Author: kannadanewsnow05

ತುಮಕೂರು : ನಾಳೆ ತುಮಕೂರಿಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದು, ಬಹುಕೋಟಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಲಿದ್ದಾರೆ. ಅಲ್ಲದೆ 1.4 ಲಕ್ಷದ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸಿಎಂ ಸಿದ್ದರಾಮಯ್ಯ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ ಇದೆ ವೇಳೆ ಮಾಜಿ ಶಾಸಕ ಗೌರಿ ಶಂಕರ್ ಅವರು ಬಿಜೆಪಿ ಶಾಸಕ ಸುರೇಶ್ ಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಇದೀಗ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದ್ರೆ 1ಲಕ್ಷ ಬಹುಮಾನ ಕೊಡುತ್ತೇನೆ ಎಂದು ಬಿಜೆಪಿ ಶಾಸಕ ಸುರೇಶ ಗೌಡ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಎನ್ನಲಾದ ಆಡಿಯೋವನ್ನು ಮಾಜಿ ಶಾಸಕ ಗೌರಿಶಂಕರ್ ಬಿಡುಗಡೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಬಸ್ ಕಳಿಸುತ್ತೇನೆ ಎಲ್ಲರೂ ಹೋರಾಟ ಮಾಡಬೇಕು. ಸಿಎಂ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ.ಅಧ್ಯಕ್ಷರು, ಸದಸ್ಯರು ಕಪ್ಪು ಬಾವುಟ ತೋರಿಸಬೇಕು. ಅಲ್ಲದೇ ಸಮಾವೇಶದಲ್ಲಿ ಧಿಕ್ಕಾರ ಕೂಗಿದವರಿಗೆ 1 ಲಕ್ಷ ಬಹುಮಾನ‌ ನೀಡುತ್ತೇನೆ. ಸಿಎಂ ಸಿದ್ದರಾಮಯ್ಯ ವಿರುದ್ಧ…

Read More

ಕೋಲಾರ : ಸದ್ಯ ರಾಜ್ಯದಲ್ಲಿ ಯಾವುದೇ ಸಚಿವ ಸಂಪುಟ ಪುನರ್ ರಚನೆ ಹಾಗೂ ವಿಸ್ತರಣೆ ಇಲ್ಲ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಕೋಲಾರ ಜಿಲ್ಲೆಯ ಮಾಲೂರು ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೌಡ ನಾನು ಕೂಡ ಸಚಿವ ಸ್ಥಾನಕ್ಕೆ ಅರ್ಹನಿದ್ದೇನೆ ಎಂದು ಸಚಿವ ಸ್ಥಾನದ ಬೇಡಿಕೆ ಮುಂದೆ ಇಟ್ಟಿದ್ದಾರೆ. ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಶಾಸಕ ನಂಜೇಗೌಡ ಸಚಿವ ಸ್ಥಾನದ ಕುರಿತು ಆಗ್ರಹಿಸಿದ್ದು, ಈ ಬಾರಿ ಕೋಲಾರ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು. ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದೇವೆ. ಹಾಗಾಗಿ ಮಂತ್ರಿ ಸ್ಥಾನ ಬೇಕು. ಅಲ್ಲದೇ ಸಚಿವ ಸ್ಥಾನಕ್ಕೆ ನಾನು ಅರ್ಹನಿದ್ದೇನೆ ಎಂದು ಶಾಸಕ ಕೆ ವೈ ನಂಜೇಗೌಡ ತಿಳಿಸಿದರು. ಮಾಲೂರು ತಾಲೂಕಿನಲ್ಲಿ ನಾನು ಕಾಂಗ್ರೆಸ್ ಕಟ್ಟಿ ಬೆಳೆಸಿದ್ದೇನೆ. ತುಂಬಾ ಕಷ್ಟದಲ್ಲಿ ಎರಡನೇ ಬಾರಿ ಆಯ್ಕೆಯಾಗಿದ್ದೇನೆ. ಕೋಲಾರ ಜಿಲ್ಲೆಯ ಶಾಸಕರು ಮಂತ್ರಿ ಸ್ಥಾನ ಕೇಳಿದ್ದೇವೆ. ಜಿಲ್ಲೆಯ ಯಾರಿಗೆ…

Read More

ಬೆಳಗಾವಿ : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ, ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಬಿಜೆಪಿಯ ಕೆಲ ಮಾಜಿ ಶಾಸಕರು ಆಗ್ರಹಿಸಿದ್ದಾರೆ. ಈ ಒಂದು ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನನ್ನ ವಿರುದ್ಧ ಉಗ್ರ ಕ್ರಮ ಕೈಗೊಂಡರು ಯಾವುದೇ ತಕರಾರು ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಬೇಕು ಎನ್ನುವ ವಿಚಾರವಾಗಿ ಉಗ್ರ ಕ್ರಮ ಕೈಗೊಳ್ಳುವುದಕ್ಕೆ ನನ್ನದೇನು ತಕರಾರು ಇಲ್ಲ. ಬೇಕಾದುದ್ದನ್ನು ಮಾಡಲಿ ನಾನು ಅದನ್ನು ಸ್ವಾಗತ ಮಾಡುತ್ತೇನೆ. ನಾವು ಯಡಿಯೂರಪ್ಪನವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿಲ್ಲ. ಯಡಿಯೂರಪ್ಪನವರ ಪೋಕ್ಸೋ ಬಗ್ಗೆ ಮಾತನಾಡಿಲ್ಲ. ನಮ್ಮ ವಕ್ಫ್ ಹೋರಾಟಕ್ಕೆ ದೆಹಲಿಯಿಂದ ತಡೆ ಹಿಡಿದಿಲ್ಲ. ಇದರ ಅರ್ಥ ನಮಗೆ ಅವರ ಆಶೀರ್ವಾದ ಇದೆ ಅಂತ ಅಂದುಕೊಳ್ಳುತ್ತೇವೆ ಯಾರ ಬಗ್ಗೆ ಮಾತನಾಡಬೇಡಿ ಎಂದು ನಮಗೆ ಹೇಳಿದ್ದಾರೆ ಎಂದು ಶಾಸಕ…

Read More

ಬೆಂಗಳೂರು : ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಣ ಬಡಿದಾಟ ತೀವ್ರ ತಾರಕಕ್ಕೆ ಏರಿದ್ದು, ಇಂದು ಮಾಜಿ ಶಾಸಕರು, ಬೆಳ್ಳಂ ಬೆಳಿಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ಯಡಿಯೂರಪ್ಪ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ, ಮಾಜಿ ಶಾಸಕರುಗಳಾದಂತಹ ಎಂಪಿ ರೇಣುಕಾಚಾರ್ಯ, ಬಿಸಿ ಪಾಟೀಲ್ ಮಾಡಾಳ್ ವಿರೂಪಾಕ್ಷಪ್ಪ ಹಲವರು ಯಡಿಯೂರಪ್ಪ ಅವರೊಂದಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿದರು. ಈ ಸಂದರ್ಭದಲ್ಲಿ ಯತ್ನಾಳ್ ಉಚ್ಚಾಟನೆಗೆ ಕಾರ್ಯಕರ್ತರ ಅಭಿಪ್ರಾಯ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಮಾಜಿ ಶಾಸಕರು ಈ ವಿಷಯವನ್ನು ಬಿಎಸ್ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದಾರೆ. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಬೇಕು ಎಂಬ ಕೂಗು ಕೇಳಿ ಬಂದ ಬೆನ್ನಲ್ಲೇ ಶಾಸಕ ಬಸನಗೌಡ ಪಾಟೀಲ ಅವರು, ಉಗ್ರ ಕ್ರಮ ಕೈಗೊಳ್ಳುವುದಕ್ಕೆ ನನ್ನದೇನು ತಕರಾರು ಇಲ್ಲ. ಬೇಕಾದುದ್ದನ್ನು ಮಾಡಲಿ ನಾನು ಅದನ್ನು ಸ್ವಾಗತ ಮಾಡುತ್ತೇನೆ. ನಾವು ಯಡಿಯೂರಪ್ಪನವರ…

Read More

ಬೆಂಗಳೂರು : ಇತ್ತೀಚೆಗೆ ಬೆಂಗಳೂರಿನಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದ್ದು, ಕಳೆದ ಕೆಲವು ದಿನಗಳ ಹಿಂದೆ ಅರಣ್ಯ ಇಲಾಖೆ ಅಧಿಕಾರಿಗಳು 3 ಚಿರತೆಗಳನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ಇದೀಗ ಸೋಲದೇವನಹಳ್ಳಿ ಗ್ರಾಮದಲ್ಲಿ ನರಭಕ್ಷಕ ಚಿರತೆ ಒಂದು ಮನೆಗೆ ನುಗ್ಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಸೋಲದೇವನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಗ್ರಾಮದ ರಾಜಣ್ಣ ಎಂಬುವವರ ನಾಯಿಯ ಮೇಲೆ ದಾಳಿ ಮಾಡಿದ್ದು ಅದೃಷ್ಟವಶಾತ್ ನಾಯಿ ಚಿರತೆಯ ಬಾಯಿಯಿಂದ ಬಚಾವ್ ಆಗಿದೆ. ನಟ ವಿನೋದ್ ರಾಜ್ ತೋಟ ಸಮೀಪದ ಮನೆಯ ಬಳಿ ಈ ಒಂದು ಘಟನೆ ನಡೆದಿದೆ ಚಿರತೆಯ ಉಪಟಳ ಮಿತಿಮೀರಿದ ಹಿನ್ನೆಲೆಯಲ್ಲಿ ಇದೀಗ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಸೋಲದೇವನಹಳ್ಳಿಯ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Read More

ಕಲಬುರ್ಗಿ : ಕಲಬುರ್ಗಿ ಜೈಲು ಅಧೀಕ್ಷಕಿ ಅನಿತಾ ಅವರ ಕಾರು ಸ್ಪೋಟಿಸುವುದಾಗಿ ಇತ್ತೀಚಿಗೆ ಹಲವರು ಕರೆ ಮಾಡಿ ಬೆದರಿಕೆ ಹಾಕಿದ್ದರು ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಒಂಬತ್ತು ಜನರ ವಿರುದ್ಧ FIR ದಾಖಲಾಗಿದೆ. ಮುಸ್ತಫಾ,ನಸೀರ್, ಬಚ್ಚನ್,ಅಲ್ತಾಫ್, ದೇವರಾಜ್, ನಾಗರಾಜ್, ಶ್ರೀಕಾಂತ್ ಸೇರಿ 9 ಕೈದಿಗಳ ವಿರುದ್ಧ ಅಧೀಕ್ಷಕಿ ಅನಿತಾ ಎಫ್‌ಐಆರ್‌ ದಾಖಲಿಸಿದ್ದಾರೆ. ಜೈಲಿನಲ್ಲಿ ಮಾದಕ ವಸ್ತುಗಳಾದಂತಹ ಸಿಗರೇಟ್ ಬಿಡಿ ಗುಟ್ಕಾ ವಸ್ತುಗಳನ್ನು ಬಂದು ಮಾಡಿದ್ದಕ್ಕಾಗಿ ಕೈದಿಗಳು ಪ್ರತಿಭಟನೆ ಮಾಡಿದ್ದರು. ಬಳಿಕ ದುಷ್ಕರ್ಮಿ ಒಬ್ಬ ಆಡಿಯೋ ಮೂಲಕ ಜೈಲು ಅಧ್ಯಕ್ಷಕಿ ಅನಿತಾ ಅವರ ಕಾರು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು, ಅಲರ್ಟ್ ಆಗಿ, ಇದನ್ನ ಜೈಲಿನಲ್ಲಿರುವ ಕೈದಿಗಳೇ ಕಳುಹಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿತ್ತು. ಇದೀಗ ಈ ಪ್ರಕರಣದ ಹಿಂದೆ 9 ಜನ ಕೈದಿಗಳ ಕೈವಾಡ ಇರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೆ ಕಲಬುರಗಿ…

Read More

ಬೆಂಗಳೂರು : ರಾಷ್ಟ್ರಪ್ರಶಸ್ತಿ ವಿಜೇತ ಹಾಗೂ ಸಿನೆಮಾ ನಿರ್ಮಾಪಕ ಅರುಣ್ ರೈ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರ ಬಳಿಯ ಆರ್‌ಎಂಸಿ ಯಾರ್ಡ್ ಅರುಣ್ ರೈ ವಿರುದ್ಧ FIR ದಾಖಲಾಗಿದೆ. ಹೌದು ಬಂಟ್ವಾಳ ಮೂಲದ ಉದ್ಯಮಿ ನೀಡಿದ ದೂರಿನ ಅನ್ವಯ ಇದೀಗ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ ಯಶವಂತಪುರ ಬಳಿಯ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ತಾಜ್ ಹೋಟೆಲ್ ನಲ್ಲಿ ನಿರ್ಮಾಪಕರು ಉದ್ಯಮಿ ಅವರನ್ನು ಪರಿಚಯಿಸಿಕೊಂಡಿದ್ದರು. ಬೆಂಗಳೂರಿನ ಯಶವಂತಪುರದಲ್ಲಿರುವ ತಾಜ್ ಹೋಟೆಲ್ ನಲ್ಲಿ ಪರಸ್ಪರ ಪರಿಚಯವಾಗಿದೆ. ತುಳು ಸಿನಿಮಾ ಜಿಟಿಗೆ ವೀರಕಂಬಳ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾದ ಲಾಭಾಂಶದಲ್ಲಿ 60 ಲಕ್ಷ ಕೊಡುವುದಾಗಿ ನಿರ್ಮಾಪಕ ಅರುಣ್ ರೈ ಉದ್ಯಮಿಗೆ ನಂಬಿಸಿದ್ದರು. ಕೋವಿಡ್ ವೇಳೆ ಬಂಟ್ವಾಳ ಮೂಲದ ಉದ್ಯಮಿಗೆ 25 ಕೋಟಿ ನಷ್ಟವಾಗಿತ್ತು. ಗೇರು ಬೀಜ ಸಂಸ್ಕರಣ ಘಟಕದಲ್ಲಿ 25 ಕೋಟಿ ರೂಪಾಯಿ ಹಣ ನಷ್ಟವಾಗಿತ್ತು. ಉದ್ಯಮಯ ನಷ್ಟದ ಕಥೆ ಪ್ಲಸ್ ಪಾಯಿಂಟ್ ಅನ್ನು ಅರುಣ್…

Read More

ನವದೆಹಲಿ : ಇತ್ತೀಚಿಗೆ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಲೈಂಗಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಆದರೆ ಕಾಮುಕರು ಹೆಣ್ಣು ಮಕ್ಕಳನ್ನು ಅಷ್ಟೇ ಅಲ್ಲದೆ ಇದೀಗ ಪಶುಗಳ ಮೇಲು ದೌರ್ಜನ್ಯ ಎಸಿಗುತ್ತಿದ್ದಾರೆ. ಅಂತ ವಿಡಿಯೋ ಇದೀಗ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಯತ್ನಾಳ್ ಹಿಂದೂ ಸೇನೆ ಎಂಬ ಪೇಜ್ ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮುಸ್ಲಿಂ ಸಮುದಾಯದ ವ್ಯಕ್ತಿ ಒಬ್ಬ ಹಸುವಿನ ಜೊತೆಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಯಾವ ರಾಜ್ಯದಲ್ಲಿ ನಡೆದಿದೆ ಎಂಬುವುದು ತಿಳಿದುಬಂದಿಲ್ಲ. ಆದರೆ ವಿಡಿಯೋವನ್ನು ಯತ್ನಾಳ್ ಹಿಂದೂ ಸೇನೆ ಎಂಬ ಪೇಜ್ನೊಂದಿಗೆ ಹಂಚಿಕೊಳ್ಳಲಾಗಿದೆ. ಈ ಒಂದು ವಿಡಿಯೋಗೆ ಹಲವಾರು ರೀತಿಯಲ್ಲಿ ಕಮೆಂಟ್ ಮಾಡಿದ್ದು ಒಬ್ಬರು ಮುಸ್ಲಿಮರು ಮಾತ್ರವಲ್ಲ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹಿಂದೂಗಳು ಕೂಡ ಇದೇ ರೀತಿ ಮಾಡಿದ್ದಾರೆ, ಯಾರದೋ ತಪ್ಪನ್ನು ತಮ್ಮ ಸಮುದಾಯಕ್ಕೆ ಲಿಂಕ್ ಮಾಡಬೇಡಿ ಅಂದಿದ್ದು ಇನ್ನೂ ಕೆಲವರು ಇವರಿಗೆ…

Read More

ಬಾಗಲಕೋಟೆ : ಸಾಮಾಜಿಕ ಜಾಲತಾಣಗಳಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಕುರಿತು ಭಕ್ತರು ಪೋಸ್ಟ್ ಒಂದನ್ನು ಹರಿಬಿಟ್ಟಿದ್ದು, ಸದ್ಯ ಭಾರಿ ವೈರಲಾಗುತ್ತಿದೆ. ಪಂಚಮಸಾಲಿ ಶ್ರೀಗಳು ಸಿಎಂ ಆಗಲಿ ಎಂದು ಪೋಸ್ಟ್ ಹರಿಬಿಟ್ಟಿದ್ದು, ಈ ಕುರಿತಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದು ನಾನು ರಾಜಕೀಯಕ್ಕೆ ಬರುವುದಿಲ್ಲ. ನಾನು ಕಿಂಗ್ ಆಗಲ್ಲ ಆದರೆ ಕಿಂಗ್ ಮೇಕರ್ ಆಗುತ್ತೇನೆ ಎಂದು ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ ಕುರಿತಾಗಿ ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ. ರಾಜಕೀಯ ಮಾಡೋದಕ್ಕೆ ಬಸವನಗೌಡ ಪಾಟೀಲ್ ಯತ್ನಾಳ್ ಹಾಗೂ ನಮ್ಮ ಸಮಾಜದ ನಾಯಕರಿದ್ದಾರೆ.ನಮ್ಮ ಮೇಲೆ ಅಭಿಮಾನದಿಂದ ಅಭಿಮಾನಿಗಳು ಭಕ್ತರು ಈ ರೀತಿ ಪೋಸ್ಟ್ ಹಾಕಿದ್ದಾರೆ. ನಾನು ಕಿಂಗ್ ಆಗಲ್ಲ ಕಿಂಗ್ ಮೇಕರ್ ಆಗುತ್ತೇನೆ ಎಂದು ತಿಳಿಸಿದರು. ಇನ್ನು 2A ಮೀಸಲಾತಿ ಹೋರಾಟದ ಕುರಿತು ಮಾತನಾಡಿದ ಅವರು, ಸಮಾಜದ ಜನರ ಭಾವನೆ ಜೊತೆಗೆ ಆಟ ಆಡುವುದನ್ನು ಬಿಡಬೇಕು. ಬಿಜೆಪಿ ಸರ್ಕಾರದಲ್ಲಿ…

Read More

ಚಿಕ್ಕಮಗಳೂರು : ಮಲೆನಾಡು ಭಾಗಗಳಲ್ಲಿ ಕಾಡಾನೆಗಳ ಹಾವಳಿ ಇಷ್ಟು ದಿನ ತಣ್ಣಗಾಗಿತ್ತು. ಇದೀಗ ಕಾಡಾನೆ ದಾಳಿಯಿಂದ ರೈತನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ಬಳಿ ನಡೆದಿದೆ. ಹೌದು ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೀತೂರು ಗ್ರಾಮ ಪಂಚಾಯತಿಯ ಕಚೇರಿ ಬಳಿ ಈ ಒಂದು ಘಟನೆ ನಡೆದಿದ್ದು ಗ್ರಾಮ ಪಂಚಾಯಿತಿ ಬಳಿ ಕಾಡಾನೆ ದಾಳಿಯಿಂದ ರೈತ ಸಾವನ್ನಪ್ಪಿದ್ದಾನೆ. ಕೆರೆಗದ್ದೆ ಗ್ರಾಮದ ನಿವಾಸಿ ಉಮೇಶ್ (55) ಸಾವನ್ನಪ್ಪಿದ್ದಾರೆ. ಗ್ರಾಮ ಪಂಚಾಯಿತಿ ಹಿಂಭಾಗ ನಿಂತಿದ್ದಾಗ ಏಕಾಏಕಿ ಕಾಡಾನೆಗಳ ಹಿಂಡು ದಾಳಿ ಮಾಡಿದೆ. ಕಾಡಾನೆ ದಾಳಿ ಮಾಡಿದರಿಂದ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಕೊಪ್ಪ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವೇಳೆ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದು ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು.

Read More