ಚಿಕ್ಕಮಗಳೂರು : ಮಲೆನಾಡು ಭಾಗಗಳಲ್ಲಿ ಕಾಡಾನೆಗಳ ಹಾವಳಿ ಇಷ್ಟು ದಿನ ತಣ್ಣಗಾಗಿತ್ತು. ಇದೀಗ ಕಾಡಾನೆ ದಾಳಿಯಿಂದ ರೈತನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ಬಳಿ ನಡೆದಿದೆ.
ಹೌದು ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೀತೂರು ಗ್ರಾಮ ಪಂಚಾಯತಿಯ ಕಚೇರಿ ಬಳಿ ಈ ಒಂದು ಘಟನೆ ನಡೆದಿದ್ದು ಗ್ರಾಮ ಪಂಚಾಯಿತಿ ಬಳಿ ಕಾಡಾನೆ ದಾಳಿಯಿಂದ ರೈತ ಸಾವನ್ನಪ್ಪಿದ್ದಾನೆ. ಕೆರೆಗದ್ದೆ ಗ್ರಾಮದ ನಿವಾಸಿ ಉಮೇಶ್ (55) ಸಾವನ್ನಪ್ಪಿದ್ದಾರೆ. ಗ್ರಾಮ ಪಂಚಾಯಿತಿ ಹಿಂಭಾಗ ನಿಂತಿದ್ದಾಗ ಏಕಾಏಕಿ ಕಾಡಾನೆಗಳ ಹಿಂಡು ದಾಳಿ ಮಾಡಿದೆ.
ಕಾಡಾನೆ ದಾಳಿ ಮಾಡಿದರಿಂದ ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಕೊಪ್ಪ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ವೇಳೆ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದು ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು.