Subscribe to Updates
Get the latest creative news from FooBar about art, design and business.
Author: kannadanewsnow05
ಬಳ್ಳಾರಿ : ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿರೋದು, ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಕೇಸ್. ಕನ್ನಡ ಯೂಟ್ಯೂಬ್ ಜಗತ್ತಿನಲ್ಲೊಂದು ಸಂಚಲನ ಸೃಷ್ಟಿಯಾಗಿದೆ. ಈವರೆಗೆ ಇಂಗ್ಲೀಷ್ , ಹಿಂದಿ ಯೂಟ್ಯೂಬ್ ಚಾನಲ್ ಗಳಲ್ಲಿ ಮಾತ್ರ ಕಾಣಲು ಸಿಗುತ್ತಿದ್ದ ಕೋಟಿಗಟ್ಟಲೆ ವೀಕ್ಷಣೆ, ಲಕ್ಷಗಟ್ಟಲೆ ಲೈಕ್ಸ್, ಸಾವಿರ ಸಾವಿರ ಕಮೆಂಟುಗಳು ಕನ್ನಡ ಯೂಟ್ಯೂಬ್ ಚಾನಲ್ ಒಂದರ ವಿಡಿಯೋಗೆ ಸಿಕ್ಕಿವೆ ಹೌದು ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಸಮೀರ್ ಎಂಡಿ ಎಂಬವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಸಮೀರ್ ನನ್ನು ಬಂಧಿಸಲು ಪೊಲೀಸರು ಬಳ್ಳಾರಿಗೆ ತೆರಳಿದ್ದಾಗ ಈ ವೇಳೆ ಸಮೀರ್ ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ ಮೇಲೆ ಆತನಿಗೆ ನೋಟಿಸ್ ನೀಡಿ ಪೊಲೀಸರು ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಸೌಜನ್ಯ ಪ್ರಕರಣದ ಕುರಿತು ವಿಡಿಯೋ ಮಾಡಿದ್ದ ಸಮೀರ್ ಎಂಡಿ, ನನಗೆ ಜೀವ ಬೆದರಿಕೆ ಬರುತ್ತಿರುವ ಹಿನ್ನೆಲೆ ಸೌಜನ್ಯ ಪ್ರಕರಣದ ಮತ್ತೋರ್ವ ಹೋರಾಟಗಾರ ಗಿರಿಶ್ ಮಟ್ಟನವರ್ ಅವರನ್ನು ಮನೆಗೆ…
ಬೆಂಗಳೂರು : ಹೈಕೋರ್ಟ್ ಆದೇಶ ಪ್ರತಿಯನ್ನೇ ನಕಲು ಮಾಡಿ ಲಕ್ಷಾಂತರ ಹಣ ವಂಚನೆ ಎಸಗಿದ್ದ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕುಣಿಗಲ್ ಮೂಲದ ವಿಜೇತ್ ಮತ್ತು ಲೋಹಿತ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಹೌದು ಹೈಕೋರ್ಟ್ ನೀಡಿದ ರೀತಿ ಆದೇಶ ಪ್ರತಿಯನ್ನು ಬಂಧಿತ ಆರೋಪಿಗಳು ತಯಾರಿಸುತ್ತಿದ್ದರು ಸೃಷ್ಟಿಸಿದ್ದ ಆದೇಶದಲ್ಲಿ ವಿಜೇತ್ ಇಡಿಯಲ್ಲಿ ಒಂದು ಕೇಸ್ ದಾಖಲಿಸಿದ್ದ. ಆ ಪ್ರಕರಣದಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಫ್ರೀಜ್ ಆಗಿತ್ತು. ಆದರೆ ಹೈಕೋರ್ಟ್ ನಲ್ಲಿ ಇಡಿ ವಿರುದ್ಧ ವಿಜೇತ್ ಕೇಸ್ ಹಾಕಿದಂತೆ ಇಡಿ ವಿರುದ್ಧ ಆರೋಪಿ ವಿಜೇತ ಗೆಲುವು ಸಾಧಿಸಿದ್ದ. ಫ್ರಿಜ್ ಮಾಡಿದ್ದ ಹಣವನ್ನು ರಿಲೀಸ್ ಮಾಡುವಂತೆ ಆದೇಶವನ್ನು ಸೃಷ್ಟಿ ಮಾಡಲಾಗಿತ್ತು. ಈ ಆದೇಶ ಪ್ರತಿ ತೋರಿಸಿ ಆರೋಪಿಗಳು ಹಲವರಿಗೆ ವಂಚಿಸಿದ್ದಾರೆ. ನಮಗೆ ಇಡಿ ಅಧಿಕಾರಿಗಳಿಂದ ಕೋಟ್ಯಾಂತರ ರೂಪಾಯಿ ರಿಲೀಸ್ ಆಗಬೇಕಿದೆ. ಅದಕ್ಕೆ ಹೈ ಕೋರ್ಟ್ ಆದೇಶ ಕೂಡ ಮಾಡಿದೆ. ಆದರೆ ಈಗ ನನಗೆ ಇದನ್ನು ಬಿಡಿಸಿಕೊಳ್ಳಲು ಹಣ ಕಟ್ಟಬೇಕಿದೆ.…
ಕೊಡಗು : ರಾಜ್ಯದಲ್ಲಿ ಮಾರ್ಚ್ ಆರಂಭದಲ್ಲೇ ಹಲವು ಜಿಲ್ಲೆಗಳಲ್ಲಿ ತೀವ್ರ ಉಷ್ಣಾಂಶ ಹೆಚ್ಚಾಗಿದ್ದು, ಜನರು ಈಗಿನಿಂದಲೇ ಮನೆಯಿಂದ ಹೊರಗಡೆ ಕಾಲಿಡೊದಕ್ಕೆ ಹೆದರುತ್ತಿದ್ದಾರೆ.ಇದರ ಮಧ್ಯ ಬೇಸಿಗೆ ಅವಧಿಗೂ ಮೊದಲೇ ಜೀವನದ ಕಾವೇರಿ ಇದೀಗ ಬತ್ತಿದೆ. ಹೌದು ಕೊಡಗು ಜಿಲ್ಲೆಯಲ್ಲಿ ಉಗಮವಾಗುವ ಜೀವನದಿ ಕಾವೇರಿ ಇದೀಗ ಬೇಸಿಗೆ ಆರಂಭಕ್ಕು ಮೊದಲೇ ಬತ್ತುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರವಾಸಿತಾಣವಾದ ದುಬಾರೆಯಲ್ಲಿ ಮೋಟರ್ ಬೋಟ್ ಸಂಚಾರ ಸ್ಥಗಿತವಾಗಿದೆ. ಪ್ರವಾಸಿಗರಿಗೆ ರಾಫ್ಟಿಂಗ್ ಸಂಚಾರವನ್ನು ಇದೀಗ ಸ್ಥಗಿತಗೊಳಿಸಲಾಗಿದೆ ಏಪ್ರಿಲ್ ಮೇ ತಿಂಗಳಲ್ಲಿ ಕಾವೇರಿ ನದಿ ಪೂರ್ತಿಯಾಗಿ ಬತ್ತಿ ಹೋಗಲಿದೆ ಎನ್ನಲಾಗುತ್ತಿದೆ. ಕಾವೇರಿ ನದಿ ಬತ್ತುವ ಹಿನ್ನೆಲೆ ಈ ಭಾಗದ ರೈತರಿಗೆ ಆತಂಕ ಶುರುವಾಗಿ. ಅಂತರ್ಜಲ ಕುಸಿತದಿಂದ ಕಾವೇರಿ ನದಿ ನಿಧಾನಕ್ಕೆ ಬತ್ತಿ ಹೋಗುತ್ತಿದೆ. ಬೇಸಿಗೆ ಆರಂಭಕ್ಕೂ ಮುನ್ನ ಕಾವೇರಿ ನದಿ ಬತ್ತುತ್ತಿದೆ. ಕೊಡಗು ಜಿಲ್ಲೆಯಲ್ಲಿ ಬರಗಾಲ ಭೀತಿ ಎದುರಾಗಿದೆ. ಮಾರ್ಚ್ ಮೊದಲ ತಿಂಗಳಲ್ಲೇ ಈ ರೀತಿ ಪ್ರಶಸ್ತಿ ನಿರ್ಮಾಣವಾದರೆ ಇನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊಡಗು ಜಿಲ್ಲೆಯ ಜನರು…
ಗದಗ : ಗದಗ ಜಿಲ್ಲೆ ನರಗುಂದದಲ್ಲಿ 5 ತಿಂಗಳ ಬಾಣಂತಿ ಸಾವಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಬಾಣಂತಿ ಪವಿತ್ರ (25) ಎನ್ನುವ ಬಾಣಂತಿಯ ಶವ ಪತ್ತೆಯಾಗಿದೆ. ಬಾಣಂತಿಯನ್ನು ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ. ಯೋಧ ಹಾಗೂ ಕುಟುಂಬದ ಸದಸ್ಯರ ವಿರುದ್ಧ ಈ ಒಂದು ಗಂಭೀರವಾದ ಆರೋಪ ಕೇಳಿ ಬಂದಿದ್ದು, ಗಂಡನ ಮನೆಗೆ ಬಂದ ಮೂರೇ ದಿನದಲ್ಲಿ ಪವಿತ್ರ ಕೊಲೆಯಾಗಿದೆ. ಪತಿ ಹರೀಶ್ ಕಲ್ಲಕುಟಿಕರ್ ಹಾಗೂ ಮಾವ ಮೂಕಪ್ಪ ಅತ್ತೆ ಸೋಮವ್ವ ವಿರುದ್ಧ ಮೃತಳ ಕುಟುಂಬಸ್ಥರು ಈ ಒಂದು ಆರೋಪ ಮಾಡುತ್ತಿದ್ದಾರೆ.ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದು ಘಟನೆ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು : ವೈದ್ಯೆ ಬಳಿ 6.5 ಲಕ್ಷ ಹಣ ಪಡೆದು ಹಿಂದಿರುಗಿಸದೆ ವಂಚನೆ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಕಿರುತೆರೆ ನಟೆ ವಿಸ್ಮಯ ಗೌಡ ವಿರುದ್ಧ ಇದೀಗ FIR ದಾಖಲಾಗಿದೆ. ಬೆಂಗಳೂರಿನ ಬಸವೇಶ್ವರನಗರ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಬೆಂಗಳೂರಿನ ಬಸವೇಶ್ವರನ ಠಾಣೆಯಲ್ಲಿ FIR ದಾಖಲಾಗಿದೆ. ವೈದ್ಯೆ ಹಿಮಾನ್ವಿ ಎಂಬುವವರ ಬಳಿ 6.5 ಲಕ್ಷ ಸಾಲ ಪಡೆದು ಹಿಂದಿರುಗಿಸಿದೆ ವಂಚನೆ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಮಾನ್ವಿ ಅನ್ನೋರು ಕೋರ್ಟಿಗೆ ಖಾಸಗಿ ದೂರು ಸಲ್ಲಿಸಿದರು. ಖಾಸಗಿ ದೂರು ಅನ್ವಯ ನ್ಯಾಯಾಲಯದ ನಿರ್ದೇಶನದಂತೆ ಕಿರುತೆರೆ ನಟಿ ವಿಸ್ಮಯ ಗೌಡ ವಿರುದ್ಧ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಬೆಳಗಾವಿ : ಕೊನೆಗೂ ಬೆಳಗಾವಿ ಪಾಲಿಕೆಯ ಮೇಯರ್ ಹಾಗು ಉಪಮೇಯರ್ ಚುನಾವಣೆಗೆ ಮೂಹೂರ್ಥ ಕೂಡಿ ಬಂದಿದ್ದು, ಇದೆ ಮಾರ್ಚ್ 15 ರಂದು ಪಾಲಿಕೆಯ ಮೇಯರ್ ಹಾಗು ಉಪಮೇಯರ್ ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಹೌದು ಬೆಳಗಾವಿಯ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಗೆ ಮೂಹೂರ್ಥ ಫಿಕ್ಸ್ ಆಗಿದ್ದು, ಮಾರ್ಚ್ 15 ರಂದು ಚುನಾವಣೆ ನಡೆಯಲಿದೆ. ಸಮಯಕ್ಕೆ ಚುನಾವಣೆ ನಡೆಯಲಿದೆ ಒಂದು ಬೆಳಗ್ಗೆ 9ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಮೇಯರ್ ಸ್ಥಾನಕ್ಕೆ ಸಾಮಾನ್ಯ ಪುರುಷ, ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಚುನಾವಣೆ ನಡೆಯಲಿದೆ. ಈ ಒಂದು ಚುನಾವಣೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಅಭಯ್ ಪಾಟೀಲ್ ಗೆ ಪ್ರತಿಷ್ಠೆಯ ಚುನಾವಣೆಯಾಗಿದೆ. ಇಬ್ಬರೂ ಸದಸ್ಯರು ಅಮಾನತು ಆದರೂ ಕೂಡ ಬಿಜೆಪಿಗೆ ಸ್ಪಷ್ಟವಾದ ಬಹುಮತ ಇದೆ ಹಾಗಾಗಿ ಈ ಚುನಾವಣೆ ಇಬ್ಬರಿಗೂ ಪ್ರತಿಷ್ಠೆಯ ಚುನಾವಣೆ ಆಗಿದೆ.
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕ ಕುರಿತ ವರದಿಯನ್ನು ವಿಧಾನಸಭೆಯಲ್ಲಿ ಜಂಟಿ ಪರಿಶೀಲನಾ ಸಮಿತಿಯ ವರದಿಯನ್ನು ಮಂಡನೆ ಮಾಡಲಾಯಿತು.ಈ ವರದಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕದ ಪರಿಶೀಲನಾ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಮಂಡಿಸಿದರು. ಗ್ರೇಟರ್ ಬೆಂಗಳೂರು ಎಂದರೇನು? ಬೆಂಗಳೂರನ್ನು ಏಳು ಭಾಗವಾಗಿ ಅಥವಾ ಇರುವ ಒಂದು ಪಾಲಿಕೆಯನ್ನು 7 ಪಾಲಿಕೆಗಳನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ. ಈ ಬೆಳವಣಿಗೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಅನ್ನು ಸರ್ಕಾರ ಪರಿಚಯಿಸಿದೆ. ಇದರ ಅಡಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಆಗಲಿದೆ. ಬೆಂಗಳೂರಿಗೆ ಮೂರು ಹಂತದ ಆಡಳಿತ ನೀಡುವುದು ಇದರ ಉದ್ದೇಶವಾಗಿದೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಈ ರೀತಿ ಬೆಳೆಯುತ್ತಿರುವ ನಗರಕ್ಕೆ ಒಂದು ಪಾಲಿಕೆ ಸಾಕಗಲ್ಲ ಎಂದು ಕಾಂಗ್ರೆಸ್ ಸರ್ಕಾರ ವಾದ ಮಾಡಿದೆ. ಬೆಂಗಳೂರಿನ ಅಭಿವೃದ್ಧಿ ಹಾಗೂ ಸುಗಮ ಆಡಳಿತಕ್ಕಾಗಿ ಗ್ರೇಟರ್ ಬೆಂಗಳೂರು ವರದಿಯನ್ನು ಸಿದ್ಧಪಡಿಸಲಾಗಿದೆ. ಗ್ರೇಟರ್ ಬೆಂಗಳೂರು ಜಂಟಿ ಪರಿಶೀಲನಾ ಸಮಿತಿಯಿಂದ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ…
ಉತ್ತರಪ್ರದೇಶ : ಗೂಗಲ್ ಮ್ಯಾಪ್ ನಂಬಿ ಎಷ್ಟೋ ಜನರು ಸಾವನ್ನಪ್ಪಿದ್ದಾರೆ. ಅಲ್ಲದೆ ಅದೆಷ್ಟೋ ಅನಾಹುತಗಳು ಸಂಭವಿಸಿವೆ.ಇದೀಗ ಉತ್ತರಪ್ರದೇಶದ ಲಕ್ನೋದಲ್ಲಿ ಗೂಗಲ್ ಮ್ಯಾಪ್ ನಂಬಿ ಕಾರು ಚಲಾಯಿಸಿದ ವ್ಯಕ್ತಿ ಆಳವಾದ ಚರಂಡಿಗೆ ಬಿದ್ದು ಧಾರಣವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ಗೂಗಲ್ ಮ್ಯಾಪ್ ಬಳಸಿ ದುರಂತಕ್ಕೀಡಾದ ಮತ್ತೊಂದು ಘಟನೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಗ್ರೇಟರ್ ನೋಯ್ಡಾದಲ್ಲಿ ಜಿಪಿಎಸ್ ಉಪಕರಣವನ್ನು ಬಳಸಿಕೊಂಡು ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕಾರನ್ನು ಆಳವಾದ ಚರಂಡಿಗೆ ಬೀಳಿಸಿ ದುರಂತವಾಗಿ ಸಾವನ್ನಪ್ಪಿದ್ದಾನೆ. ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಸೌರವ್ ಮತ್ತು ಅವನೊಂದಿಗಿದ್ದ ಇತರ ಡೆಲಿವರಿ ಬಾಯ್ ಚಾಲಕನನ್ನು ಹೊರಗೆಳೆಯಲು ಕಾರಿನ ಬಳಿ ಓಡಿದ್ದಾರೆ. ಕಾರಿನ ಬಾಗಿಲುಗಳನ್ನು ಒಳಗಿನಿಂದ ಲಾಕ್ ಮಾಡಿರುವುದನ್ನು ಗಮನಿಸಿದ ನಂತರ ಅವರು ಕಾರಿನ ಕಿಟಕಿಗಳನ್ನು ಒಡೆದು ನಂತರ ಭಾಟಿಯನ್ನು ಹೊರಗೆಳೆದು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆತ ಸಾವನ್ನಪ್ಪಿದ್ದಾನಂತೆ. ಪೊಲೀಸರು ಈ ವಿಷಯವನ್ನು ಪರಿಶೀಲಿಸಿ ಭಾಟಿ ಸಾವಿನ ಬಗ್ಗೆ…
ಬೆಂಗಳೂರು : ಹಕ್ಕಿಜ್ವರ ಸಾಂಕ್ರಾಮಿಕ ರೋಗವಾದರೂ, ಅದು ಹಕ್ಕಿಗಳಿಂದ ಮನುಷ್ಯರಿಗೆ ಹರಡುವುದು ಅಪರೂಪ. ಹಾಗಾಗಿ ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಮಾಹಿತಿ ನೀಡಿದ್ದು, ಹಕ್ಕಿ ಜ್ವರದ ಪ್ರಕರಣಗಳು ರಾಜ್ಯದ ಅಲ್ಲಲ್ಲಿ ವರದಿಯಾಗುತ್ತಿದೆ. ಹಕ್ಕಿಜ್ವರ ಸಾಂಕ್ರಾಮಿಕ ರೋಗವಾದರೂ, ಅದು ಹಕ್ಕಿಗಳಿಂದ ಮನುಷ್ಯರಿಗೆ ಹರಡುವುದು ಅಪರೂಪ. ಹಾಗಾಗಿ ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಆದರೂ ಮೊಟ್ಟೆ ಮತ್ತು ಮಾಂಸವನ್ನು ಸೇವಿಸುವಾಗ ಕೆಲ ಎಚ್ಚರಿಕೆಗಳನ್ನು ಪಾಲಿಸಬೇಕು. ಮೊಟ್ಟೆ ಮತ್ತು ಮಾಂಸವನ್ನು 70 ಡಿಗ್ರಿ ಉಷ್ಣಾಂಶದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಬೇಯಿಸಿ ಸೇವಿಸಬೇಕು. ಸೋಂಕು ಪೀಡಿತ ಕೋಳಿ ಫಾರಂ, ಮೃತ ಹಕ್ಕಿ ಅಥವಾ ಕೋಳಿಗಳ ಸಮೀಪಕ್ಕೆ ಹೋಗದೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ. https://twitter.com/dineshgrao/status/1897154599750131749?t=DCWKI_Ml4BnrO8LPAYEusA&s=19
ಬೆಂಗಳೂರು : ಬೆಂಗಳೂರಿನಲ್ಲಿ ಬ್ಲಾಕ್ ಅಂಡ್ ವೈಟ್ ದಂಧೆ ನಡೆಸುತ್ತಿದ್ದು, ಬ್ಲಾಕ್ ಅಂಡ್ ವೈಟ್ ದಂಧೆ ಹೆಸರಲ್ಲಿ ದರೋಡೆ ನಡೆಸಲಾಗುತ್ತಿದೆ. 1 ಕೋಟಿ ಕ್ಯಾಶ್ ಕೊಟ್ಟರೆ 1.20 ಕೋಟಿ ಕೊಡುವುದಾಗಿ ನಂಬಿಸಿ ಇದೀಗ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ವರದಿಯಾಗಿದೆ. ಹೌದು ಬ್ಲ್ಯಾಕ್ & ವೈಟ್ ದಂಧೆ ಹೆಸರಲ್ಲಿ ದರೋಡೆ ಮಾಡುತ್ತಿದ್ದ ಮೂವರು ಆರೋಪಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಒಂದು ಆಸೆಯಿಂದ ಚನ್ನಪಟ್ಟಣದದಿಂದ ಜಯಚಂದ್ರ ಎನ್ನುವವರಿಗೆ ಆರೋಪಿ ಶ್ರೀನಿವಾಸ್ ನಂಬಿಸಿದ್ದ. ಜಯಚಂದ್ರ ರನ್ನು ಶ್ರೀನಿವಾಸ್ ಬೆಂಗಳೂರಿಗೆ ಕರೆಸಿಕೊಂಡಿದ್ದ. ಪರಿಚಯಸ್ಥ ಶ್ರೀನಿವಾಸ್ ಮಾತಿನಂತೆ ಜಯಚಂದ್ರ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿನ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಡಿಲೀಟ್ ಮಾತುಕತೆ ನಡೆದಿದೆ. ಶ್ರೀನಿವಾಸ್ ಗೆ ಒಂದು ಕೋಟಿ ಹಣ ಕೊಡಲು ಜಯಚಂದ್ರ ಬಂದಿದ್ದ ಈ ವೇಳೆ ಅಂಬರೀಶ್, ಮಾರ್ಟಿನ್, ರವಿ ಮತ್ತು ವೆಂಕಟೇಶ್ ಅಲ್ಲಿಯೇ ಇದ್ದರು ಎರಡು ದಿನಗಳಲ್ಲಿ ನಿಮ್ಮ ಅಕೌಂಟಿಗೆ ಹಣ ಬರುವುದಾಗಿ ಭರವಸೆ ಕೊಟ್ಟಿದ್ದಾರೆ. ಸಚಿನ್ ಎಂಬಾತನಿಂದ ಅಕೌಂಟ್ಗೆ ಹಣ…














