Subscribe to Updates
Get the latest creative news from FooBar about art, design and business.
Author: kannadanewsnow05
ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಈ ವೇಳೆ ಅವರಿಗೆ ಬೆನ್ನಿನಲ್ಲಿ ನೋವು ಕಾಣಿಸಿಕೊಂಡಿದ್ದು ಬೆನ್ನಿನ ಹಿಂಭಾಗದಲ್ಲಿ ಊತ ಉಂಟಾಗಿದೆ ಹಾಗಾಗಿ ಇಂದು ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿಗೆ ಭೇಟಿ ನೀಡಿ ದರ್ಶನ್ ಅವರ ಆರೋಗ್ಯ ತಪಾಸಣೆ ಮಾಡಿದರು. ಹೌದು ಜೈಲಿನಲ್ಲಿ ಇಂದು ಸಹ ದರ್ಶನ್ಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಜೈಲು ವೈದ್ಯ ಡಾ.ರಾಜಶೇಖರ್ ಅವರಿಂದ ಆರೋಗ್ಯ ತಪಾಸಣೆ ನಡೆಸಲಾಗಿದೆ. ಬೆನ್ನಿನ ಭಾಗದಲ್ಲಿ ಊತ ಕಡಿಮೆಯಾಗದೆ ನೋವು ಹೆಚ್ಚಳವಾಗಿದೆ. ದರ್ಶನ್ ಗೆ ಸ್ಕ್ಯಾನ್ ಮಾಡಿಸುವಂತೆ ವೈದ್ಯರು ಒತ್ತಾಯಿಸಿದ್ದಾರೆ. ಸ್ಕ್ಯಾನಿಂಗ್ ಬೇಡ ಸರ್ ಅಂತ ನಟ ದರ್ಶನ್ ಹಠ ಮಾಡುತ್ತಿದ್ದಾರೆ. ಕೋರ್ಟ್ ಏನು ಹೇಳುತ್ತೆ ನೋಡಿ ಡಿಸೈಡ್ ಮಾಡುತ್ತೇನೆ ಎಂದು ದರ್ಶನ್ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕೂಡ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಈ ವೇಳೆ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿಗೆ ಭೇಟಿ ನೀಡಿ ನಟ ದರ್ಶನ್ ಅವರ ಆರೋಗ್ಯವನ್ನು…
ರಾಯಚೂರು : ಮುಡಾ ಹಗರಣದಲ್ಲಿ ವಿಪಕ್ಷ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ನೀಡಿ ಎಂದು ಅಗ್ರಹಿಸುತ್ತಿವೆ ಅಲ್ಲದೆ ಇತ್ತೀಚಿಗೆ ಕಾಂಗ್ರೆಸ್ ನಾಯಕರು ಆರ್ ಅಶೋಕ್ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದರು. ಇದಕ್ಕೆ ಅಶೋಕ್ ನಾನು ರಾಜೀನಾಮೆ ಕೊಡುತ್ತೇನೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುತ್ತಾರಾ?ಎಂದು ಸವಾಲು ಹಾಕಿದ್ದರು. ಅಶೋಕ್ ಹೇಳಿಕೆಗೆ ಇದೀಗ ಬೇಕಾದ್ರೆ ಅವರು ಕೊಡಲಿ ಏನು ತಪ್ಪೇ ಮಾಡಿದ ನಾನು ರಾಜೀನಾಮೆ ಯಾಕೆ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸದರು. ಇಂದು ಅವರು, ಮಾನ್ವಿಯಲ್ಲಿ ನಡೆದ ಸ್ವಾಭಿಮಾನಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ರಾಜೀನಾಮೆ ಕೇಳುವ ಆರ್ ಅಶೋಕ್ ಮೊದಲು ರಾಜೀನಾಮೆ ಕೊಡಬೇಕು. ಅವರು ಮೊದಲು ಕೊಡಲಿ. ಅವರಿಗೆ ರಾಜೀನಾಮೆ ಕೊಡಬೇಕು ಅನ್ನಿಸಿದ್ರೆ ಕೊಟ್ಟುಬಿಡಲಿ. ಆದರೆ ತಪ್ಪು ಮಾಡದ ನಾನ್ಯಾಕೆ ರಾಜೀನಾಮೆ ಕೊಡಬೇಕು, ಕಾನೂನು ಹೋರಾಟ ಮಾಡುತ್ತೇನೆ ಸತ್ಯಕ್ಕೆ ಜಯವಿದೆ ಎಂದರು. ಜಿ.ಟಿ. ದೇವೆಗೌಡ ಜೆಡಿಎಸ್ ಪಕ್ಷದ ಹಿರಿಯ ಮುಖಂಡರು. ದಸರಾ ಹಬ್ಬದ ಉದ್ಘಾಟನೆ ಕಾರ್ಯಕ್ರಮದಲ್ಲಿ…
ಮಂಡ್ಯ : ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ, ದಸರಾ ಆನೆಗಳು ಆಗಮಿಸಿವೆ. ಮಹೇಂದ್ರ ದಸರಾ ಅಂಬಾರಿಯನ್ನು ಹೊರಲಿದ್ದಾನೆ. ಈ ವೇಳೆ ಲಕ್ಷ್ಮಿ ಆನೆಯು ಕುದುರೆ ನೋಡಿ ಬೆಚ್ಚಿ ಬಿದ್ದಿದೆ. ಕೂಡಲೇ ಜನರು ದಿಕ್ಕಾಪಾಲಾಗಿ ಓಡಿದ್ದು ಭಾರಿ ಅನಾಹುತ ಒಂದು ತಪ್ಪಿದೆ. ಹೌದು ಇಂದು ಶ್ರೀರಂಗಪಟ್ಟಣದಲ್ಲಿ ನಡೆಯುವ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಪ್ರಮುಖ ಆಕರ್ಷಣೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ಇರಲಿದ್ದು, ಕಳೆದ ವರ್ಷದಂತೆ ಈ ವರ್ಷವೂ ಮಹೇಂದ್ರ 400 ಕೆಜಿ ತೂಕದ ಮರದ ಅಂಬಾರಿ ಸೇರಿ ಒಟ್ಟು 650 ಕೆಜಿ ತೂಕದ ಸರ್ವಾಲಂಕೃತ ಚಾಮುಂಡೇಶ್ವರಿ ದೇವಿಯನ್ನು ಸಾಗಲಿದೆ. ಈ ಒಂದು ಜಂಬೂಸವಾರಿಯಲ್ಲಿ ಮೂರು ಆನೆಗಳು ಪಾಲ್ಗೊಳ್ಳಲಿದ್ದು, ಮಹೇಂದ್ರ ಹಿರಣ್ಯ ಮತ್ತು ಲಕ್ಷ್ಮಿ ಹೆಸರಿನ ಆನೆಗಳು, ನಿನ್ನೆ ಸಂಜೆನೆ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದಿವೆ.ಇಂದು ಲಕ್ಷ್ಮಿ ಆಣೆಯು, ಶ್ರೀರಂಗಪಟ್ಟಣ ರಂಗನಾಥ ಮೈದಾನದ ಬಳಿ ಬನ್ನಿಮಂಟಪದ ಬಳಿ ನಿಂತಿರುವ ಕುದುರೆಯನ್ನು ನೋಡಿ ಲಕ್ಷ್ಮಿ ಆನೆ ಕೆಲ ಕಾಲ ರಂಪಾಟ ನಡೆಸಿತ್ತು. ಅದರಿಂದ…
ಮುಂಬೈ : ತಮ್ಮದೇ ಪಿಸ್ತೂಲ್ನಿಂದ ಬಾಲಿವುಡ್ ನಟ ಗೋವಿಂದ್ ಗುಂಡು ಹಾರಿಸಿಕೊಂಡಿದ್ದರಿಂದ, ಆಕಸ್ಮಿಕವಾಗಿ ಫೈರ್ ಆಗಿದ್ದರಿಂದ ಅವರ ಕಾಲಿಗೆ ತೀವ್ರ ಗಾಯ ಆಗಿತ್ತು. ನಂತರ ಅವರನ್ನು ಮುಂಬೈನ ಅಂಧೇರಿಯ ಕೃತಿ ಕೇರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇದೀಗ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೌದು ಕಳೆದ ಅಕ್ಟೊಬರ್ 1 ರಂದು ನಸುಕಿನ ಜಾವ ತಮ್ಮದೇ ಪಿಸ್ತುಲ್ ನಿಂದ ಗುಂಡು ಹಾರಿಸಿಕೊಂಡಿದ್ದರು. ಘಟನೆ ನಡೆದ ಬಳಿಕ ತಕ್ಷಣ ಅವರನ್ನು ಮುಂಬೈನ ಅಂಧೇರಿಯ ಕೃತಿ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಂಡ ನಂತರ ಗುಣಮುಖರಾಗಿ ನಟಗೋವಿಂದ ಅಂಧೇರಿಯ ಕೃತಿ ಕೇರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ಡಿಎನ್ ಎ ಪರೀಕ್ಷೆ ಮಾಡಿಸಲು ನ್ಯಾಯಾಧೀಶರ ಅನುಮತಿ ಕೇಳಲು ಎಸ್‌ಐಟಿ ಅಧಿಕಾರಿಗಳು ಬಂದಿದ್ದರು. ಈ ವೇಳೆ ನ್ಯಾಯಲಯ ಡಿಎನ್ ಎ ಪರೀಕ್ಷೆ ನಡೆಸಲು ಅನುಮತಿ ನೀಡಿತು. ನ್ಯಾಯಾಧೀಶರ ಸಮ್ಮುಖದಲ್ಲಿಯೇ ಮುನಿರತ್ನ ರಕ್ತದ ಮಾದರಿ ಸಂಗ್ರಹ ಮಾಡಲು ಮುಂದಾದರು. ಹೌದು ಎಸ್ ಐಟಿ ಅಧಿಕಾರಿಗಳು ವೈದ್ಯರೊಂದಿಗೆ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಮುನಿರತ್ನವ ಅವರು, ತಮ್ಮ ವಕೀಲರು ಬರಬೇಕು, ಅವರ ಮುಂದೆಯೇ ಸ್ಯಾಂಪಲ್ಸ್ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಮನವಿಯನ್ನ ಪುರಸ್ಕರಿಸಿ, ವಕೀಲರು ಬಂದ ಮೇಲೆ ಸ್ಯಾಂಪಲ್ಸ್ ತೆಗೆದುಕೊಳ್ಳಲು ಎಸ್‌ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬಳಿಕ ಶಾಸಕ ಮುನಿರತ್ನ ಅವರ ವಕೀಲರು ಕೋರ್ಟಿಗೆ ಆಗಮಿಸಿದ್ದಾರೆ.ಈ ವೇಳೆ ನ್ಯಾಯಾಧೀಶರು ಮುನಿರತ್ನ ಅವರ ರಕ್ತದ ಮಾದರಿ ಸಂಗ್ರಹಿಸಲು ಸೂಚನೆ ನೀಡಿದ್ದಾರೆ. ಹಾಗಾಗಿ ನ್ಯಾಯಾಧೀಶರ ಮುಂದೆ ಶಾಸಕ ಮುನಿರತ್ನ ಅವರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದೆ…
ಚಿತ್ರದುರ್ಗ : ಮುಡಾ ಹಗರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ 14 ಸೈಟ್ ಗಳ ಬೆಲೆ ರೂ.62 ಕೋಟಿ ರೂಪಾಯಿ ಕೊಡಿ ಎಂದು ಹೇಳಿಕೆ ನೀಡಿದ್ದರು.ಈ ಹೇಳಿಕೆಯನ್ನು ಅವರ ಹಿಂಬಾಲಕರಿಂದ ಕೇಳಿ ಹೇಳಿದ್ದರಿಂದ ಹಾಗಾಗಿ ಅವರ ಹಿಂಬಾಲಕರೇ ಅವರಿಗೆ ಖೆಡ್ಡಾ ತೋಡಿದ್ದಾರೆ.ಎಂದು ಚಿತ್ರದುರ್ಗದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದರು. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ಸೈಟ್ ಬೆಲೆ 80 ರಿಂದ 90 ಲಕ್ಷ ಎಂದೇ ಭಾವಿಸಿದ್ದೆವು. ಸಿಎಂ ಹಿಂದೆ ಇದ್ದ ವ್ಯಕ್ತಿ ಹೇಳಿದ್ದು ಕೇಳಿ 62 ಕೋಟಿ ಎಂದಿದ್ದರು ಸಿಎಂ ಸಿದ್ದರಾಮಯ್ಯ ಹಿಂಬಾಲಕರೇ ಅವರಿಗೆ ಖೆಡ್ಡಾ ತೋಡಿದ್ದಾರೆ ಎಂದು ಚಿತ್ರದುರ್ಗದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದರು. ದಸರಾ ಆಚರಣೆಯಲ್ಲಿ ಚಾಮುಂಡೇಶ್ವರಿಗೆ ಅಪಮಾನ ಮಾಡಿದ್ದಾರೆ.ಸರ್ಕಾರ ಪತನ ರಾಜೀನಾಮೆ ಬಗ್ಗೆ ಭಾಷಣ ಮಾಡಿದ್ದಾರೆ. ದಸರಾ ಉದ್ಘಾಟಿಸಿದ್ದು ಸಾಹಿತಿಯೋ ಯಾರೋ ನನಗೆ ಗೊತ್ತಿಲ್ಲ. ದಸರಾ ಉದ್ಘಾಟಕರು ಕೇಂದ್ರವನ್ನು ಟೀಕಿಸಿ ಭಾಷಣ ಮಾಡಿದ್ದಾರೆ. ಚಾಮುಂಡಿ…
ಬೆಂಗಳೂರು : ಉದ್ಯಮಿ ವಿಜಯ್ ತಾತ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿನ್ನೆ ಅಮೃತ ಹಳ್ಳಿ ಪೊಲೀಸ್ ಠಾಣೆಯಲ್ಲಿ HDK ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇದೀಗ ಈ ಒಂದು ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ರೋಲ್ಕಾಲ್ ಸ್ವಾಮಿಯವರ ವಿರುದ್ಧ FIR ದಾಖಲಾಗಿದೆ ಎಂದು ತಿರುಗೇಟು ನೀಡಿದೆ. ಸಾಮಾಜಿಕ ಜಾಲತಾಣ X ನಲ್ಲಿ ಮಾನ್ಯ ರೋಲ್ಕಾಲ್ ಸ್ವಾಮಿಯವರ ವಿರುದ್ಧ ₹ 50 ಕೋಟಿ ರೂಪಾಯಿ ವಸೂಲಿಗಾಗಿ ಜೀವ ಬೆದರಿಕೆ ಹಾಕಿದ್ದಕ್ಕೆ FIR ದಾಖಲಾಗಿದೆ. ದೂರು ನೀಡಿದ್ದು ಸ್ವತಃ ಜೆಡಿಎಸ್ ಪಕ್ಷದ ಪದಾಧಿಕಾರಿ. ಹಿಂದೆ ಕುಮಾರಸ್ವಾಮಿಯವರ ಮಾನಸಪುತ್ರ ಪ್ರಜ್ವಲ್ ರೇವಣ್ಣನೇ ಜೆಡಿಎಸ್ ನಲ್ಲಿನ ಸೂಟ್ಕೇಸ್ ಸಂಸ್ಕೃತಿಯನ್ನು ತೆರೆದಿಟ್ಟಿದ್ದರು, @hd_kumaraswamy ಅವರೇ, ನಿಮ್ಮನ್ನು ರೋಲ್ಕಾಲ್ ಸ್ವಾಮಿ ಎನ್ನೋಣವೇ, ಸೂಟ್ಕೇಸ್ ಸ್ವಾಮಿ ಎನ್ನೋಣವೇ? ರಾಜಕಾರಣವನ್ನು ಮಾಫಿಯಾಕರಣ ಮಾಡಿದ ರೋಲ್ಕಲ್ ಸ್ವಾಮಿಯವರು ರಾಜ್ಯವನ್ನು ಲೂಟಿ ಹೊಡೆದಿದ್ದಷ್ಟೇ ಅಲ್ಲ, ರಾಜ್ಯದ ಭೂಮಿ ಕಬಳಿಸಿದ್ದಷ್ಟೇ ಅಲ್ಲ, ಸ್ವಪಕ್ಷದ ಕಾರ್ಯಕರ್ತರ ಲೂಟಿಗೂ ಇಳಿದಿರುವುದು ಶೋಚನೀಯ…
ಉಡುಪಿ : ರಾಜ್ಯದಲ್ಲಿ ಘನ ಘೋರವಾದಂತಹ ಘಟನೆ ನಡೆದಿದ್ದು, ಉಡುಪಿ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿದ್ದರಿಂದ ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ವಾಂತಿ ಭೇಧಿಯಿಂದ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಹೌದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪಂದ ಗ್ರಾಮ ಪಂಚಾಯತದಲ್ಲಿ ಈ ಒಂದು ಘಟನೆ ನಡೆದಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ 6ನೇ ಮತ್ತು 7ನೇ ವಾರ್ಡ್ನಲ್ಲಿ ಕುಡಿಯುವ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಕಲುಷಿತ ನೀರು ಸೇವಿಸಿ ಕರ್ಕಿಹಳ್ಳಿ ಹಾಗೂ ಮೆಡಿಕಲ್ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಕಾಫಿನಾಡಿಯಲ್ಲಿರುವ ಟ್ಯಾಂಕಿನಿಂದ ಈ ಒಂದು ಕಲುಷಿತ ನೀರು ಪೂರೈಕೆ ಆಗಿದೆ ಎಂದು ಹೇಳಲಾಗುತ್ತಿದ್ದು, ಕರ್ಕಿಕಳ್ಳಿಯಲ್ಲಿ ಸುಮಾರು 500 ಜನ ಮೆಡಿಕಲ್ ನಲ್ಲಿ 600 ಜನ ಅಸ್ವಸ್ಥರಾಗಿದ್ದಾರೆ. ವಾರ್ಡ್ನ ಪ್ರತಿ ಮನೆಯಲ್ಲಿ ಮೂರಕ್ಕೂ ಅಧಿಕ ಜನರಿಗೆ ವಾಂತಿ ಭೇದಿ ಆಗಿದ್ದು, 80 ವರ್ಷದ ವೃದ್ಧನ ಸ್ಥಿತಿ ಗಂಭೀರವಾಗಿದೆ. ತಕ್ಷಣ ವೃದ್ಧನನ್ನು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳು ಸ್ಥಳೀಯರು ಆಗ್ರಹಿಸಿದ್ದಾರೆ.
ಬೆಂಗಳೂರು : ಮಾರ್ಟೀನ್ ಸಿನೆಮಾ ಚಿತ್ರದ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಸಿನಿಮಾ ನಿರ್ಮಾಪಕರ ವಿರುದ್ಧ ನಿರ್ದೇಶಕರಾದಂತಹ ಎಪಿ ಅರ್ಜುನ್ ಚಿತ್ರ ಬಿಡುಗಡೆ ಮಾಡದಂತೆ ನಿರ್ಬಂಧ ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಹೌದು ಹೈಕೋರ್ಟ್ ಮೆಟ್ಟಿಲೇರಿದ ಮಾರ್ಟಿನ್ ಸಿನಿಮಾ ನಿರ್ಮಾಪಕರ ವಿರುದ್ಧ ನಿರ್ದೇಶಕ ಎಪಿ ಅರ್ಜುನ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ನಿರ್ದೇಶಕನಾದರೂ ನನ್ನ ಹೆಸರು ಕೈಬಿಟ್ಟು ಚಿತ್ರದ ಪ್ರಚಾರ ಮಾಡಿದ್ದಾರೆ. ಸಿನಿಮಾ ಸಂಬಂಧಿಸಿದ ಒಪ್ಪಂದ ನಿರ್ಮಾಪಕರು ಪಾಲಿಸಿಲ್ಲವೆಂದು ನಿರ್ದೇಶಕರ ವಾದವಾಗಿದೆ. ತಮ್ಮ ಹೆಸರು ಕೈಬಿಟ್ಟು ಚಿತ್ರ ಬಿಡುಗಡೆ ಮಾಡದಂತೆ ನಿರ್ಬಂಧ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಕೊಪ್ಪಳ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಕಂಡರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ಹೆದರಿಕೆ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕಕ್ಕೆ 30, 35 ಬಾರಿ ಭೇಟಿ ನೀಡಿದ್ದರು ಸಹ ಕರ್ನಾಟಕ ಜನತೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಹಾಗಾಗಿ ಅವರಿಗೆ ಸಿದ್ದರಾಮಯ್ಯ ಅವರನ್ನು ಕಂಡರೆ ಭಯವಿದೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು. ಕೊಪ್ಪಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಯಾವ ಸರ್ಕಾರದಲ್ಲಿ ಆಗಿದೆ? ಸಿಎಂ ಸಿದ್ದರಾಮಯ್ಯ ಕಡತಕ್ಕೆ ಏನಾದರೂ ಸಹಿ ಹಾಕಿದ್ದಾರಾ? ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರ ಏನು ಪಾತ್ರವಿಲ್ಲ. ಸಿದ್ದರಾಮಯ್ಯ ಅವರನ್ನು ಕಂಡರೆ ಮೋದಿ ಅಮಿತ್ ಶಾ ಗೆ ಭಯ ಎಂದು ಅವರು ತಿಳಿಸಿದರು. ಮುಡಾ ಬೆಳವಣಿಗೆ ನೋಡಿದರೆ ರಾಜಕೀಯ ಷಡ್ಯಂತ್ರ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮುಡಾ ಅನ್ನೋ ವಿಚಾರ ಪ್ರಸ್ತಾಪ ಮಾಡುತ್ತಿದ್ದೀರಲ್ಲ ಆಗ ಯಾವ ಸರ್ಕಾರ ಇತ್ತು? ಪ್ರಧಾನಿ ಮೋದಿ ಅವರಿಗೆ ಮತ್ತು ಅಮಿತ್ ಶಾ ಅವರಿಗೆ…













