Subscribe to Updates
Get the latest creative news from FooBar about art, design and business.
Author: kannadanewsnow05
ಚಾಮರಾಜನಗರ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ಒಂದು ನಡೆದಿದ್ದು,ಗುಂಡ್ಲುಪೇಟೆ ತಾಲೂಕಿನ ಗ್ರಾಮವೊಂದರಲ್ಲಿ 15 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿರುವ ಮತ್ತೊಂದು ಶಾಕಿಂಗ್ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿಯು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದಾಗ ಗರ್ಭಿಣಿ ಆಗಿರುವುದು ಪತ್ತೆಯಾಗಿದೆ. 15 ವರ್ಷ 3 ತಿಂಗಳ ಬಾಲಕಿ ಗರ್ಭಿಣಿ ಆಗಿದ್ದು, ಈ ಸಂಬಂಧ ಯುವಕನೊಬ್ಬನ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದೂರು ಕೂಡ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2025ರ ಆಗಸ್ಟ್ನಲ್ಲಿ ತಾನೇ ಬಲವಂತದಿಂದ ಯುವಕನ ಜೊತೆ ದೈಹಿಕ ಸಂಪರ್ಕ ಬೆಳೆಸಿದೆ. ಅದಾದ ಬಳಿಕ, ಕಳೆದ ಮೂರು ತಿಂಗಳಿನಿಂದ ತನಗೆ ಋತುಸ್ರಾವ ಆಗದ ಹಿನ್ನೆಲೆ ಪಾಲಕರು ಆಸ್ಪತ್ರೆಗೆ ಕರೆತಂದಾ
ಚಾಮರಾಜನಗರ : ಇಂದು ಬೆಳಿಗ್ಗೆ ತಾನೇ ಹಾವೇರಿಯಲ್ಲಿ ಉಳುಮೆ ಮಾಡುವಾಗ ರೂಟರ್ ಯಂತ್ರಕ್ಕೆ ಸಿಲುಕಿ ರೈತ ಸಮಾನಪಿದ್ದ ಘಟನೆ ನಡೆದಿತ್ತು. ಇದೀಗ ರಾಗಿ ಯಂತ್ರಕ್ಕೆ ಸಿಲುಕಿ ವೃದ್ಧೆಯೊಬ್ಬರ ಎಡಗೈ ಸಂಪೂರ್ಣವಾಗಿ ತುಂಡಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಸಮೀಪ ಜರುಗಿದೆ. ಮುಡಿಗುಂಡ ಗ್ರಾಮದ ನಾಗಮ್ಮ ಕೈ ಕಳೆದುಕೊಂಡ ವೃದ್ಧೆ. ಕೆಲಸ ನಿರ್ವಹಿಸುತ್ತಿದ್ದಾಗ ರಾಗಿ ಯಂತ್ರಕ್ಕೆ ಕೈ ಸಿಲುಕಿ ಈ ಅವಘಡ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ತುಂಡಾದ ಕೈ ಸಮೇತ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ವೃದ್ಧೆಯನ್ನು ತಕ್ಷಣ ಕರೆತರಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ಗೆ ದಾಖಲಿಸಲಾಗಿದೆ. ಘಟನೆ ಬೆಚ್ಚಿ ಬೀಳಿಸುವಂತಿದ್ದು, ತುಂಡಾದ ಕೈ ಮರುಜೋಡಣೆ ಮಾಡಲು ಕಷ್ಟ ಸಾಧ್ಯ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ದಕ್ಷಿಣಕನ್ನಡ : ಧರ್ಮಸ್ಥಳ ವಿರುದ್ಧ ಷಡ್ಯಂತರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ನವೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟಿಗೆ ಎಸ್ಐಟಿ ಅಧಿಕಾರಿಗಳು ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಸಿವೆ. ಇಂದು ಬೆಳತಂಗಡಿ ಕೋರ್ಟ್ ನಲ್ಲಿ ಎಸ್ಐಟಿ ಅಧಿಕಾರಿಗಳು ಸಲ್ಲಿಸಿದ ಪ್ರಾಥಮಿಕ ವರದಿಯ ಕುರಿತು ವಿಚಾರಣೆ ನಡೆಯಿತು. ವಿಚಾರಣೆಯ ಬಳಿಕ ಜಡ್ಜ್ ವಿಜಯೇಂದ್ರ ಡಿಸೆಂಬರ್ 26 ಕ್ಕೆ ಆದೇಶ ಕಯ್ದಿರಿಸಿದರು. ಕೋರ್ಟ್ ಸಲ್ಲಿಸಿರುವ ತನಿಖಾ ವರದಿಯಲ್ಲಿ ಕ್ರಮಕ್ಕೆ ಮನವಿ ಸಲ್ಲಿಸಲಾಗಿದೆ. ಎಸ್ಐಟಿ ವರದಿ ಆಧಾರದಲ್ಲಿ ಕ್ರಮಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟಿಗೆ ಎಸ್ಐಟಿ ವರದಿ ಸಲ್ಲಿಸಿದ್ದು, ಎಸ್ಐಟಿ ವರದಿಯನ್ನು ಸ್ವೀಕರಿಸಿ ಬೆಳತಂಗಡಿ ಕೋರ್ಟ್ ವಾದ ಆಲಿಸಿತು. ಎಸ್ಐಟಿ ಪರ ವಕೀಲ ದಿವ್ಯರಾಜ ಹೆಗಡೆ ವಾದ ಮಂಡಿಸಿದರು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಕಷ್ಟು ಸಾಕ್ಷಿ ಆಧಾರಗಳಿವೆ. ಹೀಗಾಗಿ ಆರೋಪಿಗಳು ವಿರುದ್ಧ ಕ್ರಮ ಕೈಗೊಳಲು ನಿರ್ದೇಶನ ನೀಡಿ, ಚಿನ್ನಯ್ಯ ಜೊತೆಗೆ ಷಡ್ಯಂತರದಲ್ಲಿ ಉಳಿದ ಐವರು ಸಹ ಭಾಗಿಯಾಗಿದ್ದಾರೆ.…
ದಕ್ಷಿಣಕನ್ನಡ : ಕೊರೊನ ನಂತರ ರಾಜ್ಯದಲ್ಲಿ ಹಲವು ಅಪಾಯಕಾರಿ ವೈರಸ್ ಗಳು ಬಂದು ಹೋಗಿವೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಕನ್ ಪಾಕ್ಸ್ ವೈರಸ್ ಹರಡಿದ್ದು ದಕ್ಷಿಣ ಕನ್ನಡದ ಒಂದೇ ಶಾಲೆಯಲ್ಲಿ ಒಟ್ಟು 17 ಮಕ್ಕಳಲ್ಲಿ ಚಿಕನ್ ಪಾಕ್ಸ್ ವೈರಸ್ ಪತ್ತೆಯಾಗಿದೆ. ಚಿಕನ್ ಪಾಕ್ಸ್ ಮಕ್ಕಳಲ್ಲಿ, ಯಾವುದೇ ತೊಂದರೆ ಇಲ್ಲದೇ ಸಂಪೂರ್ಣವಾಗಿ ಗುಣವಾಗುತ್ತದೆ. ಒಮ್ಮೆ ಚಿಕನ್ ಪಾಕ್ಸ್ನಿಂದ ಬಳಲಿದ ವ್ಯಕ್ತಿ ಜೀವಿತಾವಧಿಯವರೆಗೂ ಅದರ ವಿರುದ್ಧ ರೋಗ ನಿರೋಧಕ ಶಕ್ತಿ ಹೊಂದುತ್ತಾನೆ. ಇದರಿಂದ ಒಮ್ಮೆ ಚಿಕನ್ ಪಾಕ್ಸ್ ಬಂದವರಿಗೆ ಜೀವಿತಾವಧಿಯಲ್ಲಿ ಮತ್ತೊಮ್ಮೆ ಯಾವತ್ತೂ ಬರುವುದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್.ತಿಮ್ಮಯ್ಯ ತಿಳಿಸಿದರು. ಶಾಲಾ ಮಕ್ಕಳಲ್ಲಿ ಚಿಕನ್ ಪಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಭೀತಿ ಬೇಡ ಮುನ್ನೆಚ್ಚರಿಕೆ ಇರಲಿ. ಇದೊಂದು ಸಾಂಕ್ರಾಮಿಕ ಖಾಯಿಲೆಯಾದ್ದರಿಂದ ಯಾವುದೇ ಕಾರಣಕ್ಕೆ ಒಬ್ಬನಿಂದ ಮತ್ತೊಬ್ಬನಿಗೆ ಹರಡದಂತೆ ಜಾಗ್ರತೆ ವಹಿಸುವುದು ಅಗತ್ಯ. ಒಂದು ಬಾರಿ ಚಿಕನ್ ಪಾಕ್ಸ್ ಕಾಣಿಸಿಕೊಂಡರೆ ಗುಣಮುಖರಾಗಲು ಸುಮಾರು 2 ವಾರಗಳ ಸಮಯ ಬೇಕಾಗುತ್ತದೆ ಎಂದರು.
BREAKING : ‘APL’ ಪಡಿತರಿಗೆ ಗುಡ್ ನ್ಯೂಸ್ : ಡಿಮ್ಯಾಂಡ್ ಬಂದ್ರೆ 15 ಕೆಜಿ ಅಕ್ಕಿ ವಿತರಣೆ : ಸಚಿವ ಕೆ.ಎಚ್ ಮುನಿಯಪ್ಪ
ಬೆಳಗಾವಿ : ಎಪಿಎಲ್ ಕಾರ್ಡ್ಗೆ ಮೊದಲು 15 ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ಆದರೆ, ಅವರು ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿ ಅದನ್ನು ನಿಲ್ಲಿಸಿದ್ದೆವು. ಬೇಡಿಕೆ ಬಂದರೆ APL ಪಡಿತರ ಚೀಟಿದಾರರಿಗೂ ಅಕ್ಕಿ ಕೊಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು. ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹೊಸ ಬಿಪಿಎಲ್ ಕಾರ್ಡ್ ಕಳೆದ ತಿಂಗಳು 30 ರಿಂದ ಅರ್ಜಿ ಹಾಕಲು ಅವಕಾಶ ಕೊಟ್ಟಿದ್ದೇವೆ. ಸಂಬಂಧಿಸಿದ ತಹಶೀಲ್ದಾರ್ ಅವರಿಗೆ ಅರ್ಜಿ ಹಾಕಿದರೆ ಅರ್ಹರಿಗೆ ಹೊಸ ಕಾರ್ಡ್ ಕೊಡಲು ತೀರ್ಮಾನಿಸಿದ್ದೇವೆ. ಈಗಾಗಲೇ 10 ಲಕ್ಷ ಅನರ್ಹರನ್ನು ಎಪಿಎಲ್ಗೆ ಶಿಫ್ಟ್ ಮಾಡುತ್ತಿದ್ದೇವೆ ಎಂದರು. ಗ್ಯಾರಂಟಿ ಯೋಜನೆಗಳು ಯಥಾವತ್ತಾಗಿ ಮುಂದುವರೆಯುತ್ತವೆ. ಅಭಿವೃದ್ಧಿ ಕಾರ್ಯಗಳಿಗೂ ಕೂಡ ಸರ್ಕಾರದ ಬಳಿ ಯಾವುದೇ ಹಣದ ಕೊರತೆ ಇಲ್ಲ ಅರ್ಹರಿಗೆ ಹೊಸ ಬಿಪಿಎಲ್ ಕಾರ್ಡ್ ಕೊಡುತ್ತಿದ್ದೇವೆ. 10 ಲಕ್ಷ ಅನರ್ಹರನ್ನು ಎಪಿಎಲ್ ಗೆ ಶಿಫ್ಟ್ ಮಾಡುತ್ತಿದ್ದೇವೆ ಎಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಆಹಾರ ಇಲಾಖೆಯ ಸಚಿವ ಕೆಎಚ್ ಮುನಿಯಪ್ಪ…
ಚಿತ್ರದುರ್ಗ : ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಸಮಾಧಿಯನ್ನು ಧ್ವಂಸ ಮಾಡಲಾಗಿದೆ ಎಂದು ವರದಿಯಾಗಿದೆ. ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ನಾಮಫಲಕ ಧ್ವಂಸ ಮಾಡಲಾಗಿದೆ. ಲೇಔಟ್ ನಿರ್ಮಾಣ ವೇಳೆ ಸಮಾಧಿಗೆ ಧಕ್ಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ನಟ ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಕಾರಣ 2024ರ ಜೂನ್ ತಿಂಗಳಿನಲ್ಲಿ ರೇಣುಕಾಸ್ವಾಮಿಯನ್ನು ನಟ ದರ್ಶನ್ ಅಂಡ್ ಗ್ಯಾಂಗ್ ಕೊಲೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಸದ್ಯ ರೇಣುಕಾಸ್ವಾಮಿ ಹತ್ಯೆ ಕೇಸ್ ವಿಚಾರವಾಗಿ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಸೇರಿ ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿಯಾಗಿ ಇದ್ದಾರೆ. ಇನ್ನೂ ನಾಳೆ ಡೆವಿಲ್ ಸಿನಿಮಾ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ದರ್ಶನ್ ಅವರನ್ನು ನೋಡಲು ಕಾಯುತ್ತಿದ್ದಾರೆ. ಈಗಾಗಲೇ ಅಭಿಮಾನಿಗಳು ಸಿನಿಮಾದ ಪ್ರಚಾರವನ್ನು ಅದ್ದೂರಿಯಾಗಿ ಆಗಮಿಸಲಿದ್ದು, ನಾಳೆ ಖುದ್ದು ದರ್ಶನ್ ಪತ್ನಿ ವಿಜಯಲಕ್ಸಮಿಯವರು ಅಭಿಮಾನಿಗಳ ಜೊತೆಗೆ ನರ್ತಕಿ ಸಿನಿಮಾ ಮಂದಿರದಲ್ಲಿ ನೋಡಲಿದ್ದಾರೆ ಎನ್ನಲಾಗಿದೆ. ಇನ್ನೂ ಜೈಲಿನಲ್ಲಿ ದರ್ಶನ್ ತಮ್ಮ ಸಹಚರರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪಕ್ಕೆ ದರ್ಶನ್ ಪತ್ನಿ ಆರೋಪವನ್ನು…
ಬೆಂಗಳೂರು : ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರು ವಿದೇಶಿ ಪ್ರಜೆಗಳು ಸೇರಿ ಮೂವರು ಡ್ರಗ್ ಪೆಡ್ಲರ್ ಗಳನ್ನು ಅರೆಸ್ಟ್ ಮಾಡಿದ್ದಾರೆ. ನೈಜರಿಯಾ ಮೂಲದ ಒಬಿಜೆಸಿ ಚಿಗೋಜೈ ದಾವಿ, ಸನಿ ಸಾದಿಕ್, ಬೆಂಗಳೂರಿನ ಮೊಹಮ್ಮದ್ ಮುಸ್ತಫಾ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಆರೋಪಿಗಳಿಂದ 4.20 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಬಾಗಲೂರು, ಅಶೋಕ್ ನಗರ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದರು. ಪರಿಚಯಸ್ಥರು, ವಿದ್ಯಾರ್ಥಿಗಳು IT-BT ಉದ್ಯೋಗಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಬಾಗಲೂರು ವ್ಯಾಪ್ತಿಯಲ್ಲಿ 1 ಕೆಜಿ 20 ಗ್ರಾಂ MDMA, ಅಶೋಕನಗರದಲ್ಲಿ 2 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಸೀಜ್ ಮಾಡಿದ್ದಾರೆ. ಒಟ್ಟು 4.20 ಕೋಟಿ ಮೌಲ್ಯದ ಡ್ರಗ್ ಸೀಜ್ ಮಾಡಿದ್ದಾರೆ.
ಗುಜರಾತ್ : ದೆಹಲಿಯಲ್ಲಿ ಈ ಹಿಂದೆ ನಿರ್ಭಯಾ ಮೇಲೆ ಅತ್ಯಾಚಾರ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಗುಜರಾತ್ ನಲ್ಲಿ ಅದೇ ರೀತಿಯಲ್ಲಿ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವ ಘಟನೆ ವರದಿಯಾಗಿದೆ. ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಖಾಸಗಿ ಭಾಗಕ್ಕೆ ರಾಡ್ ಸೇರಿಸಿ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಸದ್ಯ ಆರೋಪಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆ ಕುರಿತು ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಯಾದಗಿರಿ : ಯಾದಗಿರಿಯಲ್ಲಿ ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು, ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ಕಾಟನ್ ಮಿಲ್ನಲ್ಲಿ ಬೆಂಕಿ ಹೊತ್ತಿಕೊಂಡು 1 ಕೋಟಿ ರೂ. ಮೌಲ್ಯದ 60 ಟನ್ಗೂ ಅಧಿಕ ಕಾಟನ್ ಬೆಂಕಿಗಾಹುತಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಾದ್ಯಪುರ ಸಮೀಪದಲ್ಲಿ ನಡೆದಿದೆ. ಕಾಟನ್ ಮಿಲ್ನಲ್ಲಿ ಕೆಲ ಯಂತ್ರಗಳು ಸುಟ್ಟು ಹೋಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಭೇಟಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಒಂದು ಮಿಲ್ ಸಾಹೇಲ್ಗೆ ಎಂಬುವವರಿಗೆ ಸೇರಿದ್ದ ಸಾದ್ಯಪುರ ಗ್ರಾಮದ ಸಮೀಪದ ಶ್ರೀ ಲಕ್ಷ್ಮಿ ಬಾಲಾಜಿ ಕಾಟನ್ ಮಿಲ್ನಲ್ಲಿ ವಿದ್ಯುತ್ ಶಾರ್ಟ್ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಬೆಂಕಿ ಕೆನ್ನಾಲಿಗೆಗೆ ಧಗಧಗನೆ ಕಾಟನ್ ಹೊತ್ತಿ ಉರಿದಿದ್ದು, 1 ಕೋಟಿ ರೂ. ಮೌಲ್ಯದ 60 ಟನ್ಗೂ ಅಧಿಕ ಕಾಟನ್ ಬೆಂಕಿಗಾಹುತಿಯಾಗಿದೆ.
ಬೆಂಗಳೂರು : ಲೈಂಗಿಕ ಸಮಸ್ಯೆಗೆ ಪರಿಹಾರ ನೀಡೋದಾಗಿ ಟೆಕ್ಕಿಗೆ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಲ್ಲಿ ನಕಲಿ ಗುರೂಜಿಯನ್ನು ಜ್ಞಾನ ಭಾರತಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಬಂಧಿತನನ್ನು ವಿಜಯ್ ಚಿತ್ತೋಡಿಯ ಎಂದು ತಿಳಿದುಬಂದಿದೆ. ವಿಜಯ್ ಸಹಚರ ಮನೋಜ್ ಸಿಂಗ್ ಚಿತ್ತೋಡಿಯ ಸಹ ಕೂಡ ಇದೀಗ ಅರೆಸ್ಟ್ ಆಗಿದ್ದಾನೆ. ಬಂಧಿತ ಆರೋಪಿಗಳು ಮೂಲತಃ ಗುಜರಾತ್ ಮೂಲದವರು ಎಂದು ತಿಳಿದುಬಂದಿದೆ.ತುಮಕೂರು ಸೇರಿದಂತೆ ಒಟ್ಟು 8 ಕಡೆ ಟೆಂಟ್ ಗಳನ್ನು ಹೊಂದಿದ್ದರು. ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ಕೊಡೋದಾಗಿ ಹೇಳಿ ವಂಚನೆ ಎಸಗಿದ್ದಾರೆ. ಲೈಂಗಿಕ ಸಮಸ್ಯೆ ಎಂದು ಹೋಗಿದ್ದೆ ಟೆಕ್ಕಿಗೆ 40 ಲಕ್ಷ ವಂಚನೆ ಮಾಡಿದ್ದಾರೆ. ನಂತರ ಇವರೆಲ್ಲರೂ ಸಹ ನಕಲಿ ಸ್ವಾಮೀಜಿ ಎಂದು ಗೊತ್ತಾಗಿದೆ. ಈ ಕುರಿತು ಜ್ಞಾನ ಭಾರತಿ ಠಾಣೆಗೆ ಟೆಕ್ಕಿ ದೂರು ನೀಡಿದ್ದಾರೆ. ತೆಲಂಗಾಣ ಮೆಹಬೂಬ್ ನಗರದಲ್ಲಿ ವಿಜಯ್ ನನ್ನ ಅರೆಸ್ಟ್ ಮಾಡಿದ್ದಾರೆ. ಸೈಬರಾಬಾದ್ ನಲ್ಲಿ ಮನೋಜ್ ನನ್ನ ಬಂಧಿಸಲಾಗಿದೆ. 40 ಲಕ್ಷದಲ್ಲಿ 19.5 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ. ಒಂದು ಟಿಟಿ ವಾಹನ…














