Author: kannadanewsnow05

ತುಮಕೂರು : ತುಮಕೂರಿನಲ್ಲಿ ಭೀಕರ ಅಪಘಾತವಾಗಿದ್ದು ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ರಾಜ್ಯ ಹೆದ್ದಾರಿ 33ರಲ್ಲಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ರಾಜೇಂದ್ರಪುರ ಗೇಟ್ ಬಳಿ ಈ ಅಪಘಾತ ನಡೆದಿದೆ. ತುಮಕೂರಿನಲ್ಲಿ ಮದುವೆ ಮುಗಿಸಿ ಕಾರಿನಲ್ಲಿ ಮಂಡ್ಯಕ್ಕೆ ತೆರಳುತ್ತಿದ್ದರು. ಮಂಡ್ಯ ಮೂಲದ ಆಕರ್ಷ (28) ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಇನ್ನು ಕಾರಿನಲ್ಲಿ ಇದ್ದಂತಹ ಶಶಾಂಕ್ ಗೌಡ ಹಾಗೂ ಜ್ಞಾನೆಶ್ವರಿ ಸೇರಿ ಮೂವರಿಗೆ ಗಂಭೀರವಾದ ಗಾಯಗಳಾಗಿವೆ. ತಕ್ಷಣ ಮೂವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ತಿಂಗಳ ಹಿಂದೆ ಶಶಾಂಕ್ ಗೌಡ ಹಾಗೂ ಜ್ಞಾನೇಶ್ವರಿ ಮದುವೆಯಾಗಿದ್ದರು. ಇದೀಗ ಮೃತ ಆಕರ್ಷವನ್ನು ತಾಲೂಕು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಎಂದು ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಹುಲಿಯೂರುದುರ್ಗ ಠಾಣೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

Read More

ಮೈಸೂರು : ನಮ್ಮ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿಯವರು ಕಾಂಗ್ರೆಸ್ ಐವತ್ತು ಶಾಸಕರಿಗೆ 50 ಕೋಟಿ ರೂಪಾಯಿ ಆಫರ್ ನೀಡಿದ್ದರು. ಆದರೆ ನಮ್ಮ ಶಾಸಕರು ಯಾವುದೇ ಹಣದ ಆಮಿಷಕ್ಕೆ ಬಗ್ಗಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೋಟಕವಾದ ಹೇಳಿಕೆ ನೀಡಿದರು. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹೊರಳಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ಸಿನ 50 ಶಾಸಕರಿಗೆ ತಲ 50 ಕೋಟಿ ರೂಪಾಯಿ ಆಫರ್ ನೀಡಿದರು ಆದರೆ ನಮ್ಮ ಶಾಸಕರು ಯಾವುದಕ್ಕೂ ಬಗ್ಗಲಿಲ್ಲ ಹೀಗಾಗಿ ನನ್ನ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಹೊರಾಳಹಳ್ಳಿ ಗ್ರಾಮದಲ್ಲಿ ಬಿಜೆಪಿ ವಿರುದ್ಧ ಗಂಭೀರವಾದ ಆರೋಪ ಮಾಡಿದರು. ನನ್ನನ್ನು ಮುಟ್ಟಿದರೆ ನಮ್ಮ ಕರ್ನಾಟಕ ಜನ ಸುಮ್ಮನೆ ಬಿಡಲ್ಲ ಎಂದು ಪ್ರತಿಪಕ್ಷ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು. ನನ್ನ ಕಂಡರೆ ಬಿಜೆಪಿಯವರಿಗೆ ಹೊಟ್ಟೆ ಉರಿ. ಬಡವರ ಪರ ಕೆಲಸ ಮಾಡುತ್ತೇನೆ ಅಂತ ನನ್ನನ್ನು…

Read More

ಬೆಂಗಳೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ರಜಾಕಾರರಿಂದ ಖರ್ಗೆ ತಾಯಿ, ಸಹೋದರಿ ಸುಟ್ಟು ಹೋದರೂ ಎಐಸಿಸಿ ಅಧ್ಯಕ್ಷ ಖರ್ಗೆ ಮೌನವಾಗಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ, ಇದೀಗ ಈ ಒಂದು ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಪುತ್ರ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ಮಾಡಿದ್ದು, ಹೌದು ರಜಾಕಾರರು ನಮ್ಮ ಮನೆಯನ್ನು ಸುಟ್ಟು ಹಾಕಿದ್ದರು. ಸುಟ್ಟಿದ್ದು ರಜಾಕಾರರು ಹೊರತು ಮುಸ್ಲಿಮರಲ್ಲ ಎಂದು ಸ್ಪಷ್ಟನೆ ನೀಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶ ಸಿಎಂ ಯೋಗಿಗೆ ಖರ್ಗೆ ಸಾಹೇಬರ ಇತಿಹಾಸ ಗೊತ್ತಿಲ್ಲ. ಹೌದು ರಜಾಕಾರರು ನಮ್ಮ ಮನೆಯನ್ನು ಸುಟ್ಟು ಹಾಕಿದ್ದರು. ಸುಟ್ಟಿದ್ದು ರಜಾಕಾರರು ಹೊರತು ಮುಸ್ಲಿಮರಲ್ಲ. ಮುಸ್ಲಿಂ ಸಮುದಾಯ ಸುಟ್ಟಿಲ್ಲ. ಬೇರೆ ಸಮುದಾಯದ ಕೆಲವರಿಂದ ಮೋಸವಾಗುತ್ತದೆ ಎಂದು ಆರೋಪಿಸಿ ಇಡೀ ಸಮುದಾಯವನ್ನೇ ದೂರಲು ಆಗುತ್ತಾ? ಎಂದು ಪ್ರಶ್ನಿಸಿದರು. ಇಡೀ ಮುಸ್ಲಿಂ ಸಮುದಾಯವನ್ನೇ ದೂರಲು ಆಗುತ್ತಾ? ರಜಾಕಾರರ ದಾಳಿಯ ಬಗ್ಗೆ ಈಗ ಚರ್ಚೆ ಅಪ್ರಸ್ತುತ. ಮನೆ ಸುಟ್ಟಿರುವ ಬಗ್ಗೆ ಮಾತನಾಡುವ ನೀವು ದಲಿತರಿಗೆ…

Read More

ರಾಮನಗರ : ಇಂದು ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಮತದಾನ ನಡೆದಿದ್ದು, ಇದೀಗ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಚನ್ನಪಟ್ಟಣದ ಮಂಗಳವಾರ ಪೇಟೆಯಲ್ಲಿ ಇವಿಎಂ ಅದಲು ಬದಲು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೌದು EVM ಮಷಿನ್ ಅದಲು ಬದಲು ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದ್ದು, ಮರು ಮತದಾನ ನಡೆಸುವಂತೆ ಮತಗಟ್ಟೆ ಸಂಖ್ಯೆಯ 76ರ ಬಳಿ ಪ್ರತಿಭಟನೆ ನಡೆಯಿತು. ಇವಿಎಂ ಅದಲು ಬದಲಾಗಿದೆ ಎಂದು ಮತದಾರರು ಆರೋಪಿಸಿದ್ದಾರೆ. 1ರಿಂದ ಶುರುವಾಗಬೇಕಿದ್ದ ಕ್ರಮ ಸಂಖ್ಯೆ 17ರಿಂದ ಆರಂಭವಾಗಿದೆ ಎಂದು ಆರೋಪಿಸಿದ್ದಾರೆ. ಈ ವೇಳೆ ಮತಕಟ್ಟೆಯ ಬಳಿ ಗಲಾಟೆ ಮಾಡುತ್ತಿದ್ದ ಕೆಲವರನ್ನು ಪೊಲೀಸರು ಚದುರಿಸಿದ್ದಾರೆ.

Read More

ಬೆಂಗಳೂರು : ಕೊರೊನ ಅಕ್ರಮದ ಕುರಿತಂತೆ ನ್ಯಾ.ಕುನ್ಹಾ ವರದಿ ವಿಚಾರವಾಗಿ ಇದುವರೆಗೂ ರಾಜ್ಯ ಸರ್ಕಾರದಿಂದ ಯಾವುದೇ ವರದಿ ಬಿಡುಗಡೆಯಾಗಿಲ್ಲ ಎಂದು ಬೆಂಗಳೂರಿನಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಸ್ಪಷ್ಟನೆ ನೀಡಿದರು. ಬಿಜೆಪಿ ಸರ್ಕಾರ ಹೆಣದ ಮೇಲೆ ಹಣ ಮಾಡಿದ್ದು ಸಾಬೀತಾಗಿದೆ. ಖಾಸಗಿ ಲ್ಯಾಬ್ ನವರಿಗೂ ಕೂಡ ಸರ್ಕಾರದ ಹಣ ಕೊಟ್ಟಿದ್ದಾರೆ. ಯಾವ ಮಟ್ಟಿಗೆ ಟೆಸ್ಟಿಂಗ್ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತದೆ. ICMR ಮಾರ್ಗಸೂಚಿ ಉಲ್ಲಂಘಿಸಿ ಅಕ್ರಮ ಮಾಡಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಶ್ರೀರಾಮುಲು ವಿರುದ್ಧ ಎಫ್ಐಆರ್ ದಾಖಲಿಸಲು ಸಲಹೆ ಕೊಟ್ಟಿದ್ದಾರೆ. ಹೆಚ್ಚಿನ ಬೆಲೆಗೆ ಯಾವ ಪುರುಷಾರ್ಥಕ್ಕೆ ಖರೀದಿಸಿದ್ದರು ಗೊತ್ತಿಲ್ಲ ಎಂದು ತಿಳಿಸಿದರು. ಜನ ಸಾಯುತ್ತಿದ್ದರೂ ಕೂಡ ದುಡ್ಡಿನ ಮೇಲೆ ಆಸೆಗಾಗಿ ಹೀಗೆ ಮಾಡಿದ್ದಾರೆ. 15 ಸಾವಿರ ಕೋಟಿ ಖರ್ಚು ಮಾಡಿದ್ದಾರೆ ಎಂದು ಅವರೇ ಹೇಳಿದ್ದಾರೆ. ನಿವೃತ್ತ ನ್ಯಾ ಕುನ್ಹಾ ನೇತೃತ್ವದ ತನಿಖಾ ಸಮಿತಿ ವರದಿ ಇನ್ನು ಬರಲಿದೆ 1,28,000 ಜನರ ಸಾವಿನ ವರದಿ ನೀಡಿಯೇ ಇಲ್ಲ. ತನಿಖೆಯ ಸಂಪೂರ್ಣ ವರದಿ…

Read More

ಬೆಂಗಳೂರು : ಬೆಂಗಳೂರಿನಲ್ಲಿರುವ ಪೋಷಕರೇ ಆದಷ್ಟು ಹುಷಾರ್ ಆಗಿರಿ ಏಕೆಂದರೆ ಇದೀಗ ಬೆಂಗಳೂರಿನ ಶಾಲಾ ಕಾಲೇಜುಗಳ ಸುತ್ತಮುತ್ತಲು ಉತ್ತರ ಪ್ರದೇಶದಿಂದ ಬಂದಂತಹ ವ್ಯಕ್ತಿಗಳಿಂದ ಚರಸ್ ಚಾಕ್ಲೇಟ್ ಮಾರಾಟ ಮಾಡಲಾಗುತ್ತಿದೆ. ಇದೀಗ ಈ ಒಂದು ಘಟನೆ ಸಂಬಂಧಿಸಿದಂತೆ ಜಿಗಣಿ ಪೊಲೀಸರು 6 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಬೆಚ್ಚಿಬಿಳಿಸೋ ಗ್ಯಾಂಗ್ ಇದೀಗ ಅರೆಸ್ಟ್ ಆಗಿದೆ. ನಿಮ್ಮ ಮಕ್ಕಳು ಶಾಲೆ ಕಾಲೇಜಿಗೆ ಹೋಗುತ್ತಿದ್ದರೆ ಆದಷ್ಟು ಹುಷಾರು ಆಗಿರೋಕೆ ಹೇಳಿ. ಏಕೆಂದರೆ ಬೆಂಗಳೂರಿನಲ್ಲಿ ಚರಸ್ ಚಾಕಲೇಟ್ ಘಾಟು ಹರಡಿದ್ದು, ಪ್ರತಿಷ್ಠಿತ ಕಾಲೇಜುಗಳ ಸುತ್ತಲೂ ಚರಸ್ ಚಾಕೊಲೇಟ್ ಇದೀಗ ಸೆಲ್ ಆಗುತ್ತಿದೆ. ಹೌದು ಪ್ರತಿಷ್ಠಿತ ಕಾಲೇಜುಗಳ ಸುತ್ತ ಚರಸ್ ಚಾಕೊಲೇಟ್ ಮಾರಾಟ ಮಾಡುತ್ತಿದ್ದವರ ಇದೀಗ ಬಂಧನವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಂಕುರ್, ಶಿವರಾಜ್, ಸೋಮು ಸಿಂಗ್, ಆನಂದ್ ಕುಮಾರ್ ಹಾಗೂ ಜೀತು ಸಿಂಗ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಬಂಧಿತರಿಂದ ಒಟ್ಟು 50 ಕೆಜಿ ಚಾಕಲೇಟನ್ನು ಸೀಜ್ ಮಾಡಿದ್ದಾರೆ.

Read More

ರಾಮನಗರ : ಇಂದು ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಮತದಾನ ನಡೆಯುತ್ತಿದ್ದು, ಇದೀಗ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ವ್ಯಕ್ತಿ ಒಬ್ಬ ದಾಖಲೆಯಿಲ್ಲದೆ ಹಣ ಹಂಚುತ್ತಿದ್ದ ಎಂಬ ಆರೋಪದ ಅಡಿ ಆತನನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹೌದು ಚನ್ನಪಟ್ಟಣದಲ್ಲಿ ಹಣ ಹಂಚುತ್ತಿದ್ದ ವ್ಯಕ್ತಿಯನ್ನು ಇದೀಗ ವಶಕ್ಕೆ ಪಡೆಯಲಾಗಿದೆ. ಆಕಿಲ್ ಶಾ ವಲಿ ದರ್ಗಾ ಬಳಿ ಹಣ ಹಂಚಿಕೆ ಆರೋಪ ಕೇಳಿ ಬಂದಿದೆ. 500 ಮುಖಬೆಲೆಯ 1 ಲಕ್ಷ 16 ಸಾವಿರ ಹಣವನ್ನು ಸೀಜ್ ಮಾಡಲಾಗಿದೆ. ಆರೋಪಿ ಮಹಮ್ಮದ್ ಅಸ್ಲಮ್ನನ್ನು ಚುನಾವಣಾ ಅಧಿಕಾರಿಗಳು ಇದೀಗ ವಶಕ್ಕೆ ಪಡೆದುಕೊಂಡಿದ್ದಾರೆ.

Read More

ಬೆಂಗಳೂರು : ವೇತನ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಇದೀಗ 108 ಆಂಬುಲೆನ್ಸ್ ಸಿಬ್ಬಂದಿಗಳು ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದು, ಶೀಘ್ರದಲ್ಲಿ ಬಾಕಿ ವೇತನ ಪಾವತಿಸದೆ ಇದ್ದಲ್ಲಿ ಆಂಬುಲೆನ್ಸ್ ಸೇವೆ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಹೌದು ಸಂಬಳ ನೀಡದ ಹಿನ್ನೆಲೆ 108 ಆಂಬುಲೆನ್ಸ್ ಸಿಬ್ಬಂದಿ ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಶನಿವಾರದೊಳಗೆ ವೇತನ ನೀಡದಿದ್ದರೆ ಪ್ರತಿಭಟನೆ ಎಚ್ಚರಿಕೆ ಸಹ ಸಿಬ್ಬಂದಿಗಳು ನೀಡಿದ್ದಾರೆ. ವೇತನ ನೀಡದಿದ್ದರೆ ಸೇವೆಗೆ ಹಾಜರಾಗದಿರಲು ನೌಕರರು ನಿರ್ಧಾರ ಕೈಗೊಂಡಿದ್ದಾರೆ. ಬಾಕಿ ವೇತನ ಪಾವತಿಸುವಂತೆ ನಾಳೆ ಸರ್ಕಾರಕ್ಕೆ 108 ಆಂಬುಲೆನ್ಸ್ ನೌಕರರು ಮನವಿ ಸಲ್ಲಿಸಲಿದ್ದಾರೆ. ಕಳೆದ ವರ್ಷ ಜುಲೈ ನಲ್ಲಿ ಕೂಡ 108 ಆಂಬುಲೆನ್ಸ್ ಸಿಬ್ಬಂದಿಗಳು ಬಾಕಿ ವೇತನ ಪಾವತಿಸದ ಹಿನ್ನೆಲೆಯಲ್ಲಿ ಸೇವೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದರು. ಈ ವೇಳೆ ಸಚಿವ ದಿನೇಶ್ ಗುಂಡೂರಾವ್ ಅವರು, 108 ಸಿಬ್ಬಂದಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್,…

Read More

ಬೆಂಗಳೂರು : ನಿನ್ನೆ ತಡರಾತ್ರಿ ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಒಂದು ನಡೆದಿದ್ದು ಬೈಕ್ ಸ್ಕಿಡ್ ಆಗಿ ಬಿದ್ದಂತಹ ಯುವಕನ ಮೇಲೆ ಕಾರೊಂದು ಬಂದು ಯುವಕನ ಮೇಲೆ ಹರಿದಿದೆ. ಕೂಡಲೇ ಸ್ಥಳದಲ್ಲೇ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ತಿಗಳರಪಾಳ್ಯದ ಮುಖ್ಯರಸ್ತೆಯಲ್ಲಿ ಈ ಅಪಘಾತ ನಡೆದಿದೆ. ಹೌದು ಬೈಕ್ ಸ್ಕಿಡ್ ಆಗಿ ಬಿದ್ದ ಯುವಕನ ಮೇಲೆ ಕಾರು ಹರಿದಪರಿಣಾಮ ಶಶಿಕುಮಾರ್ (20) ಎನ್ನುವ ಯುವಕ ಸ್ಥಳದಲ್ಲಿ ಸಾವನಪ್ಪಿದ್ದಾನೆ. ತಿಗಳರಪಾಳ್ಯದಲ್ಲಿ ಈ ಒಂದು ಘಟನೆ ನಡೆದಿದೆ. ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಶಶಿಕುಮಾರ್, ಈ ವೇಳೆ ಬೈಕ್ ಸ್ಕಿಡ್ ಆಗಿದೆ.ಕೂಡಲೇ ಕಾರೊಂದು ಆತನ ಮೇಲೆ ಹರಿದಿದೆ. ಇದು ಪೂರ್ವ ನಿಯೋಜಿತ ಕೊಲೆ ಆಗಿರಬಹುದೆ ಎಂಬ ಅನುಮಾನ ಮೂಡುತ್ತಿದೆ.

Read More

ಮೈಸೂರು : ಎಲೆಕ್ಟ್ರಿಕ್ ಕ್ಲಿಯರೆನ್ಸ್ ಗಾಗಿ ಮರಗಳನ್ನು ಕತ್ತರಿಸಿದ ಮೆಸ್ಕಾಂ ನಡೆಗೆ ಈಶ್ವರ ವನ ಟ್ರಸ್ಟ್ ಆಕ್ರೋಶಗೊಂಡಿದ್ದು, ಈ ಕುರಿತಂತೆ ಅರಣ್ಯ ಇಲಾಖೆಗೆ ಮೆಸ್ಕಾಂ ವಿರುದ್ಧ ಈಶ್ವರ ವನ ಟ್ರಸ್ಟ್ ದೂರು ನೀಡಿದೆ. ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಶ್ವರ ವನ ಟ್ರಸ್ಟ್ ದೂರು ನೀಡಿದೆ. ಎರಡು ಎಕರೆ ಪ್ರದೇಶದಲ್ಲಿ ಈಶ್ವರವನ ಟ್ರಸ್ಟ್ ಮರಗಳನ್ನು ಬೆಳೆಸಿತ್ತು. ಅಳಿವಿನಂಚಿನಲ್ಲಿ ಇರುವಂತಹ ಗಿಡಗಳನ್ನು ನೆಟ್ಟು ಟ್ರಸ್ಟ್ ಅವುಗಳನ್ನು ಪೋಷಣೆ ಮಾಡಿತ್ತು. ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ಈಶ್ವರನ ಟ್ರಸ್ಟ್ ಬೆಳೆಸಿತ್ತು. ಪ್ರಾಣಿ ಪಕ್ಷಿಗಳಿಗೆ ಆಹಾರವಾಗಿರುವ ಹಣ್ಣಿನ ಗಿಡಗಳನ್ನು ಇದೀಗ ನಾಶ ಮಾಡಲಾಗಿದೆ. ಎಲೆಕ್ಟ್ರಿಕ್ ಲೈನ್ ಕ್ಲಿಯರೆನ್ಸ್ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆದಿದೆ. ಮೆಸ್ಕಾಂ ಸಿಬ್ಬಂದಿ ಅಕ್ರಮವಾಗಿ ಪ್ರವೇಶಿಸಿ ಮರಗಳನ್ನು ಕಡಿದಿದ್ದಾರೆ. ಇದೀಗ ಮೆಸ್ಕಾಂ ಸಿಬ್ಬಂದಿ ವಿರುದ್ಧ ಪರಿಸರ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಮೆಸ್ಕಾಂ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದೆ.

Read More