Subscribe to Updates
Get the latest creative news from FooBar about art, design and business.
Author: kannadanewsnow05
BREAKING : ‘ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ’ : ಮಾಜಿ ಸಚಿವ ಶ್ರೀರಾಮುಲು ಹೊಸ ಬಾಂಬ್!
ಕೋಲಾರ : ಒಂದು ಕಡೆ ಬಿಜೆಪಿ ರಾಜ್ಯಾಧ್ಯಕ್ಷ ಬದಲಾಯಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಹೈಕಮಾಂಡ್ಗೆ ವಿಜಯೇಂದ್ರ ವಿರುದ್ಧ ದೂರು ನೀಡಿದ್ದು, ಇನ್ನೊಂದು ಕಡೆ ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಸರಿಯಾಗಿ ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಶ್ರೀರಾಮುಲು ಇದೀಗ ಹೊಸ ದಾಳವನ್ನು ಉರುಳಿಸಿದ್ದಾರೆ. ಈ ಕುರಿತು ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಸದ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಇದ್ದಾರೆ. ಆಕಸ್ಮಿಕವಾಗಿ ಬದಲಾದರೆ ನಾನು ರಾಜ್ಯಾಧ್ಯಕ್ಷನಾಗಲು ಸಿದ್ಧನಿದ್ದೇನೆ ಎಂದು ಹೊಸ ದಾಳ ಉರುಳಿಸಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಿಸಿ ಎಂದು ಒತ್ತಾಯ ಮಾಡಲ್ಲ ಒಂದು ವೇಳೆ ನನಗೆ ಅವಕಾಶ ಕೊಟ್ಟರೆ ನಾನು ರಾಜ್ಯಾಧ್ಯಕ್ಷ ಸ್ಥಾನವನ್ನು ನಿಭಾಯಿಸುತ್ತೇನೆ. ಆದರೆ ಸದ್ಯ ಇರುವ ಹಾಲಿ ಅಧ್ಯಕ್ಷರನ್ನು ಬದಲಿಸಿ ಎಂದು ಒತ್ತಾಯ ಮಾಡಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಅವರು…
ಬೆಳಗಾವಿ : ಬೆಳಗಾವಿಯಲ್ಲಿ ಬೆಚ್ಚಿಬಿಳಿಸುವ ಘಟನೆ ನಡೆದಿದ್ದು, ಪತಿಯೊಬ್ಬ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಎಂಬ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಪತ್ನಿಯನ್ನು ಮೀರಾಬಾಯಿ (25) ಎಂದು ತಿಳಿದುಬಂದಿದ್ದು, ಬಾಲಾಜಿ ಕಬಲಿ (35) ತನ್ನ ಪತ್ನಿಯನ್ನು ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮಹಾರಾಷ್ಟ್ರ ಮೂಲದ ದಂಪತಿ ಕಬ್ಬು ಕಟಾವು ಗ್ಯಾಂಗ್ ಜೊತೆ ಉಪ್ಪಾರಟ್ಟಿಗೆ ಕೆಲಸಕ್ಕೆ ಬಂದಿದ್ದರು. ಈ ವೇಳೆ, ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಇಷ್ಟಾದರೂ ಕೂಡ ಪತಿಯ ಕೃತ್ಯ ಇಷ್ಟಕ್ಕೆ ನಿಲ್ಲದ. ತಾನು ಏನೋ ದೊಡ್ಡ ಘನಂದಾರಿ ಕೆಲಸ ಮಾಡಿರೋ ಥರ ಕೊಲೆಯ ಬಳಿಕ ಆರೋಪಿಯು ಸಂಬಂಧಿಕರಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ್ದ ಎನ್ನಲಾಗುತ್ತಿದೆ. ಸದ್ಯ ಆರೋಪಿ ಬಾಲಾಜಿಯನ್ನು ವಶಕ್ಕೆ ಪಡೆದಿರುವ ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಉತ್ತರಕನ್ನಡ : ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಹಾವಳಿಯಿಂದ ಅನೇಕ ಜನರು ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದೀಗ ಉತ್ತರ ಕನ್ನಡದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ರಾತ್ರೋರಾತ್ರಿ ಐವರು ಬಡ್ಡಿ ದಂಧೆ ಕೋರರನ್ನು ಅರೆಸ್ಟ್ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ. ಹೌದು ರಾತ್ರೋರಾತ್ರಿ ಬಡ್ಡಿ ದಂಧೆ ಕೋರರನ್ನು ಅರೆಸ್ಟ್ ಮಾಡಲಾಗಿದ್ದು, ಮುಂಡಗೋಡ ತಾಲೂಕಿನಲ್ಲಿ ಸಿನಿಮೀಯ ರೀತಿಯಲ್ಲಿ ಬಡ್ಡಿ ದಂಧೆ ಕರೋನ ಮೀಟಿಂಗ್ ನಡೆಯುತ್ತಿತ್ತು. ಈ ವೇಳೆ ರಾತ್ರೋ ರಾತ್ರಿ ಮೀಟರ್ ಬಡ್ಡಿಯಲ್ಲಿ NMD ಖ್ಯಾತಿಯ ಜಮೀರ್ನನ್ನು ಅರೆಸ್ಟ್ ಮಾಡಿದ್ದಾರೆ. ಒಬ್ಬರಿಗೆ 10 ಲಕ್ಷ ಕೊಟ್ಟು 30% ಬಡ್ಡಿಯಲ್ಲಿ 15 ಪರ್ಸೆಂಟ್ ತನಗೆ ಉಳಿದ 15% ವಸೂಲಿ ಹುಡುಗರಿಗೆ ಎಂದು ಬಡ್ಡಿ ದಂಧೆಕೊರ ಹೇಳಿದ್ದ. ಕೆಲಸ ಇಲ್ಲದ ಯುವಕರನ್ನು ಬಳಸಿಕೊಂಡು ಮೀಟರ್ ಬಡ್ಡಿ ದಂಧೆ ನಡಿಸುತ್ತಿದ್ದ ಎನ್ನಲಾಗಿದೆ ಸ್ಥಳೀಯ ದೂರಿನ ಮೇರೆಗೆ ಸದ್ಯ ಐವರು ಪುಡಿ ರೌಡಿಗಳನ್ನ ಇದೀಗ ಅರೆಸ್ಟ್ ಮಾಡಿದ್ದಾರೆ. ತಿಂಗಳಿಗೆ 40 ರಿಂದ 50,000 ಬಡ್ಡಿ ಬರುತ್ತಿತ್ತು. ರಾತ್ರಿ ಹೊಡೆದು…
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಭೀಕರವಾದಂತಹ ಅಗ್ನಿ ಅವಘಡ ಸಂಭವಿಸಿದ್ದು ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಎಂಬ ಕೈಗಾರಿಕಾ ಪ್ರದೇಶದಲ್ಲಿ ಸ್ಟೀಲ್ ಕಾರ್ಖಾನೆಯ ಪಕ್ಕದಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ. A1 ಸ್ಟೀಲ್ಕಾರ್ಖಾನೆ ಪಕ್ಕದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತ್ಯಾಜ್ಯಕ್ಕೆ ಹೊತ್ತಿಕೊಂಡ ಬೆಂಕಿ ಕಾರ್ಖಾನೆಗೆ ಹಬ್ಬುವ ಸಾಧ್ಯತೆ ಇದೆ ಎನ್ನಲಾಗಿದೆ. ಗೌರಿಬಿದನೂರು ಕುಡುಮಲಕುಂಟೆ ಗ್ರಾಮದಲ್ಲಿ ಪ್ರಕರಣ ನಡೆದಿದೆ. A1 ಸ್ಟೀಲ್ ಕಾರ್ಖಾನೆಗೆ ಪಕ್ಕದಲ್ಲಿ ಈ ಒಂದು ಬೆಂಕಿ ಒಗಡ ಸಂಭವಿಸಿದೆ. ತ್ಯಾಜ್ಯಕ್ಕೆ ಹೊತ್ತಿಕೊಂದಿದೆ.ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಹರಸಾಹಸಪಡುತ್ತಿದ್ದಾರೆ
ಬೆಂಗಳೂರು : ಬ್ಯಾಂಕ್ ಗಳಿಂದ ಲೆಕ್ಕ ಕೋರಿ ಹೈಕೋರ್ಟ್ ಗೆ ವಿಜಯ ಮಲ್ಯ ಅರ್ಜಿ ಸಲ್ಲಿಸಿದ್ದು, ವಿಜಯ ಮಲ್ಯ ಪರ ಹಿರಿಯ ವಕೀಲ ಸಜನ್ ಪೂವಯ್ಯ ಹೈಕೋರ್ ನಲ್ಲಿ ಇಂದು ವಾದ ಮಂಡಿಸಿದರು. ಈ ವೇಳೆ ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಾಧೀಶರಾದ ಆರ್ ದೇವದಾಸ್ ಅವರು ಬ್ಯಾಂಕ್ಗಳಿಗೆ ಹಾಗೂ ವಸೂಲಾತಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ ವಿಜಯ್ ಮಲ್ಯ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡಿಸಿ 6200 ಕೋಟಿ ಸಾಲ ಕೊಡಬೇಕಿತ್ತು. 14,000 ಕೋಟಿ ವಸೂಲಿಯಾಗಿದೆ ಹೀಗೆಂದು ಹಣಕಾಸು ಸಚಿವೆ ಲೋಕಸಭೆಗೆ ತಿಳಿಸಿದ್ದಾರೆ.ಸಾಲ ವಸೂಲಾತಿ ಅಧಿಕಾರಿ10,200 ಕೋಟಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ನೀಡುವಂತೆ ನಿರ್ದೇಶಿಸಲು ಮನವಿ ಮಾಡಿದರು. ಈ ವೇಳೆ ಜಡ್ಜ್ ಬ್ಯಾಂಕಗಳಿಗೂ ಹಾಗೂ ಸಾಲ ವಸೂಲಾತಿ ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ನ್ಯಾ.ಆರ್ ದೇವದಾಸ್ ಅವರಿಂದ ಹೈಕೋರ್ಟ್ ಪೀಠ ಇದೀಗ…
ಕಲಬುರ್ಗಿ : ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ನಾಲವಾರದ ಕೋರಿಸಿದ್ದೇಶ್ವರ ಸಂಸ್ಥಾನ ಮಠದಲ್ಲಿ ಭತ್ತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಚಿತಾಪುರ ತಾಲೂಕಿನ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಮಠದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಮಲ್ಲಿಕಾರ್ಜುನ ವೀರಯ್ಯಸ್ವಾಮಿ ಹಿರೇಮಠ (35) ಆತ್ಮಹತ್ಯೆ ಮಾಡಿಕೊಂಡ ಭಕ್ತ ಎಂದು ತಿಳಿದುಬಂದಿದೆ. ವೀರಯ್ಯಸ್ವಾಮಿ ಮಠದ ಪೀಠಾಧಿಪತಿ ತೋಟೇಂದ್ರ ಶಿವಾಚಾರ್ಯ ಅವರ ತಂಗಿಯ ಪುತ್ರ ಎನ್ನಲಾಗಿದ್ದು, ಒಂದು ವರ್ಷದ ಹಿಂದೆ ಅವರಿಗೆ ಮದುವೆಯಾಗಿತ್ತು. ಪೂಜ್ಯರ ಸೇವೆ ಮಾಡುತ್ತ ಮಠದಲ್ಲೇ ವಾಸವಿದ್ದರು ಎಂದು ತಿಳಿದುಬಂದಿದೆ.ಮಠದಲ್ಲಿರುವ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಚಿತ್ತಾಪೂರ ಹಣೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು : ನಗರದಲ್ಲಿ ಹಾಡ ಹಗಲೇ ಪತ್ನಿಯ ಶೀಲ ಶಂಕಿಸಿದಂತ ಪತಿಯೊಬ್ಬ ಚಾಕುವಿನಿಂದ 7 ರಿಂದ 8 ಬಾರಿ ಚುಚ್ಚಿ ಬರ್ಬರವಾಗಿ ಇರಿದು ಕೊಲೆ ಮಾಡಿರುವಂತ ಘಟನೆ ಆನೇಕಲ್ ನಲ್ಲಿ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಮೋಹನ್ ರಾಜು ಎಂಬಾತ ತನ್ನ ಪತ್ನಿಯ ಶೀಲ ಶಂಕಿಸಿ, ಹಾಡ ಹಗಲೇ ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಗೈದಿದ್ದಾನೆ. ಶ್ರೀಗಂಗಾ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾರೆ. ಶ್ರೀಗಂಗಾ ಅವರು ಪತಿ ಮೋಹನ್ ರಾಜು ಅವರ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದನ್ನು ಬಿಡುವಂತೆ ಪತ್ನಿಗೆ ತಿಳಿಸಿದ್ದರೂ ಚಾಳಿ ಮುಂದುವರೆಸಿದ್ದರಂತೆ. ಈ ಕಾರಣದಿಂದ ಚಾಕುವಿನಿಂದ ಇರಿದು ಹತ್ಯೆ ಗೈದಿದ್ದಾನೆ ಎನ್ನಲಾಗಿದೆ.
ಬಳ್ಳಾರಿ : ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳ ಸಂಖ್ಯೆ ಮುಂದುವರೆದಿದ್ದು, ಇದೀಗ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿಯ ಸಾವಾಗಿದೆ.ಮಂಗಳವಾರ ಸಂಜೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಬಾಣಂತಿಯನ್ನು ರೇಷ್ಮಾಬಿ ಗೌಸ್‌ಫೀರ್ (25) ಎಂದು ತಿಳಿದುಬಂದಿದೆ.ರೇಷ್ಮಾಗೆ ಜನವರಿ 4ರಂದು ಸಿಜೇರಿಯನ್ ಹೆರಿಗೆ ಮಾಡಲಾಗಿತ್ತು. ನಾಲ್ಕು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದರು. ಬಳಿಕ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಜ.14ರಂದು ಮತ್ತೆ ವಿಮ್ಸ್‌ಗೆ ದಾಖಲಿಸಿ ಕೃತಕ ಉಸಿರಾಟದಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತಾದರೂ, ಮಂಗಳವಾರ ಸಾವನ್ನಪ್ಪಿದ್ದಾರೆ. ಈ ಕುರಿತು ವೈದ್ಯರು ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ರೇಷ್ಮಾ ಸಾವಾಗಿದೆ ಎಂದು ಮೃತಳ ಪತಿ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಇನ್ನು ವೈದ್ಯರು ರೇಷ್ಮಾ ಅವರಿಗೆ ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಸಿಸೇರಿಯನ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾವೂ ಎಲ್ಲ ರೀತಿಯ ಚಿಕಿತ್ಸೆಗಳನ್ನು ನೀಡಿದ್ದೆವು ಎಂದು ತಿಳಿಸಿದ್ದಾರೆ.
ಕೊಪ್ಪಳ : ಸರ್ಕಾರಿ ಶಾಲೆಯ ಅಡಿಗೆ ಕೋಣೆಯಲ್ಲಿ ಭೀಕವಾದಂತ ಅಗ್ನಿ ಅವಘಡ ಸಂಭವಿಸಿದ್ದು, ಗ್ಯಾಸ್ ಲೀಕ್ ಆಗಿ ಅಡುಗೆ ಕೋಣೆಯಲ್ಲಿ ಭೀಕರವಾಗಿ ಅಗ್ನಿ ದುರಂತ ಸಂಭವಿಸಿದೆ. ಕೊಪ್ಪಳ ಜಿಲ್ಲೆಯ ಕಾರಟಗಿಯ ರಾಮನಗರದಲ್ಲಿ ಈ ಒಂದು ಅಗ್ನಿ ದುರಂತ ಸಂಭವಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆಯ ಅಡುಗೆ ಕೊನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಡುಗೆ ಮಾಡುವಾಗ ಪೈಪ್ ನಿಂದ ಗ್ಯಾಸ್ ಸೋರಿಕೆಯಾಗಿದೆ. ಕೂಡಲೇ ಶಾಲೆಗೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.ಈ ವೇಳೆ ಅಡುಗೆ ಕೋಣೆಯಲ್ಲಿದ್ದಂತಹ ಹಲವು ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಘಟನೆ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಆಕೆಯ ಶೀಲವನ್ನು ಶಂಕಿಸಿದ ಪತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿ, ಬಳಿಕ ಆಕೆಯ ಶವವನ್ನು ಕೆರೆಗೆ ಎಸೆದಿರುವ ಘೋರ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಮೀಪ ತಮ್ಮರಸನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ತಮ್ಮರಸನಹಳ್ಳಿಯಲ್ಲಿ ವಿಜಯಪುರ ಮೂಲದ ರಾಬಿನಾಳನ್ನು (32) ಬರ್ಬರವಾಗಿ ಹತ್ಯೆಗೈಯಲಾಗಿದೆ ಪತ್ನಿಯ ಅನೈತಿಕ ಸಂಬಂಧದಿಂದ ಬೆಸತ್ತು ಕೊಲೆ ಮಾಡಿದ್ದಾಗಿ ಪತಿ5 ನಿಜಮುದ್ದೀನ್ ಹೇಳಿಕೆ ನೀಡಿದ್ದಾನೆ. ಅನೈತಿಕ ಸಂಬಂಧ ಶಂಕಿಸಿ ಪತ್ನಿಯನ್ನು ನಿಜಮುದ್ದಿನ ಭೀಕರವಾಗಿ ಕೊಲೆ ಮಾಡಿದ್ದಾನೆ. ಕತ್ತುಹಿಸಿಕಿ ಪತ್ನಿ ಕೊಂದು ಶವವನ್ನು ಕೆರೆಗೆ ಎಸೆದಿದ್ದಾನೆ. ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು ಅನೈತಿಕ ಸಂಬಂಧಕ್ಕೆ ಬೇಸತ್ತು ನಾನು ಪತ್ನಿಯನ್ನು ಕೊಲೆ ಮಾಡಿದ್ದಾಗಿ ತಪ್ಪೋಪ್ಪಿಕೊಂಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ನಿಜಾಮುದ್ದೀನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.














