Subscribe to Updates
Get the latest creative news from FooBar about art, design and business.
Author: kannadanewsnow05
ರಾಯಚೂರು : ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಯಡವಟ್ಟು ಮಾಡಿಕೊಂಡಿದ್ದು,, ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಬ್ಲಡ್ ಗ್ರೂಪ್ ಅನ್ನೆ ಬದಲಿಸಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಗಳು ಬದಲಿ ಬ್ಲಡ್ ಗ್ರೂಪ್ ವರದಿ ಕೊಟ್ಟಿದ್ದಾರೆ. ಶಾಹಿಮ್ ಬೇಗಂ ಎನ್ನುವವರು ಕೈಮುರಿದು ಗಂಭೀರವಾಗಿ ಗಾಯಗೊಂಡಿದ್ದರು. ಏಪ್ರಿಲ್ 14ರಂದು ರಾಯಚೂರಿನ ರಿಮ್ಸ್ ಗೆ ಶಾಹಿಂ ಬೇಗಂ ದಾಖಲಾಗಿದ್ದರು. ರೋಗಿಯ ಸಂಬಂಧಿಕರ ಸಮಯ ಪ್ರಜ್ಞೆ ಮತ್ತು ಭಾರಿ ಅನಾಹುತ ಒಂದು ತಪ್ಪಿದೆ. ತಪ್ಪಾಗಿ ಬದಲಿ ಗ್ರೂಪ್ ರಕ್ತ ಹಾಕಿದರೆ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಶಾಹಿಂ ಬೇಗಂ ಗೆ ಆಪರೇಷನ್ ಮಾಡಲು ಹೆಚ್ಚಿನ ರಕ್ತದ ಅವಶ್ಯಕತೆ ಇತ್ತು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗಳು ಬಿ ಪಾಸಿಟಿವ್ ರಕ್ತ ವರದಿ ನೀಡಿದ್ದಾರೆ.
ಮೈಸೂರು : ಮೈಸೂರಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಾಮುಂಡಿ ಬೆಟ್ಟಕ್ಕೆ ಬಂದಿದ್ದ ಬೆಂಗಳೂರು ಮೂಲದ ಕಾರು ಒಂದು ವಾಪಸ್ ಆಗುವ ವೇಳೆ ತಡೆಗೋಡೆಗೆ ಡಿಕ್ಕಿ ಹೊಡೆದು ಕಾರು ಪಟ್ಟಿಯಾಗಿರುವಾಗ ಘಟನೆ ನಡೆದಿದೆ. ಹೌದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಡೆಗೋಡೆಗೆ ಡಿಕ್ಕಿಯಾಗಿ ಕಾರು ಪಲ್ಟಿಯಾಗಿದೆ. ಚಾಮುಂಡಿ ಬೆಟ್ಟದಿಂದ ವಾಪಾಸ್ ಆಗುವಾಗ ಕಾರು ಪಲ್ಟಿಯಾಗಿದೆ. ಬೆಂಗಳೂರಿನಿಂದ ಚಾಮುಂಡೇಶ್ವರಿ ದರ್ಶನಕ್ಕೆ ಕುಟುಂಬ ಆಗಮಿಸಿತ್ತು. ಅಪಘಾತದ ಕುರಿತು ಸಿದ್ದಾರ್ಥ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ : ಮುಸ್ಲಿಂ ಯುವಕನ ಕಿರುಕುಳಕ್ಕೆ ಬೇಸತ್ತು ದಲಿತ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದ ಹಿಂದೆ ಬೆಳಗಾವಿಯ ಮಹಾಂತೇಶ್ ನಗರದ ಸಮಾಜ ಕಲ್ಯಾಣ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ನೇಣು ಬಿಗಿದುಕೊಂಡು ಬಿಸಿಎ ಓದುತ್ತಿದ್ದ ವಿದ್ಯಾರ್ಥಿನಿ ಶಿಲ್ಪಾ ಆತ್ಮಹತ್ಯೆಗೆ ಶರಣಾಗಿದ್ದಳು. ಇದೀಗ ಈ ಒಂದು ಆತ್ಮಹತ್ಯೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರು ಗ್ರಾಮದ ನಿವಾಸಿಯಾದ ಶಿಲ್ಪಾ (22) ಆತ್ಮಹತ್ಯೆಗೆ ಶರಣಾಗಿದ್ದಳು. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಿಕ್ಕಮಲ್ಲೂರು ಗ್ರಾಮದ ಶಿಲ್ಪಾ ಬೆಳಗಾವಿಯಲ್ಲಿ ಬಿಸಿಎ ಓದುತ್ತಿದ್ದಳು. ನವೀನ್ ಎಂಬ ಯುವಕನನ್ನು ಶಿಲ್ಪಾ ಪ್ರೀತಿಸುತ್ತಿದ್ದಳು. ಶಿಗ್ಗಾವಿಯ ಫರ್ನಿಚರ್ ಅಂಗಡಿಯಲ್ಲಿ ನವೀನ್ ಕೆಲಸ ಮಾಡುತ್ತಿದ್ದ. ಈ ವೇಳೆ ಶಿಲ್ಪಾಗೆ ಕರೆ ಮಾಡಿ ಮುಸ್ಲಿಂ ವ್ಯಕ್ತಿ ಟಾರ್ಚರ್ ನೀಡಿದ್ದ ಎಂಬ ಆರೋಪ ಕೇಳಿ ಬಂದಿದ್ದು, ನವೀನ್ ಕೆಲಸ ಮಾಡುತ್ತಿದ್ದ ಅಂಗಡಿ ಮಾಲೀಕನೇ ಶಿಲ್ಪಾಗೆ ಕಿರುಕುಳ ನೀಡುತ್ತಿದ್ದ. ಕಳೆದ ಮೂರು ವರ್ಷಗಳಿಂದ ಶಿಲ್ಪಾ…
ತುಮಕೂರು : ರಾಜ್ಯದ ಜನರು ಆರ್ಥಿಕವಾಗಿ ಸಬಲರಾಗಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಿದ್ದೇವೆ. ಆರ್ಥಿಕವಾಗಿ, ಸಮಾಜಕವಾಗಿ ಶಕ್ತಿ ಬಂದರೆ, ಸಮಾನತೆ ಬರಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ತುಮಕೂರಿನಲ್ಲಿ ಕುರುಬ ಸಾಹಿತಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಸಬಲರಾಗಲು ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಆರ್ಥಿಕವಾಗಿ ಸಮಾಜಕವಾಗಿ ಶಕ್ತಿ ಬಂದರೆ, ಸಮಾನತೆ ಬರಲು ಸಾಧ್ಯವಾಗುತ್ತದೆ ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಇದು ದೊಡ್ಡ ತಪ್ಪು ಅಂತ ಮಾತನಾಡುತ್ತಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಎಷ್ಟು ಉಪಯೋಗ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಧರ್ಮಸ್ಥಳದ ಹೆಗ್ಡೆ ಅವರು ನನಗೆ ಪತ್ರ ಬರೆದಿದ್ದರು. ದೇವಾಲಯಕ್ಕೆ ಬರುವ ಸಂಖ್ಯೆ ಹೆಚ್ಚಾಗಿದೆ ಅಂತ ಪತ್ರ ಬರೆದಿದ್ದರು 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಿದ್ದೇನೆ. ಹಿಂದುಳಿದವರು ಜಾರಿ ಸಮಾವೇಶ ಮಾಡಲಿ ಮುಂದುವರೆಯವರು ಮಾಡಬಾರದು ಅಂತ ಲೋಹಿಯಾ ಹೇಳುತ್ತಿದ್ದರು.ಇದೆಲ್ಲ ಚಿಂತನೆ ಮಾಡಬೇಕು ನನಗೆ ಗೊತ್ತಿರುವ ವಿಚಾರ ಹೇಳಿದ್ದೇನೆ. ಇದರಿಂದ ಕೆಲವರಿಗೆ ನೋವಾದರೆ ನಾನು ಏನು ಮಾಡುವುದಕ್ಕೆ…
ಮಂಡ್ಯ : ಮಂಡ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ದುಷ್ಕರ್ಮಿಗಳು ತೋಟದ ಮನೆಗೆ ನುಗ್ಗಿ ವೃದ್ಧ ದಂಪತಿ ಮೇಲೆ ಹಲ್ಲೆಗೈದು, ಬಳಿಕ ದರೋಡೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನಲ್ಲಿ ನಡೆದಿದೆ. ದಂಪತಿ ಮೇಲೆ ಹಲ್ಲೆಗೈದು ಮನೆಯಲ್ಲಿದ್ದ ಸುಮಾರು 80 ಗ್ರಾಂ ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಲ್ಲಿಗೊಳಗಾದ ರಾಮೇಗೌಡ ಮತ್ತು ನಿಂಗಮ್ಮಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನರಾಯಪಟ್ಟಣ ಖಾಸಗಿ ಆಸ್ಪತ್ರೆಯಲ್ಲಿ ವಿರುದ್ಧ ದಂಪತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮಧ್ಯಪ್ರದೇಶ : ಇತ್ತೀಚಿಗೆ ಎಲ್ಲೆಡೆ ಈ ಒಂದು ಅಕ್ರಮ ಸಂಬಂಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದರಿಂದ ಅನೇಕ ಜೀವಗಳು ಬಲಿಯಾಗುತ್ತಿದ್ದು ಮಧ್ಯಪ್ರದೇಶದಲ್ಲಿ ಇದೆ ಅಕ್ರಮ ಸಂಬಂಧ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಪತಿರಾಯ ಪತ್ನಿಯ ಪ್ರಿಯಕರನ ಜನನಾಂಗ ಕತ್ತರಿಸಿ ನೇರವಾಗಿ ಪೊಲೀಸ್ ಠಾಣೆಗೆ ತಂದಿರುವ ಘಟನೆ ವರದಿಯಾಗಿದೆ. ಹೌದು ಪತ್ನಿಯ ಬಾಯ್ ಫ್ರೆಂಡ್ ನ ಜನನಾಂಗ ಕತ್ತರಿಸಿ ಪತಿ ಠಾಣೆಗೆ ಬಂದಿದ್ದಾನೆ. ಮಧ್ಯ ಪ್ರದೇಶದ ಇಂದೋರನ ದೆಹರಿಯ ಗ್ರಾಮದಲ್ಲಿ ಈ ಒಂದು ಬೆಚ್ಚಿಬಿಳಿಸುವ ಘಟನೆ ನಡೆದಿದ್ದು, ಕತ್ತರಿಸಿದ ಜನನಾಂಗವನ್ನು ಆರೋಪಿ ಪೊಲೀಸ್ ಠಾಣೆಗೆ ತಂದಿದ್ದಾನೆ. ಈಶ್ವರ್ ಸಿಂಗ್ ಎಂಬಾತನ ಜನಾಂಗ ಕತ್ತರಿಸಿದ ಕಾಲುಸಿಂಗ್ ನೇರವಾಗಿ ಪೊಲೀಸ್ ಠಾಣೆಗೆ ತಂದಿದ್ದಾನೆ. ಈಶ್ವರ್ ಸಿಂಗ್ ಹಾಗೂ ಕಾಲು ಸಿಂಗ್ ಪದ್ಯ ನಡುವೆ ಅಕ್ರಮ ಸಂಬಂಧ ವಿಷಯ ತಿಳಿದು ಕಾಲುಸಿಂಗ್ ಈ ಒಂದು ಕೃತ್ಯ ಎಸಗಿದ್ದಾನೆ. ಬಲಿಯಾದ ವ್ಯಕ್ತಿಯನ್ನು ಅಗರ್ ಮಾಲ್ವಾ ಜಿಲ್ಲೆಯ ನಾಥ್ ಡೆಹ್ರಿಯಾ ಗ್ರಾಮದ ಈಶ್ವರ್ ಸಿಂಗ್ ಸಿಸೋಡಿಯಾ (35) ಎಂದು…
ಚಂಡೀಗಢ : ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇರೆಗೆ ಜಾಟ್ ಚಲನಚಿತ್ರದ ನಾಯಕ ಸನ್ನಿ ಡಿಯೋಲ್ ಸೇರಿದಂತೆ ಒಟ್ಟು 7 ಜನರ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ. ಹೌದು ಬಾಲಿವುಡ್ ನಟ ಸನ್ನಿ ಡಿಯೋಲ್ ನಟನೆಯ ‘ಜಾಟ್’ ಸಿನಿಮಾಗೆ ಕಾನೂನು ಸಂಕಷ್ಟ ಎದುರಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ‘ಜಾಟ್’ ಚಿತ್ರತಂಡದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಭಾರತೀಯ ನ್ಯಾಯ ಸಂಹಿತಾ 299ರ ಸೆಕ್ಷನ್ ಅಡಿಯಲ್ಲಿ ನಟ ಸನ್ನಿ ಡಿಯೋಲ್, ರಣದೀಪ್ ಹೂಡಾ (Randeep Hooda), ವಿನೀತ್ ಕುಮಾರ್ ಸಿಂಗ್, ಡೈರೆಕ್ಟರ್ ಗೋಪಿಚಂದ್ ಮಲಿನೇನಿ, ನಿರ್ಮಾಪಕರಾದ ಟಿ.ಜಿ ವಿಶ್ವ ಪ್ರಸಾದ್, ನವೀನ್ ಯೆರ್ನೇನಿ, ವೈ ರವಿಶಂಕರ್ ವಿರುದ್ಧ ಜಲಂಧರ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 299 (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಜಲಂಧರ್ ಪೊಲೀಸರು ಬುಧವಾರ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.…
ಬೆಂಗಳೂರು : ನಿನ್ನೆ ನಡೆದ ಸಿಇಟಿ ಪರೀಕ್ಷೆಯಲ್ಲಿ ಬೀದರ್ ಸುಚಿವೃತ ಕುಲಕರಣಿ ಎನ್ನುವ ವಿದ್ಯಾರ್ಥಿಗೆ ಪರೀಕ್ಷೆ ಬರೆಯುವ ವೇಳೆ ಜನಿವಾರ ತೆಗೆಸಿದ್ದು, ಇನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಕೂಡ ಅಂತ ಜನಿವಾರ ಘಟನೆ ನಡೆದಿದೆ. ಇವೆರಡು ಘಟನೆಗಳು ಇದೀಗ ಬ್ರಾಹ್ಮಣ ಸಮಾಜದವರನ್ನು ಕೆರಳಿಸಿದ್ದು, ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೆ ವಿಚಾರವಾಗಿ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದು, ಸಿಇಟಿ ಪರೀಕ್ಷಾ ವೇಳೆ ಕೆಲವು ನಿಯಮ ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಇರುತ್ತದೆ. ಅದನ್ನು ಪಾಲಿಸಬೇಕು ಆದರೆ ಜನಿವಾರ ತಗಿಯಬೇಕೆಂಬ ನಿಯಮ ಇಲ್ಲ ಜನಿವಾರ ಹಾಕಬಾರದು ಎಂದು ನಾವು ಸೂಚನೆ ಕೊಟ್ಟಿಲ್ಲ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಯ ಮುನ್ನ ಏನು ನಿಯಮ ಇರುತ್ತದೆ ಅಭ್ಯರ್ಥಿಗಳು ಅವೆಲ್ಲ ನಿಯಮಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿರುತ್ತೇವೆ. ಆದರೆ ಜನಿವಾರ ತೆಗೆಯಬೇಕು ಲಿಂಗದಕಾಯಿ ತೆಗೆಯಬೇಕು ಎಂಬ ನಿಯಮ ಎಲ್ಲಿಯೂ…
ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಹಣವನ್ನು ಸಂಪಾದನೆ ಮಾಡಬೇಕು ನಮ್ಮ ಆಸೆಗಳನ್ನು ಈಡೇರಿಸಿಕೊಳ್ಳಬೇಕು ಎಂಬ ಕನಸನ್ನು ಇಟ್ಟು ಕೊಂಡಿರುತ್ತಾರೆ. ಆದರೆ ಕೆಲವೊಂದಷ್ಟು ಜನರಿಗೆ ಇದು ಸಾಧ್ಯವಾಗುವುದಿಲ್ಲ ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರು ಒಂದಲ ಒಂದು ರೀತಿಯಾಗಿ ಹಣ ಖರ್ಚಾಗುತ್ತಿರುತ್ತದೆ ಹಾಗೂ ಇನ್ನೂ ಕೆಲವೊಂದಷ್ಟು ಜನರು ಎಷ್ಟೇ ಪ್ರಯತ್ನ ಪಟ್ಟರು ಅತಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಈ ಒಂದು ಪರಿಹಾರವನ್ನು ಮಾಡಿಕೊಳ್ಳುವು ದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಅದೇನೆಂದು ನೋಡುವುದಾದರೆ 2 ರಿಂದ 4 ಲವಂಗವನ್ನು ಮಲ್ಲಿಗೆ ಎಣ್ಣೆಯಲ್ಲಿ ಹಾಕಿ ಆಂಜನೇಯನ ಮುಂದೆ ದೀಪವನ್ನು ಹಚ್ಚುವುದರಿಂದ ಅಲ್ಲಿ ನಿಮ್ಮ ಕೋರಿಕೆಗಳನ್ನು ಹೇಳಿಕೊಳ್ಳುವುದರ ಮೂಲಕ ದೀಪ ಹಚ್ಚಬೇಕು ಈ ರೀತಿ ಮಾಡುವುದರಿಂದ ನೀವು ಅಂತಹ ಒಂದು ಸಂಕಷ್ಟದಿಂದ ಪಾರಾಗಬಹುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು…
ಕಲಬುರ್ಗಿ : ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜನಾಕ್ರೋಶ ಯಾತ್ರೆ ಕೈಗೊಂಡಿದ್ದು, ಇಂದು ಕಲ್ಬುರ್ಗಿಯಲ್ಲಿ ಜನಾಕ್ರೋಶ ಯಾತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಚಲನೆ ನೀಡಿದರು. ಇದೆ ವೇಳೆ ಎನ್ ರವಿಕುಮಾರ್ ಅವರು ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಚಿವರ ನೇತೃತ್ವದಲ್ಲಿ ಮರಳು ಮಾಫಿಯಾ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಮರಳು ಮಾಫಿಯ ನಡೆಯುತ್ತಿದೆ. ಚಿತ್ತಾಪುರದಲ್ಲಿ ದೊಡ್ಡ ಮಟ್ಟದ ಮರಳು ಮಾಫಿಯ ನಡೆಯುತ್ತಿದೆ. ಅಲ್ಲಿ ಸರ್ಕಾರಿ ಸಂಸ್ಥೆಗೆ ಮರಳುಗಾರಿಕೆ ಅನುಮತಿ ನೀಡಿತ್ತು. ಆದರೆ ಅಕ್ರಮವನ್ನು ದಾರಿಗೆ ನಡೆಯುತ್ತಿದೆ. ಅಕ್ರಮ ಮರಳುಗಾರಿಕೆ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಕಾಂಗ್ರೆಸ್ನವರು ಧಿಕ್ಕಾರ ಕೂಗಿದರೆ ನಾವೇನು ಓಡಿ ಹೋಗಲ್ಲ. ನಮ್ಮ ಹೋರಾಟವನ್ನು ಧಾರ್ಮಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಐಟಿವಿಟಿ ಯುವರ್ ಪ್ರಿಯಾಂಕ್ ಖರ್ಗೆ ವಿತಂಡ ವಾದ ಮಾಡದೆ ಈ ಭಾಗದ ಸಂಪತ್ತು ಉಳಿಸುವ ಕೆಲಸ ಮಾಡಲಿ ಎಂದು ಕಲ್ಬುರ್ಗಿಯಲ್ಲಿ ಬಿಜೆಪಿ ಎಂಎಲ್ಸಿ…














