Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೆಂಗಳೂರು : ಇತ್ತೀಚಿಗೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ತನಿಖೆಯಲ್ಲಿ ಇರುವಾಗಲೇ ಬೆಂಗಳೂರಿನಲ್ಲಿ ಮತ್ತೊರ್ವ ಬಿಜೆಪಿ ಕಾರ್ಯಕರ್ತ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಫೇಸ್ಬುಕ್ ನಲ್ಲಿ ವಿಡಿಯೋ ಮಾಡಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮರಕ್ಕೆ ನೇಣು ಬಿಗಿದುಕೊಂಡು ಪ್ರವೀಣ್ ಗೌಡ ಬೇಲೂರು (35) ಆತ್ಮಹತ್ಯೆಗೆ ಶರಣಾಗಿದ್ದಾರೆ. ಆನೇಕಲ್ ಪಟ್ಟಣದ ಎಸ್ವಿಎಂ ಸ್ಕೂಲ್ ಬಳಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದ ಎಸ್ವಿಎಂ ಸ್ಕೂಲ್ ಬಳಿ ಸಾವಿಗೆ ಕಾರಣರಾದವರ ಹೆಸರುಗಳನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಿ ಪ್ರವೀಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಏನಿದೆ? ಕಳೆದ ಎರಡು ತಿಂಗಳಿನಿಂದ ಮಾನಸಿಕವಾಗಿ ನೊಂದಿದ್ದೇನೆ. ನನ್ನ ಸಾವಿಗೆ ಕೆಲವರು ನೇರವಾಗಿ ಕಾರಣರಾಗಿದ್ದಾರೆ. ಸಮಂದೂರ್ ಕಿರಣ್, ಗೋಕುಲ್ ಪ್ಯಾಶನ್ ಹರೀಶ್, ಭಾಸ್ಕರ್, ನಾರಾಯಣಪ್ಪ ದೊಡ್ಡಹಾಗಡೆ, ಮಧುಗೌಡ,ಳ್ ಹಾಗು ಸರವಣ ಎಂಬುವವರ ಹೆಸರು ವಿಡಿಯೋದಲ್ಲಿ…
ಶಿವಮೊಗ್ಗ : ರಾಜ್ಯದಲ್ಲಿ ಮಂಗನ ಕಾಯಿಲೆಗೆ ಮತ್ತೊಂದು ಬಲಿಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ 8 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಮೃತ ಬಾಲಕನನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದತ್ತರಾಜಪುರ ಗ್ರಾಮದ ರಚಿತ್ (8) ಎಂದು ತಿಳಿದುಬಂದಿದೆ. ಕಳೆದ 15 ದಿನಗಳ ಹಿಂದೆ ರಚಿತ್ ಹಾಗೂ ಆತನ ಸಹೋದರಿಗೆ ಮಂಗನ ಕಾಯಿಲೆ ಸೋಂಕು ತಗುಲಿತ್ತು. ಇಬ್ಬರನ್ನು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಚೇತರಿಸಿಕೊಂಡ ರಚಿತ್ ಸಹೋದರಿಯನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ರಚಿತ್ ಮಣಿಪಾಲ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾನೆ.
ಮಂಗಳೂರು : ಮನೆಯ ಮುಂದೆ ಆಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಮಂಗಳೂರಿನ ಮುಂಡಗೋಡ ತಾಲ್ಲೂಕಿನ ಗುಂಜಾವತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಮನೆಯ ಎದುರಿನ ನೀರಿನ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದ, ಎರಡೂವರೆ ವರ್ಷದ ವಿನಯ್ ಕುಂಬಾರ ಎನ್ನುವ ಮಗು ಸಾವನ್ನಪ್ಪಿದೆ.ಮನೆಯ ಮುಂದೆ ಆಟವಾಡುತ್ತಿದ್ದ ಮಗು, ನೀರಿನ ತೊಟ್ಟಿಗೆ ಬಿದ್ದಿರುವುದನ್ನು ಗಮನಿಸಿದ ಕುಟುಂಬದವರು ತಾಲ್ಲೂಕು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮಗು ಕೊನೆಯುಸಿರೆಳೆದಿದೆ. ಘಟನೆ ಕೋರಿದಂತೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ : ಪತಿ ಪತ್ನಿಯ ಶೀಲ ಶಂಕಿಸುವುದು ಅಷ್ಟೆ ಅಲ್ಲದೇ, ಕೌಟುಂಬಿಕ ಕಲಹದಿಂದ ಮನನೊಂದ ಪತ್ನಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಗೃಹಿಣಿಯನ್ನು ಹರಿಣಾಕ್ಷಿ ಎಂದು ತಿಳಿದುಬಂದಿದೆ. ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಲಿಂಗಾಪುರ ಗ್ರಾಮದ ಶೇಖರ್ ಎಂಬುವವರು ಕಳೆದ 16 ವರ್ಷಗಳ ಹಿಂದೆ ಸಕಲೇಶಪುರ ತಾಲೂಕಿನ ಮಾಗಲು ಗ್ರಾಮದ ಹರಿಣಾಕ್ಷಿಯವರನ್ನು ಮದುವೆಯಾಗಿದ್ದರು. ಈ ನಡುವೆ ಇಬ್ಬರ ಮಧ್ಯೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಆಗುತ್ತಿತ್ತು ಈ ವೇಳೆ ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡುತ್ತಿದ್ದವು ಎಂದು ಮೃತಳ ತಂದೆ ತಿಳಿಸಿದ್ದಾರೆ. ಆದರೆ ಇತ್ತೀಚೆಗೆ ನನ್ನ ಮಗಳ ಮೇಲೆ ಅನೈತಿಕ ಸಂಬಂಧದ ಸಂಶಯ ಪಟ್ಟು ನಾನು ಬೇರೆ ವಿವಾಹವಾಗುತ್ತೇನೆ ನೀನು ಸಹ ಬೇರೆ ಆಗು ಎಂದು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತ ವಿಚ್ಛೇದನ ಕೊಡುವಂತೆ ಪೀಡಿಸುತ್ತಿದ್ದ. ಅಲ್ಲದೆ ಅವನು ಬೇರೆ ಮಹಿಳೆಯೊಂದಿಗೆ ಹಾರ್ಥಿಕ…
ರಾಯಚೂರು : ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಭೀಕರವಾದ ಅಪಘಾತ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅಮರಾಪುರ ಗ್ರಾಮದ ಬಳಿ ಘಟನೆ ನಡೆದಿದೆ. ಗೂಡ್ಸ್ ಪಿಕ್ ಅಪ್ ವಾಹನವೊಂದು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನದಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮೃತರನ್ನು ನಾಗರಾಜ್ (28) ಸೋಮು (38) ನಾಗಭೂಷಣ್ (36) ಹಾಗೂ ಮುರಳಿ (38) ಎಂದು ತಿಳಿದುಬಂದಿದೆ. ಮೃತಪಟ್ಟ ನಾಲ್ವರು ತೆಲಂಗಾಣದ ಹಿಂದೂಪುರ ನಿವಾಸಿಗಳು ಎಂದು ತಿಳಿದು ಬಂದಿದೆ. ಇನ್ನು ಗೂಡ್ಸ್ ಪಿಕಪ್ ವಾಹನ ಚಾಲಕ ಆನಂದ್ ಗೆ ಗಂಭೀರವಾದ ಗಾಯಗಳಾಗಿವೆ. ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಕುರಿ ಖರೀದಿಸಲು ಯಾದಗಿರಿ ಜಿಲ್ಲೆಯ ಶಹಪುರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬ್ರಿಟಿಷ್ ಕಾಲದ ಪೊಲೀಸ್ ಸಿಬ್ಬಂದಿಗಳ ಟೋಪಿಗೆ ಬ್ರೇಕ್ ಬೀಳುವ ಸಾಧ್ಯತೆ ಇದ್ದು, ರಾಜ್ಯದ ಹೆಡ್ ಕಾನ್‌ಸ್ಟೆಬಲ್‌ಗಳು, ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಸ್ಲೋಚ್ ಹ್ಯಾಟ್ ಅನ್ನು ಬದಲಾವಣೆ ಮಾಡಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ನಾಳೆ ಬೆಳಿಗ್ಗೆ 11:30ಕ್ಕೆ ಸಭೆ ನಡೆಯಲಿದೆ. ಕೆಎಸ್ಆರ್‌ಪಿ ಎಡಿಜಿಪಿ ಉಮೇಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕಾನ್‌ಸ್ಟೆಬಲ್‌ಗಳು ಆರಂಭದಲ್ಲಿ ಟರ್ಬನ್ ಮಾದರಿಯ ಟೋಪಿ ಬಳಸುತ್ತಿದ್ದರು. ಪ್ರಸ್ತುತ ಬಳಸುತ್ತಿರುವ ಟೋಪಿಯನ್ನು ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆರಂಭಿಸಲಾಗಿತ್ತು. ಹಳೆ ಮಾದರಿಯ ಟೋಪಿ ಬಳಕೆಯಿಂದ ಕಾನ್‌ಸ್ಟೆಬಲ್‌ಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಪ್ರತಿಭಟನೆ, ರ್‍ಯಾಲಿ ವೇಳೆ ಈ ಟೋಪಿ ಧರಿಸಿ, ಕರ್ತವ್ಯ ನಿರ್ವಹಣೆ ಕಷ್ಟ. ಟೋಪಿ ಕೆಳಕ್ಕೆ ಬಿದ್ದರೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಆದ್ದರಿಂದ, ಹಳೆ ಮಾದರಿಯ ಟೋಪಿ ಬದಲಿಗೆ ಗಟ್ಟಿಯಾಗಿ ನಿಲ್ಲುವಂತಹ ಟೋಪಿ ನೀಡಿದರೆ ಉತ್ತಮ ಎಂದು ಕಾನ್‌ಸ್ಟೆಬಲ್‌ಗಳು ಕೋರಿದ್ದರು.
ರಾಯಚೂರು : ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ ಬೆಂಗಳೂರು ಮೂಲದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಮೂಲದ ಮುತ್ತುರಾಜ್(24) ಮತ್ತು ಮದನ್ (20) ಎಂದು ತಿಳಿದುಬಂದಿದೆ. ಎಲೆಬಿಚ್ಚಾಲಿ ಗುರುರಾಯರ ಏಕಶಿಲಾ ವೃಂದಾವನ ದರ್ಶನಕ್ಕೆ ಬೆಂಗಳೂರಿನಿಂದ 15 ಜನ ಸ್ನೇಹಿತರ ತಂಡ ಆಗಮಿಸಿತ್ತು. ಈ ವೇಳೆ ಮುತ್ತುರಾಜ್ ಮತ್ತು ಮದನ್ ನದಿಯಲ್ಲಿ ಈಜಲು ತೆರಳಿದ್ದಾರೆ. ನದಿಯಲ್ಲಿ ತಗ್ಗು ಪ್ರದೇಶದಲ್ಲಿ ಸಿಲುಕಿ ಒದ್ದಾಡಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆ ಕುರಿತಂತೆ ಯರಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರಕನ್ನಡ : ಕಳೆದ ಕೆಲವು ದಿನಗಳ ಹಿಂದೆ ಹೊನ್ನಾವರದಲ್ಲಿ ಹಸುವಿನ ತಲೆ ಕಡೆದು ಗೋಮಾಂಸ ಮಾರಾಟ ಮಾಡಿದ ಪ್ರಕರಣ ಮಾಸುವ ಮುನ್ನವೇ, ಮತ್ತೊಂದು ಹೇಯ ಕೃತ್ಯ ನಡೆದಿದ್ದು, ಪಾಪಿಗಳು ಗಬ್ಬದ ಹಸುವನ್ನು ಭೀಕರವಾಗಿ ಹತ್ಯೆಗೈದು ಅದರ ಹೊಟ್ಟೆಯಲ್ಲಿದ್ದ ಕರುವನ್ನು ನದಿಗೆ ಬಿಸಾಡಿರುವ ದಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ನಡೆದಿದೆ. ಹೌದು ಇತ್ತೀಚೆಗೆ ಪಕ್ಕದ ಹೊನ್ನಾವರ ತಾಲೂಕಿನಲ್ಲಿ ಗಬ್ಬದ ಗೋವನ್ನು ಕದ್ದು ಹತ್ಯೆಗೈದು ಗೋಮಾಂಸವನ್ನು ಸಾಗಾಟ ಮಾಡಿದಪ್ರಕರಣ ಜನಮಾನಸದಿಂದ ಮಾಸುವ ಮುನ್ನವೇ ಭಟ್ಕಳದಲ್ಲಿ ಅಂತಹದ್ದೇ ಮತ್ತೊಂದು ಪ್ರಕರಣ ನಡೆದಿದೆ. ಭಟ್ಕಳ ತಾಲೂಕಿನ ಹೆಬಳೆಯ ಕುಕ್ ನೀರ್‌ಬಳಿಯಲ್ಲಿ ಗಬ್ಬದ ಹಸು ಕಡಿದ ದುರುಳರು ಹೊಟ್ಟೆಯೊಳಗಿದ್ದ ಕರು ಮತ್ತು ಗೋವಿನ ಬಾಲವನ್ನು ವೆಂಕಟಾಪುರ ನದಿಯಂಚಿನಲ್ಲಿ ಎಸೆದು ಗೋಮಾಂಸದೊಂದಿಗೆ ಪರಾರಿಯಾಗಿದ್ದಾರೆ. ಗೋವಿನ ಹೊಟ್ಟೆಯೊಳಗಿದ್ದ ಪುಟ್ಟ ಕರುವನ್ನು ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಿದ್ದಾರೆ. ಗುರುವಾರ ಬೀದಿ ನಾಯಿಯೊಂದು ಚೀಲವನ್ನು ಎಳೆಯುತ್ತಿರುವಾಗ ಸ್ಥಳೀಯರು ನೋಡಿ ಪರಿಶೀಲಿಸಿದ್ದಾರೆ.ಆಗ ಸತ್ತ ಕರು ಇರುವುದು ಪತ್ತೆಯಾಗಿದೆ. ಜೊತೆಗೆ ಹಸುವಿನ ಬಾಲ ಕೂಡ…
ಮಂಗಳೂರು : ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಇದೀಗ ಇಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ನೆಲೆಯಲ್ಲಿ ನಗರದಲ್ಲಿ ಯಾವುದೇ ರೀತಿಯಾಗಿ ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆದಂತೆ ಸುಮಾರು 2000 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಮಂಗಳೂರು ಎಸ್ಪಿ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಹೌದು ವಕ್ಫ್ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಯಲಾಗುತ್ತಿದ್ದು ಕರ್ನಾಟಕ ಉಲಿಮಾ ಸಂಘಟನೆಯಿಂದ ಈ ಒಂದು ಪ್ರತಿಭಟನೆ ನಡೆಯುತ್ತಿದೆ ಮಂಗಳೂರಿನ ಗಾರ್ಡನ್ ಮೈದಾನದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿದೆ. ಮಂಗಳೂರು ನಗರದಲ್ಲಿ ಐವರು ಎಸ್ ಪಿ ಗಳ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿದ್ದು, ಐವರು ಎಸ್ಪಿ ಗಳು, ಐವರು ಹೆಚ್ಚುವರಿ ಎಸ್ಪಿ ಗಳು, 20 ಡಿವೈಎಸ್ಪಿ, 230 ಇನ್ಸ್ಪೆಕ್ಟರ್ ಗಳು ಸೇರಿದಂತೆ 2,000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅರೆಸೇನಾಪಡೆ, 20 ಕೆಎಸ್‌ಆರ್‌ಪಿ ತುಕಡಿ, 20 ಶಸಸ್ತ್ರ ಪೊಲೀಸ್ ಪಡೆ ನಿಯೋಜನೆ ಮಾಡಲಾಗಿದೆ ಎಂದು ಅನುಪಮ್ ಅಗರ್ವಾಲ್ ಮಾಹಿತಿ ನೀಡಿದರು. ಧರಣಿಯ ಸ್ಥಳ ಮಂಗಳೂರಿನ ಸೂಕ್ಷ್ಮ ಮತ್ತು…
ಅಮೇರಿಕ : ಅಮೇರಿಕಾದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 6 ಜನರು ಗಾಯಗೊಂಡಿದ್ದಾರೆ ಎಂದುನ್ ತಿಳಿದುಬಂದಿದೆ. ಗುಂಡಿನ ದಾಳಿ ನಡೆಸಿರುವ 20 ವರ್ಷದ ವಿದ್ಯಾರ್ಥಿಯನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ ಮಾಡಿದ ಯುವಕಾನನನ್ನು ಸ್ಥಳೀಯ ಶೆರಿಫ್ ಡೆಪ್ಯೂಟಿಯ ಮಗ ಎಂದು ತಿಳಿದುಬಂದಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಒಂದು ಘಟನೆ ಅಮೆರಿಕದ ಕಾಲೇಜು ಕ್ಯಾಂಪಸ್ ಅನ್ನು ಬೆಚ್ಚಿಬೀಳಿಸಿದೆ. ಯುವಕನನ್ನು 20 ವರ್ಷದ ಫೀನಿಕ್ಸ್ ಇಕ್ನರ್ ಎಂದು ಗುರುತಿಸಲಾಗಿದ್ದು, ಆಪಾದಿತ ಬಂದೂಕುಧಾರಿ ವಿದ್ಯಾರ್ಥಿ ಬೆಳಿಗ್ಗೆ 11:50 ರ ಸುಮಾರಿಗೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದು ಗುಡ್ನದ ಅಳಿಯಲಿ ಆರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು. ಮಾಹಿತಿ ನೀಡಿದ್ದಾರೆ. ತಕ್ಷಣ ಗುಂಡಿನ ದಾಳಿ ನಡೆಸಿದ ಯುವಕನನ್ನು ಪೊಲೀಸರು…












