Author: kannadanewsnow05

ಹಾವೇರಿ : ಪ್ರಧಾನಿ ಮೋದಿ ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ 700 ಕೋಟಿ ರೂ. ಆರೋಪ ಮಾಡಿದ್ದಾರೆ. ಈ ಆರೋಪವನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿಯಾಗುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆರೋಪ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ನೀವು ರಾಜಕೀಯ ನಿವೃತ್ತಿಯಾಗಬೇಕು ಎಂದು ಮೋದಿಗೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಹೌದು ಹಾವೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ವೇಳೆ ಪ್ರಧಾನಿ ಮೋದಿ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕದ ಅಬಕಾರಿ ಇಲಾಖೆಯಿಂದ 700 ಕೋಟಿ ರೂ. ಲೂಟಿ ಮಾಡಿದೆ ಎಂಬ ಆರೋಪವನ್ನು ಪ್ರಧಾನಿ ನರೇಂದ್ರ ಮೋದಿ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿಯಾಗುವೆ.ಒಂದು ವೇಳೆ ಆರೋಪ ಸಾಬೀತು ಪಡಿಸಲು ಆಗದಿದ್ದರೆ ನೀವು ರಾಜಕೀಯ ನಿವೃತ್ತಿಯಾಗಬೇಕು ಎಂದು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ನೇರ ಸವಾಲು ಹಾಕಿದ್ದಾರೆ.

Read More

ಹಾವೇರಿ : ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ ಶೂರನೂ ಅಲ್ಲ. ಅಧಿಕಾರದಲ್ಲಿದ್ದಾಗ ಏನೂ ಹರಿಯಲು ಆಗಲಿಲ್ಲ. ಈಗ ಹರಿತೀವಿ ಅಂತ ಅಂದ್ರೆ ಏನು ಹೇಳೋದು? ನಾನು ಅದಕ್ಕೆ ಹೇಳೋದು ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ ಕೈ ಅಧಿಕಾರದಲ್ಲಿದ್ರೆ ಚೆಂದ. ಹೀಗಾಗಿ ದಯವಿಟ್ಟು ನಮ್ಮ ಅಭ್ಯರ್ಥಿಗೆ ಕ್ಷೇತ್ರದ ಜನರು ಆಶೀರ್ವಾದ ಮಾಡಬೇಕು. ಯಾಸೀರ್ ಖಾನ್ ಪಠಾಣ್ ಗೆ ಮತ ನೀಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ  ಮಾಡಿದರು. ಇಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಅವರ ಪರವಾಗಿ ಮತಯಾಚನೆ ಮಾಡಿದ ಶಿವಕುಮಾರ್ ಅವರು, ಎಚ್ ಡಿ ಕುಮಾರಸ್ವಾಮಿ ದೇವೇಗೌಡರು ಈ ಸರ್ಕಾರ ಕಿತ್ತಾಕಿ ಬಿಡುತ್ತಾರಂತೆ ಸರ್ಕಾರಕ್ಕೆ ಏನು ಕಡಲೆಕಾಯಿ ಗಿಡವೇ? ಎಚ್ ಡಿ ಕುಮಾರಸ್ವಾಮಿ ವಿಜಯೇಂದ್ರ ಗೆ ಹೇಳುತ್ತಿದ್ದೇನೆ ಸರ್ಕಾರ ಕಿತ್ತಾಕೊಗೆ ಆಗಲ್ಲ ಎಂದು ಅವರು ತಿಳಿಸಿದರು. ಸಿದ್ದರಾಮಯ್ಯ ಸಿಎಂ ಇದ್ದಾಗ ಯಾರೂ ಹಸಿದುಕೊಂಡು ಇರಬಾರದು ಅಂತ ಅನ್ನಭಾಗ್ಯ ಯೋಜನೆ ತಂದರು. ಈಗಲೂ…

Read More

ರಾಮನಗರ : ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಉಭಯ ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆಯುತ್ತಿದ್ದು, ಇದೀಗ ರಾಮನಗರ ಜಿಲ್ಲೆಯ ಚೆನ್ನಪಟ್ಟಣದ ದಶವಾರ ಗ್ರಾಮದಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದು, 3 ವಿಧಾನಸಭಾ ಉಪಚುನಾವಣೆಗೆ ಕೋಟಿ ರೂಪಾಯಿ ಹಣ ಬಳಸಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದರು. ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, NDS ಅಭ್ಯರ್ಥಿ ನಿಖಿಲ್ ಗೆ ಬೆಂಬಲ ನೀಡಿದರೆ ಮೋದಿಗೆ ಬೆಂಬಲ ನೀಡಿದಂತೆ.ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಬೇಕು ಅನ್ನೋದು ಎಲ್ಲರ ಆಶಯವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಜನರಿಗೆ ಟೋಪಿ ಹಾಕುತ್ತಿದೆ. ರೈತಪರ ಸರ್ಕಾರ ಎಂದು ಹೇಳುತ್ತಿರುವವರು ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದರು. ಬೆಂಗಳೂರು ಮುಳುಗುತ್ತಿದೆ. ಸರ್ಕಾರ ಏನು ಮಾಡುತ್ತಿದೆ. ರಾಜ್ಯದಲ್ಲಿರುವುದು ಕಾಪರ್ ಸರ್ಕಾರ. ನೀವು ಯಾಮಾರಿದರೆ ಮುಂದೆ ಮತ್ತಷ್ಟು ತೆರಿಗೆ ವಿಧಿಸುತ್ತಾರೆ. ಪ್ರತಿ ಬಾರ್ಗು ಅಮೌಂಟ್ ಫಿಕ್ಸ್ ಮಾಡಿದ್ದಾರೆ. ಭಾರ ಗಳಿಂದ ವರ್ಷಕ್ಕೆ 900…

Read More

ತುಮಕೂರು : ತಾಯಿಯೇ ಮೊದಲ ಗುರು ಮನೆಯೇ ಮೊದಲ ಪಾಠ ಶಾಲೆ ಎಂದು ನಾವು ಚಿಕ್ಕವರಿಂದ ನಮ್ಮ ಗುರು ಹಿರಿಯರು ಹೇಳಿ ಕೊಟ್ಟ ದಾರಿಯಲ್ಲಿ ನಡೆದು ಬಂದಿದ್ದೇವೆ. ಆದರೆ ಇಲ್ಲೊಂದು ಘಟನೆಯಲ್ಲಿ ಮಗನೊಬ್ಬ ಡ್ರಗ್ಸ್ ಗೆ ಸಂಪೂರ್ಣವಾಗಿ ದಾಸನಾಗಿದ್ದ ಇದರಿಂದ ಬೇಸತ್ತ ತಾಯಿ ಒಬ್ಬರು ಇವನನ್ನು ಜೈಲಿಗೆ ಕಳುಹಿಸಿ ಇಲ್ಲವಾದರೆ ಇವನನ್ನು ಕೊಲ್ಲಲು ನನಗೆ ಅನುಮತಿ ಆದರೂ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಹೌದು ಮಾದಕ ವಸ್ತುಗಳಿಗೆ ತುಮಕೂರಿನ ರೇಣುಕಮ್ಮ ಎನ್ನುವವರ ಮಗ ಅಭಿ ಎನ್ನುವ ಯುವಕ ಡ್ರಗ್ಸ್ ವ್ಯಸನಿಯಾದ ಹಿನ್ನೆಲೆಯಲ್ಲಿ ಬೇಸತ್ತ ತಾಯಿಯೊಬ್ಬರು, ದಯಮಾಡಿ ಪುತ್ರನನ್ನು ಜೈಲಿಗೆ ಹಾಕಿ, ಇಲ್ಲವೇ ಅವನನ್ನು ಸಾಯಿಸಲು ನನಗೆ ಅನುಮತಿ ಕೊಡಿ ಎಂದು ಪೊಲೀಸರನ್ನು ಬೇಡಿಕೊಂಡಿರುವುದು ತುಮಕೂರು ಜಿಲ್ಲೆಯ ತುರುವೇಕರೆಯಲ್ಲಿ ನಡೆದಿದೆ. ಸಾರ್ ನನ್ ಮಗ ಸರಿಯಿಲ್ಲ. ಗಾಂಜಾ ಹೊಡೀತಾನೆ, ಡ್ರಗ್ಸ್ ತಗೋತಾನೆ, ಸಿಕ್ಕ ಸಿಕ್ಕವರ ಮೇಲೆ ಹೊಡೆದಾಟಕ್ಕೆ ಹೋಗ್ತಾನೆ. ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತಾಡ್ತಾನೆ. ಕೀಟಲೆ ಮಾಡ್ತಾನೆ. ಜನರ ಕೈಲಿ ಒದೆ…

Read More

ಮಂಗಳೂರು : ಕಾರವಾರದ ಕೋಡಿ ನದಿ ಬಳಿ ಸುತ್ತಮುತ್ತಲು ಕಳೆದ ಐದು ದಿನಗಳಿಂದ ರಣ ಹದ್ದು ಒಂದು ಹಾರಾಡುತ್ತಿದೆ. ಸುಮ್ಮನೆ ಹಾರಾಡುತ್ತಿದ್ದರೆ ಯಾರು ಭಯಪಡುವ ಅಗತ್ಯವಿಲ್ಲ. ಆದರೆ ರಣಹದ್ದಿಗೆ ಜಿಪಿಎಸ್ ಟ್ರಾನ್ಸ್ಮಿಟರ್ ಹಾಗೂ ಟ್ಯಾಗ್ ಅಳವಡಿಕೆಯಾಗಿದ್ದು ಸಹಜವಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಹೌದು ಜಿಪಿಎಸ್ ಟ್ರಾನ್ಸ್ಮಿಟರ್ ಟ್ಯಾಗ್ ಹೊಂದಿದ್ದ ರಣಹದ್ದು ಕೊಡಿ ನದಿ ಸುತ್ತ ಹಾರಾಡಿದೆ. ಕಳೆದ ಐದು ದಿನಗಳಿಂದ ಟ್ಯಾಗ್ ಇದ್ದ ರಣಹದ್ದು ಹಾರಾಡುತ್ತಿದೆ. ರಣಹದ್ದಿನ ಮೇಲಿನ ಟ್ಯಾಗ್ ನೋಡಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಶತ್ರುದೇಶ ಅಥವಾ ಉಗ್ರಸಂಘಟನೆಗಳ ಹದ್ದು ಎಂದು ಮಾಹಿತಿ ತಿಳಿದು ವಿವಿಧ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದಾರೆ. ಸ್ಥಳಕ್ಕೆ ಬಂದ ರಾಜ್ಯ ಮತ್ತು ಕೇಂದ್ರ ಗುಪ್ತಚರ ಅಧಿಕಾರಿಗಳು ಬಂದಿದ್ದಾರೆ. ಅಸಲಿ ಸತ್ಯನೇ ಬೇರೆ ರಣಹದ್ದು ಟ್ಯಾಗ್ ಹಾಗೂ ಜಿಪಿಎಸ್ ಅಳವಡಿಕೆಯಿಂದ ಕಾರವಾರದಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಪರಿಶೀಲನೆ ವೇಳೆ ಟ್ರಾನ್ಸ್ಮಿಟರ್ ಮೇಲಿನ ಮಾಹಿತಿ ಬಹಿರಂಗವಾಗಿದೆ. Mahaforest.gov.in ಎಂದು ಟ್ರಾನ್ಸ್ ಮೀಟರ್ ಮೇಲೆ ಬರೆದಿದೆ. ಸಂಶೋಧನೆಗಾಗಿ ಈ ಒಂದು…

Read More

ಮಂಗಳೂರು : ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸಿಕೊಳ್ಳುವ ಸಂದರ್ಭದಲ್ಲಿ ಅಲ್ಲಿ ಕೆಲವು ಚಿಹ್ನೆಗಳನ್ನು ನಾವು ನೋಡುತ್ತೇವೆ. ಮೊಬೈಲ್ ಆನ್ ಮಾಡಬಾರದು, ಸಿಗರೇಟ್ ಸೇದಬಾರದು ಹಾಗೂ ಇನ್ನು ಹಲವು ಚಿಹ್ನೆಗಳನ್ನ ನೋಡಿರುತ್ತೇವೆ. ಅವೆಲ್ಲ ಮುನ್ನೆಚ್ಚರಿಕೆ ಕ್ರಮವಾಗಿ ಹಾಕಿರುತ್ತಾರೆ. ಇದೀಗ ಮಂಗಳೂರಿನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳುತ್ತಿರುವಾಗಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಹೌದು ಪೆಟ್ರೋಲ್ ಬಂಕ್ ನಲ್ಲಿ ಮಾರುತಿ 800 ಕಾರೊಂದು ಹೊತ್ತಿ ಉರಿದಿದೆ. ಮಂಗಳೂರಿನ ಲೇಡಿ ಹಿಲ್ ನ ಪೆಟ್ರೋಲ್ ಬಂಕ್ ನಲ್ಲಿ ಈ ಒಂದು ಘಟನೆ ನಡೆದಿದೆ. ಪೆಟ್ರೋಲ್ ಹಾಕಿಸುತ್ತಿದ್ದ ಸಂದರ್ಭದಲ್ಲಿ ಮಾರುತಿ 800 ಕಾರ್ ಒಂದು ಹೊತ್ತಿ ಉರಿದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಕಾರಿನಿಂದ ತಕ್ಷಣ ಹೊರಬಂದು ಬಚಾವ್ ಆಗಿದ್ದಾನೆ. ಪಾರ್ಶ್ವನಾಥ ಎನ್ನುವವರಿಗೆ ಮಾರುತಿ 800 ಕಾರು ಸೇರಿದೆ. ಕೂಡಲೇ ಪೆಟ್ರೋಲ್ ಬಂಕ್ ಸಿಬ್ಬಂದಿ ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Read More

ಹುಬ್ಬಳ್ಳಿ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ವಿಚಾರದಲ್ಲಿ ತಹಶೀಲ್ದಾರ್ ಹಣ ಪಾವತಿಸಿದ್ದಾರೆ. ಮುದ್ರಾಂಕ ಶುಲ್ಕವನ್ನು ತಹಶೀಲ್ದಾರ್ ಅವರೇ ಪಾವತಿ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬರಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ನೇಹಮಯಿ ಕೃಷ್ಣ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸೈಟ್ ನೋಂದಣಿಗೆ ಚೆಕ್ ಮೂಲಕ ಹಣ ಕೊಟ್ಟಿದ್ದಾರ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ದಾನ ಪತ್ರ ಮಾಡೋಕೆ ನನ್ನ ಭಾಮೈದ ನೋಂದಣಿ ಶುಲ್ಕ ಪಾವತಿಸಿದ್ದ.ತಹಶೀಲ್ದಾರ್ ಉಪ ವಿಭಾಗಾಧಿಕಾರಿ ಯಾಕೆ ಶುಲ್ಕ ಪಾವತಿಸುತ್ತಾರೆ ಸುಮ್ಮನೆ ಏನೋ ಹೇಳುತ್ತಾರೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು. ಸ್ನೇಹಮಯಿ ಕೃಷ್ಣ ಆರೋಪವೇನು? ಸ್ನೇಹಮಯಿ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಮುಡಾ ಪ್ರಕರಣದಲ್ಲಿ ತಮ್ಮ ಪ್ರಭಾವ ಬೀರಿಲ್ಲ ಎಂದು ಹೇಳುವ ಸಿದ್ದರಾಮಯ್ಯನವರಿಗೆ, ನಿಮ್ಮ ಪ್ರಭಾವ ಬೀರಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಕೊಡುತ್ತಿದ್ದೇನೆ…

Read More

ಮಂಗಳೂರು : ಇತ್ತೀಚಿಗೆ ಗದಗದಲ್ಲಿ ಮೂರು ಮಕ್ಕಳನ್ನು ನದಿಗೆ ತಳ್ಳಿ ತಂದೆಯೊಬ್ಬ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಇದೀಗ ಅಂತದ್ದೇ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಮಗುವಿನ ಜೊತೆ ಫಲ್ಗುಣಿ ನದಿಗೆ ಹಾರಿ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ತಂದೆ ಹಾಗೂ ಎರಡು ವರ್ಷದ ಮಗುವನ್ನು ರಕ್ಷಣೆ ಮಾಡದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಗುರುಪುರ ಎಂಬಲ್ಲಿ ಒಂದು ಘಟನೆ ನಡೆದಿದೆ. ಹೌದು ಮಗುವಿನ ಜೊತೆಗೆ ನದಿಗೆ ಹಾರಿ ತಂದೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಂಗಳೂರು ಹೊರವಲಯದ ಗುರುಪುರದಲ್ಲಿ ಈ ಒಂದು ಘಟನೆ ನಡೆದಿದೆ. ಹಾರುವ ಮೊದಲೇ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ. ಕೈಕಂಬ ನಿವಾಸಿ ಸಂದೀಪ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎಂದು ತಿಳಿದು ಬಂದಿದೆ. ಎರಡು ವರ್ಷದ ಮಗುವಿನ ಜೊತೆಗೆ ಹಾರಲು ಯತ್ನಿಸಿದ್ದಾನೆ.ಕೂಡಲೇ ಸ್ಥಳೀಯರು ನೋಡಿ ತಂದೆ ಹಾಗೂ ಮಗುವನ್ನು ರಕ್ಷಿಸಿದ್ದಾರೆ. ತಂದೆ ಹಾಗೂ ಮಗನು ರಕ್ಷಿಸಿದ ಸ್ಥಳೀಯರು, ಬಳಿಕ ಸಂದೀಪ್ ಗೆ ಬುದ್ಧಿವಾದ ಹೇಳಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ…

Read More

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶವನ್ನು ಸಚಿವ ಜಮೀರ್ ಅಹ್ಮದ್ ಖಾನ್ ರಾಜಕೀಯ ತೀರ್ಪು ಎಂದು ಕರೆದಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯಪಾಲರು ಸಚಿವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅಡ್ವೋಕೇಟ್ ಜನರಲ್ ಗೆ ಪತ್ರ ಬರೆದಿದ್ದಾರೆ. ಹೌದು ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅಡ್ವೊಕೇಟ್ ಜನರಲ್ ಅವರ ಮನವಿಯನ್ನು ಪರಿಗಣಿಸುವಂತೆ ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಮನವಿ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಹೈಕೋರ್ಟ್ ಆದೇಶದ ನಂತರ, ಕರ್ನಾಟಕ ವಸತಿ ಮತ್ತು ವಕ್ಫ್ ಸಚಿವ ಬಿ ಝಡ್ ಜಮೀರ್ ಅಹಮದ್ ಖಾನ್ ಇದು ನಿಮ್ಮೆಲ್ಲರ ಮುಂದೆ ರಾಜಕೀಯ ತೀರ್ಪು ಎಂದು ಬಹಿರಂಗವಾಗಿ ಕರೆದಿದ್ದಾರೆ ಎಂದು ಅಬ್ರಾಹಂ ತಿಳಿಸಿದ್ದರು. ಅಬ್ರಾಹಂ ನೀಡಿದ ದೂರಿನ ಹಿನ್ನಲೆಯಲ್ಲಿ ರಾಜ್ಯಪಾಲರು ಅಡ್ವೋಕೇಟ್ ಜನರಲ್ ಗೆ ಪತ್ರ ಬರೆದು, ಮುಂದಿನ…

Read More

ರಾಮನಗರ : ಚನ್ನಪಟ್ಟಣ ಉಪ ಚುನಾವಣೆಗೆ ಸ್ಟೀಲ್ ಕಂಪನಿಯ ಹಣ ಬರುತ್ತಿದೆಯಾ ಎನ್ನುವುದರ ಕುರಿತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಚೆಲುವರಾಯಸ್ವಾಮಿ ಗಂಭೀರವಾದಂತಹ ಆರೋಪ ಮಾಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆಗಾಗಿ ಸ್ಟೀಲ್ ಕಂಪನಿಯ ಜೊತೆಗೆ ಯಾವ ಸಂಬಂಧ ಬೆಳೆಸುತ್ತಿದ್ದಾರೆ ಎಂದು ಎಲ್ಲವೂ ನಮಗೂ ಗೊತ್ತಿದೆ. ಉಪಚುನಾವಣೆಗಾಗಿ ಫಂಡ್ ಹೇಗೆ ಕಲೆಕ್ಟ್ ಮಾಡುತ್ತಾರೆ ಅನ್ನೋದು ಗೊತ್ತು. ಒಬ್ಬರ ಬಗ್ಗೆ ಕುಮಾರಸ್ವಾಮಿ ಲಘುವಾಗಿ ಮಾತನಾಡುವುದನ್ನು ಬಿಡಬೇಕು. ಎಚ್ ಡಿ ಕುಮಾರಸ್ವಾಮಿ ಬಗ್ಗೆಯೂ ಎಲ್ಲವೂ ಗೊತ್ತಿದೆ.ಆ ಬಗ್ಗೆ ನಾವು ಮಾತನಾಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚೆಲುವರಾಯಸ್ವಾಮಿ ಆಕ್ರೋಶ ಅವರ ಹಾಕಿದರು.

Read More