Subscribe to Updates
Get the latest creative news from FooBar about art, design and business.
Author: kannadanewsnow05
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ನಕ್ಸಲ್ ನಾಯಕಿ ಲತಾ, ಜಯಣ್ಣ ಸೇರಿದಂತೆ ಮೂವರ ವಿರುದ್ಧ ಇದೀಗ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಠಾಣೆಯಲ್ಲಿ ‘FIR’ ದಾಖಲಾಗಿದೆ. ಹೌದು ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ, ಜಯಪುರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಕಡೆಗುಂಡಿ ಯಡಗುಂದಕ್ಕೆ ಹಾಗೂ ಮುಂಡಗಾರು ಗ್ರಾಮಕ್ಕೆ ಲತಾ ತಂಡ ಭೇಟಿ ನೀಡಿತ್ತು ಎನ್ನಲಾಗಿದೆ. ಅಲ್ಲದೇ ಕಡೆಗುಂಡಿ ಗ್ರಾಮದ ಮನೆಯಲ್ಲಿ ಲತಾ ಮತ್ತು ತಂಡ ಊಟ ಮಾಡಿದ್ದರು ಎನ್ನಲಾಗಿದೆ. ನಕ್ಸಲರ ತಂಡ ಭೇಟಿ ವೇಳೆ 3 ಬಂದೂಕುಗಳು ಸಹ ಪತ್ತೆಯಾಗಿವೆ. ಇದೀಗ ಬಂದೂಕಿನ ಬಗ್ಗೆ ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಚಿಕ್ಕಮಂಗಳೂರು ಎಸ್ ಬಿ ವಿಕ್ರಂ ಆಮ್ಟೆ NAF ಜಿತೇಂದ್ರ ತನಿಖೆಯನ್ನು ಮುಂದುವರೆಸಿದ್ದಾರೆ.
ಮೈಸೂರು : ನಮ್ಮ ತಂದೆ ನಮ್ಮ ಊರಿನ ಜನರ ಮಾತನ್ನು ಕೇಳಿ, ಕುರುಬರೆಲ್ಲರು ಕಾನೂನು ಓದೋಕೆ ಆಗಲ್ಲ ಅಂತ ಹೇಳಿದ್ದರು. ಆದರೆ ನಾನು ಮಾತ್ರ ಹಠ ಬಿಡದೆ ಛಲದಿಂದ ಓದಿ ಲಾಯರ್ ಆದೆ, ಬಳಿಕ ಎರಡು ಬಾರಿ ಮುಖ್ಯಮಂತ್ರಿಯು ಆದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿನ 443.64 ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯೆ ಯಾರೊಬ್ಬರ ಸ್ವತ್ತಲ್ಲ. ವಾಲ್ಮೀಕಿ, ವ್ಯಾಸ, ಕನಕದಾಸ ಎಲ್ಲರೂ ಶೂದ್ರ, ದಲಿತ ಸಮುದಾಯದವರು. ಮೇಲ್ವರ್ಗಕ್ಕೆ ಮಾತ್ರ ಶಿಕ್ಷಣ ಎನ್ನುವುದು ತಪ್ಪುಎಂದರು. ಮಹಾಭಾರತ ಬರೆದ ವ್ಯಾಸರು ಬೆಸ್ತರು, ರಾಮಾಯಣ ಬರೆದ ವಾಲ್ಮೀಕಿ ಬೇಡ ಸಮುದಾಯದವರು, ಶಾಕುಂತಲ ಬರೆದ ಕಾಳಿದಾಸರು ಕುರುಬ ಸಮುದಾಯದವರು. ವಿದ್ಯೆ ಯಾರೊಬ್ಬರ ಸ್ವತ್ತು ಅಲ್ಲ. ಅವಕಾಶಗಳು ಸಿಗಬೇಕು ಅಷ್ಟೇ. ನಮ್ಮ ಜೀವನವನ್ನು ರೂಪಿಸಿಕೊಳ್ಳುವ ಶಿಲ್ಪಿ ನಾವೇ. ಆದ್ದರಿಂದ ವಿದ್ಯೆ ಕಲಿಯಲೇಬೇಕು. ಶೂದ್ರ ಜಾತಿಯ ಕನಕದಾಸರು…
ಬೆಂಗಳೂರು : ದ್ವಿಚಕ್ರ ವಾಹನಕ್ಕೆ ಸೈಡ್ ಬಿಡದಿದ್ದಕ್ಕೆ ಬಿಎಂಟಿಸಿ ಬಸ್ ಚಾಲಕನ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಾರ್ಪೊರೇಷನ್ ಬಳಿ ಈ ಒಂದು ಘಟನೆ ನಡೆದಿದೆ.ಟೂಲ್ಸ್ ನಿಂದ ಬಸ್ಸಿನ ಗಾಜು ಪುಡಿಪುಡಿ ಮಾಡಿ ಚಾಲಕನನ್ನು ಕೆಳಗಿಳಿಸಿ ಹಲ್ಲೆ ನಡೆಸಲಾಗಿದೆ. ಹೌದು ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಬೈಕ್ನಲ್ಲಿ ಹೋಗುತ್ತಿದ್ದ. ಈ ವೇಳೆ ಬಿಎಂಟಿಸಿ ಬಸ್ ಹಾಗೂ ಡಿವೈಡರ್ ಮಧ್ಯೆ ಯುವಕ ದ್ವಿಚಕ್ರ ವಾಹನವನ್ನು ನುಗ್ಗಿಸಿದ್ದಾನೆ.ಬಳಿಕ ಸೈಡ್ ಕೊಡುವಂತೆ ಬಿಎಂಟಿಸಿ ಬಸ್ ಚಾಲಕನಿಗೆ ಯುವಕ ಆವಾಜ್ ಹಾಕಿದ್ದಾನೆ. ಕಾರ್ಪೊರೇಷನ್ ಸಿಗ್ನಲ್ ನಲ್ಲಿ ಬಿಎಂಟಿಸಿ ಬಸ್ ನಿಲ್ಲಿಸುತ್ತಿದ್ದಂತೆ ಹಲ್ಲೆ ನಡೆಸಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಬೈಕ್ ನಲ್ಲಿದ್ದ ಟೂಲ್ಸ್ ನಿಂದ ಚಾಲಕನ ಮೇಲೆ ಯುವಕ ಹಲ್ಲೆ ಮಾಡಿದ್ದಾನೆ.ಕೂಡಲೇ ಆರೋಪಿಯನ್ನು ಹಿಡಿದು ಸಾರ್ವಜನಿಕರು ಥಳಿಸಿದ್ದಾರೆ. ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎಸ್ ಜೆ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ. ಇಂದು ಬೆಳಿಗ್ಗೆ…
ರಾಮನಗರ : ನಾಳೆ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲಾ ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ಮಾಡಿದ್ದಾರೆ.ಇದೀಗ ಚನ್ನಪಟ್ಟಣ ಕ್ಷೇತ್ರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಬರೋಬ್ಬರಿ 29 ಕೋಟಿ ಮೌಲ್ಯದ ಮದ್ಯವನ್ನು ಇದೀಗ ಅಬಕಾರಿ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಹೌದು ಬರೋಬ್ಬರಿ 29 ಕೋಟಿ ಮೌಲ್ಯದ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಒಂದು ತಿಂಗಳಲ್ಲಿ ಒಟ್ಟು 29 ಕೋಟಿ ಮೌಲ್ಯದ ಮದ್ಯವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಚನ್ನಪಟ್ಟಣ ಚುನಾವಣೆ ಘೋಷಣೆಯಾದ ಬಳಿಕ ಮದ್ಯವನ್ನು ಜಪ್ತಿ ಮಾಡಿಕೊಳ್ಳಲಾಗಿದೆ.ಇದುವರೆಗೆ 151 ಪ್ರಕರಣಗಳನ್ನು ಅಬಕಾರಿ ಇಲಾಖೆ ದಾಖಲಿಸಿಕೊಂಡಿದೆ. ಮದ್ಯದ ಜೊತೆಗೆ ಮೂರು ವಾಹನಗಳನ್ನು ಕೂಡ ಜಪ್ತಿ ಮಾಡಿಕೊಳ್ಳಲಾಗಿದೆ.ದಾಖಲೆ ಹಾಗೂ ಪರವಾನಿಗೆ ಇಲ್ಲದೆ ಮದ್ಯ ಸಂಗ್ರಹಿಸಿ ಇಡಲಾಗಿತ್ತು. ಯಾವುದೇ ದಾಖಲೆ ಹಾಗೂ ಪರವಾನಿಗೆಲ್ಲದೆ ಸಂಗ್ರಹಿಸಿಟ್ಟಿದ್ದ ಮಧ್ಯವನ್ನು ಜಪ್ತಿ ಮಾಡಿಕೊಂಡಿರುವ ಕುರಿತು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ದಾವಣಗೆರೆ : ಸಿದ್ದರಾಮಯ್ಯನದ್ದು ಟಿಪ್ಪು ಸಂಸ್ಕೃತಿ, ಮುಸ್ಲಿಮರು ಏನೇ ಕೇಳಿದರು ಕೊಟ್ಟುಬಿಡುತ್ತಾಮೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ಆರ್ ಅಶೋಕ್ ಮಾಧ್ಯಮಗಳೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮುಸ್ಲಿಂರು ನಾಲ್ಕು ಕೇಳಿದರೆ ಎಂಟು ಕೊಡುತ್ತಾನೆ. ಉತ್ತರ ಕರ್ನಾಟಕದ ಅವನ್ಯಾರು ಮಾಜಿ ಸಚಿವ ಹೇಳಿದ್ದಾನಲ್ಲ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಎಲ್ಲವನ್ನು ಬಾಚಿಕೊಳ್ಳಿ ಎಂದು ಹಾಗಾಗಿ ಸಿದ್ದರಾಮಯ್ಯ ಮುಸ್ಲಿಮರು ನಾಲ್ಕು ಕೇಳಿದರೆ ಎಂಟು ಕೊಡುತ್ತಾನೆ ಎಂದು ಏಕವಚನದಲ್ಲಿ ವಾಗ್ದಾಳಿ ಮಾಡಿದರು.
ಮೈಸೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಂತಹ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಶಾಸಕ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಿಂದ ಅವರು ಬಿಡುಗಡೆಯಾಗಿದ್ದಾರೆ. ಇದೀಗ ಮೈಸೂರಿನಲ್ಲಿ ವಾಲ್ಮೀಕಿ ಜಯಂತಿ ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಸಕ ಬಿ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಹೌದು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನಲ್ಲಿ ನಡೆದ ಸಮಾವೇಶ ಒಂದರಲ್ಲಿ ಮಾತನಾಡಿದ ಅವರು, ಶಾಸಕ ಚಿಕ್ಕಮಾದು ಅಭಿಮಾನಿಗಳು ಅವರಿಗೆ ಸಚಿವ ಸ್ಥಾನ ನೀಡಿ ಎಂದು ಮನವಿ ಮಾಡಿದರು.ಇದಕ್ಕೆ ಸಿಎಂ ಸಿದ್ದರಾಮಯ್ಯ ಸಚಿವ ಸ್ಥಾನ ಎಲ್ಲಿ ಖಾಲಿ ಇದೆ? ಹಾಗಾಗಿ ಚಿಕ್ಕ ಮಾದುಗೆ ಸಚಿವ ಸ್ಥಾನ ನೀಡಲು ಸದ್ಯಕ್ಕೆ ಆಗಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರುಪಯೋಗವಾಗಿದೆ. ಆ ಪ್ರಕರಣದ ತನಿಖೆ…
ಬೆಂಗಳೂರು : ಕೊರೋನ ಹಗರಣದ ಮತ್ತೊಂದು ಸ್ಪೋಟಕ ವರದಿ ಬಹಿರಂಗವಾಗಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ನ್ಯಾ.ಕುನ್ಹ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಇಬ್ಬರ ವಿರುದ್ಧ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಹೌದು ಬಿಎಸ್ ಯಡಿಯೂರಪ್ಪ ಹಾಗೂ ಶ್ರೀರಾಮುಲು ಕಾರ್ಯವೈಖರಿಗೆ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಕೊರೊನ ವೇಳೆ ಖಾಸಗಿ ಲ್ಯಾಬ್ ಗಳಿಗೆ 6.93 ಕೋಟಿ ಹಣ ಸಂದಾಯವಾಗಿದೆ. ಆದರೆ ಖಾಸಗಿ ಲ್ಯಾಬ್ ಗಳು ICMR ನಿಂದ ಮಾನ್ಯತೆ ಪಡೆದಿಲ್ಲ. ಅಧಿಕೃತ ICMR ಲ್ಯಾಬ್ ಗಳು ಅಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. RTPCR ಟೆಸ್ಟಿಗೆ ಲ್ಯಾಬ್ ಗಳ ಸಾಮರ್ಥ್ಯ ಕ್ಷಮತೆ ಗುರುತಿಸಿಲ್ಲ. ಸಾಮರ್ಥ್ಯ ಹಾಗೂ ಕ್ಷಮತೆ ಪರಿಶೀಲಿಸದೆ ಖಾಸಗಿ ಲ್ಯಾಬ್ ಗೆ ಅನುಮತಿ ನೀಡಲಾಗಿದೆ. 6 ಲ್ಯಾಬ್ ಗಳಿಗೆ ಒಪ್ಪಂದವಿಲ್ಲದೆ ಹಣ ಸಂದಾಯ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅನಧಿಕೃತವಾಗಿ ಲ್ಯಾಬ್ ಗಳಿಗೆ ಹಣ ಸಂದಾಯದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. 8 ಲ್ಯಾಬ್ ಗಳಿಗೆ ಅನುಮತಿ ಪಡೆಯದೆ 4.28…
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮೀಟರ್ ಬಡ್ಡಿ ದಂಧೆ ಮುಂದುವರೆದಿದ್ದು, ಇದೀಗ ಬಡ್ಡಿ ಹಣ ನೀಡಿಲ್ಲ ಎಂದು ಯುವಕನಿಗೆ ಥಳಿಸಿದ ಆರೋಪ ಕೇಳಿಬಂದಿದೆ. ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಹುಬ್ಬಳ್ಳಿಯ ಪಿಂಜಾರ ಓಣಿಯ ನಿವಾಸಿ ಸಾಬಿರ್ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಮದುವೆಗೆ ಎಂದು ಪ್ರಕಾಶ್ ಅಂಬಿಗೇರ ಬಳಿ ಸಾಬೀರ್ 80,000 ಹಣವನ್ನು ಸಾಲವಾಗಿ ಪಡೆದುಕೊಂಡಿದ್ದ. ಒಂದುವರೆ ವರ್ಷದ ಹಿಂದೆ ತಿಂಗಳ ಬಡ್ಡಿಗೆ ಹಣ ಪಡೆದಿದ್ದ. ಈಗ ದಿನಕ್ಕೆ ರೂ.1,000 ನೀಡುವಂತೆ ಪ್ರಕಾಶ್ ಪಿಡಿಸುತ್ತಿದ್ದಾನೆ. ದುಡಿಮೆ ಇಲ್ಲ ಹಣ ನೀಡುವೆ ಅಂದರು ಸಹ ಮನೆಯಿಂದ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾನೆ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ನನಗೆ ಏನಾದರೂ ಆದರೆ ಪ್ರಕಾಶ್ ಅಂಬಿಗೇರ್ ಕಾರಣ ಎಂದು ಸಾಬೀರ್ ತಿಳಿಸಿದ್ದಾನೆ. ಮೀಟರ್ ದಂಧೆ ವಿರುದ್ಧ ಹುಬ್ಬಳ್ಳಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಲಾಗಿದ್ದು, ಆದರೂ ಕೂಡ ಮೀಟರ್ ಬಡ್ಡಿ ದಂಧೆ ನಿಂತಿಲ್ಲ.
ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಅವರು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದರು. ಅಲ್ಲದೆ ಇಡಿ ಅಧಿಕಾರಿಗಳು ಸಹ ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದರು. ಈ ವಿಚಾರವಾಗಿ ಯತಿಂದ್ರ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದೀಗ ಕೋರ್ಟ್ ಗಳು ಸಹ ಕೇಂದ್ರ ಸರ್ಕಾರ ಹೇಳಿದಂತೆ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದ್ದಾರೆ. ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು , ಕೋರ್ಟ್ಗಳು ಸಹ ಕೇಂದ್ರದ ಮಾತನ್ನು ಕೇಳುವ ಪರಿಸ್ಥಿತಿ ಬಂದಿದೆ. ನಾವು ತಪ್ಪು ಮಾಡಿಲ್ಲ ನಮಗೆ ತನಿಖೆಯ ಬಗ್ಗೆ ಯಾವುದೇ ಭಯ ಇಲ್ಲ. ಕೇಂದ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆಯಲ್ಲಿ ಡಾ.ಯತಿಂದ್ರ ಹೇಳಿಕೆ ನೀಡಿದರು. ಇಡಿ, ಸಿಬಿಐ, ಐಟಿ ಎಲ್ಲವೂ ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿವೆ. ಎಲ್ಲ ಸಂಸ್ಥೆಗಳು ಅದರ ನಿಯಂತ್ರಣದಲ್ಲಿವೆ. ಕೇಂದ್ರ ಸರ್ಕಾರ ಏನು ಹೇಳುತ್ತದೆ ಅದೇ ರೀತಿ ತನಿಖೆ…
ಕೊಡಗು : ಆಹಾರವನ್ನು ಅರಸಿ ಕಾಡಿನಿಂದ ಹುಲಿ ಒಂದು ತಪ್ಪಿಸಿಕೊಂಡು ನಾಡಿಗೆ ಬಂದಿದೆ. ಹೌದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಯ ಅಕ್ಕಪಕ್ಕ ಹುಲಿ ಸಂಚರಿಸಿದ್ದು, ಈ ಕುರಿತು ಹುಲಿಯ ಹೆಜ್ಜೆಗಳು ಸಹ ಮೂಡಿವೆ. ಇದರಿಂದ ಮಕ್ಕಳು ಶಾಲೆಗೆ ಬರುವಾಗ ಮತ್ತು ಶಾಲೆಯಿಂದ ಮನೆಗೆ ಹೋಗುವಾಗ ಭಯದಲ್ಲಿ ಓಡಾಡುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಹುಲಿ ಭಯ ಶುರುವಾಗಿದೆ. ವಿರಾಜಪೇಟೆಯ ಚಂಬೇಬೆಳ್ಳೂರಿನಲ್ಲಿ ಹುಲಿ ಸಂಚರಿಸಿದೆ. ಸರ್ಕಾರಿ ಶಾಲೆಯ ಪಕ್ಕದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದೆ. ಗ್ರಾಮದ ನಾಲ್ಕು ಕಡೆಗಳಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದೆ. ಹುಲಿ ಒಂದು ಹೊಸ ಒಂದು ಕರು ಕೊಂದಿದೆ. ಹುಲಿಯನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.












