Author: kannadanewsnow05

ಬೆಂಗಳೂರು : ಬೆಂಗಳೂರಿನಲ್ಲಿ ತುಂತುರು ಮಳೆ ಹಾಗೂ ಇಬ್ಬನಿ ಜಾಸ್ತಿಯಾಗಿದ್ದರ ಪರಿಣಾಮ ಸರಣಿ ಅಪಘಾತವಾಗಿದೆ. ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಸರಣಿ ಅಪಘಾತ ನಡೆದಿದ್ದು, 7 ಕಾರುಗಳ ಮಧ್ಯೆ ಅಪಘಾತ ನಡೆದಿರುವ ಘಟನೆ ಬೆಂಗಳೂರಿನ ಯಲಹಂಕದ ಬಳಿ ನಡೆದಿದೆ. ಹೌದು ಯಲಹಂಕ ತೆರಳುವ ಮುಖ್ಯ ರಸ್ತೆಯಲ್ಲಿ ವಾಹನಗಳ ನಡುವೆ ಅಪಘಾತ ನಡೆದಿದ್ದು,7 ಕಾರುಗಳ ನಡುವೆ ಸರಣಿ ಅಪಘಾತವಾಗಿದ್ದು, ಆದರೆ ಯಾವುದೇ ಹೆಚ್ಚು ಅನಾಹುತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.ರಾತ್ರಿ ಸುರಿದ ಮಳೆಯಿಂದ ಕೂಡ ಹಲವಡೆ ಅವಾಂತರ ಸೃಷ್ಟಿಯಾಗಿದೆ.

Read More

ಕೊಪ್ಪಳ : ಈಗಾಗಲೇ ಆಕೆಗೆ ಎರಡು ಹೆಣ್ಣು ಮಕ್ಕಳು ಇದ್ದವು. ಇದೀಗ ಮೂರನೇ ಮಗು ಕೂಡ ಹೆಣ್ಣಾಗಿದ್ದರಿಂದ ಪತಿಯು ಹೆಣ್ಣು ಹೆತ್ತಿದಿಯ ಎಂದು ನಿಂದಿಸಿದ್ದಾನೆ. ಇದರಿಂದ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ತಾಲ್ಲೂಕಿನ ಚಳ್ಳಾರಿ ಗ್ರಾಮದಲ್ಲಿ ನಡೆದಿದೆ. ಚಳ್ಳಾರಿಯ ಗಣೇಶ ಗುಮಗೇರಿ ಹಾಗೂ ಹನುಮವ್ವ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈಗಾಗಲೇ ಹನುಮವ್ವಗೆ ಎರಡು ಹೆಣ್ಣು ಮಕ್ಕಳು ಇದ್ದವು. ಕಳೆದ ಕೆಲವು ತಿಂಗಳ ಹಿಂದೆ ಮೂರನೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ಬಾರಿಯೂ ಕೂಡ ಹೆಣ್ಣು ಮಗು ಆಗಿದ್ದರಿಂದ ಗಣೇಶ್ ಹಾಗೂ ಹನುಮವ್ವ ನಡುವೆ ಆದಾಗ ಗಲಾಟೆ ಆಗುತ್ತಿತ್ತು ಇದರಿಂದ ಮನನೊಂದು ಹನುಮವ್ವ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೂರನೇ ಮಗು ಹೆಣ್ಣಾದ ನಂತರ ಅಳಿಯ ಗಣೇಶ ನನ್ನ ಮಗಳಿಗೆ ವಿಪರೀತವಾಗಿ ಕಾಟ ಕೊಟ್ಟಿದ್ದಾನೆ. ಮದ್ಯ ವ್ಯಸನಿಯೂ ಆಗಿದ್ದರಿಂದ ಹೊಡೆದು ಮೂರು ಹೆಣ್ಣು ಹೆತ್ತಿದ್ದೀಯಾ ಎಂದು ನಿಂದಿಸಿದ್ದರಿಂದ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹನುಮವ್ವ ಅವರ ತಂದೆ ಬಸಪ್ಪ…

Read More

ಕೊಪ್ಪಳ : ಗಂಗಾವತಿ ತಾಲ್ಲೂಕಿನ ಸಾಣಾಪುರ ಗ್ರಾಮದ ಕೆರೆಯಲ್ಲಿ ಬುಧವಾರ ಈಜಲು ಹೋದಾಗ ಕಾಲು ಜಾರಿ ಬಿದ್ದ ಇಸ್ರೇಲ್‌ ಪ್ರಜೆಯನ್ನು ಸಹ ಪ್ರವಾಸಿಗರು ರಕ್ಷಿಸಿದ್ದಾರೆ. ಸಾವಿನ ದವಡೆಯಿಂದ ಪಾರಾದ ಇಸ್ರೇಲ್‌ ದೇಶದ ಜೇರುಸೆಲಂನ ಲೇವಿಅಮಿಟ್ ತನ್ನ ಸ್ನೇಹಿತರ ಜೊತೆಗೆ ಹಂಪಿ ಹಾಗೂ ಆನೆಗೊಂದಿ ಭಾಗದಲ್ಲಿ ಪ್ರವಾಸಕ್ಕೆ ಬಂದಿದ್ದರು. ಪ್ರವಾಸಿ ತಾಣದಲ್ಲಿ ಸುತ್ತಾಡಿದ ಬಳಿಕ ಆರಂಭದಲ್ಲಿ ಕೆರೆಯ ದಡದಲ್ಲಿ ಸ್ವಲ್ಪ ನೀರಿದ್ದ ಜಾಗದಲ್ಲಿ ಸ್ನಾನ ಮಾಡುತ್ತಿದ್ದರು. ಪ್ರವಾಸಿ ತಾಣದಲ್ಲಿ ಸುತ್ತಾಡಿದ ಬಳಿಕ ಆರಂಭದಲ್ಲಿ ಕೆರೆಯ ದಡದಲ್ಲಿ ಸ್ವಲ್ಪ ನೀರಿದ್ದ ಜಾಗದಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ಕೆರೆಯ ಆಳಕ್ಕೆ ಹೋಗಿದ್ದಾರೆ. ನೀರಿನಲ್ಲಿ ಮುಳುಗಿ ಏಳುತ್ತಿರುವುದನ್ನು ಗಮನಿಸಿದ ಸಹ ಪ್ರವಾಸಿಗರು ರಕ್ಷಣೆ ಮಾಡಿದರು.

Read More

ಬೆಂಗಳೂರು : ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಸಿಪಿ ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೃಹತ್ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಪಕ್ಷದ ಬಾವುಟ ನೀಡಿ ಸಿಪಿ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಸಂಜೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ. ಹಾಗಾಗಿ ನಾಳೆ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ಇಂದು ಬೆಳಿಗ್ಗೆ 11 ಗಂಟೆಗೆ ಚನ್ನಪಟ್ಟಣ ತಾಲೂಕು ಕಚೇರಿಗೆ ಬೃಹತ್ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.ಸಿಪಿ ಯೋಗೇಶ್ವರ್ ಅವರಿಗೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಡಿಕೆ ಸುರೇಶ್ ಸೇರಿದಂತೆ ಸೇರಿದಂತೆ ಹಲವು ಸಚಿವರು, ಜಿಲ್ಲೆಯ ಶಾಸಕರು ಸಾಥ್ ನೀಡಲಿದ್ದಾರೆ.

Read More

ಬೆಂಗಳೂರು : ಒಂದು ಕಡೆ ಚನ್ನಪಟ್ಟಣ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೆಂಬ ಗೊಂದಲದಲ್ಲಿ ಹೆಚ್‍ಡಿ ಕುಮಾರಸ್ವಾಮಿ ಇದ್ದರೆ, ಇನ್ನೊಂದು ಕಡೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಆರೋಗ್ಯದಲ್ಲಿ ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲೆ ಚಿಕಿತ್ಸೆ ನೀಡಲಾಗುತ್ತಿದೆ. ಹೌದು ಚೆನ್ನಮ್ಮ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಚೆನ್ನಮ್ಮ ಆರೋಗ್ಯ ವಿಚಾರಿಸಲು ಕುಟುಂಬ ಸದ್ಯಸ್ಯರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಕೇಂದ್ರ ಸಚಿವರಾಗಿರುವ ಹೆಚ್‌ಡಿ ಕುಮಾರಸ್ವಾಮಿ ಅವರು ನಿನ್ನೆ ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ಸಭೆ ನಡೆಸಬೇಕಿತ್ತು ಆದ್ರೆ, ಚೆನ್ನಮ್ಮ ಅವರ ಅನಾರೋಗ್ಯ ಹಿನ್ನೆಲೆ ಸಭೆ ರದ್ದುಗೊಳಿಸಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆ ವಿಚಾರವಾಗಿ ನಿನ್ನೆ ಬಿಜೆಪಿ ಜೆಡಿಎಸ್ ಸಮನ್ವಯ ಸಮಿತಿ ಸಭೆ ಕರೆದಿತ್ತು, ಬೆಂಗಳೂರಿನ ಕಾಸಿಗೆ ಹೋಟೆಲಲ್ಲಿ ಈ ಒಂದು ಸಭೆ ನಡೆಬೇಕಿತ್ತು ಆದರೆ ಚೆನ್ನಮ್ಮ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಈ ಹಿನ್ನೆಲೆಯಲ್ಲಿ ನಾಳೆ ಹೈಕಮಾಂಡ್‌ನಿಂದಲೇ ಅಭ್ಯರ್ಥಿ ಘೋಷಣೆ ಮಾಡಿಸುತ್ತೇನೆ ಎಂದು ಹೆಚ್‌ಡಿ ಕುಮಾರಸ್ವಾಮಿ ಅವರು ನಿನ್ನೇನೆ…

Read More

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ಮಾಜಿ ಸಚಿವ ಬಿ ನಾಗೇಂದ್ರ ಅವರು ಜಾಮೀನಿನ ಮೇಲೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದರು. ಇದೀಗ ಜಾಮೀನು ರದ್ದು ಕೋರಿ ಇಡಿ ಅಧಿಕಾರಿಗಳು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಹೌದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ಜಾರಿ ನಿರ್ದೇಶನಾಲಯ (ED) ಹೈಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ಇ.ಡಿ. ಹೈಕೋರ್ಟ್‌ಗೆ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ಗುರುವಾರ ಗುರುವಾರ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ. ಇತ್ತೀಚೆಗೆ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರಿಗೆ ಜಾಮೀನು ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿತ್ತು.

Read More

ಬೆಂಗಳೂರು :ಬೆಂಗಳೂರಲ್ಲಿ ಘೋರ ದುರಂತವೊಂದು ನಡೆದಿದ್ದು, ಆನೆಯ ಮೇಲೆ ಕುಳಿತು ಮೈತೊಳೆಯುವ ಸಂದರ್ಭದಲ್ಲಿ ಏಕಾಏಕಿ ಆನೆ ಆಳದ ನೀರಿನೊಳಗೆ ಇಳಿದ ಕಾರಣ ಮೇಲೆ ಕುಳಿತಿದ್ದ ಯುವಕ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿ ಮಾರ್ಗದ ಸೀಗೆಕಟ್ಟೆ ಕೆರೆಯಲ್ಲಿ ನಡೆದಿದೆ. ಜೇನುಕುರುಬ ಸಮುದಾಯಕ್ಕೆ ಸೇರಿದ ಮೈಸೂರು ಜಿಲ್ಲೆಯ ಹುಣ ಸೂರು ಮೂಲದ ಗೋಪಾಲ್ (20) ನೀರಿನಲ್ಲಿ ಮುಳುಗಿ ಮೃತಪಟ್ಟ ಕಾವಾಡಿಗ. 10 ವರ್ಷದ ಸಂಪತ್ ಹೆಸರಿನ ಆನೆಯನ್ನು 2 ವರ್ಷದಿಂದ ಗೋಪಾಲ್ ನೋಡಿಕೊಳ್ಳುತ್ತಿದ್ದ ಎಂದು ಹೇಳಲಾಗುತ್ತಿದೆ. ನಿನ್ನೆ ಬೆಳಗ್ಗೆ ಈ ಒಂದು ಘಟನೆ ನಡೆದಿದ್ದು, 10 ಗಂಟೆಗೆ ಆನೆ ಮೈತೊಳೆಯುವ ಸಮಯದಲ್ಲಿ ಆನೆ ಗಾಬರಿಗೊಂಡಿದೆ ಈ ವೇಳೆ ಕೆರೆಯ ಒಳಭಾಗಕ್ಕೆ ಇಳಿದಿದೆ. ಈ ವೇಳೆ ಈಜು ಬಾರದ ಗೋಪಾಲ್ ಆಳದ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಅಣ್ಣ ಕೃಷ್ಣಕುಮಾ‌ರ್, ಮಾವುತ ಸಂಜೇಶ್ ರಕ್ಷಿಸಲು ಹರಸಾಹಸಪಟ್ಟರೂ ಕ್ಷಣಮಾತ್ರದಲ್ಲಿ ಗೋಪಾಲ್ ನೀರು ಪಾಲಾಗಿದ್ದಾನೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಬನ್ನೇರುಘಟ್ಟ…

Read More

ಬೆಂಗಳೂರು : ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದಾಗಿ ಎಲ್ಲಾ ಕಡೆ ಅವಾಂತರ ಸೃಷ್ಟಿಯಾಗಿದೆ.ಈ ಹಿನ್ನೆಲೆಯಲ್ಲಿ ಮಳೆ ಹನಿಪ್ರದೇಶಕ್ಕೆ ಡಿಸಿಎಂ ಶಿವಕುಮಾರ್ ಭೇಟಿ ನೀಡಿದ್ದ ಅಲ್ಲದೆ, ಮಳೆ ನೀರು ಮನೆಗೆ ನುಗ್ಗಿ ತೊಂದರೆ ಉಂಟಾಗಿರುವವರಿಗೆ ತಲಾ 10 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜಕಾಲುವೆ ಒತ್ತುವರಿ ಯನ್ನು ನಿರ್ದಾಕ್ಷಿಣ್ಯ ತೆರವುಗೊಳಿಸುವಂತೆ ನಿರ್ದೇಶಿಸಿದ್ದಾರೆ. ಹೌದು ನಿನ್ನೆ ಪ್ರವಾಹದಿಂದ ಹಾನಿಗೀಡಾದ ವಿವಿಧ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ವಸತಿ ಇಲ್ಲದವರಿಗೆ ವಾಸಿಸಲು ತಾತ್ಕಾಲಿಕ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.ಯಲಹಂಕದ ಕೇಂದ್ರಿಯ ವಿಹಾರ ಅಪಾರ್ಟ್‌ಮೆಂಟ್, ಬ್ಯಾಟರಾಯನಪುರದ ಮರಿಯಣ್ಣ ಪಾಳ್ಯ, ಕೆ.ಆ‌ರ್.ಪುರದ ಶ್ರೀ ಸಾಯಿ ಲೇಔಟ್‌ಗೆ ಭೇಟಿ ನೀಡಿ ಪರಿಹಾರ ಕಾರ್ಯ ವೀಕ್ಷಿಸಿ, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದ ಪದಾಧಿ ಕಾರಿಗಳೊಂದಿಗೆ ಚರ್ಚಿಸಿದರು. ಸಮಿತಿ ರಚನೆ ನಿರಂತರ ಮಳೆಯಿಂದಾಗಿ ಬೆಂಗಳೂರು ನಗರದಲ್ಲಿನ ಐಟಿ ಕಂಪೆನಿಗಳು ಸೇರಿದಂತೆ ಉದ್ಯಮಗಳ ಮೇಲೆ ಉಂಟಾಗಿರುವ ಗಂಭೀರ ಪರಿಣಾಮಗಳನ್ನು…

Read More

ಪಂಜಾಬ್ : ಹೆಂಡತಿ ತನ್ನ ಗಂಡನನ್ನು ನಪುಂಸಕ ಎಂದು ಕರೆದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮನಾಗುತ್ತದೆ. ಅಥವಾ ಅವಳು ನಪುಂಸಕನಿಗೆ ಜನ್ಮ ನೀಡಿದ್ದಾಳೆಂದು ಆತನ ತಾಯಿಗೆ ಹೇಳುವುದು ಕ್ರೂರವಾದದ್ದು ಎಂದು ಪಂಜಾಬ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣ ಏನು? ಮಹಿಳೆಯೊಬ್ಬಳು ಮೊಬೈಲ್ ನಲ್ಲಿ ಗಂಟೆಗಟ್ಟಲೆ ಅಶ್ಲೀಲ ವಿಡಿಯೋ ನೋಡಿ, ಪತಿಯ ಬಳಿ ಪ್ರತಿ ರಾತ್ರಿ ತನ್ನೊಂದಿಗೆ ಮೂರು ಬಾರಿ 10-15 ನಿಮಿಷಗಳ ಕಾಲ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದಳಂತೆ.ಇದಕ್ಕೆ ಒಪ್ಪದ ಪತಿಯನ್ನು ನಪುಂಸಕ ಅಂತಾ ಹೀಯಾಳಿಸುತ್ತಾಳಂತೆ. ಇದರಿಂದ ಬೇಸತ್ತ ಪತಿ ಪಂಜಾಬ್ ಹರಿಯಾಣ ಹೈಕೋರ್ಟ್‍ಗೆ ವಿಚ್ಛೇದನದ ಅರ್ಜಿ ಸಲ್ಲಿಸಿದ್ದಾನೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ಅವರಿದ್ದ ನ್ಯಾಯಪೀಠವು ಈ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿ, ಹೆಂಡತಿ ತನ್ನ ಗಂಡನನ್ನು ನಪುಂಸಕ ಎಂದು ಕರೆದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮನಾಗುತ್ತದೆ. ಪತಿಯನ್ನು ನಪುಂಸಕ ಅಂತಾ ಕರೆಯುವುದು ಅಥವಾ ಅವಳು ನಪುಂಸಕನಿಗೆ…

Read More

ಬೆಂಗಳೂರು : ಮುಂದಿನ ಮೂರು ಗಂಟೆಗಳ ಅವಧಿಯಲ್ಲಿ ಬೆಂಗಳೂರು ಸೇರಿದಂತೆ 12 ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಹಾಗಾಗಿ ಬೆಂಗಳೂರು ಸೇರಿದಂತೆ 12 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಸೇರಿದಂತೆ 12 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ ಮೂರು ಗಂಟೆ ಮಳೆ ಆಗುವ ಬಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ದಕ್ಷಿಣ ಕನ್ನಡ, ವಿಜಯಪುರ,ಬಳ್ಳಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ,ಚಿಕ್ಕಮಗಳೂರು, ಕೋಲಾರ, ಕೊಡಗು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ನಗರದ ಆನೇಕಲ್ ನಲ್ಲಿ ಭಾರಿ ಮಳೆಯಾಗುತ್ತಿದೆ. ಆನೇಕಲ್ ಸುತ್ತಮುತ್ತ ಅತ್ತಿಬೆಲೆ, ಚಂದಾಪುರ, ಬನ್ನೇರುಘಟ್ಟ, ಗೊಟ್ಟಿಗೆರೆ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಧಾರಾಕಾರ ಮಳೆಯಿಂದಾಗಿ ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.

Read More