Author: kannadanewsnow05

ರಾಯಚೂರು : ದೇವರಿಗೆ ಎಂದು ಮಾಡಿದ ಮಾಂಸದೂಟವನ್ನು ಸೇವಿಸಿ ಸುಮಾರು 20ಕ್ಕೂ ಹೆಚ್ಚು ಜನರು ಅಸ್ವಸ್ಥ ರಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪರಾಂಪುರ ತಾಂಡಾದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಮಾಂಸದೂಟ ಸೇವಿಸಿ ಸುಮಾರು 20ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಲಿಂಗಸೂಗೂರು ತಾಲೂಕಿನ ಪರಾಂಪುರ ತಾಂಡಾದಲ್ಲಿ ಈ ಒಂದು ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪರಾಂಪುರ ತಾಂಡಾದ ಜನರು ದೇವರ ಕಾರ್ಯಕ್ಕಾಗಿ ನಿವಾಸಿಗಳು ಮಾಂಸದ ಊಟ ಮಾಡಿಸಿದ್ದರು. ಎಲ್ಲ ದೇವರ ಕಾರ್ಯ ಮುಗಿದ ಬಳಿಕ ಮಧ್ಯಾಹ್ನ ತಾಂಡದ ನಿವಾಸಿಗಳು ಮಾಂಸದ ಊಟ ಸೇವಿಸಿದ್ದಾರೆ. ಈ ವೇಳೆ ತಾಂಡಾದ ನಿವಾಸಿಗಳಿಗೆ ವಾಂತಿಭೇದಿ ಶುರುವಾಗಿದೆ. ತಕ್ಷಣ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಅಸ್ವಸ್ಥಗೊಂಡ 10 ಜನರಿಗೆ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಗ್ರಾಮಕ್ಕೆ ಲಿಂಗಸುಗೂರು ತಾಲೂಕು ಆರೋಗ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಮಂಡ್ಯ : ಯಾವುದೇ ವಸ್ತು ಆಗಿರಲಿ ಅಥವಾ ವ್ಯಕ್ತಿನೇ ಆಗಿರಲಿ ಸಿಗಬೇಕೆಂದರೆ ಅದೃಷ್ಟ ಇರಬೇಕು ಎಂದು ಹೇಳುತ್ತಾರೆ. ಇದೀಗ ಕೇರಳದ ಓಣಂ ಬಂಪರ್ ಲಾಟರಿಯಲ್ಲಿ ಕರ್ನಾಟಕದ ಮಂಡ್ಯ ಜಿಲ್ಲೆಯ ಬೈಕ್ ಮೆಕಾನಿಕ್ ಒಬ್ಬರು ಬರೋಬ್ಬರಿ 25 ಕೋಟಿ ಬಂಪರ್ ಲಾಟರಿ ಪಡೆದಿದ್ದಾರೆ. ಹೌದು ಮಂಡ್ಯ ಜಿಲ್ಲೆಯ ಅಲ್ತಾಫ್ ಪಾಷಾ ಎನ್ನುವವರು ಕೇವಲ 500 ರೂಪಾಯಿ ಕೊಟ್ಟು ಕೇರಳದ ಓಣಂ ಬಂಪರ್ ಲಾಟರಿ ಯನ್ನು ಖರೀದಿಸಿದ್ದರು. ಇದೀಗ ಕೇರಳದ ಓಣಂ ಬಂಪರ್ ಲಾಟರಿ ಘೋಷಣೆ ಮಾಡಿದ್ದು, ಅಲ್ತಾಫ್ ಪಾಷಾ ಅವರಿಗೆ 25 ಕೋಟಿ ರೂಪಾಯಿ ಬಂಪರ್ ಬಹುಮಾನ ಸಿಕ್ಕಿದೆ. ಅಲ್ತಾಫ್ ಪಾಷಾ ಅವರು ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರುವ ಅವರಿಗೆ ಬರೋಬ್ಬರಿ 25 ಕೋಟಿ ಬಂಪರ್ ಲಾಟರಿ ಹೊಡೆದಿದೆ.ಕೇರಳ ಲಾಟರಿಯಲ್ಲಿ 25 ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ ಅಲ್ತಾಫ್ ಬಂಪರ್ ಲಾಟರಿ ಹೊಡೆದಿದ್ದಾರೆ. ಇತ್ತೀಚಿಗೆ ಅಷ್ಟೇ ಅವರು ಕೇರಳಕ್ಕೆ ಹೋಗಿ ಲಾಟರಿ…

Read More

ಬೆಂಗಳೂರು : ಕೇರಳದಲ್ಲಿ ಬರೋಬ್ಬರಿ 25 ಲಕ್ಷ ರೂ. ಮೌಲ್ಯದ 2000 ನಕಲಿ ನೋಟು ಮುದ್ರಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಕಚೇರಿಯಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳುತ್ತಿದ್ದ, ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಇದೀಗ ಬಂಧಿಸಿದ್ದಾರೆ. ಹೌದು ಬರೋಬ್ಬರಿ 25 ಲಕ್ಷ ರೂ. ಮೌಲ್ಯದ 2000 ನೋಟುಗಳನ್ನು ತಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಕಚೇರಿಯಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳುವಾಗ ನಕಲಿ ನೋಟು ಮುದ್ರಿಸಿ ತಂದಿರುವುದು ಪತ್ತೆಯಾಗಿದೆ.ನಕಲಿ ನೋಟು ಮುದ್ರಿಸಿ ಎಕ್ಸ್ ಚೇಂಜ್ ಯತ್ನ ಮಾಡಲು ಮುಂದಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಹಲಸೂರು ಗೇಟ್ ಪೊಲೀಸರಿಂದ ಅಫ್ಜಲ್, ಅನ್ವರ್, ಪ್ರಸಿದ್ಧ್ ಸೇರಿ ನಾಲ್ವರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಬೆಚ್ಚಿಬಿದ್ದ ಪೊಲೀಸರು! ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಪೊಲೀಸರೆ ಬೆಚ್ಚಿ ಬಿದ್ದಿದ್ದಾರೆ. ಪ್ರಮುಖ ಆರೋಪಿ ಅಫ್ಜಲ್, ಕೇರಳದಿಂದ ಬೆಂಗಳೂರು ನಗರಕ್ಕೆ 25 ಲಕ್ಷ ರೂ. ಹಣ ತಂದಿದ್ದನು. ಎಲ್ಲ ನೋಟುಗಳು 2,000 ರೂ. ಮೌಲ್ಯದ ನೋಟುಗಳಾಗಿದ್ದು, ಅವುಗಳನ್ನು ಬೆಂಗಳೂರಿನಲ್ಲಿರುವ ಆರ್‌ಬಿಐ ಶಾಖಾ…

Read More

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಮಧ್ಯಾಹ್ನ 2.45ಕ್ಕೆ ಮುಂದೂಡಿದರು. ದರ್ಶನ್ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿ, ಪ್ರತ್ಯಕ್ಷ ಸಾಕ್ಷಿ ಬಿಟ್ಟರೆ ಬೇರೆ ಸಾಕ್ಷಿಯೇ ಇಲ್ಲ. ಕ್ರತ್ಯ ಸಾಬೀತುಪಡಿಸುವಂತಹ ಒಂದು ಅಂಶವೂ ಇಲ್ಲ. ರಿಮ್ಯಾಂಡ್ ಅರ್ಜಿ ಸಲ್ಲಿಸಿದರೆ ಕೋರ್ಟಿಗೆ ಕೇಸ್ ಡೈರಿ ಪ್ರತಿ ನೀಡಬೇಕು. ಕೇಸ್ ಡೈರಿಯಲ್ಲ ಡೈರಿಯ ಪ್ರತಿ ಸಲ್ಲಿಸಬೇಕು. ಏಕೆಂದರೆ ಕೆಸ್ ಡೈರಿ ಕೊಟ್ಟರೆ ಅದನ್ನು ತನಿಖಾಧಿಕಾರಿ ಪಡೆಯುತ್ತಾರೆ. ಹೀಗಾಗಿಯೇ ಕೆಸ್ ಡೈರಿಯ ಪ್ರತಿಯನ್ನು ಕೋರ್ಟಿಗೆ ಸಲ್ಲಿಸಬೇಕು. ಇದಕ್ಕೆ ಎಸ್ ಪಿ ಪಿ ಪ್ರಸನ್ನಕುಮಾರ್ ನಾವು ಕೇಸ್ ಡೈರಿ ಪ್ರತಿ ಸಲ್ಲಿಸಿದ್ದೇವೆ. ಗೊತ್ತಿಲ್ಲದಿದ್ದರೆ ಹಿರಿಯ ವಕೀಲರು ಆ ಬಗ್ಗೆ ವಾದ ಮಂಡಿಸಬಾರದು ಎಂದರು. ಬಳಿಕ ಜಡ್ಜ್ ಜೈ ಶಂಕರ್ ಅವರು ವಿಚಾರಣೆಯನ್ನು 2.45ಕ್ಕೆ ಮುಂದೂಡಿದರು.

Read More

ಬೆಂಗಳೂರು : ರೈತ ಮಹಿಳೆಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೀಗ ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಶಾಸಕ ವಿನಯ್ ಕುಲಕರ್ಣಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಹೌದು ಅತ್ಯಾಚಾರ ಆರೋಪದ ಅಡಿ ವಿನಯ್ ಕುಲಕರ್ಣಿ ವಿರುದ್ಧ FIR ದಾಖಲಾಗಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಇದೀಗ ಇಂದು ಮತ್ತೆ ಸಿಎಂ ಸಿದ್ದರಾಮಯ್ಯ ಅವರನ್ನು ಶಾಸಕ ವಿನಯ್ ಕುಲಕರ್ಣಿ ಭೇಟಿಯಾಗಿದ್ದಾರೆ. ಶಾಸಕ ವಿನಯ್ ಕುಲಕರ್ಣಿ ಅವರ ವಿರುದ್ಧ ಸಂತ್ರಸ್ತೇ ಮಹಿಳೆ ನನಗೆ ವಿನಯ್ ಕುಲಕರ್ಣಿ ಅವರು 2022 ರಿಂದ ಪರಿಚಯವಾಗಿದ್ದು, ಹಲವಾರು ಬಾರಿ ನನಗೆ ಅವರು ಹೆದರಿಸಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ನಡೆದುಕೊಳ್ಳುವಂತೆ ಹೇಳುತ್ತಿದ್ದರು ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

Read More

ಧಾರವಾಡ : ಹಿರಿಯ ಸಂಶೋಧಕರಾದಂತಹ ಡಾಕ್ಟರ್ ಎಂ ಎಂ ಕಲಬುರ್ಗಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 3ನೇ ಆರೋಪಿಯು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಧಾರವಾಡ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಬೆಳಗಾವಿಯ ಪ್ರವೀಣ್‌ ಎಂಬಾತ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಧಾರವಾಡ ಪೀಠದ ಏಕಸದಸ್ಯ ಪೀಠ, ನೋಟಿಸ್​ ನೀಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಪ್ರವೀಣ್‌ ಈ ಹಿಂದೆ ಕೂಡ ಎರಡು ಬಾರಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಪ್ರವೀಣ್‌ ಕಳೆದ 2019ರಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. 138 ಸಾಕ್ಷಿಗಳ ಪೈಕಿ ಸದ್ಯ 28ನೇ ಸಾಕ್ಷಿಯ ವಿಚಾರಣೆ ನಡೆದಿರುವುದರಿಂದ ಜಾಮೀನು ಪಡೆಯುವ ಆಶಾಭಾವ ಹೊಂದಿದ್ದಾನೆ. ಪ್ರಕರಣದ ಮೊದಲನೇ ಆರೋಪಿ ಅಮೋಲ್‌ ಕಾಳೆ ಕಲಬುರ್ಗಿ ಅವರನ್ನು ಗುಂಡಿಟ್ಟು ಕೊಂದಿದ್ದ ಆರೋಪ ಎದುರಿಸುತ್ತಿದ್ದಾನೆ. ಕಲಬುರ್ಗಿ ಅವರ ಮನೆಗೆ ಕಾಳೆಯನ್ನು ಬೈಕ್‌ನಲ್ಲಿ ಕರೆದುಕೊಂಡು ಬಂದು ಕೊಲೆಗೈದ ಬಳಿಕ, ಆತನನ್ನು ಕರೆದೊಯ್ದ ಆರೋಪ ಪ್ರವೀಣ್‌…

Read More

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿದ್ದು, ಇದರಿಂದ ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹಳ್ಳ ದಾಟಲು ಬೈಕ್ ಸವಾರನೊಬ್ಬ ಹುಚ್ಚುತನ ಮೆರೆದು, ಹಳ್ಳದಲ್ಲಿ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ ಎಡವಾಲದ ಕೊಂಡಜ್ಜಿ ಹಳ್ಳದಲ್ಲಿ ಸಂಭವಿಸಿದೆ. ಮೃತ ಬೈಕ್ ಸವಾರನನ್ನು ದಾವಣಗೆರೆ ಜಿಲ್ಲೆಯ ಚಿನ್ನಿಕಟ್ಟೆ ಗ್ರಾಮದ ನಿವಾಸಿ ಇಕ್ಬಾಲ್(35) ನೀರುಪಾಲಾದ ವ್ಯಕ್ತಿ ಎಂದು ತಿಳಿದುಬಂದಿದೆ. ಹಳ್ಳದಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು, ಈ ವೇಳೆ ಸ್ಥಳೀಯರು ಎಷ್ಟೇ ಹೇಳಿದ್ರು ಹಠ ಮಾಡಿ ಇಕ್ಬಾಲ್ ಬೈಕ್ ಹಳ್ಳ ದಾಟಲು ಯತ್ನಿಸಿದ್ದಾನೆ. ಈ ವೇಳೆ ಹಳ್ಳದಲ್ಲಿ ನೀರು ಪಾಲಾಗಿದ್ದಾನೆ. ಕೂಡಲೇ ಸ್ಥಳೀಯರು ಕುಂಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ‌ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Read More

ಹಾಸನ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ದಸರಾ ಬಳಿಕ ರಾಜೀನಾಮೆ ನೀಡುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದರ ಮಧ್ಯ ರಾಜ್ಯದಲ್ಲಿ ದಲಿತ ಸಿಎಂ ಕೂಗು ಬೇರೆ ಎದ್ದಿದೆ. ಇದೀಗ ಇಂದು ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕವಾದಂತ ಹೇಳಿಕೆ ನೀಡಿದ್ದು 2028ರಲ್ಲಿ ನನಗೂ ಮುಖ್ಯಮಂತ್ರಿಯಾಗುವ ಇಚ್ಚೆ ಇದೆ ಎಂದು ತಿಳಿಸಿದರು. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆ ಯ ಬಗ್ಗೆ ಚರ್ಚೆ ನಡೆದಿಲ್ಲ. ಆದರೆ 2028ಕ್ಕೆ ಮುಖ್ಯಮಂತ್ರಿಯಾಗುವ ಇಚ್ಚೆ ನನಗೂ ಇದೆ. ಇದನ್ನು ನನ್ನ ಮಗಳು ಕೂಡ ಹೇಳಿರಬಹುದು. ಆದರೆ ಸದ್ಯ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿದ್ದು ಸಿಎಂ ಬದಲಾವಣೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ಇನ್ನು ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿ ಸಿಎಂ ಆಗಲು ಸಮರ್ಥರು ಎಂದು ಚಿಕ್ಕಮಂಗಳೂರು ಶಾಸಕ ಎಚ್ ಡಿ ತಮ್ಮಯ್ಯ ಹೇಳಿಕೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವಧಿಯ ನಂತರ ಸಿಎಂ ಆಗಲಿ…

Read More

ಬೆಂಗಳೂರು : ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ಇಂದು ಬೆಂಗಳೂರಿನಲ್ಲಿ ಗೃಹಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಆಗಮಿಸಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದರಿಂದ, ಸ್ವಾಮೀಜಿ ಹಾಗೂ ಪೊಲೀಸರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಹೌದು ಸಿಎಂ ಗೃಹ ಕಚೇರಿ ಕೃಷ್ಣ ಬಳಿ ಪೊಲೀಸರು ಹಾಗೂ ಸ್ವಾಮೀಜಿ ನಡುವೆ ಮಾತಿನ ಚಕಮಕಿ ನಡೆದಿದೆ. ಸಿಎಂ ಗೃಹ ಕಚೇರಿ ಒಳಗೆ ಬಿಡುತ್ತಿಲ್ಲವೆಂದು ಪೊಲೀಸರ ವಿರುದ್ಧ ಸ್ವಾಮೀಜಿ ಆಕ್ರೋಶ ಹೊರಹಕಿದ್ದಾರೆ. ಸಿಎಂ ಸಿದ್ದರಾಮಯ್ಯ ಭೇಟಿಗೆ ಆಗಮಿಸಿದ್ದ ಪ್ರಸನ್ನಾನಂದಪುರಿ ಸ್ವಾಮೀಜಿ ಕಿಡಿಕಾರಿದ್ದಾರೆ. ರಾಜನಹಳ್ಳಿಯ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಜೊತೆ ಆಗಮಿಸಿದ್ದ ಜಿಲ್ಲಾ ಮತ್ತು ತಾಲೂಕು ಮಟ್ಟದ ಮುಖಂಡರು ವಾಲ್ಮೀಕಿ ಸಮುದಾಯದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ವಂಚಿಸುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕುವಂತೆ ಸ್ವಾಮೀಜಿಯವರು ಸಿದ್ದರಾಮಯ್ಯ ಅವರ ಬಳಿ ಮನವಿ ಸಲ್ಲಿಸಲು ಆಗಮಿಸಿದ್ದರು. ಈ ವೇಳೆ…

Read More

ಬೆಳಗಾವಿ : ಪುರಾಣ, ಕಥೆಗಳಲ್ಲಿ ವೈದ್ಯೋ ನಾರಾಯಣ ಹರಿ ಅಂತ ವೈದ್ಯರನ್ನ ದೇವರೆಂದೆ ಪೂಜಿಸುತ್ತೇವೆ. ಆದರೆ ವೈದ್ಯರ ವೃತ್ತಿಗೆ ಕಳಂಕವೆಂಬತ್ತೆ ಬೆಳಗಾವಿಯಲ್ಲಿ ದುಡ್ಡು ಕಟ್ಟಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವೈದ್ಯರು ಚಿಕಿತ್ಸೆ ನೀಡದಕ್ಕೆ ಗರ್ಭಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಹೌದು, ಬೆಳಗಾವಿಯ ಆದರ್ಶ್ ಖಾಸಗಿ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಜಿಲ್ಲೆಯ ಕಂಗ್ರಾಳ ಗಲ್ಲಿಯ ನಿವಾಸಿ ಆರತಿ ಅನಿಲ್ ಚವ್ಹಾಣ (30) ಎಂದು ಗುರುತಿಸಲಾಗಿದೆ. ದುಡ್ಡು ಕಟ್ಟಿಲ್ಲ ಎಂದು ಚಿಕಿತ್ಸೆ ನೀಡದ್ದಕ್ಕೆ ಆರು ತಿಂಗಳ ಗರ್ಭಿಣಿ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಹೊಟ್ಟೆನೋವು ಎಂದು ಜಿಲ್ಲೆಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರು ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಬಂದು ಮಗು ಹೊಟ್ಟೆಯಲ್ಲಿಯೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.ಈ ವೇಳೆ ಹೆಚ್ಚಿನ ಚಿಕಿತ್ಸೆಗಾಗಿ 30 ಸಾವಿರ ರೂ. ಹಣ ಕಟ್ಟುವಂತೆ ವೈದ್ಯರು ತಿಳಿಸಿದ್ದು, ಸದ್ಯಕ್ಕೆ 10 ಸಾವಿರ ರೂ. ಹಣವನ್ನು ಕಟ್ಟಿ, ಉಳಿದ ಹಣವನ್ನು…

Read More