Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ನಿನ್ನೆ ಬೆಂಗಳೂರಿನ ಹೊಯ್ಸಳ ನಗರದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಬಿಹಾರ್ ಮೂಲದ ವ್ಯಕ್ತಿ ಒಬ್ಬ ಅತ್ಯಾಚಾರ ಎಸಿಗಿದು ಅಲ್ಲಲೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಇದೀಗ ಬಾಲಕಿಯ ಕೊನೆಯ ಕ್ಷಣದ ವಿಡಿಯೋ ವೈರಲ್ ಆಗಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಈ ಒಂದು ಬಾಲಕಿಯ ಕೊನೆ ಕ್ಷಣದ ವಿಡಿಯೋ ದೃಶ್ಯ ಸೆರೆಯಾಗಿದೆ. ಶಾಲಾ ಸಮವಸ್ತ್ರದಲ್ಲಿ ಬಾಲಕಿಯು ಒಂದು ರಸ್ತೆಯ ಮೂಲಕ ಓಡೋಡಿ ಬರುತ್ತಿದ್ದಾಳೆ. ಬಾಲಕಿ ಆರೋಪಿಯಿಂದ ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯ ಒಂದು ಕಡೆ ಸೆರೆಯಾಗಿದೆ. ಬಳಿಕ ಅತ್ಯಾಚಾರ ಎಸಗಿ ಬಿಹಾರ್ ಮೂಲದ ವ್ಯಕ್ತಿ ಭೀಕರವಾಗಿ ಕೊಲೆ ಮಾಡಿದ್ದಾನೆ. ನಂತರ ಎರಡನೇ ದೃಶ್ಯದಲ್ಲಿ ಬಾಲಕಿಯನ್ನು ಸ್ಥಳೀಯರು ಬೈಕ್ ಮೇಲೆ ಬಾಲಕಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸುವ ದೃಶ್ಯ ಮತ್ತೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಿನ್ನೆ ನಗರದ ಹೊಯ್ಸಳ ನಗರದ ವಿನಾಯಕ ಲೇಔಟ್ ನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಕೃತ್ಯ ನಡೆದಿದ್ದು, ಅದೇ…
ಬೆಂಗಳೂರು : ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಮಚ್ಚು ಮತ್ತು ರಾಡ್ ನಿಂದ ಯುವಕನೊಬ್ಬನ ಮೇಲೆ ಹಲವರು ಹಲ್ಲೆ ನಡೆಸಲಾಗಿದ್ದು, ಹಲ್ಲ್ಯ ವೇಳೆ ಯುವಕನ ಮುಂಗೈ ಕಟ್ ಆಗಿದ್ದು, ತಕ್ಷಣ ಯುವಕನನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೈಲನರಸಾಪುರದಲ್ಲಿ ನಡೆದಿದೆ. ನಿನ್ನೆ ಯುವಕನ ವಾಹನವನ್ನು ಅಡ್ಡಗಟ್ಟಿ ಪುಂಡರು ರಸ್ತೆಯಲ್ಲಿ ಅಟ್ಟಹಾಸ ಮೆರೆದಿದ್ದಾರೆ. ಬೈಲನರಸಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗ್ರಾಮದ ಸೈಯದ್ ಎಂಬುವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಹಲ್ಲೆಯ ಪರಿಣಾಮ ಯುವಕನ ಮುಂಗೈ ಕಟ್ಟಾಗಿದೆ. ಗ್ರಾಮದ ಸೈಯದ್ ಜುಲೈನ ಮೇಲೆ ಮಾರಣಾಂತಿಕ ಹಲ್ಲಿ ನಡೆಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಜಹೀದ್ ಖಾನ್ ಆದಿಲ್ ಸಾಮ್ರಾಟ್, ಹಾಗೂ ಆಸಿಫ್ ಖಾನ್ ಎನ್ನುವರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಶಿವಮೊಗ್ಗ : ಚಾಲಕನ ನಿಯಂತ್ರಣ ಕಳೆದುಕೊಂಡ ಜೀಪ್, ರಸ್ತೆ ಬದಿಯಿರುವ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸೊರಬ ತಾಲ್ಲೂಕು ನೆಗವಾಡಿ ಗ್ರಾಮ ಸಮೀಪದ ಹಿರೇಮಾಗಡಿಯಲ್ಲಿ ನಡೆದಿದೆ. ಈ ಒಂದು ಭೀಕರ ಅಪಘಾತದಲ್ಲಿಕಳೆದ ಸೋಮವಾರ ತಡರಾತ್ರಿ 11 ಗಂಟೆಗೆ ಅಪಘಾತ ನಡೆದಿದೆ.ಈ ಒಂದು ಭೀಕರ ಅಪಘಾತದಲ್ಲಿ ಚಿಕ್ಕಕಬ್ಬೂರು ಗ್ರಾಮದ ಹನುಮಂತಪ್ಪ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲ್ಲೂರು ವಡ್ಡಿಗೇರಿ ಗ್ರಾಮದ ಲಕ್ಷ್ಮವ್ವ (46) ಮತ್ತು ಕಣಸೋಗಿ ಗ್ರಾಮದ ರೇಣುಕಮ್ಮ (65) ಶಿಕಾರಿಪುರದ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ.ಚಿಕ್ಕಕಬ್ಬೂರು ಗ್ರಾಮದ ಹನುಮಂತಪ್ಪ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಲ್ಲೂರು ವಡ್ಡಿಗೇರಿ ಗ್ರಾಮದ ಲಕ್ಷ್ಮವ್ವ (46) ಮತ್ತು ಕಣಸೋಗಿ ಗ್ರಾಮದ ರೇಣುಕಮ್ಮ (65) ಶಿಕಾರಿಪುರದ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಕಣಸೋಗಿಯಿಂದ ಎಸ್.ಎನ್.ಕೊಪ್ಪ ಕಡೆಗೆ ಹೋಗುತ್ತಿದ್ದ ಜೀಪ್‌ನಲ್ಲಿ ಕಬ್ಬೂರು, ಎಸ್.ಎನ್. ಕೊಪ್ಪ, ಕಣಸೋಗಿ ಗ್ರಾಮದ 8 ಜನ ಪ್ರಯಾಣಿಸುತ್ತಿದ್ದರು. ಹೆದ್ದಾರಿ ಅಂಚಿನಲ್ಲಿದ್ದ ಸಿಮೆಂಟ್ ಕಂಬಗಳಿಗೆ ಜೀಪ್ ಡಿಕ್ಕಿ ಹೊಡೆದು…
ಬೆಂಗಳೂರು : ಸಾರ್ವಜನಿಕರ ಎದುರು ಹವಾ ಸೃಷ್ಟಿಸಲು ಪುಂಡರು ಗನ್ ಮಚ್ಚುಗಳನ್ನು ಪ್ರದರ್ಶಿಸಿ ಪುಂಡಾಟ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೈಲನರಸಾಪುರದಲ್ಲಿ ನಡೆದಿದೆ. ಹೌದು ಬೈಲನರಸಾಪುರದಲ್ಲಿ ಗನ್ ಮಚ್ಚು ಹಿಡಿದು ಪುಂಡರ ಅಟ್ಟಹಾಸ ಮೆರೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು, ಸಾರ್ವಜನಿಕರ ಮಧ್ಯೆ ಹವಾ ಸೃಷ್ಟಿಸಲು ಪುಂಡರು ಮಚ್ಚು ಮತ್ತು ಗನ್ ಗಳನ್ನು ಪ್ರದರ್ಶಿಸಿ ಪುಂಡಾಟ ಮೆರೆದಿದ್ದಾರೆ. ಸಾರ್ವಜನಿಕರಲ್ಲಿ ಹವಾ ಸೃಷ್ಟಿಸಲು ಪುಂಡರು ಗನ್ ಮತ್ತು ಮಚ್ಚುಗಳನ್ನು ಪ್ರದರ್ಶಿಸಿ ಪುಂಡಾಟ ಮೆರೆದಿದ್ದಾರೆ. ಪುಂಡರ ಅಟ್ಟಹಾಸ ಮಿತಿ ಮೀರಿದರೂ ಕೂಡ ಪೊಲೀಸರು ಸೈಲೆಂಟ್ ಆಗಿದ್ದಾರೆ.ನಂದಗುಡಿ ಠಾಣೆಯ ಪೊಲೀಸರ ವಿರುದ್ಧ ಇದೀಗ ಗ್ರಾಮಸ್ಥರು ಅಸಮಾಧಾನ ಹೊರಹಾಕುತ್ತಿದ್ದಾರೆ.ಪುಂಡರ ಅಟ್ಟಹಾಸಕ್ಕೆ ಬ್ರೇಕ್ ಹಾಕುವಂತೆ ಗ್ರಾಮಸ್ಥರು ಇದೀಗ ಒತ್ತಾಯಿಸುತ್ತಿದ್ದಾರೆ.
ಹುಬ್ಬಳ್ಳಿ : ತನ್ನ ಪ್ರೇಯಸಿಯೊಂದಿಗೆ ಮನಸ್ತಾಪ ಉಂಟಾಗಿ ಯುವಕನೊಬ್ಬ ಆಕೆಯ ಖಾಸಗಿ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸಂದೇಶ ಉಣಕಲ್ ಎಂದು ತಿಳಿದುಬಂದಿದ್ದು ಈತ ತನ್ನ ಪ್ರೇಯಸಿಯೊಂದಿಗೆ ಮನಸ್ತಾಪ ಮಾಡಿಕೊಂಡಿದ್ದಾನೆ. ಕಳೆದ ಶನಿವಾರ ಮನೆಯಿಂದ ನಾಪತ್ತೆಯಾಗಿದ್ದು ಹುಬ್ಬಳ್ಳಿಯ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಸಂದೇಶ, ಮೋಟಾರ್ ಬೈಕ್ ಶೋ ರೂಮ್ ನಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ, ಏಕಾಏಕಿ ಶನಿವಾರ ಮನೆಯಿಂದ ನಾಪತ್ತೆಯಾಗಿದ್ದ. ಈ ಕುರಿತು ಕುಟುಂಬಸ್ಥರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇನ್ನು ನನ್ನ ಸಾವಿಗೆ ಸಂಜನಾ ಕಾರಣ ಎಂದು ತಾಯಿ ವಾಯ್ಸ್ ಮೆಸೇಜ್ ಕಳುಹಿಸಿ ಸಾವಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ತನಿಖೆ ಕೈಗೊಂಡಿದ್ದಾರೆ.
ಮೈಸೂರು : ನಟ ದರ್ಶನ್ ತೂಗುದೀಪ ಅವರ ಮನೆಯಲ್ಲಿ ಮಕರ ಸಂಕ್ರಾಂತಿಯ ಹಬ್ಬದ ಸಡಗರ ಜೋರಾಗಿದೆ. 2025ನೇ ವರ್ಷದ ಮೊದಲ ಹಬ್ಬವನ್ನು ದರ್ಶನ್ ಅವರೊಂದಿಗೆ ಆಚರಿಸಬೇಕು ಅನ್ನೋ ವಿಜಯಲಕ್ಷ್ಮಿ ಅವರ ಆಸೆ ಕೊನೆಗೂ ಈಡೇರಿದೆ. ಹೀಗಾಗಿ ದರ್ಶನ್ ಅವರೊಂದಿಗೆ ಇರುವ ಫೋಟೋವನ್ನು ವಿಜಯಲಕ್ಷ್ಮೀ ಇಂದು ಶೇರ್ ಮಾಡಿದ್ದಾರೆ. ಹೌದು, ಜಾಮೀನು ಪಡೆದ ನಂತರ ದರ್ಶನ್ ಕೊಂಚ ನಿರಾಳರಾದಂತೆ ಕಂಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಮೈಸೂರಿಗೆ ಹೋಗಲು ಕೋರ್ಟ್‌ನಿಂದ ಅನುಮತಿ ಪಡೆದುಕೊಂಡು ಇದೀಗ ಮೈಸೂರಿನ ಫಾರಂ ಹೌಸ್ ನಲ್ಲಿ ಪ್ರಾಣಿಗಳ ಹಾರೈಕೆ ಮಾಡುವ ಮೂಲಕ ಸಂಕ್ರಾಂತಿಹಬ್ಬವನ್ನು ಆಚರಣೆ ಮಾಡಿದ್ದಾರೆ.ದರ್ಶನ್ ಮೊದಲೇ ಪ್ರಾಣಿ ಪ್ರಿಯರು ಅವರು ಫಾರಂ ಹೌಸ್ ನಲ್ಲಿ ವಿವಿಧ ತಳಿಯ ಜಾನುವಾರುಗಳು ಇವೆ. ಪ್ರತಿ ವರ್ಷವೂ ಸಹ ಸಂಕ್ರಾಂತಿ ಬಂದಾಗ ಇಲ್ಲಿನ ಎಲ್ಲಾ ಪ್ರಾಣಿಗಳಿಗೂ ಸಹ ವಿಶೇಷವಾದ ಸಂಭ್ರಮ ಮನೆಮಾಡುತ್ತಿತ್ತು. ಇಲ್ಲಿನ ಪ್ರಾಣಿಗಳಿಗೆ ಸ್ನಾನ ಮಾಡಿಸಿ ನಂತರ ಅವುಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸುತ್ತಾರೆ. ದರ್ಶನ್ ಪೂರ್ಣಾವಧಿ ಜಾಮೀನು ಪಡೆದು…
ದಾವಣಗೆರೆ : ಪಂಚಮಸಾಲಿಯ ರಾಜ್ಯಾಧ್ಯಕ್ಷ ಆಗಿದ್ದಕ್ಕೆ ಬಿಜೆಪಿಯ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿ ಗ್ರಾಮದಲ್ಲಿ ಹರ ಜಾತ್ರೆಯ ವೇಳೆ ಕಾರು ಗಿಫ್ಟ್ ನೀಡಲಾಯಿತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಬ್ಬರ ಮೇಲೆ ಕೆಲವರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹೌದು ಹರ ಜಾತ್ರೆಯಲಿ ಕಾರು ಗಿಫ್ಟ್ ನೀಡಿದ ವಿಚಾರಕ್ಕೆ ಇದೀಗ ಗಲಾಟೆ ನಡೆದಿದ್ದು, ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಈ ಒಂದು ಕಾರು ಉಡುಗೊರೆ ನೀಡಲಾಗಿದೆ. ಪಂಚಮಸಾಲಿಯ ರಾಜ್ಯಾಧ್ಯಕ್ಷ ಎಂದು ಕಾರನ್ನು ಗಿಫ್ಟಾಗಿ ನೀಡಲಾಗಿದೆ. ಕಾರು ಕೊಡುಗೆ ಬಗ್ಗೆ ಇಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ಷೇಪ ವ್ಯಕ್ತಪಡಿಸಿದವರನ್ನು ಕೆಲವರು ಥಳಿಸಿರುವ ಘಟನೆ ಹಣಗವಾಡಿ ಬಳಿಯ ಪಂಚಮಸಾಲಿ ಗುರುಪೀಠದಲ್ಲಿ ಹರ ಜಾತ್ರೆಯ ವೇಳೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹಣಗವಾಡಿ ಗ್ರಾಮದಲ್ಲಿ ನಡೆದಿದೆ ಮಧ್ಯಪ್ರವೇಶಿಸಿ ಪೊಲೀಸರು ಇಬ್ಬರನ್ನು ಬಿಟ್ಟು ಕಳುಹಿಸಿದ್ದಾರೆ. ಹಲ್ಲೆಗೊಳಗಾದವನಿಗೆ ತಲೆಗೆ ಪೆಟ್ಟಾಗಿ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಬೆಳಗಾವಿ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಾರು ಚಾಲಕನ ವಿರುದ್ಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂದು ಬೆಳಿಗ್ಗೆ ನಸುಕಿನ ಜಾವ 6 ಗಂಟೆಯ ವೇಳೆ ಬೈಲಹೊಂಗಲದ ಬಳಿ ಕಾರು ಅಪಘಾತವಾಗಿದ್ದು, ಈ ಒಂದು ಅಪಘಾತದಲ್ಲಿ ಶ್ರೀ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಗಂಭೀರವಾದಗಳಾಗಿದ್ದು ಬೆನ್ನು ಮೂಳೆ ಮುರಿತವಾಗಿದೆ ಎಂದು ಬೆಳಗಾವಿಯ ವಿಜಯ ಡಾ. ರವಿ ಪಾಟೀಲ್ ತಿಳಿಸಿದ್ದಾರೆ. ಘಟನೆಯಲ್ಲಿ ಸಹೋದರ ಜನರಾಜ ಹಟ್ಟಿಹಳಿ ಕಾರು ಚಾಲಕ ಹಾಗೂ ಗನ್ ಮ್ಯಾನ್ ಗೆ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ಇದೀಗ ಕಾರು ಚಾಲಕನ ವಿರುದ್ಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, BNS ಕಾಯ್ದೆ ಅಡಿ 281, 125(A) 125(B) ಜೀವಕ್ಕೆ ಕುತ್ತು ತರುವ ನಿಷ್ಕಾಳಜಿ ವಾಹನ ಚಾಲನೆ ಹಾಗೂ ಆ ಜಾಗರೂಕತೆಯಿಂದ ವಾಹನ ಚಲಾಯಿಸಿದರ ಅಡಿ ಇದೀಗ ಪ್ರಕರಣ ದಾಖಲಾಗಿದೆ ಎಂದು…
ಬೆಳಗಾವಿ : ಇಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾಗಿದ್ದು, ಈ ಒಂದು ಅಪಘಾತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್, ಸಹೋದರ ಚೆನ್ನರಾಜ ಹಟ್ಟಿಹೊಳಿ ಹಾಗೂ ಚಾಲಕ, ಗನ್ ಮ್ಯಾನ್ ಎಲ್ಲರೂ ಗಾಯಗೊಂಡಿದ್ದ ಘಟನೆ ನಡೆದಿತ್ತು. ಈಗ ಈ ಒಂದು ಘಟನೆಯ ಸಂಭಂದಿಸಿದಂತೆ ಸಹೋದರ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ ಜನರ ಜೊತೆ ಹೋಳಿ ಮನೆಯಲ್ಲಿ ದುರ್ಘಟನೆ ನಡೆಯುವ ಸಂಭವವಿದೆ ಎಂದು ನಮಗೆ ಬೇಕಾದ ಅವರು ಭವಿಷ್ಯ ನುಡಿದಿದ್ದರು ಎಂದು ತಿಳಿಸಿದರು. ಆಸ್ಪತ್ರೆಗೆ ಭೇಟಿ ನೀಡಿ ಸಹೋದರಿಯನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆಯಲ್ಲಿ ದುರ್ಘಟನೆ ನಡೆಯುವ ಸಂಭವವಿದೆ ಹೀಗಂತ ನಮಗೆ ಬೇಕಾದವರು ಭವಿಷ್ಯ ಹೇಳಿದ್ದರು. ಸಂಕ್ರಾಂತಿ ಮುಗಿಯುವವರೆಗೆ ಕಾಳಜಿ ಇರಲಿ ಅಂತ ಹೇಳಿದ್ದರು. ನಮ್ಮ ಬೆಳಗಾವಿ ಡ್ರೈವರ್ ನನ್ನು ದಾವಣಗೆರೆ ತನಕ ಕರೆಸಿದ್ರೆ ಈ ಒಂದು ಘಟನೆ ಸಂಭವಿಸುತ್ತಿರಲಿಲ್ಲ. ನಾನು ಡ್ರೈವರ್ ಇಂದಿನ ಸೀಟ್ನಲ್ಲಿ…
ಬೆಂಗಳೂರು : ಕಿಯೋನಿಕ್ಸ್ ನ ಹಗರಣಕ್ಕೆ ಸಂಬಂಧಪಟ್ಟಂತೆ, ಬಾಕಿ ಬಿಲ್ ಪಾವತಿಸದಿದ್ದರೆ, ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶರತ್ ಬಚ್ಚೇಗೌಡನೆ ನೇರ ಹೊಣೆ ಎಂದು ದಯಾಮರಣ ಕೋರಿ ಪತ್ರ ಬರೆದಿದ್ದಾರೆ. ಇದೇ ವಿಚಾರವಾಗಿ ಸಚಿವ ಪ್ರಿಯಾಂಕ ಖರ್ಗೆ ಈ ಒಂದು ಕಿಯೋನಿಕ್ಸ್ ನಲ್ಲಿ ಸುಮಾರು 500 ಕೋಟಿ ಅವ್ಯವಹಾರ ನಡೆದಿರಬಹುದು. ನಾಲ್ಕು ವರ್ಷಗಳ ವರದಿಯನ್ನು ಆಧರಿಸಿ ಅದರ ಪ್ರಕಾರ ಬಾಕಿ ಬಿಲ್ ಬಿಡುಗಡೆ ಮಾಡಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ ನೀಡಿದರು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಕೌಂಟೆಂಟ್ ಜನರಲ್ ಯಾವುದೇ ಮಾನದಂಡ ಪಾಲಿಸದೆ ನೇಮಕಾತಿ ಮಾಡಿರುವ ಆರೋಪ ಇದೆ. ನಕಲಿ ಬಿಲ್ ಮಾರ್ಕೆಟ್ ದರಕ್ಕಿಂತ ಹೆಚ್ಚಿನ ದರಕ್ಕೆ ಪೂರೈಕೆ ಮಾಡಲಾಗಿದೆ. ಮಾರ್ಕೆಟ್ ದರಕ್ಕಿಂತ ಹೆಚ್ಚಿನ ದರಕ್ಕೆ ಸಾಮಗ್ರಿ ಪೂರೈಕೆ ಮಾಡಿರುವ ಆರೋಪ ಇದೆ. ಅಂದಾಜು 500 ಕೋಟಿ ಅವ್ಯವಹಾರ ಕಂಡುಬರುವ ಹಾಗಿದೆ ಎಂದರು. ಕಳೆದ ನಾಲ್ಕು ವರ್ಷದ ಆಡಿಟರ್ ರಿಪೋರ್ಟ್ ಮಾಡಬೇಕಿದೆ.…












