Author: kannadanewsnow09

ಶಿವಮೊಗ್ಗ: ಜಿಲ್ಲೆಯಲ್ಲಿ ಕೆಲ ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ, ಆಗಸ್ಟ್.16ರಿಂದ 18ರವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಶಿವಮೊಗ್ಗ ಹೊಳಲೂರು 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗಗಳ ಲಿಂಕ್‌ಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ. 16 ರಿಂದ 18 ರವರೆಗೆ 3 ದಿನಗಳ ಕಾಲ ಬೆಳಗ್ಗೆ 10.00 ರಿಂದ ಸಂಜೆ 6.00ರವರೆಗೆ ಹಾಡೋನಹಳ್ಳಿ, ಹಳೆ/ಹೊಸ ಮಡಿಕೆಚೀಲೂರು, ಬಿ.ಕೆ.ತಾವರೆ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. https://kannadanewsnow.com/kannada/fire-breaks-out-at-amusement-park-in-visakhapatnam/ https://kannadanewsnow.com/kannada/alert-heres-another-shocking-news-for-smokers/ https://kannadanewsnow.com/kannada/paralympic-leader-pramod-bhagat-banned-for-18-months-for-doping-violations/

Read More

ವಿಶಾಖಪಟ್ಟಣಂ: ಇಲ್ಲಿನ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಆರ್.ಕೆ.ಬೀಚ್ ರಸ್ತೆಯಲ್ಲಿರುವ ‘ಡಿನೋ ಪಾರ್ಕ್’ ಮನರಂಜನಾ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ರೆಸ್ಟೋರೆಂಟ್ ಸಂಪೂರ್ಣವಾಗಿ ಸುಟ್ಟುಹೋಗಿದೆ ಎಂದು ವರದಿಯಾಗಿದೆ. ವಿಶಾಖಪಟ್ಟಣಂನಲ್ಲಿನ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ಇರುವಂತ ಡಿನೋ ಪಾರ್ಕ್ ನಲ್ಲಿ ಭೀಕರ ಅಗ್ನಿ ಅವಘಟ ಸಂಭವಿಸಿದೆ. ಈ ಅಗ್ನಿ ಅವಘಡದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಧಗಧಗಿಸಿ ಹೊತ್ತಿ ಉರಿಯುತ್ತಿರುವುದಾಗಿ ತಿಳಿದು ಬಂದಿದೆ. https://twitter.com/jsuryareddy/status/1823286177908003096 https://kannadanewsnow.com/kannada/paralympic-leader-pramod-bhagat-banned-for-18-months-for-doping-violations/ https://kannadanewsnow.com/kannada/siddaramaiah-visits-tungabhadra-reservoir-says-gate-to-be-repaired-soon/ https://kannadanewsnow.com/kannada/alert-heres-another-shocking-news-for-smokers/

Read More

ವಿಜಯನಗರ: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತುಂಗಭದ್ರಾ ಡ್ಯಾಂಗೆ ಭೇಟಿ ನೀಡಿದರು. ಅಲ್ಲದೇ ಕೊಚ್ಚಿ ಹೋಗಿದ್ದಂತ 19ನೇ ಗೇಟ್ ಬಳಿಗೆ ತೆರಳಿ ಪರಿಶೀಲನೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ಗೇಟ್ ಮುರಿದಿರುವ ಸ್ಥಳವನ್ನು ಪರಿಶೀಲನೆ ಮಾಡಿ ನಂತರ ಮಾಧ್ಯಮ ದವರೊಂದಿಗೆ ಮಾತನಾಡಿದರು. ನಾನು ನಿನ್ನೆಯೇ ಬರಬೇಕಾಗಿತ್ತು. ಆದರೇ ಅದು ಸಾಧ್ಯವಾಗಲಿಲ್ಲ. ಆಗಸ್ಟ್.10ನೇ ತಾರೀಕಿನಂದು ಚೈನ್ ಕಟ್ಟ್ ಆಗಿದೆ. ನಾವು ನೀರನ್ನು 10 ಗೇಟ್ ಗಳ ಮೂಲಕ ಬಿಡಲಾಗುತ್ತಿದೆ. 19ನೇ ಗೇಟ್ ಕೂಡ ಅದರಲ್ಲಿ ಸೇರಿದೆ ಎಂದರು. 19ನೇ ಗೇಟ್ ನಲ್ಲಿ ಚೈನ್ ಕಟ್ಟಾಗಿ ಗೇಟ್ ಕೊಚ್ಚಿ ಹೋಗಿದೆ. ಗೇಟ್ ಇರುವುದು ನೀರನ್ನು ಕಂಟ್ರೋಲ್ ಮಾಡುವುದಕ್ಕೆ. ಡ್ಯಾಂ ಸೇಫ್ಟಿ ಎಕ್ಸ್ ಪರ್ಟ್ ಕಮಿಟಿಯನ್ನು ಸಂಪರ್ಕಿಸಿದ್ದೇವೆ. ಅವರ ಸಲಹೆಯ ಮೇರೆಗೆ ತುಂಗಭದ್ರಾ ಡ್ಯಾಂ ಗೇಟ್ ರಿಪೇರಿ ಕಾರ್ಯವನ್ನು ನಡೆಸಲಾಗುತ್ತದೆ ಎಂದರು. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ಸದಸ್ಯರು ಈ ಕಮಿಟಿಯಲ್ಲಿ ಇರುತ್ತಾರೆ. 1948ರಲ್ಲಿ ಪ್ರಾರಂಭವಾಗಿ, 53ನೇ ಇಸಲಿಗೆ ತುಂಗಭದ್ರಾ ಡ್ಯಾಂ…

Read More

ಬೆಂಗಳೂರು: ಕರ್ನಾಟಕಕ್ಕೆ ಮತ್ತೆ ಬಿಗ್ ರಿಲೀಫ್ ಅನ್ನು CWRC ನೀಡಿದೆ. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ಸಂಬಂಧ ಯಾವುದೇ ಆದೇಶವನ್ನು ಮಾಡಿಲ್ಲ. ದಿನಾಂಕ: 13-08-2024ರ ಇಂದು CWRCಯ 101ನೇ ಸಭೆ ದೆಹಲಿಯ ಕಚೇರಿಯಲ್ಲಿ ನಡೆಯಿತು. ಅದರ ಸಾರಾಂಶ ಈ ಕೆಳಗಿನಂತಿದೆ. 1. ಕರ್ನಾಟಕವು CWRC ಮುಂದೆ ಈ ಕೆಳಕಂಡ ಅಂಶಗಳನ್ನು ಸಲ್ಲಿಸಿತು i) ದಿನಾಂಕ 11.08.2024 ರಂತೆ ನಿಗದಿಪಡಿಸಿದ ನೀರಿನ ಹರಿವಾದ 56.73 ಟಿಎಂಸಿ ಗೆ ಬದಲಾಗಿ ಬಿಳಿಗುಂಡ್ಲುವಿನಲ್ಲಿ 153.802 ಟಿಎಂಸಿ ನೀರು ಹರಿದಿರುತ್ತದೆ. ii) ಬಿಳಿಗುಂಡ್ಲುವಿನಲ್ಲಿ ಹರಿದ ಹೆಚ್ಚುವರಿ ನೀರಿನ ಪ್ರಮಾಣವನ್ನು ಮುಂಬರುವ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯವು ಹರಿಸಬೇಕಾದ ನೀರಿನ ಮೊತ್ತಕ್ಕೆ ಜಮೆ ಮಾಡಿಕೊಳ್ಳತಕ್ಕದ್ದು. iii) ಮುಂದಿನ ಮಾನ್ಸೂನ್ ತಿಂಗಳುಗಳಲ್ಲಿಯೂ ಸಹ ಒಳ್ಳೆಯ ಮಳೆಯ ನಿರೀಕ್ಷೆ ಇದ್ದು, ಎರಡೂ ರಾಜ್ಯದ ರೈತರು ಸಹ ಲಾಭ ಪಡೆದುಕೊಳ್ಳಬಹುದೆಂದು ಆಶಿಸುತ್ತೇವೆ. 2. ತಮಿಳುನಾಡು ರಾಜ್ಯವು ಈ ಕೆಳಕಂಡ ಅಂಶಗಳನ್ನು ಸಲ್ಲಿಸಿತು i) ಬಿಳಿಗುಂಡ್ಲುವಿನಲ್ಲಿ ಹರಿದ ನೀರಿನ ಪ್ರಮಾಣವು ಕರ್ನಾಟಕದ ಜಲಾಶಯಗಳಲ್ಲಿನ ಹೆಚ್ಚುವರಿ…

Read More

ಬೆಳಗಾವಿ: ಜಿಲ್ಲೆಯ ಸವದತ್ತಿಯ ಯಲ್ಲಮ್ಮ ದೇವರಿಗೆ ತೆರಳಿದ್ದಂತ ವೇಳೆಯಲ್ಲಿ ಹೋಟೆಲ್ ನಲ್ಲಿ ತಂಗಿದ್ದ ಸಂದರ್ಭದಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿದೆ. ಈ ಘಟನೆಯಲ್ಲಿ 9 ಭಕ್ತಾಧಿಗಳು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ಒಂದರಲ್ಲಿ ಎಲ್ಲಮ್ಮ ದೇವಸ್ಥಾನಕ್ಕೆ ಯಾದಗಿರಿ ಹಾಗೂ ಬೆಂಗಳೂರಿನಿಂದ ತೆರಳಿದ್ದಂತ ಭಕ್ತರು ಹೋಟೆಲ್ ಒಂದರಲ್ಲಿ ತಂಗಿದ್ದರು. ಸವದತ್ತಿ ಪಟ್ಟಣದ ಹೋಟೆಲ್ ನಲ್ಲಿ ತಂಗಿದ್ದಂತ ಸಂದರ್ಭದಲ್ಲಿ ಹೋಟೆಲ್ ನಲ್ಲಿಯೇ ಕುಕ್ಕರ್ ಇರಿಸಿ, ಹೋಳಿಗೆ ಮಾಡೋದಕ್ಕೆ ಬೇಯಿಸಲು ಇಟ್ಟಿದ್ದರು. ಈ ಸಂದರ್ಭದಲ್ಲಿ ಕುಕ್ಕರ್ ಏಕಾಏಕಿ ಬ್ಲಾಸ್ಟ್ ಆಗಿದೆ. ಇದರ ಪರಿಣಾಮ ಹೋಟೆಲ್ ರೂಮಿನಲ್ಲಿದ್ದಂತ ಯಾದಗಿರಿ ಹಾಗೂ ಬೆಂಗಳೂರಿನ ಮೂಲದ ಭಕ್ತರು ಗಂಭೀರವಾಗಿ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಸವದತ್ತಿ ಪಟ್ಟಣದಲ್ಲಿ ಕುಕ್ಕರ್ ಬ್ಲಾಸ್ಟ್ ನಿಂದ ಗಾಯಗೊಂಡಿದ್ದಂತ ಗಾಯಾಳು ಭಕ್ತರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/alert-heres-another-shocking-news-for-smokers/ https://kannadanewsnow.com/kannada/paralympic-leader-pramod-bhagat-banned-for-18-months-for-doping-violations/

Read More

ಬೆಳಗಾವಿ: ಜಿಲ್ಲೆಯ ಕುಕ್ಕರ್ ಬ್ಲಾಸ್ಟ್ ಆಗಿ ಹೋಟೆಲ್ ನಲ್ಲಿ ತಂಗಿದ್ದಂತ 9 ಮಂದಿ ಭಕ್ತರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಬೆಳಗಾವಿಯ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ರೂಂ ಒಂದರಲ್ಲಿ ಕುಕ್ಕರ್ ಬ್ಲಾಸ್ ಆಗಿ 9 ಭಕ್ತಾದಿಗಳು ಗಾಯಗೊಂಡಿರುವಂತ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಹೋಟೆಲ್ ರೂಂ ಒಂದರಲ್ಲಿ ತಂಗಿದ್ದಂತ ಭಕ್ತಾದಿಗಳು ಹೋಳಿಗೆ ಮಾಡೋದಕ್ಕೆ ಬೇಳೆ ಬೇಯಿಸಲು ಕುಕ್ಕರ್ ನಲ್ಲಿ ಇರಿಸಿದ್ದರು. ಇಂತಹ ಕುಕ್ಕರ್ ಬ್ಲಾಸ್ಟ್ ಆದಂತ ಪರಿಣಾಮ 9 ಮಂದಿಗೆ ಗಾಯವಾಗಿರುವುದಾಗಿ ತಿಳಿದು ಬಂದಿದೆ. https://kannadanewsnow.com/kannada/alert-heres-another-shocking-news-for-smokers/ https://kannadanewsnow.com/kannada/breaking-youth-stabs-pu-student-with-scissors-in-moodabidri/

Read More

ತುಮಕೂರು: ಜಿಲ್ಲೆಯ ಗ್ರಾಮ ಪಂಚಾಯ್ತಿ ಒಂದರಲ್ಲಿನ ಗ್ರಂಥಾಲಯ ನೇಮಕಾತಿಯಲ್ಲಿ ಭಾರೀ ಅಕ್ರಮವೇ ನಡೆದಿರೋದಾಗಿ ತಿಳಿದು ಬಂದಿದೆ. ಈ ಅಕ್ರಮದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದರೂ, ಅಧಿಕಾರಿಗಳು ಮಾತ್ರ ಕ್ರಮಕ್ಕೆ ಹಿಂದೇಟು ಹಾಕುತ್ತಿರೋದಾಗಿ ಹೇಳಲಾಗುತ್ತಿದೆ. ತುಮಕೂರು ಜಿಲ್ಲೆಯ ದೇವಲಾಪುರ ಗ್ರಾಮ ಪಂಚಾಯ್ತಿಯಲ್ಲಿನ ಗ್ರಂಥಾಲಯ ಮೇಲ್ವಿಚಾರಕರ ನೇಮಕಾತಿಯಲ್ಲಿ ಅಕ್ರಮ ನಡೆಸಲಾಗಿದೆ. ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ದೂರು ನೀಡಲಾಗುತ್ತದೆ. ಈ ದೂರನ್ನು ಆಧರಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ದಿನಾಂಕ 05-07-2024ರಂದು ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತರು ಪತ್ರವನ್ನು ಬರೆದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಾರೆ. ಆದೇಶ ಪತ್ರದಲ್ಲಿ ಏನಿದೆ.? ಸಂಜೀವಯ್ಯ ಹೆಚ್. ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಕಾರ್ಯಾಲಯ ದೇವಲಾಪುರ ಇವರ ದೂರಿನ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆಯ ದೇವಲಾಪುರ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ…

Read More

ಬೆಂಗಳೂರು: ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಆಗಸ್ಟ್.13ರ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಸ್ಕಾಂ ತಿಳಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ 13.08.2024 (ಮಂಗಳವಾರ) ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 16:00 ಗಂಟೆಯವರೆಗೆ 66/11ಕೆ.ವಿ ಬಾಣಸವಾಡಿ’ ಸ್ಟೇಷನ್ ನಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದು. ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: “ಹೊರಮಾವು ಪಿ&ಟಿ ಲೇಔಟ್, ನಿಸರ್ಗ ಕಾಲೋನಿ, ನಂದನ ಕಾಲೋನಿ, ಆಶೀರ್ವಾದ್ ಕಾಲೋನಿ, ಜ್ಯೋತಿನಗರ, ಆಗರ, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಲೇಔಟ್, ಕೋಕೋನಟ್‌ಗ್ರೋವ್, ದೇವಮತ ಶಾಲೆ, ಅಮರ್‌ರೀಜೆನ್ಸಿ, ವಿಜಯ ಬ್ಯಾಂಕ್ ಕಾಲೋನಿ ಹೆಚ್.ಆರ್.ಬಿ.ಆರ್. ಲೇಔಟ್, 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣನಗರ, ಬಿ.ಡಬ್ಲ್ಯೂ.ಎಸ್. ಎಸ್.ಬಿ ವಾಟರ್‌ಟ್ಯಾಂಕ್, ಹೆಣ್ಣೂರು ಗ್ರಾಮ, ಚೆಳ್ಳಿಕೆರೆ, ಮೇಘನ ಪಾಳ್ಯ, ಗೆದ್ದಲಹಳ್ಳಿ, ಕೊತ್ತನೂರು, ವಡ್ಡರ ಪಾಳ್ಯ, ಜಾನಕೀರಾಮ್ ಲೇಔಟ್, ಬಿ.ಡಿ.ಎಸ್. ಗಾರ್ಡನ್, ಸತ್ಯಎನ್‌ಕ್ಲೇವ್, ಪ್ರಕೃತಿ ಲೇಔಟ್ ಹೊಯ್ಸಳನಗರ,…

Read More

ಬೆಂಗಳೂರು: ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆಯ ನಡುವೆ ಆಗಸ್ಟ್.13ರ ಇಂದಿನಿಂದ ಆಗಸ್ಟ್.15ರವರೆಗೆ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತಂತೆ ಬಿಎಂಆರ್ ಸಿಎಲ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಆ.13 ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದಿದೆ. ನಾಗಸಂದ್ರದಿಂದ ಮಾದಾವರ (BIEC) ವರೆಗಿನ ರೀಚ್-3ರ ವಿಸ್ತ್ರತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಬೇಕಾಗಿರುವುದರಿಂದ, ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಮಯದಲ್ಲಿ ವ್ಯತ್ಯಯ ವಾಗಲಿದ್ದು ಇದರ ವಿವರ ಈ ಕೆಳಕಂಡಂತಿವೆ. 1. ದಿನಾಂಕ 13ನೇ ಆಗಸ್ಟ್ 2024 ರಂದು ಗಂಟೆಯವರೆಗೆ -ಕೊನೆಯ ರೈಲು ಸೇವೆ ರಾತ್ರಿ 11.00 ಕ್ಕೆ ಬದಲಾಗಿ 10.00 ಗಂಟೆಯವರೆಗೆ. 2. ದಿನಾಂಕ 14ನೇ ಆಗಸ್ಟ್ 2024 ರಂದು ಬೆಳಿಗ್ಗೆ 5.00 ಕ್ಕೆ ಬದಲಾಗಿ 06.00 ಕ್ಕೆ ಪ್ರಾರಂಭ ಮತ್ತು ಕೊನೆಯ ರೈಲು ಸೇವೆ ರಾತ್ರಿ 11.00…

Read More

ಬೆಂಗಳೂರು: ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಕನಿಷ್ಠ ವೇತನ ನಿಗದಿಪಡಿಸಲಾಗಿದೆ. ‘ಅರಿವು ಕೇಂದ್ರ’ಗಳ ಕೆಲಸದ ಸಮಯವನ್ನು ದಿನಕ್ಕೆ 6 ರಿಂದ 8 ಗಂಟೆಗಳಿಗೆ ಏರಿಸಿ ಗ್ರಂಥಾಲಯ ಮೇಲ್ವಿಚಾರಕರಿಗೆ ರೂ. 16,382 ರೂ. ಮಾಸಿಕ ಕನಿಷ್ಠ ವೇತನ ಮತ್ತು 1542 ರೂ. ವ್ಯತ್ಯಯವಾಗುವ ತುಟ್ಟಿ ಭತ್ಯೆ ಸೇರಿಸಿ, ಮಾಸಿಕ 17,924 ರೂ. ಪಾವತಿಸಲಾಗುತ್ತಿದೆ. ಗ್ರಂಥಾಲಯ ಮೇಲ್ವಿಚಾರಕರಿಗೆ ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವತಿಯಿಂದ 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಪ್ರಾರಂಭಿಸಲು ಕ್ರಮ ವಹಿಸಲಾಗಿದೆ ಎಂಬುದಾಗಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಓದುವ ಬೆಳಕು ಓದುವ ಬೆಳಕು’ ಕಾರ್ಯಕ್ರಮದಡಿ 6 ರಿಂದ 18 ವರ್ಷದ ಮಕ್ಕಳಿಗೆ ಗ್ರಂಥಾಲಯದ ಸದಸ್ಯತ್ವವನ್ನು ನೀಡಿ ಮನೆಗೆ ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಓದಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಒಟ್ಟು 48,57,351 ಮಕ್ಕಳು ನೋಂದಣಿಯಾಗಿದ್ದಾರೆ. ವಿವಿಧ ಚಟುವಟಿಕೆಗಳು ಮಕ್ಕಳ ಸ್ನೇಹಿಯಾಗಿಸಲು ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಓದಿನ ಮನೆಗೆ ಹೋಗೋಣ, ಚದುರಂಗ ಆಟ ಆಡೋಣ, ಗಟ್ಟಿ ಓದು, ಅಮ್ಮನಿಗಾಗಿ ಒಂದು ಪುಸ್ತಕ, ಪತ್ರ…

Read More