Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಹಾಸನ : ಹಾಸನದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಪತ್ನಿಯ ಮೇಲೆ ಅನುಮಾನಕ್ಕೆ ಪತಿಯೊಬ್ಬ ಪತ್ನಿಯ ಕತ್ತು ಸಿಳಿ ಭೀಕರವಾಗಿ ಕೊಂದು ಬಳಿಕ ಮನೆಗೆ ಬೇಗ ಹಾಕಿಕೊಂಡು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೂಡಿಗೆ ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಕೌಟುಂಬಿಕ ಕಲಹದಿಂದ ಪತ್ನಿ ಕತ್ತು ಸೀಳಿ ಭೀಕರವಾಗಿ ಪತಿ ಕೊಲೆಗೈದಿದ್ದಾನೆ. ಹಾಸನದ ಸಕಲೇಶಪುರದ ಹಿರಿಯೂರು ಕೂಡಿಗೆ ಎಂಬಲ್ಲಿ ಈ ಒಂದು ಕೊಲೆ ನಡೆದಿದೆ. ಪತ್ನಿ ಮಂಜುಳಾಳನ್ನು ಹತ್ಯೆಗೈದ ಬಳಿಕ ಪತಿ ಯೋಗೇಶ್ ಮನೆಗೆ ಬೇಗ ಹಾಕಿ ಪರಾರಿ ಆಗಿದ್ದಾನೆ. ಪತ್ನಿ ಮೇಲಿನ ಅನುಮಾನದಿಂದ ಪತಿ ಹತ್ಯೆಗೈದಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಘಟನೆ ಕುರಿತು ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಾಯಚೂರು : ಬೊಲೆರೋ ವಾಹನವೊಂದು ಪಲ್ಟಿಯಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಚಂದ್ರಬಂಡ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಬೊಲೆರೋ ವಾಹನದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಹೊನ್ನಪ್ಪ ಎಂದಿನಂತೆ ಶಾಲೆಗೆ ತೆರಳುತ್ತಿದ್ದ. ಮೃತ ವಿದ್ಯಾರ್ಥಿ ಗಣಮೂರು ಗ್ರಾಮದ ನಿವಾಸಿಯಾಗಿದ್ದಾನೆ. ಚಂದ್ರಬಂಡದ ಬಳಿ ಬೊಲೆರೋ ವಾಹನದಲ್ಲಿ ಬರುವಾಗ ಪಲ್ಟಿಯಾಗಿ ವಿದ್ಯಾರ್ಥಿ ಹೊನ್ನಪ್ಪ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
BREAKING : ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಹಾಡಹಗಲೆ ವ್ಯಕ್ತಿಯ ಭೀಕರ ಮರ್ಡರ್ : ಮೊಬೈಲ್ ಗೋಸ್ಕರ ಚಾಕು ಇರಿದು ಹತ್ಯೆ!
ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಹಾಡಹಗಲೇ ಭೀಕರವಾದ ಕೊಲೆ ನಡೆದಿದ್ದು, ಕೇವಲ ಮೊಬೈಲ್ಗಾಗಿ ಚಂದ್ರಪ್ಪ ಎನ್ನುವ ವ್ಯಕ್ತಿಯನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದಾರೆ ಬೆಂಗಳೂರಿನ ಮೆಜೆಸ್ಟಿಕ್ ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಈ ಕೊಳೆ ನಡೆದಿದೆ. ಬೆಂಗಳೂರಿನ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಂದ್ರಪ್ಪ ಎನ್ನುವ ವ್ಯಕ್ತಿಯ ಬಳಿ ಮೊಬೈಲ್ ಕಿತ್ತುಕೊಳ್ಳಲು ಇಬ್ಬರು ವ್ಯಕ್ತಿಗಳು ಮುಂದಾಗಿದ್ದಾರೆ.ಈ ವೇಳೆ ಚಂದ್ರಪ್ಪ ಎನ್ನುವ ವ್ಯಕ್ತಿ ವಿರೋಧ ವ್ಯಕ್ತಪಡಿಸಿದಾಗ ವಿಜಯ ಮತ್ತು ಆತನ ಗ್ಯಾಂಗ್ ಚಂದ್ರಪ್ಪನ ಮೇಲೆ ಚಾಕು ಇರಿದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಮೃತ ಚಂದ್ರಪ್ಪ ಕಾಮಾಕ್ಷಿಪಾಳ್ಯ ನಿವಾಸಿಯಾಗಿದ್ದು ಟೆಲರಿಂಗ್ ಕೆಲಸ ಮಾಡುತ್ತಿದ್ದ ಅಲ್ಲದೆ ಚಂದ್ರಪ್ಪ ಮದ್ಯ ವ್ಯಸನಿ ಕೂಡ ಆಗಿದ್ದ. ಚಂದ್ರಪ್ಪನಿಗೆ ಚಾಕು ಇರಿದ ಪರಿಣಾಮ ರಕ್ತದ ಮಡಿವಿನಲ್ಲಿ ಬಿದ್ದಿದ್ದಾನೆ.ಪೊಲೀಸರು ಸದ್ಯ ವಿಜಯನನ್ನು ಅರೆಸ್ಟ್ ಮಾಡಿದ್ದು ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.ಘಟನೆ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿ ಸರಣಿ ಅಪಘಾತವಾಗಿದ್ದು, ಸೈಕಲ್ ಸವಾರನೋಬ್ಬ ಸಾವನಪ್ಪಿದ್ದಾನೆ. ಕಾರು, ಶಾಲಾ ಬಸ್ ಹಾಗೂ ಸೈಕಲ್ ನಡುವೆ ಈ ಒಂದು ಅಪಘಾತ ಸಂಭವಿಸಿದೆ. ಚನ್ನಮ್ಮನಹಳ್ಳಿಯ ಸೈಕಲವಾರ ಅಪಘಾತದಲ್ಲಿ ತಿಪ್ಪೇಸ್ವಾಮಿ (60) ಸಾವನ್ನಪ್ಪಿದ್ದು, ಶಾಲಾ ಬಸ್ ನಲ್ಲಿದ್ದ ಐವರು ವಿಧ್ಯಾರ್ಥಿಗಳಿಗೆ ಗಾಯಗಳಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಐಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದರ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದ ರಾಜ್ಯದ ಬೀದರ್ ಜಿಲ್ಲೆಯ ಐವರು ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ರಾಜ್ಯದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಬೀದರ್ ಜಿಲ್ಲೆಯ ಐವರು ತೆರಳಿದ್ದರು. ಈ ವೇಳೆ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ 6 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕುಂಭಮೇಳ ಮುಗಿಸಿ ಕಾಶಿಗೆ ಹೋಗುವಾಗ ಈ ಒಂದು ಅಪಘಾತ ಸಂಭವಿಸಿದೆ. ಉತ್ತರಪ್ರದೇಶದ ರೂಪಾಪೂರ ಬಳಿ ಲಾರಿಗೆ ಈ ಕ್ರೂಜರ್ ಡಿಕ್ಕಿಯಾಗಿದೆ. ಲಾರಿ ಕ್ರೂಜರ್ ನಡುವೆ ಡಿಕ್ಕಿಯಾಗಿ ಬೀದರ್ ಜಿಲ್ಲೆಯ ಲಾಡಿಗೇರ ಬಡಾವಣೆ ನಿವಾಸಿಗಳು ಐದು ಜನ ಸಾವನಪ್ಪಿದ್ದಾರೆ. ಸುನೀತಾ, ಸಂತೋಷ ಹಾಗೂ ನೀಲಮ್ಮ ಸೇರಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು…
ರಾಯಚೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಹಗರಣದ ಸುಳಿಯಲ್ಲಿ ಸಿಲುಕಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣ ಹೀಗೆ ಸಾಲು ಸಾಲು ಹಗರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗಿದೆ. ಇದೀಗ ಮತ್ತೊಂದು ಹಗರಣ ಬಯಲಾಗಿದ್ದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ತಹಶೀಲಾರ್ ಕಚೇರಿಯಲ್ಲಿ 1.87 ಕೋಟಿ ಹಣ ಅಕ್ರಮ ವರ್ಗಾವಣೆ ಆಗಿರುವುದು ಬಳಕೆಗೆ ಬಂದಿದೆ. ಹೌದು ಲಿಂಗಸುಗೂರು ತಹಶೀಲ್ದಾರ್ ಕಚೇರಿಯ ಖಾತೆಗಳಲ್ಲಿದ್ದ 1 ಕೋಟಿ 87 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಎಸ್‌ಡಿಎ ಯಲ್ಲಪ್ಪ ತನ್ನ ಕುಟುಂಬದ ಸದಸ್ಯರ ಖಾತೆಗಳಿಗೆ ಈ ಹಣವನ್ನು ವರ್ಗಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಯಲ್ಲಪ್ಪ ತನ್ನ ಮಗ ವಿಶಾಲ್ ಮಾಲೀಕತ್ವದ ವಿಶಾಲ್ ಡೆಕೋರೇಟರ್ಸ್ ಖಾತೆಗೆ 1 ಕೋಟಿ 98 ಸಾವಿರ ಹಣ, ಪುತ್ರಿ ದೀಪಾ ಹೆಸರಿನ ದೀಪಾ ಟೆಕ್ಸ್ಟೈಲ್ಸ್ ಹೆಸರಿನ ಖಾತೆಗೆ 31 ಲಕ್ಷ ರೂ. ಪತ್ನಿ ನಿರ್ಮಲಾ ಹೆಸರಿನ ನಿರ್ಮಲಾ ಡಿಜಿಟಲ್ಸ್ ಖಾತೆಗೆ 18 ಲಕ್ಷ ರೂ. ಅನ್ನು…
ಕೋಲಾರ : ವೈದ್ಯರು ನೀಡಿದ ಇಂಜೆಕ್ಷನ್ ಗೆ ಕೇವಲ ಒಂದೇ ನಿಮಿಷದಲ್ಲಿ 23 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ನಡೆದಿದೆ. ಸದ್ಯ ಇಂಜೆಕ್ಷನ್ ನೀಡಿದ ವೈದ್ಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಮೃತ ಯುವಕನನ್ನು ನಾಗೇಂದ್ರ (23) ಎಂದು ತಿಳಿದುಬಂದಿದೆ. ನಾಗೇಂದ್ರಗೆ ಕಳೆದ ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಆತ ವಕ್ಕಲೇರಿಯ ಸನ್ರೈಸ್ ಕ್ಲಿನಿಕ್ ಗೆ ಹೋಗಿದ್ದಾನೆ. ಈ ವೇಳೆ ವೈದ್ಯರು ಆತನಿಗೆ ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ಪಡೆದ ಕೇವಲ ಒಂದೇ ನಿಮಿಷಕ್ಕೆ ನಾಗೇಂದ್ರ ಸಾವನ್ನಪ್ಪಿದ್ದಾನೆ. ಹಾಗಾಗಿ ಇದೀಗ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ಸಾವನಪ್ಪಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮೃತ ನಾಗೇಂದ್ರ ಸಹೋದರ ರವಿ, ಆತನಿಗೆ ರಾತ್ರಿ ಜ್ವರ ಬಂದಿತ್ತು, ಕೂಡಲೇ ಆತ ಸನ್ರೈಸ್ ಕ್ಲಿನಿಕ್ ಗೆ ಕರೆದುಕೊಂಡು ಬಂದಿದ್ದೆ. ವೈದ್ಯರು ಆತನಿಗೆ ಯಾವುದೋ ಒಂದು ಇಂಜೆಕ್ಷನ್ ನೀಡಿದರು. ಆದರೆ ಇಂಜೆಕ್ಷನ್ ನೀಡಿದ ಕೇವಲ ಒಂದೇ…
ಮಂಡ್ಯ : ಗೂಡ್ಸ್ ಆಟೋ ಓವರ್ ಟೆಕ್ ವಿಚಾರಕ್ಕೆ ವ್ಯಕ್ತಿಯ ಬರಬರಹತೆಯಾಗಿದೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಚ್ಚಿಕೊಪ್ಪಲಿನಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಚಾಕು ಇರಿದು ಎಸ್ಕೇಪ್ ಆಗುತ್ತಿದ್ದವರನ್ನು ಗ್ರಾಮಸ್ಥರು ಅಟ್ಟಾಡಿಸಿ ಹಿಡಿದು ಧರ್ಮದೇಟು ನೀಡಿದ್ದಾರೆ. ಚಾಕು ಇರಿದು ಐವರ ಯುವಕರ ಗುಂಪು ಪರಾರಿಯಾಗುತ್ತಿತ್ತು. ಕೂಡಲೇ ಕೊಲೆ ಆರೋಪಿಗಳನ್ನು ಗ್ರಾಮಸ್ಥರೇ ಅಟ್ಟಾಡಿಸಿಕೊಂಡು ಹೋಗಿ ಹಿಡಿದಿದ್ದಾರೆ. ಬಳಿಕ ಅವರೇ ಧರ್ಮದೇಟು ಕೊಟ್ಟಿದ್ದಾರೆ. ಚಾಕು ಇರಿತಕ್ಕೆ ಒಳಗಾದಂತ ಕುಮಾರ್ ಚಿಕಿತ್ಸೆ ಫಲಿಸದೇ ಇದೀಗ ಸಾವನ್ನಪ್ಪಿದ್ದಾರೆ. ಕೊಲೆ ಕುರಿತು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕೊಲೆ ಆರೋಪಿಗಳನ್ನು ನಾಗಮಂಗಲ ಗ್ರಾಮಂತರ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಕಲಬುರ್ಗಿ : ಬೆಳಗಾಗಿ ವಿವಿಧಡೆ ಸಾಲ ಮಾಡಿಕೊಂಡಿದ್ದ ಯುವ ರೈತನೊಬ್ಬ ಸಾಲಭಾದೇಯನ್ನು ತಾಳಲಾರದೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಕಾಳಗಿ ಪಟ್ಟಣದ ಹುಳಿಗೇರ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ರೈತನನ್ನು ಹುಳಿಗೇರಾ ಗ್ರಾಮದ ನಿವಾಸಿ ಪ್ರಕಾಶ ರವೀಂದ್ರ ಜಮದಾರ್ (24) ಎಂದು ತಿಳಿದುಬಂದಿದೆ.ಪ್ರಕಾಶ ರಟಕಲ್ ಬ್ಯಾಂಕಿನಿಂದ ಕೃಷಿ ಚಟುವಟಿಕೆಗಾಗಿ 80 ಸಾವಿರ ರೂ. ಮತ್ತು ಖಾಸಗಿಯಾಗಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇನ್ನೂ ಕೈಕೊಟ್ಟ ಬೆಳೆ, ಸಾಲ ತೀರಿಸಲು ಆಗದೇ ತನ್ನದೇ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ನಿನ್ನೆ ರಾತ್ರಿ ಮನೆಯವರೆಲ್ಲ ಯಾಕೆ ಇನ್ನೂ ಪ್ರಕಾಶ್ ಮನೆಗೆ ಬಂದಿಲ್ಲ ಎಂದು ಹುಡುಕಾಡುತ್ತಿದ್ದ ವೇಳೆ, ಪ್ರಕಾಶ್ ಹಿಪ್ಪರಗಿ ಗ್ರಾಮದ ಮಾರ್ಗದಲ್ಲಿರುವ ತನ್ನ ಕೃಷಿ ಜಮೀನಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಯಾದಗಿರಿ : ಕಳೆದ ಒಂದು ವರ್ಷಗಳಿಂದ ಹೊರಗುತ್ತಿಗೆ ನೌಕರರು ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಒಂದು ವರ್ಷದಿಂದಲೂ ಆರೋಗ್ಯ ಇಲಾಖೆ ವೇತನ ಮಾಡಿಲ್ಲ ಎಂದು ಹೊರಗುತ್ತಿಗೆ ನೌಕರರು ಪರದಾಡುತ್ತಿರುವ ಘಟನೆ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಹೌದು ಹೊರ ಗುತ್ತಿಗೆ ನೌಕರರಿಗೆ ವೇತನ ಪಾವತಿಸದ ಆರೋಗ್ಯ ಇಲಾಖೆಯು ಕಳೆದ 1 ವರ್ಷದಿಂದ ವೇತನ ಪಾವತಿಸಿಲ್ಲ. ವೇತನ ಇಲ್ಲದೆ ಸದ್ಯ ಹೊರಗುತ್ತಿಗೆ ನೌಕರರು 1 ವರ್ಷ ಕೆಲಸ ಮಾಡಿದ್ದಾರೆ. ಸ್ಯಾಲರಿ ಇಲ್ಲದೆ ನೌಕರರು ಪರದಾಡುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಇದೀಗ ಕಷ್ಟ ಎದುರಿಸುತ್ತಿದ್ದಾರೆ. ಕೆಲಸ ಮಾಡಿದರು ಒಂದು ವರ್ಷದಿಂದ ವೇತನ ಪಾವತಿ ಮಾಡಿಲ್ಲ. ಸುಮಾರು 5 ಕೋಟಿ ವೇತನ ಬಾಕಿ ಉಳಿಸಿಕೊಂಡ ಆರೋಗ್ಯ ಇಲಾಖೆಯು ಹೊರಗುತ್ತಿಗೆ ನೌಕರರು 1 ವರ್ಷದಿಂದ ಕೆಲಸ ಮಾಡಿದರೂ ವೇತನ ಪಾವತಿಸಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಈ ನಡೆಯಿಂದ ಯಾದಗಿರಿಯಲ್ಲಿ ಹೊರಗುತ್ತಿಗೆ ನೌಕರರು ಪರದಾಟ ನಡೆಸುತ್ತಿದ್ದಾರೆ. ಈ ಕುರಿತು ಯಾದಗಿರಿ ಡಿಎಚ್ಒ ಡಾಕ್ಟರ್ ಮಹೇಶ್ ಅವರು ಪ್ರತಿಕ್ರಿಯೆ ನೀಡಿ, ತಾಂತ್ರಿಕ…














