Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ರಾಜ್ಯದ ಪ್ರಮುಖ 5 ಗ್ಯಾರಂಟಿ ಯೋಜನೆಗಳ್ಳಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಬಂದಂತಹ ಹಣ ಕೂಡಿಟ್ಟು, ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಅತ್ತೆ ಹಾಗೂ ಸೊಸೆ ಬೋರ್ವೆಲ್ ಕೊರೆಸಿರುವುದು ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ಒಂದು ವಿಚಾರ ಸಿಎಂ ಸಿದ್ದರಾಮಯ್ಯ ಅವರಿಗೂ ತಲುಪಿದ್ದು, ಗೃಹಲಕ್ಷ್ಮಿ ಹಣದಿಂದ ಅತ್ತೆ ಸೊಸೆ ಜಗಳವಾಡುತ್ತಾರೆ ಎಂದು ಟೀಕಿಸಿದ್ದ ಬಿಜೆಪಿಗೆ ತಪರಾಕಿ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿರುಗೇಟು ನೀಡಿದ್ದಾರೆ. ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್‌ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ – ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು.ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಗೆ ಬೋರ್‌ವೆಲ್ ಕೊರೆಸಿ, ಸಮೃದ್ಧ ನೀರು ಪಡೆದಿದ್ದಾರೆ. ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಯೋಜನೆಯ ಉದ್ದೇಶ ಯಶಸ್ವಿಯಾಗಿ…
BREAKING : ಉಡುಪಿಯಲ್ಲಿ ಮರಳು ಮಾಫಿಯಾಗೆ ವ್ಯಕ್ತಿ ಬಲಿ : ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದು ಹಿಂಬದಿ ಸವಾರ ದುರ್ಮರಣ!
ಉಡುಪಿ : ಉಡುಪಿಯಲ್ಲಿ ಮರಳು ಮಾಫಿಯಾಗೆ ಇದೀಗ ಮತ್ತೊಂದು ಜೀವ ಬಲಿಯಾಗಿದೆ ಮರಳು ತುಂಬಿದ್ದ ಟಿಪ್ಪರ್ ಒಂದು ವೇಗವಾಗಿ ಚಲಿಸಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬಡಗು ಬೆಟ್ಟು ವಿನ ಶಾಂತಿನಗರದಲ್ಲಿ ನಡೆದಿದೆ. ಹೌದು ಮರಳು ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ದುರ್ಮರಣ ಹೊಂದಿದ್ದಾನೆ. ಉಡುಪಿ ಬಡಗುಬೆಟ್ಟು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಉಡುಪಿಯ ಶಾಂತಿನಗರದಲ್ಲಿ ದಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಜನಾರ್ಧನ್ ದುರ್ಮರಣ ಹೊಂದಿದ್ದಾನೆ. ಇನ್ನು ಬೈಕ್ ಓಡಿಸುತ್ತಿದ್ದ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಲಾರಿ ಹರಿದ ದೃಶ್ಯ ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರಿಯಾಗಿದೆ ಬೈಕ್ ಸವಾರ ಸಂತೋಷ್ಗೆ ಗಂಭೀರವಾದ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದ್ದು, ಟಿಪ್ಪರ್ ಮಾಲಿಕ ಹಾಗೂ ಚಾಲಕನ ವಿರುದ್ಧ FIR ದಾಖಲಾಗಿದೆ.
ಪರ್ಸ್ ನಲ್ ಯಾವಾಗಲೂ ಹಣ ತುಂಬಿರಬೇಕೆಂದರೆ ಮನೆಯ ಗೃಹಿಣಿಯರ ಕೈಯಿಂದ ಈ ಹೀಗೆ ಮಾಡಿ ಯಜಮಾನನ ಪರ್ಸ್ ಹಣದಿಂದ ತುಂಬಿರುತ್ತದೆ.. ಇಂದಿನ ದಿನಗಳಲ್ಲಿ ಹಣ ಮಾಡುವುದೊಂದೇ ಹಲವರ ಗುರಿಯಾಗಿದೆ. ಕಷ್ಟಪಟ್ಟು ಹಣ ಸೇರಿಸುವ, ಪ್ರಗತಿ ಬಯಸಿದವರೂ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ಸಂಪಾದಿಸಲಾಗದೆ, ದುಡಿದ ಹಣವನ್ನು ಸೇರಿಸಲಾಗದೆ, ದುಂದುವೆಚ್ಚ, ಹಣದ ಕೊರತೆಯಿಂದ ಬಳಲುತ್ತಿದ್ದಾರೆ. ವ್ಯಾಲೆಟ್‌ಗಳು ಅಥವಾ ಪರ್ಸ್ ನಲ್ಲಿ ಹಣವನ್ನು ಇಡಲು ಪ್ರತಿಯೊಬ್ಬರೂ ಬಳಸುವ ಪ್ರಮುಖ ವಸ್ತುವಾಗಿದೆ. ಹೋಮ್ ಬ್ಯೂರೋ ವ್ಯವಹಾರದ ಗಲ್ಲ ಪೆಟ್ಟಿಗೆ ಕೂಡ ಇದರ ಪಕ್ಕದಲ್ಲಿದೆ. ಹಣವನ್ನು ಇಡಲು ಬಳಸುವ ಈ ಮನಿ ಪರ್ಸ್‌ನಲ್ಲಿ ಒಂದೇ ಒಂದು ವಸ್ತುವನ್ನು ಇರಿಸುವ ಮೂಲಕ ನಮ್ಮ ಹಣದ ಹರಿವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಆಧ್ಯಾತ್ಮದ ಕುರಿತಾದ ಈ ಪೋಸ್ಟ್‌ನಲ್ಲಿ ಇದರ ಅರ್ಥ ಮತ್ತು ಅದನ್ನು ಹೇಗೆ ಇಟ್ಟುಕೊಳ್ಳುವುದು ಎಂದು ನಾವು ತಿಳಿದುಕೊಳ್ಳಬಹುದು . ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು…
ತುಮಕೂರು : ಅಕ್ರಮವಾಗಿ ಗಾಂಜಾ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸರಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೀರದೇನಹಳ್ಳಿ ಎಂಬಲ್ಲಿ ಗಾಜಾ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಗಾಂಜಾ ಮಾರುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರೆ. ಬೀರದೇನಹಳ್ಳಿ ಬಸ್ ನಿಲ್ದಾಣದಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೀರದೇನಹಳ್ಳಿಯಲ್ಲಿ ಸಿದ್ದರಬೆಟ್ಟದ ಹೇಮಂತ್ ಹಾಗೂ ನೇಗಲಾಲದ ಭೀಮರಾಜು ಎನ್ನುವ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಸುಮಾರು 1.50 ಲಕ್ಷ ಮೌಲ್ಯದ 2 ಕೆಜಿ 400 ಗ್ರಾಂ ಗಾಂಜಾ ಸೊಪ್ಪು ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಉದ್ಯಮಿ ಸುತಾರಿಯ ಮನೆಯಲ್ಲಿ ದರೋಡೇ ನಡೆದಿದೆ. ದರೋಡೆಗೂ ಮುನ್ನ ಕಾವಲುಗಾರನ್ನ ಕಟ್ಟಿ ಹಾಕಿದ್ದು ಅಲ್ಲದೆ ಮನೆಯವರನ್ನೆಲ್ಲಾ ಒಂದು ಕೋಣೆಯಲ್ಲಿ ಕೂಡಿಹಾಕಿ ದರೋಡೆಕೋರರು ದರೋಡೆ ಮಾಡಿರುವ ಘಟನೆ ಹುಬ್ಬಳ್ಳಿಯ ಅಶೋಕನಗರದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಮನೆಯ ಕಾವಲುಗಾರನ ಕೈಕಾಲು ಕಟ್ಟಿ ಹಾಕಿದ ಕಳ್ಳರ ಗ್ಯಾಂಗ್ ಬಳಿಕ ಮನೆಯಲ್ಲಿದ್ದವರನ್ನು ಕೋಣೆಯಲ್ಲಿ ಕೂಡಿಹಾಕಿ ದರೋಡೆ ಮಾಡಿದ್ದಾರೆ. ಹುಬ್ಬಳ್ಳಿಯ ಅಶೋಕನಗರದಲ್ಲಿ ಈ ಒಂದು ಘಟನೆ ನಡೆದಿದೆ. ಸ್ಥಳಕ್ಕೆ ಅಶೋಕನಗರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಉತ್ತರಪ್ರದೇಶ : ಪತ್ನಿಯ ಕಾಟಕ್ಕೆ ಮನನೊಂದು ಟೆಕ್ಕಿ ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಪತ್ನಿ ಸೇರಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಸಂಗಾತಿಯ ಕೊಂಕು ಮಾತಿನಿಂದ ಮನನೊಂದು ಮತ್ತೊಬ್ಬ ಟಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಹೌದು ಆತ್ಮಹತ್ಯೆ ಮಾಡಿಕೊಂಡಂತಹ ಟೆಕ್ಕಿಯನ್ನು ಮಯಾಂಕ್ ಚಂದೆಲ್ ಎಂದು ಗುರುತಿಸಲಾಗಿದೆ. ಕೆಲಸವಿಲ್ಲದ ಕಾರಣ ಮಾನಸಿಕ ಒತ್ತಡದಲ್ಲಿದ್ದರು, ಜತೆಗೆ ತನ್ನ ಸಂಗಾತಿಯ ಕುಹಕ ಮಾತುಗಳನ್ನು ಕೇಳಿ ಮತ್ತಷ್ಟು ಡಿಪ್ರೆಶನ್ಗೆ ಹೋಗಿದ್ದರು. ಉತ್ತರ ಪ್ರದೇಶದ ಜಲಾಲಾಬಾದ್‌ನವರಾದ ಚಂದೇಲ್, ಬಂಡಾ ಮೂಲದ ಮಹಿಳೆಯೊಂದಿಗೆ ಸುಮಾರು ಏಳು ವರ್ಷಗಳಿಂದ ಸಂಬಂಧ ಹೊಂದಿದ್ದರು. ನೋಯ್ಡಾದ ಸೆಕ್ಟರ್ 73 ರಲ್ಲಿ ನಾಲ್ಕು ವರ್ಷಗಳಿಂದ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದರು. ಡೆತ್ನೋಟ್ನಲ್ಲಿ ಏನೂ ಕೆಲಸವಿಲ್ಲ, ಇಡೀ ದಿನ ಮನೆಯಲ್ಲಿ ಕೂತು ತಿನ್ನೋದೊಂದೇ ಕೆಲಸ ಎನ್ನುವ ಮಾತು ತೀರಾ ಮನಸ್ಸು ಹಾಳುಮಾಡಿತ್ತು. ಈ ಎಲ್ಲಾ ಕಾರಣಗಳಿಂದಾಗಿ ತಾನು ಸಾಯುವ…
ಕಲಬುರ್ಗಿ : ರಿಲ್ಸ್ ಹುಚ್ಚಿಗಾಗಿ ಪುಂಡ ಯುವಕರು ತಲ್ವಾರ್ ಹಿಡಿದುಕೊಂಡು ವಿಡಿಯೋ ಮಾಡಿದ್ದಾರೆ. ಈ ನಡೆಯಲಿ ನಾಲ್ವರು ಯುವಕರ ವಿರುದ್ಧ ಕಲ್ಬುರ್ಗಿಯ ಆರ್‌ಜಿ ನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಹೌದು ತಲ್ವಾರ್ ಹಿಡಿದು ರೀಲ್ಸ್ ಮಾಡಿದ್ದ ನಾಲ್ವರು ಯುವಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಲ್ಬುರ್ಗಿಯ ಆರ್ ಜಿ ನಗರ ಠಾಣೆಯಲ್ಲಿ ನಾಲ್ವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ತಲ್ವಾರ್ ಹಿಡಿದು ನಾಲ್ವರು ಯುವಕರು ರೀಲ್ ಮಾಡಿದ್ದರು.ವಿಡಿಯೋ ಸಾಕ್ಷಿಯಾಗಿ ಇಟ್ಟುಕೊಂಡು ಇದೀಗ ಪೊಲೀಸರು FIR ದಾಖಲಿಸಿದ್ದಾರೆ.
ಬೆಂಗಳೂರು : ಪತ್ನಿಯ ಕಿರುಕುಳ ತಾಳಲಾರದೆ ಇತ್ತೀಚೆಗೆ ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಅತುಲ್ ಸುಭಾಷ್ ಪತ್ನಿ, ಅತ್ತೆ ಹಾಗೂ ಸೇರಿದಂತೆ ಮೂವರು ಆರೋಪಿಗಳನ್ನು ಮಾರತಹಳ್ಳಿ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಪೊಲೀಸರು ನಿನ್ನೆ ಬೆಳಿಗ್ಗೆ ಮೂವರನ್ನು ಬಂಧಿಸಿದ್ದು ರಾತ್ರಿ ಜಡ್ಜ್ ಮುಂದೆ ಹಾಜರುಪಡಿಸಿದ್ದರು ಇದೀಗ ನಾಲ್ವರು ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ. ಹೌದು ಪತ್ನಿಯ ಕಿರುಕುಳಕ್ಕೆ ಬೇಸತ್ತು ಟಕ್ಕಿ ಅತುಲ್ ಸುಭಾಷ್ ಸುಮಾರು 24 ಪುಟಗಳಷ್ಟು ಟೆಕ್ನೋಟ್ ನಲ್ಲಿ ಪತ್ನಿ ಹಾಕಿರುಕೊಳ್ಳದ ಬಗ್ಗೆ ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾಗಿದ್ದರು ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯ, ನೀಶಾ, ಹಾಗೂ ಅನುರಾಗ್ ಸಿಂಘಾನಿಯ ಅವರನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಕರಣ ಹಿನ್ನೆಲೆ? ಳೆದ ಸೋಮವಾರ ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಎಂಬ ಯುಪಿ ಮೂಲದ ಟೆಕ್ಕಿ…
ತುಮಕೂರು : ಮನೆಯ ಬೀಗ ಮುರಿದು ನಗದು ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ವಿಶ್ವ ಮೋಹನ ಗುಪ್ತ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಸುಮಾರು 30 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ, ನಗದು ಕಳ್ಳತನ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಪತ್ನಿಯ ಕಿರುಕುಳ ತಾಳಲಾರದೆ ಇತ್ತೀಚೆಗೆ ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದರು.ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಅತುಲ್ ಸುಭಾಷ್ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಉತ್ತರಪ್ರದೇಶದ ಅಲಹಾಬಾದ್ ನಲ್ಲಿ ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹೌದು ಪತ್ನಿಯ ಕಿರುಕುಳಕ್ಕೆ ಬೇಸತ್ತು ಟಕ್ಕಿ ಅತುಲ್ ಸುಭಾಷ್ ಸುಮಾರು 24 ಪುಟಗಳಷ್ಟು ಕಿರುಕುಳದ ಬಗ್ಗೆ ಡೆತ್ ನೋಟ್ ಅಲ್ಲಿ ಉಲ್ಲೆಖಿಸಿದ್ದರು. ಪತ್ನಿ ತಮಗೆ ನೀಡುತ್ತಿರುವ ಕಿರುಕುಳದ ಬಗ್ಗೆ ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯ, ನೀಶಾ, ಹಾಗೂ ಅನುರಾಗ್ ಸಿಂಘಾನಿಯ ಅವರನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರಕರಣ ಹಿನ್ನೆಲೆ? ಕಳೆದ ಸೋಮವಾರ ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಎಂಬ ಯುಪಿ ಮೂಲದ ಟೆಕ್ಕಿ ಸೂಸೈಡ್ ಮಾಡಿಕೊಳ್ತಾರೆ. ಅವರು ಸೂಸೈಡ್‌ಗೂ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾರೆ ಮತ್ತು 90 ನಿಮಿಷದ ವಿಡಿಯೋವನ್ನು ಮಾಡಿದ್ದಾರೆ.ಈ…













