Subscribe to Updates
Get the latest creative news from FooBar about art, design and business.
Author: kannadanewsnow05
ಗುಜರಾತ್ : ಇಂದು ಸಂಜೆ ಗುಜರಾತ್ನ ರಾಜ್ಕೋಟ್ನಲ್ಲಿ ಗೇಮಿಂಗ್ ಝೋನ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 22 ಜನರು ಸಜೀವ ದಹನಗೊಂಡಿರುವ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಹಲವು ಅಗ್ನಿಶಾಮಕ ಟೆಂಡರ್ ಧಾವಿಸಿದ್ದು, ಬೆಂಕಿ ನಂದಿಸುವ ಪ್ರಯತ್ನ ಮುಂದುವರಿದಿದೆ. ಬೆಂಕಿ ಅವಘಡಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಬೆಂಕಿ ನಂದಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ. ನಾಪತ್ತೆಯಾದವರ ಬಗ್ಗೆ ನಮಗೆ ಯಾವುದೇ ಸಂದೇಶ ಬಂದಿಲ್ಲ. ತಾತ್ಕಾಲಿಕ ಕಟ್ಟಡ ಕುಸಿದಿರುವುದರಿಂದ ಮತ್ತು ಗಾಳಿಯ ವೇಗದಿಂದಾಗಿ ನಾವು ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಂದರೆ ಎದುರಿಸುತ್ತಿದ್ದೇವೆ ಎಂದು ಅಗ್ನಿಶಾಮಕ ಅಧಿಕಾರಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.
ಬಾಗಲಕೋಟೆ : ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸರ್ಕಾರಿ ಐಬಿ ಯಲ್ಲಿದಾರರ ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದ ಇಂಜಿನಿಯರ್ಸ್ ಗಳನ್ನು ಇದೀಗ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೌದು ಮೇ 22ರಂದು ಜಮಖಂಡಿಯ ಸರ್ಕಾರಿ ಐಬಿಯಲ್ಲಿ ಮಧ್ಯದ ಪಾರ್ಟಿ ಮಾಡಿದ್ದರು.ಬಾಗಲಕೋಟೆ ಜಿಲ್ಲಾ ಪಂಚಾಯತ್ ವಿಭಾಗದ ಜಮಖಂಡಿ ವಿಭಾಗದ ಎಇಇ ಎಂ ಎಸ್ ನಾಯಕ್, ಇಂಜಿನಿಯರ್ ಗಳಾದ ರಾಮಪ್ಪ ರಾಥೋಡ್, ಗಜಾನನ ಪಾಟೀಲ್ ಹಾಗೂ ಜಗದೀಶ್ ನಾಡಗೌಡ್ ಐಬಿ ಕೀ ಕೊಡುವಂತೆ ಸಿಬ್ಬಂದಿಗೆ ಸೂಚಿಸಿದ್ದಕ್ಕೆ ಪಿಡಬ್ಲ್ಯೂಡಿ ಎಇ ಜಂಬಗಿ ಕೂಡ ಸಸ್ಪೆಂಡ್ ಅಮಾನತುಗೊಳಿಸಿ ಡಿಸಿ ಕೆಎಂ ಜಾನಕಿ ಆದೇಶ ಹೊರಡಿಸಿದ್ದಾರೆ. ಮೇ 22 ರಂದು ಜಮಖಂಡಿ ಸರಕಾರಿ ಐಬಿಯಲ್ಲಿ ಮದ್ಯದ ಪಾರ್ಟಿ ಮಾಡಿದ್ದರು.ಗುತ್ತಿಗೆದಾರರ ಜೊತೆ ಸೇರಿ ಇಂಜಿನಿಯರ್ ಗಳು ಮಧ್ಯ ಸೇವನೆ ಮಾಡಿದ್ದರು. ಕರ್ತವ್ಯಕ್ಕೆ ಚಕ್ಕರ್ ಹಾಕಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಧ್ಯಪಾನ ಮಾಡಿದ್ದರು. ಮರುದಿನ ಘಟನೆ ಕುರಿತಂತೆ ಉತ್ತರ ನೀಡಿ ಎಂದು ಶೋಕಾಸ್ ನೋಟಿಸ್ ನೀಡಲಾಗಿತ್ತು. ಸಮರ್ಪಕ…
ರಾಮನಗರ : ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿರುವ ಅಡಿಗೆ ಶಿವಕುಮಾರ್ ಅವರು ನೂರಕ್ಕೆ ನೂರರಷ್ಟು ಮುಖ್ಯಮಂತ್ರಿಯಾಗಿ ಆಗುತ್ತಾರೆ ಎಂದು ರಾಮನಗರದಲ್ಲಿ ಕಾಂಗ್ರೆಸ್ ಎಂಎಲ್ಸಿ ಪುಟ್ಟಣ್ಣ ಭವಿಷ್ಯ ನುಡಿದಿದ್ದಾರೆ. ರಾಮನಗರದಲ್ಲಿ ಎಂಎಲ್ಸಿ ಪುಟ್ಟಣ್ಣ ಹೇಳಿಕೆ ನೀಡಿದ್ದು, ಯಾರನ್ನೋ ಮಾಡಿದ್ದೇವೆ ಅಂತೇ, ನಮ್ಮ ಮನೆ ಮಗ, ನಮ್ಮೂರವರು ಮುಖ್ಯಮಂತ್ರಿ ಆಗಲಿ ಬಿಡಿ. ಹಿತ್ತಲ ಬಾಗಿಲಲ್ಲಿ ಕೆಲವರು ಸಿಎಂ ಆಗಿದ್ದಾರೆ.ಎಚ್ ಡಿ ದೇವೇಗೌಡರದ್ದು ಹಾಗೂ ಸಿದ್ದರಾಮಯ್ಯ ಅವರದೆಲ್ಲಾ ಹೋರಾಟ. ಅವರನ್ನು ಬೇರೆಯವರಿಗೆ ಏಕೆ ಹೋಲಿಸುತ್ತೀರೆಂದು ಎಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ. ಗ್ಯಾರೆಂಟಿ ಯೋಜನೆಯ ಅಂಡರ್ ಕರೆಂಟ್ ಇದು.ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 23 ರಿಂದ 25 ಸ್ಥಾನ ಗೆಲ್ಲುತ್ತೇವೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದರು ಅಲ್ಲದೆ ಫಲಿತಾಂಶದ ಬಳಿಕ ಬಿಜೆಪಿ ಜೆಡಿಎಸ್ ಮೈತ್ರಿ ಮುಂದುವರಿಯುವ ವಿಚಾರವಾಗಿ ಮಾತನಾಡಿದ ಅವರು, ಅದು ಗೊತ್ತಿಲ್ಲ ಯಾರನ್ನು ಇಟ್ಕೋತಾರೋ ಕಟ್ಕೋತಾರೋ ಗೊತ್ತಿಲ್ಲ. ಇನ್ನು 9 ವರ್ಷ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಮುಂದುವರೆಯಲಿದೆ ಎಂದು ರಾಮನಗರದಲ್ಲಿ ಕಾಂಗ್ರೆಸ್ ಪಕ್ಷದ…
ಕಲಬುರಗಿ : ಹಲ್ಲಿ ಬಿದ್ದ ಆಹಾರ ಸೇವಿಸಿ ಓರ್ವ ಅಸ್ವಸ್ಥನಾಗಿದ್ದು, ಹಲವರಿಗೆ ವಾಂತಿ ಭೇದಿ ಆಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದ ವಾಸವಾದತ್ತ ಸಿಮೆಂಟ್ ಫ್ಯಾಕ್ಟರಿಯಲ್ಲಿ ಈ ಘಟನೆ ಸಂಭವಿಸಿದೆ.ಅಸ್ವಸ್ಥಗೊಂಡ ಕಾರ್ಮಿಕನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದ ವಾಸವಾದತ್ತ ಸಿಮೆಂಟ್ ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಫ್ಯಾಕ್ಟ್ರಿಯಲ್ಲಿನ ಕಾರ್ಮಿಕರ ಕ್ಯಾಂಟೀನ್ ಆಹಾರದಲ್ಲಿ ಹಲ್ಲಿ ಪತ್ತೆಯಾಗಿದೆ. ವಾಂತಿ, ಭೇದಿ ಆಗಿರುವ ಹಲವರಿಗೆ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕೆತ್ಸೆ ನೀಡಲಾಗುತ್ತಿದೆ.
ಬೆಂಗಳೂರು : ತಂಬಾಕು ಉತ್ಪನ್ನಗಳಿಗೆ ಅಪ್ರಾಪ್ತ ಬಾಲಕರು ದಾಸರಾಗುತ್ತಿರುವ ಹಿನೆಲೆಯಲ್ಲಿ ಇದೀಗ ಆರೋಗ್ಯ ಇಲಾಖೆ ತಂಬಾಕು ಉತ್ಪನ್ನ ಮಾರಾಟದ ಆನ್ಲೈನ್ ಆಪ್ ಗಳಿಗೆ ನಿಷೇಧಿಸಿ ಆರೋಗ್ಯ ಇಲಾಖೆಯು ಸೈಬರ್ ಕ್ರೈಂ ಗೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ. ಹೌದು ತಂಬಾಕು ಉತ್ಪನ್ನಗಳಿಗೆ ಅಪ್ರಾಪ್ತ ಬಾಲಕರು ದಾಸರಾಗುತ್ತಿದ್ದಾರೆ. ಹಾಗಾಗಿ ತಂಬಾಕು ಉತ್ಪನ್ನ ಮಾರಾಟದ ಆನ್ಲೈನ್ ಆಪ್ ಗಳಿಗೆ ನಿಷೇಧಿಸಿ ಎಂದು ಆನ್ಲೈನ್ ಹೋಂ ಡೆಲಿವರಿ ಆಪ್ ಗಳ ವಿರುದ್ಧ ಕ್ರಮಕ್ಕೆ ಸೈಬರ್ ಕ್ರೈಂ ಇಲಾಖೆಗೆ ಆರೋಗ್ಯ ಇಲಾಖೆ ಇದೀಗ ಪತ್ರ ಬರೆದಿದೆ ಕಾನೂನು ಕ್ರಮಕ್ಕೆ ಮನವಿ ಮಾಡಿದೆ. COTPA- 2003 ಕಾಯ್ದೆ ನಿಯಮ ಉಲ್ಲಂಘನೆ ಆರೋಪ ಮಾಡಿದ್ದು, ಬ್ಲಿಂಕ್ ಇಟ್, ಝೋಮ್ಯಾಟೋ, ಸ್ವಿಗ್ಗಿ, ಜೆಪ್ಟೊ, ಬಿಗ್ ಬಾಸ್ಕೆಟ್ ಹಲವು ಹೋಂ ಡೆಲಿವರಿ ಆಫ್ ಗಳಿಂದ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. ಹಾಗಾಗಿ ಆನ್ಲೈನ್ ಆಪ್ ಗಳ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕಾನೂನು ಕ್ರಮಕ್ಕೆ ಕೋರಿ ಆರೋಗ್ಯ ಇಲಾಖೆಯ ಆಯುಕ್ತ…
ತುಮಕೂರು : ಈಗಾಗಲೇ ದೇಶದಲ್ಲಿ ಅಂತಿಮ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಜೂನ್ ನಾಲ್ಕರಂದು ಫಲಿತಾಂಶ ಹೊರಬೀಳಲಿದೆ ಈ ಕುರಿತಂತೆ ಮಾತನಾಡಿದ ಬಿಜೆಪಿಯ ಮಾಜಿ ಸಚಿವ ಸಿಟಿ ರವಿ ಜೂ ನಾಲ್ಕರಂದು ಫಲಿತಾಂಶ ಬಂದ ಬಳಿಕ ಇಡೀ ಸರ್ಕಾರವನ್ನೇ ಬದಲಾಯಿಸಿ ಬಿಡೋಣ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ನಾಲ್ಕರಂದು ಲೋಕಸಭಾ ಚುನಾವಣೆಯ ಫಲಿತಾಂಶ ಬರುತ್ತದೆ ದಾವಣಗೆರೆಯಲ್ಲಿ ಯಾರೋ ಒಬ್ಬರು ಬಂದು ಮನವಿ ಸಲ್ಲಿಸಿದರು. ಸಂಬಳ ಹೆಚ್ಚಿಸಲು ಅಥವಾ ಅನುದಾನಕ್ಕೋ ಮನವಿ ಅಂತ ಅಂದುಕೊಂಡಿದ್ವಿ, ಆದರೆ ಅವರು ಏನಾದರೂ ಮಾಡಿ ಶಿಕ್ಷಣ ಸಚಿವರನ್ನು ಬದಲಿಸಿ ಎಂದು ಮನವಿ ಸಲ್ಲಿಸಿದರು. ರೀಟೈಲ್ ಆಗಿ ಒಬ್ಬೊಬ್ಬ ಸಚಿವರನ್ನು ಬದಲಾಯಿಸುವ ಬದಲು ಹೋಲ್ ಸೇಲ್ ಆಗಿ ಎಲ್ಲರನ್ನೂ ಬದಲಾಯಿಸಿ ಬಿಡೋಣ. ಶಿಕ್ಷಣ ಸಚಿವರನ್ನು ಬದಲಿಸಲ್ಲ ಎನ್ಟೈರ್ ಸರ್ಕಾರನೇ ಬದಲಿಸೋಣ ಹೇಗೂ ಜೂನ್ 4 ರಂದು ಲೋಕಸಭಾ ಚುನಾವಣೆ ಫಲಿತಾಂಶ ಬರುತ್ತದೆ. ರಿಸಲ್ಟ್ ಬಳಿಕ ಇಡೀ ಸರ್ಕಾರವನ್ನೇ ಬದಲಾಯಿಸಿ ಬಿಡೋಣ…
ಮಾಂಡ್ಯ : ಮಾವಿನ ಕಾಯಿ ಕೀಳುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ 16 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಹೌದು ಮಾವಿನ ಕಾಯಿ ಕೀಳಲು ಮರದ ಮೇಲೆ ಏರಿದ ಸಂಜಯ್ (16) ಮಾವಿನ ಮರದ ಮೇಲೆ ಮೃತಪಟ್ಟಿದ್ದಾನೆ. ಘಟನೆಯು ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಹಲಗೂರು ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ : ಪ್ರೀತಿ ನಿರಾಕರಿಸಿದ್ದಕ್ಕೆ ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ್ ಯುವತಿಯ ಭೀಕರ ಕೊಲೆಯಾಗಿತ್ತು. ಇದೀಗ ಬೆಳಗಾವಿಯಲ್ಲಿ ಪಾಗಲ್ ಪ್ರೇಮಿಯೊಬ್ಬ ಹುಚ್ಚಾಟ ನಡೆಸಿದ್ದು, ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆ ಕಲ್ಲು ತೂರಾಟ ನಡೆಸಿ ದಾಳಿ ಮಾಡಿದ್ದಾನೆ.ಅಲ್ಲದೆ ಯುವತಿಯ ಜೊತೆ ಮದುವೆ ಮಾಡದಿದ್ದರೆ ನೇಹಾ, ಅಂಜಲಿ ರೀತಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. ಹೌದು ಬೆಳಗಾವಿ ತಾಲೂಕಿನ ಕಿಣೈ ಗ್ರಾಮದ ತಿಪ್ಪಣ್ಣ ಡೋಕರೆ (27) ಎಂಬ ಪಾಗಲ್ ಪ್ರೇಮಿಯ ಕಾಟದಿಂದ ಯುವತಿ ಕುಟುಂಬ ಕಂಗಾಲಾಗಿದೆ. ಯುವತಿ ಅದೇ ಗ್ರಾಮದ ಕಿಣೈಯಲ್ಲಿರುವ ಮನೆಯಲ್ಲಿ ತಾಯಿ ಜೊತೆಗೆ ವಾಸವಿದ್ದಾಳೆ. ಬಿಕಾಂ ಓದುತ್ತಿರುವ ಈಕೆ ನಿತ್ಯ ಕಾಲೇಜಿಗೆ ಹೋಗುವಾಗಲೇ ಫಾಲೋ ಮಾಡಿ ತಿಪ್ಪಣ್ಣ ರೇಗಿಸುತ್ತಿದ್ದನು. ತಿಪ್ಪಣ್ಣ ಹುಚ್ಚಾಟಕ್ಕೆ ಕಾಲೇಜಿಗೆ ಹೋಗುವುದನ್ನೇ ಯುವತಿ ನಿಲ್ಲಿಸಿದ್ದಳಂತೆ. ಕಿಣೈಯಲ್ಲಿರುವ ಮನೆಯಲ್ಲಿ ತಾಯಿ ಜತೆಗೆ ಯುವತಿ ವಾಸವಿದ್ದಳು. ಯುವತಿಯನ್ನು ಮದುವೆ ಮಾಡಿಕೊಡುವಂತೆ ಧಮ್ಕಿಯನ್ನು ಹಾಕಿದ್ದನಂತೆ. ಕೆಲಸ ಇಲ್ಲದೆ ಊರಲ್ಲಿ ಸೋಮಾರಿಯಾಗಿರುವ ತಿಪ್ಪಣ್ಣ ಡೋಕರೆ, ಒಂದೇ…
ದಾವಣಗೆರೆ : ಒಂದು ತಿಂಗಳು ಮಾಮೂಲಿ ಕೊಡದಿದ್ದಕ್ಕೆ ನನ್ನ ಪತಿಯನ್ನು ಪೊಲೀಸರು ಹೊಡೆದು ಸಾಯಿಸಿದ್ದಾರೆ ಎಂದು ಮೃತ ಆದಿಲ್ ಪತ್ನಿ ಹೀನಾಬಾನು ಚನ್ನಗಿರಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಟ್ಕಾ ಆಡುತ್ತಿದ್ದ ಎಂದು ಆರೋಪಿಸಿ ಚೆನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ನಿನ್ನೆ ಆದಿಲ್ಲನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಠಾಣೆಯಲ್ಲಿ ಕುಸಿದುಬಿದ್ದು ಮತಪಟ್ಟಿದ್ದ ಈ ಒಂದು ಘಟನೆಗೆ ಸಂಬಂಧಿಸಿದಂತೆ ನನ್ನ ಗಂಡನನ್ನು ಪೊಲೀಸರೇ ಸಾಯಿಸಿದ್ದಾರೆ ಎಂದು ಮೃತ ಆದಿಲ್ ಪತ್ನಿ ಹೀನಾಬಾನು ಚನ್ನಗಿರಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂಬ ಅನುಮಾನ ಇದೆ. ಆದ ಕಾರಣ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿಕೊಡಿ. ಬೆಳಗ್ಗೆ ನನಗೆ ಮಾತನಾಡುವ ಧೈರ್ಯ ಇರಲಿಲ್ಲ. ನನಗೆ ಬಿಪಿ ಇದೆ ಎಂದು ಹೇಳುವ ಬದಲು ನನ್ನ ಮಗನಿಗೆ ಲೋ ಬಿಪಿ ಇದೆ ಎಂದು ತಪ್ಪು ಹೇಳಿದ್ದೇನೆ. ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ಈ ವಯಸ್ಸಲ್ಲಿ ನನಗೆ ದುಡಿಯೋಕೆ…
ಮಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಶಕ್ತಿ ಯೋಜನೆಯಿಂದ ಧರ್ಮಸ್ಥಳಕ್ಕೆ ಸಾವಿರಾರು ಜನರು ಬಂದಿದ್ದಾರೆ ಎಂದು ಹೇಳಿದರು. ಮಂಜುನಾಥನ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಹಾಗೂ ಸಿಎಂ ಸಿದ್ದರಾಮಯ್ಯನವರು ಮಂಜುನಾಥನ ದರ್ಶನ ಪಡೆದಿದ್ದೇವೆ. ಸಿಎಂ ಒಳ್ಳೆಯ ಮಳೆ ಬೆಳೆಯಾಗಲಿ ಅಂತ ಪ್ರಾರ್ಥನೆ ಮಾಡಿದ್ದಾರೆ. ನಮ್ಮ ಧರ್ಮದ ಸಂಪ್ರದಾಯದಂತೆ ಬಂದು ದರ್ಶನ ಮಾಡಿದ್ದೇವೆ. ಜನತೆಯ ಪರವಾಗಿ ಹಾಗೂ ವೈಯಕ್ತಿಕ ಪ್ರಾರ್ಥನೆ ಮಾಡಿದ್ದೇವೆ ಎಂದು ತಿಳಿಸಿದರು. ಶಕ್ತಿ ಯೋಜನೆಯಿಂದ ಧರ್ಮಸ್ಥಳಕ್ಕೆ ಸಾವಿರಾರು ಜನ ಬಂದಿದ್ದಾರೆ. ಈಗಲೂ ಸಿಎಂ ಸಿದ್ದರಾಮಯ್ಯ ನನ್ನ ಬಳಿ ಸಂತೋಷ ವ್ಯಕ್ತಪಡಿಸಿದರು. ದೇಗುಲದ ಒಳಗೆ ಮಹಿಳೆಯರು 2000 ಸಿಗುತ್ತಿದೆ ಅಂತ ಹೇಳಿದರು. ಅವರೆಲ್ಲರ ಆಶೀರ್ವಾದ ನಮಗೆ ಶಕ್ತಿ ತುಂಬಿದೆ. ಎಂದು ಧರ್ಮಸ್ಥಳದಲ್ಲಿ ಉಪಮುಖ್ಯಮಂತ್ರಿ ಡಿಕೆ…













