Subscribe to Updates
Get the latest creative news from FooBar about art, design and business.
Author: kannadanewsnow05
ದಾವಣಗೆರೆ : ಸದ್ಯ ಕರ್ನಾಟಕದಲ್ಲಿ ಒಂದು ಕಡೆ ಮೂರು ಕ್ಷೇತ್ರಗಳ ವಿಧಾನಸಭೆ ಉಪಚುನಾವಣೆ ಪ್ರಚಾರ ಬಲು ಜೋರಾಗಿದ್ದು ಮತ್ತೊಂದು ಕಡೆ ವಕ್ಫ್ ವಿವಾದ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಹಿಂದೂ ಮಠಗಳು ಆಯ್ತು ಸರ್ಕಾರಿ ಶಾಲೆಗಳು ಆಯ್ತು, ಸರ್ಕಾರಿ ಕಚೇರಿಗಳು ಸಹ ಆಯ್ತು ಇದೀಗ ದಾವಣಗೆರೆಯಲ್ಲಿ ಗೋಮಾಳದ ಜಾಗದ ಮೇಲೆ ವಕ್ಫ್ ಕಣ್ಣು ಬಿದ್ದಿದೆ. ಹೌದು ದಾವಣಗೆರೆ ಜಿಲ್ಲೆಯಲ್ಲಿ ಗೋಮಾಳ ಜಾಗದ ಮೇಲೆ ವಕ್ಫ್ ಕಣ್ಣು ಬಿದ್ದಿದೆ. ವಕ್ಫ್ ಬೋರ್ಡ್ ವಿರುದ್ಧ ನೀಲನಹಳ್ಳಿ ಗ್ರಾಮಸ್ಥರು ಇದೀಗ ಆಕ್ರೋಶ ಹೊರಹಾಕಿದ್ದಾರೆ. ದಾವಣಗೆರೆ ತಾಲೂಕಿನ ನೀಲನಹಳ್ಳಿ ಈ ಒಂದು ಘಟನೆ ಬೆಳಕಿಗೆ ಬಂದಿದೆ. 2020 ರ ಜನವರಿ 27 ರಂದು ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ದಾವಣಗೆರೆಯ ಎಸಿ ಆದೇಶ ಹಿನ್ನೆಲೆಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಲಾಗಿದೆ. ಹಾಗಾಗಿ ಈ ಕುರಿತು ಸೂಕ್ತವಾದಂತಹ ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಈ ಒಂದು ವಕ್ಫ್ ವಿವಾದದಿಂದ ಸಚಿವ ಜಮೀರ್ ಅಹ್ಮದ್ ಮುಜುಗರಕ್ಕೆ ಒಳಗಾಗಿದ್ದು…
ಮಂಗಳೂರು : ತಳ್ಳುಗಾಡಿಯ ಮೇಲೆ ವ್ಯಾಪಾರಿ ಒಬ್ಬರು ತರಕಾರಿ ಮಾರಾಟ ಮಾಡುತ್ತಿದ್ದರು. ಈ ವೇಳೆ ನೀರು ಚುಮುಕಿಸುವ ನೆಪದಲ್ಲಿ ತರಕಾರಿ ಮೇಲೆ ಉಗುಳಿರುವ ಘಟನೆ ಮಂಗಳೂರು ಜಿಲ್ಲೆಯ ಕಾರವಾರದ ಸಂಡೆ ಮಾರ್ಕೆಟ್ ನಲ್ಲಿ ಈ ಒಂದು ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ. ಹೌದು ತರಕಾರಿ ಮೇಲೆ ಉಗುಳುತ್ತಿರುವ ದೃಶ್ಯ ಇದೀಗ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಕಾರವಾರದ ಸಂಡೆ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ. ತರಕಾರಿ ವ್ಯಾಪಾರಿ ಅಬ್ದುಲ್ ಹಸನ್ ಸಾಬ್ ರಜಾಕ್ ವಿರುದ್ಧ ಈ ಒಂದು ಆರೋಪ ಕೇಳಿಬಂದಿದೆ. ತರಕಾರಿ ಮೇಲೆ ನೀರು ಹಾಕುತ್ತಾ ತರಕಾರಿ ವ್ಯಾಪಾರಿ ಉಗುಳಿದಿರುವ ಆರೋಪ ಕೇಳಿ ಬಂದಿದೆ. ಮೊಬೈಲ್ ನಲ್ಲಿ ಸ್ಥಳೀಯರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಹಲಾಲ್ ಮಾಡುತ್ತಿದ್ದೀಯ ಎಂದು ಆರೋಪಿಸಿದ್ದಾರೆ. ತರಕಾರಿ ವ್ಯಾಪಾರಿಯ ಈ ಒಂದು ನಡೆಯಗೆ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು : ಈಗಾಗಲೇ ರಾಜ್ಯ ಸರ್ಕಾರ ವಾಲ್ಮೀಕಿ, ಮುಡಾ ಹಾಗೂ ವಕ್ಫ್ ವಿವಾದದಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದು, ಇದರ ಬೆನ್ನಲ್ಲೇ ಗೃಹ ಇಲಾಖೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಬೆಂಗಳೂರಿನ ಎರಡು ಪೊಲೀಸ್ ಠಾಣೆಗಳಲ್ಲಿ ಕಳೆದ ಆರು ತಿಂಗಳಿನಿಂದ ಇನ್ಸ್ಪೆಕ್ಟರ್ ಗಳನ್ನೇ ನೇಮಿಸಿಲ್ಲ. ಹೌದು ಗೃಹ ಇಲಾಖೆಯಿಂದ ಮತ್ತೊಂದು ಎಡವಟ್ಟು ಆಗಿದ್ದು ಕಳೆದ 6 ತಿಂಗಳಿಂದ ಗಂಗಮ್ಮನ ಗುಡಿ ಠಾಣೆಗೆ ಇನ್ಸ್ಪೆಕ್ಟರ್ ನೇಮಕ ಮಾಡಿಲ್ಲ. 6 ತಿಂಗಳ ಹಿಂದೆ ಇನ್ಸ್ಪೆಕ್ಟರ್ ಸಿದ್ದೇಗೌಡ ನಿವೃತ್ತಿಯಾಗಿದ್ದಾರೆ. ಹಾಗಾಗಿ ಕಳೆದ 6 ತಿಂಗಳಿಂದ ಗಂಗಮ್ಮನ ಗುಡಿ ಠಾಣೆಗೆ ಇನ್ಸ್ಪೆಕ್ಟರ್ ನೇಮಿಸಿಲ್ಲ. ಅದೇ ರೀತಿಯಾಗಿ ಸೋಲದೇವನಹಳ್ಳಿ ಠಾಣೆಯಲ್ಲೂ ಕಳೆದ 3 ತಿಂಗಳಿನಿಂದ ಇನ್ಸ್ಪೆಕ್ಟರ್ ನೇಮಕವಾಗಿಲ್ಲ. 3 ತಿಂಗಳ ಹಿಂದೆಯೇ ಸೋಲದೇವನಹಳ್ಳಿಯ ಇನ್ಸ್ಪೆಕ್ಟರ್ ಹರಿಯಪ್ಪ ನಿವೃತ್ತಿಯಾಗಿದ್ದಾರೆ. ಇದುವರೆಗೂ ಎರಡು ಠಾಣೆಗಳಿಗೆ ಇನ್ಸ್ಪೆಕ್ಟರ್ ನೇಮಕ ಮಾಡಿಲ್ಲ. ಡ್ರಗ್ಸ್, ಆಸ್ತಿ ಕಲಹ ಸೇರಿ ಹಲವು ದೂರು ನೀಡಲು ಜನರು ಠಾಣೆಗಳಿಗೆ ಬರುತ್ತಿದ್ದಾರೆ.ಎರಡು ಠಾಣೆಗಳ ಕೆಳಹಂತದ ಅಧಿಕಾರಿಗಳಿಂದ ಉಡಾಫೆ ಉತ್ತರ ನೀಡುತ್ತಿರುವ ಆರೋಪ ಇದೀಗ…
ಕೊಪ್ಪಳ : ಸದ್ಯ ರಾಜ್ಯದಲ್ಲಿ ವಕ್ಫ್ ವಿವಾಹ ತೀವ್ರ ಸ್ವರೂಪ ಪಡೆದುಕೊಂಡಿದೆ ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡಿದ ನೋಟಿಸ್ ಪಡೆಯುವಂತೆ ಸೂಚನೆ ನೀಡಿದರು ಕೂಡ ಬಿಜೆಪಿ ನಾಯಕರು ಪ್ರತಿಭಟನೆ ಹೋರಾಟ ನಡೆಸಿದರು. ಇದೀಗ ಕಾಂಗ್ರೆಸ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಿಎಂ ಸಿದ್ದರಾಮಯ್ಯ ಮಾತ್ರ ನಮ್ಮ ನಾಯಕರು ಸೋನಿಯಾ, ರಾಹುಲ್ ಗಾಂಧಿ ಅವರನ್ನು ನಮ್ಮ ನಾಯಕರೆಂದು ಒಪ್ಪಿಕೊಂಡಿಲ್ಲ ಎಂದು ತಿಳಿಸಿದ್ದಾರೆ. ಕೊಪ್ಪಳ ನಗರದಲ್ಲಿ ನಿನ್ನೆ ಸಂಜೆ ನಡೆದ ಸ್ವತಂತ್ರ ಹೋರಾಟಗಾರರ ಜಯಂತಿ ಕಾರ್ಯಕ್ರಮದಲ್ಲಿ ಇಕ್ಬಾಲ್ ಅನ್ಸಾರಿ ಮಾತನಾಡಿ,ಸಿದ್ದರಾಮಯ್ಯ ಸಿಎಂ ಇರೋವರಗೆ ನಮ್ಮ ಮುಸ್ಲಿಂ ಸಮಾಜದವರು ಏನಾದ್ರು ಮಾಡಿಕೊಳ್ಳಬೇಕು. ಅವರ ನಂತರ ನಮಗೆ ಚೋಂಬೆ ಗತಿಯಾಗುತ್ತೆ ಎಂದು ಕಾಂಗ್ರೆಸ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿಕೆಯನ್ನು ನೀಡಿದ್ದಾರೆ. ಸಿದ್ದರಾಮಯ ಬಳಿ ಸಮಾಜದವರು ಆರು ತಿಂಗಳಿಗೊಮ್ಮೆ ಹೋಗಬೇಕು, ನೂರು ಕೋಟಿ ರೂ. ಅನುದಾನ ತಂದು, ಸಮಾಜದ ಕೆಲಸ ಮಾಡಬೇಕು. ನಾವು ನೀವು, ನಮ್ಮ ಸಮಾಜದವರು ಏನಾದ್ರು ಮಾಡಿಕೊಳ್ಳಬೇಕು. ನಂತರ ಚಂಬೇ ಗತಿಯಾಗುತ್ತದೆ ಎಂದು ಹೇಳಿದ್ದಾರೆ.…
ಮಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಅದರಲ್ಲಿ ಮಹಿಳೆಯರಿಗೆ ಪ್ರಮುಖವಾದಂತಹದ್ದು ಗೃಹಲಕ್ಷ್ಮಿ ಯೋಜನೆ. ಈಗಾಗಲೇ ಈ ಯೋಜನೆಯಿಂದ ರಾಜ್ಯದ ಹಲವು ಮಹಿಳೆಯರು ಸದುಪಯೋಗ ಪಡೆದುಕೊಂಡಿದ್ದು, ಇದೀಗ ಮಂಗಳೂರಿನಲ್ಲಿ ಪತಿಗೆ ಪತ್ನಿಯೊಬ್ಬರು ಗೃಹಲಕ್ಷ್ಮಿ ಯೋಜನೆಯಿಂದ ಬಂದಂತಹ ಹಣದಿಂದ ಸ್ಕೂಟಿ ಗಿಫ್ಟ್ ಕೊಟ್ಟಿದ್ದಾರೆ. ಹೌದು ಮಂಗಳೂರಿನ ಕೋಡಿಂಬಾಡಿ ಸಮೀಪದ ಶಾಂತಿನಗರ ನಿವಾಸಿ ಮಿಸ್ತ್ರಿಯಾ ಎಂಬವರು ತನ್ನ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಹಣದಿಂದ ಪತಿ ಸಲೀಂಗಾಗಿ ಸ್ಕೂಟರ್ ಖರೀದಿಸಿದ್ದಾರೆ. ಪೈಂಟರ್ ಆಗಿರುವ ಸಲೀಂ ನಿತ್ಯ ದೂರದ ಊರುಗಳಿಗೆ ಪೈಂಟಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಹೀಗಾಗಿ ಪತಿ ಕೆಲಸಕ್ಕೆ ತೆರಳಲು ಪತ್ನಿ ಮಿಸ್ತ್ರಿಯಾರ ಗೃಹಲಕ್ಷ್ಮಿ ಹಣದಿಂದ ಸ್ಕೂಟರ್ ಕೊಡಿಸಿದ್ದಾರೆ. ಇದೆ ಸಂದರ್ಭದಲ್ಲಿ ಹೊಸ ಸ್ಕೂಟಿಯೊಂದಿಗೆ ಸಲೀಂ ತನ್ನ ಪತ್ನಿ ನೀಡಿದ ಸ್ಕೂಟರ್‌ನೊಂದಿಗೆ ಶಾಸಕರನ್ನು ಭೇಟಿಯಾದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಗೃಹಲಕ್ಷ್ಮೀ ಹಣದಿಂದ ತನ್ನ ಬಾಳು ಬೆಳಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಶಾಸಕರು…
ಬೆಳಗಾವಿ : ಬೆಳಗಾವಿಯ ಮರಾಠಾ ರೆಜಿಮೆಂಟ್ನಲ್ಲಿ ಇಂದು ನಡೆದ ಆರ್ಮಿ ಸೆಲೆಕ್ಷನ್ ಓಪನ್ ರ‍್ಯಾಲಿಯಲ್ಲಿ ನೂಕುನುಗ್ಗಲು ಉಂಟಾಯಿತು. ಇವಳೇ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದಿಂದ ಅರ್ಜಿ ಹಾಕಿದ್ದ ಅಭ್ಯರ್ಥಿಗಳ ಆಯ್ಕೆಗೆ ಇಂದು ಆಹ್ವಾನಿಸಲಾಗಿದ್ದು, ಓಪನ್ ರ‍್ಯಾಲಿಯಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಯುವಕರು ಭಾಗಿಯಾಗಿದ್ದರು.ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರದಿಂದಲೂ ಯುವಕರು ಆಗಮಿಸಿದ್ದು, ಬೆಳಿಗ್ಗೆಯಿಂದಲೂ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ವೇಳೆ ನೂಕಾಟ ತಳ್ಳಾಟ ನಡೆದು, ಕೆಲ ಯುವಕರು ಬಿದ್ದು ಗಾಯಗೊಂಡಿದ್ದಾರೆ. ಹುಬ್ಬಳ್ಳಿಯ ಅಲ್ಲಾಭಕ್ಷ ಯರಗಟ್ಟಿ ಹಾಗೂ ಗೊಕಾಕ್ ತಾಲೂಕಿನ ಬೆಟಗೇರಿ ಗ್ರಾಮದ ಪ್ರವೀಣ್ ಮಕಾಳೆ ಎಂಬುವವರು ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಾಗೂ ಸೈನಿಕರು ಯುವಕರಿಗೆ ಲಾಠಿ ರುಚಿ ತೋರಿಸಿದರು. ಲಾಠಿ ಬೀಸುತ್ತಿದ್ದಂತೆ ಯುವಕರು ಚೆಲ್ಲಾಪಿಲ್ಲಿಯಾಗಿ ಓಡಿದರು. ನಂತರ ಯುವಕರನ್ನು ಪೊಲೀಸರು, ಮಿಲಿಟರಿ ಸಿಬ್ಬಂದಿ ಸಾಲಾಗಿ ನಿಲ್ಲಿಸಿದರು.
ಬೆಂಗಳೂರು : ಮನೆ ಬಾಡಿಗೆ ಕೇಳುವ ನೆಪದಲ್ಲಿ ಸರ ಎಗರಿಸುತ್ತಿದ್ದ ದಂಪತಿ ಅರೆಸ್ಟ್ ಆಗಿದ್ದಾರೆ. ಪತಿ ಜೀವನ್ ಅಲಿಯಾಸ್ ಜೀವ (30)ಪತ್ನಿ ಆಶಾ (30) ಇಬ್ಬರ ಬಂಧನವಾಗಿದೆ. ಬಂಧಿತ ದಂಪತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಮೂಲದವರು ಎಂದು ತಿಳಿದುಬಂದಿದೆ. 17 ಲಕ್ಷ ಮೌಲ್ಯದ 240 ಗ್ರಾಮ್ ಚೆನ್ನಾಭರಣ 90 ಗ್ರಾಂ ಬೆಳ್ಳಿಯನ್ನು ಅವರಿಂದ ಜಪ್ತಿ ಮಾಡಿಕೊಳ್ಳಲಾಗಿದೆ. ದರೋಡೆ ಕೊಲೆ, ಕೊಲೆ ಯತ್ನ ಸೇರಿದಂತೆ ಹಲವು ಕೇಸ್ ಇವರ ಮೇಲೆ ದಾಖಲಾಗಿದ್ದವು. ಬಂಧಿತ ದಂಪತಿಯ ವಿರುದ್ಧ ಒಟ್ಟು 15 ಪ್ರಕರಣಗಳು ದಾಖಲಾಗಿದ್ದವು. ದರೋಡೆ ಸ್ಟೋರಿ ಕೇಳಿ ಪೊಲೀಸರೆ ಶಾಕ್! 2024 ಫೆಬ್ರವರಿ 13 ರಂದು ಲಕ್ಷ್ಮಿಪುರದಲ್ಲಿ ವೃದ್ದೆ ಭಾಗ್ಯಮ್ಮ ಎನ್ನುವ ಕೊಲೆಯಾಗಿತ್ತು. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರದಲ್ಲಿ ಈ ಒಂದು ಕೊಲೆ ಆಗಿತ್ತು. ಕೊಲೆಯ ಬಳಿಕ ಸಂಪ್ನಲ್ಲಿ ಮೃತ ದೇಹ ಹಾಕಿ ಈ ಇಬ್ಬರು ದಂಪತಿಗಳು ಪರಾರಿಯಾಗಿದ್ದರು. ಕೇಂದ್ರವಲಯ ಐಜಿಪಿ ಲಾಬೂರಾಮ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಾವರೆಕೆರೆ ಇನ್ಸ್ಪೆಕ್ಟರ್ ಮೋಹನ್…
ಹಾವೇರಿ : ಶಾಲೆಯ ಬಳಿ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರಿನ ತೊಟ್ಟಿಗೆ ಬಾಲಕನೊಬ್ಬ ಬಿದ್ದು ಮುಳುಗಿ ದಾರುಣವಾಗಿ ಸಾವನಪ್ಪಿರುವ ಘಟನೆ ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಪ್ರಜ್ವಲ್ (9) ಎಂದು ತಿಳಿದುಬಂದಿದೆ. ನಿನ್ನೆ ಸಾಯಂಕಾಲ ಶಾಲೆ ಮುಗಿದ ತಕ್ಷಣ ಪ್ರಜ್ವಲ್ ಮನೆಗೆ ಬಂದು ಬಳಿಕ ಹೊರಗಡೆ ಆಟ ಆಡಲು ತೆರಳಿದ್ದಾನೆ.ಈ ವೇಳೆ ಶಾಲೆಯ ಬಳಿ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರಿನ ತೊಟ್ಟಿಗೆ ಬಿದ್ದಿದ್ದಾನೆ.ಸಂಜೆಯಾದರೂ ಪ್ರಜ್ವಲ್ ಮನೆಗೆ ಬಾರದೇ ಇರುವುದನ್ನು ಗಮನಿಸಿದ ಮನೆಯವರು ಗಾಬರಿಗೊಂಡು ಎಲ್ಲಾ ಕಡೆ ಹುಡುಕಾಡಿದ್ದಾರೆ. ಕೊನೆಗೆ ನೀರಿನ ತೊಟ್ಟಿಯಲ್ಲಿ ಪ್ರಜ್ವಲ್ ಬಿದ್ದು ಮುಳುಗಿ ಸಾವನ್ನಪ್ಪಿರುವುದು ಗೊತ್ತಾಗಿದೆ.ಬಾಲಕನ ಮೃತದೇಹವನ್ನು ನೀರಿನ ತೊಟ್ಟಿಯಿಂದ ಮೇಲಕ್ಕೆತ್ತಿ ರಟ್ಟೀಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ದಾಖಲಿಸಲಾಗಿದೆ.ಘಟನೆ ಕುರಿತಂತೆ ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಬೆಂಗಳೂರು : ಕಳೆದ ಮಾರ್ಚ್ ಒಂದರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಂತಹ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಮತ್ತೊಂದು ಸ್ಫೋಟಕ ವಾದಂತಹ ವಿಷಯ ಬಹಿರಂಗವಾಗಿದ್ದು ಶಂಕಿತ 6 ಜನ ಉಗ್ರರಿಗೆ ಐಸಿಸ್ ನಂಟು ಇದೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೆಖಿಸಿದ್ದು ಇದೀಗ ಬಹಿರಂಗವಾಗಿದೆ. ಹೌದು ಶಂಕಿತ ಉಗ್ರರಾದ ಅಬ್ದುಲ್ ಮತಿನ್, ಮಾಜ್ ಮುನೀರ್, ಮುಜಾಮಿಲ್ ಶರೀಫ್, ಮೊಹಮ್ಮದ್ ಶರೀಫ್, ಶಾಜೀಬ್ ಮತ್ತು ಅರಮತ್ ಅಲಿ ಐಸಿಸ್ ಜೊತೆ ಸಂಪರ್ಕ ಹೊಂದಿರುವುದು ಎನ್ಐಎ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ.ಬೆಂಗಳೂರಿನ ರಾಮೇಶ್ವರಂ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಶಂಕಿತ ಉಗ್ರರಿಗೆ ಐಸಿಸ್ ಗೆ ಸಂಪರ್ಕ ಇತ್ತು. ಅಲ್ಲದೇ ಕೆಫೆ ಬಾಂಬ್ ಬ್ಲಾಸ್ಟ್ ಅಷ್ಟೇ ಅಲ್ಲದೆ ಐಸಿಸ್ ಇವರಿಗೆ ಮತ್ತೊಂದು ಕೆಲಸವನ್ನು ಕೂಡ ಇವರಿಗೆ ನೀಡಿತ್ತು. ಶಂಕಿತ ಉಗ್ರರಲ್ಲಿ ಪ್ರಮುಖ ನಾದವನಿಗೆ ಉಸ್ತುವಾರಿ ನೋಡಿಕೊಳ್ಳಲು ಸೂಚಿಸಿತ್ತು ಅಲ್ಲದೆ ಅವರಿಗೆ ಹಣದ ಸಹಾಯ ಕೂಡ ಐಸಿಸ್ ಮಾಡಿತ್ತು ಎಂಬ…
ಮಂಡ್ಯ : ಹಿಂದಿನ ಕಾಲದಲ್ಲಿ ಇದ್ದಂತಹ ಜಾತಿ ತಾರತಮ್ಯ ಪ್ರಸ್ತುತ ದೇಶದ ಹಲವು ಪ್ರದೇಶಗಳಲ್ಲಿ ಇನ್ನು ಆಚರಣೆಯಲ್ಲಿ ಇದೆ. ರಾಜ್ಯದಲ್ಲಿ ಇದೀಗ ಜಾತಿ ತಾರತಮ್ಯ ಮತ್ತೆ ಭುಗಿಲೆದಿದ್ದು ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ದಲಿತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿರುವ ವಿಚಾರವಾಗಿ ಸವರ್ಣಿಯರು ಅಸಮಾಧಾನ ಹೊರಹಾಕಿದ್ದು, ಇದೀಗ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೌದು ಮಂಡ್ಯದ ಹನಕೆರೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿರುವ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ವಿರೋಧದ ನಡುವೆ ಶ್ರೀ ಕಾಲಭೈಲೇಶ್ವರನಿಗೆ ದಲಿತರು ಪೂಜೆ ಸಲ್ಲಿಸಿದ್ದಾರೆ. ದಲಿತರ ದೇಗುಲಕ್ಕೆ ಪ್ರವೇಶಕ್ಕೆ ಸವರ್ಣೀಯರು ಸಮಾಧಾನ ಹೊರ ಹಾಕಿದ್ದಾರೆ. ದೇಗುಲದ ಒಳನೋಗಿ ಉತ್ಸವ ಮೂರ್ತಿಯನ್ನು ಹೊರ ತಂದು ಕಿಡಿ ಕಾರಿದ್ದಾರೆ. ದೇವಾಲಯ ನಾಮಫಲಕವನ್ನು ಹೊರಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಶ್ರೀ ಕಾಲಭೈರವೇಶ್ವರ ಸ್ವಾಮೀಜಿ ಬಾಗಿಲು ಬಂದಾಗಿದ್ದು, ಪರಿಸ್ಥಿತಿಯನ್ನು ಅಧಿಕಾರಿಗಳು ಮತ್ತು ಪೊಲೀಸರು ತಿಳಿಗೊಳಿಸಿದ್ದಾರೆ. ಇದೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವುದಿಲ್ಲ ಎಂದು ಸವರ್ಣಿಯರು ಅಲ್ಲಿಂದ ತೆರಳಿದ್ದಾರೆ.…













