Author: kannadanewsnow05

ನವದೆಹಲಿ : ಇತ್ತೀಚಿಗೆ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಲೈಂಗಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಆದರೆ ಕಾಮುಕರು ಹೆಣ್ಣು ಮಕ್ಕಳನ್ನು ಅಷ್ಟೇ ಅಲ್ಲದೆ ಇದೀಗ ಪಶುಗಳ ಮೇಲು ದೌರ್ಜನ್ಯ ಎಸಿಗುತ್ತಿದ್ದಾರೆ. ಅಂತ ವಿಡಿಯೋ ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಯತ್ನಾಳ್ ಹಿಂದೂ ಸೇನೆ ಎಂಬ ಪೇಜ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮುಸ್ಲಿಂ ಸಮುದಾಯದ ವ್ಯಕ್ತಿ ಒಬ್ಬ ಹಸುವಿನ ಜೊತೆಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಯಾವ ರಾಜ್ಯದಲ್ಲಿ ನಡೆದಿದೆ ಎಂಬುವುದು ತಿಳಿದುಬಂದಿಲ್ಲ. ಆದರೆ ವಿಡಿಯೋವನ್ನು ಯತ್ನಾಳ್ ಹಿಂದೂ ಸೇನೆ ಎಂಬ ಪೇಜ್ನೊಂದಿಗೆ ಹಂಚಿಕೊಳ್ಳಲಾಗಿದೆ. ಈ ಒಂದು ವಿಡಿಯೋಗೆ ಹಲವಾರು ರೀತಿಯಲ್ಲಿ ಕಮೆಂಟ್ ಮಾಡಿದ್ದು ಒಬ್ಬರು ಮುಸ್ಲಿಮರು ಮಾತ್ರವಲ್ಲ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹಿಂದೂಗಳು ಕೂಡ ಇದೇ ರೀತಿ ಮಾಡಿದ್ದಾರೆ, ಯಾರದೋ ತಪ್ಪನ್ನು ತಮ್ಮ ಸಮುದಾಯಕ್ಕೆ ಲಿಂಕ್ ಮಾಡಬೇಡಿ ಅಂದಿದ್ದು ಇನ್ನೂ ಕೆಲವರು ಇವರಿಗೆ…

Read More

ಬಾಗಲಕೋಟೆ : ಸಾಮಾಜಿಕ ಜಾಲತಾಣಗಳಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಕುರಿತು ಭಕ್ತರು ಪೋಸ್ಟ್ ಒಂದನ್ನು ಹರಿಬಿಟ್ಟಿದ್ದು, ಸದ್ಯ ಭಾರಿ ವೈರಲಾಗುತ್ತಿದೆ. ಪಂಚಮಸಾಲಿ ಶ್ರೀಗಳು ಸಿಎಂ ಆಗಲಿ ಎಂದು ಪೋಸ್ಟ್ ಹರಿಬಿಟ್ಟಿದ್ದು, ಈ ಕುರಿತಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು ನಾನು ರಾಜಕೀಯಕ್ಕೆ ಬರುವುದಿಲ್ಲ. ನಾನು ಕಿಂಗ್ ಆಗಲ್ಲ ಆದರೆ ಕಿಂಗ್ ಮೇಕರ್ ಆಗುತ್ತೇನೆ ಎಂದು ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ಕುರಿತಾಗಿ ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ. ರಾಜಕೀಯ ಮಾಡೋದಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ನಮ್ಮ ಸಮಾಜದ ನಾಯಕರಿದ್ದಾರೆ.ನಮ್ಮ ಮೇಲೆ ಅಭಿಮಾನದಿಂದ ಅಭಿಮಾನಿಗಳು ಭಕ್ತರು ಈ ರೀತಿ ಪೋಸ್ಟ್ ಹಾಕಿದ್ದಾರೆ. ನಾನು ಕಿಂಗ್ ಆಗಲ್ಲ ಕಿಂಗ್ ಮೇಕರ್ ಆಗುತ್ತೇನೆ ಎಂದು ತಿಳಿಸಿದರು. ಇನ್ನು 2A ಮೀಸಲಾತಿ ಹೋರಾಟದ ಕುರಿತು ಮಾತನಾಡಿದ ಅವರು, ಸಮಾಜದ ಜನರ ಭಾವನೆ ಜೊತೆಗೆ ಆಟ ಆಡುವುದನ್ನು ಬಿಡಬೇಕು. ಬಿಜೆಪಿ ಸರ್ಕಾರದಲ್ಲಿ…

Read More

ಚಿಕ್ಕಮಗಳೂರು : ಮಲೆನಾಡು ಭಾಗಗಳಲ್ಲಿ ಕಾಡಾನೆಗಳ ಹಾವಳಿ ಇಷ್ಟು ದಿನ ತಣ್ಣಗಾಗಿತ್ತು. ಇದೀಗ ಕಾಡಾನೆ ದಾಳಿಯಿಂದ ರೈತನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ಬಳಿ ನಡೆದಿದೆ. ಹೌದು ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೀತೂರು ಗ್ರಾಮ ಪಂಚಾಯತಿಯ ಕಚೇರಿ ಬಳಿ ಈ ಒಂದು ಘಟನೆ ನಡೆದಿದ್ದು ಗ್ರಾಮ ಪಂಚಾಯಿತಿ ಬಳಿ ಕಾಡಾನೆ ದಾಳಿಯಿಂದ ರೈತ ಸಾವನ್ನಪ್ಪಿದ್ದಾನೆ. ಕೆರೆಗದ್ದೆ ಗ್ರಾಮದ ನಿವಾಸಿ ಉಮೇಶ್ (55) ಸಾವನ್ನಪ್ಪಿದ್ದಾರೆ. ಗ್ರಾಮ ಪಂಚಾಯಿತಿ ಹಿಂಭಾಗ ನಿಂತಿದ್ದಾಗ ಏಕಾಏಕಿ ಕಾಡಾನೆಗಳ ಹಿಂಡು ದಾಳಿ ಮಾಡಿದೆ. ಕಾಡಾನೆ ದಾಳಿ ಮಾಡಿದರಿಂದ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಕೊಪ್ಪ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವೇಳೆ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದು ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು.

Read More

ಬೆಂಗಳೂರು : ಶಿಕ್ಷಕಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಸ್ಥಾನದಿಂದ ಗುರಪ್ಪನಾಯ್ಡು ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಿ ಕೆಪಿಸಿಸಿ ಶಿಸ್ತು ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ಬಿಜಿಎಸ್ ಬ್ಲೂಮ್‌ಫೀಲ್ಡ್ ಶಾಲೆಯ ಶಿಕ್ಷಕಿಯೊಬ್ಬರ ಮೇಲೆ 2021ರ ಮಾರ್ಚ್ 1ರಿಂದ 2023ರ ಆಗಸ್ಟ್ 15ರವರೆಗೆ ನಾಯ್ಡು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು.ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್‌ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದರು, ಇದೀಗ ಮಹಿಳೆ ನೀಡಿದ ದೂರಿನ ಆದಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ಹಾವೇರಿ : ಜಮೀನು ಒಂದರ ನಕಾಶೆ ನೀಡಲು ವ್ಯಕ್ತಿ ಒಬ್ಬರ ಬಳಿ 15,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಲ್ಯಾಂಡ್ ಸರ್ವೆಯರ್ ಒಬ್ಬ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಗಿ ಬಿದ್ದಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ರೈತ ಮಂಜುನಾಥ ಕಡ್ಲಿ ಅವರು ಹಾವೇರಿ ತಾಲ್ಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ತಮ್ಮ ಜಮೀನು ವಾಟ್ನಿ ಮಾಡಿಸಲು ಅರ್ಜಿ ಸಲ್ಲಿಸಿದ್ದರು. ವಾಟ್ನಿ ಮಾಡಿಸುವುದಕ್ಕೆ ಜಮೀನು ನಕಾಶೆ ಅಗತ್ಯವಿತ್ತು ಹಾಗಾಗಿ ಹಾವೇರಿ ತಾಲ್ಲೂಕು ಭೂ ದಾಖಲೆಗಳ ಸಹಾಯಕ ಕಚೇರಿಯ ಭೂಮಾಪಕ ಅಶೋಕ ಎಚ್.ಜಿ ಎನ್ನುವವರ ಬಳಿ ಮಂಜುನಾಥ್ ಅರ್ಜಿ ಸಲ್ಲಿಸಿದ್ದರು. ನಕಾಶೆ ನೀಡಲು ಅಶೋಕ 30 ಸಾವಿರ ರೂ.ಕೇಳಿದ್ದ. ಅಷ್ಟು ಹಣವಿಲ್ಲವೆಂದು ರೈತ ಹೇಳಿದ್ದರು. ನಂತರ, 25 ಸಾವಿರಕ್ಕೆ ಮಾತುಕತೆ ಆಗಿತ್ತು. ಈ ಬಗ್ಗೆ ಮಂಜುನಾಥ ಅವರು ಕಚೇರಿಗೆ ದೂರು ಸಲ್ಲಿಸಿದ್ದರು. ಶನಿವಾರ ಮುಂಗಡವಾಗಿ 15 ಸಾವಿರ ಲಂಚ ಪಡೆಯುವ ಸಂದರ್ಭದಲ್ಲಿ ದಾಳಿ ಮಾಡಿ ಅಶೋಕ ಅವರನ್ನು ಪುರಾವೆ ಸಮೇತ ಸೆರೆ ಹಿಡಿಯಲಾಗಿದೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಬಳ್ಳಾರಿಯಲಿ ನಿರಂತರವಾಗಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಸಂಜೆ 4:30 ಗಂಟೆಗೆ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಹೌದು ಬಳ್ಳಾರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದಾರೆ. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ತನಿಖಾ ತಂಡ ರಚನೆ ಮಾಡಿ ವರದಿ ತರಿಸಿಕೊಂಡಿತು. ತನಿಖೆಯಲ್ಲಿ ಬಾಣಂತಿಯರಿಗೆ ಐವಿ ಗ್ಲುಕೋಸ್ ನೀಡಿದ ಪರಿಣಾಮ ಅವರು ಸಾವನಪ್ಪಿದ್ದಾರೆ ಎಂದು ತನಿಖಾ ವರದಿಯು ತಿಳಿಸಿದೆ. ಹೀಗಾಗಿ ಇಂದು ಸಂಜೆ 4:30 ಗಂಟೆಗೆ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದು ಈ ಒಂದು ಸಭೆಯಲ್ಲಿ ಆರೋಗ್ಯ ಇಲಾಖೆಯ ಸಚಿವ ದಿನೇಶ್ ಗುಂಡುರಾವ್ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಳಗಾವಿ : ಬಳ್ಳಾರಿಯಲ್ಲಿ ಬಾಣಂತಿಯರ ಸಾವಿಗೆ ರಾಜ್ಯ ಸರ್ಕಾರ ತನಿಖಾ ತಂಡ ರಚನೆ ಮಾಡಿತ್ತು. ಐ ವಿ ಗ್ಲುಕೋಸ್ ನಿಂದ ಬಾಣಂತಿಯರ ಸಾವು ಆಗಿದೆ ಎಂದು ತನಿಖಾ ವರದಿಯಲ್ಲಿ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಬೆಳಗಾವಿಯ ಜಿಲ್ಲಾ ಔಷಧ ಉಗ್ರಾಣದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಇದೀಗ ಆರ್‌ಎಲ್‌ಎಸ್‌ ಐವಿ ಗ್ಲುಕೋಸ್ ಬಾಕ್ಸ್ ಕಂಡು ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹೌದು ಬೆಳಗಾವಿ ಜಿಲ್ಲಾ ಔಷಧ ಉಗ್ರಾಣದಲ್ಲಿ ಐವಿ ಗ್ಲುಕೋಸ್ ಪತ್ತೆಯಾಗಿದೆ.ಖಚಿತ ಮಾಹಿತಿಯನ್ನು ಆಧರಿಸಿ ಉಗ್ರಾಣದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿಯ ವೇಳೆ ಡೇಟ್ ಬಾರ್ ಆಗಿರುವಂತ ‘RLS IV ಗ್ಲುಕೋಸ್’ ಇದ್ದಂತಹ ಹತ್ತಾರು ಬಾಕ್ಸ್ ಗಳು ಪತ್ತೆಯಾಗಿವೆ.ಕಳೆದ ಏಪ್ರಿಲ್ ತಿಂಗಳಿನಿಂದಲೇ RLS IV ಗ್ಲುಕೋಸ್ ಪೂರೈಕೆ ಆಗಿದೆ. ಕಳೆದೊಂದು ಗಂಟೆಯಿಂದ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ 8 ಅಧಿಕಾರಿಗಳಿಂದ ದಾಳಿ ಮಾಡಿದ್ದು, ಉಗ್ರಾಣದಲ್ಲಿ ಪರಿಶೀಲನೆ ಮುಂದುವರೆದಿದೆ. ಪಿಬಿಪಿ ಸಂಸ್ಥೆ ಸರಬರಾಜು ಮಾಡಿರುವ…

Read More

ರಾಮನಗರ : ಯಾರು ಕಣ್ಣೀರು ಹಾಕಬಾರದು ನಾವು ಸತ್ತಿಲ್ಲ ಸೋತಿದ್ದೇವೆ ಅಷ್ಟೇ. ಜೆಡಿಎಸ್ ಕಾರ್ಯಕರ್ತರು ಯಾರು ಧೃತಿಗೆಡಬಾರದು. ಸೋತ ಬಳಿಕವೂ ಇಷ್ಟೊಂದು ಪ್ರಮಾಣದಲ್ಲಿ ಜನ ಸೇರುತ್ತಾರೆ ಎಂದು ಊಹಿಸಿರಲಿಲ್ಲ ಎಂದು ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ ಪರಾಜಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಿಳಿಸಿದರು. ಇಂದು ರಾಮನಗರ ಜಿಲ್ಲೆಯ ಚೆನ್ನಪಟ್ಟಣದಲ್ಲಿ ಜೆಡಿಎಸ್ ಕೃತಜ್ಞತಾ ಕಾರ್ಯಕ್ರಮದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದರು. ಮೂರು ಚುನಾವಣೆ ಸೋತಿರಬಹುದು ಆದರೆ ಎದೆಗುಂದಿಲ್ಲ ಎದೆಗುಂದೊದು ಇಲ್ಲ. ಸೋತ ಬಳಿಕವೂ ಇಷ್ಟು ಜನ ಸೇರುತ್ತಾರೆಂದು ಊಹೆ ಮಾಡಿರಲಿಲ್ಲ. ಚನ್ನಪಟ್ಟಣ ಕಾರ್ಯಕರ್ತರು ಧೃತಿಗೆಡುವುದಿಲ್ಲ. ಯಾರು ಕಣ್ಣೀರು ಹಾಕಬಾರದು ನಾವು ಸತ್ತಿಲ್ಲ ಸೋತಿದ್ದೇವೆ ಅಷ್ಟೇ. ಜೆಡಿಎಸ್ ಪಕ್ಷವನ್ನು ಯಾರು ಮುಗಿಸಲು ಸಾಧ್ಯವಿಲ್ಲ. ನಾನು ಸೋತಿದ್ದೇನೆ ಅಂತ ನನ್ನ ಮಾತನ್ನು ವಾಪಸ್ ಪಡೆಯಲ್ಲ. ಉಪಚುನಾವಣೆಯ ಫಲಿತಾಂಶ ಯಾರು ನಿರೀಕ್ಷೆ ಮಾಡಿರಲಿಲ್ಲ. ಕಾರ್ಯಕರ್ತರು ಹಗಲು ರಾತ್ರಿ ಉತ್ಸಾಹದಿಂದ ಕೆಲಸ ಮಾಡಿದ್ದಾರೆ. ಜಯಮುತ್ತು ತಮ್ಮ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು. ಈ ಫಲಿತಾಂಶದಿಂದ ಎಲ್ಲರೂ ಹೊರಬರಬೇಕಿದೆ. ಜೆಡಿಎಸ್ ಅಭಿಮಾನಿಗಳು, ಇಡೀ…

Read More

ಬೆಳಗಾವಿ : ತನ್ನ ಪಾಡಿಗೆ ತಾನು ಎಗ್ ರೈಸ್ ಅಂಗಡಿ ನಡೆಸಿಕೊಂಡು ಹೋಗುತ್ತಿದ್ದ ಯುವಕನನ್ನು ಐವರು ಯುವಕರ ಗ್ಯಾಂಗ್ ಒಂದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ನಡೆದಿದೆ. ಮುರಗೋಡ ಗ್ರಾಮದಲ್ಲಿ ಸೋಹೇಲ್ ಅಹಮದ್ (17) ಎನ್ನುವ ಯುವಕನನ್ನು ಕೊಲೆ ಮಾಡಲಾಗಿದೆ. ಊರಿನಲ್ಲಿ ಸೋಹೇಲ್ ಅಹ್ಮಫ್ ಎಗ್ ರೈಸ್ ಅಂಗಡಿಯನ್ನು ನಡೆಸಿಕೊಂಡು ಹೋಗುತ್ತಿದ್ದ. ಐವರು ಯುವಕರ ಗ್ಯಾಂಗ್ ನಿಂದ ಸೋಹೈಲ್ ಅಹ್ಮದ್ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ ಕೊಲೆಗೂ ಮುನ್ನ ಸೋಹಲ್ ಗೆ ಜೀವ ಬೆದರಿಕೆ ಹಾಕಿರುವ ಕುರಿತು ಮಾಹಿತಿ ಬಂದಿದೆ. ಸೋಹೈಲ್ ಅಹ್ಮದ್ ಕೊಲೆಗೆ ಸಂಬಂಧಪಟ್ಟಂತೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳುಚ್ಚು ತಜ್ಞರ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದರೆ ಎಂದು ತಿಳಿದುಬಂದಿದೆ.

Read More

ಮಂಗಳೂರು : ಇತ್ತೀಚಿಗೆ ಕಾಫಿ ನಾಡು ಕೃಷ್ಣ ನಗರಿಯಲ್ಲಿ ನಕ್ಸಲರ ಹೆಜ್ಜೆ ಗುರುತು ಸಿಕ್ಕ 15 20 ದಿನದಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎಎನ್ಎಫ್ ಗುಂಡಿಗೆ ಕಾಡಿನಲ್ಲಿಯೇ ಹತನಾಗಿದ್ದ, ಇದೀಗ ಚಿಕ್ಕಮಂಗಳೂರು ಜಿಲ್ಲೆ ಸುತ್ತಮುತ್ತ ಇನ್ನು ಕರ್ನಾಟಕದ ಇವರು ನಕ್ಸಲರಿಗಾಗಿ ಶೋಧ ನಡೆಸುತ್ತಿದೆ. ಇದರ ಬೆನ್ನಲ್ಲೇ ಗೃಹ ಸಚಿವ ಜಿ ಪರಮೇಶ್ವರ್ ಅವರು ನಕ್ಸಲರು ಶರಣಾದರೆ ಅವರಿಗೆ ಪ್ಯಾಕೇಜ್ ನೀಡುತ್ತೇವೆ ಎಂದು ತಿಳಿಸಿದರು. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಕ್ಸಲರು ಶರಣಾಗತಿ ಆದರೆ ಅವರಿಗೆ ಪ್ಯಾಕೇಜ್ ನೀಡುತ್ತೇವೆ. ಶರಣಾದ ಬಳಿಕ ಸರಳ ಜೀವನ ನಡೆಸಲು ಅವರಿಗೆ ಪ್ಯಾಕೇಜ್ ನೀಡಲಾಗುತ್ತದೆ.ನಕ್ಸಲರು ಮತ್ತು ಅವರ ಜೊತೆಗೆ ಇರೋರನ್ನು ಶರಣಾಗವುಂತೆ ಹೇಳಿದ್ದೇವೆ. ಒಂದು ವೇಳೆ ಏನಾದರೂ ಸರಳ ಜೀವನ ನಡೆಸಲು ಪ್ಯಾಕೇಜ್ ನೀಡುತ್ತೇವೆ ಎಂದು ತಿಳಿಸಿದರು. ಮುಂದುವರೆದ ‘ಕೂಂಬಿಂಗ್’ ಕಾರ್ಯಾಚರಣೆ ಒಂದೂವರೆ ತಿಂಗಳ ಹಿಂದೆ ಕೇರಳದಿಂದ ಬಂದ ನಕ್ಸಲರು 2 ತಂಡ ಮಾಡಿಕೊಂಡು ಉಡುಪಿ-ಚಿಕ್ಕಮಗಳೂರು ಸೇರಿದ್ದರು. ಮುಂಡಗಾರು ಲತಾ ಕಾಡಲ್ಲಿ ಕಾಣೆಯಾದ ಬೆನ್ನಲ್ಲೇ ವಿಕ್ರಂಗೌಡ…

Read More