Subscribe to Updates
Get the latest creative news from FooBar about art, design and business.
Author: kannadanewsnow07
ಬೆಂಗಳೂರು: ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ Digital Evaluation ಉದ್ಘಾಟನಾ ಕಾರ್ಯಕ್ರಮ ನೇರವೇರಿತು. ಈ ವೇಳೆ ಡಾ. ರೀಟಾ ಭಟ್ಟಾಚಾರ್ಜಿ ಡೀನ್, ಅಕಾಡೆಮಿಕ್ಸ್, ಬಿಎಂಎಸ್ಸಿಡಬ್ಲ್ಯೂ , ಡಾ.ಡಿ.ಇ.ವಸುಂಧರಾ, ಗಾಯತ್ರಿ ಎ ಪ್ರಾಂಶುಪಾಲರು, ಬಿಎಂಎಸ್ಸಿಡಬ್ಲ್ಯೂ, ಸುಮಂಗಲಾ, ವೆಂಕಟರಾಮನ್ ಉಮಾಕಾಂತ್, ಸೂರ್ಯ ನಾರಾಯಣನ್, ರಚನಾ, ಶಿಲ್ಪಾ ಎಸ್, ಹಾಜರಿದ್ದರು. Meta-i technologies digital evaluation solutions ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಭೋಧಕ ಮತ್ತು ಭೋಧಕತೇರ ಸಿಬ್ಬಂದಿ ಹಾಜರಿದ್ದು, ಕಾರ್ಯಕ್ರಮದ ಉದ್ದೇಶವನ್ನು ತಿಳಿದುಕೊಂಡರು.
ಬೆಂಗಳೂರು: ನಾಳೆ ಪರಪ್ಪನ ಅಗ್ರಹಾರಕ್ಕೆ ದರ್ಶನ್ ಅಂಡ್ ಗ್ಯಾಂಗ್ ಶಿಫ್ಟ್ ಮಾಡಲಾಗುವುದು ಎನ್ನಲಾಗಿದೆ. ನಾಳೆ ದರ್ಶನ್ ಅಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿ ಅವಧಿ ಮುಗಿಯಲಿದ್ದು, ಈ ನಿಟ್ಟಿನಲ್ಲಿ ಅವರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದು, ನಾಳೆ ಮತ್ತೆ ಪೊಲೀಸರು ತಮ್ಮ ವಶಕ್ಕೆ ಕೇಳುವ ಸಾಧ್ಯತೆ ಕಡಿಮೆ ಇದ್ದು, ನಾಳೆ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರಕ್ಕೆ ಸ್ಥಳತಾಂತರ ಮಾಡುವ ಸಾಧ್ಯತೆಯನ್ನು ಕೂಡ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ನಾಳೆ ಪರಪ್ಪನ ಅಗ್ರಹಾರಕ್ಕೆ ಹೋದರೆ ದರ್ಶನ್ ಎರಡನೇ ಬಾರಿಗೆ ಅಲ್ಲಿ ತಮ್ಮ ದಿನಗಳನ್ನು ಕಳೆಯಲಿದ್ದಾರೆ. ಈ ನಡುವೆ ರೇಣುಕಸ್ವಾಮಿ ಹತ್ಯೆ ವೇಳೆ ನಟ ದರ್ಶನ್ ಧರಿಸಿದ್ದ ಬಟ್ಟೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ಕೃತ್ಯ ನಡೆದ ಬಳಿಕ ಬಟ್ಟೆಯನ್ನು ಒಗೆದು ಒಣಗಿ ಹಾಕಲಾಗಿತ್ತು ಎನ್ನಲಾಗಿದೆ. ಆರ್ ಆರ್ ನಗರದಲ್ಲಿರುವ ದರ್ಶನ್ ಮನೆಯಿಂದ ಈ ಬಟ್ಟೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ಸದ್ಯ ಬಟ್ಟೆಗಳನ್ನು ವಧಿ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ತನಿಖೆಗಾಗಿ ಕಳುಹಿಕೊಟ್ಟಿದ್ದು, ಬಟ್ಟೆ ಮೇಲೆ…
ನವದೆಹಲಿ: ಈ ವರ್ಷದ ಜೂನ್ನಲ್ಲಿ ಭಾರತವು ಸಾಮಾನ್ಯಕ್ಕಿಂತ ಕಡಿಮೆ ಮಾನ್ಸೂನ್ ಮಳೆಗೆ ಸಾಕ್ಷಿಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೇಶದಲ್ಲಿ ಮಾನ್ಸೂನ್ ಆಗಮನದ ಬಗ್ಗೆ ನವೀಕರಣದಲ್ಲಿ, ಭಾರತ ಹವಾಮಾನ ಇಲಾಖೆ, “ಒಟ್ಟಾರೆಯಾಗಿ ದೇಶದಲ್ಲಿ ಜೂನ್ ಸರಾಸರಿ ಮಳೆಯು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ, ಅಂದರೆ ದೀರ್ಘಾವಧಿಯ ಸರಾಸರಿಯ (ಎಲ್ಪಿಎ) ಶೇಕಡಾ 92 ಕ್ಕಿಂತ ಕಡಿಮೆ” ಎಂದು ಹೇಳಿದೆ. ಕಳೆದ ಕೆಲವು ತಿಂಗಳುಗಳಿಂದ ಭಾರತದ ಕೆಲವು ಭಾಗಗಳು ತೀವ್ರವಾದ ಶಾಖದ ಅಲೆಯಿಂದ ತತ್ತರಿಸುತ್ತಿವೆ. ಮೇ 30 ರಂದು ಕೇರಳದಲ್ಲಿ ನೈಋತ್ಯ ಮಾನ್ಸೂನ್ ಪ್ರಾರಂಭವಾದಾಗಿನಿಂದ ದೇಶದಲ್ಲಿ ಶೇಕಡಾ 20 ರಷ್ಟು ಕಡಿಮೆ ಮಳೆಯಾಗಿದೆ, ಜೂನ್ 12 ಮತ್ತು 18 ರ ನಡುವೆ ಮಳೆ ಆಧಾರಿತ ವ್ಯವಸ್ಥೆಯು ಗಮನಾರ್ಹ ಪ್ರಗತಿ ಸಾಧಿಸಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದಾಗ್ಯೂ, ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಮಹಾರಾಷ್ಟ್ರ, ಛತ್ತೀಸ್ಗಢ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ವಾಯುವ್ಯ ಬಂಗಾಳ ಕೊಲ್ಲಿ, ಬಿಹಾರ ಮತ್ತು ಜಾರ್ಖಂಡ್ನ ಕೆಲವು ಭಾಗಗಳಲ್ಲಿ ಮಾನ್ಸೂನ್ ಮತ್ತಷ್ಟು ಮುಂದುವರಿಯಲು…
ಬೆಂಗಳೂರು: : ಕೊಲೆಯಾದ ರೇಣುಕಾಸ್ವಾಮಿಯವರ ಕುಟುಂಬಕ್ಕೆ ಧೈರ್ಯ ತುಂಬುವ ಕಾರ್ಯವನ್ನು ರಾಜ್ಯ ಸರಕಾರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅವರು ಸರ್ಕಾರಕ್ಕೆ ಮನವಿ ಮಾಡಿದ್ದು, ಈ ನಡುವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕೂಡ ಈ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇವೆಲ್ಲದರ ನಡುವೆ ಒಂದು ವೇಳೆ ಸರ್ಕಾರಿ ಉದ್ಯೋಗ ನೀಡಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅಮಮಾನ ಅಂಥ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಹಲವು ಮಂದಿ ಕೊಲೆಯಾಗಿದ್ದಾರೆ. ಅದರಲ್ಲೂ ದಲಿತ, ಹಿಂದುಳಿದ ಅನೇಕ ಮಂದಿ ರೇಣುಕಸ್ವಾಮಿಗಿಂತ ಭೀಕರವಾಗಿ ಕೊಲೆಯಾಗಿ ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಇಂತಹ ಸನ್ನಿವೇಶದಲ್ಲಿ ರೇಣುಸ್ವಾಮಿ ಹೆಂಡತಿಗೆ ಸರ್ಕಾರಿ ಉದ್ಯೋಗ ನೀಡುವುದು ಅನ್ಯಾಯಾವಾಗುತ್ತದೆ. ಇದಲ್ಲದೇ ಈಗಾಗಲೇ ಕೊಲೆಯಾಗಿ ಸಾವನ್ನಪ್ಪಿರುವ ದಲಿತರು ಸೇರಿದಂಥೆ ಅನೇಕರಿಗೆ ಇನ್ನೂ ಕೂಡ ನ್ಯಾಯ ಅನ್ನೋದು ಮರಿಚೀಕೆಯಾಗಿದೆ. ಮೊದಲು ಅವರಿಗೆ ಸರ್ಕಾರಿ ಕೆಲಸ ನೀಡಬೇಕೇ ಹೊರತು, ರೇಣುಕಸ್ವಾಮಿಗೆ ಅಲ್ಲ ಅಂಥ ಅನೇಕ ಮಂದಿ ವಾದ ಮಾಡುತ್ತಿದ್ದಾರೆ. ಸದ್ಯ ಸರ್ಕಾರಿ ಕೆಲಸ ನೀಡದೇ…
ಬೆಂಗಳೂರು: ನಟ ದರ್ಶನ್ ವಿರುದ್ದ ಮಾತನಾಡುವವರಿಗೆ ದರ್ಶನ್ ಅಭಿಮಾನಿಗಳಿಂದ ಧಮ್ಕಿ ಶುರುವಾಗುತ್ತಿದ್ದು ಈ ನಡುವೆ ಅಂತಹವರಿಗೆ ಪೊಲೀಸ್ ಇಲಾಖೆ ಬಿಗ್ ಶಾಕ್ ನೀಡಲು ಮುಂದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ದ ಮಾತನಾಡುತ್ತಿರುವರಿಗೆ ದರ್ಶನ್ ಅಭಿಮಾನಿಗಳು ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗುತ್ತಿದ್ದು, ಇದರಿಂದ ಹಲವು ಮಂದಿ ಆತಂಕವನ್ನು ಹೊರ ಹಾಕುತ್ತಿದ್ದಾರೆ. ಇವೆಲ್ಲದರ ನಡುವೆ ಪೊಲೀಸ್ ಇಲಾಖೆ ಕೂಡ ಸಾಮಾಜಿಕ ಜಾಲತಾಣದ ಮೇಲೆ ಕಣ್ಣು ಇಟ್ಟಿದ್ದು,. ಅಂತಹವರ ಹೆಡೆಮುರಿ ಕಟ್ಟುವುದಕ್ಕೆ ಮುಂದಾಗಿದೆ ಎನ್ನಲಾಗಿದೆ. ಅಭಿವ್ಯಕ್ತಿ ಸ್ವಾತಂತ್ಯ್ರದ ಹೆಸರಿನಲ್ಲಿ ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಬಾರದು, ಅಲ್ಲದೇ ಧಮ್ಕಿ. ಹೆದರಿಕೆ ಹಾಕುವುದು ಕಾನೂನು ಪ್ರಕಾರ ತಪ್ಪು ಅಂತ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಬೆಂಗಳೂರು: ನಟ ದರ್ಶನ್ ಸದ್ಯ ಕೊಲೆ ಆರೋಪದ ಮೇಲೆ ಪೊಲೀಸರ ವಶದಲ್ಲಿದ್ದು, ದಿನದಿಂದ ದಿನಕ್ಕೆ ಆತನ ಒಂದೊಂದು ಭಯಾನಕ ನಡವಳಿಕೆಗಳು ಬೆಳಕಿಗೆ ಬರುತ್ತಲಿವೆ. ಈ ನಡುವೆ ಆತನ ವಿರುದ್ದ ರೌಡಿ ಶೀಟ್ ತೆಗೆಯಲು ಪೊಲೀಸ್ ಇಲಾಖೆ ಮುಂದಾಗಿದ್ದು, ಎಲ್ಲವೂ ಅಂದುಕೊಂಡತೆ ಆದರೆ ಈ ವಾರದಲ್ಲಿ ಆತನ ವಿರುದ್ದ ರೌಡಿ ಶೀಟ್ ತೆಗೆದು ಪೊಲೀಸ್ ಠಾಣೆಯ ಬೋರ್ಡ್‌ನಲ್ಲಿ ಆತನ ಫೋಟೋವನ್ನು ಹಾಕುವುದು ಫಿಕ್ಸ್ ಎನ್ನಲಾಗುತ್ತಿದೆ. ರೇಣುಕಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದ ಬಳಿಕ ನಟ ದರ್ಶನ್ ಪಾತಕಿ ಕೆಲಸಗಳು ಒಂದು ಒಂದೇ ಬೆಳಕಿಗೆ ಬರುತ್ತಿದ್ದು, ಅವುಗಳ ಬೆನ್ನು ಹತ್ತಿರುವ ಪೊಲೀಸರಿಗೆ ಶಾಕಿಂಗ್ ಮಾಹಿತಿಗಳು ಹೊರ ಬರುತ್ತಿವೆ. ಇವೆಲ್ಲದರ ನಡುವೆ ನಟ ದರ್ಶನ್ ರಾಜ್ಯದ ಪ್ರತಿಯೊಂದು ಜಿಲ್ಲೆಯಗಳ ಹೆಸರಾಂತ ರೌಡಿಗಳ ಜೊತೆಗೆ ಗುರುತಿಸಿಕೊಂಡಿದ್ದ ಎನ್ನಲಾಗಿದ್ದು, ತನ್ನ ವಿರುದ್ದ ಮಾತನಾಡುತ್ತಿದ್ದವರಿಗೆ ಅವರ ಮೂಲಕ ಬಿಸಿ ಮುಟ್ಟಿಸುತ್ತಿದ್ದ ಎನ್ನಲಾಗಿದೆ. ಇದಲ್ಲದೇ ಹಲವು ಮಂದಿಯನ್ನು ಕರೆ ತಂದು ಅವರಿಗೆ ಹೆದರಿಸಿ ಬೆದರಿಸುತ್ತಿದ್ದ ಎನ್ನುವ ಗಂಭಿರ ಆರೋಪ ಕೂಡ ಕೇಳಿ…
ಬೆಂಗಳೂರು: ಬಸ್ ನಿಲ್ದಾಣಗಳಲ್ಲಿನ ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಮಾಡುವಿಕೆ, ನೈರ್ಮಲ್ಯದ ಕೊರತೆ ಮುಂತಾದ ವಿಷಯಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಿತ್ತರವಾದ ವರದಿಗಳನ್ನು ಆಧರಿಸಿ ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಅಗತ್ಯ ಕ್ರಮ ಕೈಗೊಂಡಿರುತ್ತಾರೆ. ವ್ಯಾಪಾರ ಮಳಿಗೆಗಳು ಹಾಗೂ ಆಹಾರ ಉದ್ದಿಮೆಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ 2006 ಮತ್ತು ನಿಯಮಗಳು 2011 ಅನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡಲು 2024ರ ಜೂನ್ ತಿಂಗಳಲ್ಲಿ ವಿಶೇಷ ಅಭಿಯಾನವನ್ನು ಕೈಗೊಳ್ಳಲಾಗಿರುತ್ತದೆ. ಅದರಂತೆ ರಾಜ್ಯಾದ್ಯಂತ 201 ಜಿಲ್ಲಾ ಮತ್ತು ತಾಲೂಕು ಕೇಂದ್ರಗಳ ಕಚೇರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ಇರುವ 748 ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳನ್ನು ಪರಿಶೀಲನೆ ಮಾಡಲಾಗಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011 ಅನ್ನು ಪಾಲಿಸುವಂತೆ ಅರಿವು ಮೂಡಿಸಲಾಗಿರುತ್ತದೆ. ಮುಂದಿನ ದಿನಗಳಲ್ಲಿ ಪುನರ್ ಪರಿಶೀಲನೆ ಸಂದರ್ಭದಲ್ಲಿ ಲೋಪದೋಷಗಳನ್ನು…
ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ರಕ್ಷಣೆಗಾಗಿ ನಿಯೋಜಿಸಲಾಗಿದ್ದ ಎಸ್ಎಸ್ಎಫ್ ಜವಾನನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎನ್ನಲಾಗಿದೆ. ಬುಧವಾರ ಮುಂಜಾನೆ 5.25 ಕ್ಕೆ ಈ ಘಟನೆ ನಡೆದಿದೆ. ಮೃತ ಸೈನಿಕನ ಹೆಸರು ಶತ್ರುಘ್ನ ವಿಶ್ವಕರ್ಮ ಎನ್ನಲಾಗಿದೆ . 25 ವರ್ಷದ ಶತ್ರುಘ್ನ ಅಂಬೇಡ್ಕರ್ ನಗರದ ನಿವಾಸಿಯಾಗಿದ್ದಾರೆ ಎನ್ನಲಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ನೋಡಿದ ಇತರ ಸೈನಿಕರು ಆಸ್ಪತ್ರೆಗೆ ಕರೆದುಕೊಂಡು ಹೋದರು . ಆದರೆ ಅಲ್ಲಿನ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎನ್ನಲಾಗಿದೆ. ಘಟನ ಸ್ಥಳಕ್ಕೆ ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ತಲುಪಿ ತನಿಖೆ ನಡೆಸಿತು. ಪ್ರಾಥಮಿಕ ತನಿಖೆಯಲ್ಲಿ ಇದನ್ನು ಆತ್ಮಹತ್ಯೆ ಪ್ರಕರಣವೆಂದು ಪರಿಗಣಿಸಲಾಗುತ್ತಿದೆ. ಈಗ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯ ನಂತರ ಸಾವಿಗೆ ನಿಖರ ಕಾರಣ ಸ್ಪಷ್ಟವಾಗಲಿದೆ ಎನ್ನಲಾಗಿದೆ.
ಬೆಂಗಳೂರು: ಅಮೆಜಾನ್ ಅಪ್ಲಿಕೇಶನ್ನಿಂದ ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಪ್ಯಾಕೇಜ್ನಲ್ಲಿ ಹಾವನ್ನು ಕಂಡು ದಂಪತಿಗಳು ಆಘಾತಕ್ಕೊಳಗಾಗಿರುವ ಘಟನೆ ನಡೆದಿದೆ. ಇಬ್ಬರು ಸಾಫ್ಟ್ವೇರ್ ಎಂಜಿನಿಯರ್ ದಂಪತಿಗಳು ಆನ್ಲೈನ್ನಲ್ಲಿ ಎಕ್ಸ್ಬಾಕ್ಸ್ ಕಂಟ್ರೋಲರ್ ಅನ್ನು ಆರ್ಡರ್ ಮಾಡಿದ್ದರು, ಆದರೆ ತಮ್ಮ ಪ್ಯಾಕೇಜ್ನಲ್ಲಿ ನಾಗರಹಾವನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಅದೃಷ್ಟವಶಾತ್ ವಿಷಕಾರಿ ಹಾವು ಪ್ಯಾಕೇಜಿಂಗ್ ಟೇಪ್ ಗೆ ಅಂಟಿಕೊಂಡಿದೆ ಮತ್ತು ಯಾವುದೇ ಹಾನಿ ಮಾಡಿಲ್ಲ ಎನ್ನಲಾಗಿದೆ. ಸದ್ಯ ದಂಪತಿಗಳು ವೀಡಿಯೊವನ್ನು ರೆಕಾರ್ಡ್ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “ನಾವು 2 ದಿನಗಳ ಹಿಂದೆ ಅಮೆಜಾನ್ ನಿಂದ ಎಕ್ಸ್ ಬಾಕ್ಸ್ ಕಂಟ್ರೋಲರ್ ಅನ್ನು ಆರ್ಡರ್ ಮಾಡಿದ್ದೇವೆ ಮತ್ತು ಪ್ಯಾಕೇಜ್ ನಲ್ಲಿ ಜೀವಂತ ಹಾವನ್ನು ಕಂಡುಕೊಂಡಿದ್ದೇವೆ” ಎಂದು ಗ್ರಾಹಕರು ಹೇಳಿದ್ದಾರೆ. ಪ್ಯಾಕೇಜ್ ಅನ್ನು ವಿತರಣಾ ಪಾಲುದಾರರು ನೇರವಾಗಿ ನಮಗೆ ಹಸ್ತಾಂತರಿಸಿದರು. ನಾವು ಸರ್ಜಾಪುರ ರಸ್ತೆಯಲ್ಲಿ ವಾಸಿಸುತ್ತಿದ್ದೇವೆ ಮತ್ತು ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇವೆ, ಜೊತೆಗೆ ನಮಗೆ ಪ್ರತ್ಯಕ್ಷದರ್ಶಿಗಳು ಇದ್ದಾರೆ ಅಂತ ಹೇಳಿದ್ದಾರೆ. ನಾವು ಸಂಪೂರ್ಣ ಮರುಪಾವತಿಯನ್ನು ಪಡೆದಿದ್ದೇವೆ, ಆದರೆ ಹೆಚ್ಚು ವಿಷಕಾರಿ…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಶ್ರೀಚಕ್ರವನ್ನು ಮನೆಯಲ್ಲಿ ಇಟ್ಟುಕೊಂಡು ಪೂಜೆಯನ್ನ ಮಾಡಬಹುದಾ? ಮಾಡಬಾರದ? ಮನೆಯಲ್ಲಿ ಯಾರು ಈ ಶ್ರೀಚಕ್ರವನ್ನು ಪೂಜೆ ಮಾಡಬಹುದು? ಪೂಜಾ ವಿಧಾನವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಇತ್ತೀಚೆಗೆ ಶ್ರೀಚಕ್ರವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದು ಹೆಚ್ಚಾಗುತ್ತಿದೆ. ತುಂಬಾ ಮಡಿ ನಿಯಮಗಳಿಂದ ಶ್ರೀಚಕ್ರವನ್ನು ಪೂಜೆ ಮಾಡಬೇಕು. ಯಾರ ಮನೆಯಲ್ಲಿ ದೇವರ ಮನೆ ಪ್ರತ್ಯೇಕವಾಗಿ ಇರುತ್ತದೆಯೋ ಅಂತಹವರ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ ಮಾಡಬಹುದು ಶ್ರೀ ಚಕ್ರ ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದು, ಶುಕ್ರವಾರ, ಭಾನುವಾರ ಹುಣ್ಣಿಮೆಯ ದಿನಗಳಲ್ಲಿ ಅಧಿಕವಾದ ಫಲಗಳು ಸಿಗುತ್ತದೆ. ಯಾರ ಮನೆಯಲ್ಲಿ ಶ್ರೀಚಕ್ರವನ್ನು ಪೂಜೆ ಮಾಡುತ್ತಾರೋ ಅಂತಹವರ ಮನೆಯಲ್ಲಿ ಆದಿಶಕ್ತಿ ಪರಮೇಶ್ವರಿ ವಾಸವಿರುತ್ತಾಳೆ. ಅಂತಹ ಮನೆಗಳಲ್ಲಿ ದಾರಿದ್ರ್ಯ ತೊಲಗಿ ಶಾಂತಿನೆಲೆಸಿರುತ್ತದೆ. ಏಕೆಂದರೆ ದೇವಿಯು ಶಾಂತಿ ಸ್ವರೂಪಳಾಗಿ ಶ್ರೀಚಕ್ರದಲ್ಲಿ ನೆಲೆಸಿರುತ್ತಾಳೆ. ಯಾರ ಮನೆಯಲ್ಲಿ ಶ್ರೀಚಕ್ರದ ಪೂಜೆ ನಡೆಯುತ್ತದೆಯೋ ಅಂತಹವರ ಮನೆಯಲ್ಲಿ ಸಂಪತ್ತಿಗೆ ಕೊರತೆ ಇರುವುದಿಲ್ಲ ಪ್ರತೀ ಶುಕ್ರವಾರ ಲಲಿತಾ…