Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೈಕ್ ಮೇಲೆ ಮೂವರು ಕುಳಿತುಕೊಂಡು ತ್ರಿಬಲ್ ರೈಡ್ ಮಾಡುವಾಗ ನಿಯಂತ್ರಣ ಕಳೆದುಕೊಂಡು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಮೂವರು ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಮಧ್ಯ ಕುಳಿತಿದ್ದ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ಬೆಂಗಳೂರಿನ ಬಿಜಿಎಸ್ ಮೇಲ್ಸೇತುವೆಯ ಜಾಮೀಯ ಮಸೀದಿ ಎದುರು ನಡೆದಿದೆ. ಮೃತನನ್ನು ಜೆ.ಜೆ.ನಗರದ ರಾಯಪುರ ನಿವಾಸಿ ಮೊಹಮ್ಮದ್ ನೌಹಿದುರ್ ರೆಹಮಾನ್(19) ಎಂದು ತಿಳಿದುಬಂದಿದೆ. ಸವಾರ ಮೊಹಮ್ಮದ್ ಶೋಯೆಬ್ ಉಲ್ಲಾಖಾನ್ ಮತ್ತು ಹಿಂಬದಿ ಸವಾರ ಅಮೀರ್ ಫಸಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರು ಯುವಕರು ಜೆ.ಜೆ.ನಗರದ ರಾಯಪುರ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.ಆಗಸ್ಟ್ 31 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಿ.ಟಿ.ಮಾರ್ಕೆಟ್ ಕಡೆಯಿಂದ ಜೆ. ಜೆ.ನಗರದ ಕಡೆಗೆ ಬೈಕ್ನಲ್ಲಿ ತ್ರಿಪಲ್ ರೈಡಿಂಗ್ ಹೊರಟ್ಟಿದ್ದರು. ಮಾರ್ಗದ ಬಿಜಿಎಸ್ ಮೇಲೇತುವೆಯಲ್ಲಿ ಬರುವಾಗ, ಬೈಕ್ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿಯಾದ ಪರಿಣಾಮ ಮೂವರು ಅತಿವೇಗದ ಚಾಲನೆ ತ್ರಿಪಲ್ ರೈಡಿಂಗ್ ವೇಳೆ ಮೊಹಮ್ಮದ್ ಶೋಯೆಬ್…
ಹುಬ್ಬಳ್ಳಿ : ಕಳೆದ ಕೆಲವು ದಿನಗಳ ಹಿಂದೆ ಮಂಡ್ಯ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಅವರು ಬಿಜೆಪಿ ಅವರು ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ನೀಡಿ ಖರೀದಿಸುತ್ತಿದ್ದಾರೆ ಎಂದು ಸ್ಪೋಟಕ ವಾದಂತಹ ಆರೋಪ ಮಾಡಿದ್ದರು. ಇದಾದ ಬಳಿಕ ಇದೀಗ ಸಚಿವ ಎನ್.ಎಸ್ ಬೋಸರಾಜ್ ಅವರು, ನಮ್ಮ ಪಕ್ಷದ 9 ಜನರನ್ನು ಸಂಪರ್ಕಿಸಿದ್ದು, ಈ ಮೂಲಕ ಬಿಜೆಪಿ ಆಪರೇಷನ್ ಕಮಲಕ್ಕೆ ಯತ್ನಿಸಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಂಪರ್ಕಿಸಿದ 24 ಗಂಟೆಯಲ್ಲಿ ನನಗೆ ಮಾಹಿತಿ ಬಂತು. ಉತ್ತರ ಕರ್ನಾಟಕದವರು ಸೇರಿ ಕೆಲವರನ್ನು ಸಂಪರ್ಕಿಸಿದ್ದರು. ಆಪರೇಷನ್ ಕಮಲದ ಮೊದಲ ಪ್ರಯೋಗ ಬಯಲಾಯಿತು.ನಮ್ಮವರಿಗೆ 100 ಕೋಟಿ ಅಥವಾ 50 ಕೋಟಿ ಆಮಿಷ ಇರಬಹುದು. ಆದರೆ ಆಫರ್ ಮಾಡಿದ್ದಂತು ನಿಜ ಎಂದು ಸಚಿವ ಬೋಸರಾಜ್ ಸ್ಪೋಟಕವಾದಂತ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ 6ರಿಂದ 7 ಜನ ಇದ್ದಾರೆ. ಸರ್ಕಾರದ ವಿರುದ್ಧ ಕುಮಾರಸ್ವಾಮಿ, ದೇವೇಗೌಡರು ಕುತಂತ್ರ ನಡೆಸಿದ್ದಾರೆ. ಅಮಿತ್ ಶಾ ಗೆ ಇಬ್ಬರು…
ಬೀದರ್ : ನಾಪತ್ತೆಯಾಗಿದ್ದ ಯುವತಿಯು ಇಂದು ಶವವಾಗಿ ಪತ್ತೆಯಾಗಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಬೀದರ್ ನಲ್ಲಿ ನಾಪತ್ತೆಯಾಗಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಗುಣತೀರ್ಥವಾಡಿ ಗ್ರಾಮದ ಬಳಿ ನಿನ್ನೆ ಯುವತಿಯ ಶವ ಪತ್ತೆಯಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮದ ಯುವತಿ ಎಂದು ಹೇಳಲಾಗುತ್ತಿದ್ದು, ರೇಪ್ ಮಾಡಿ ಕೊಲೆ ಮಾಡಿದ್ದಾರೆ ಎಂದು ಪಾಲಕರು ಆರೋಪಿಸುತ್ತಿದ್ದಾರೆ. ಇನ್ನು ಹಲವಾರು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ನಮಗೆ ನ್ಯಾಯ ಬೇಕು ಎಂದು ಧರಣಿ ನಡೆಸುತ್ತಿದ್ದಾರೆ. ಘಟನೆ ಕುರಿತಂತೆ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ಸರು ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
BREAKING : ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ : ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ನೀಡಿದ್ದು ತಪ್ಪು ಎಂದ ಸರ್ಕಾರ!
ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಇದರ ಮಧ್ಯ ಮತ್ತೊಂದು ಆಘಾತಕಾರಿ ವಿಷಯ ಬಹಿರಂಗವಾಗಿದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ 50:50 ಅನುಪಾತದಲ್ಲಿ ಸೈಟ್ ಕೊಟ್ಟಿದ್ದು ತಪ್ಪು ಎಂದು ಅಧಿಕೃತವಾಗಿ ಸರ್ಕಾರ ಒಪ್ಪಿಕೊಂಡಿದೆ. ಹೌದು ಈ ಕುರಿತಂತೆ ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ಬಂದಿದ್ದು, 2001 ರಲ್ಲೇ ದೇವನೂರು ಬಡಾವಣೆ ನಿರ್ಮಾಣವಾಗಿದೆ ಎಂದು ಖುದ್ದು ಸಿಎಂ ಪತ್ನಿ ಬರೆದ ಪತ್ರದಲ್ಲಿ ಉಲ್ಲೇಖವಾಗಿದೆ. ಇದೀಗ ಆ ಸೈಟ್ ಕೊಟ್ಟಿರುವುದು ನಿಯಮ ಬಾಹಿರ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ಆದೇಶ ಬಂದಿದೆ. 50:50 ಅನುಪಾತ 2009 ರಲ್ಲಿ ಜಾರಿಗೆ ಬಂದಿದೆ. 2009 ಕ್ಕಿಂತ ಹಿಂದಿನ ಹಳೆ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗುವುದಿಲ್ಲ. ಆದರೆ ಪ್ರಾಧಿಕಾರ 2009 ಹಿಂದಿನ ಬಡಾವಣೆಗಳ ಬದಲಿ ನಿವೇಶನಗಳಿಗಾಗಿ ಮಂಜೂರಾತಿಗಾಗಿ 50:50 ಅನುಪಾತ ಕೈಗೊಂಡಿರುವುದು ಕಾನೂನು ಬಾಹಿರ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅಮಾನತು ಆದೇಶದಲ್ಲೇ ರಾಜ್ಯ…
ಬೆಂಗಳೂರು : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಿದ್ಧಸಿರಿ ಸೌಹಾರ್ದ ಸಹಕಾರ ನಿಯಮಿತ ವಿರುದ್ಧ ದಾಖಲಾಗಿದ್ದ ಕೇಸ್ ಇದೀಗ ರದ್ದುಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.ಈ ಮೂಲಕ ಶಾಸಕ ಯತ್ನಾಳ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಹೌದು ಮಾಲಿನ್ಯ ನಿಯಂತ್ರಣ ಮಂಡಳಿ ದಾಖಲಿಸಿದ್ದ ಕೇಸ್ ಅನ್ನು ಇದೀಗ ಹೈಕೋರ್ಟ್ ರದ್ದುಪಡಿಸಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಸಂಸ್ಥೆಯ ರಮಣಗೌಡ ಪಾಟೀಲ್, ಶಿವಕುಮಾರ್ ಪಾಟೀಲ್ ಗು ಇದೀಗ ಬಿಗ್ ರಿಲೀಸ್ ಸಿಕ್ಕಂತಾಗಿದೆ. ಚಿಂಚೋಳಿಯ ಜಿಎಂಎಫ್ಸಿ ಕೋರ್ಟ್ ನಲ್ಲಿ ಈ ಕುರಿತು ದೂರು ದಾಖಲಿಸಲಾಗಿತ್ತು. ಪ್ರಕರಣದ ಹಿನ್ನೆಲೆ? ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪ ಹಿನ್ನಲೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಇರುವ ಸಿದ್ದ ಶ್ರೀ ಸಕ್ಕರೆ ಕಾರ್ಖಾನೆಗೆ ಬೀಗ ಹಾಕಲು ಆದೇಶ ನೀಡಲಾಗಿತ್ತು . ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಈ ಶುಗರ್ ಫ್ಯಾಕ್ಟರಿ ಬಂದ್ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ…
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು, ಚಾಮುಂಡಿ ಬೆಟ್ಟದಲ್ಲಿ ಅಪರಾಧ ತಡೆಗೆ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತದೆ ಎಂದು ಮೈಸೂರಿನಲ್ಲಿ ಪ್ರಾಧಿಕಾರದ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿ, ಅದೇ ರೀತಿ ಭಕ್ತಾದಿಗಳಿಗೆ ಸೌಲಭ್ಯ ಗಳಿಸಲು ಪ್ರಾಧಿಕಾರವನ್ನು ರಚನೆ ಮಾಡಲಾಗಿದೆ.ದಸರಾ ಸಂದರ್ಭದಲ್ಲಿ ವಿವಿಧ ಭಾಗದಿಂದ ಜನರು ಬರುತ್ತಾರೆ. ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತರಿಗೆ ಸೌಲಭ್ಯ ಒದಗಿಸಬೇಕಿದೆ ಎಂದರು. ಅಲ್ಲದೆ ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕೆಂದು ಸೂಚಿಸಲಾಗಿದೆ. ಚಾಮುಂಡಿ ಬೆಟ್ಟ ಅಷ್ಟೇ ಅಲ್ಲ ಎಲ್ಲಾ ದೇಗುಲಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಸುರಕ್ಷತೆ ಇರಬೇಕೆಂದು ಸಿಸಿಟಿವಿಯನ್ನು ಅಳವಡಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಅಪರಾಧ ತಡೆಗಟ್ಟಲು ಟಾಸ್ಕ್ ಫೋರ್ಸ್ ರಚನೆ ಮಾಡುತ್ತೇವೆ. ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ…
ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿ ದರ್ಶನ್ ರಾಜಾತಿಥ್ಯ ಪಡೆದುಕೊಂಡ ನಂತರ ಕೋರ್ಟಿನ ಆದೇಶದ ಮೇರೆಗೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದರು. ಇದೀಗ ಜೈಲಿನಲ್ಲಿ ತಮ್ಮ ವಿರುದ್ಧ ಕೊಲೆ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ ವಿಚಾರ ತಿಳಿದುಕೊಳ್ಳಲು ಟಿವಿ ಬೇಕೇ ಬೇಕು ಎಂದು ಜೈಲಿನ ಸಿಬ್ಬಂದಿ ಬಳಿ ದರ್ಶನ್ ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೌದು ಈ ಹಿಂದೆ ಆರೋಪಿ ದರ್ಶನ್ ಟಿವಿ ಸಹವಾಸವೇ ಬೇಡ, ಹಾಗೂ ಮಾಧ್ಯಮಗಳ ಕುರಿತು ಅತ್ಯಂತ ತುಚ್ಚವಾಗಿ ಮಾತನಾಡಿದ್ದರು. ಆದರೆ ಇದೀಗ ದರ್ಶನ್ ಗೆ ಟೀವಿ ಬೇಕಾಗಿದೆ. ಈ ವಿಚಾರವಾಗಿ ಜೈಲು ಸಿಬ್ಬಂದಿ ಬಳಿ ಆರೋಪಿ ದರ್ಶನ್ ಮಾಹಿತಿ ಕೇಳುತ್ತಿದ್ದ. ಪ್ರಕರಣದ ಕುರಿತು ಚಾರ್ಜ್ ಶೀಟ್ ಸಲ್ಲಿಕೆ ವಿಚಾರದ ಬಗ್ಗೆ ಜೈಲು ಸಿಬ್ಬಂದಿ ಬಳಿ ನಟ ದರ್ಶನ ಕೇಳಿದ್ದ ಎನ್ನಲಾಗುತ್ತಿದೆ. ಈ ವೇಳೆ ಸಿಬ್ಬಂದಿ ನಿಮಗೆ ಟಿವಿ ಬೇಕಾಗಿದ್ದರೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎಂದು ಕೂಡ…
ಹಾವೇರಿ : ಸಂಗೊಳ್ಳಿ ರಾಯಣ್ಣನನ್ನು ನಮ್ಮವರೇ ಹೇಗೆ ಬ್ರಿಟಿಷರಿಗೆ ಹಿಡಿದು ಕೊಟ್ಟರೊ ಅದೇ ರೀತಿ ನಮ್ಮ ಸುತ್ತಮುತ್ತಲೇ ನಮ್ಮವರೇ ನಮಗೆ ಶತ್ರುಗಳಾಗಿರುತ್ತಾರೆ. ಆದರೆ ಅದು ನಮಗೆ ಗೊತ್ತಾಗುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಸಿಎಂ ಸಿದ್ದರಾಮಯ್ಯ ಜೊತೆಗೆ ಇದ್ದು ಅವರ ವಿರುದ್ಧ ಪಿತೂರಿ ನಡೆಸುತ್ತಿರುವವರಿಗೆ ತಿರುಗೇಟು ನೀಡಿದರು. ಇಂದು ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನುಷ್ಯನಿಗೆ ಶತ್ರುಗಳಿರುವುದು ಸಹಜ. ಎಲ್ಲರಿಗೂ ಶತ್ರುಗಳಿರುತ್ತಾರೆ. ನಮ್ಮ ಜೊತೆಯೇ ಇರುತ್ತಾರೆ. ಆದ್ರೆ ಯಾರು ಶತ್ರು ಎಂಬುದು ಹೇಗೆ ಗೊತ್ತಾಗುತ್ತದೆ? ಯಾರು ನಿಜವಾದ ಸ್ನೇಹಿತರೆಂಬುದು ಹೇಗೆ ಗೊತ್ತಾಗುತ್ತದೆ? ಆ ಲೆಕ್ಕದಲ್ಲಿ ಸಿದ್ದರಾಮಯ್ಯನವರು ಮಾತನಾಡಿದ್ದಾರೆ. ಶತ್ರುಗಳು ನಮ್ಮ ಜೊತೆಯೇ ಇರುತ್ತಾರೆ. ಆದ್ರೆ ಗೊತ್ತಾಗುವುದಿಲ್ಲ ಎನ್ನುವ ಮೂಲಕ ಸ್ವಪಕ್ಷೀಯ ವಿರೋಧಿಗಳಿಗೂ ಜಮೀರ್ ಟಾಂಗ್ ಕೊಟ್ಟರು. ಇನ್ನೂ ದರ್ಶನ್ ಜೈಲು ಅತಿಥ್ಯ ಪ್ರಕರಣದಲ್ಲಿ ನಿಮ್ಮ ಹೆಸರು ಕೇಳಿಬರುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಟ ದರ್ಶನ್ ವಿಚಾರವಾಗಿ ಮಾಧ್ಯಮದಲ್ಲಿ ನನ್ನ ಹೆಸರು ಸೇರಿಸಲಾಗುತ್ತಿದೆ. ನಾನು ದರ್ಶನ್ ಆತ್ಮೀಯ ಸ್ನೇಹಿತರು. ಆದ್ರೆ…
ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆ ಮಧ್ಯ ರಾತ್ರಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದ್ದು, ಡಾಬಾ ಬಳಿ ನಿಲ್ಲಿಸಿದ್ದ ಲಾರಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ.ಈ ವೇಳೆ ಲಾರಿ ಚಾಲಕ ಮತ್ತು ಬೊಲೆರೋ ವಾಹನದಲ್ಲಿದ್ದ ಆರೋಪಿ ನಡುವೆ ಮಾತಿಗೆ ಮಾತು ಬೆಳೆದು ಲಾರಿ ಚಾಲಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಬಳಿ ನಡೆದಿದೆ. ಹೌದು ನಿನ್ನೆ ಮಧ್ಯ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಕ್ರಾಸ್ ನಲ್ಲಿ ಇರುವ ಗ್ರೀನ್ ಪಾರ್ಕ್ ಡಾಬಾ ಸಮೀಪ ಈ ಒಂದು ಕೊಲೆ ನಡೆದಿದೆ. ಘಟನೆಯಲ್ಲಿ ಲಾರಿ ಚಾಲಕ ಬಲಿಯಾಗಿದ್ದಾನೆ. ಡಾಬಾ ಬಳಿ ನಿಲ್ಲಿಸಿದ್ದ ಲಾರಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಲಾರಿ ಚಾಲಕ ಮತ್ತು ಬೊಲೆರೋ ವಾಹನದಲ್ಲಿದ್ದ ಆರೋಪಿ ಮಹೇಶ್ ನಡುವೆ ಮಾತಿಗೆ ಮಾತು ಬೆಳೆದು ಲಾರಿ ಚಾಲಕರನ್ನು ಹತ್ಯೆ ಮಾಡಿದ್ದಾನೆ.ರಾಡ್ ನಿಂದ ಹೊಡೆದು ಲಾರಿಯಲ್ಲಿದ್ದ ಪ್ರದೀಪ್ ನನ್ನು ಕೊಲೆ ಮಾಡಲಾಗಿದೆ. ಬೆಂಗಳೂರು…
ಬೆಳಗಾವಿ : ಬೆಳಗಾವಿಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ವಾಕ್ಸಮರ ಅತಿರೇಕಕ್ಕೆ ಏರಿದ್ದು, ಹಾಲಿ ಶಾಸಕ ರಾಜು ಕಾಗೆ, ಮಾಜಿ ಶಾಸಕ ಶ್ರೀಮಂತ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ನನ್ನ ತಂಟೆಗೆ ಬಂದ್ರೆ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ, ಮೆರವಣಿಗೆ ಮಾಡುತ್ತೇನೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಹೌದು ಇಂದು ರಾಜು ಕಾಗೆ, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜು ಕಾಗೆ, ನನ್ನ ಬಗ್ಗೆ ಮಾತನಾಡಲು ನಿನಗೆ ಯೋಗ್ಯೆತೆ ಇಲ್ಲ. ನೀನು ನನ್ನ ಬಗ್ಗೆ ಮಾತನಾಡ ಬೇಡ, ಅಪ್ಪಿ-ತಪ್ಪಿ ಮಾತನಾಡಿದರೆ ನಾನು ನಿನ್ನ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡುತ್ತೇನೆ ಎಂದು ನಾಲಿಗೆ ಹರಿಬಿಟ್ಟರು. ಮುಂದುವರೆದು, ನೀನು ಬಹಳ ಸತ್ಯ ಹರಿಶ್ಚಂದ್ರ ತರಹ ಮಾತನಾಡುತ್ತಿದ್ದೀಯಾ. ನಿಮ್ಮ ಕಾರ್ಖಾನೆಯಲ್ಲಿ ಕಾಟಾ ಯಾರು ಹೊಡೆದ್ರಿ? ಕಾರ್ಮಿಕರ ದುಡ್ಡಿನಲ್ಲಿ ಹುಟ್ಟು ಹಬ್ಬ ಆಚರಿಸಿದವರು ಯಾರು? ಎಂದು ಪ್ರಶ್ನಿಸಿದರು. ಈ ಹಿಂದೆ ರಾಜು ಕಾಗೆ ವಿರುದ್ಧ ಭ್ರಷ್ಟಾಚಾರ ಆರೋಪ…












