನಗೊಳಿಸಿರುವ ಮೇಲ್ಕಂಡ ಯೋಜನೆಗಳನ್ನು ಶಾಸಕರು ಅಥವಾ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ರಚಿಸಿದ ಆಯ್ಕೆ ಸಮಿತಿಯ ಮೂಲಕ ಆಯ್ಕೆಯನ್ನು…

Read More

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಂಧಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru -RCB) ಮಾರ್ಕೆಟಿಂಗ್ ಮತ್ತು ಕಂದಾಯ ಮುಖ್ಯಸ್ಥ ನಿಖಿಲ್ ಸೋಸಲೆಗೆ ಯಾವುದೇ ತಕ್ಷಣದ ಪರಿಹಾರ ನೀಡಲು ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ. ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರು ರಾಜ್ಯದ ವಾದವನ್ನು ಆಲಿಸದೆ ನ್ಯಾಯಾಲಯವು ಯಾವುದೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದರು ಮತ್ತು ಮುಂದಿನ ವಾರ ಸೋಮವಾರಕ್ಕೆ ವಿವರವಾದ ವಿಚಾರಣೆಗಾಗಿ ಅರ್ಜಿಯನ್ನು ಮುಂದೂಡಿದರು. “ನಾನು ಅವಕಾಶ [ರಾಜ್ಯಕ್ಕೆ] ಹೋಗಬೇಕಾಗುತ್ತದೆ. ಯಾವುದೇ ವಿಷಯವು ವ್ಯಕ್ತಿ ಬಂಧನದಲ್ಲಿದ್ದರೂ … ಅದನ್ನು 2:30ಕ್ಕೆ ವರ್ಗಾಯಿಸಲಾಗುತ್ತದೆ, ನಾನು ಅವಕಾಶ ನೀಡದೆ ಆದೇಶವನ್ನು ನೀಡುತ್ತಿಲ್ಲ. ನಾನು ಈಗ ಅದನ್ನು ಮಾಡಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಬಂಧನವು ಕಾನೂನುಬಾಹಿರ ಎಂಬ ಕಾರಣಕ್ಕಾಗಿ ಪ್ರಶ್ನಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಸೋಸಲೆ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲರು ಬಂಧನವನ್ನು ಉಸ್ತುವಾರಿ ತನಿಖಾ ಅಧಿಕಾರಿ ಮಾಡಿದ್ದಾರೆ ಮತ್ತು ಅದು ಕೂಡ ಸಂಪುಟದ…

Read More

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಉಂಟಾಗಿದ್ದಂತ ಕಾಲ್ತುಳಿತ ದುರಂತದ ಸಂಬಂಧ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಕೆ ಎಸ್ ಸಿಎಸ್ ಸಿಎ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ. ಇಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಕಾಲ್ತುಳಿತ ದುರಂತದಲ್ಲಿ 11 ಆರ್ ಸಿ ಬಿ ಅಭಿಮಾನಿಗಳು ಸಾವು ಪ್ರಕರಣದಲ್ಲಿ ಕೆ ಎಸ್ ಸಿ ಎ ಯ ಅಧಿಕಾರಿಗಳು ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೀಠವು ನಡೆಸಿತು. ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ಕೆ ಎಸ್ ಸಿ ಎ ಮಂಡಳಿಯ ಅಧ್ಯಕ್ಷರಾದಂತ ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್ ಹಾಗೂ ಖಜಾಂಚಿ ಜೈರಾಮ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಮಧ್ಯಂತರ ಆದೇಶ ಮಾಡಿದೆ. ಅಂದಹಾಗೇ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಕಾಲ್ತುಳಿತ ದುರಂತದ ಕಾರಣ ಕೆ ಎಸ್ ಸಿ ಎಯ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಕೆ ಎಸ್…

Read More

ಬೆಂಗಳೂರು: ತಪ್ಪು ಕೇವಲ RCB,DNA ಮತ್ತು KSCA ಎಂದಿದ್ದ ಸಿದ್ದರಾಮಯ್ಯ ತಮ್ಮ ಪರಮಾಪ್ತ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್ ರವರನ್ನು ಸೇವೆಯಿಂದ ಬಿಡುಗಡೆ ಮಾಡಿರುವುದಕ್ಕೆ ಕಾರಣವನ್ನು ರಾಜ್ಯದ ಜನತೆಗೆ ತಿಳಿಸಬೇಕು ಎಂಬುದಾಗಿ ಬಿಜೆಪಿ ಮುಖಂಡ ಪ್ರಕಾಶ್.ಎಸ್ ಆಗ್ರಹಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ವಿಧಾನಸೌಧ ಮುಂಭಾಗ ಕಾರ್ಯಕ್ರಮ ಅವರ ಸಲಹೆಯ ಮೇರೆಗೆ ಮಾಡಲಾಗಿತ್ತು. ಈಗ ಕಾರ್ಯಕ್ರಮ ಎಡವಟ್ಚಾದ ಕೂಡಲೇ ಅವರನ್ನು ಸೇವೆಯಿಂದ ವಜಾ ಮಾಡಿ ಮತ್ತೆ ತಮ್ಮ ತಲೆದಂಡ ತಪ್ಪಿಸಿಕೊಳ್ಳುವ ಧೂರ್ತತನ ಇದಾಗಿದೆ ಎಂದಿದ್ದಾರೆ. ಪೋಲೀಸ್ ಅಧಿಕಾರಿಗಳಾಯಿತು ಈಗ ರಾಜಕೀಯ ಕಾರ್ಯದರ್ಶಿಯ ಮತ್ತು ADGP ಇಂಟಲಿಜೆನ್ಸ್ ತಲೆದಂಡವಾಗಿದೆ. ಇವರೊಬ್ಬರು ಉಳಿದುಕೊಳ್ಳಲು ಇನ್ನು ಯಾರ್ಯಾರು ಬಲಿಯಾಗುತ್ತಾರೊ ಭಗವಂತನೆ ಬಲ್ಲ ಎಂಬುದಾಗಿ ಹೇಳಿದ್ದಾರೆ. https://twitter.com/sprakaashbjp/status/1930930658068844868 https://kannadanewsnow.com/kannada/rcb-celebrations-case-of-11-fans-deaths-two-more-complaints-filed/ https://kannadanewsnow.com/kannada/deshi-foundation-sridhar-murthy-passes-away-sagar-taluk-karave-president-jayaram-sooranagadde-expresses-condolences/

Read More

ಶಿವಮೊಗ್ಗ: ಇಂದು ದೇಶಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶ್ರೀಧರ್ ಮೂರ್ತಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಸಂತಾಪವನ್ನು ಸಾಗರ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಜಯರಾಮ್ ಸೂರನಗದ್ದೆ ಸೂಚಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಮೃತ ಶ್ರೀಧರ್ ಮೂರ್ತಿ ಅವರು ದೇಶಿ ಫೌಂಡೇಶನ್ ಎನ್ನುವಂತ ಸಂಸ್ಥೆಯ ಮೂಲಕ ಹತ್ತಾರು ಸಮಾಜ ಮುಖಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ದಲಿತರು, ತುಳಿತಕ್ಕೆ ಒಳಗಾದವರು, ಧಮನಿತರ ಧ್ವನಿಯಾಗಿ ನಿಂತಿದ್ದರು. ನೊಂದವರ ಕಣ್ಣೀರೊರೆಸುತ್ತ, ಶೋಷಣೆಗೆ ಒಳಗಾದವರಿಗೆ ನ್ಯಾಯಕೊಡಿಸುವಂತ ಕೆಲಸ ಮಾಡುತ್ತಿದ್ದರು ಎಂಬುದಾಗಿ ತಿಳಿಸಿದ್ದಾರೆ. ಸಮಾಜದ ಒಳಿತಿಗಾಗಿ ಹಗಲಿರುಳೆನ್ನದೇ ಶ್ರೀಧರ್ ಮೂರ್ತಿ ನಿಸ್ವಾರ್ಥ ಸೇವೆ ಮಾಡಿದವರು. ಇತ್ತೀಚೆಗಷ್ಟೇ ದೇಶಿ ಬ್ರಿಗೇಡ್ ಪಡೆಯನ್ನು ಕಟ್ಟಿ ಭ್ರಷ್ಟಾಚಾರದ ವಿರುದ್ಧ ಸೆಟೆದು ನಿಂತಿದ್ದರು. ಇಂತಹ ಯುವ ಹೋರಾಟಗಾರ ಇಂದು ಹೃದಯಾಘಾತದಿಂದ ನಿಧನರಾಗಿದ್ದು ತುಂಬಲಾರದ ನಷ್ಟವೇ ಸರಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದುಖಃ ಭರಿಸುವಂತ ಶಕ್ತಿಯನ್ನು ದೇವರು ನೀಡಲಿ ಎಂಬುದಾಗಿ ಹೇಳಿದ್ದಾರೆ. ವಸಂತ…

Read More

ಬೆಂಗಳೂರು: ಆರ್ ಸಿ ಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ 11 ಅಭಿಮಾನಿಗಳು ಸಾವು ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮತ್ತೆರಡು ದೂರು ದಾಖಲಾಗಿದ್ದಾವೆ. ಈ ಸಂಬಂಧ ಗಾಯಾಳುಗಳು ನೀಡಿರುವಂತ ದೂರಿನ ಮೇರೆಗೆ ಮತ್ತೆರಡು ಎಫ್ಐಆರ್ ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಹೀಗಾಗಿ ಆರ್ ಸಿ ಬಿ ಫ್ರಾಂಚೈಸಿ, ಕೆಎಸ್ ಸಿಎ ಮತ್ತು ಡಿಎನ್ಎ ಕಂಪನಿ ವಿರುದ್ಧ ಕೇಸ್ ದಾಖಲಾಗಿದ್ದಾವೆ. ರೋಲನ್ ಗೊಮೆಸ್ ಎಂಬಾತ ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅವರು ನೀಡಿರುವಂತ ದೂರಿನಲ್ಲಿ ಜಾಲತಾಣದಲ್ಲಿ ಆರ್ ಸಿ ಬಿ ಪೋಸ್ಟ್ ನೋಡಿ ನನ್ನ ಗೆಳೆಯರ ಜೊತೆಗೆ ಆರ್ ಸಿಬಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದೆ. ತೆರೆದ ಬಸ್ ಮೂಲಕ ಮೆರವಣಿಗೆ ಇದೆ ಎಂಬುದಾಗಿ ಪೋಸ್ಟ್ ನಲ್ಲಿ ತಿಳಿಸಲಾಗಿತ್ತು ಎಂದಿದ್ದಾರೆ. ಗೇಟ್ ನಂಬರ್ 17ರಲ್ಲಿ ನಾನು ಹೋಗುವಾಗ ನೂಕುನುಗ್ಗಲು ಉಂಟಾಯಿತು. ಈ ವೇಳಎ ನನ್ನ ತೋಳಿಗೆ ಪೆಟ್ಟಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೂರು ನೀಡಿರುವುದಾಗಿ ಗಾಯಾಳು ರೋಲನ್ ತಿಳಿಸಿದ್ದಾರೆ. ಹೀಗಾಗಿ ಬಿಎನ್…

Read More

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಲ್ಲಿ ಆರ್ ಸಿ ಬಿ ಸಂಭ್ರಮಾಚರಣೆಯ ವೇಳೆಯಲ್ಲಿ ಕಾಲ್ತುಳಿತ ಉಂಟಾಗಿ 11 ಅಭಿಮಾನಿಗಳು ಸಾವಿನ ದುರಂತ ಪ್ರಕರಣ ಸಂಬಂಧ ಗುಪ್ತಚರ ಇಲಾಖೆಯ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಆರ್ ಸಿ ಬಿ ಸಂಭ್ರಮಾಚರಣೆ ವೇಳೆಯಲ್ಲಿ ಕಾಲ್ತುಳಿತ ಉಂಟಾಗಿ 11 ಅಭಿಮಾನಿಗಳು ಸಾವನ್ನಪ್ಪಿದ್ದರು. ಈ ಘಟನೆಗೆ ಗುಪ್ತಚರ ವೈಫಲ್ಯವೂ ಕಾರಣ ಎಂಬುದಾಗಿ ಸಾರ್ವಜನಿಕರು ಕಿಡಿಕಾರಿದ್ದರು. ಈ ಆಕ್ರೋಶದ ಬೆನ್ನಲ್ಲೇ ಗುಪ್ತಚರ ಇಲಾಖೆಯ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಇನ್ನೂ ನೂತನ ಎಡಿಜಿಪಿಯಾಗಿ ರವಿಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಇದಲ್ಲದೇ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದಂತ ಗೋವಿಂದರಾಜು ಅವರನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ. ಈ ಮೂಲಕ ಸಿಎಂ ಸಿದ್ಧರಾಮಯ್ಯ ಅವರು ಬೆಂಗಳೂರು ಕಾಲ್ತುಳಿತ ದುರಂತದ ನಂತ್ರ ತಪ್ಪಿತಸ್ಥರ ವಿರುದ್ಧ ನಿರಂತರ ಗದಾಪ್ರಹಾರವನ್ನು ನಡೆಸಿದ್ದಾರೆ. https://kannadanewsnow.com/kannada/bengaluru-calamity-order-to-transfer-to-cid-by-the-state-government-2/

Read More

ಬೆಂಗಳೂರು: ಆರ್ ಸಿ ಬಿ ಐಪಿಎಲ್ ಮ್ಯಾಚ್ ಗೆದ್ದಿದ್ದಕ್ಕೆ ಬೆಂಗಳೂರಲ್ಲಿ ತರಾತುರಿಯಲ್ಲಿ ಸಂಭ್ರಮಾಚರಣೆಗೆ ತಯಾರಿ ನಡೆಸಿ 11 ಅಭಿಮಾನಿಗಳ ಸಾವಿಗೆ ಕಾರಣವಾಗಿತ್ತು. ಈ ದುರಂತದ ಕಾರಣ ಸಿಎಂ ಸಿದ್ಧರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜು ಅವರನ್ನು ತೆಗೆದು ಹಾಕಲಾಗಿದೆ. ಈ ಬಗ್ಗೆ ನಿನ್ನೆಯ ರಾಜ್ಯ ಸಚಿವ ಸಂಪುಟ ಸಭೆಯಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೆಂಡಾಮಂಡಲವಾಗಿದ್ದರು. ತರಾತುರಿಯಲ್ಲಿ ಆರ್ ಸಿ ಬಿ ಸಂಭ್ರಮಾಚರಣೆ ಮಾಡಿದ್ದಕ್ಕೆ ಅಧಿಕಾರಿಗಳು, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮೇಲೂ ಸಿಟ್ಟಾಗಿದ್ದರು. ಈ ಬೆನ್ನಲ್ಲೇ ಇಂದು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜು ತೆಗೆದು ಹಾಕಿ ಸರ್ಕಾರ ಆದೇಶಿಸಿದೆ. ಈ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜು ಅವರಿಗೆ ಕೋಕ್ ನೀಡಲಾಗಿದೆ.

Read More

ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ ಸಿ ಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೂಕು ನುಗ್ಗಲಾಗಿ 11 ಮಂದಿ ಸಾವನ್ನಪ್ಪಿದ್ದರು. ಈ ಘಟನೆಯ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ಈ ಸಂಬಂಧ ಡಿಜಿ ಮತ್ತು ಐಜಿಪಿ ಆದೇಶ ಹೊರಡಿಸಿದ್ದು, ಆರ್ ಸಿ ಬಿ ಸಂಭ್ರಮಾಚರಣೆಯ ವೇಳೆಯಲ್ಲಿ 11 ಅಭಿಮಾನಿಗಳು ಸಾವನ್ನಪ್ಪಿದ್ದಂತ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಈ ದುರಂತವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು. ಈ ಬೆನ್ನಲ್ಲೇ ರಾಜ್ಯ ಸರ್ಕಾರವು ಸಿಐಡಿ ತನಿಖೆಗೂ ಆದೇಶಿಸಿದೆ. ಹೀಗಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಸಿಐಡಿಯ ಅಧಿಕಾರಿಗಳ ಭೇಟಿ ನೀಡಿ, ಮಾಹಿತಿ ಪಡೆಯುವ ಸಾಧ್ಯತೆ ಇದೆ.

Read More