Author: kannadanewsnow05

ಪಣಜಿ: 4 ವರ್ಷದ ಪುತ್ರನನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ ಬಿದ್ದ ಸಿಇಓ ಸುಚನಾ ಸೇಠ್‌ ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ನಾನೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಗೋವಾ ಪೊಲೀಸರ ವಿಚಾರಣೆಯ ವೇಳೆ ಮಗುವನ್ನು ತಾನೇ ಕೊಂದಿರುವುದಾಗಿ ಆಕೆ ಹೇಳಿದ್ದಾಳೆ. ಅಲ್ಲದೆ ಕಾರಣವನ್ನು ಕೂಡ ಸುಚನಾ ವಿವರಿಸಿದ್ದಾಳೆ. ಭಾನುವಾರ ತಂದೆ ಮಗುವಿಗೆ ಪದೇ ಪದೇ ಕರೆ ಮಾಡುತ್ತಿದ್ದರು. ಅಲ್ಲದೆ ಮಗು ಜೊತೆ ಮಾತನಾಡುವುದಕ್ಕೆ ವಿಡಿಯೋ ಕಾಲ್ ಮಾಡಿದ್ರು. ಆಗ ಮಗು ಮಲಗಿದೆ ಎಂದು ಪತ್ನಿಸುಚನಪತಿಗೆ ತಿಳಿಸಿದ್ದಾಳೆ ತಂದೆ ಜೊತೆ ಮಗು ಮಾತನಾಡಿಸೋಕೆ ಸುಚನಗೆ ಇಷ್ಟವಿರಲಿಲ್ಲ ಹೀಗಿದ್ದರೂ ತಂದೆ ಮಗುವಿನ ಜೊತೆ ಮಾತನಾಡಲು ಪದೇಪದೇ ಕಾಲ್ ಮಾಡಿದ್ರು. ವಾರಕ್ಕೊಮ್ಮೆ ಪತಿ ವೆಂಕಟರಮಣನಿಗೆ ಮಗುವನ್ನ ವಿಡೀಯೋ ಕಾಲ್ ಮೂಲಕ ತೋರಿಸಬೇಕಿತ್ತು. ಆದರೆ ಗಂಡನಿಗೆ ಮಗುವನ್ನು ತೋರಿಸುವುದಕ್ಕೆ ಇಷ್ಟ ಇರಲಿಲ್ಲ. ನನ್ನ ಮಗು ಕಂಡರೆ ನನಗೂ ಕೂಡ ಬಹಳ ಪ್ರೀತಿ.ಸೌಂಡ್ ಆಗುತ್ತಿದೆ ಮಲಗು ಅಂತ ಮಗುವಿಗೆ…

Read More

ಬೆಂಗಳೂರು : ಮಾಡಿರುವಂತಹ ಸಾಲವನ್ನು ತೀರಿಸಲಾಗದೆ ಇರುವುದರಿಂದ ಬ್ಯಾಂಕ್ ಜಮೀನನ್ನು ಹರಾಜು ಹಾಕಿದ್ದರಿಂದ ದಂಪತಿಗಳಿಬ್ಬರ ಹೈಡ್ರಾಮ ನಡೆದಿದ್ದು ವಿಧಾನಸೌಧದ ಮುಂಭಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಂಕಿನಿಂದ ಸಾಲ ಪಡೆದಿದ್ದ ಮಹಿಳೆಯಿಂದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಧಾನಸೌಧ ಮುಂಭಾಗದಲ್ಲಿ ನಡೆದಿದೆ. ಸಾಲ ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ಜಮೀನು ಹರಾಜು ಹಾಕಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯ ವಿಧಾನಸೌಧ ಮುಂಭಾಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಧಾನಸೌಧ ಮುಂಭಾಗವೇ ಸೀಮೆಎಣ್ಣೆ ಸುರಿದುಕೊಂಡು ಜಯನಗರದ ಶಾಯಿಸ್ತಾ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬ್ಯಾಂಕ್ನಿಂದ ದಂಪತಿಗಳು ಸಾಲವನ್ನು ಪಡೆದಿದ್ದರು. ಸಾಲ ಪಾವತಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್ ಜಮೀನು ಹರಾಜು ಹಾಕಿತ್ತು ಈ ಹಿನ್ನೆಲೆಯಲ್ಲಿ ದಂಪತಿಯು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಧಾನಸೌಧ ಮುಂಭಾಗದಲ್ಲಿ ದಂಪತಿಗಳಿಬ್ಬರ ಹೈಡ್ರಾಮ ನಡೆದಿದ್ದು, ಬ್ಯಾಂಕ್ ಒಂದರಿಂದ ಸಾಲ ಪಡೆದಿದ್ದು ಅದನ್ನು ತೀರಿಸಲಾಗದೆ ಇದ್ದಿದ್ದರಿಂದ ಜಮೀನನ್ನು ಬ್ಯಾಂಕ್ ಹರಾಜು ಹಾಕಿದೆ ಇದರಿಂದ ವಿಧಾನಸೌಧ ಮುಂಭಾಗವೇ ದಂಪತಿಯು ಆತ್ಮಹತ್ಯೆಗೆ ಎದ್ದಿಸಿರುವ ಘಟನೆ ನಡೆದಿದೆ.ಬೆಂಗಳೂರಿನ ಜೆಜೆ ನಗರದ ದಂಪತಿಯಿಂದ ಸೀಮೆ ಎಣ್ಣೆ…

Read More

ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು ಯಾವ ಅಭ್ಯರ್ಥಿಗೆ ಯಾವ ಕ್ಷೇತ್ರದಲ್ಲಿ ಟಿಕೇಟಿ ನೀಡಿದರೆ ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿ ತೊಡಗಿವೆ ಇದರ ಮಧ್ಯ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ನಾನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂಬ ಅಭಿಪ್ರಾಯಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದುಕೊಂಡಿದ್ದೆ, ಸದ್ಯ ನಾನು ಸ್ಪರ್ಧೆ ಮಾಡಬಾರದೆಂದು ಅಭಿಪ್ರಾಯಕ್ಕೆ ಬಂದಿದ್ದೇನೆ. ಹಲವೆಡೆ ಸಚಿವರ ಸ್ಪರ್ಧೆ ಅನಿವಾರ್ಯತೆ ಇದೆ ಅಂತ ತಿಳಿಸುತ್ತಾರೆ.ನನ್ನ ಹೆಸರು ಬಂದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು. ಅಗತ್ಯವಿದ್ದರೆ ಸಚಿವರು ಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ.ಇನ್ನು ಯಾವ ಕ್ಷೇತ್ರಕ್ಕೂ ಅಭ್ಯರ್ಥಿ ಫೈನಲ್ ಆಗಿಲ್ಲ.ಶಿವಮೊಗ್ಗ ಕ್ಷೇತ್ರಕ್ಕೆ ಮಾತ್ರ ಕೆಪಿಸಿಸಿ ಅಧ್ಯಕ್ಷರು ಅಭ್ಯರ್ಥಿ ಹೇಳಿದ್ದಾರೆ. ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರನ್ನು ಕಣಕ್ಕೆ ಇಳಿಸುತ್ತೇವೆ ಎಂದು ಹೇಳಿದ್ದಾರೆ.ಅದು ಫೈನಲ್ ಆಗಿರಬಹುದೇನೋ ಗೊತ್ತಿಲ್ಲ ಎಂದು ಸಚಿವ ಕೆ ಎನ್ ರಾಜಣ್ಣ…

Read More

ಬೆಂಗಳೂರು : ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆಯುವ ಗಣರಾಜ್ಯೋತ್ಸವ ದಿನದಂದು ಕರ್ನಾಟಕದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ನಿರಾಕರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿ ಬೇರೆ ರಾಜ್ಯಗಳಿಗೂ ಕೂಡ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ಸಿಗಲಿ ಎಂದು ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಟ್ಯಾಬ್ಲೋ ಕಡೆಗಣನೇ ವಿಚಾರವಾಗಿ ಪ್ರತಿಕ್ರಿಯಿಸಿ, ಈ ನಾಡಿನ ನೆಲ ಜಲದ ಬಗ್ಗೆ ಕಾಳಜಿ ಇಲ್ಲ.ಬೆಳಗಾವಿ ಕುರಿತ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ಕೊಡಲಿ ಎಂದು ಬೆಂಗಳೂರಿನಲ್ಲಿ ಬಿಜೆಪಿ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದ ಶಬ್ದ ಚಿತ್ರ ಪ್ರದರ್ಶನ ನಿರಾಕರಣೆ ವಿಚಾರದಲ್ಲಿ ಕೇಂದ್ರಕ್ಕೆ ಯಾವುದೇ ದುರುದ್ದೇಶ ಇಲ್ಲ. ಕರ್ನಾಟಕ ಗೋವಾ ಸೇರಿ ಕೆಲವು ರಾಜ್ಯಗಳಿಗೆ ಅವಕಾಶ ಸಿಕ್ಕಿಲ್ಲ.ಬೇರೆ ರಾಜ್ಯಗಳಿಗೆ ಅವಕಾಶ ಸಿಗಲಿ ಅಂತ ಅಷ್ಟೇ ಈ ರೀತಿ ನಿರ್ಧಾರ ತೆಗೆದುಕೊಳ್ಳಲಾಗಿದೆ…

Read More

ಬೆಂಗಳೂರು : ಜನವರಿ 22 ರಂದು ರಾಮಮಂದಿರ ಉದ್ಘಾಟನೆಯಾಗಲಿದೆ ಮತ್ತು ಅಂದೇ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತದೆ. ಈ ಸುಸಂದರ್ಭವನ್ನು ಕಣ್ತುಂಬಿಕೊಳ್ಳಲು ಅಸಂಖ್ಯ ಜನರು ಕಾದು ಕುಳಿತಿದ್ದಾರೆ. ಅಯೋಧ್ಯೆಗೆ ತೆರಳಬೇಕು ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ದರ್ಶನ ಪಡೆಯಬೇಕು ಅಂತ ಅನೇಕ ಭಕ್ತರ ಆಸೆಯಾಗಿದೆ. ಹೀಗೆ ಕರ್ನಾಟಕದಿಂದ ಅಯೋಧ್ಯೆಗೆ ಹೋಗುವ ಭಕ್ತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಯೋಧ್ಯೆಯಲ್ಲಿ ಕನ್ನಡಿಗರಿಗಾಗಿ ಕರ್ನಾಟಕ ಯಾತ್ರಿ ನಿವಾಸ ತಲೆ ಎತ್ತಲಿದೆ. ಹೌದು ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು ಅಯೋಧ್ಯೆಗೆ ಆಗಮಿಸಲಿದ್ದು, ಇವರಿಗಾಗಿ ವಸತಿ, ಊಟದ ವ್ಯವಸ್ಥೆಗಾಗಿ ಅತಿಥಿ ಗೃಹ ನಿರ್ಮಾಣ ಮಾಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕರ್ನಾಟಕ ಮುಜರಾಯಿ ಇಲಾಖೆ ಪತ್ರ ಬರೆದಿದೆ. ರಾಜ್ಯದ ಮನವಿಗೆ ಉತ್ತರ ಪ್ರದೇಶ ಸರ್ಕಾರದ ಹೌಸಿಂಗ್ ಬೋರ್ಡ್ ಪ್ರತಿಕ್ರಿಯೆ ಪತ್ರ ಕಳುಹಿಸಿದೆ. ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹ ನಿರ್ಮಾಣಕ್ಕೆ ಬೇಕಾದ ಪೂರ್ವ ತಯಾರಿ ನಡೆಯುತ್ತಿದೆ. ಈ ಮೂಲಕ ರಾಜ್ಯದ ಪ್ರವಾಸಿಗರಿಗೆ ವಾಸ್ತವ ಹೂಡಲು ತೊಂದರೆ ಆಗದಂತೆ ಕ್ರಮ…

Read More

ಬೆಂಗಳೂರು : ವಿಚ್ಚೆದಿತ ಪತಿ ಜೊತೆಗೆ ಮಗು ಸೇರಬಾರದು ಎಂಬು ಉದ್ದೇಶದಿಂದ 4 ವರ್ಷದ ಕಂದಮ್ಮನನ್ನೇ ತಾಯಿ ಸುಚನಾ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ಮಗು ಚಿನ್ಮಯ್ ಅಂತ್ಯಕ್ರಿಯೆಯನ್ನು ತಂದೆ ವೆಂಕಟರಮಣ ಸಕಲ ವಿಧಿ ವಿಧಾನಗಳಿಂದ ನೆರವೇರಿಸಿದ್ದಾರೆ. ನಿನ್ನೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನೆರವೇರಿಸಲಾಗಿದ್ದು ನಂತರ ಮಧ್ಯರಾತ್ರಿ ಒಂದು ಮೂವತ್ತಕ್ಕೆ ಆಂಬುಲೆನ್ಸ್ ಮುಖಾಂತರ ಯಶವಂತಪುರದ ಬ್ರಿಗೇಡ್ ಗೇಟ್ ಬಳಿ ಇರುವ ವೆಂಕಟರಮಣ ನಿವಾಸಕ್ಕೆ ಮಗುವಿನ ಮೃತದೇಹ ರವಾನಿಸಲಾಗಿತ್ತು ಈ ವೇಳೆ ಮಗುವಿನ ತಂದೆ ವೆಂಕಟರಮಣ ಅವರು ಕಾರಿನಲ್ಲಿ ಆಂಬುಲೆನ್ಸ್ ಅನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಇದೀಗ ನಿವಾಸದಿಂದ ಎಂಬುಲೆನ್ಸ್ ಮುಖಾಂತರ ಹರೀಶ್ ಚಂದ್ರಘಾಟಿಗೆ ಯಶವಂತಪುರ ಅಪಾರ್ಟ್ಮೆಂಟ್ ಇಂದ ಮೃತ ದೇಹ ಶಿಫ್ಟ್ ಆಗಿದ್ದು ಚಿನ್ಮಯ್ ತಂದೆ ವೆಂಕಟರಮಣ ಅವರು ಸಕಲ ವಿಧಿ ವಿಧಾನಗಳಿಂದ ಮಗು ಚಿನ್ಮಯ್ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಈಗಾಗಲೇ ಆರು ದಿನಗಳವರೆಗೆ ಕೊಲೆ ಪಾತಕಿ ತಾಯಿ ಸುಚನಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ…

Read More

ಬೆಂಗಳೂರು : ವಿಚ್ಚೆದಿತ ಪತಿ ಜೊತೆಗೆ ಮಗು ಸೇರಬಾರದು ಎಂಬು ಉದ್ದೇಶದಿಂದ 4 ವರ್ಷದ ಕಂದಮ್ಮನನ್ನೇ ತಾಯಿಯೊಬ್ಬಳು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ಚಿನ್ಮಯ್ ಶವವನ್ನು ಅಂಬುಲೆನ್ಸ್ ನಲ್ಲಿ ಹರಿಶ್ಚಂದ್ರ ಘಾಟಿಗೆ ಯಶವಂತಪುರ ಅಪಾರ್ಟ್ಮೆಂಟ್ ಇಂದ ಶವ ಇದೀಗ ಶಿಫ್ಟ್ ಆಗಿದೆ. ನಿನ್ನೆ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನೆರವೇರಿಸಲಾಗಿದ್ದು ನಂತರ ಮಧ್ಯರಾತ್ರಿ ಒಂದು ಮೂವತ್ತಕ್ಕೆ ಆಂಬುಲೆನ್ಸ್ ಮುಖಾಂತರ ಯಶವಂತಪುರದ ಬ್ರಿಗೇಡ್ ಗೇಟ್ ಬಳಿ ಇರುವ ವೆಂಕಟರಮಣ ನಿವಾಸಕ್ಕೆ ಮಗುವಿನ ಮೃತದೇಹ ರವಾನಿಸಲಾಗಿತ್ತು ಈ ವೇಳೆ ಮಗುವಿನ ತಂದೆ ವೆಂಕಟರಮಣ ಅವರು ಕಾರಿನಲ್ಲಿ ಆಂಬುಲೆನ್ಸ್ ಅನ್ನು ಹಿಂಬಾಲಿಸಿಕೊಂಡು ಬಂದಿದ್ದರು. ಇದೀಗ ನಿವಾಸದಿಂದ ಎಂಬುಲೆನ್ಸ್ ಮುಖಾಂತರ ಹರೀಶ್ ಚಂದ್ರಘಾಟಿಗೆ ಯಶವಂತಪುರ ಅಪಾರ್ಟ್ಮೆಂಟ್ ಇಂದ ಮೃತ ದೇಹ ಶಿಫ್ಟ್ ಆಗಿದ್ದು ಕೆಲವೇ ಹೊತ್ತಿನಲ್ಲಿ ಬಾಲಕ ಚಿನ್ಮಯ್ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಆರು ದಿನಗಳವರೆಗೆ ಕೊಲೆ ಪಾತಗಿ ತಾಯಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ…

Read More

ಬೆಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಯಲಹಂಕದ ಖಾಸಗಿ ರೆಸಾರ್ಟ್ ನಲ್ಲಿ ಬಿಜೆಪಿ ಬೆಂಗಳೂರಿನಲ್ಲಿ ಕ್ಷೇತ್ರವಾರು ಅಭಿಪ್ರಾಯ ಸಂಗ್ರಹಿಸುತ್ತಿದ್ದೂ, ಯಲಹಂಕದ ಖಾಸಗಿ ರೆಸರ್ಟಲ್ಲಿ ಸಭೆ ನಡೆಯಲಿದೆ.ಇಂದು 13 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಬೀದರ್, ಕಲಬುರ್ಗಿ,ರಾಯಚೂರು, ಕೊಪ್ಪಳ, ಬಳ್ಳಾರಿ, ಮೈಸೂರು, ಚಾಮರಾಜನಗರ, ಮಂಡ್ಯ,ಹಾಸನ, ತುಮಕೂರು, ಚಿಕ್ಕಬಳ್ಳಾಪುರ,ಕೋಲಾರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ತಿಳಿದುಬಂದಿದೆ. ಜೆಡಿಎಸ್ ಗೆ ಬಿಟ್ಟುಕೊಡುವ ಸಂಭಾವ್ಯ ಕ್ಷೇತ್ರಗಳ ಬಗ್ಗೆಯೂ ಚರ್ಚಿಸಲಾಗುತ್ತಿದ್ದು ಕ್ಷೇತ್ರದಲ್ಲಿ ಇರುವ ವಾತಾವರಣ ಹಾಗೂ ಸಂಭಾವ್ಯ ಬಿಜೆಪಿ ಬಿಜೆಪಿ ಅಭ್ಯರ್ಥಿಗಳು ಹಾಗೂ ಜೆಡಿಎಸ್ ವತಿಗಿನ ಸಮನ್ವಯ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Read More

ಬೆಂಗಳೂರು : ಕಳೆದ ವರ್ಷ ಇಡೀ ದೇಶಾದ್ಯಂತ ಹಿಜಾಬ್ ಪ್ರಕರಣ ಭಾರಿ ಸಂಚಲನ ಸೃಷ್ಟಿಸಿತ್ತು. ಶಾಲಾ ಕಾಲೇಜುಗಳಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಆಗಮಿಸಬಾರದು ಎಂದು ಅನೇಕ ಹೋರಾಟ ಪ್ರತಿಭಟನೆಗಳು ನಡೆದಿದ್ದವು. ಅದೇ ರೀತಿಯಾಗಿ ಈಗ ಈ ವಸ್ತ್ರ ಸಂಹಿತೆ ದೇವಸ್ಥಾನಕ್ಕೂ ಕಾಲಿಟ್ಟಿದ್ದು,ಬೆಂಗಳೂರಲ್ಲಿ ಅರೆಬರೆ ಬಟ್ಟೆ ಹಾಕಿಕೊಂಡು ಅವರಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ ಎಂದು ನಿರ್ಬಂಧ ಹೇರಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಬೆಂಗಳೂರಿನ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ ಆರಂಭಿಸಿದ್ದು ಕರ್ನಾಟಕ ದೇವಸ್ಥಾನ ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘ ಅಭಿಯಾನ ಆರಂಭಿಸಿದೆ.ಮಧ್ಯಾಹ್ನ 12ಕ್ಕೆ ವಸ್ತ್ರ ಸಂಹಿತೆ ಬೋರ್ಡ್ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು ವಸಂತನಗರದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಾಲಯದಲ್ಲಿ ಇಂದು ಚಾಲನೆ ನೀಡಲಾಗುತ್ತದೆ. ದೇವಾಲಯಗಳಿಗೆ ಅರೆಬರೆ ಬಟ್ಟೆ ಧರಿಸಿ ಬರುವವರಿಗೆ ಪ್ರವೇಶ ನಿರ್ಬಂಧಿಸಬೇಕು.ಸ್ಕರ್ಟ್, ಮಿಡ್ಡಿ, ಹರಿದ ಜೀನ್ಸ್, ಶಾರ್ಟ್ಸ್ ಧರಿಸಿ ಬರುವವರಿಗೆ ನಿರ್ಬಂಧ ಹೇರಬೇಕು. ದರ್ಶನಕ್ಕೆ ಅವಕಾಶ ನೀಡದಂತೆ ಸಂಘವು ಆಗ್ರಹಿಸಿದೆ ಕರ್ನಾಟಕ ದೇವಸ್ಥಾನ ಮಠ ಧಾರ್ಮಿಕ ಸಂಸ್ಥೆಗಳ ಮಹಾಸಂಘ ಈ…

Read More

ಬೆಂಗಳೂರು : ಈ ಕಳ್ಳರಿಗೆ ರಸ್ತೆಯಲ್ಲಿ ಕಾರಿನಲ್ಲಿ ತೆರಳುವ ಟೆಕ್ಕಿಗಳೇ ಟಾರ್ಗೆಟ್. ಬೇಕು ಬೇಕಂತಲೇ ದ್ವಿಚಕ್ರ ವಾಹನಗಳನ್ನು ಅಡ್ಡ ಗಟ್ಟಿ ಬೈಕಿಗೆ ಗುದ್ದಿದ್ದೀರಿ ಎಂದು ಹಣ ವಸೂಲಿ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಇದೀಗ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ರಸ್ತೆಯಲ್ಲಿ ಹೋಗುತ್ತಿರುವ ಕಾರಿನಲ್ಲಿ ಹೋಗುತ್ತಿದ್ದ ಟೆಕ್ಕಿಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡಲು ಯತ್ನಿಸಿದ್ದ ಮೂವರನ್ನು ಬೆಂಗಳೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಚರಣ್ ಪಾಲ್ ಸಿಂಗ್ ಎಂಬುವರು ಭಾನುವಾರ ಸಂಜೆ ಸಹೋದ್ಯೋಗಿಗಳೊಂದಿಗೆ ಸರ್ಜಾಪುರ-ಅತ್ತಿಬೆಲೆ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ನಾಲ್ವರು ಕಾರಿಗೆ ಅಡ್ಡ ಹಾಕಿದ್ದಾರೆ. ಬಳಿಕ “ನಮ್ಮ ಬೈಕ್​ಗೆ ಡಿಕ್ಕಿ ಹೊಡೆದಿದ್ದೀರಿ ಹಣ ನೀಡಿ” ಎಂದು ಚರಣ್ ಪಾಲ್ ಸಿಂಗ್ ಅವರ ಬಳಿ ಬಂದಿದ್ದಾರೆ. ಚರಣ್​ ಪಾಲ್​ ಸಿಂಗ್​ ಅವರು ಕಾರಿನಲ್ಲೇ ಕೂತಿದ್ದು, “ನಾವು ಯಾವುದೇ ಅಪಘಾತ ಮಾಡಿಲ್ಲ” ಎಂದಿದ್ದಾರೆ. ನಂತರ ಚರಣ್ ಪಾಲ್ ಸಿಂಗ್ ಅವರು ಕಾರಿನ ಗಾಜುಗಳನ್ನು ಹಾಕಿದ್ದಾರೆ. ಅದಕ್ಕೆ ದುಷ್ಕರ್ಮಿಗಳು ಗಾಜು ಇಳಿಸುವಂತೆ ಹೇಳಿದ್ದಾರೆ. ಆದರೆ…

Read More