Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಕಲಬುರ್ಗಿ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಮತ್ತೆ 17 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಮಲಘಾಣ ಗ್ರಾಮದಲ್ಲಿ ನಡೆದಿದೆ. ನಿನ್ನೆ ಐವರು ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು, ತಲೆ ಸುತ್ತು, ಸುಸ್ತು ಸೇರಿ ಇತರೆ ಲಕ್ಷಣಗಳು ಕಂಡು ಬಂದು ಕಾಳಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ ಕೂಡ 17 ಮಕ್ಕಳಲ್ಲಿ ಅದೇ ತರಹದ ಲಕ್ಷಣಗಳು ಕಂಡುಬಂದಿವೆ ಎಂದು ತಿಳಿದುಬಂದಿದೆ. ಕೋರವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಶಾಲೆಗೆ ಆಗಮಿಸಿ, ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿದರು. ಈ ದಿನ ಮಕ್ಕಳಿಗೆ ಬಿಸಿಯೂಟ ಬಡಿಸದೆ ಬಿಸ್ಕೆಟ್, ಒಆರ್‌ಎಸ್ ನೀಡಿದರು.ಕಾಳಗಿ ಆಸ್ಪತ್ರೆಯಲ್ಲೇ ಎಲ್ಲ ಅಧಿಕಾರಿಗಳು ಇದ್ದು ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಶಾಲೆಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಮೋಟಾರ್ ಸುಟ್ಟಿದ್ದು ಕೆಲದಿನಗಳಿಂದ ನೀರು ಪೂರೈಕೆ ಸ್ಥಗಿತಗವಾಗಿದೆ. ಯಾವ ಕಾರಣಕ್ಕೆ ಈ ತೊಂದರೆ ಕಾಣಿಸಿಕೊಳ್ಳುತ್ತಿದೆ ಎಂಬುದೇ…
ನವದೆಹಲಿ : ಕೋವಿಡ್ -19 ಕಾಯಿಲೆಗೆ ಕಾರಣವಾಗುವ ವೈರಸ್ ಸಾರ್ಸ್-ಕೋವ್-2 ಗೆ ಹೋಲುವ ಮತ್ತೊಂದು ವೈರಸ್’ನ್ನ ಚೀನಾ ಕಂಡು ಹಿಡಿದಿದೆ. ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಕಾರಣವೆಂದು ಶಂಕಿಸಲಾದ ಸಂಶೋಧನೆಗೆ ಕುಖ್ಯಾತರಾಗಿರುವ ಚೀನಾದ ವಿಜ್ಞಾನಿ ಶಿ ಜೆಂಗ್ಲಿ ಅಧ್ಯಯನದ ನೇತೃತ್ವ ವಹಿಸಿದ್ದಾರೆ. ಕೊರೊನ ಹೊಡೆತದಿಂದ ಈಗಾಗಲೇ ಇಡೀ ಜಗತ್ತೇ ತತ್ತರಿಸಿ ಹೋಗಿದ್ದು, ಇನ್ನು ಹಲವು ದೇಶಗಳು ಆರ್ಥಿಕವಾಗಿ ಮೇಲೆ ಏಳಲು ಹರಸಾಹಸ ಪಡುತ್ತಿವೆ. ಇದರ ಮಧ್ಯ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದ್ದು, ಇದು ಬಾವಲಿಗಳ ಮೂಲಕ ಮಾನವನ ದೇಹವನ್ನು ಪ್ರವೇಶಿಸುತ್ತದೆ ಎಂದು ತಿಳಿದು ಬಂದಿದೆ. ಈ ಒಂದು ಹೊಸ ವೈರಸ್‌ಗೆ ಚೀನಾ ರಾಷ್ಟ್ರದ ವಿಜ್ಞಾನಿಗಳು HKU-5-Cov-2 ಎಂದು ನಾಮಕರಣ ಮಾಡಿದ್ದಾರೆ. ಹೌದು ಚೀನಾದಲ್ಲಿ ಮತ್ತೊಂದು ಅಪಾಯಕಾರಿ ವೈರಸ್ ಪತ್ತೆಯಾಗಿದೆ. ಬಾವಲಿ ಮೂಲಕ ಮಾನವನ ದೇಹ ಹೊಕ್ಕಿರುವ ಹೊಸ ಬಗೆಯ ವೈರಸ್ ಇದಾಗಿದ್ದು, ಹೊಸ ವೈರಸ್‌ಗೆ HKU-5-Cov-2 ಎಂದು ನಾಮಕರಣ ಮಾಡಲಾಗಿದೆ. ಮಾನವನ ಜೀವಕೋಶದ ಪ್ರೋಟೀನ್ ಗಳನ್ನು ಈ ಒಂದು ವೈರಸ್ ಹಾನಿ…
ತೆಲಂಗಾಣ : ಇತ್ತೀಚಿಗೆ ವಯಸ್ಸಿನ ಅಂತರವಿಲ್ಲದೆ ಎಲ್ಲರಲ್ಲೂ ಹೃದಯಘಾತ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಇದೀಗ ಮಗಳ ಮದುವೆ ಸಂದರ್ಭದಲ್ಲಿ ಅಳಿಯನ ಪಾದ ತೊಳೆದು ಕನ್ಯಾದಾನ ಮಾಡುವಾಗಲೇ, ಹೃದಯಾಘಾತದಿಂದ ಮಾವ ಸಾವನಪ್ಪಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಭಿಕ್ಕನೂರ್ ಮಂಡಲದ ರಾಮೇಶ್ವರಪಲ್ಲಿಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಕುಡಿಕ್ಯಾಲ ಬಾಲಚಂದ್ರಂ (56) ಎಂದು ತಿಳಿದುಬಂದಿದ್ದು, ಇವರು ಮಗಳ ಮದುವೆ ನಡೆಯುತ್ತಿದ್ದಾಗ, ತಂದೆ ಅದೇ ಸಭಾಂಗಣದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.ಕನ್ಯಾದಾನ ಸಮಾರಂಭ ಮುಗಿದ ತಕ್ಷಣ, ವಧುವಿನ ತಂದೆಗೆ ಹೃದಯಾಘಾತವಾಯಿತು.ತಕ್ಷಣ ಎಚ್ಚೆತ್ತ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಅವರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ನಿನ್ನೆ ಜಂಗಂಪಳ್ಳಿಯ ಹೊರವಲಯದಲ್ಲಿರುವ ಬಿಟಿಎಸ್ ಬಳಿಯ ಮದುವೆ ಮಂಟಪದಲ್ಲಿ ಏರ್ಪಡಿಸಿದ್ದರು. ಈ ಭವ್ಯ ಸಮಾರಂಭದಲ್ಲಿ ಎಲ್ಲಾ ಸಂಬಂಧಿಕರು ಮತ್ತು ಸ್ನೇಹಿತರು ಭಾಗವಹಿಸಿದ್ದರು. ವರನ ಪಾದಗಳನ್ನು ತೊಳೆದು ಕನ್ಯಾದಾನ ಮಾಡಿದ ನಂತರ, ಬಾಲಚಂದ್ರ ತೀವ್ರ ಅಸ್ವಸ್ಥನಾಗಿ ಮದುವೆ ಮಂಟಪದಲ್ಲಿ…
ತುಮಕೂರು : ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಇದೀಗ ಗೃಹ ಸಚಿವರ ಕ್ಷೇತ್ರದಲ್ಲಿ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದರು ಸಹ ಇದೀಗ ಆತ್ಮಹತ್ಯೆಗಳಿಗೆ ಕಡಿವಾಣ ಬಿದ್ದಿಲ್ಲ. ತುಮಕೂರಲ್ಲಿ ಒಬ್ಬ ಆಟೋ ಚಾಲಕ ಹಾಗೂ ಓರ್ವ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇದೀಗ ವರದಿಯಾಗಿದೆ. ಹೌದು ಸುಗ್ರೀವಾಜ್ಞೆ ಜಾರಿ ಬಳಿಕವು ಮೈಕ್ರೋ ಟಾರ್ಚರ್ ನಿಂತಿಲ್ಲ. ಇದೀಗ ಗೃಹ ಸಚಿವರ ತವರಿನಲ್ಲಿ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆ ಎಂದು ತುಮಕೂರಿನಲ್ಲಿ ಒಂದೇ ದಿನ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಂಜನಮೂರ್ತಿ (35) ಆತ್ಮಹತ್ಯೆಗೆ ಶರಣಾದವರು. ಅಂಜನಮೂರ್ತಿ ಬಟವಾಡಿಯ ಮಹಾಲಕ್ಷ್ಮೀ ನಗರದ ನಿವಾಸಿ ಎಂದು ತಿಳಿದುಬಂದಿದೆ. ಫೈನಾನ್ಸ್ ಕಿರುಕುಳಕ್ಕೆ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.ಹಣ ನೀಡುವಂತೆ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ವಿಡಿಯೋದಲ್ಲಿ ಮನವಿ ಮಾಡಿದ್ದಾನೆ. ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು…
ಚಿಕ್ಕಬಳ್ಳಾಪುರ : ನನ್ನ ಕೊನೆಯ ಉಸಿರು ಇರುವಾಗಲೇ ಏನಾದರೂ ಒಳ್ಳೆಯದು ಮಾಡಬೇಕು ಕರ್ನಾಟಕಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ನಾನು ರೈತನ ಮಗ ಶಕ್ತಿ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ತಿಳಿಸಿದರು. ನಾನು ಯಾವ ರಾಜಕಾರಣಿ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ. ಯಾವುದೇ ಪಕ್ಷ ಯಾವುದೇ ಜಾತಿಯ ನಾಯಕರ ಬಗ್ಗೆ ನಾನು ಮಾತನಾಡಿಲ್ಲ. ನನ್ನ ಕೊನೆಯ ಉಸಿರು ಇರುವಾಗಲೇ ಏನಾದರೂ ಒಳ್ಳೆಯದು ಮಾಡಬೇಕು. ಕರ್ನಾಟಕಕ್ಕೆ ಏನಾದರೂ ಒಳ್ಳೆಯದು ಮಾಡಬೇಕು ನಾನು ರೈತನ ಮಗ ಶಕ್ತಿ ಇರುವವರೆಗೂ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು. ಕೆಂಪುಕೋಟೆ ಮೇಲೆ ಒಂದು ಬಾರಿ ಬಾವುಟ ಹಾರಿಸಿದ್ದೇನೆ. ನನ್ನ ಶಕ್ತಿ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಆಗಿದ್ದರು.ಆದರೆ ಸ್ವಲ್ಪ ವ್ಯತ್ಯಾಸವಾದ ಕಾರಣ ತಕ್ಷಣ ನಾನೇ ಬಗೆಹರಿಸಿಕೊಂಡೆ ಮಠ, ಒಕ್ಕಲಿಗ ಸಮಾಜವನ್ನು ಸಮರ್ಪಕವಾಗಿ ಮುನ್ನಡೆಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿಕೆ ನೀಡಿದರು.
ಕಲಬುರ್ಗಿ : ಇ-ಕಾರ್ಮಸ್ ಕಂಪನಿಯೊಂದರಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ ಯುವಕನೊಬ್ಬ ಮನನೊಂದು ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ತೇಲ್ಕೂರ ಗ್ರಾಮದ ನಿವಾಸಿ ನೀಲಕಂಠಯ್ಯ ಚನ್ನಬಸ್ಸಯ್ಯ ಮಠಪತಿ (25) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ತಿಳಿದುಬಂದಿದೆ. ಅಮೇಜಾನ್ ಇ-ಕಾರ್ಮಸ್ ಕಂಪನಿಯ ಡೆಲಿವರಿ ಬಾಯ್ ಆಗಿದ ನೀಲಕಂಠಯ್ಯ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸೇಡಂ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದ್ದು, ಕಕ್ಕೇರಿ ಗ್ರಾಮದಲ್ಲಿ ಕ್ರಿಮಿನಾಶಕ ಸೇವಿಸಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಹೌದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಯುವಕ ಕ್ರಿಮಿನಾಶಕ ಸೇವಿಸಿ ಸಾವನ್ನಪ್ಪಿದ್ದಾನೆ. ಮನೆ ನಿರ್ಮಾಣಕ್ಕೆ ಎಂದು ಯುವಕ 8 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದ. ನಿನ್ನೆ ರಾತ್ರಿ ವಿಷಯ ಸೇವಿಸಿರುವ ಗೋವಿಂದ ವಡ್ಡರ್ (34) ಸಾವನ್ನಪ್ಪಿದ್ದಾನೆ. ಮೃತನ ಸಾವಿಗೆ ಪರಿಹಾರ ನೀಡುವಂತೆ ಇದೀಗ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಬಂಧಿಸಲು ತೆರಳಿದ್ದ ವೇಳೆ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಗುಂಡಿನ ದಾಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸಮನೆ ಠಾಣೆ ರೌಡಿ ರವಿ ಅಲಿಯಾಸ್ ಗುಂಡನ ಕಾಲಿಗೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ. ವಿವಿಧ ಕೇಸ್ ಗಳಲ್ಲಿ ರೌಡಿಶೀಟರ್ ರವಿ ಬೇಕಾಗಿದ್ದ ಹೊಸಮನೆ ಠಾಣೆಯ ಪಿಎಸ್ಐ ಕೃಷ್ಣ ರವಿ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಬಂಧಿಸಲು ಹೋದಾಗ ಸಿಬ್ಬಂದಿ ಮೇಲೆ ರವಿ ಹಲ್ಲೆಗೆ ಯತ್ನಿಸಿದ್ದಾನೆ. ಕಾನ್ಸ್ಟೇಬಲ್ ಆದರ್ಶ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪಿಎಸ್ಐ ಕೃಷ್ಣ ಅವರು ಆತ್ಮ ರಕ್ಷಣೆಗಾಗಿ ರವಿ ಕಾಲಿಗೆ ಗುಂಡು ಹಾರಿಸಿದ್ದಾರೆ. ರೌಡಿ ಶೀಟರ್ ಮತ್ತು ಕಾನ್ಸ್ಟೇಬಲ್ ಅನ್ನು ಸದ್ಯ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಉಡುಪಿ : ಉಡುಪಿಯಲ್ಲಿ ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು, ಮಲ್ಪೆ ಬಾಪುತೋಟ ಬಳಿಯ ಮೀನುಗಾರಿಕಾ ಬಂದರಿನ ಸೇತುವೆ ಪಕ್ಕದ ದಕ್ಕೆಯ ಸಮೀಪ ನಿಲ್ಲಿಸಲಾಗಿದ್ದ ಬೋಟ್ಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು 15 ಲಕ್ಷ ರೂ.ನಷ್ಟವಾಗಿದೆ ಎಂದು ತಿಳಿದುಬಂದಿದೆ. ಬೆಂಕಿಗಾಹುತಿಯಾದ ಬೋಟಿನಲ್ಲಿ ಬಲೆ, 200 ಲೀ. ಡೀಸೆಲ್, ಜಿಪಿಎಸ್, ಫಿಶ್ ಫೈಂಡರ್, ಲೈಫ್ ಜಾಕೆಟ್, ವಾಟರ್ ಟ್ಯಾಂಕರ್, ಬಾಕ್ಸ್ ಮುಂತಾದ ವಸ್ತುಗಳಿದ್ದವು. ಬೆಂಕಿ ತಗುಲಿದ ಸಂದರ್ಭದಲ್ಲಿ ಸ್ಥಳೀಯ ದೋಣಿಯವರು ಗಮನಿಸಿ ಮಾಹಿತಿ ನೀಡಿದ್ದರಿಂದ ಸಕಾಲದಲ್ಲಿ ಸ್ಥಳೀಯರ ನೆರವಿನಿಂದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು. ಮಲ್ಪೆಯ ಜನಾರ್ದನ ಟಿ.ಕಾಂಚನ್ ಎಂಬವರಿಗೆ ಸೇರಿದ ‘ರವಿಪ್ರಕಾಶ್’ ಸಣ್ಣಟ್ರಾಲ್ (ಫಿಶಿಂಗ್) ಬೋಟು ಸುಟ್ಟುಹೋಗಿದೆ. ಮೀನುಗಾರಿಕೆ ಮುಗಿಸಿ ಬಂದು ಬೋಟ್ ಅನ್ನು ದಕ್ಕೆಯಲ್ಲಿ ನಿಲ್ಲಿಸಲಾಗಿತ್ತು. ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಬೋಟಿನ ಸುತ್ತ ಸುಮಾರು 25ರಿಂದ 30 ಬೋಟುಗಳು ನಿಂತಿದ್ದವು. ರಾತ್ರಿ ಸಮಯ ಸಮುದ್ರದ ನೀರಿನ ಮಟ್ಟ ಏರಿಕೆ ಇರುವುದರಿಂದ ಇತರ ಯಾವುದೇ ಬೋಟ್ಗಳಿಗೆ ಬೆಂಕಿ ವ್ಯಾಪಿಸಿಲ್ಲ
ದಾವಣಗೆರೆ : ಮರಾಠ ಎಂದರೆ ಮುಸ್ಲಿಂ ವಿರೋಧಿಗಳು ಎಂದು ಯುವ ಜನತೆ ತಲೆಯಲ್ಲಿ ತುಂಬಿದೆ. ಯುವಜನಾಂಗ ಸ್ವಲ್ಪ ಶಾಂತ ಮನಸ್ಸಿನಿಂದ ಶಿವಾಜಿಯ ಬಗ್ಗೆ ಓದಬೇಕು ಶಿವಾಜಿ ಮಹಾರಾಜ ಮುಸ್ಲಿಂ ವಿರೋಧಿ ಅಲ್ಲ ಎಂದು ದಾವಣಗೆರೆಯಲ್ಲಿ ತುಳಜಾಭವಾನಿ ಭವನ ಉದ್ಘಾಟನಾ ಸಮಾರಂಭದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದರು. ಬಹುತೇಕರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಚಾರ ಬಂದರೂ ನಂಬುತ್ತಾರೆ. ಶಿವಾಜಿ ಜೊತೆ ಯಾರಿದ್ದಾರೆಂದು ಕೆಲ ಮುಸ್ಲಿಂ ನಾಯಕರ ಹೆಸರನ್ನು ಸಂತೋಷ್ ಲಾಡ್ ಇದೆ ವೇಳೆ ತಿಳಿಸಿದರು.ಪ್ರತಿಯೊಬ್ಬರು ಇಂದು ಆಸ್ತಿ ಹಕ್ಕು ಪಡೆಯಲು ಕಾರಣ ಡಾ.ಅಂಬೇಡ್ಕರ್. ಬಿ.ಆರ್ ಅಂಬೇಡ್ಕರ್ ಒಂದು ಜಾತಿ ಸಮುದಾಯಕ್ಕೆ ಸೀಮಿತರಾದವರಲ್ಲ. ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಅಂಬೇಡ್ಕರ್ ಫೋಟೋ ಇಟ್ಟುಕೊಳ್ಳಬೇಕು ಎಂದು ದಾವಣಗೆರೆಯಲ್ಲಿ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಹೇಳಿಕೆ ನೀಡಿದರು.













