Subscribe to Updates
Get the latest creative news from FooBar about art, design and business.
Author: kannadanewsnow05
ಮೈಸೂರು : ಸರ್ಕಾರಿ ಆಂಬುಲೆನ್ಸ್ ಸೇವೆಗಳ ಕುರಿತು ಆಗಾಗ ಕಂಪ್ಲೇಂಟ್ ಗಳು ಬರುತ್ತಲೇ ಇರುತ್ತೆ ಇದೀಗ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಸರ್ಕಾರಿ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆ ಉಂಟಾಗಿ 3 ದಿನದ ಹಸುಗೂಸು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಲ್ಲಿ ನಡೆದಿದೆ. ಹೌದು ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ಶ್ರೀರಾಂಪುರ ಬಡಾವಣೆಯ ರತ್ನಮ್ಮ ಎನ್ನುವರ ಮಾರ್ಚ್ 17ರಂದು ಹೆರಿಗೆಗಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದು, ಹೆರಿಯಾದ ಬಳಿಕ ಮಗು ನೀಲಿ ಬಣ್ಣಕ್ಕೆ ತಿರುಗಿದೆ. ಇದರಿಂದ ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಮಕ್ಕಳ ಆಸ್ಪತ್ರೆಗೆ ತೆರಳುತ್ತಿದ್ದರು. ಆದ್ರೆ, ದುರದೃಷ್ಟವಶಾತ್ ಮೈಸೂರು ತಲುಪುವ ಮುನ್ನವೇ ಮಗು ಮಾರ್ಗ ಮಧ್ಯೆ ಕೊನೆಯುಸಿರೆಳೆದಿದೆ. ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಸಿಬ್ಬಂದಿಗಳಿಗೆ ತಿಳಿದಿದ್ದರು ಕೂಡ ಮಗುವನ್ನು ಹಾಗೆ ಶಿಫ್ಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮಗು ಸಾವನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.ನಂಜನಗೂಡಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಮತ್ತು ಅಧಿಕಾರಿಗಳ…
ದಾವಣಗೆರೆ : ದಾವಣಗೆರೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ತ್ರಿಚಕ್ರ ಬೈಕ್ ಹಾಗೂ ಕಾರಿನ ನಡುವೆ ಬೀಖರವಾದ ಅಪಘಾತ ಸಂಭವಿಸಿದ್ದು ತ್ರಿಚಕ್ರ ವಾಹನದಲ್ಲಿದ್ದ 3 ವರ್ಷದ ಮಗು, ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದು, ದಂಪತಿಗಳಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ದಾವಣಗೆರೆ ತಾಲೂಕಿನಲ್ಲಿ ನಡೆದಿದೆ. ದಾವಣಗೆರೆ ತಾಲೂಕಿನ ಗಾಂಧಿನಗರ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ತ್ರಿಚಕ್ರ ಬೈಕ್ ನಲ್ಲಿ ಪತ್ನಿ, ತಂದೆ ಹಾಗು ಪುತ್ರನ ಜೊತೆಗೆ ವಿಕಲಚೇತನ ಬರುತ್ತಿದ್ದ. ಈ ವೇಳೆ ಜಗಳೂರು ಕಡೆಯಿಂದ ಬರುತ್ತಿದ್ದ ತ್ರಿಚಕ್ರ ಬೈಕಿಗೆ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರು ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಸಚಿವರ ಹನಿಟ್ರ್ಯಾಪ್ ಭಾರಿ ಸದ್ದು ಮಾಡಿದ್ದು, ಆಡಳಿತ ಮತ್ತು ವಿಪಕ್ಷಗಳು ಇದರ ವಿರುದ್ಧ ಧ್ವನಿ ಎತ್ತಿದವು. ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಕೆ.ಎನ್ ರಾಜಣ್ಣ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದರು. ಇದಕ್ಕೆ ಸ್ಪಷ್ಟನೆ ನೀಡಿದ ರಾಜಣ್ಣ ನನ್ನ ಮೇಲೂ ಹನಿಟ್ರ್ಯಾಪ್ ಗೆ ಪ್ರಯತ್ನ ನಡೆದಿದೆ.48ಕ್ಕೂ ಹೆಚ್ಚು ರಾಜ್ಯ & ಕೇಂದ್ರ ರಾಜಕಾರಣಿಗಳ ‘ಅಶ್ಲೀಲ ಪೆನ್ ಡ್ರೈವ್’ ಗಳಿವೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಹನಿ ಟ್ರಾಪ್ ಬಗ್ಗೆ ಸದನದಲ್ಲಿ ಯತ್ನಾಳ್ ಪ್ರಸ್ತಾಪ ಮಾಡಿದ್ದರು. ಹನಿ ಟ್ರ್ಯಾಪ್ ನಲ್ಲಿ ಎಲ್ಲಾ ಪಕ್ಷದವರು ಸಿಲುಕಿದ್ದಾರೆ. ಈ ರೀತಿ ತೇಜೋವಧೆ ಮಾಡುವುದು ಯಾರಿಗೂ ಶೋಭೆ ತರಲ್ಲ. ಇದು ಅಂತ್ಯವಾಗಲು ಉನ್ನತ ಮಟ್ಟದ ತನಿಖೆ ಆಗಬೇಕು. ನನ್ನ ಮೇಲೂ ಹನಿಟ್ರ್ಯಾಪ್ ಗೆ ಪ್ರಯತ್ನ ನಡೆದಿದೆ. ಆದರೆ ನಾನು ಹನಿಟ್ರ್ಯಾಪ್ ಗೆ ಒಳಗಾಗಿಲ್ಲ ಎಂದು ಅವರು ತಿಳಿಸಿದರು.…
BREAKING : ರನ್ಯಾ ಬಳಿಕ ಬೆಂಗಳೂರು ಏರ್ಪೋರ್ಟ್ ನಲ್ಲಿ ಮತ್ತೊರ್ವ ಮಹಿಳೆ ಅರೆಸ್ಟ್ : 38 ಕೋಟಿ ಮೌಲ್ಯದ ಕೊಕೆನ್ ಜಪ್ತಿ!
ಬೆಂಗಳೂರು : ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಭಂಧಿಸಿದಂತೆ ಈಗಾಗಲೇ ನಟಿ ರನ್ಯಾ ರಾವ್ ಅರೆಸ್ಟ್ ಆಗಿದ್ದಾರೆ.ಇದಿಗ ಬೆಂಗಳೂರಲ್ಲಿ ಮತ್ತೋರ್ವ ಮಹಿಳೆ ಆರೆಸ್ಟ್ ಆಗಿದ್ದು, ಆದರೆ ಈಕೆ ಚಿನ್ನದ ಕೇಸ್ ನಲ್ಲಿ ಆರೆಸ್ಟ್ ಆಗದೆ ಕೊಕೆನ್ ಸಾಗಾಟ ಮಾಡುತ್ತಿದ್ದಳು ಎಂದು ಈಗ ಡಿಆರ್‌ಐ ಅಧಿಕಾರಿಗಳು ಆರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಮಾರ್ಚ್ 18 ರಂದು ಕತಾರ್ ನಿಂದ ಬಂದಿದ್ದ ಮಹಿಳೆ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಮಹಿಳೆ ಮಾದಕ ದ್ರವ್ಯ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿ ಮಹಿಳೆ ಘಾನಾ ದೇಶದ ಪ್ರಜೆಯಾಗಿದ್ದಾಳೆ ಎನ್ನಲಾಗಿದೆ. ಅನುಮಾನಗೊಂಡು ಅದಿಕಾರಿಗಳು ಮಹಿಳೆಯ ಬ್ಯಾಗ್ ಅನ್ನು ಪರೀಶೀಲನೆ ಮಡಿದ ವೇಳೆ 38.8 ಕೋಟಿ ಮೌಲ್ಯದ 3 ಕೆಜಿ ಕೋಕೆನ್ ಮಾದಕ ದ್ರವ್ಯವನ್ನು ಮರೆಮಾಚಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.ಬಳಿಕ ಆಕೆಯನ್ನು ಡಿಆರ್‌ಐ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕಲಬುರ್ಗಿ : ಮಹಿಳೆ ಒಬ್ಬರು ತೀವ್ರವಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ವೇಳೆ ಹೊಟ್ಟೆ ನೋವು ನಿವಾರಕ ಔಷಧಿ ಎಂದು ತಿಳಿದು ಮಹಿಳೆ ಕುರಿ ಹೇನಿನ ಔಷಧಿ ಕುಡಿದು ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಹೊರವಲಯದ ಫರತಾಬಾದ್ ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಫರಹತಾಬಾದ್ ನಿವಾಸಿ ಶಿವಮ್ಮ ಸಿದ್ದು ಎಂದು ತಿಳಿದುಬಂದಿದೆ. ಕಳೆದ ಐದು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಮಾ.7ರ ರಾತ್ರಿ ತೀವ್ರ ಹೊಟ್ಟೆ ನೋವಿನಿಂದ ಹೊಟ್ಟೆ ನೋವು ನಿವಾರಕ ಔಷಧಿ ಎಂದುಕೊಂಡು ಕುರಿ ಹೇನಿನ ಔಷಧಿಯನ್ನು ಕುಡಿದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಾರ್ಗ ಮಧ್ಯದಲ್ಲಿ ಶಿವಮ್ಮ ಅವರು ಸಾವನ್ನಪ್ಪಿದ್ದಾರೆ. ಘಟನೆ ಕುರಿತಂತೆ ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಕುರಿತು ಗಂಭೀರ ಚರ್ಚೆ ನಡೆಯಿತು. ಈ ವೇಳೆ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಕೂಡ ರೋಷಾವೇಷ ಪ್ರದರ್ಶಿಸಿದರು. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದಿದ್ದರೆ ಎಲ್ಲಾ ಶಾಸಕರ ಜೀವನವನ್ನು ಹಾಳು ಮಾಡುತ್ತಾರೆ. ಈಗ ನನ್ನ ಜೀವನ ಹಾಳು ಮಾಡಿದ್ದಾರೆ. ದೇವರ ಫೋಟೋ ತೋರಿಸಿ ಶಾಸಕ ಮುನಿರತ್ನ ಭಾವುಕರಾದರು. ಈ ಹನಿಟ್ರ್ಯಾಪ್ ಟೀಂ ಡಿಸಿಎಂ ಡಿಕೆ ಶಿವಕುಮಾರ್ ಅವರದ್ದು ಎಂದು ಶಾಸಕ ಮುನಿರತ್ನ ಗಂಭೀರವಾಗಿ ಆರೋಪಿಸಿದರು. ಹನಿಟ್ರ್ಯಾಪ್ ವಿಚಾರವಾಗಿ ವಿಧಾನಸಭೆಯಲ್ಲಿ ಇಂದು ಗಂಭೀರವಾದ ಚರ್ಚೆ ನಡೆಯಿತು. ಅತ್ಯಾಚಾರ ಮಾಡಿದ್ದೀನಿ ಅಂತ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಮನೇಲಿ 15 ವರ್ಷದ ನನ್ನ ಮೊಮ್ಮಕ್ಕಳು ಇದ್ದಾರೆ. ಮಾಜಿ ಸಚಿವ ಎಚ್ ಡಿ ರೇವಣ್ಣ ಮನೆ ಹಾಳು ಮಾಡಿದರು. ಶಾಸಕ ರಮೇಶ ಜಾರಕಿಹೊಳಿ ಮನೆ ಹಾಳು ಮಾಡಿದರು. ಈಗ ನನ್ನ ಮನೆ ಹಾಳು ಮಾಡಿದ್ದಾರೆ. ಮುಂದೆ ಬೇರೆ ಶಾಸಕರ ಮನೆಯನ್ನು ಹಾಳುಮಾಡಬಾರದು ಎಂದು ಆಗ್ರಹಿಸಿದರು. ರಮೇಶ್ ಜಾರಕಿಹೊಳಿ, HD ರೇವಣ್ಣ…
ಬೆಂಗಳೂರು : ಇಂದು ವಿಧಾನಸಭೆಯಲ್ಲಿ ಹನಿ ಟ್ರ್ಯಾಪ್ ಕುರಿತು ಗಂಭೀರವಾದ ಚರ್ಚೆ ನಡೆಯಿತು.ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದರು.ಬಳಿಕ ಕೆ ಎನ್ ರಾಜಣ್ಣ ಅವರು ಉತ್ತರಿಸಿ, ಯತ್ನಾಳ್ ಅವರಿಗೆ ಕ್ಲಾರಿಫಿಕೇಶನ್ ಕೊಡಲು ಬಯಸುತ್ತೇನೆ ಎಂದು ಈ ಕುರಿತು ಗೃಹ ಸಚಿವರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದರು. ಬಳಿಕ ಗೃಹ ಸಚಿವರು ಸಚಿವ ಕೆ ಎನ್ ರಾಜಣ್ಣ ದೂರು ನೀಡಿದರೆ ಉನ್ನತಮಟ್ಟದ ತನಿಖೆಗೆ ಆದೇಶಿಸುತ್ತೇನೆ ಎಂದು ಪರಮೇಶ್ವರ್ ತಿಳಿಸಿದರು. ವಿಧಾನಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ ಸಚಿವ ಕೆ ಎನ್ ರಾಜಣ್ಣ ದೂರು ಕೊಡಲಿ ಉನ್ನತಮಟ್ಟದ ತನಿಖೆ ಮಾಡುತ್ತೇವೆ. ಒಬ್ಬರಿಗಾಯಿತು ಇಬ್ಬರಿಗೆ ಆಯ್ತು ಅನ್ನೋದಕ್ಕಿಂತ ಹೆಚ್ಚಾಗಿ ಇದಕ್ಕೆ ಒಂದು ಫುಲ್ ಸ್ಟಾಪ್ ಹಾಕಬೇಕಾಗಿದೆ. ಕರ್ನಾಟಕ ವಿಧಾನ ಮಂಡಲ ಏನಿದೆ ಇಡಿ ದೇಶದಲ್ಲಿ ಬಹಳ ಗೌರವ ಸಂಪಾದನೆ ಮಾಡಿದೆ. ಈ ಸದನದ ಸದಸ್ಯರು ನಮ್ಮ ತಂದೆಯವರು.ಅವರು ಕೂಡ…
ಬೆಂಗಳೂರು : ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಕುರಿತಂತೆ ಇಂದು ಗಂಭೀರವಾದ ಚರ್ಚೆ ನಡೆಯಿತು. ದೇವರು ಫೋಟೋ ಪ್ರದರ್ಶಿಸಿ ಶಾಸಕ ಮುನಿರತ್ನ ಭಾವಕರಾದರೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹಕಾರ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಆರೋಪಿಸಿದರು. ಇದಕ್ಕೆ ಕೆ.ಎನ್ ರಾಜಣ್ಣ ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಹನಿಟ್ರ್ಯಾಪ್ ಸೀಮಿತವಾಗಿಲ್ಲ. ರಾಷ್ಟ್ರಮಟ್ಟದಲ್ಲೂ ಕೂಡ 48 ಜನರ ಪೆನ್ ಡ್ರೈವ್ ಇದೆ ಎಂದು ಹೊಸ ಬಾಂಬ್ ಸಿಡಿಸಿದರು. ಈ ಕುರಿತು ಸಚಿವ ಕೆಎನ್ ರಾಜಣ್ಣ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಆರೋಪಕ್ಕೆ ಉತ್ತರಿಸಿ, ಕರ್ನಾಟಕ ಸಿಡಿ ಪೆನ್ ಡ್ರೈವ್ ಕಾರ್ಖಾನೆಯಾಗಿದೆ. ಸಿಡಿ ಮಾಡುವಂತಹ 48 ಜನರು ಇದ್ದಾರೆ. ಇದು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ ರಾಷ್ಟ್ರಮಟ್ಟದವರೆಗೂ ಹನಿ ಟ್ರ್ಯಾಪ್ ಆಗಿದೆ. 48 ಜನರ ಪೆನ್ ಡ್ರೈವ್ ಕೂಡ ಇದೆ ಈ ಕುರಿತು ನಾನು ಗ್ರಹ ಮಂತ್ರಿಗಳಿಗೆ ಲಿಖಿತವಾದ ದೂರು ನೀಡುತ್ತೇನೆ. ಹನಿ ಟ್ರ್ಯಾಕ್ ಹಿಂದೆ ದೊಡ್ಡ ಜಾಲವೇ ಇದೆ ಇದರ ಹಿಂದೆ ಯಾರೇ…
ಬೆಂಗಳೂರು : ರಾಜ್ಯದ ಸಚಿವರು ಒಬ್ಬರಿಗೆ ಎರಡು ಸಲ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಸ್ಪೋಟಕವಾದ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಈಗ ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ವಿಷಯ ಮಾರ್ಧನಿಸುತ್ತಿದ್ದು, ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ವಿಧಾನಸಭೆಯಲ್ಲಿ ಹನಿ ಟ್ರ್ಯಾಪ್ ಕುರಿತು ಗಂಭೀರವಾಗಿ ಚರ್ಚೆ ನಡೆಯಿತು. ಈ ವೇಳೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹಕಾರ ಸಚಿವರಿಗೆ ಹನಿ ಟ್ರ್ಯಾಕ್ ಮಾಡಲಾಗಿದೆ ಎಂದು ಹೇಳಿಕೆ ನೀಡಿದರು. ಬಳಿಕ ಹನಿಟ್ರ್ಯಾಪ್ ಬಗ್ಗೆ ವಿಧಾನಸಭೆಯಲ್ಲಿ ಸಚಿವ ಕೆ ಏನ್ ರಾಜಣ್ಣ ಪ್ರಸ್ತಾಪಿಸಿದರು. ಗೃಹ ಸಚಿವರಿಗೆ ಈ ಕುರಿತು ನಾನು ಲಿಖಿತ ದೂರು ಕೊಡುತ್ತೇನೆ. ಗೃಹ ಸಚಿವರು ವಿಶೇಷ ತನಿಖೆ ಮಾಡಿಸಲಿ. ಇದರ ಹಿಂದಿರುವ ನಿರ್ದೇಶಕರು ಯಾರು ಎಂದು ಗೊತ್ತಾಗಲಿ, ನೆಪ ಮಾತ್ರಕ್ಕೆ ತನಿಖೆ ಎಂದು ಹೇಳುವುದು ಬೇಡ ಎಂದು…
ಬೆಂಗಳೂರು : ಬೆಂಗಳೂರು ಇಂಟರ್ನ್ಯಾಷನಲ್ ಸಿಟಿ ಆಗಿರುವದರಿಂದ ರಾತ್ರಿಯ ವೇಳೆಯೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲಸ ಮಾಡುವವರು ಇರುತ್ತಾರೆ ಹಾಗಾಗಿ ರಾತ್ರಿ ಒಂದು ಗಂಟೆಯವರೆಗೂ ಸಬ್ ಓಪನ್ ಮಾಡಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಎಚ್ಎಸ್ ಗೋಪಿನಾಥ್ ಅವರು ಪ್ರಶ್ನಿಸಿದಾಗ, ಡಿಸಿಎಂ ಡಿಕೆ ಶಿವಕುಮಾರ್ ಶೀಘ್ರದಲ್ಲಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು. ಇಂದು ಪರಿಷತ್ ನಲ್ಲಿ ಎಚ್ಎಸ್ ಗೋಪಿನಾಥ ಅವರು ಬೆಂಗಳೂರಿನಲ್ಲಿ ರಾತ್ರಿ ಒಂದು ಗಂಟೆವರೆಗೆ ಓಪನ್ ಮಾಡುವ ಕುರಿತು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಡಿಕೆ ಶಿವಕುಮಾರ್ ಬೆಂಗಳೂರು ಇಂಟರ್ನ್ಯಾಷನಲ್ ಸಿಟಿ. ಇಲ್ಲಿ ರಾತ್ರಿ ಸಮಯವು ಕೆಲಸ ಮಾಡುವವರು ಇರುತ್ತಾರೆ. ಹೀಗಾಗಿ ಬೆಂಗಳೂರಿ ನಗರವನ್ನು ಅಲೈವ್ ಇಡಬೇಕಾಗುತ್ತದೆ. ಗೃಹ ಸಚಿವರು ಅಬಕಾರಿ ಸಚಿವರ ಜೊತೆಗೆ ಚರ್ಚೆ ಮಾಡುತ್ತೇನೆ. ಕುಳಿತು ಚರ್ಚೆ ಮಾಡಿ ಈ ಬಗ್ಗೆ ನಿರ್ಣಯ ಮಾಡುತ್ತೇವೆ.ಸದಸ್ಯ ಹೆಚ್ ಎಸ್.ಗೋಪಿನಾಥ್ ಬೇಡಿಕೆಯಲ್ಲಿ ಅರ್ಥವಿದೆ. ರಾತ್ರಿ 1 ಗಂಟೆವರೆಗೆ ಪಬ್ ಓಪನ್ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ವಿಧಾನ ಪರಿಷತ್…














