Subscribe to Updates
Get the latest creative news from FooBar about art, design and business.
Author: kannadanewsnow05
ಬಾಗಲಕೋಟೆ : ಆನ್ಲೈನ್ ಟ್ರೇಡಿಂಗ್ ಆಪ್ ಗಳು ಮುಗ್ಧ ಜನರನ್ನು ಆಕ್ರಮಿಸಿ ವಂಚನೆ ಎಸಗುತ್ತವೆ. ಈ ರೀತಿ ಅದೆಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆವೆ ಆದರೂ ಕೂಡ ಕೆಲವರು ತಿಳಿದು ಆನ್ಲೈನ್ ನಲ್ಲಿ ಲಕ್ಷಾಂತರ ಮತ್ತು ಕೋಟ್ಯಾಂತರ ಹಣ ಹೂಡಿಕೆ ಮಾಡಿ ಮೋಸ ಹೋಗುತ್ತಿದ್ದಾರೆ ಇದೀಗ ಬಾಗಲಕೋಟೆಯಲ್ಲಿ ಸೈಬರ್ವಂಚಕರು ವ್ಯಾಪಾರಿ ಒಬ್ಬರಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಎಸಗಿದ್ದಾರೆ. ಹೌದು ಆನ್ಲೈನ್ ಹೂಡಿಕೆ ವಂಚನೆ ಜಾಲಕ್ಕೆ ಸಿಲುಕಿದ ವ್ಯಾಪಾರಿಯೊಬ್ಬರು ಬರೋಬ್ಬರಿ 1.09 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ತಾ ಟ್ರೇಡ್ 903 ಸ್ಟ್ರಾಟಜಿ ಹಬ್ ಎಂಬ ಹೆಸರಿನ ನಕಲಿ ಆನ್ಲೈನ್ ಗ್ರೂಪ್ ಮೂಲಕ ಅಂತಾರಾಜ್ಯ ಆನಲೈನ್ ಖದೀಮರು ವ್ಯಾಪಾರಿಯ ವಿಶ್ವಾಸ ಗಳಿಸಿದ್ದಾರೆ. ಆಮೇಲೆ, ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುತ್ತೇವೆ ಎಂಬ ಆಮಿಷವೊಡ್ಡಿ ಹೆಸರಿನಲ್ಲಿ ಹಣ ಎಗರಿಸಿದ್ದಾರೆ. ಆಗಸ್ಟ್ 12 ರಂದು ನಕಲಿ ಇನ್ವೆಸ್ಟ್‌ಮೆಂಟ್ ಮಾರ್ಕೆಟ್ ಮೂಲಕ ಬಾಗಲಕೋಟೆ ಮೂಲದ ವ್ಯಾಪಾರಿಗೆ ಗಾಳ ಹಾಕಿದ್ದ ಆನ್ಲೈನ್ ವಂಚಕರು,…
ಬೆಂಗಳೂರು : ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಫೈರಿಂಗ್ ಮಾಡಿದ್ದ ನಾಲ್ವರು ಆರೋಪಿಗಳನ್ನು ಇದೀಗ ನೆಲಮಂಗಲ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿ ಸಿನಿಮಾ ಸ್ಟೈಲ್ ನಲ್ಲಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಲೀಂ ಕೊಲೆಗೆ ನಟೋರಿಯಸ್ ಗಳು ಬಿಗ್ ಸ್ಕೆಚ್ ಹಾಕಿದ್ದರು.ಮುಬಾರಕ್ ಶಾಧಿಕ್ ಹಾಗೂ ಆಸಿಫ್ ನರಸಿಂಹ ಬಂಧಿತ ಆರೋಪಿಗಳಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಸ್ಲಾಂಪುರದಲ್ಲಿ ಸಲೀಂ ಮೇಲೆ ಬಂಧಿತರು ಫೈರಿಂಗ್ ನಡೆಸಿದ್ದರು.
ದಾವಣಗೆರೆ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಘಟನೆಯಲ್ಲಿ ಎಂಟು ಜನರಿಗೆ ಗಂಭೀರವಾದ ಗಾಯಗಳಾಗಿವೆ. ಕಾನನಕಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಈ ಒಂದು ಅಪಘಾತ ಸಂಭವಿಸಿದೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟಿ ಗ್ರಾಮದಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಅತಿ ವೇಗದಲ್ಲಿ ಬಂದು ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ನೂರ್, ಶಮಿಉಲ್ಲಾ, ಗುರುರಾಜ್ ಮತ್ತು ಖಾದರ್ ಜಿಲಾನ್ ಸ್ಥಿತಿ ಗಂಭೀರವಾಗಿದ್ದು ಗಯಾಳುಗಳು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಕಾರಿನಲ್ಲಿ ಯುವಕರು ಗಂಗಾವತಿಗೆ ತೆರಳುತ್ತಿದ್ದರು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು ವಿಡಿಯೋ ಕಾನ್ಫರೆನ್ಸ್ ಮೂಲಕ 6 ಆರೋಪಿಗಳು ಹಾಜರಾಗಿದ್ದಾರೆ. ಈ ವೇಳೆ ಕೋರ್ಟ್ ನವೆಂಬರ್ 3ಕ್ಕೆ ದೋಷಾರೋಪ ನಿಗದಿಪಡಿಸಲು ತಿಳಿಸಿತು. ನಾವು ಮಾತನಾಡುತ್ತಿರುವುದು ಕೇಳುತ್ತಿಯಾ ಎಂದು ಜಡ್ಜ್ ಕೇಳಿದಾಗ ಕೇಳಿಸುತ್ತಿದೆ ಎಂದು ದರ್ಶನ್ ಪವಿತ್ರಾಗೌಡ ಉತ್ತರಿಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕವೇ ದೋಷಾರೋಪ ನಿಗದಿಗೆ ಕೋರ್ಟ್ ನಿರ್ಧರಿಸಿತ್ತು. ನಾವು ಆರೋಪಿಗಳಿಗೆ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ ದೋಷಾರೋಪ ಒಪ್ಪಿಕೊಂಡು ಬಿಟ್ಟರೆ ಸಮಸ್ಯೆ ಆಗಲಿದೆ ಎಂದು ವಾದಿಸಿದರು ದರ್ಶನ್ ಪರ ವಕೀಲ ಸುನೀಲ ವಾದಿಸಿದರು. ಬಳಿಕ ಜಡ್ಜ್ ಒಬ್ಬೊಬ್ಬರ ಹೆಸರನ್ನೇ ಕರೆದು ಹಾಜರಾತಿ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಖುದ್ದಾಗಿ ಹಾಜರುಪಡಿಸಲು ದರ್ಶನ್ ಪರ ವಕೀಲ ಸುನಿಲ್ ಮನವಿ ಮಾಡಿದ್ದು, ನಾವು ಆರೋಪಿಗಳಿಗೆ ಯಾವುದೇ ಸೂಚನೆಗಳನ್ನು ನೀಡಿಲ್ಲ. ಇದೆ ಸಂದರ್ಭದಲ್ಲಿ ಮತ್ತೊಂದು ದಿನಾಂಕ ನಿಗದಿಪಡಿಸಲು ವಕೀಲರು ಜಡ್ಜ್ ಗೆ ಮನವಿ ಮಾಡಿದರು. ಬೇರೆ ದಿನಾಂಕ ನಿಗದಿ ಪಡಿಸುವ ಮುನ್ನ ಸಮಯ…
ಬೆಂಗಳೂರು : ಈ ಹಿಂದೆ ಬೆಂಗಳೂರಿನ ವಿಶ್ವ ವಿದ್ಯಾಲಯದ ಕುಲಸಚಿವರಾಗಿದ್ದ ಪ್ರೊ. ಬಿಸಿ ಮೈಲಾರಪ್ಪ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರೊಫೆಸರ್ ಬಿ.ಸಿ ಮೈಲಾರಪ್ಪರನ್ನ ಅರೆಸ್ಟ್ ಮಾಡಿದ್ದಾರೆ.ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೈಲಾರಪ್ಪ ಕುಲಸಚಿವರಾಗಿದ್ದರು. ಬಸವೇಶ್ವರನಗರ ಪೊಲೀಸರಿಂದ ಮೈಲಾರಪ್ಪ ಅರೆಸ್ಟ್ ಆಗಿದ್ದಾರೆ. ಲೈಂಗಿಕ ಸಂಪರ್ಕಕ್ಕೆ ಮಹಿಳೆಗೆ ಒತ್ತಾಯ ಮಾಡಿದ ಆರೋಪ ಕೇಳಿ ಬಂದಿದ್ದು, ಅಲ್ಲದೇ ಮನೆ ಬಳಿ ಹೋಗಿ ಬಾಗಿಲು ತೆರೆಯುವಂತೆ ಮೈಲಾರಪ್ಪ ಕಿರುಕುಳ ನೀಡಿದ್ದಾರೆ. ಕರೆ ಮಾಡಿ ಸಹಕರಿಸುವಂತೆ ಒತ್ತಾಯ ಮಾಡಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡು ಪೊಲೀಸರು ಮೈಲಾರಪ್ಪರನ್ನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು : ಇಂದು ನಟ ದರ್ಶನ್ ಗೆ ಬಿಗ್ ಡೇ ಏಕೆಂದರೆ ಕೋರ್ಟ್ ದೋಷಾರೋಪ ಪಟ್ಟಿ ಪ್ರಕ್ರಿಯೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಗಳು ಸಾಕ್ಷಿಗಳನ್ನು ಒಪ್ಪದಿದ್ದರೆ ಕೋರ್ಟು ವಿಚಾರಣೆ ಮುಂದುವರಿಸುತ್ತದೆ. ಅಕಸ್ಮಾತ್ ಆರೋಪಿಗಳು ಆರೋಪಗಳನ್ನು ಒಪ್ಪಿಕೊಂಡರೆ ಶಿಕ್ಷ ವಿಧಿಸುತ್ತದೆ ಹಾಗಾಗಿ ದರ್ಶನ್ ಮತ್ತು ಗ್ಯಾಂಗ್ ಗೆ ಇವತ್ತು ಬಹಳ ಮಹತ್ವದ ದಿನವಾಗಿದೆ. ಇದೆಲ್ಲದರ ಮಧ್ಯ ದರ್ಶನ್ ಮತ್ತು ಪವಿತ್ರ ಗೌಡ ಮದುವೆ ಆಗಿದ್ದಾರಾ ಎನ್ನುವ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದು ಬಾರಿ ವೈರಲ್ ಆಗಿದೆ. ಪವಿತ್ರ ಕುತ್ತಿಗೆಯಲ್ಲಿ ಅರಿಶಿನದ ದಾರ ಇರುವ ತಾಳಿ. ಮದುವೆ ಡ್ರೆಸ್ ನಲ್ಲಿ ದರ್ಶನ್ ಮತ್ತು ಪವಿತ್ರ ಇರುವ ಫೋಟೋ ವೈರಲ್ ಆಗಿದ್ದು, ಪವಿತ್ರಾ ಬಿಳಿ ಮತ್ತು ಮರುನ್ ಬಾರ್ಡರ್ ಸೀರೆ ಧರಿಸಿದ್ದಾಳೆ. 10 ವರ್ಷಗಳ ಹಿಂದೆ ತೆಗೆದಿರುವ ಫೋಟೋಗಳು ಈಗ ವೈರಲ್ ಆಗುತ್ತಿವೆ. ಹಾಗಾದರೆ ದರ್ಶನ್ ಮಾತೃ ಪವಿತ್ರ ಮದುವೆಯಾಗಿದ್ರ? ಅವರಿಬ್ಬರೂ ಸತಿ ಪತಿಗಳ? ದರ್ಶನಗೆ ಪವಿತ್ರ ಊಟ ಮಾಡಿಸುತ್ತಿರುವ ಫೋಟೋ ಕೂಡ ವೈರಲ್…
ನಗದು ಹರಿವನ್ನು ಹೆಚ್ಚಿಸಲು ದೇಣಿಗೆಗಳು ನಾವೆಲ್ಲರೂ ಹಣವನ್ನು ಹುಡುಕುತ್ತಾ ಅಲೆದಾಡುತ್ತಿದ್ದೇವೆ. ನಾವು ಕಷ್ಟಪಟ್ಟು ಸಂಪಾದಿಸಿದ ಹಣ ನಮ್ಮೊಂದಿಗೆ ಉಳಿಯಲು, ನಮ್ಮ ಶ್ರಮಕ್ಕೆ ಅನುಗುಣವಾಗಿ ಹಣದ ಒಳಹರಿವು ಇರಲು ಮತ್ತು ನಾವು ಇತರರಿಗೆ ತಿಳಿದೋ ತಿಳಿಯದೆಯೋ ನೀಡಿದ ಹಣವನ್ನು ಮರಳಿ ಪಡೆಯಲು, ನಮಗೆ ಮಹಾಲಕ್ಷ್ಮಿಯ ಕೃಪೆ ಬೇಕು. ಮಹಾಲಕ್ಷ್ಮಿಯ ಕೃಪೆ ಮಾತ್ರ ಸಾಕಾಗುವುದಿಲ್ಲ. ನಮಗೆ ಶುಕ್ರದೇವನ ಕೃಪೆ ಮತ್ತು ಗುರುದೇವನ ಕೃಪೆಯೂ ಬೇಕು. ಈ ಎರಡು ಗ್ರಹಗಳ ಕೃಪೆ ನಮಗಿದ್ದರೆ, ಹಣದ ಕೊರತೆಯಿಲ್ಲ ಎಂದು ಸಹ ಹೇಳಬಹುದು. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ, ಈ ಎರಡು ಗ್ರಹಗಳ ಕೃಪೆಯನ್ನು ಪಡೆಯಲು ಮಾಡಬೇಕಾದ ದಾನವನ್ನು ನಾವು ನೋಡಲಿದ್ದೇವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು…
ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಪ್ರಿಯಕರನ ಜೊತೆ ಸೇರಿ ಪುತ್ರಿ ಹೆತ್ತ ತಾಯಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ಸುಬ್ರಹ್ಮಣ್ಯಪುರದ ಮನೆಯಲ್ಲಿ ಈ ಒಂದು ಕೊಲೆ ನಡೆದಿದ್ದು, ಪ್ರಿಯಕರ ಮತ್ತು ಆತನ ಸ್ನೇಹಿತರ ಜೊತೆ ಸೇರಿ ಪುತ್ರಿ ತಾಯಿಯ ಕೊಲೆ ಮಾಡಿದ್ದಾಳೆ. 34 ವರ್ಷದ ತಾಯಿಯನ್ನು ಪಾಪಿ ಪುತ್ರಿ ಕೊಲೆ ಮಾಡಿದ್ದಾಳೆ. ಅಕ್ಟೋಬರ್ 25 ರಂದು ನೇತ್ರಾವತಿ ಕೊಲೆಯಾಗಿದ್ದು, ಕೊಲೆ ಮಾಡಿ ಆತ್ಮಹತ್ಯೆ ಬಿಂಬಿಸಲು ದೊಡ್ಡ ಹೈಡ್ರಾಮಾ ಮಾಡಿದ್ದಾಳೆ, ಪೊಲೀಸ್ ತನಿಖೆಯ ವೇಳೆ ನೇತ್ರಾವತಿ ಕೊಲೆಯ ರಹಸ್ಯ ಬಯಲಾಗಿದ್ದು, ಮಿಸ್ಸಿಂಗ್ ಕಂಪ್ಲೇಂಟ್ ನಿಂದ ಕೊಲೆ ರಹಸ್ಯ ಬಯಲಾಗಿದೆ. ಮೃತ ನೇತ್ರಾವತಿಯ ಮಗಳು ಓರ್ವ ಯುವಕರನ್ನು ಪ್ರೀತಿಸುತ್ತಿದ್ದಳು. ಆಗಾಗ ಮನೆಗೆ ಪ್ರಿಯಕರನ್ನು ನೇತ್ರಾವತಿ ಮಗಳು ಕರೆತರುತ್ತಿದ್ದಳು. ಅಕ್ಟೋಬರ್ 25 ರ ರಾತ್ರಿ ಕೂಡ ಮನೆಗೆ ಬಂದಿದ್ದಾಳೆ , ಪ್ರಿಯಕರನ ಮೂವರು ಸ್ನೇಹಿತರು ಕೂಡ ಮನೆಗೆ ಬಂದಿದ್ದಾರೆ. 11 ಗಂಟೆಗೆ ನೇತ್ರಾವತಿಗೆ ಮಗಳೊಂದಿಗೆ ಇರುವ ಹುಡುಗರ ಕಂಡು ನೇತ್ರಾವತಿ ಜಗಳ…
ಚಿಕ್ಕಮಗಳೂರು : ಚಿಕ್ಕಮಂಗಳೂರು, ಸೇರಿದಂತೆ ಆ ಭಾಗದಲ್ಲಿ ಆನೆಗಳ ದಾಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಕೆರೆಗದ್ದೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಗೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಬಿಜೆಪಿಯ ಮುಖಂಡ ಹರೀಶ್ (47) ಮತ್ತು ಉಮೇಶ್ (44) ಮೃತ ದುರ್ದವಿಗಳು ಎಂದು ತಿಳಿದುಬಂದಿದ್ದು, ಸೊಪ್ಪು ತರಲು ಮನೆಯ ಹಿಂಭಾಗ ತೆರಳಿದ್ದಾಗ ಕಾಡಾನೆ ದಾಳಿ ಮಾಡಿದೆ. ಕೆರೆಕಟ್ಟೆ, ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.
ಬೆಂಗಳೂರು : ಕೊಲೆ ಆರೋಪಿ ದರ್ಶನ್ ಗೆ ಇಂದು ಮಹತ್ವದ ದಿನವಾಗಿದ್ದು ಇಂದು ದೋಷಾರೋಪ ನಿಗದಿ ಮಾಡುವ ಕೋರ್ಟ್, ಕೋರ್ಟ್ ನಲ್ಲಿ ದೋಷಾರೋಪ ಹೋರಿಸುವ ಪ್ರಕ್ರಿಯೆ ಇರಲಿದ್ದು ಹಾಗಾಗಿ ದರ್ಶನ ಮತ್ತು ಗ್ಯಾಂಗ್ಗೆ ಇಂದು ಬಿಗ್ ಡೇ ಆಗಿದೆ. ಎಲ್ಲ 17 ಆರೋಪಿಗಳು ಒಪ್ಪಿಗಳು ಕೋರ್ಟಿಗೆ ಹಾಜರಾಗಬೇಕು. ಜಡ್ಜ್ ಆರೋಪಗಳನ್ನು ಎಲ್ಲರಿಗೂ ಓದಿ ಹೇಳಲಿದ್ದಾರೆ. ಆರೋಪ ನಿರಾಕರಿಸಿದರೆ ಸಾಕ್ಷಿ ವಿಚಾರಣೆ ಆರಂಭವಾಗಲಿದೆ. ಆರೋಪಗಳನ್ನು ಒಪ್ಪಿಕೊಂಡರೆ ಶಿಕ್ಷ ವಿಧಿಸಬಹುದು ಆರೋಪ ಸುಳ್ಳು ಎಂದು ನಿರಾಕರಿಸುವ ಸಾಧ್ಯತೆ ಹೆಚ್ಚಾಗಿದೆ ಸಾಕ್ಷಿಗಳ ಪಟ್ಟಿ ಆಧರಿಸಿ ಕೋರ್ಟ್ ವಿಚಾರಣೆ ದಿನಾಂಕ ನಿಗದಿ ಮಾಡಲಿದೆ. ಆರೋಪ ನಿಗದಿಯ ಬಳಿಕ ಸಾಕ್ಷಿಯ ವಿಚಾರಣೆ ನಡೆಯಲಿದೆ.













