Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ನಾನು ಮತ್ತೆ ಬಿಜೆಪಿಗೆ ಹೋಗುವ ಬೆಳವಣಿಗೆ ಆಗಿಲ್ಲ ಹಾಗಾಗಿ ಸದ್ಯಕ್ಕಂತು ಬಿಜೆಪಿಗೆ ನಾನು ವಾಪಸ್ ಹೋಗಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಯಾವ ತಟಸ್ಥ ಬಣವು ಸಹ ನನ್ನನ್ನು ಇದುವರೆಗೂ ಸಂಪರ್ಕ ಮಾಡಿಲ್ಲ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪರವಾಗಿ ಕೆಲಸ ಮಾಡಿದ್ದೇವೆ. ನಿಮ್ಮನ್ನು ಕೈ ಬಿಡಲ್ಲ ಯಾವಾಗಲೂ ನಿಮ್ಮ ಜೊತೆಗೆ ಇರುತ್ತೇವೆ ಅಂತ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಏನಾಗುತ್ತದೆಯೋ ಗೊತ್ತಿಲ್ಲ. ಬಿಜೆಪಿಯಲ್ಲಿ ಆಗಬೇಕಿರುವ ಶುದ್ಧೀಕರಣದ ಬಗ್ಗೆ ಹೇಳುತ್ತೇನೆ. ನಾನು ಹೈಕಮಾಂಡ್ ನಾಯಕರ ಗಮನಕ್ಕೆ ಬಿಜೆಪಿಯಲ್ಲಿರುವ ಆಗುವ ಶುದ್ಧಿಕರಣ ಕುರಿತು ಗಮನಕ್ಕೆ ತರುತ್ತೇನೆ. ಕೇಂದ್ರದ ನಾಯಕರು ಮುಂದೆ ಬಂದರೆ ಈ ವಿಚಾರವಾಗಿ ಚರ್ಚಿಸುತ್ತೇನೆ. ಮನಸ್ಸಿಗೆ ಸಮಾಧಾನ ಆದರೆ ಮಾತ್ರ ಬಿಜೆಪಿಗೆ ಹೋಗುತ್ತೇನೆ ಎಂದು ಬೆಂಗಳೂರಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದರು.
ಮಂಗಳೂರು : ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂಬ ಗಂಭೀರವಾದ ಆರೋಪ ಕೇಳಿ ಬಂದ ಹಿನ್ನೆಲೆ ಇಂದು ಮಂಗಳೂರು ಪಾಲಿಕೆ ಕಚೇರಿಯ ಮೇಲೆ ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಂದಾಯ ಇಂಜಿನಿಯರಿಂಗ್ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳ ಮೇಲು ದಾಳಿ ಮಾಡಿದ್ದಾರೆ. ಹೌದು ಮಂಗಳೂರು ಮಹಾನಗರ ಪಾಲಿಕೆ ಕಚೇರಿಯ ಮೇಲೆ ಏಕಾಏಕಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಂದಾಯ, ಇಂಜಿನಿಯರಿಂಗ್ ಹಾಗು ಆರೋಗ್ಯ ವಿಭಾಹ ಸೇರಿದಂತೆ ಎಲ್ಲಾ ವಿಭಾಗಗಳ ಮೇಲು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಧಿಕಾರಿಗಳ ವಿರುದ್ಧ ಲಂಚಕ್ಕೆ ಬೇಡಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ ಬಿ ಕುಮಾರಚಂದ್ರ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ. ಪಾಲಿಕೆ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಬೆಂಗಳೂರು : ಇತ್ತೀಚಿಗೆ ತುಮಕೂರು ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವ ಕುರಿತು ಹಲವು ಚರ್ಚೆ ನಡೆದಿತ್ತು. ಇದೇ ವಿಚಾರವಾಗಿ ಸಿದ್ದಗಂಗಾ ಮಠದ ಶ್ರೀಗಳು ಸಹ ತುಮಕೂರು ಜಿಲ್ಲೆಯ ಹೆಸರು ಬದಲಾವಣೆ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಗೃಹ ಸಚಿವ ಜಿ ಪರಮೇಶ್ವರ್ ಅವರು ಯಾವುದೇ ಕಾರಣಕ್ಕೂ ತುಮಕೂರು ಜಿಲ್ಲೆಯ ಹೆಸರನ್ನು ಬದಲಾಯಿಸಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಹುಟ್ಟು ಹಬ್ಬದಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ತುಮಕೂರು ಜಿಲ್ಲೆಯ ಹೆಸರು ಬದಲಾಯಿಸುವುದಿಲ್ಲ. ಬೆಂಗಳೂರು ವ್ಯಾಪ್ತಿಗೆ ಸೇರಿಸುವ ಪ್ರಶ್ನೆಗೆ ನಾನು ಉತ್ತರಿಸಿದ್ದೆ ಆದರೂ ಆಗಬಹುದು ಎಂದಿದ್ದೆ ಆದರೆ ತುಮಕೂರು ಹೆಸರು ಬದಲಾಯಿಸುತ್ತೇವೆ ಅಂತ ಹೇಳಿಲ್ಲ ಜಿಲ್ಲೆಯ ಹೆಸರು ಯಾವುದೇ ಕಾರಣಕ್ಕೂ ಬದಲಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ತುಮಕೂರು ಬೆಂಗಳೂರಿನ ದಕ್ಷಿಣ ಆಗಬಹುದು ಅಂತ ಕೇಳಿದಾಗ ನಾನು ಆದರೂ ಆಗಬಹುದು ಅಂತ ಹೇಳಿದ್ದೆ. ಆದರೆ ತುಮಕೂರಿನ ಜಿಲ್ಲೆಯ ಹೆಸರು ಬದಲಾಯಿಸುತ್ತೇವೆ ಅಂತ ನಾನು ಹೇಳಿರಲಿಲ್ಲ. ತುಮಕೂರಿನ…
ಬೆಂಗಳೂರು : ಸಚಿವ ಪ್ರಿಯಾಂಕ್ ಖರ್ಗೆ ಅವರ ಅಮೆರಿಕ ಪ್ರವಾಸಕ್ಕೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರವಾಸದ ನಿರ್ಬಂಧ ತೆರವು ಮಾಡಿ ಕೇಂದ್ರ ಸರ್ಕಾರ ಮರು ಅದೇಶ ಹೊರಡಿಸಿದೆ. ಈ ವಿಚಾರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಈ ಮೊದಲು ನನ್ನನ್ನು ಅಮೆರಿಕಕ್ಕೆ ಹೋಗದಂತೆ ತಡೆದುದ್ದಕ್ಕೆ ಕಾರಣ ಕೊಡಬೇಕು ಇಲ್ಲವಾದರೆ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟ್ರೈನ್ ಹೋದ ಮೇಲೆ ತಾತ್ಕಾಲಿಕ ಟಿಕೆಟ್ ಇಶ್ಯೂ ಮಾಡಿದ್ದಾರೆ. ಅನುಮತಿ ಕೊಟ್ಟಂತೆ ಆಗಬೇಕು ತಡೆದಂತೆಯೂ ಆಗಬೇಕು. ಇದು ಕರ್ನಾಟಕಕ್ಕೆ ಮಾಡಿರುವ ಅವಮಾನ. ಕರ್ನಾಟಕ ರಾಜ್ಯಕ್ಕೆ ಬಂಡವಾಳ ಹೂಡಿಕೆ ಆಕರ್ಷಿಸಲು ಹೋಗುತ್ತಿದ್ದೆ. ರಾಜಕ್ಕೆ ಬಂಡವಾಳ ತರುವುದನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ. ನನ್ನನ್ನು ಮೊದಲು ತಡೆದಿದ್ದು ಯಾಕೆ ಅದಕ್ಕೆ ಕಾರಣ ಕೊಡಲಿ. ಈಗಾಗಲೇ ಕಾರಣ ಕೇಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಅಮೆರಿಕಕ್ಕೆ ಹೋಗದಂತೆ ತಡೆದಿದ್ದರ ಬಗ್ಗೆ ಸ್ಪಷ್ಟವಾದ ಕಾರಣ ಬೇಕು. ಸರಿಯಾದ ಕಾರಣ ಕೊಡದಿದ್ದರೆ ಕಾನೂನು ಹೋರಾಟ…
ಬೆಂಗಳೂರು : ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ ಇರಾನ್ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸರ್ಕಾರ ಸಿಂಧು ಕಾರ್ಯಾಚರಣೆಯನ್ನು ಪ್ರಾರಂಭಿಸಿತು.ಇದೀಗ ಇರಾನ್ ಅಲ್ಲಿ ಸಿಲುಕಿದ್ದ 16 ಜನ ಕನ್ನಡಿಗರು ಇಂದು ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಹೌದು ಇರಾನ್ ಅಲ್ಲಿ ಸಿಲುಕಿದ್ದ ಕನ್ನಡಿಗರು ಇಂದು ತಾಯ್ನಾಡಿಗೆ ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. 16 ಜನ ಕನ್ನಡಿಗರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 16 ಜನ ಕನ್ನಡಿಗರು ಸುರಕ್ಷಿತವಾಗಿ ಬಂದಿಳಿದಿದ್ದಾರೆ. ಸಂಜೆ ಮತ್ತೆರಡು ವಿಮಾನಗಳು ದೆಹಲಿಗೆ ಆಗಮಿಸಲಿವೆ ಎಂದು ತಿಳಿದುಬಂದಿದೆ.
ರಾಯಚೂರು : ಯಾದಗಿರಿಯಲ್ಲಿ ಘೋರ ದುರಂತ ನಡೆದಿದ್ದು, ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ. ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯ ಹಿರೇನಗನೂರು ಗ್ರಾಮದ ಹೊರವಲಯದ ಕ್ಯಾಸರ್ ಹಾಳ ಕರೆಯಲ್ಲಿ, ಮೌನೇಶ್ ಶಿವಣ್ಣ (18) ಎಂಬ ಯುವಕ ಕುರಿಗಳನ್ನು ಕಾಯುತ್ತಾ ಕೆರೆ ಬಳಿ ತೆರಳಿದ್ದ ಇತರ ಕುರಿಗಾಹಿ ಯುವಕರು ಈಜಲು ಇಳಿದಿದ್ದರು. ಮೌನೇಶ್ ಕೂಡ ನೀರಿನಲ್ಲಿ ಈಜಲು ಇಳಿದಿದ್ದ. ಈ ವೇಳೆ ಮೌನೇಶ್ ಕೆರೆಯಲ್ಲಿ ಒಮ್ಮೆಲೇ ಮುಳುಗಿದ್ದಾನೆ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಹಟ್ಟಿ ಪೊಲೀಸ್ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಕುರಿತಂತೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ : ಕೇವಲ ವಾಹನ ಪಕ್ಕಕ್ಕೆ ಹಾಕಿ ಎಂದಿದ್ದಕ್ಕೆ ಎರಡು ಗುಂಪುಗಳ ನಡುವೆ ಮಾರಕಸ್ತ್ರಗಳಿಂದ, ದೊಣ್ಣೆ ಹಾಗೂ ಹಾಕಿ ಸ್ಟಿಕ್ ಗಳಿಂದ ಮಾರಾಮಾರಿ ನಡೆದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹೊಸಪೇಟೆ ನಗರದಲ್ಲಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ಹೌದು ಬಾಗಲಕೋಟೆಯಲ್ಲಿ ಎರಡು ಗುಂಪುಗಳ ಮಧ್ಯ ಮಾರಾಮಾರಿ ನಡೆದಿದೆ. ಮಾರಕಾಸ್ತ್ರ, ದೊಣ್ಣೆ ಹಾಗು ಹಾಕಿ ಸ್ಟಿಕ್ ಹಿಡಿದುಕೊಂಡು ಗಲಾಟೆ ಮಾಡಿದ್ದಾರೆ. ರಸ್ತೆಗೆ ಅಡ್ಡಲಾಗಿ ನಿಂತಿದ್ದ ವಾಹನದ ವಿಚಾರವಾಗಿ ಗಲಾಟೆ ನಡೆದಿದೆ. ವಾಹನ ಸೈಡಿಗೆ ಹಾಕಿ ಅಂತ ಹೇಳಿದ್ದಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ಇಳಕಲ್ ನಗರದ ಹೊಸಪೇಟೆ ಗಲ್ಲಿಯಲ್ಲಿ ಈ ಒಂದು ಘಟನೆ ನಡೆದಿದೆ. ದಾದಾಪೀರ್ ಜಕ್ಕಲಿ, ಶಾಮಿದ್ ರೇಷ್ಮೆ, ರಂಜಾನ್ ಬನ್ನು ಎಂಬ ಯುವಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಇದೀಗ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ವಿಜಯಪುರ : ವಿಜಯಪುರದಲ್ಲಿ ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕಳ್ಳಭಟ್ಟಿ ನಡೆಸುತ್ತಿದ್ದ ಅಡ್ಡೆಗಳಮೇಲೆ ಏಕಕಾಲಕ್ಕೆ ಅಬಕಾರಿ ಪೊಲೀಸರು ದಾಳಿ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ನಡೆದಿದೆ. ಖಚಿತ ಮಾಹಿತಿಯನ್ನು ಮೇರೆಗೆ ಅಬಕಾರಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಕುರುಬರದಿನ್ನಿ ತಾಂಡ, ಮುಳವಾಡ ತಾಂಡದಲ್ಲಿ ಈ ಒಂದು ದಾಳಿ ನಡೆದಿದೆ. ಕುರುಬರದಿನಿ ತಾಂಡಾದಲ್ಲಿ 35 ಬಿಂದಿಗೆಗಳಲ್ಲಿ ಕಳಬಟ್ಟಿ ತುಂಬಿ ಇಡಲಾಗಿತ್ತು. ಮುಳುವಾಡ ಎಲ್ಟಿ 2 ಬಳಿ ಜಮೀನಿನಲ್ಲಿ ಕಳ್ಳಬಟ್ಟಿ ತಯಾರಿಸುತ್ತಿದ್ದರು. ಕಳ್ಳಬಟ್ಟಿ ಯನ್ನು ಬಸವನಬಾಗೇವಾಡಿ ಅಬಕಾರಿ ಪೊಲೀಸ್ ಸರು ನಾಶಪಡಿಸಿದ್ದಾರೆ. ಅಕ್ರಮವಾಗಿ ಜಮೀನಿನಲ್ಲಿ ಕಲಬಟ್ಟಿ ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿಯ ಮೇರೆಗೆ ಅಬಕಾರಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಜಮೀನು ಮಾಲೀಕರನ್ನು ಸಧ್ಯಾಬಕಾರಿ ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ.
ಬೆಂಗಳೂರು : ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ ಒಂದು ನಡೆದಿದ್ದು, ಹೆರಿಗೆ ಮಾಡಿಸುವುದರಲ್ಲಿ ವಿಳಂಬ ಮಾಡಿದ್ದರಿಂದ ಮಗು ಸಾವನಪ್ಪಿದೆ. ಬೆಂಗಳೂರಿನ ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿದೆ. ಸಂಗೀತಂ ಜೋಸ್ನಾ ಹಾಗು ಸುನೀಲ್ ದಂಪತಿಗಳ ಮಗು ಇದೀಗ ಸಾವನಪ್ಪಿದೆ. ಬೆಂಗಳೂರಿನ ಕಮಲಾನಗರದ ನಿವಾಸಿಯಾಗಿರುವ ಸಂಗೀತಂ ಮತ್ತು ಸುನಿಲ್ ಹೆರಿಗೆ ವಿಳಂಬ ಮಾಡಿಸಿದಕ್ಕೆ ಮಗು ಸಾವನ್ನಪ್ಪಿದೆ ಎಂದು ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾರೆ. ಹೆರಿಗೆ ನೋವು ಹಿನ್ನೆಲೆ, ಆಸ್ಪತ್ರೆಗೆ ಕರೆತಂದಿದ್ದರು ಸೋಮವಾರ ನೋವು ಕಂಡು ಬಂದರೂ ಕೂಡ ಹೆರಿಗೆ ಮಾಡಿಸಿಲ್ಲ. ನೋವು ಬಂದು ವಿಪರೀತ ವಾಟರ್ ಡಿಸ್ಚಾರ್ಜ್ ಆಗಿದೆ ಡೆಲಿವರಿ ಮಾಡಿಸಿ ಅಂತ ಹೇಳಿದರು ಕೂಡ ಹೆರಿಗೆ ಮಾಡಿಸಿಲ್ಲ. ಮಂಗಳವಾರ ಬೆಳಿಗ್ಗೆ ಮಾಡಿದ್ದಾರೆ. ಮಗು ಸ್ಯಾನಿಟರಿ ನೀರು ಕುಡಿದಿದೆ ಅಂತ ಐಸಿಯುನಲ್ಲಿ ಇಟ್ಟಿದ್ದಾರೆ. ಆದರೆ ಇವತ್ತು ಮಗು ಮೃತಪಟ್ಟಿದೆ. ಮಧ್ಯಾಹ್ನದಿಂದ ಆಸ್ಪತ್ರೆಯಲ್ಲಿ ಯಾವ ಡಾಕ್ಟರ್ ಸಹ ಇರಲಿಲ್ಲ ಎಂದು ಸಂಬಂಧಿಕರು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದ್ದು ಇದರ ಮಧ್ಯ ಕೊರೋನಾ ಆರ್ಭಟವು ಜೋರಾಗಿದೆ ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಮತ್ತೆ 72 ಹೊಸ ಕರೋನಾ ಪ್ರಕರಣಗಳು ಪತಿಯಾಗಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಕುರಿತು ಮಾಹಿತಿ ನೀಡಿದೆ. ಹೌದು ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 72 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 287 ಕ್ಕೆ ಏರಿಕೆಯಾಗಿದ್ದು, ಇದುವರೆಗೂ ರಾಜ್ಯದಲ್ಲಿ ಕೊರೊನ ಆಕ್ಟಿವ್ ಪ್ರಕರಣಗಳ ಸಂಖ್ಯೆ 27 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.