Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಡೆತ್ ನೋಟ್ ಬರೆದಿಟ್ಟು ನಿಗಮದ ಅಧಿಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಈ ಒಂದು ಹಣ ವರ್ಗಾವಣೆ ಆಗಿದ್ದಾದರೂ ಎಲ್ಲಿ ಎಂಬುದರ ಕುರಿತು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸಾಫ್ಟ್ವೇರ್ ಕಂಪನಿಯೊಂದರ ಬ್ಯಾಂಕ್ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಸ್ಫೋಟಕವಾದ ಅಂತಹ ಮಾಹಿತಿ ಬಹಿರಂಗವಾಗಿದೆ. ಹೌದು 87 ಕೋಟಿ ರೂ.ಗಳನ್ನು ಐಟಿ ಕಂಪನಿಯೊಂದರ 14 ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ನಿಗಮದ ಖಾತೆಯಲ್ಲಿರುವ ಇನ್ನೂ 100 ಕೋಟಿ ರೂ. ವರ್ಗಾಯಿಸುವ ಪ್ರಯತ್ನಗಳೂ ನಡೆದಿದ್ದವು. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಮಧ್ಯೆ ಅಸಮಾಧಾನ ಉಂಟಾಗಿತ್ತು.ಇದರಿಂದಾಗಿ 100 ಕೋಟಿ ರೂ. ವರ್ಗಾವಣೆ ಯತ್ನಕ್ಕೆ ಹಿನ್ನಡೆಯಾಗಿತ್ತು ಎನ್ನಲಾಗಿದೆ. ಅವ್ಯವಹಾರ…
ಶಿವಮೊಗ್ಗ : ವಾಲ್ಮೀಕಿ ನಿಗಮ ಮಂಡಳಿ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಸಿಐಡಿ ಅಧಿಕಾರಿಗಳ ತಂಡ ಶಿವಮೊಗ್ಗಕ್ಕೆ ಆಗಮಿಸಿದ್ದು, ವಿನೋಬನಗರದಲ್ಲಿರುವ ಅವರ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗದ ಡಿವೈಎಸ್ಪಿ ಮೊಹಮ್ಮದ್ ರಫಿ ನೇತೃತ್ವದ ಆರು ಮಂದಿ ತಂಡ ಭೇಟಿ ನೀಡಿ, ಮೃತ ಅಧಿಕಾರಿ ಚಂದ್ರಶೇಖರನ್ ಪತ್ನಿ ಕವಿತಾರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಚಂದ್ರಶೇಖರ ನಿವಾಸದಲ್ಲಿ ಬೆಳಿಗ್ಗೆಯಿಂದ CID ಅಧಿಕಾರಿಗಳು, ಪರಿಶೀಲನೆ ನಡೆಸಿದ್ದಾರೆ. ಇದೀಗ ಚಂದ್ರಶೇಖರ ನಿವಾಸದಿಂದ ತೆರಳಿದ್ದಾರೆ. ಸಿಐಡಿ ಅಧಿಕಾರಿಗಳು ಬೆಳಗ್ಗೆ 10:30ಕ್ಕೆ ಸಿಐಡಿ ತಂಡ ಚಂದ್ರಶೇಖರ ನಿವಾಸಕ್ಕೆ ಆಗಮಿಸಿತ್ತು. ಸುಮಾರು ಎರಡುವರೆ ಗಂಟೆ ಸಿಐಡಿ ಅಧಿಕಾರಿಗಳು ಪತ್ನಿ ಕವಿತಾ ಅವರನ್ನ ವಿಚಾರಣೆ ನಡೆಸಿದರು. ಈ ವೇಳೆ ಚಂದ್ರಶೇಖರ್ ಗೆ ಸೇರಿದ ಲ್ಯಾಪ್ಟಾಪ್ ಪ್ರಿಂಟರ್ ಕೊಂಡವಿದೆ ಸಿಐಡಿ ವಿಚಾರಣೆ ನಡೆಸಿ ಚಂದ್ರಶೇಖರ್ ಮನೆಯಿಂದ ಸಿಐಡಿ ತಂಡ ತೆರಳಿದೆ. ಸಾಕ್ಷಾಧಾರ ಪರಿಶೀಲನೆ ವೇಳೆ ದೊರಕಿದ ಚಂದ್ರಶೇಖರನ್ ಬ್ಯಾಗ್, ಬ್ಯಾಗ್ನಲ್ಲಿದ್ದ ಪೆನ್ ಡ್ರೈವ್…
ಬಳ್ಳಾರಿ : ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಎಂಎಲ್ಸಿ ರವಿಕುಮಾರ್ ಮಾತನಾಡಿ, ಈ ಒಂದು ಆತ್ಮಹತ್ಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆಗಾರರಾಗಿದ್ದು ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು. ವಾಲ್ಮೀಕಿ ನಿಗಮದ ಅಭಿವೃದ್ಧಿ ಅಧೀಕ್ಷಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಎಂಎಲ್ಸಿ ಎನ್ ರವಿ ಕುಮಾರ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಾಯಿತು.ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಿಜೆಪಿ ಮುಖಂಡರ ಧರಣಿ ನಡೆಯುತ್ತಿದೆ. ಸಚಿವ ಬಿ.ನಾಗೇಂದ್ರ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ.ಆ ಅಧಿಕಾರಿ ಸಾವಿಗೆ ನೇರ ಕಾರಣ ಸಚಿವ ಬಿ ನಾಗೇಂದ್ರ.ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡು ಮೂರು ದಿನ ಕಳೆಯಿತು ಆದರೆ ಸಿಎಂ, ಡಿಸಿಎಂ ದೆಹಲಿಯಲ್ಲಿ ಮಜಾ ಮಾಡುತ್ತಿದ್ದಾರೆ. ಕೂಡಲೇ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಇಲ್ಲದಿದ್ದರೆ ರಾಜ್ಯದಲ್ಲಿ ಉಗ್ರ ಹೋರಾಟ ಮಾಡುತ್ತೇವೆ.ನೈತಿಕ ಶಿವರಾಜ ನಾನು ಕೊಡಬೇಕು ಬಳ್ಳಾರಿ ಎಂ ಎಲ್ ಸಿ ಎಂ…
ಉಡುಪಿ : ರಾಜ್ಯದಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಮುಂದಾಗಿದ್ದ ವಿದ್ಯಾರ್ಥಿನಿಗೆ ಅಂದಿನ ಸ್ಥಳೀಯ ಶಾಸಕ ರಘುಪತಿ ಭಟ್ ಅವರು ವಿರೋಧಿಸಿ ಅವಕಾಶ ಕೊಡದೇ ಪರೀಕ್ಷೆ ಬರೆಯುವುದರಿಂದ ಉಚ್ಛಾಟನೆ ಮಾಡಿದ್ದರು. ಇದಕ್ಕೆ ಎರಡು ವರ್ಷಗಳ ಬಳಿಕ ವಿದ್ಯಾರ್ಥಿನಿ ಅಲಿಯಾ ಅಸಾದಿ ‘ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ ಇತ್ತು. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿನಿ, ಇಂದು ನೀವು ಉಚ್ಚಾಟಿತ ವ್ಯಕ್ತಿ’ ಎಂದು ತಿರುಗೇಟು ಕೊಟ್ಟಿದ್ದಾಳೆ. ಟ್ವೀಟ್ ನಲ್ಲಿ ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿಇಂದು ನಾನು ವಕೀಲೆ ಪದವಿ ವಿದ್ಯಾರ್ಥಿ, ನೀವು ಉಚ್ಚಾಟಿತ ವ್ಯಕ್ತಿ. ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು. ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ, ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು ಎಂದು…
ಕೋಲಾರ : ಬಸ್ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕಂಡಕ್ಟರ್ ಹಾಗೂ ಹೋಂ ಗಾರ್ಡ್ ನಡುವೆ ಗಲಾಟೆ ಏರ್ಪಟ್ಟಿದೆ.ಈ ವೇಳೆ ಹೋಂ ಗಾರ್ಡ್ ಹಾಗೂ ಆತನ ಸಹೋದರ ಇಬ್ಬರು ಸೇರಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅರಗ ಗ್ರಾಮದಲ್ಲಿ ನಡೆದಿದೆ. ಟಿಕೆಟ್ ತೆಗೆದುಕೊಳ್ಳುವಂತೆ ಹೇಳಿದ್ದಕ್ಕೆ ಕಂಡಕ್ಟರ್ ನಾಗರಾಜಪ್ಪನ ಮೇಲೆ ಹಲ್ಲೆ ನಡೆಸಿದ ಹಿನ್ನಲೆ ಹೋಂಗಾರ್ಡ್ ಅನುದೀಪ್ ಹಾಗೂ ಆತನ ಸೋದರ ಪ್ರದೀಪ್ ಅವರನ್ನು ಬಂಧಿಸಿ, ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇನ್ನು ಈ ಹಲ್ಲೆಯ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿ : ವಿಧಾನ ಪರಿಷತ್ ಟಿಕೆಟ್ ನೀಡಿಲ್ಲವೆಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿರುವ ರಘುಪತಿ ಭಟ್ ಜೊತೆ ಗುರುತಿಸಿಕೊಂಡಿದ್ದ ನಾಲ್ವರು ನಾಯಕರಿಗೆ ಇದೀಗ ಬಿಜೆಪಿ ನೋಟಿಸ್ ನೀಡಿದೆ. ಬಿಜೆಪಿಯ ನಾಲ್ವರು ಪದಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡಿದ್ದು, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹೇಶ ಠಾಕೂರ್, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷ ರೋಶನ್ ಶೆಟ್ಟಿ ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜುಲೈಗೆ ನೋಟಿಸ್ ನೀಡಿದೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಅಕ್ಷಮ್ಯ ಅಪರಾಧ.ಪಕ್ಷದ ಉಲ್ಲಂಘಿಸಿದ್ದಕ್ಕೆ 48 ಗಂಟೆಗಳ ಒಳಗೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ಮುಂದೆ ಸ್ಪಷ್ಟೀಕರಣ ನೀಡುವಂತೆ ನೋಟಿಸ್ ಜಾರಿ ಮಾಡಿದೆ. ರಘುಪತಿ ಭಟ್ ಜೊತೆ ಗುರುತಿಸಿಕೊಂಡ ಬಿಜೆಪಿ ನಾಯಕರಿಗೆ ನೋಟಿಸ್ ನೀಡಲಾಗಿದೆ. ರಘುಪತಿ ಭಟ್ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ.
ಬೆಂಗಳೂರು : ವೀರ ಸಾವರ್ಕರ್ಮೇಲ್ಸೇತುವೆ ನಾಮಫಲಕಕ್ಕೆ ಎನ್ಎಸ್ಯುಐ ಕಾರ್ಯಕರ್ತರು ಮಸಿ ಬಳಿದಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಮಾಗಡಿ ರೋಡಿನ ಯುವಕ ಸೇರಿದಂತೆ ಮೂವರನ್ನು ಯಲಹಂಕ ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹೌದು ವೀರ ಸಾವರ್ಕರ ಜನ್ಮದಿನದ ಮಸಿ ಬಳಿದಿದ್ದ ಮೂವರನ್ನು ಇದೀಗ ಬಂಧಿಸಲಾಗಿದೆ. ಯಲಹಂಕದ ಡೈರಿ ಸರ್ಕಲ್ ಬಳಿ ಇರುವ ಸಾವರ್ಕರ್ ಮೇಲ್ ಸೇತುವೆ ವೀರ ಸಾವರ್ಕರ ಜನ್ಮ ದಿನದಂದೇ ಮಸಿ ಬೆಳೆದಿದ್ದ ಮೂವರನ್ನು ಬಂಧಿಸಿದ್ದಾರೆ. ಸಾವರ್ಕರ್ ಗೆ ಸಿಗುತ್ತಿರುವ ಗೌರವ ಭಗತ್ ಸಿಂಗ್ ಗೆ ಸಿಗುತ್ತಿಲ್ಲ. ಸಾವರ್ಕರ್ ಸೇತುವೆ ಬದಲು ಭಗತ್ ಸಿಂಗ್ ಹೆಸರುಡುವಂತೆ ಆಗ್ರಹಿಸಿದ್ದಾರೆ. ಮಧ್ಯಾಹ್ನ 1.50ಕ್ಕೆ ಪುಂಡರು ಸಾವರ್ಕರ್ ಸೇತುವೆಗೆ ಮಸಿ ಬಳೆದಿದ್ದರು. ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ಎನ್ಎಸ್ಯುಐ ಕಾರ್ಯಕರ್ತರು ಸಂಚಾರ ತಡೆ ನಡೆಸಿದ್ದರು. ಈ ವೇಳೆ ವೀರಸಾವರ್ಕರ್ ನಾಮಫಲಕಕ್ಕೆ ಮಸಿ ಬಳಿದಿದ್ದಾರೆ. ಬಳಿಕ ಸೇತುವೆಗೆ ಭಗತ್ ಸಿಂಗ್ ಮೇಲ್ಸೇತುವೆ ಹೆಸರಿನ ಬ್ಯಾನರ್ ಹಾಕಿದ್ದಾರೆ. ನಾಮಫಲಕಕ್ಕೆ ಮಸಿ ಬಳಿದಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಕಾರ್ಯಕರ್ತರು…
ಬೆಳಗಾವಿ : ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸರಕಾರಿ ಐಬಿಯಲ್ಲಿ ಗುತ್ತಿಗೆದಾರರ ಜೊತೆ ಸೇರಿ ಇಂಜಿನಿಯರ್ಗಳು ಎಣ್ಣೆ ಪಾರ್ಟಿ ಮಾಡಿದರು. ಇದೀಗ ಬೆಳಗಾವಿ ಜಿಲ್ಲೆಯಲ್ಲಿ ಕೂಡ ಅಂತಹ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳು ರಾತ್ರಿಯಿಡಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಠಾಣೆಯಲ್ಲಿ ನಡೆದಿರುವ ಎಣ್ಣೆ ಪಾರ್ಟಿಯ ಫೋಟೋಗಳು ಇದೀಗ ವೈರಲ್ ಆಗಿವೆ. ಟೇಬಲ್ ಮೇಲೆ ಮಧ್ಯದ ಖಾಲಿ ಬಾಟಲಿ ಇರುವ ಫೋಟೋ ಆಗಿದೆ ಠಾಣೆಯಲ್ಲಿ ಮಧ್ಯದ ಬಾಟಲಿ ಫೋಟೋಗೆ ಇದೀಗ ಸಾರ್ವಜನಿಕರು ಇದೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ : ವಾಲ್ಮೀಕಿ ನಿಗಮದ ಅಧಿಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ಚಂದ್ರಶೇಖರ್ ಪತ್ನಿ ಕವಿತಾ ಅವರು ಪ್ರತಿಕ್ರಿಯೆ ನೀಡಿದ್ದು, ನನ್ನ ಪತಿ ನಿಯತ್ತಿನ ನಾಯಿ ರೀತಿ ಸರ್ಕಾರದ ಕೆಲಸ ಮಾಡಿದ್ದಾರೆ.ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದರೆ ಎಷ್ಟು ಒತ್ತಡ ಇತ್ತು ಊಹೆ ಮಾಡಿ ಎಂದು ಅವರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತಡ ಹಾಕಿ ನನ್ನ ಪತಿ ಜೀವ ತೆಗೆದಿದ್ದಾರೆ. ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಗಮನಕ್ಕೆ ಬರದೇ ಏನೋ ನಡೆದಿಲ್ಲ. ನಿರ್ದೇಶಕರ ಸಹಿ ನಕಲು ಆಗಲು ಸಾಧ್ಯವಿಲ್ಲ. ನನಗೆ ಸರ್ಕಾರದ ಮೇಲೆ ವಿಶ್ವಾಸವಿದೆ ಪತಿ ಸಾವಿಗೆ ನ್ಯಾಯ ಸಿಗಬೇಕು ಎಂದು ಶಿವಮೊಗ್ಗದಲ್ಲಿ ಮೃತ ಚಂದ್ರಶೇಖರ್ ಪತ್ನಿ ಕವಿತಾ ಹೇಳಿಕೆ ನೀಡಿದ್ದಾರೆ. ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ ಲೂಟಿಯನ್ನು ಮಾಡಿಲ್ಲ. ಡೆತ್ ನೋಟ್ ನಲ್ಲಿ ಅವರು ಎಲ್ಲವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ನನ್ನದು ಯಾವುದೇ ರೀತಿಯ ತಪ್ಪಿಲ್ಲ ಎಂದು ಉಲ್ಲೇಖ ಮಾಡಿದ್ದಾರೆ. ನನ್ನ ಪತಿ ನಿಯತ್ತಿನ ನಾಯಿ ರೀತಿ ಸರ್ಕಾರದ ಕೆಲಸ…
ಬೆಂಗಳೂರು : ಬೆಂಗಳೂರಿನಲ್ಲಿ ಕಾರು ಡಿಕ್ಕಿಯಾಗಿ ಪಾದಚಾರಿ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ HAL ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರತಹಳ್ಳಿಯ ಸಮೀಪ ಬೋರ್ವೆಲ್ ಜಂಕ್ಷನ್ ಬಳಿ ನಡೆದಿದೆ.ಮೃತ ಮಹಿಳೆಯನ್ನ ರತ್ನಮ್ಮ (47) ಎಂದು ಗುರುತಿಸಲಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ರತ್ನಮ್ಮ ಚಿಕಿತ್ಸೆ ಫಲಿಸದೇ ಮಣಿಪಾಲ್ ಆಸ್ಪತ್ರೆಯಲ್ಲಿ ರತ್ನಮ್ಮ ಸಾವನ್ನಪ್ಪಿದ್ದಾರೆ. ತಕ್ಷಣ HAL ಸಂಚಾರಿ ಠಾಣೆಯ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.













