Author: ಅವಿನಾಶ್‌ ಆರ್‌ ಭೀಮಸಂದ್ರ

ಅವಿನಾಶ್‌ ಆರ್‌ ಭೀಮಸಂದ್ರ ಪರಿಚಯ: ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 15 ವರ್ಷಗಳ ಅನುಭವ, ತನಿಖಾ ಪತ್ರಿಕೋದ್ಯಮ, ಅಪರಾಧ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ. ಊರು ಕಲ್ಪತರು ನಾಡು ತುಮಕೂರು ಜಿಲ್ಲೆಯ ಇವರು ಓದಿದ್ದು ಪದವಿಯಲ್ಲಿ ಪತ್ರಿಕೋದ್ಯಮ, ಐಚ್ಚಿಕ ಕನ್ನಡ, ಮನೋವಿಜ್ಞಾನ, ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ. ಕಸ್ತೂರಿ ನ್ಯೂಸ್‌. ವಿಜಯವಾಣಿ, ಪ್ರಜಾಪ್ರಗತಿ, ಪ್ರಗತಿ ಟಿವಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಕನ್ನಡಿಗರ ಮನೆಮಾತಾಗಿರುವ ಕನ್ನಡ ನ್ಯೂಸ್‌ನೌ.ಕಾಂ ಡಿಜಿಟಲ್‌ ಮೀಡಿಯಾದ ಸಂಸ್ಥಾಪಕ ಸಂಪಾದಕರು ಕೂಡ ಹೌದು.

ಉಡುಪಿ: ಕರಾವಳಿಯ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಉಡುಪಿ ಶ್ರೀ ಕೃಷ್ಣಮಠದಲ್ಲಿ ಮಾರ್ಚ್ 3ರಂದು ನಡೆಯಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ವಿಶೇಷ ಆಚರಣೆಗಳು ಮತ್ತು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ಕುರಿತು ಮಠದ ದಿವಾನರಾದ ಡಾ. ಉದಯ ಸರಳತ್ತಾಯರು ಮಾಧ್ಯಮಗಳಿಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಗ್ರಹಣದ ಸಮಯ ಮತ್ತು ಗೋಚರತೆ: ಮಾರ್ಚ್ 3ರ ಮಂಗಳವಾರದಂದು ‘ಗ್ರಸ್ತೋದಯ ಚಂದ್ರಗ್ರಹಣ’ ಸಂಭವಿಸಲಿದೆ. ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಸೂರ್ಯಾಸ್ತದ ಸಮಯವಾದ ಸಂಜೆ 6:19 ರಿಂದ 6:47 ರವರೆಗೆ ಮಾತ್ರ ಗ್ರಹಣದ ಪ್ರಭಾವ ಇರಲಿದೆ. ವಿಶೇಷವೆಂದರೆ, ಈ ಗ್ರಹಣವು ಕೇವಲ ಎಂಟು ನಿಮಿಷಗಳ ಕಾಲ ಮಾತ್ರ ಸ್ಪಷ್ಟವಾಗಿ ಗೋಚರಿಸಲಿದೆ ಎಂದು ಅವರು ತಿಳಿಸಿದ್ದಾರೆ. ಅನ್ನದಾನ ಇರುವುದಿಲ್ಲ: ಗ್ರಹಣದ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ ಮತ್ತು ರಾತ್ರಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಅನ್ನಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಪೂಜಾ ವಿಧಿವಿಧಾನ: ಗ್ರಹಣ ಮುಕ್ತಾಯವಾದ ನಂತರ ಅಂದರೆ ರಾತ್ರಿ 7 ಗಂಟೆಗೆ ಸ್ನಾನಾದಿ ಶುದ್ಧಿ ಕಾರ್ಯಗಳನ್ನು ಪೂರೈಸಿ, ಶ್ರೀ ಕೃಷ್ಣನಿಗೆ ವಿಶೇಷ ರಾತ್ರಿ ಪೂಜೆಯನ್ನು ನೆರವೇರಿಸಲಾಗುತ್ತದೆ.…

Read More

ಸಾಂಧಾರ್ಭಿಕ ಚಿತ್ರ ಕುಶಾಲನಗರ: ಇಂದಿನ ದಿನಗಳಲ್ಲಿ ಒಂದು ಸರ್ಕಾರಿ ಕೆಲಸ ಪಡೆಯುವುದೆಂದರೆ ಅದು ಆಕಾಶ ಕುಸುಮವಿದ್ದಂತೆ. ಸಾವಿರಾರು ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಸಿ, ಹಗಲಿರುಳು ಓದಿ ಒಂದು ಹುದ್ದೆ ಗಿಟ್ಟಿಸಿಕೊಳ್ಳುವುದು ಸಾಮಾನ್ಯದ ಮಾತಲ್ಲ. ಆದರೆ, ಮಣ್ಣಿನ ಮೇಲಿನ ಮಮಕಾರ ಹಾಗೂ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಅದಮ್ಯ ಆಸಕ್ತಿಯಿಂದಾಗಿ ಪೊಲೀಸ್ ಪೇದೆಯೊಬ್ಬರು ತಮಗೆ ಸಿಕ್ಕಿದ್ದ ಸುಭದ್ರ ಸರ್ಕಾರಿ ಉದ್ಯೋಗವನ್ನೇ ತ್ಯಜಿಸಿರುವ ಅಪರೂಪದ ಘಟನೆ ವರದಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ತೇಜಸ್ವಿ ಅವರು, ‘ಖಾಕಿ’ಯನ್ನು ಕಳಚಿಟ್ಟು ‘ನೇಗಿಲು’ ಹಿಡಿಯಲು ಸಜ್ಜಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಯಾರೀ ತೇಜಸ್ವಿ? ಶಿವಮೊಗ್ಗ ಜಿಲ್ಲೆಯ ಸಿರಿಗೆರೆ ಗ್ರಾಮದ ಮೂಲದವರಾದ ತೇಜಸ್ವಿ ಅವರು ಕಳೆದ ಆರು ವರ್ಷಗಳಿಂದ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಮತ್ತು ಕುಶಾಲನಗರ ಠಾಣೆಗಳಲ್ಲಿ ಸಿವಿಲ್ ಕಾನ್ಸ್‌ಟೇಬಲ್ ಆಗಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದರು. ವಿವಾಹಿತರಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ವೃತ್ತಿಯಲ್ಲಿ ಪೊಲೀಸ್ ಆಗಿದ್ದರೂ, ಇವರ ಮನಸ್ಸು ಮಾತ್ರ ಸದಾ ಮಣ್ಣಿನ ವಾಸನೆಯನ್ನು ಅರಸುತ್ತಿತ್ತು.…

Read More

ದುಬೈ/ನವದೆಹಲಿ: ಮಧ್ಯಪ್ರಾಚ್ಯ ಏಷ್ಯಾದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಅಲ್ಲಿನ ನಿವಾಸಿಗಳಲ್ಲಿ ತೀವ್ರ ಆತಂಕ ಮನೆಮಾಡಿದೆ. ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE), ಗಲ್ಫ್ ರಾಷ್ಟ್ರಗಳಲ್ಲಿ ನಾಳೆ (ಮಾರ್ಚ್ 2, ಸೋಮವಾರ) ನಡೆಯಬೇಕಿದ್ದ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ತುರ್ತಾಗಿ ಮುಂದೂಡಿದೆ. ಯಾವೆಲ್ಲಾ ರಾಷ್ಟ್ರಗಳಲ್ಲಿ ಪರೀಕ್ಷೆ ಮುಂದೂಡಿಕೆ? ಇರಾನ್ ಮತ್ತು ಇಸ್ರೇಲ್ ನಡುವಿನ ಕ್ಷಿಪಣಿ ದಾಳಿ ಮತ್ತು ವಾಯುಪ್ರದೇಶಗಳ ಮುಚ್ಚುವಿಕೆಯಿಂದಾಗಿ ಈ ಕೆಳಗಿನ ದೇಶಗಳಲ್ಲಿ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಕತಾರ್ ಸೌದಿ ಅರೇಬಿಯಾ ಕುವೈತ್ ಬಹ್ರೇನ್ ಓಮನ್ ಇರಾನ್ ಮುಂದೂಡಿಕೆಗೆ ಪ್ರಮುಖ ಕಾರಣವೇನು? ಇತ್ತೀಚೆಗೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ಮೃತಪಟ್ಟಿದ್ದಾರೆ ಎಂಬ ವರದಿಗಳು ಬಂದ ಬೆನ್ನಲ್ಲೇ ಈ ಭಾಗದಲ್ಲಿ ಯುದ್ಧದ ಜ್ವಾಲೆ ಹೊತ್ತಿಕೊಂಡಿದೆ. ಇರಾನ್ ಪಡೆಗಳು ವಾಷಿಂಗ್ಟನ್ ಮತ್ತು ಟೆಲ್…

Read More

ನಮ್ಮ ಹಿಂದೂ ಸಂಪ್ರದಾಯದಲ್ಲಿ ‘ಶಕುನ ಶಾಸ್ತ್ರ’ಕ್ಕೆ ಬಹಳ ಮಹತ್ವದ ಸ್ಥಾನವಿದೆ. ದಿನನಿತ್ಯದ ಜೀವನದಲ್ಲಿ ನಡೆಯುವ ಕೆಲವು ಘಟನೆಗಳು ಭವಿಷ್ಯದ ಶುಭ ಅಥವಾ ಅಶುಭ ಮುನ್ಸೂಚನೆಗಳನ್ನು ನೀಡುತ್ತವೆ ಎಂಬುದು ನಂಬಿಕೆ. ಅದರಲ್ಲಿಯೂ ಮುಖ್ಯವಾಗಿ, ನಾವು ಯಾವುದೋ ಕೆಲಸಕ್ಕೆ ಹೊರಟಾಗ ಬೆಕ್ಕು ಅಡ್ಡ ಬಂದರೆ ಸಾಕು, ಅಲ್ಲಿಗೆ ಒಂದು ನಿಮಿಷ ನಿಂತು ಅಥವಾ ದಾರಿ ಬದಲಿಸಿ ಹೋಗುವವರೇ ಹೆಚ್ಚು. ಹಾಗಾದರೆ, ಬೆಕ್ಕು ದಾರಿ ದಾಟುವುದು ನಿಜಕ್ಕೂ ಕೆಟ್ಟದ್ದೇ? ಜ್ಯೋತಿಷ್ಯ ಶಾಸ್ತ್ರ ಈ ಬಗ್ಗೆ ಏನು ಹೇಳುತ್ತದೆ? ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ. ೧. ಜ್ಯೋತಿಷ್ಯ ಮತ್ತು ಬೆಕ್ಕಿನ ಸಂಬಂಧ: ರಾಹು-ಕೇತುಗಳ ಪ್ರಭಾವ ವೈದಿಕ ಜ್ಯೋತಿಷ್ಯದ ಪ್ರಕಾರ, ಬೆಕ್ಕುಗಳನ್ನು ‘ರಾಹು’ ಮತ್ತು ‘ಕೇತು’ ಗ್ರಹಗಳ ವಾಹನ ಅಥವಾ ಪ್ರತಿನಿಧಿ ಎಂದು ಪರಿಗಣಿಸಲಾಗುತ್ತದೆ. ರಾಹು ಮತ್ತು ಕೇತುಗಳು ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ, ಗೊಂದಲ ಮತ್ತು ಅಡೆತಡೆಗಳನ್ನು ತರುವ ಗ್ರಹಗಳು. ವಿಶೇಷವಾಗಿ ಕಪ್ಪು ಬೆಕ್ಕು ದಾರಿ ದಾಟಿದಾಗ, ಅದು ರಾಹುವಿನ ಪ್ರಭಾವವನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. ಇದು…

Read More

ಬೆಂಗಳೂರು: ಬೇಸಿಗೆಯ ಬಿಸಿಲಿನ ಆರಂಭದ ಬೆನ್ನಲ್ಲೇ ರಾಜ್ಯದ ಜನತೆಗೆ ಮುಖ್ಯಮಂತ್ರಿಗಳು ಒಂದು ಸಮಾಧಾನಕರ ಸುದ್ದಿ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ವಿದ್ಯುತ್ ದರ ಏರಿಕೆ (Electricity Price Hike) ಕುರಿತಾದ ಚರ್ಚೆಗಳಿಗೆ ಮುಖ್ಯಮಂತ್ರಿಗಳು ಪೂರ್ಣವಿರಾಮ ಇಟ್ಟಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸದ್ಯಕ್ಕೆ ವಿದ್ಯುತ್ ದರವನ್ನು ಹೆಚ್ಚಿಸುವ ಯಾವುದೇ ಆಲೋಚನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ಸು ಕರೆತರಲಾಗುವುದು ಅರಬ್ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಮುಖ್ಯ ಕಾರ್ಯದರ್ಶಿ, ಸ್ಥಾನಿಕ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ದುಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿದ್ದು, ಅದನ್ನು ತೆರೆದ ಮೇಲೆ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ದುಬೈದಲ್ಲಿದ್ದು, ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಹೋಟೆಲಿನಲ್ಲಿ ಸುರಕ್ಷಿತವಾಗಿರುವುದಾಗಿ ಹೇಳಿದರು ಎಂದರು ಅಮೆರಿಕಾದ ತದ್ವಿರುದ್ಧ ನಿಲುವನ್ನು ಖಂಡಿಸುತ್ತೇನೆ ಅಮೆರಿಕಾ ಇರಾನ್ ಮೇಲೆ ಮಾಡಿರುವ ದಾಳಿ ಅನಗತ್ಯವಾದುದು.…

Read More

ಶಿವಮೊಗ್ಗ  : ರಾಜ್ಯ ಸರ್ಕಾರ  ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ  ಕನ್ನಡಿಗರಿಗೆ ತೊಂದರೆಯಾಗದಂತೆ  ಕರೆತರಲು ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖ್ಯ ಮಂತ್ರಿ  ಸಿದ್ದರಾಮಯ್ಯ ತಿಳಿಸಿದರು. ಅವರು   ಇಂದು   ಶಿವಮೊಗ್ಗದ ವಿಮಾನ ನಿಲ್ದಾಣ ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅರಬ್ ದೇಶಗಳಲ್ಲಿ ಸಿಲುಕಿರುವ ಬಳ್ಳಾರಿಯ 30 ಜನರನ್ನು ವಾಪಸ್ಸು ಕರೆತರಲಾಗುವುದು ಎಂದು ಹೇಳಿದರಲ್ಲದೆ ದುಬೈ ನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದರು. ಕನ್ನಡಿಗರನ್ನು ಸುರಕ್ಷಿತವಾಗಿ ವಾಪಸ್ಸು ಕರೆತರಲಾಗುವುದು ಅರಬ್ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಮುಖ್ಯ ಕಾರ್ಯದರ್ಶಿ, ಸ್ಥಾನಿಕ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ದುಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿದ್ದು, ಅದನ್ನು ತೆರೆದ ಮೇಲೆ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ  ಕರೆ ತರಲು ವ್ಯವಸ್ಥೆ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯ ಭೋಜೇಗೌಡರು  ದುಬೈದಲ್ಲಿದ್ದು, ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ ಹೋಟೆಲಿನಲ್ಲಿ ಸುರಕ್ಷಿತವಾಗಿರುವುದಾಗಿ ಹೇಳಿದರು ಎಂದರು. ಅಮೆರಿಕಾದ ತದ್ವಿರುದ್ಧ ನಿಲುವನ್ನು ಖಂಡಿಸುತ್ತೇನೆ ಅಮೆರಿಕಾ ಇರಾನ್ ಮೇಲೆ ಮಾಡಿರುವ ದಾಳಿ ಅನಗತ್ಯವಾದುದು. ಒಂದೆಡೆ ಶಾಂತಿ ಮಾತ್ರ…

Read More

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಭೀಕರವಾಗಿ ಆವರಿಸಿವೆ. ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಅವರು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ, ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯು ವಿಶ್ವದ ಸ್ವತಂತ್ರ ರಾಷ್ಟ್ರಗಳಿಗೆ ಮಹತ್ವದ ಮನವಿಯೊಂದನ್ನು ಮಾಡಿದೆ. ಖಮೇನಿ ನಿಧನಕ್ಕೆ ತೀವ್ರ ಶೋಕ: ಭಾನುವಾರ (ಮಾರ್ಚ್ 1, 2026) ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯು ಖಮೇನಿ ಅವರ ನಿಧನಕ್ಕೆ “ತೀವ್ರ ದುಃಖ ಮತ್ತು ಆಘಾತ” ವ್ಯಕ್ತಪಡಿಸಿದೆ. ಈ ದಾಳಿಯನ್ನು “ಘೋರ ಅಪರಾಧ” ಎಂದು ಕರೆದಿರುವ ಇರಾನ್, ಅಮೆರಿಕ ಮತ್ತು ಇಸ್ರೇಲ್‌ನ ಈ ನಡೆಯನ್ನು ಕಟುವಾಗಿ ಖಂಡಿಸಿದೆ. ವಿಶ್ವ ರಾಷ್ಟ್ರಗಳಿಗೆ ಕರೆ: “ಈ ಕಾನೂನುಬಾಹಿರ ಆಕ್ರಮಣದ ಎದುರು ಯಾರೂ ಮೌನವಾಗಿರಬೇಡಿ. ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಬಯಸುವ ವಿಶ್ವದ ಎಲ್ಲಾ ಸರ್ಕಾರಗಳು ಈ ದೌರ್ಜನ್ಯವನ್ನು ಖಂಡಿಸಬೇಕು” ಎಂದು ಇರಾನ್ ರಾಯಭಾರ ಕಚೇರಿ ಆಗ್ರಹಿಸಿದೆ. ಅಂತರಾಷ್ಟ್ರೀಯ ಕಾನೂನುಗಳನ್ನು ಗಾಳಿಗೆ ತೂರಿ ನಡೆಸಲಾದ ಈ…

Read More

ಶಿಗ್ಗಾಂವಿ: ಹತ್ತಾರು ಕನಸುಗಳನ್ನು ಕಂಡು, ನೂರು ಕಾಲ ಸುಖವಾಗಿ ಬಾಳಬೇಕೆಂದು ಹಸೆಮಣೆ ಏರಿದ್ದ ಆ ಜೋಡಿಗೆ ವಿಧಿಯ ಆಟ ಬೇರೆಯೇ ಇತ್ತು. ಮದುವೆಯ ಸಂಭ್ರಮದ ಕಳೆ ಇನ್ನೂ ಮಾಸುವ ಮುನ್ನವೇ, ವಿಧಿಯಾಟಕ್ಕೆ ನವದಂಪತಿ ಬಲಿಯಾಗಿರುವ ಕರುಣಾಜನಕ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನಲ್ಲಿ ನಡೆದಿದೆ. ಘಟನೆಯ ಹಿನ್ನೆಲೆ: ಬೆಳ್ಳಂಬೆಳಗ್ಗೆ ಸಂಭವಿಸಿದ ದುರಂತ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಭಾನುವಾರ ಮುಂಜಾನೆ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹಾವೇರಿಯ ಹಿರಿಯ ಪತ್ರಕರ್ತ ದಿವಂಗತ ಗಂಗಾಧರ ಹೂಹಾರ ಅವರ ಪುತ್ರ ಕಾರ್ತಿಕ್ ಹೂಗಾರ್ (33) ಹಾಗೂ ಅವರ ಪತ್ನಿ ಐಶ್ವರ್ಯ (26) ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು. ಫೆಬ್ರವರಿ 13ರಂದು ಇವರಿಬ್ಬರ ವಿವಾಹವು ಹಾವೇರಿಯಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಮದುವೆಯಾಗಿ ಕೇವಲ 15 ದಿನಗಳು ಕಳೆಯುವಷ್ಟರಲ್ಲಿ ಈ ದುರಂತ ಸಂಭವಿಸಿರುವುದು ಕುಟುಂಬಸ್ಥರನ್ನು ಆಘಾತಕ್ಕೆ ದೂಡಿದೆ. ದೈವದರ್ಶನ ಮುಗಿಸಿ ಬರುವಾಗ ಎದುರಾದ ಮೃತ್ಯು ಶನಿವಾರ ರಾತ್ರಿ ನವದಂಪತಿಗಳು ನವಲಗುಂದದ ಪ್ರಸಿದ್ಧ ರಾಮಲಿಂಗೇಶ್ವರ ಕಾಮಣ್ಣನ…

Read More

ಮಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಾದ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಅದರ ನೇರ ಪರಿಣಾಮ ಕರಾವಳಿಯ ವಿಮಾನಯಾನದ ಮೇಲೆ ಬೀರಿದೆ. ಇರಾನ್ ತನ್ನ ವಾಯುಪ್ರದೇಶದಲ್ಲಿ ನಾಗರಿಕ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿರುವುದರಿಂದ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳಬೇಕಿದ್ದ ಹಲವು ವಿಮಾನಗಳನ್ನು ಹಠಾತ್ ರದ್ದುಗೊಳಿಸಲಾಗಿದೆ. ಯುದ್ಧದ ಭೀತಿ: ರದ್ದಾದ ಪ್ರಮುಖ ವಿಮಾನಗಳ ಪಟ್ಟಿ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ವಾಯುಮಾರ್ಗಗಳು ಅಸುರಕ್ಷಿತವಾಗಿರುವ ಕಾರಣ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ. ಇಂದು ರದ್ದಾಗಿರುವ ಪ್ರಮುಖ ವಿಮಾನಗಳ ವಿವರ ಇಲ್ಲಿದೆ: ಸಮಯ ಪ್ರಯಾಣದ ಮಾರ್ಗ ವಿಮಾನ ಸಂಸ್ಥೆ ಬೆಳಿಗ್ಗೆ 9:25 ಮಂಗಳೂರು – ಮಸ್ಕತ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಧ್ಯಾಹ್ನ 1:20 ಮಂಗಳೂರು – ದುಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್ ರಾತ್ರಿ 7:15 ಮಂಗಳೂರು – ದುಬೈ ಇಂಡಿಗೊ ರಾತ್ರಿ 8:15 ಮಂಗಳೂರು – ದುಬೈ ಏರ್ ಇಂಡಿಯಾ ಎಕ್ಸ್‌ಪ್ರೆಸ್…

Read More

ನವದೆಹಲಿ : ಎಂಟು ತಿಂಗಳ ನಂತರ, ಇರಾನ್ ಮತ್ತು ಇಸ್ರೇಲ್ ನಡುವೆ ಮತ್ತೆ ಯುದ್ಧ ಭುಗಿಲೆದ್ದಿದೆ. ಇಸ್ರೇಲ್ ಜೊತೆಗೆ ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಇಸ್ರೇಲ್ ಸೇರಿದಂತೆ ಏಳು ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ದಾಳಿ ಮಾಡಿದೆ. ಇರಾನ್ ಕೂಡ ಹಾರ್ಮುಜ್ ಜಲಸಂಧಿಯನ್ನ ಮುಚ್ಚುವುದಾಗಿ ಬೆದರಿಕೆ ಹಾಕಿದೆ. ಹೌತಿ ಬಂಡುಕೋರರ ಮೂಲಕ ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲಿನ ದಾಳಿಯನ್ನ ತೀವ್ರಗೊಳಿಸಬಹುದು. ಈ ಎರಡು ಜಲಸಂಧಿಗಳ ದಿಗ್ಬಂಧನವು ಭಾರತ ಸೇರಿದಂತೆ ಜಾಗತಿಕ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ಹಾರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ತೈಲ ಮಾರ್ಗವಾಗಿದೆ. ಇದು ಓಮನ್ ಮತ್ತು ಇರಾನ್ ನಡುವೆ ಇರುವ ಕಿರಿದಾದ ಜಲಮಾರ್ಗವಾಗಿದ್ದು, ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಈ ಜಲಸಂಧಿಯು 161 ಕಿಮೀ ಉದ್ದ ಮತ್ತು ಅದರ ಅತ್ಯಂತ ಕಿರಿದಾದ ಸ್ಥಳದಲ್ಲಿ ಕೇವಲ 33 ಕಿಮೀ ಅಗಲವಿದೆ. ಜಾಗತಿಕ ಕಡಲ ತೈಲ ವ್ಯಾಪಾರದ 27% ಹಾರ್ಮುಜ್…

Read More