Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಕಿರ್ಲೋಸ್ಕರ್ ಫೆರೋಸ್ ಇಂಡಸ್ಟ್ರೀಸ್ ಕರ್ನಾಟಕದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ಕೋಟಿ ರೂ. ಬಂಡವಾಳ ಹೂಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದರು. ಈ ಕುರಿತು ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಎಂ.ಬಿ ಪಾಟೀಲ್, ಹೂಡಿಕೆ ಆಕರ್ಷಣೆ, ಉದ್ಯಮ ವಿಸ್ತರಣೆಯ ಗುರಿ ಇರಿಸಿಕೊಂಡು ಕೈಗಾರಿಕಾ ಇಲಾಖೆಯ ಉನ್ನತಮಟ್ಟದ ನಿಯೋಗದೊಂದಿಗೆ ಈ ದಿನ ಪುಣೆಯಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರಿಸ್ ಪ್ರಮುಖರೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಸಂಸ್ಥೆಯು ಮುಂದಿನ 3 ವರ್ಷಗಳಲ್ಲಿ ಉಕ್ಕು ತಯಾರಿಕೆಯನ್ನು ವಿಸ್ತರಿಸಲು, ಕಬ್ಬಿಣದ ಅದಿರು ಸಂಸ್ಕರಣೆಯನ್ನು ಹೆಚ್ಚಿಸಲು ಮತ್ತು ಸ್ಪಾಂಜ್ ಪೈಪ್ ಉತ್ಪಾದನೆಗಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸ್ಥಾವರವನ್ನು ಅಭಿವೃದ್ಧಿಪಡಿಸಲು ₹3,000 ಕೋಟಿ ಹೂಡಿಕೆ ಮಾಡಲಿದೆ. ತನ್ನ ಸಂಸ್ಥೆಯಲ್ಲಿ ಶೇ. 99 ರಷ್ಟು ಕನ್ನಡಿಗರಿಗೆ ಮೀಸಲಿಡುವುದಾಗಿ ತಿಳಿಸಿದ್ದು ಸಂತಸ ತರಿಸಿದೆ. ಕಳೆದ ಎರಡು ದಶಕಗಳಿಂದ ಸಂಸ್ಥೆ ತನ್ನ ಲಾಭದ ಶೇ. 2ರಷ್ಟು ಅಂಶವನ್ನು…
ಬೆಂಗಳೂರು : ಈಗಾಗಲೇ ನವೆಂಬರ್ನಲ್ಲಿ ಕ್ರಾಂತಿ ಆಗಲಿದೆ ಎಂದು ವಿಪಕ್ಷ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದು ಇದರ ಮಧ್ಯ ಸಿಎಂ ಸಿದ್ದರಾಮಯ್ಯ ಸಂಪುಟ ಪುಣೆ ರಚನೆಯ ಕುರಿತು ಮತ್ತೊಮ್ಮೆ ಸುಳಿವು ನೀಡಿದ್ದಾರೆ. ಈ ಮೂಲಕ ಸಂಪುಟ ಪುನಾ ರಚನೆ ಆಗುವುದು ಬಹುತೇಕ ಫಿಕ್ಸ್ ಎಂದೇ ಹೇಳಲಾಗುತ್ತಿದೆ. ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಮ್ಮೆ ಸುಳಿವು ನೀಡಿದ್ದಾರೆ. ಕೋಲಾರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಜಿಲ್ಲೆಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಕುರಿತು ಮಾತನಾಡಿ, ಸಂಪುಟ ಪುನಾರಚನೆ ವೇಳೆ ನೋಡೋಣ ಎಂದು ಹೇಳಿದರು. ನಾಲ್ಕು ಮಂದಿ ಶಾಸಕರನ್ನು ಹೊಂದಿರುವ ಜಿಲ್ಲೆಗೆ ಸಚಿವ ಸ್ಥಾನದ ಬೇಡಿಕೆ ಕುರಿತು ಪರಿಶೀಲಿಸಲಾಗುವುದು ಎಂದರು.
ಬೆಂಗಳೂರು : ಬ್ಯಾಂಕ್ ಗಳಿಂದ ಲೆಕ್ಕ ಕೋರಿ ಹೈಕೋರ್ಟಿಗೆ ವಿಜಯಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಇಂದು ಹೈಕೋರ್ಟ್ ನಲ್ಲಿ ವಿಜಯ್ ಮಲ್ಯ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಯಿತು. ಬ್ಯಾಂಕುಗಳ ಪರ ಹಿರಿಯ ವಕೀಲ ವಿಕ್ರಂ ಹುಯ್ಲಗೋಳ ಅವರು ವಾದ ಮಂಡಿಸಿದರು. ವಿಜಯ್ ಮಲ್ಯ ದೇಶ ತೊರೆದು ದೇಶ ಭ್ರಷ್ಟರಾಗಿದ್ದಾರೆ. ವಿಜಯ್ ಮಲ್ಯ ಮುಗ್ಧರಾದರೆ, ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ಅವರು ದೇಶ ಬಿಟ್ಟು ಪರಾರಿ ಆಗಿದ್ದಾರೆ. ತಮಗೆ ಬೇಕಾದಾಗ ಮಾತ್ರ ಕೋರ್ಟ್ ಮುಂದೆ ಬರುತ್ತಾರೆ ಎಂದು ವಾದಿಸಿದರು. ಈ ವೇಳೆ ಆಕ್ಷೇಪಣೆ ಸಲ್ಲಿಸುವಂತೆ ನ್ಯಾಯಮೂರ್ತಿ ಲಲಿತ ಕನ್ನೆಗಂಟಿ ಸೂಚನೆ ನೀಡಿದರು. ಬ್ಯಾಂಕುಗಳ ಪರ ವಕೀಲರಿಗೆ ನ್ಯಾಯಮೂರ್ತಿ ಲಲಿತ ಕನ್ನೆಗಂಟಿ ಸೂಚನೆ ನೀಡಿದರು. ಬಳಿಕ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿ ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶ ಹೊರಡಿಸಿತು. ಈ ವೇಳೆ ಹೈ ಕೋರ್ಟ್ ನೀವು ಕಂಪನಿ ಕೋರ್ಟಿಗೆ ಅರ್ಜಿ ಏಕೆ ಸಲ್ಲಿಸಲಿಲ್ಲ? ಎಂದು…
ಬೀದರ್ : ಸಾಮಾನ್ಯವಾಗಿ ರೈಲು ಹಳಿ ದಾಟುವಾಗ ರೈಲು ಬರುತ್ತಿದ್ದಂತೆ ಗೇಟ್ ಹಾಕುತ್ತಾರೆ. ಆದರೂ ಕೂಡ ಕೆಲವರು ಹುಂಬತನದಿಂದ ರೈಲು ಹಳಿ ದಾಟಲು ಪ್ರಯತ್ನಿಸಿ ಪ್ರಾಣ ಕಳೆದುಕೊಂಡಿರುವ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಬೀದರ್ನಲ್ಲಿ ಇದೇ ರೀತಿ ಒಂದು ಘಟನೆ ನಡೆದಿದ್ದು, ಬೈಕ್ ಸವಾರ ರೈಲು ಹಳಿ ದಾಟಲು ಯತ್ನಿಸಿದ್ದಾನೆ. ಆದರೆ ಬೈಕ್ ಸವಾರ ಅದೃಷ್ಟವಶಾತ್ ಪ್ರಣಾಪಾಯದಿಂದ ಪರ ಆಗಿರುವ ಘಟನೆ ಬೀದರ್ ನೌಬಾದ್ ರೈಲು ಹಳಿ ಬಳಿ ಈ ಒಂದು ಘಟನೆ ಸಂಭವಿಸಿದೆ. ಹೌದು ಬೀದರ್ನಲ್ಲಿ ಬೈಕಿನಲ್ಲಿ ರೈಲ್ವೆ ಹಳಿ ದಾಟವಾಗ ಭಾರಿ ಅನಾಹುತ ಒಂದು ತಪ್ಪಿದೆ. ರೈಲಿನ ಕೆಳಗೆ ಬೈಕ್ ಸವಾರ ಸಿಲುಕಿಕೊಂಡು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾನೆ. ರೈಲು ಬರುತ್ತಿದ್ದಂತೆ ಬೈಕ್ ಬಿಟ್ಟು ಸವಾರ ಜೀವ ಉಳಿಸಿಕೊಂಡಿದ್ದಾನೆ. ರೈಲ್ವೆ ಹಳಿಯ ಮೇಲೆ ಬೈಕ್ ಬಿಟ್ಟು ವ್ಯಕ್ತಿ ಪರಾರಿಯಾಗಿದ್ದಾನೆ. ಬೀದರ್ ನಗರದ ನೌಬಾದ್ ಬಳಿ ಈ ಒಂದು ಘಟನೆ ಸಂಭವಿಸಿದೆ.
ಹಾಸನ : ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ವಿರುದ್ಧ ಶಾಸಕ ಎಚ್ ಡಿ ರೇವಣ್ಣ ಆಕ್ರೋಶ ಹೊರಹಾಕಿದ್ದು ಜಿಲ್ಲಾಧಿಕಾರಿ ಕೆ ಎಸ್ ಲತಾ ಕುಮಾರಿ ಸರ್ವಾಧಿಕಾರಿ ಅಂತೆ ವರ್ತಿಸುತ್ತಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಜಿಲ್ಲೆಯ ಜನ ಜಿಲ್ಲಾಧಿಕಾರಿಯನ್ನು ಸರಿ ಮಾಡುತ್ತಾರೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದರು. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಾಸನಾಂಬೆ ಜಾತ್ರೆಯಲ್ಲಿ ಹಾಸನ ಎಡಿಎಲ್ ಆರ್ ನನ್ನ ಜೊತೆಗೆ ಬಂದಿದ್ದರು. ಸಂಶುದ್ದಿನ್ ನನ್ನ ಜೊತೆ ನಡೆದುಕೊಂಡು ಬಂದರು. ಇದೇ ಕಾರಣಕ್ಕೆ ಸಂಶುದ್ದೀನ್ ರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು ಎಂಎಲ್ಎ ಜೊತೆ ಮಾತನಾಡಬಾರದ? ಪ್ರಮಾಣಿಕ ಅಧಿಕಾರಿ ಸಂಶುದ್ದಿನ್ ಮಾಡಿದ ತಪ್ಪಾದರೂ ಏನು? ಮುಸ್ಲಿಮರು ವೋಟ್ ಹಾಕದಿದ್ದರೆ ಕಾಂಗ್ರೆಸ್ 136 ಸ್ಥಾನ ಗೆಲ್ಲುತ್ತಿರಲಿಲ್ಲ. ಆದರೆ ರಾಜ್ಯದಲ್ಲಿ ಮುಸ್ಲಿಮರಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಹಾಸನದಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ವಾಗ್ದಾಳಿ ನಡೆಸಿದರು
ಬೆಂಗಳೂರು : ಯುಡಿಆರ್ ಕೇಸ್ ಪ್ರತಿ ನೀಡಲು ಲಂಚಕ್ಕೆ ಬೇಡಿಕೆ ಆರೋಪದ ಹಿನ್ನೆಲೆಯಲ್ಲಿ ಬೆಳಂದೂರು ಠಾಣೆಯ ಇನ್ಸ್ಪೆಕ್ಟರ್ ರಮೇಶ್ ರೊಟ್ಟಿಯನ್ನು ಸಸ್ಪೆಂಡ್ ಮಾಡಲಾಗಿದೆ. ಅಮಾನತುಗೊಳಿಸಿ, ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಬಿಪಿಸಿಎಲ್ ನಿವೃತ್ತ ಅಧಿಕಾರಿ ಶಿವಕುಮಾರ್ ಇನ್ಸ್ಪೆಕ್ಟರ್ ರಮೇಶ್ ರೊಟ್ಟಿ ಲಂಚ ಕೇಳಿದ್ದಾರೆ ಎನ್ನುವ ಆರೋಪ ಮಾಡಿದ್ದರು. ವರದಿ ನೀಡುವಂತೆ ಕಮಿಷನರ್ ಸೀಮಂತ ಕುಮಾರ್ ಸೂಚನೆ ನೀಡಿದರು. ಕಮಿಷನರ್ ಗೆ ವೈಟ್ ಫೀಲ್ಡ್ ಡಿಸಿಪಿ ಪರಶುರಾಮ್ ಈ ಕುರಿತು ವರದಿ ಸಲ್ಲಿಸಿದರು. ಡಿಸಿಪಿ ವರದಿ ಆಧಾರದ ಮೇಲೆ ಪಿಐ ಪರಮೇಶ್ ರೊಟ್ಟಿ ಸಸ್ಪೆಂಡ್ ಮಾಡಿ ಸೀಮಂತ ಕುಮಾರ್ ಸಿಂಗ್ ಅದೇಶಿಸಿದ್ದಾರೆ.
ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸುದ್ದು, ಡ್ರಗ್ಸ್ ದಂಧೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. MDMA ಮತ್ತು ಇತರೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್ ಗಳನ್ನು ಅರೆಸ್ಟ್ ಮಾಡಿದ್ದಾರೆ. ಸುಮಾರು 75 ಲಕ್ಷ ಮೌಲ್ಯದ 752 ಗ್ರಾಂ ಕೊಕೇನ್ ಜಪ್ತಿ ಮಾಡಿದ್ದಾರೆ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮಲ್ಲೇಶ್ವರಂ ಪೊಲೀಸ್ರು ಸಹ ಗಾಂಜಾ ಮಾರುತಿದೆ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ ಬಂಧಿತರಿಂದ 80,000 ಮೌಲ್ಯದ 885 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ರೈಲ್ವೆ ಬಳಿ ಮೆಟ್ಟಿಲುಗಳ ಮೇಲೆ ಗಾಂಜಾ ಮಾರಾಟ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. ಮತ್ತೊಂದು ಪ್ರಕರಣದಲ್ಲಿ ವೀಡ್ ಆಯಿಲ್ ಮಾರುತಿದವನು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಬೆಚ್ಚಿ ಬೆಳಿಸುವಂತಹ ಘಟನೆ ನಡೆದಿದ್ದು, ಹಾಡಹಗಲೇ ಚಾಕುವಿನಿಂದ ಕತ್ತು ಕೊಯ್ದು ಪ್ರಾವಿಜನ್ ಸ್ಟೋರ್ ಮಾಲೀಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಿತ್ತಗಾನಹಳ್ಳಿಯಲ್ಲಿ ನಡೆದಿದೆ. ಹೌದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ಈ ಒಂದು ಕೊಲೆ ನಡೆದಿದ್ದು, ಪ್ರಾವಿಜನ್ ಸ್ಟೋರ್ ಇಟ್ಟುಕೊಂಡಿದ ಮಾಲೀಕ ಮಾದೇಶ್ (40) ನನ್ನು ಬೀಕರವಾಗಿ ಕೊಲೆ ಮಾಡಲಾಗಿದೆ. ಗನ್, ಚಾಕು ಸಮೇತ ದುಷ್ಕರ್ಮಿಗಳು ಮನೆಗೆ ನುಗ್ಗಿ ಕೊಲೆ ಮಾಡಿದ್ದಾರೆ. ಬೈಕ್ ನಲ್ಲಿ ಗನ್ ಮತ್ತು ಚಾಕು ಸಮೇತವಾಗಿ ಮನೆಗೆ ಹಂತಕರು ಎಂಟ್ರಿ ಕೊಟ್ಟಿದ್ದಾರೆ. ಚಾಕುವಿನಿಂದ ಇರಿದು ಮಾದೇಶನನ್ನ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಹೆಬ್ಬಗೋಡಿ ಪಡಿಸಲು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಧಾರವಾಡ : ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಕಡ್ಡಾಯಕ್ಕೆ ಇತ್ತೀಚೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್ ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ ಆದೇಶವನ್ನು ಕಾಯ್ದಿರಿಸಿದೆ. ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶ ತೆರವುಗೊಳಿಸುವಂತೆ ರಾಜ್ಯ ಸರ್ಕಾರವು ದ್ವಿದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಮತ್ತು ಗೀತಾ ಕೆ.ಬಿ ಅವರಿದ್ದ ದ್ವಿಸದಸ್ಯ ಪೀಠದಲ್ಲಿ ಈ ಕುರಿತು ಇಂದು ವಿಚಾರಣೆ ನಡೆಯಿತು. ಸುಮಾರು ಒಂದು ಗಂಟೆ ಕಾಲ ನಡೆದ ವಾದ ಪ್ರತಿವಾದದ ಬಳಿಕ ತೀರ್ಪು ಕಾಯ್ದಿರಿಸಿ ಪೀಠ ಆದೇಶಿಸಿದೆ. ಸರ್ಕಾರಿ ರಸ್ತೆ ಇರುವುದು ಸಾರ್ವಜನಿಕರ ಓಡಾಟಕ್ಕೆ. ಹೀಗಾಗಿ ಅದು ಸಾರ್ವಜನಿಕರಿಗೆ ಉಪಯೋಗವಾಗಬೇಕು. ಖಾಸಗಿಯವರು ಕಾರ್ಯಕ್ರಮ ಮಾಡಲು ಬೇರೆ ಕಡೆ ಸ್ಥಳ ಬಾಡಿಗೆ ಪಡೆದು ಕಾರ್ಯಕ್ರಮ ಮಾಡಬಹುದು. ಸಾರ್ವಜನಿಕ ಆಸ್ತಿಗಳನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಈ ಆದೇಶ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದನ್ನು ಮಾಡಲಾಗಿದೆ. ಇದರಲ್ಲಿ ಕಾಯ್ದೆ 19ಎ…
ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್ಸಿನ ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾದಂತಹ ಹೆಚ್ ವೈ ಮೇಟಿ ಇಂದು ನಿಧನರಾಗಿದ್ದಾರೆ. ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ ವೈ ಮೇಟಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಅವರು ನಿಧನರಾಗಿದ್ದಾರೆ. ಹೆಚ್ ವೈ ಮೇಟಿ ನಿಧನದ ಸುದ್ದಿ ತಿಳಿದು ತಕ್ಷಣ ಮೈಸೂರು ನಿಂದ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಆಗಮಿಸಿ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ಶಾಸಕ ಮೇಟಿ ಅವರನ್ನು ಭೇಟಿಯಾಗಿದ್ದೆ. ಮೇಟಿ ಗುಣಮುಖರಾಗುತ್ತಾರೆ ಎಂದು ವೈದ್ಯರು ಹೇಳಿದ್ದರು. ಅತ್ಯಂತ ನಿಷ್ಠಾವಂತ ಹಾಗೂ ನನಗೆ ಬಹಳ ಆಪ್ತರಾಗಿದ್ದರು. ಮೇಟಿ ಬಹಳ ನಿಯತ್ತಾಗಿದ್ದ ಮನುಷ್ಯ ನನಗೆ ಬಹಳ ಲಾಯಲ್ ಆಗಿ ಇದ್ದ ರಾಜಕಾರಣಿ ನಾನು ಭೇಟಿ ಮಾಡಿದ್ದಾಗ ಮೇಟಿ ಚೆನ್ನಾಗಿ ಮಾತನಾಡಿದ್ದ ಎಷ್ಟು ಬೇಗ ಸಾಯುತ್ತಾರೆ. ನನಗಿಂತಲೂ ಅವರು ದೊಡ್ಡವರು. ಎಚ್ ವೈ ಮೇಟಿ ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ…














