Author: kannadanewsnow05

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಕೇಳಿ ಬಂದಿತ್ತು. ಅಲ್ಲದೆ ದಲಿತ ಸಿಎಂ ಕುರಿತಂತೆ ಕೂಡ ಕೂಗು ಕೇಳಿಬಂದಿತ್ತು ಈ ವಿಚಾರವಾಗಿ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ನೀಡಿದ್ದು, ನನ್ನಂತೆ ಸಾಕಷ್ಟು ಜನರು ಸಿಎಂ ಆಕಾಂಕ್ಷಿಗಳಿದ್ದಾರೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನೇ ಸಿಎಂ ಅಂತ ನಾನು ಎಲ್ಲಿಯೂ ಹೇಳಿಲ್ಲ. ಆದರೆ ಪಕ್ಷದಲ್ಲಿ ನನ್ನಂತೆ ಮುಖ್ಯಮಂತ್ರಿ ಆಗುವ ಸಾಕಷ್ಟು ಜನ ಆಕಾಂಕ್ಷಿಗಳು ಇದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ನಾಳೆ ಹಾಸನದಲ್ಲಿ ಸ್ವಾಭಿಮಾನ ಸಮಾವೇಶ ನಡೆಯುತ್ತಿದ್ದು, ಈ ವಿಚಾರದ ಕುರಿತಾಗಿ ಮಾತನಾಡಿದ ಅವರು, ಅಹಿಂದ ಅಂದರೆ ಕಾಂಗ್ರೆಸ್, ಅಹಿಂದದವರು ಕಾಂಗ್ರೆಸ್ ಬಿಟ್ಟಿಲ್ಲ. ನಾಯಕ, ವಿಚಾರ, ಸಿದ್ದಾಂತ ಎಲ್ಲವೂ ಒಂದೇ. ಬ್ಯಾನರ್ ಚೇಂಜ್ ಆಗಿದೆ ಅಷ್ಟೇ. ಕಾರ್ಯಕ್ರಮ ಮಾಡಿದರೆ ಹೆಸರು ಯಾರಿಗೆ ಬರಬೇಕೋ ಬರುತ್ತೆ. ಕಾರ್ಯಕ್ರಮ ಡಿಕೆ ಶಿವಕುಮಾರ್ ಮಾಡಿದರು ಕೂಡ ಪಕ್ಷಕ್ಕೆ ಲಾಭ ಅಲ್ಲವೇ? ಸಿದ್ದರಾಮಯ್ಯ…

Read More

ಮಂಡ್ಯ : ಹೈಕೋರ್ಟ್ ನಲ್ಲಿ ನಮ್ಮ‌ ಅರ್ಜಿ ವಿಚಾರಣೆಗೆ ಬರುವ ಹಿಂದಿನ‌ ದಿನ ED ಯವರು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದೇ ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕೆ.ಆರ್.ಪೇಟೆ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ED ಯವರು ತಮ್ಮ ತನಿಖೆಯ ವಿವರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿರುವುದರ ಬಗ್ಗೆ ಮತ್ತು ಲೋಕಾಯುಕ್ತಕ್ಕೆ ಪತ್ರ ಬರೆದಿರುವುದರ ಹಿಂದಿನ ಉದ್ದೇಶದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ED ಯವರು ತನಿಖೆ ನಡೆಸುತ್ತಿದ್ದಾರೆ. ಇವರು ತನಿಖೆ ನಡೆಸುತ್ತಿರುವುದೇ ಸರಿಯಲ್ಲ. ಆಗಲಿ, ತನಿಖೆ ನಡೆಸಿದ ಮೇಲೆ ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ನೀಡಬಹುದಿತ್ತು. ಅದನ್ನು ಬಿಟ್ಟು , ಲೋಕಾಯುಕ್ತಕ್ಕೆ ಪತ್ರ ಬರೆಯುವುದು ಮತ್ತು ಮಾಧ್ಯಮಗಳಿಗೆ ಸೋರಿಕೆ ಮಾಡುವುದರ ಹಿಂದೆ ರಾಜಕೀಯ ದುರುದ್ದೇಶ ಇದೆ ಎಂದರು. ಈ ವಿಚಾರಕ್ಕೆ ಸಂಬಂಧಪಟ್ಟಂತೆನಾಳೆ ನಮ್ಮ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆ ಬರುತ್ತಿದೆ. ಇದಕ್ಕೆ ಒಂದು ದಿನ ಮೊದಲು ಮಾಧ್ಯಮಗಳಲ್ಲಿ ಪ್ರಚಾರ ಮಾಡಿರುವುದರ ಹಿಂದೆ ನ್ಯಾಯಾಲಯದ…

Read More

ಮಂಡ್ಯ : ಸಚಿವ ಸಂಪುಟದ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದು, ಸಚಿವ ಸಂಪುಟ ಬಗ್ಗೆ ಯಾರು ಹೇಳುತ್ತಾರೆ ಅನ್ನೋದು ಮುಖ್ಯ ಅಲ್ಲ. ಹೈಕಮಾಂಡ್ ಅದಕ್ಕೆ ಸೂಚನೆ ನೀಡಬೇಕು.ಬಳಿಕ ನಾನು ನಿರ್ಧರಿಸುತ್ತೇನೆ ಹೈಕಮಾಂಡ್ ಹೇಳಿಲ್ಲ ನಾನು ತೀರ್ಮಾನವನ್ನು ತೆಗೆದುಕೊಂಡಿಲ್ಲ. ಹಾಗಾಗಿ ಸಚಿವ ಸಂಪುಟ ಪುನಾರಚನೆ ಸದ್ಯಕ್ಕೆ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಬಂಡಬೋಯಿನಹಳ್ಳಿ ಮಾತನಾಡಿದ ಅವರು, ಮುಡಾ ಹಗರಣಕ್ಕೆ ಸಂಬಂಧ ಪಟ್ಟಂತೆ ED ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ನಾಳೆ ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಒಂದಿನ ಮುಂಚಿತವಾಗಿ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದರ ಉದ್ದೇಶವೇನು? ED ಅಧಿಕಾರಿಗಳು ದುರುದ್ದೇಶ ಪೂರಕವಾಗಿ ತನಿಖೆ ನಡೆಸುತ್ತಿದ್ದಾರೆ. ಆದರೆ ಅವರಿಗೆ ತನಿಖೆ ಮಾಡುವ ಅಧಿಕಾರವೇ ಇಲ್ಲ ಎಂದು ಕಿಡಿಕಾರಿದರು.

Read More

ಬೆಂಗಳೂರು : ಅಡುಗೆ ಎಣ್ಣೆ, ಇಂಧನ, ಗ್ಯಾಸ್‌ ಸಿಲಿಂಡರ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೆ, ನಂದಿನಿ ಹಾಲಿನ ದರ ಕೂಡ ಶೀಘ್ರವೇ ಏರಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಇದೀಗ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಸದ್ಯಕ್ಕೆ ನಂದಿನಿ ಹಾಲಿನ ದರದಲ್ಲಿ ಯಾವುದೇ ಏರಿಕೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು. ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ರಾಮನಗರದಲ್ಲಿ ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಎಲ್ಲಾ ಅಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಅಂತ ಹೇಳಿದ್ದಾರೆ. ಸದ್ಯಕ್ಕೆ ಹಾಲಿನ ದರ ಏರಿಕೆ ಬಗ್ಗೆ ಮಾಹಿತಿ ಇಲ್ಲ. ಆದರೆ ನಂದಿನಿ ಹಾಲಿನ ದರ ಏರಿಕೆಗೆ ರಾಜ್ಯದ ರೈತರ ಬೇಡಿಕೆ ಇದೆ ಕೆಎಂಎಫ್ ಎಂಡಿ ವರ್ಗಾವಣೆ ಆಡಳಿತಾತ್ಮಕ ತೀರ್ಮಾನ ಅಷ್ಟೇ ಎಂದು ವಿಧಾನಸೌಧದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದರು.

Read More

ಮಂಡ್ಯ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಜಾರಿ ನಿರ್ದೇಶನಲಯದ ಅಧಿಕಾರಿಗಳು ಹಾಗೂ ಲೋಕಾಯುಕ್ತ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಇದರ ಮಧ್ಯ ಈ ಒಂದು ವಿಚಾರಣೆಗೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮುಡಾ ಹಗರಣದಲ್ಲಿ ED ಗೆ ತನಿಖೆ ಮಾಡಲು ಅಧಿಕಾರವೇ ಇಲ್ಲ ಎಂದು ತಿಳಿಸಿದರು. ಮಂಡ್ಯ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಇಡಿ ತನಿಖೆ ಮಾಡಲು ಬರುವುದಿಲ್ಲ. ರಾಜಕೀಯ ದುರುದ್ದೇಶದಿಂದ ಇಡಿ ತನಿಖೆ ಮಾಡುತ್ತಿದೆ. ಇಡಿಗೆ ತನಿಖೆ ಮಾಡುವ ಅಧಿಕಾರವೇ ಇಲ್ಲ. ಪ್ರಕರಣದ ತನಿಖೆ ನಡೆಸುವಂತೆ ಈಗಾಗಲೇ ಕೋರ್ಟ್ ಸೂಚಿಸಿದೆ. ಲೋಕಾಯುಕ್ತಕ್ಕೆ ಕೋರ್ಟ್ ಸೂಚನೆ ನೀಡಿದೆ.ಆದರೆ ಇಡಿ ಅವರು ಮಧ್ಯಪ್ರವೇಶ ಮಾಡುವ ಅಗತ್ಯ ಏನಿತ್ತು? ಇಡಿಯವರ ತನಿಖೆ ದುರುದ್ದೇಶಪೂರಿತ ಅನ್ನುವುದು ಅರ್ಥವಾಗುತ್ತದೆ ಎಂದರು. ಇದೀಗ ಮುಡಾ ಹಗರಣಕ್ಕೆ ಮತ್ತೊಂದು ಸಿಕ್ಕಿದ್ದು ಸುಮಾರು 700 ಕೋಟಿಗೂ ಅಧಿಕ ಹಗರಣ ನಡೆದಿದೆ ಎಂದು ಇಡೀ ಅಧಿಕಾರಿಗಳು ತಿಳಿಸಿದ್ದಾರೆ. ಮುಡಾದ 1095 ಸೈಟ್ಗಳನ್ನು ಬೇನಾಮಿ ವ್ಯಕ್ತಿಗಳಿಗೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ…

Read More

ಮುಂಬೈ : ತೀವ್ರ ಹಗ್ಗ ಜಗ್ಗಾಟದ ನಡುವೆ ಕೊನೆಗೂ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಆಯ್ಕೆಯಾಗಿದ್ದಾರೆ. ಇಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ದೇವೇಂದ್ರ ಫಡ್ನವೀಸ್ ನೂತನ ಸಿಎಂ ಎಂದು ಘೋಷಣೆ ಮಾಡಲಾಯಿತು.ಇನ್ನೂ ಮಹಾಯುತಿಯಿಂದ ದೇವೇಂದ್ರ ಫಡ್ನವೀಸ್ ಹೆಸರು ಘೋಷಣೆಯೊಂದೇ ಬಾಕಿ ಇದೆ. ಹೌದು ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಏರುವ ವಿಚಾರದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ನಡುವೆ ನಡೆದಿದ್ದ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದ್ದು, ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರು ಆಯ್ಕೆಯಾಗಿದ್ದಾರೆ. ನಾಳೆ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರದಲ್ಲಿ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ದೇವೇಂದ್ರ ಫಡ್ನವೀಸ್ ಅವರು ನೂತನ ಸಿಎಂ ಎಂದು ಮಹಾರಾಷ್ಟ್ರ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದ್ದು, ಕೇಂದ್ರ ವೀಕ್ಷಕರದ ನಿರ್ಮಲಾ, ವಿಜಯ್ ರೂಪಾಣಿ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಇಂದು ರಾಜ್ಯಪಾಲರನ್ನು ಮಹಾಯುತಿ ನಿಯೋಗ ಭೇಟಿಯಾಗಲಿದೆ.…

Read More

ನವದೆಹಲಿ : ಬಿಜೆಪಿ ರಾಜ್ಯಾಧ್ಯಕ್ಷ ನಾಯಕತ್ವದ ವಿರುದ್ಧ ನಿಲುವು ಹೊಂದಿದ್ದ ಕಾರಣಕ್ಕಾಗಿ ಶಾಸಕ ಬಸನಗೌಡ ಪಾಟೀಲ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಕಾರಣ ನೀಡುವಂತೆ ನೋಟಿಸ್ ನೀಡಿತ್ತು. ಈ ವಿಚಾರವಾಗಿ ಇಂದು ಶಾಸಕ ಯತ್ನಾ ಅವರು ಕೇಂದ್ರೀಯ ಶಿಸ್ತು ಸಮಿತಿಯ ಇದ್ದರೂ ಹಾಜರಾಗಿ ಉತ್ತರ ನೀಡಲಿದ್ದು, ಅದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣದ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಮತ್ತೆ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಗುಡುಗಿದರು. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ್ ಶೋಕಾಸ್ ನೋಟಿಸ್ ಗೆ ಸಮಗ್ರವಾದಂತಹ ಉತ್ತರ ಬರೆದಿದ್ದೇನೆ. ಶೋಕಾಸ್ ನೋಟಿಸ್ ಗೆ ಆರು ಪುಟಗಳ ಸಮಗ್ರ ಉತ್ತರವನ್ನು ಸಿದ್ಧಪಡಿಸಿದ್ದೇನೆ. ಕುಟುಂಬ ರಾಜಕಾರಣ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬ ರಾಜಕಾರಣದ ಬಗ್ಗೆ ವಿವರಣೆ ನೀಡಿದ್ದೇನೆ. ಎಲ್ಲಾ ಸಂಸದರು ಪಕ್ಷದ ಹಿತ ದೃಷ್ಟಿಯಿಂದ ಮಾತನಾಡಿದ್ದಾರೆ ಎಂದು ಅವರು ತಿಳಿಸಿದರು. ವಕ್ಫ್ ವಿರುದ್ಧ ಬಿವೈ…

Read More

ಧಾರವಾಡ : ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ನೋಡಿಕೊಂಡು ದುಷ್ಕರ್ಮಿಗಳು, ಮನೆಗೆ ನುಗ್ಗಿ ವ್ಯಕ್ತಿ ಒಬ್ಬರನ್ನು ಮಾರಕಾಸ್ತ್ರಗಳಿಂದ ಕಂಡ ಕಂಡಲ್ಲಿ ಕೊಚ್ಚಿ ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದೆ. ಕೊಲೆ ನಂತರ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಗಿರೀಶ್ ಕರಡಿಗುಡ್ಡ (50) ಎಂದು ತಿಳಿದುಬಂದಿದೆ. ಗಿರೀಶ್ ಅವರು ರಿಯಲ್ ಎಸ್ಟೇಟ್ ನಡೆಸುತ್ತಿದ್ದರು ಎನ್ನಲಾಗಿದೆ. ಮನೆಯಲ್ಲಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಇದನ್ನು ಮನಗಂಡು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕಂಡ ಕಂಡಲ್ಲಿ ಇರಿದು, ಕೊಚ್ಚಿ ಕೊಲೆ ಮಾಡಿ ಮನೆಯ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಮಗಳು ಶಾಲೆಯಿಂದ ಬಂದು ಕದ ತೆಗೆದಾಗಲೇ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಗಿರೀಶ ಗರಗ ಪೊಲೀಸ್ ಠಾಣೆ ಸಮೀಪದಲ್ಲೇ ಬಾಡಿಗೆ ಮನೆಯಲ್ಲಿದ್ದ, ತನ್ನದೇ ಗ್ರಾಮದಲ್ಲಿ ಹೊಸ ಮನೆ ಸಹ ಕಟ್ಟಿಸುತ್ತಿದ್ದರು. ಊರ ಹೊರಗೆ ಈ ಮನೆ ಇದ್ದು, ಮನೆ ಪಕ್ಕದಲ್ಲೇ ಮಾವಿನ ತೋಟವಿದೆ. ಹಂತಕರು, ಕೊಲೆ ಮಾಡಿದ ಬಳಿಕ ಮನೆಯ ಹಿಂಬದಿಯಿಂದ ಮಾವಿನ…

Read More

ಉತ್ತರಪ್ರದೇಶ : ಕಳೆದ ನವೆಂಬರ್ 24 ರಂದು ಉತ್ತರಪ್ರದೇಶದ ಫರೀದ್‌ಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದ ಕಾರು ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದರು. ಇದೀಗ ಅಂತದ್ದೇ ಮತ್ತೊಂದು ಘಟನೆ ನಡೆದಿದ್ದು, ಗೂಗಲ್ ಮ್ಯಾಪ್ ಅನ್ನು ನಂಬಿ ಕಾರು ಚಾಲಕನೊಬ್ಬ ನೀರು ಇಲ್ಲದಂತಹ ಕಾಲುವೆಗೆ ಕಾರನ್ನು ನುಗ್ಗಿಸಿದ್ದಾನೆ. ಪರಿಣಾಮ ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಉತ್ತರಪ್ರದೇಶದ ಬರೆಲಿಯಲ್ಲಿ ನಡೆದಿದೆ. ಹೌದು ಗೂಗಲ್​ ತೋರಿಸಿದ ಶಾರ್ಟ್​ಕಟ್​ ಮಾರ್ಗವನ್ನು ನಂಬಿ ಹೋಗಿ ವ್ಯಕ್ತಿಯೊಬ್ಬ ಕಾರು ಸಮೇತ ಕಾಲುವೆಗೆ ಹಾರಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಗೂಗಲ್​ ತೋರಿಸಿದ ಶಾರ್ಟ್​​ಕಟ್ ನಂಬಿ ಕಾರು ತೆಗೆದುಕೊಂಡು ಹೋಗಿದ್ದ ಚಾಲಕ ಒಣ ಕಾಲುವೆಗೆ ಇಳಿಸಿದ್ದಾರೆ. ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಬರೇಲಿಯಿಂದ ಪಿಲಿಭಿತ್‌ಗೆ ಪ್ರಯಾಣಿಸುತ್ತಿದ್ದಾಗ ಕಾಲಾಪುರ ಗ್ರಾಮದ ಬಳಿ ಗೂಗಲ್ ಮ್ಯಾಪ್​ ಹಾಕಿದ್ದಾರೆ ಆಗ ಅದು ಶಾರ್ಟ್​ ಕಟ್ ಮಾರ್ಗವೊಂದನ್ನು ತೋರಿಸಿತ್ತು. ಅದರ ಮೂಲಕ ಹೋಗಿ ನೇರವಾಗಿ ಕಾಲುವೆಗೆ ಹಾರಿದ್ದಾರೆ. ಗ್ರಾಮಸ್ಥರು ಅವರನ್ನು ಗಮನಿಸಿ ಪೊಲೀಸರಿಗೆ ಕರೆ ಮಾಡಿದಾಗ…

Read More

ನವದೆಹಲಿ : ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಇದೀಗ ಕೇಂದ್ರಕ್ಕೂ ತಲುಪಿದ್ದು, ಎರಡು ದಿನಗಳ ಹಿಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು ರಾಜ್ಯಾಧ್ಯಕ್ಷರ ನಾಯಕತ್ವದ ವಿರುದ್ಧ ಹಿನ್ನೆಲೆಯಲ್ಲಿ ನೋಟಿಸ್ ನೀಡಿತ್ತು. ಈ ಒಂದು ನೋಟಿಸ್ ವಿಚಾರವಾಗಿ ಇಂದು ಯತ್ನಾಳ್ ಕೇಂದ್ರದ ಶಿಸ್ತು ಸಮಿತಿಯ ಎದುರು ಹಾಜರಾಗಿ ನೋಟಿಸ್ ಗೆ ಉತ್ತರಿಸಲಿದ್ದಾರೆ. ಹಾಗಾಗಿ ಇದೀಗ ಯತ್ನಾಳ್ ಅವರಿಗೆ ನೀಡಿರುವ ಶೋಕಾಸ್ ನೋಟಿಸ್ ಗೆ ಅವರು ಉತ್ತರ ನೀಡಲಿದ್ದಾರೆ. ದೆಹಲಿಯಲ್ಲಿ ಓಂ ಪಾಟಕ್ ಅವರನ್ನು ಯತ್ನಾಳ ಭೇಟಿಯಾಗಲಿದ್ದಾರೆ. ಕೇಂದ್ರ ಶಿಸ್ತು ಸಮಿತಿ ಅಧ್ಯಕ್ಷರಾಗಿರುವ ಓಂ ಪಾಟಕ್ ಅವರನ್ನು ಭೇಟಿಯಾಗಲಿದ್ದಾರೆ.ಕೆಲವೇ ಕ್ಷಣಗಳಲ್ಲಿ ಶಿಸ್ತು ಸಮಿತಿ ಎದುರು ಯತ್ನಾಳ್ ಹಾಜರಾಗಲಿದ್ದು ನೋಟಿಸ್ ಗೆ ಉತ್ತರಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ವಕ್ಫ್ ವಿರುದ್ಧ ನಾನು ಹೋರಾಟ ಮಾಡಿದ್ದೇನೆ. ಪಕ್ಷದ ಅಧ್ಯಕ್ಷರು ಹೋರಾಟಕ್ಕೆ ಮುಂದಾಗಿಲ್ಲ. ವಂಶ ರಾಜಕೀಯ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಕೆಲವರನ್ನು ಕಟ್ಟಿಕೊಂಡು ಪಕ್ಷ ಮುನ್ನಡೆಸುತ್ತಿದ್ದಾರೆ. ಹೀಗಾಗಿ…

Read More