Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಬೆಂಗಳೂರು : ಬೆಂಗಳೂರಿನಲ್ಲಿ ಅನಧಿಕೃತವಾಗಿ ಫ್ಲೈಕ್ಸ್ ಬ್ಯಾನರ್ ಅಳವಡಿಕೆ ಮಾಡಿದರೆ ಕ್ರಮ ಕೈಗೊಳ್ಳುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಸೂಚನೆ ನೀಡಿದ್ದರು ಡಿಕೆ ಶಿವಕುಮಾರ್ ಸೂಚನೆಯ ಮೇರೆಗೆ ಇದೀಗ ಬಿಬಿಎಂಪಿ ಒಟ್ಟು 12 ದಾಖಲಿಸಿದ್ದು 12 ಲಕ್ಷ ದಂಡ ವಸೂಲಿ ಮಾಡಿದೆ. ಅನಧಿಕೃತವಾಗಿ ಬ್ಯಾನರ್ ಅಳವಡಿಸಿದ್ದವರ ವಿರುದ್ಧ 12 fir ದಾಖಲಾಗಿದ್ದು, 12 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ ಬಿಬಿಎಂಪಿ. ಪೂರ್ವ, ಪಶ್ಚಿಮ ಹಾಗು ಯಲಹಂಕ ವಲಯದಲ್ಲಿ ಬಿಬಿಎಂಪಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ಬಿಬಿಎಂಪಿ ಕಾರ್ಯಾಚರಣೆ ನಡೆಸಿದ್ದಾರೆ. ಅನಧಿಕೃತ ಬ್ಯಾನರ್ ಹಾಕಿದ್ದವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಬರೋಬ್ಬರಿ 1,350 ಫ್ಲೆಕ್ಸ್ ಬ್ಯಾನರ್ ತೆರವುಗೊಳಿಸಿದ್ದಾರೆ. ಪಾಲಿಕೆ ನಿನ್ನೆಯಿಂದ ಹಲವಡೆ ಕಾರ್ಯಾಚರಣೆ ನಡೆಸಿದೆ. ಯೂಥ್ ಕಾಂಗ್ರೆಸ್ ಸಮಾರಂಭ ಹಿನ್ನೆಲೆಯಲ್ಲಿ ಫ್ಲೇಕ್ಸ್ ಗಳನ್ನು ಹಾಕಲಾಗಿತ್ತು. ಬ್ಯಾನರ್ ಅಳವಡಿಸಿದ್ದವರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಕ್ರಮಕ್ಕೆ ಸೂಚನೆ ನೀಡಿದ್ದರು.

Read More

ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಆರ್ಎಸ್ಎಸ್ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಜಟಾಪಟಿ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀವು ಯಾರು RSS ನವರಲ್ಲ ನಿಮ್ಮನ್ನು ಎತ್ತಿ ಕಟ್ಟಿದ್ದಾರೆ. ನಿಮಗೂ ಆರ್ ಎಸ್ ಎಸ್ ನವರಿಗೆ ನಾನು ಹೆದರಲ್ಲ ಅಂದಾಗ ಬಿಜೆಪಿ ನಾಯಕರು ನಾವು ಆರ್ ಎಸ್ ಎಸ್ ನವರೇ ಎಂದು ಕಿಡಿ ಕಾರಿದರು. ಕಲಾಪ ಆರಂಭವಾದ ವೇಳೆ ಈ ಒಂದು ಜಟಾಪಟಿ ನಡೆಯಿತು.ನಿಮಗೂ ಆರ್ಎಸ್ಎಸ್ ನವರಿಗೂ ನಾನು ಹೆದರಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದಾಗ, ನೀವು ನಾಲಾಯಕಗಳು, ಯೋಗ್ಯತೆ ಇಲ್ಲ ಎಂದು ಆರ್ ಅಶೋಕ್ ಕಿಡಿ ಕಾರಿದ್ದಾರೆ. ನಿಮ್ಮೆಲ್ಲರನ್ನು ಎತ್ತಿ ಕಟ್ಟಿದ್ದಾರೆ, ನಿಂತುಕೊಳ್ಳಿ, ನೀವು ಆರ್ ಎಸ್ ಎಸ್ ನವರು ಅಲ್ಲವೇ ಅಲ್ಲ ಎಂದು ಹೇಳಿದಾಗ ನಾವು ಆರ್ ಎಸ್ ಎಸ್ ನವರೇ ಎಂದು ಬಿಜೆಪಿ ಶಾಸಕರು ವಾದ ಮಾಡಿದರು. ಕಾಂಗ್ರೆಸ್ನವರು ಪಿಎಫ್‌ಐ ಏಜೆಂಟರು. ಪಾಕಿಸ್ತಾನ ಪಿಎಫ್ಐ ಹೇಳಿದಂಗೆ ಮಾಡೋರು ನೀವು ಎಂದು ಬಿಜೆಪಿ ಕಿಡಿಕಾರಿತು. ಈ…

Read More

ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ಮೂರು ಬೀದಿ ನಾಯಿಗಳಿಂದ ಐದು ವರ್ಷದ ಬಾಲಕಿಯ ಮೇಲೆ ಡೆಡ್ಲಿ ಅಟ್ಯಾಕ್ ಆಗಿದ್ದು, ಈ ಒಂದು ಘಟನೆಯಲ್ಲಿ ಬಾಲಕಿಗೆ ಗಂಭೀರವಾದ ಗಾಯಗಳಾಗಿವೆ. ತಕ್ಷಣ ಬಾಲಕಿಯನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೌದು ಬೆಳಗಾವಿಯ ಗಣೇಶಪುರದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಮೂರು ಬೀದಿನಾಯಿಗಳು ಭೀಕರವಾಗಿ ದಾಳಿ ನಡೆಸಿವೆ. ಬಾಲಕಿಯ ಹೊಟ್ಟೆ, ಬೆನ್ನು ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಬಿಮ್ಸ್ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಪ್ರಾವೀಣ್ಯಾ ಬೋಯರ್​ ನಾಯಿ ದಾಳಿಗೊಳಗಾದ ಬಾಲಕಿ ಎಂದು ತಿಳಿದುಬಂದಿದೆ. ಹೊಟ್ಟೆ, ಬೆನ್ನು, ಕಾಲಿಗೆ ಬೀದಿ ನಾಯಿಗಳು ಕಚ್ಚಿದ್ದು, ಗಂಭೀರ ಗಾಯಗೊಂಡಿರುವ ಬಾಲಕಿಗೆ ಬಿಮ್ಸ್​ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ ನಿನ್ನೆ ಸಹ ಇದೇ ಏರಿಯಾದಲ್ಲಿ ಓರ್ವ ಬಾಲಕನಿಗೆ ಬೀದಿನಾಯಿಗಳು ಕಚ್ಚಿ ಗಾಯಗೊಳಿಸಿವೆ. ಸದ್ಯ ನಾಯಿಗಳ ಕಾಟ ತಪ್ಪಿಸದ ಪಾಲಿಕೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ…

Read More

ಬೆಂಗಳೂರು : ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದರು. ಈ ವೇಳೆ ರಾಜ್ಯದಲ್ಲಿ ಅಪರಾಧಗಳ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಾವು ಅಧಿಕಾರಕ್ಕೆ ಬಂದ ಮೇಲೆ ಅಪರಾಧಗಳನ್ನು ಕಡಿಮೆ ಮಾಡಿದ್ದೇವೆ. ನೀವು ಮತ್ತು ಆರ್ ಎಸ್ ಎಸ್ ನವರು ಅಪರಾಧಗಳನ್ನು ಮಾಡುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ನಾವು ಅಧಿಕಾರಕ್ಕೆ ಬಂದ ಮೇಲೆ ಅಪರಾಧಗಳನ್ನು ಕಡಿಮೆ ಮಾಡಿದ್ದೇವೆ. ಅಪರಾಧಗಳನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಿದ್ದೇವೆ. ನಾವು ಇನ್ನೂ ಅಪರಾಧಗಳನ್ನು ಕಡಿಮೆ ಮಾಡಲು ನೋಡುತ್ತಿದ್ದೇವೆ. ಆದರೆ ಅಪರಾಧಗಳನ್ನು ಮಾಡುವುದೇ ನೀವು. ನೀವು, ಮತ್ತೆ RSS ನವರು ಅಪರಾಧಗಳನ್ನು ಮಾಡುತ್ತೀರಿ. ಆರ್ ಎಸ್ ಎಸ್ ಹೆಸರು ಹೇಳಿದ್ದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಸದನದಲ್ಲಿ ಗದ್ದಲ ಕೋಲಾಹಲ ಉಂಟಾಯಿತು. ದೇಶದ್ರೋಹಿಗಳ ಮೇಲಿನ ಕೇಸ್ ವಿಥ್ ಡ್ರಾ ಮಾಡಿದ್ದೆ ನೀವು ಎಂದು ಬಿಜೆಪಿ ಸದಸ್ಯರು ಕಿಡಿಕಾರಿದರು.ಸಮುದಾಯಗಳ ನಡುವೆ ದ್ವೇಷ ತಂದವರು ನೀವು. ವಿಷಬೀಜ ಬಿತ್ತುವವರು ನೀವು. ಎಲ್ಲದಕ್ಕೂ…

Read More

ಬೆಂಗಳೂರು : ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದವರೇ ನಿಜವಾದ ನಾಯಕ. ನನ್ನ ಸುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುತ್ತ ಗಿರಗಿಟ್ಲೆ ತರ ತಿರುಗಿದರೆ ನಾಯಕರಾಗಲ್ಲ. ಬ್ಯಾನರ್ ಫೋಟೋ ಹಾಕಿದವರು ನಾಯಕರಾಗಲ್ಲ. ಕಾಂಗ್ರೆಸ್ ಪಕ್ಷವನ್ನು ಯಾರು ಅಧಿಕಾರಕ್ಕೆ ತರುತ್ತಾರೆ ಅವರೇ ನಿಜವಾದ ನಾಯಕ ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ಅವರು ತಿಳಿಸಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಎಚ್.ಎಸ್ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದವರೇ ನಿಜವಾದ ನಾಯಕ ಎಂದು ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಡಿಸಿಎಂ ಡಿಕೆ ಶಿವಕುಮಾರ್ ಶಿಸ್ತಿನ ಪಾಠ ಮಾಡಿದ್ದಾರೆ. ನನ್ನ ಮುಂದೆ ಸಿದ್ದರಾಮಯ್ಯ ಮುಂದೆ ಪೋಸ್ಟರ್ ಹಾಕಿದರೆ ನಾಯಕ ಆಗಲ್ಲ. ಪೋಸ್ಟರ್ ಬ್ಯಾನರ್ ಹಾಕಿದ ಮೇಲೆ ಯಾರು ನಾಯಕರು ಆಗುವುದಿಲ್ಲ. ಶಿಸ್ತು ಇರಬೇಕು ಯಾರು ಬೂತ್ ಮಟ್ಟದಲ್ಲಿ ಹೆಚ್ಚು ಮತ ಕೊಡುತ್ತಾನೋ ಅವನೇ ನಿಜವಾದ ನಾಯಕ. ನನ್ನ ಮುಂದೆ ಸಿದ್ದರಾಮಯ್ಯ ಮುಂದೆ ಗಿರಗಿಟ್ಲೆ ತರ ತಿರುಗಿದರೆ ನಾಯಕನಾಗಲ್ಲ. ನಿಮ್ಮ ಬೂತ್…

Read More

ಬೆಳಗಾವಿ : ಯುವಕನೊಬ್ಬ ಬಾಲಕಿಗೆ ನನ್ನನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದ ಇದರಿಂದ ಬೇಸತ್ತು ಬಾಲಕಿ ಮನೆಯಲ್ಲಿ ಯಾರು ಇಲ್ಲದ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೌದು ಚಿಕಿತ್ಸೆ ಫಲಿಸಿದೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಬೆಳಗಾವಿಯ ಘಟಪ್ರಭಾ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪೋಷಕರು ಬಿಮ್ಸ್ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಪ್ರೀತಿಸುವಂತೆ ಬಾಲಕಿಯನ್ನು ಸಿದ್ದಲಿಂಗ ಪೂಜಾರಿ (21) ಎನ್ನುವ ಯುವಕ ಪೀಡಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಬಾಲಕಿ ಬೆಂಕಿ ಹಚ್ಚಿಕೊಂಡು…

Read More

ಮಂಗಳೂರು : ಮತಾಂತರ ಎಂದು ಬಡಿದಾಡಿದ್ದು ಸಾಕು ಮಾಡಿ. ಎಲ್ಲಿವರೆಗೆ ಲವ್ ಜಿಹಾದ್, ಮತಾಂತರ ಬಗ್ಗೆ ಮಾತನಾಡೋದು ಎಂದಿದ್ದರಲ್ಲದೇ, ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತಿಯಪ್ಪ. ಬೇರೆ ಧರ್ಮದ ಹುಡುಗಿಯರನ್ನೂ ನೋಡು. ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದ್ದರು. ಇದೀಗ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ದೂರು ಆಧರಿಸಿ FIR ದಾಖಲಾಗಿದೆ. ಮತಾಂತರ ಎಂದು ಬಡಿದಾಡಿದ್ದು ಸಾಕು ಮಾಡಿ. ಎಲ್ಲಿವರೆಗೆ ಲವ್ ಜಿಹಾದ್, ಮತಾಂತರ ಬಗ್ಗೆ ಮಾತನಾಡೋದು ಎಂದಿದ್ದರಲ್ಲದೇ, ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತಿಯಪ್ಪ. ಬೇರೆ ಧರ್ಮದ ಹುಡುಗಿಯರನ್ನೂ ನೋಡು. ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಬೇಕು ಎಂದು ಹಿಂದೂ ಯುವಕರಿಗೆ ಕರೆ ನೀಡಿದ್ದರು. ಮಾ.9ರಂದು ನಡೆದ ಕುತ್ತಾರು ಕೊರಗಜ್ಜ ಕ್ಷೇತ್ರದಲ್ಲಿ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಸೂಲಿಬೆಲೆ ಅವರು ಭಾಷಣ ಮಾಡಿದ್ದರು. ಕಳೆದ ಮಾರ್ಚ್ 9ರಂದು ದಕ್ಷಿಣಕನ್ನಡ ಜಿಲ್ಲೆಯ ಕುತ್ತಾರು ಕೊರಗಜ್ಜ ಕ್ಷೇತ್ರದಲ್ಲಿ ಪಾದಯಾತ್ರೆ ಸಮಾರೋಪ…

Read More

ಮೈಸೂರು : ಕಳೆದ ಮಾರ್ಚ್ 12 ರಂದು ಮೈಸೂರು ತಾಲೂಕಿನ ಅನಗಹಳ್ಳಿಯಲ್ಲಿ ತೋಟದ ಮನೆಯಲ್ಲಿ ಪ್ರಿಯತಯ ಜೊತೆಗೆ ಇದ್ದಾಗಲೇ ಸೂರ್ಯ ಎನ್ನುವ ವ್ಯಕ್ತಿಯ ಭೀಕರವಾದ ಕೊಲೆ ಆಗಿತ್ತು. ಈಗ ಈ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ತಾಲೂಕಿನ ಜಯಪುರ ಠಾಣೆ ಪೊಲೀಸರು ಕೇವಲ 48 ಗಂಟೆಗಳಲ್ಲಿ 8 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಹೌದು ಕೊಲೆ ನಡೆದ 48 ಗಂಟೆಯಲ್ಲಿ 8 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೈಸೂರು ತಾಲೂಕಿನ ಜಯಪುರ ಠಾಣೆ ಪೋಲೀಸರು 8 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಎಸ್ ರಾಜು, ಕಿರಣ್ ಅಲಿಯಾಸ್ ಚಡ್ಡಿ, ಬಿ ಮನು, ಚಂದ್ರಶೇಖರ್ ಅಲಿಯಾಸ್ ಮಂಗೂ, ಸುನಿಲ್ ಕುಮಾರ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಅಲ್ಲದೇ ಇಬ್ಬರು ಬಾಲಕರು ಸೇರಿದಂತೆ 8 ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೋಗಾದಿಯ ಶರತ್ ಗ್ಯಾಂಗ್ ನಿಂದ ಈ ಒಂದು ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಬೇರೊಂದು ಕೇಸ್ ನಲ್ಲಿ ಜೈಲು…

Read More

ಚಾಮರಾಜನಗರ : ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಉರುಳಿ ಬಿದ್ದ ಪರಿಣಾಮ ವಾಹನದಲ್ಲಿದ್ದ ಸುಮಾರು 15ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಬಳಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಬಳಿ ರಸ್ತೆ ತಿರುವಿನಲ್ಲಿ ವಾಹನ ಪಲ್ಟಿಯಾಗಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಾಹನ ಉರುಳಿ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ 10 ಮಂದಿಗೆ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಪ್ರಾಥಮಿಕ ಚಿಕಿತ್ಸೆ ಪಡೆದು ಗಾಯಾಳುಗಳು ಸದ್ಯ ಮನೆಗೆ ತೆರಳಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಸರಣಿ ಆತ್ಮಹತ್ಯೆ ಪ್ರಕರಣಗಳು ನಡೆದಿದ್ದವು ಬಳಿಕ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ತಡೆಗೆ ಸುಗ್ರೀವಾಜ್ಞೆ ಜಾರಿ ಮಾಡಿತು. ಆದರೂ ಕೂಡ ರಾಜ್ಯದಲ್ಲಿ ಈ ಒಂದು ಮೈಕ್ರೋಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಆತ್ಮಹತ್ಯೆಗಳು ನಿಲ್ಲುತ್ತಿಲ್ಲ. ಈಗ ಚಿಕ್ಕಬಳ್ಳಾಪುರದಲ್ಲಿ ವ್ಯಕ್ತಿ ಒಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಎಂ ಜಾಲಹಳ್ಳಿಯ ಮಂಜುನಾಥ್ (34) ನೇಣಿಗೆ ಶರಣಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜಾಲಹಳ್ಳಿಯಲ್ಲಿ ಮಂಜುನಾಥ್ ಅವರು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಎಲ್ & ಟಿ ಫೈನಾನ್ಸ್ ಸೇರಿದಂತೆ ಐದಾರು ಕಡೆಗೆ ಮಂಜುನಾಥ್ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಆಗದೆ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಮಂಜುನಾಥ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌರಿ ಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ…

Read More