Author: kannadanewsnow05

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಹೈಕೋರ್ಟಿನಿಂದ ರೆಗ್ಯುಲರ್ ಬೇಲ್ ಪಡೆದು ಬಿಡುಗಡೆಯಾಗಿದ್ದಾರೆ. ಆದರೆ ನಟ ದರ್ಶನ್ ಗೆ ಜೈಲಿನಿಂದ ಸಂಕಷ್ಟಗಳು ತಪ್ಪುತಿಲ್ಲ. ಈಗಾಗಲೇ ಹೈ ಕೋರ್ಟ್ ಆದೇಶವನ್ನು ಪ್ರಶ್ನೆಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಈಗ ಪೊಲೀಸರು ನಟ ದರ್ಶನ್ ಬಳಿ ಇರುವ ಗನ್ ಲೈಸೆನ್ಸ್ ಕುರಿತು ಸ್ಪಷ್ಟನೆ ನೀಡುವಂತೆ ನೋಟಿಸ್ ನೀಡಿದ್ದಾರೆ. ಹೌದು ದರ್ಶನ್‌ ಬಳಿಯಿರುವ ಗನ್‌ ಲೈಸೆನ್ಸ್‌ ರದ್ದು ಮಾಡಲು ಪೊಲೀಸ್‌ ಇಲಾಖೆ ಮುಂದಾಗಿದೆ. ತಮ್ಮ ಬಳಿಯಿರುವ ಗನ್‌ ಲೈಸೆನ್ಸ್‌ ಬಗ್ಗೆ 1 ವಾರದಲ್ಲಿ ಸ್ಪಷ್ಟನೆ ನೀಡುವಂತೆ ಡಿಸಿಪಿ ಪದ್ಮಿನಿ ಸಾಹು ನೋಟಿಸ್‌ ನೀಡಿದ್ದಾರೆ. ಅಲ್ಲದೆ ಕೋರ್ಟ್ ಸಹ ನಟ ದರ್ಶನ್ ಅವರಿಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳಲು ಅನುಮತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ. ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ ಪೈಶಾಚಿಕ ಕೃತ್ಯ ನಡೆದಿದ್ದು, ರಸ್ತೆಯ ಮೇಲೆ ಮಲಗಿದಂತಹ ಮೂರು ಹಸುಗಳ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ಇದೀಗ ಈ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ ಅವರು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸುತ್ತೇನೆ ಎಂದು ತಿಳಿಸಿದರು. ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದಿರುವ ಘಟನೆ ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದಲ್ಲಿ ನಡೆದಿದೆ. ಕಿಡಿಗೇಡಿಗಳು ರಸ್ತೆಯಲ್ಲಿ ಮಲಗಿದ್ದಂತಹ ಹಸುಗಳ ಕೆಚ್ಚಲು ಕೊಯ್ದಿದ್ದಾರೆ. ಈ ಕುರಿತು ಚಾಮರಾಜಪೇಟೆ ಠಾಣೆಯ ಪೊಲೀಸರ ಜೊತೆಗೆ ನಾನು ಮಾತನಾಡುತ್ತೇನೆ.ಕಿಡಿಗೇಡಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ವಾದಂತಹ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸುತ್ತೇನೆ ಎಂದು ಬೆಂಗಳೂರಿನಲ್ಲಿ ಗ್ರಹ ಇಲಾಖೆಯ ಸಚಿವ ಡಾ.ಜಿ ಪರಮೇಶ್ವರ್ ಅವರು ತಿಳಿಸಿದರು. ಘಟನೆ ಹಿನ್ನೆಲೇ? ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ರಸ್ತೆಯಲ್ಲಿ ಮಲಗಿದ್ದಂತಹ ಮೂರು ಹಸುಗಳ ಕೆಚ್ಚಲುಗಳನ್ನು ಕಿಡಿಗೇಡಿಗಳು ಕೊಯ್ದಿರುವ ಹೀನ ಕೃತ್ಯ ಬೆಂಗಳೂರು ಜಿಲ್ಲೆಯ ಚಾಮರಾಜಪೇಟೆಯಲ್ಲಿ ನಡೆದಿದೆ. ಹೌದು ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಒಂದು ಘಟನೆ…

Read More

ಬೆಂಗಳೂರು : ನಾಳೆ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ CLP ಸಭೆ ಹಾಗೂ ಜನವರಿ 21ರಂದು ಬೆಳಗಾವಿಯಲ್ಲಿ ಗಾಂಧಿ ಸಮಾವೇಶದ ಕುರಿತು, ಸೇರಿದಂತೆ ಇನ್ನೂ ಅನೇಕ ವಿಷಯಗಳ ಕುರಿತಂತೆ ಚರ್ಚಿಸಲು ಇಂದು ಬೆಂಗಳೂರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದೆ ವೇಳೆ ಎಸ್ ಸಿ, ಎಸ್ ಟಿ ಸಚಿವರಿಂದ ಸಭೆಯ ಕುರಿತು ಅಜೆಂಡ ಮನವರಿಕೆ ಮಾಡುವ ಸಾಧ್ಯತೆ ಇದ್ದು, ಸುರ್ಜೆವಾಲಾಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಇಂದು ರಾತ್ರಿ ರಣಧೀಪ್ ಸಿಂಗ್ ಸುರ್ಜೆವಾಲಾ ಬೆಂಗಳೂರಿಗೆ ಆಗಮಿಸಲಿದ್ದು, ಪಕ್ಷದ ಒಗ್ಗಟ್ಟು ಕಾಪಾಡಲು ಕೆಲವು ಮಹತ್ವದ ಸೂಚನೆ ನೀಡಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಎಲ್ಲ ನಾಯಕರಿಗೆ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವ ಬಗ್ಗೆ ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.ಅಲ್ಲದೇ ನಾಳೆ ಖಾಸಗಿ ಹೋಟೆಲ್ ಸಿ ಎಲ್ ಪಿ ಸಭೆ ನಡೆಯಲಿದ್ದು, ಜನವರಿ 21ರ ಬೆಳಗಾವಿಯಲ್ಲಿ ಗಾಂಧಿ ಸಮಾವೇಶ ಹಾಗೂ ಸಮಾವೇಶದ ಪೂರ್ವ…

Read More

ಕಲಬುರ್ಗಿ : ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಟೋಮೊಬೈಲ್ ಅಂಗಡಿ ಒಂದಕ್ಕೆ ಬೆಂಕಿ ತಗುಲಿ ಬೆಂಕಿಯ ಕೆನ್ನಾಲಿಗೆ ಸಂಪೂರ್ಣವಾಗಿ ಅಂಗಡಿಯನ್ನು ಆವರಿಸಿದ ಪರಿಣಾಮ ಆಟೋಮೊಬೈಲ್ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಶಹಾಬಾದ್ ನಗರದ ಕನಕದಾಸ ವೃತ್ತದ ಬಳಿ ನಡೆದಿದೆ. ಹೌದು ಕಳೆದ ಶುಕ್ರವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜೇವರ್ಗಿ ರಸ್ತೆಯಲ್ಲಿನ ಚಿನ್ನಾಜಿ ಕಾಂಪ್ಲೆಕ್ಸ್ ನಲ್ಲಿ ಇರುವ ಬಾಲಾಜಿ ಆಟೋಮೊಬೈಲ್ಸ್ ಅಂಗಡಿಯು ವಿದ್ಯುತ್ ಸ್ಪರ್ಶದಿಂದ ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿರುವ ಘಟನೆ ಶುಕ್ರವಾರ ರಾತ್ರಿ 10 ಗಂಟೆಯ ಸುಮಾರಿಗೆ ಬೆಂಕಿ ಹತ್ತಿದ್ದು, ಸ್ಥಳದಲ್ಲಿ ಇದ್ದ ಸಾರ್ವಜನಿಕರು ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ ಯಶಸ್ವಿಯಾಗಲಿಲ್ಲ, ಹಾಗಾಗಿ ಬೆಂಕಿಯ ಕೆನ್ನಾಲಗೆಯಿಂದ ಅಂಗಡಿ ಸುಟ್ಟು ಕರಕಲಾಗಿತ್ತು. ಅಂಗಡಿಯಲ್ಲಿ ವಾಹನಕ್ಕೆ ಬಳಸುವ ಬೆಲೆಬಾಳುವ ಆಯಿಲ್ ಗಳು, ಯಂತ್ರೋಪಕರಣಗಳ ಬಿಡಿ ಭಾಗಗಳು, ಪ್ಲಾಸ್ಟಿಕ್ ಸಾಮಗ್ರಿಗಳು, ಇಂಜಿನ್ ಸಾಮಾನುಗಳು ಸಂಪೂರ್ಣವಾಗಿ ಬಸ್ಮವಾಗಿವೆ. ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸುವ ಮೊದಲೇ ಸಂಪೂರ್ಣ…

Read More

ಕಲಬುರ್ಗಿ : ಕಲ್ಬುರ್ಗಿಯ ಶೇಖ್ ದರ್ಗಾದಲ್ಲಿ ನಿನ್ನೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಲ್ಬುರ್ಗಿಯ ಚೌಕ ಪೊಲೀಸ್ ಠಾಣೆಯಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ 6 ಜನರ ವಿರುದ್ಧ ಇದೀಗ FIR ದಾಖಲಾಗಿದೆ.  ನಿನ್ನೆ ರಾಷ್ಟ್ರಧ್ವಜದ ಮೇಲೆ ಹಸಿರು ಬಣ್ಣದ ಮುಸ್ಲಿಂ ಧ್ವಜಾರೋಹಣ  ಮಾಡಿದ್ದ ಆರೋಪ ಕೇಳಿ ಬಂದಿತ್ತು. ಮೊಹಮ್ಮದ್ ಅಫ್ಜಲ್ ಉದ್ದೀನ್, ಜುನೈದಿ ಮೊಹಮ್ಮದ್, ಕಿವ ಮೋದ್ದೀನ್ ಜುನೈದಿ, ತಾಹಿರ್ ಅಲ್ಲಾಹುದ್ದೀನ್ ಜುನೈದಿ, ಫಕ್ರುದ್ದೀನ್ ಮಣಿಯಾಲ್, ಹಾಗೂ ರಿಜ್ವಾನ್ ಮೌಲಾನ್ ಅಹಮದ್ ವಿರುದ್ಧ ಕಲಬುರ್ಗಿಯ ಚೌಕ ಠಾಣೆಯಲ್ಲಿ FIR ದಾಖಲಾಗಿದೆ. ನಿನ್ನೆ  ರಿಜ್ವಾನ್ ಹುಟ್ಟುಹಬ್ಬದ ವೇಳೆ ರಾಷ್ಟ್ರಧ್ವಜದ ಕೆಳಗೆ ಹಸಿರು ಬಣ್ಣದ ಧ್ವಜ ಹಾರಾಟ ಮಾಡಿ ಅವಮಾನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ರಾಷ್ಟ್ರಧ್ವಜ ಇಟ್ಟು ಅಪಮಾನ ಮಾಡಿದ ಆರೋಪ ಕೇಳಿ ಬಂದಿದೆ. ಕಲ್ಬುರ್ಗಿ ಶೇಖ್ ರೋಜಾ ದರ್ಗಾದ ಆವರಣದಲ್ಲಿ ಈ ಒಂದು ಘಟನೆ ನಡೆದಿತ್ತು. ಶಿವಮೊಗ್ಗ ಹೊರವಲಯದ ಅನುಪಿನಕಟ್ಟೆಯಲ್ಲಿ ಈ ಒಂದು ಕೊಲೆ ನಡೆದಿದೆ. ವೈಯಕ್ತಿಕ…

Read More

ಶಿವಮೊಗ್ಗ : ಇಬ್ಬರೂ ಸಹೋದರರ ನಡುವೆ ಗಲಾಟೆ ನಡೆದು ಗಲಾಟೆ ವಿಕೋಪಕ್ಕೆ ತಿರುಗಿ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಅಣ್ಣ ಲೋಕೇಶ್ ಎಂಬಾತನಿಂದ ತಮ್ಮ ಗಿರೀಶ್ ನಾಯಕ್ (28) ಎನ್ನುವವನ ಕೊಲೆಯಾಗಿದೆ. ಶಿವಮೊಗ್ಗ ಹೊರವಲಯದ ಅನುಪಿನಕಟ್ಟೆಯಲ್ಲಿ ಈ ಒಂದು ಕೊಲೆ ನಡೆದಿದೆ. ವೈಯಕ್ತಿಕ ದ್ವೇಷಕ್ಕೆ ಅಣ್ಣ ಲೋಕೇಶ್ ತಮ್ಮ ಗಿರೀಶ್ ನಾಯಕನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಲೊಕೇಶನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ರಸ್ತೆಯಲ್ಲಿ ಮಲಗಿದ್ದಂತಹ ಮೂರು ಹಸುಗಳ ಕೆಚ್ಚಲುಗಳನ್ನು ಕಿಡಿಗೇಡಿಗಳು ಕೊಯ್ದಿರುವ ಹೀನ ಕೃತ್ಯ ಬೆಂಗಳೂರು ಜಿಲ್ಲೆಯ ಚಾಮರಾಜಪೇಟೆಯಲ್ಲಿ ನಡೆದಿದೆ. ಹೌದು ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಒಂದು ಘಟನೆ ನಡೆದಿದೆ. ರಸ್ತೆಯಲ್ಲಿ ಮಲಗಿದ್ದಂತಹ ಮೂರು ಹಸುಗಳನ್ನು ಕೆಚ್ಚಲನ್ನು ಕಿಡಿಗೇಡಿಗಳು ಕೊಯ್ದಿದ್ದಾರೆ. ಸದ್ಯಕ್ಕೆ ಚಾಮರಾಜಪೇಟೆಯ ಬಸವ ಆಸ್ಪತ್ರೆಯಲ್ಲಿ ಮೂರು ಹಸುಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ರಾತ್ರಿ ಮೂರು ಹಸುಗಳ ಕೆಚ್ಚಲನ್ನು ಕಿಡಿಗೇಡಿಗಳು ಕೊಯ್ದಿದ್ದಾರೆ. ಮನುಷ್ಯರಿಗೆ ಒಂದು ಸಾರಿ ಸೂಜಿ ಚುಚ್ಚಿದರು ಸಾಕು ನೋವು ಎಂದು ಕಿರುಚಿ ಹೇಳುತ್ತೇವೆ. ಆದರೆ ಪಾಪ ಮಾತು ಬರದೇ ಇರುವಂತಹ ಮೂಕಪ್ರಾಣಿಗಳ ಕೆಚ್ಚಲು ಕೊಯ್ಯುವಾಗ ಎಷ್ಟು ವೇದನೆ ಅನುಭವಿಸಲಿಲ್ಲ? ಸದ್ಯ ಹಸುಗಳಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂಥ ವಿಕೃತಿ ಮೆರೆದ ಪಾಪಿಗಳನ್ನು ಒದ್ದು ಒಳಗೆ ಹಾಕಿ ಎಂದು ಸ್ಥಳೀಯ ನಿವಾಸಿಗಳು ಕಿಡಿ ಕಾರಿದ್ದಾರೆ.

Read More

ಬೆಂಗಳೂರು : ಬಹು ಮುಖ್ಯವಾದಂತಹ ಜಾತಿಗಣತಿ ವರದಿ ಜಾರಿ ಮಾಡುವ ಕುರಿತಂತೆ ಮುಂದಿನ ಸಂಪುಟ ಸಭೆಯಲ್ಲಿ ಅಂದರೆ ಜನೆವರಿ 16 ರಂದು ಈ ಒಂದು ಜಾದಿಗಣತಿ ವರದಿ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದು, ಬಹುತೇಕ ಮುಂದೆ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರೊಂದಿಗೆ ಚರ್ಚಿಸಿ ಜಾತಿಗಣತಿ ವರದಿ ಜಾರಿಯಾಗುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ. ಹೌದು ಮುಂದಿನ ಕ್ಯಾಬಿನೆಟ್ ನಲ್ಲಿ ಜಾತಿಗಣತಿ ವರದಿ ಜಾರಿ ಕುರಿತು ಚರ್ಚೆ ಸಾಧ್ಯತೆ ಇದ್ದು, ಸಚಿವ ಸಂಪುಟದ ಮುಂದೆ ವರದಿ ಮಂಡಿಸಲು ಸೂಚನೆ ನೀಡಲಾಗಿದೆ. ಸಚಿವರೊಂದಿಗೆ ಚರ್ಚೆ ಮಾಡಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ.ಕಾನೂನು ಇಲಾಖೆ ಸಲಹೆ ಪಡೆಯಲು ಬಹುತೇಕ ತೀರ್ಮಾನಿಸಲಾಗಿದ್ದು, ಸಚಿವ ಸಂಪುಟ ಸಮಿತಿ ರಚನೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಜಯಪ್ರಕಾಶ್ ಹೆಗಡೆಯವರು ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಸಂಪುಟ ಉಪ ಸಮಿತಿ ವರದಿ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಿಎಂ ಸಿದ್ದರಾಮಯ್ಯ ಚರ್ಚೆ ಮಾಡಿ, ಸಂಪುಟ ಉಪ ಸಮಿತಿ…

Read More

ಹಾಸನ : ಪ್ರಿಯಕರನೊಬ್ಬ ತನ್ನ ಪ್ರಿಯತಮೆಯ ಕಾಟಕ್ಕೆ ಬೇಸತ್ತು, ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ. ವಿಷ ಸೇವಿಸಿದ ತಕ್ಷಣ ಯುವಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೆ ಯುವಕ ಇದೀಗ ಸಾವನಪ್ಪಿದ್ದಾನೆ. ಕಳೆದ ಡಿಸೆಂಬರ್ 26ರಂದು ಯುವಕ ವಿಷ ಸೇವಿಸಿದ್ದ ತಕ್ಷಣ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.ಪ್ರಿಯತಮೆಯ ಕಾಟಕ್ಕೆ ಬೇಸತ್ತು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಡಿಯೋ ಮಾಡಿಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸೂಸೈಡ್ ಮಾಡಿಕೊಂಡ ಯುವಕನನ್ನು ಕವನ ಎಂದು ತಿಳಿದುಬಂದಿದೆ. ಸಕಲೇಶಪುರ ತಾಲೂಕಿನ ಮಾಳೆಗದ್ದೆಯಲ್ಲಿ ಈ ಒಂದು ಘಟನೆ ನಡೆದಿದ್ದು, ನನ್ನ ಸಾವಿಗೆ ಅಂಜಲಿ ಎಂಬ ಯುವತಿ ಕಾರಣ ವಿಡಿಯೋದಲ್ಲಿ ಯುವಕ ಆರೋಪಿಸಿದ್ದಾನೆ. 2021 ರಲ್ಲಿ ನನ್ನ ಮನೆಯ ಬಳಿ ಅಂಜಲಿ ವಾಸಿಸುತ್ತಿದ್ದಳು.ಆಗ ನನ್ನ ಲೈಫ್ ನಲ್ಲಿ ಅವಳು ಬಂದು ಇಬ್ಬರು ಪರಸ್ಪರ ಪ್ರೀತಿಸುತಿದ್ದೆವು. ನೀನು ನನಗೆ ಬೇಕೇ ಬೇಕು…

Read More

ಚಾಮರಾಜನಗರ : ಚಾಮರಾಜನಗರದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕಬ್ಬಿನ ಗದ್ದೆಯಲ್ಲಿ ಆಟ ಆಡುತ್ತಿರುವಾಗ ಎರಡು ವರ್ಷದ ಬಾಲಕನಿಗೆ ಹಾವು ಕಚ್ಚಿ ಧಾರಣವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಶ್ರೀಧರ್ ಎಂಬವರ ಪುತ್ರ ಅಜಯ್ (2) ಎನ್ನುವ ಬಾಲಕ ಹಾವು ಕಚ್ಚಿ ಮೃತಪಟ್ಟಿದ್ದಾನೆ. ಶ್ರೀಧರ್​ ಕುಟುಂಬಸ್ಥರು ಪ್ರತಿವರ್ಷ ತಮ್ಮ ಜಿಲ್ಲೆಯಿಂದ ಕಬ್ಬು ಕಟಾವು ಮಾಡಲು ಎರಡು ಮೂರು ತಿಂಗಳುಗಳ ಕಾಲ ಕುಟುಂಬ ಸಮೇತರಾಗಿ ಬಂದು ಇಲ್ಲೇ ವಾಸ್ತವ್ಯ ಹೂಡಿ, ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅದೇ ರೀತಿಯಾಗಿ ಸುಮಾರು ನಾಲ್ಕರಿಂದ ಐದು ಕುಟುಂಬದವರು ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದ ಕುಳ್ಳೇಗೌಡ ಎಂಬವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದರು. ಈ ವೇಳೆ ಮೃತಪಟ್ಟ ಮಗು ಸೇರಿ 4-5 ಮಕ್ಕಳು ಕಬ್ಬಿನ ಗದ್ದೆಯಲ್ಲೇ ಆಟವಾಡುತ್ತಿದ್ದರು. ಈ ವೇಳೆ ಬಾಲಕ ಅಜಯನಿಗೆ ಹಾವು ಕಚ್ಚಿದೆ ಕೂಡಲೇ ಆದ ಜೋರಾಗಿ ಕಿರುಚಿಕೊಂಡಿದ್ದಾನೆ.…

Read More