Subscribe to Updates
Get the latest creative news from FooBar about art, design and business.
Author: kannadanewsnow05
ಹುಬ್ಬಳ್ಳಿ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಹೃದಯಾಘಾತವಾಗಿ ಸಾವನ್ನಪ್ಪಿದ ಎಎಸ್ಐಯೋರ್ವರು ಸಾವನ್ನಪ್ಪಿದ್ದು, ಅವರು ತಮ್ಮ ಸಾವಿನಲ್ಲೂ ಕೂಡ ಸಾರ್ಥಕತೆ ಮೆರೆದಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಕಾಂತ ಹುಟಗಿ (58) ಅವರು ಭಾನುವಾರ(ನ.16) ಬೆಳಗ್ಗೆ ಹೃದಯಾಘಾತದಿಂದ ಹುಬ್ಬಳ್ಳಿ ಸುಚರಾಯು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿ ಆಗದೆ ನಿಧನರಾದರು. ತಮ್ಮವರನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೂ ಕೂಡ ಅವರ ಕುಟುಂಬ ಚಂದ್ರಕಾಂತ ಅವರ 2 ಕಣ್ಣುಗಳನ್ನು ದಾನ ಮಾಡಿದ್ದಾರೆ.
ದಾವಣಗೆರೆ : ದಾವಣಗೆರೆಯಲ್ಲಿ ಘೋರ ಘಟನೆ ನಡೆದಿದ್ದು, ಟ್ರ್ಯಾಕ್ಟರ್ ರೋಟವೇಟರ್ ಯಂತ್ರಕ್ಕೆ ಸಿಲುಕಿ ರೈತ ಸಾವನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ದಿದ್ದಿಗಿ ಗ್ರಾಮದ ನಾರಪ್ಪ (30) ರೋಟವೇಟರ್ ಯಂತ್ರ ಸಿಲುಕಿ ಸಾವನಪ್ಪಿರುವ ರೈತ ಎಂದು ತಿಳಿದು ಬಂದಿದೆ. ಎಂದಿನಂತೆ ರೈತ ನಾರಪ್ಪ ಜಮೀನಿನಲ್ಲಿ ಟ್ರ್ಯಾಕ್ಟರ್ ಮೂಲಕ ರೋಟವೇಟರ್ ಹೊಡೆಸುತ್ತಿದ್ದರು. ಈ ವೇಳೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ ರೈತ ನಾರಪ್ಪ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಏಕಾಏಕಿ ಆತನ ಮೇಲೆ ರೋಟವೇಟರ್ ಯಂತ್ರ ಹರಿದಿದೆ. ಪರಿಣಾಮ ರೋಟವೇಟರ್ಗೆ ಸಿಕ್ಕ ರೈತನ ದೇಹ ಛಿದ್ರವಾಗಿದೆ. ತಕ್ಷಣವೇ ಟ್ರ್ಯಾಕ್ಟರ್ ನಿಲ್ಲಿಸಿ ನೋಡಿದಾಗ ಸ್ಥಳದಲ್ಲೇ ರೈತ ನಾರಪ್ಪ ಕೊನೆಯುಸಿರೆಳೆದಿದ್ದರು. ಮನೆಗೆ ಆಧಾರವಾಗಿದ್ದ ರೈತ ನಾರಪ್ಪನನ್ನು ಕಳೆದುಕೊಂಡ ಕುಟುಂಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಹತ್ತಿರದ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಹುಟ್ಟು ಹಬ್ಬದ ದಿನವೇ ಒಂಬತ್ತನೇ ತರಗತಿ ವಿದ್ಯಾರ್ಥಿನಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಾದನಾಯಕನಹಳ್ಳಿ ಠಾಣೆ ಪೋಲೀಸರು ಆರೋಪಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವಕ ಯತೀಶ್ 15 ವರ್ಷದ ಬಾಲಕಿಯನ್ನ ಕೇಕ್ ಕತ್ತರಿಸುವುದಾಗಿ ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಕೇಕ್ ಕತ್ತರಿಸುವ ನೆಪದಲ್ಲಿ ರಾಶಿ ಲೇಔಟ್ಟೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಅತ್ಯಾಚಾರ ಬಳಿಕ ಕಾಮುಕ ಎಸ್ಕೆಪ್ ಆಗಿದ್ದಾನೆ. 9 ನೇ ತರಗತಿ ವಿದ್ಯಾರ್ಥಿನಿ ಮೇಲೆ ಕಾಮುಕ ಅಟ್ಟಹಾಸ ಮೆರೆದಿದ್ದಾನೆ. ಈ ಸಂಬಂಧ ಪೊಲೀಸರಿಗೆ ಪೋಷಕರು ದೂರು ನೀಡಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಶಿವಮೊಗ್ಗ : ಶಿವಮೊಗ್ಗದಲ್ಲಿ ತಡರಾತ್ರಿ ಭೀಕರವಾದ ಅಪಘಾತ ಸಂಭವಿಸಿದ್ದು ಈ ಒಂದು ಅಪಘಾತದಲ್ಲಿ ನವವಿವಾಹಿತ ಸಾವನಪ್ಪಿದ್ದಾನೆ. ಖಾಸಗಿ ಬಸ್ ಡಿಕ್ಕಿಯಾಗಿ ನವವಿವಾಹಿತ ಮೃತಪಟ್ಟಿರುವ ಘಟನೆ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ರವಿವಾರ ರಾತ್ರಿ ನಡೆದಿದೆ. ಶಾಂತಿ ನಗರದ ನಿವಾಸಿ ಅಹ್ಮದ್ (31) ಮೃತ ಯುವಕ ಎಂದು ತಿಳಿದುಬಂದಿದೆ. ರಾಗಿಗುಡ್ಡ ಕಡೆಯಿಂದ ಬಂದ ಖಾಸಗಿ ಬಸ್ ಮಣ್ಣಿನ ದಿಬ್ಬ ಹಾರಿ ಅಡ್ಡಾದಿಡ್ಡಿ ಚಲಿಸಿದ್ದು, ಮೂರು ದ್ವಿಚಕ್ರ ವಾಹನಗಳು, ನಾಲ್ವರು ವ್ಯಕ್ತಿಗಳಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್‌ಗಳು ಜಖಂಗೊಂಡಿದ್ದರೆ, ಪೊಲೀಸ್ ಬ್ಯಾರಿಕೇಡ್ ತುಂಡಾಗಿದೆ. ಫುಟ್‌ಪಾತ್‌ಗೆ ಅಳವಡಿಸಿದ್ದ ರೇಲಿಂಗ್ ಕೂಡ ಹಾನಿಯಾಗಿದೆ. ಅಪಘಾತದಲ್ಲಿ, ಮೂವರು ಗಾಯಗೊಂಡಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು : ಡೇಟಿಂಗ್ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಪ್ರೇಮಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಬಂದಿದ್ದರನ್ನು ಕವಿಪ್ರಿಯ ಹಾಗೂ ಹರ್ಷವರ್ಧನ ಎಂದು ತಿಳಿದು ಬಂದಿದೆ. ಆಪ್ ಗಳ ಮೂಲಕ ಇಬ್ಬರು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದರು ಸಾಲ ತೀರಿಸಲು ಆಗದೆ ಪ್ಲಾನ್ ಮಾಡಿ ಡೇಟಿಂಗ್ ಆಪ್ ಮೂಲಕ ವಂಚನೆ ಎಸಗುತ್ತಿದ್ದರು. ಹ್ಯಾಪನ್ ಆಪ್ ನಲ್ಲಿ ಫೋಟೋ ಹಾಕಿ ಯುವಕರಿಗೆ ಬಲೆ ಬೀಸುತ್ತಿದ್ದರು ಪ್ರಿಯಕರ ಪ್ಲಾನ್ ಅಂತ ಕವಿಪ್ರಿಯಾಳಿಂದ ಯುವಕರಿಗೆ ಬಲೆ ಹಾಕಲಾಗುತ್ತಿತ್ತು. ಯುವಕರ ಭೇಟಿಯ ಬಳಿಕ ಚಿನ್ನ ನಗದು ದೋಚಿ ಪರಾರಿ ಆಗುತ್ತಿದ್ದರು. ನವೆಂಬರ್ ಒಂದರಂದು ಓರ್ವ ಯುವಕನನ್ನು ಲಾಡ್ಜ್ ಗೆ ಕರೆದು ಆತನಿಗೆ ಪ್ರಜ್ಞೆ ತಪ್ಪಿಸಿ ಆತನ ಬಳಿ ಇರುವ ಚಿನ್ನ ನಗದು ಹಣ ದೋಚಿ ಪರಾರಿಯಾಗಿದ್ದಳು. ನವೆಂಬರ್ 1 ರಂದು ಬೆಂಗಳೂರಿನ ಇಂದಿರಾನಗರದ ಲಾಡ್ಜ್ ಒಂದಕ್ಕೆ ಕವಿಪ್ರಿಯ ಯುವಕನನ್ನು ಕರೆಸಿದ್ದಾಳೆ. ಅಲ್ಲಿ ಇಬ್ಬರು ಕಂಟಪೂರ್ತಿ ಕುಡಿದಿದ್ದಾರೆ. ಬಳಿಕ ಆಕೆ ಆನ್ಲೈನ್ ನಲ್ಲಿ ಊಟ ತರಿಸಿದ್ದಾಳೆ. ನಂತರ ನೀರಿನಲ್ಲಿ ಪ್ರಜ್ಞೆ…
ಉತ್ತರಕನ್ನಡ : ಉತ್ತರ ಕನ್ನಡದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಸೂಳೆಮರ್ಕಿ ಕ್ರಾಸ್ ಬಳಿ ಬಸ್ ಪಲ್ಟಿಯಾಗಿ 29 ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮರ್ಕಿ ಗ್ರಾಮದಲ್ಲಿ ಈ ಒಂದು ಅಪಘಾತ ನಡೆದಿದೆ. ಬಾದಾಮಿಯಿಂದ ಕೆಎಸ್ಆರ್ಟಿಸಿ ಬಸ್ ಧರ್ಮಸ್ಥಳಕ್ಕೆ ತೆರಳುತ್ತಿತ್ತು. ಇವನು ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರನ್ನು ತಕ್ಷಣ ಹೊನ್ನಾವರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ರಾಜ್ಯದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಕಡಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಡಬ ನಿವಾಸಿ ಉಮೇಶ್ ಗೌಡ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ನ.13ರಂದು ರಾತ್ರಿ ಸಂತ್ರಸ್ತ ಮಹಿಳೆ ಮನೆಯ ಹೊರ ಭಾಗದ ಕೊಟ್ಟಿಗೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಆರೋಪಿಯು ಅಲ್ಲಿಗೆ ಅಕ್ರಮವಾಗಿ ಪ್ರವೇಶಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ ಈ ವೇಳೆ ಸಂತ್ರಸ್ತೆ ಸಹಾಯಕ್ಕಾಗಿ ಬೊಬ್ಬೆ ಹೊಡೆದಿದ್ದು, ಮನೆಯೊಳಗಿದ್ದ ಆಕೆಯ ಪತಿ, ಮಕ್ಕಳು ಬಂದು ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ, ಆರೋಪಿಯು ಹಲ್ಲೆ ನಡೆಸಿ, ಮಹಿಳೆಗೆ ಜಾತಿ ನಿಂದನೆ ಮಾಡಿರುವುದಾಗಿ ದೂರಿನಲ್ಲಿ ತಿಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಬೆಳಗಾವಿ : ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಕಿರು ಮೃಗಾಲಯದಲ್ಲಿ ಇಂದು ಮತ್ತೊಂದು ಕೃಷ್ಣಮೃಗ ಸಾವನ್ನಪ್ಪಿದೆ. ಇನ್ನುಳಿದ 9 ಕೃಷ್ಣಮೃಗಗಳಿಗೆ ಆರೈಕೆ ಮುಂದುವರೆದಿದೆ. ಕಿರು ಮೃಗಾಲಯದಲ್ಲಿ ನಿನ್ನೆ ಒಂದೇ ದಿನ 20 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ನವೆಂಬರ್ 13ರಂದು 8 ಕೃಷ್ಣ ಮೃಗಗಳು ಮೃತಪಟ್ಟಿದ್ದವು. ಇದುವರೆಗೂ ಒಟ್ಟು ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ. ಹೌದು ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮಗಾಲಯದಲ್ಲಿ ಕೃಷ್ಣಮೃಗ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬೆಳಗಿನ ಜಾವ ಮತ್ತೊಂದು ಕೃಷ್ಣಮೃಗ ಸಾವನಪ್ಪಿದೆ. ಮೃಗಾಲಯದಲ್ಲಿ ಮೃತಪಟ್ಟ ಕೃಷ್ಣಮೃಗಗಳ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಬೆಳಗಾವಿ ತಾಲೂಕಿನ ಭೂತರಾಮನ ಹಟ್ಟಿ ಬಳಿ ಇರುವ ಈ ಒಂದು ಮೃಗಾಲಯದಲ್ಲಿ ಕೃಷ್ಣಮೃಗಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ. ಇನ್ನು ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃಗಾಲಯಗಳ ಸದಸ್ಯ ಕಾರ್ಯದರ್ಶಿ ಸುನಿಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಹಿಂದು ಬೆಳಿಗ್ಗೆ ವೈದ್ಯರ…
ಬೆಂಗಳೂರು : ಇತ್ತೀಚಿಗೆ ಬೆಂಗಳೂರಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ನಾಯಿ ಮುದ್ದು ಮಾಡು ನೆಪದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಪರಿಚಿತನಿಂದ ಯುವತಿಯ ಮೈ ಕೈ ಮುಟ್ಟಿ ವರ್ತನೆ ತೋರಿದ್ದಾನೆ. ಈ ಒಂದು ಘಟನೆ ನಡೆದಿದ್ದು ಬೆಂಗಳೂರಿನ ಜ್ಞಾನಭಾರತಿ ಬಳಿಯ ಉಪಕಾರ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಬೆಂಗಳೂರಲ್ಲಿ ವಾಕಿಂಗ್ ಗೆ ಎಂದು ಯುವತಿ ತನ್ನ ಮುದ್ದಿನ ನಾಯಿಯೊಂದಿಗೆ ತೆರಳಿದ್ದಾಳೆ ಈ ವೇಳೆ ಅಪಚಿತ ಕಾಮುಕನೊಬ್ಬ ಬಂದು ನಾಯಿಯನ್ನು ಮುಟ್ಟಬಹುದಾ ಎಂದು ಕೇಳಿ ಯುವತಿಯ ಮೈಕೈ ಮುಟ್ಟಿಯ ಅಸಭ್ಯ ವರ್ತನೆ ತೋರಿದ್ದಾನೆ. ಇದರಿಂದ ಯುವತಿ ಆತನ ಕಪಾಳಕ್ಕೆ ಬಾರಿಸಿದ್ದಾಳೆ, ಆದರೂ ಕೂಡ ಆತ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರಿಂದ ಭಯಗೊಂಡು ಯುವತಿ ಓಡಿದ್ದಾಳೆ. ಓಡುವ ವೇಳೆ ಆಕೆಯ ಬಳಿದಂತಹ ಮೊಬೈಲ್ ಅನ್ನು ಕಸಿದು ಕಾಮುಕ ಪರಾರಿಯಾಗಿದ್ದಾನೆ.
ಮಂಡ್ಯ :- ಮದ್ದೂರು ನಗರದ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನ.5 ರಂದು ನಡೆದಿದ್ದ ರಸ್ತೆ ಅಪಘಾತದಲ್ಲಿ ಕೃಷಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಮದ್ದೂರು ತಾಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ವೇತಾ ( 38 ) ಎನ್ನಲಾಗಿದೆ. ಕಳೆದ ನ.5 ರಂದು ಮಧ್ಯಾಹ್ನದ ವೇಳೆ ಮದ್ದೂರು ನಗರದ ನ್ಯಾಯಾಲಯದ ಸಂಕೀರ್ಣದ ಮುಂಭಾಗ ಶ್ವೇತಾ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರು ಡಿಕ್ಕಿ ಹೊಡೆದ ಪರಿಣಾಮ ಶ್ವೇತಾ ಅವರ ತಲೆ, ಕೈ ಕಾಲು ಗಂಭೀರ ಗಾಯವಾಗಿತ್ತು. ತಕ್ಷಣವೇ ವಾಹನ ಸವಾರರು ಹಾಗೂ ಸ್ಥಳೀಯರು ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಡಿಎಂಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ ಹತ್ತು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ…













