Subscribe to Updates
Get the latest creative news from FooBar about art, design and business.
Author: kannadanewsnow05
ನವದೆಹಲಿ : ಇಂದು ಮ್ಯಾನ್ಮಾರ್, ಬ್ಯಾಂಕಾಕ್ ನಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 11.50 ರ ಸುಮಾರಿಗೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆಘಟನೆಯಲ್ಲಿ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಈ ವೇಳೆ ಕೆಲವೇ ಕ್ಷಣಗಳಲ್ಲಿ ಬಹುಮಡಿ ಬಹು ಮಹಡಿ ಕನ್ನಡ ಕುಸಿದಿದೆ. ಕುಸಿಯುತ್ತಿರುವ ಮನೆಗಳು, ಮುರಿದುಬಿದ್ದ ಬ್ರಿಡ್ಜ್, ಮಯನ್ಮಾರ್ ಮತ್ತು ಬ್ಯಾಂಕಾಕ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಅಲ್ಲದೆ ಬಹು ಮಹಡಿ ಕಟ್ಟಡದ ಮೇಲೆ ಇರುವ ಸ್ವಿಮ್ಮಿಂಗ್ ಪೂಲ್ ನಿಂದ ನೀರು ಹೊರಕ್ಕೆ ಹೋಗುತ್ತಿರುವ ದೃಶ್ಯ ನೋಡಿದ್ರೆ ಎದೆ ಝಲ್ಲೆನಿಸುತ್ತೆ ರಿಕ್ಟರ್ ಮಾಪಕದಲ್ಲಿ 7.7 ರಷ್ಟು ತೀವ್ರತೆ ದಾಖಲಾಗಿದೆ. https://twitter.com/ANI/status/1905509227399184657?t=NPLaXB0gFw5vnd6Y6ZCKew&s=19
ಬೆಂಗಳೂರು : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಶೋಕಾಸ್ ನೋಟಿಸ್ ಗೆ ಉತ್ತರಿಸದ ಹಿನ್ನೆಲೆ ಹಾಗೂ ಸ್ವಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ಮಾಡಿದ್ದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆಗೆ ಆಕ್ಷೇಪಿಸಿ, ಬೆಂಗಳೂರಿನಲ್ಲಿ ಯತ್ನಾಳ ಬಣದ ಟೀಂ ಇದೀಗ ಸಭೆ ಸೇರಿದೆ. ಬೆಂಗಳೂರಿನ ಯುಬಿ ಸಿಟಿಯಲ್ಲಿರುವ ಸಿದ್ದೇಶ್ವರ ನಿವಾಸದಲ್ಲಿ ಸಭೆ ಸೇರಿದ್ದಾರೆ.ಉಚ್ಚಾಟನೆ ಆದೇಶ ಪಡೆಯಲು ಒತ್ತಾಯ ಕುರಿತು ಸಭೆ ನಡೆಸುತ್ತಿದ್ದು, ಯತ್ನಾಳ್ ಉಚ್ಚಾಟನೆಗೆ ಆಕ್ಷೇಪ ವ್ಯಕ್ತಪಡಿಸಿ ಇದೀಗ ರೆಬೆಲ್ಸ್ ಟೀಂ ಸಭೆ ನಡೆಸುತ್ತಿದೆ. ರಮೇಶ್ ಜಾರಕಿಹೊಳಿ, ಬಿಪಿ ಹರೀಶ್, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ ಮುಂತಾದವರು ಈಗಾಗಲೇ ಸಿದ್ದೇಶ್ವರ ನಿವಾಸಕ್ಕೆ ಆಗಮಿಸಿದ್ದಾರೆ. ಹಾಗಾಗಿ ಈ ಒಂದು ಸಭೆ ಬಹಳ ಪ್ರಾಮುಖ್ಯತೆ ಪಡೆದುಕೊಂಡಿದ್ದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…
ಚಿಕ್ಕಮಗಳೂರು : ಚಿಕ್ಕಮಂಗಳೂರು ಜಿಲ್ಲೆಯ ಬಾಳೆಹೊನ್ನೂರು ನಲ್ಲಿ ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಸಾವನಪ್ಪಿದ್ದು, ಈ ಒಂದು ಘಟನೆಗೆ ಸಂಬಂಧಿಸಿದಂತೆ ಗ್ರಹಿಣಿಯ ಪತಿಯನ್ನು ಈಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಾಳೆಹೊನ್ನೂರು ಸಮೀಪ ಹಲಸೂರು ಗ್ರಾಮದ ಗುಬ್ಬುಗೊಡಿಗೆಯಲ್ಲಿ ಮಮತಾ (31) ಮೃತಪಟ್ಟಿದ್ದು ವರದಕ್ಷಿಣೆ ಕಿರುಕುಳ ಆರೋಪದ ಅಡಿ ಪತಿ ಅವಿನಾಶ್‌ನನ್ನು ಬಂಧಿಸಲಾಗಿದೆ. ಮಾವ ನಾರಾಯಣಗೌಡ, ಅತ್ತೆ ಅನಸೂಯ ಹಾಗೂ ನಾದಿನಿ ಅಮಿತ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಮತಾ ಅವರನ್ನು 2020ರ ಮೇ 27ರಂದು ಅವಿನಾಶ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯ ಸಮಯಲ್ಲಿ 110 ಗ್ರಾಂ ಚಿನ್ನಾಭರಣ ನೀಡಿದ್ದರೂ ಪತಿ, ಅತ್ತೆ ಮತ್ತು ಮಾವ ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದರು ಎಂದು ದೂರಲಾಗಿದೆ. ಅವಿನಾಶ್‌ಗೆ 50 ಸಾವಿರ ಮೊತ್ತವನ್ನು ಗೂಗಲ್ ಪೇ ಮೂಲಕ ನೀಡಿದ್ದರೂ ಹಿಂಸೆ ನೀಡುವುದು ನಿಂತಿರಲಿಲ್ಲ ಎನ್ನಲಾಗಿದೆ.
ನವದೆಹಲಿ : ರಾಜ್ಯ ಸರ್ಕಾರ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂ. ಏರಿಕೆ ಮಾಡಿದೆ. ಅಲ್ಲದೆ 4 ರೂಪಾಯಿ ಸರ್ಕಾರಕ್ಕೆ ಬರಲ್ಲ ರೈತರಿಗೆ ಹೋಗುತ್ತದೆ ಹಾಗಾಗಿ ರೈತರಿಗೋಸ್ಕರ ಹಾಲಿನದ ಏರಿಕೆ ಮಾಡಲಾಗಿದೆ ಎಂದು ನಿನ್ನೆ ಕಾಂಗ್ರೆಸ್ ಹಲವು ನಾಯಕರು ಸ್ಪಷ್ಟನೆ ನೀಡಿದ್ದರು. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಕೂಡ ನಂದಿನಿ ಹಾಲಿನ ದರ ಏರಿಕೆ ಮಾಡಿದ್ದು ಈ ಒಂದು ಹಣ ಸರ್ಕಾರಕ್ಕೆ ಬರಲ್ಲ ನೇರವಾಗಿ ರೈತರಿಗೆ ಹೋಗುತ್ತದೆ ಎಂದು ಸ್ಪಷ್ಟಪಡಿಸಿದರು. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂದಿನಿ ಹಾಲಿನ ದರ ಏರಿಕೆ ಕುರಿತು ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಏನಾದರೂ ಹೇಳಲಿ ರೈತರು ಬದುಕಬೇಕಲ್ವಾ? ಅವರಿಗೆ ಜಿಎಸ್ಟಿ ಮೇವಿನ ಬೆಲೆ ಇಳಿಕೆ ಮಾಡಲು ಹೇಳಿ ಪೆಟ್ರೋಲ್ ಡೀಸೆಲ್ ಇದರ ಇಳಿಕೆ ಮಾಡಲು ಹೇಳಿ ಬೆಲೆ ಏರಿಕೆ ಹಣ ಸರ್ಕಾರಕ್ಕೆ ಬರಲ್ಲ ರೈತರಿಗೆ ಹೋಗುತ್ತದೆ. ಹಾಲಿನ ಸಹಕಾರ ವ್ಯವಸ್ಥೆ ಬಗ್ಗೆ ಅವರ ಅಣ್ಣನ…
ತುಮಕೂರು : ಕಳೆದ 2024 ನವೆಂಬರ್ ತಿಂಗಳಿನಲ್ಲಿ ನನ್ನ ಕೊಲೆಗೆ ಯತ್ನಿಸಿ ಸುಪಾರಿ ನೀಡಲಾಗಿತ್ತು ಎಂದು ಆರೋಪಿಸಿ ಇದೀಗ ತುಮಕೂರಿನ ಎಸ್ ಪಿ ಕಚೇರಿಗೆ ಭೇಟಿ ನೀಡಿ ಎಂಎಲ್ಸಿ ರಾಜೇಂದ್ರ ರಾಜಣ್ಣ ಅವರು ದೂರು ನೀಡಿದ್ದಾರೆ. ಕಾಂಗ್ರೆಸ್ ಎಂಎಲ್ಸಿ ಹಾಗೂ ಸಚಿವ ಕೆ.ಎನ್ ರಾಜಣ್ಣ ಪುತ್ರ ರಾಜೇಂದ್ರ ಅವರು ತುಮಕೂರು ಎಸ್ಪಿ ಅಶೋಕ್ ವೆಂಕಟ್ ಅವರಿಗೆ ದೂರು ನೀಡಿದ್ದಾರೆ. ತುಮಕೂರಿನ ಎಸ್ಪಿ ಕಚೇರಿಗೆ ಭೇಟಿ ನೀಡಿ ರಾಜೇಂದ್ರ ದೂರು ಸಲ್ಲಿಸಿದ್ದಾರೆ. ಮಾಧ್ಯಮಗಳನ್ನು ದೂರ ಇಟ್ಟು ಎಸ್‌ಪಿಗೆ ರಾಜೇಂದ್ರ ಅವರು ದೂರು ನೀಡಿದ್ದಾರೆ 2024ರ ನವೆಂಬರ್ ನಲ್ಲಿ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿದ್ದಾರೆ. ತುಮಕೂರಿನ ಕ್ಯಾತಸಂದ್ರ ಬಳಿಯ ರಜತಾದ್ರಿ ಮನೆಯಲ್ಲಿ ಈ ಒಂದು ಪ್ರಕರಣ ನಡೆದಿತ್ತು. ಇನ್ನು ಇದೆ ವಿಚಾರವಾಗಿ ತಮ್ಮ ಮೇಲೆ ಹನಿಟ್ರ್ಯಾಪ್ ಆಗಿಲ್ಲ. ನಾಲ್ಕು ತಿಂಗಳ ಹಿಂದೆ 5 ಲಕ್ಷ ರು.ಗೆ ಸುಪಾರಿ ಪಡೆದು ಕೊಲೆಗೆ ದುಷ್ಕರ್ಮಿಗಳು ಯತ್ನಿಸಿದ್ದಾರೆ ಎಂದು ಆರೋಪಿಸಿ ತನಿಖೆ ನಡೆಸುವಂತೆ ಗುರುವಾರ ರಾಜ್ಯ ಪೊಲೀಸ್…
ಮೈಸೂರು : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿದೆ. ಇದರ ಬೆನ್ನಲ್ಲೇ ಎಂಎಲ್ಸಿ ಚಲುವಾದಿ ನಾರಾಯಣಸ್ವಾಮಿ ಈಗ ಶಾಸಕ ಯತ್ನಾಳ ಆಯ್ತು ನೆಕ್ಸ್ಟ್ ವಿಕೆಟ್ ಎಸ್‌ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರದ್ದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಟೆಸ್ಟ್ ಆಡೋದನ ಬಿಟ್ಟು ಒನ್ ಡೇ ಶುರು ಮಾಡಿಕೊಂಡಿದೆ. ಮುಂದೆ ಏನಿದ್ರೂ ಟಿ-ಟ್ವೆಂಟಿ ಮ್ಯಾಚ್ ಆಡುತ್ತದೆ ಎಂದು ಮೈಸೂರಿನಲ್ಲಿ ಚಲವಾದಿ ನಾರಾಯಣಸ್ವಾಮಿ ಸ್ಫೋಟಕವಾದ ಹೇಳಿಕೆ ನೀಡಿದರು. ಇನ್ನು ಹಿಂದೂ ಹುಲಿ ಎಂದು ಕರೆಯುತ್ತಿದ್ದ ಶಾಸಕ ಯತ್ನಾಳ್ ಅವರ ಉಚ್ಚಾಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯಲ್ಲಿ ಹುಲಿ ಅಂದವರನ್ನು ಕಾಡಿಗೆ ಕಳುಹಿಸಿ ಬಿಡುತ್ತಾರೆ. ಬಿಜೆಪಿಯಲ್ಲಿ ಹುಲಿ ಅಂತ ಯಾರು ಇಲ್ಲ. ಅಲ್ಲದೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರವಾಗಿ ನಾವಿದ್ದೇವೆ ಎಂದು ಯಾರು ಹೇಳಬಾರದು ಎಂದು ಮೈಸೂರಿನಲ್ಲಿ…
ಬೆಂಗಳೂರು : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಉಚ್ಚಾಟನೆ ಆದ ಎರಡು ದಿನಗಳಿಂದ ಸೈಲೆಂಟಾಗಿದ್ದ ಶಾಸಕ ಯತ್ನಾಳ್ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಹೌದು ಎರಡು ದಿನಗಳ ಬಳಿಕ ಮತ್ತೆ ಶಾಸಕ ಯತ್ನಾಳ್ ಆಕ್ಟಿವ್ ಆಗಿದ್ದು ಇಂದು ಬೆಂಗಳೂರಿನಲ್ಲಿ ಆಪ್ತರ ಜೊತೆ ಸಭೆ ನಡೆಯುತ್ತಿದ್ದು, ಈ ಒಂದು ಸಭೆಯಲ್ಲಿ ಭಾಗಿಯಾಗಲು ಹೈದರಾಬಾದ್ ನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.ಈ ವೇಳೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಶಾಸಕ ಯತ್ನಾಳ್ ಅವರು ತೆರಳಿರುವುದು ಅವರ ಮುಂದಿನ ನಡೆಯ ಕುರಿತು ಇದೀಗ ಕುತೂಹಲ ಕೆರಳಿಸಿದೆ. ಈ ಮೊದಲು ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ನಡೆಸಲು ರೆಬೆಲ್ ತಂಡ ತೀರ್ಮಾನಿಸಿತ್ತು. ಮಧ್ಯಾಹ್ನ 12 ಗಂಟೆಗೆ ಕುಮಾರ ಬಂಗಾರಪ್ಪ ನಿವಾಸದಲ್ಲಿ ರೆಬೆಲ್ಸ್ ಟೀಂ ಸಭೆ ನಡೆಸಲು ನಿರ್ಧರಿಸಿತ್ತು. ಆದರೆ ಇಂದು…
ಹುಬ್ಬಳ್ಳಿ : ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆಯಾಗಿದ್ದಾರೆ. ಯತ್ನಾಳ ಉಚ್ಚಾಟನೆ ಬೆನ್ನಲ್ಲೇ ವಿಜಯಪುರ ನಗರದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು ಇದುವರೆಗೂ 174 ಜನರು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಶಾಸಕ ರಾಜು ಕಾಗೆ ಹೈಕಮಾಂಡ್ ಸೂಚಿಸಿದರೆ ಯತ್ನಾಳ ಅವರನ್ನು ಕಾಂಗ್ರೆಸ್ ಗೆ ಕರೆ ತರಲು ಸಿದ್ಧನಿದ್ದೇನೆ ಎಂದು ತಿಳಿಸಿದರು. ಹುಬ್ಬಳ್ಳಿಯಲ್ಲಿ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಹೈಕಮಾಂಡ್ ಸೂಚಿಸಿದರೆ ಯತ್ನಾಳನ್ನು ಕಾಂಗ್ರೆಸ್ ಗೆ ಕರೆ ತರಲು ನಾನು ಸಿದ್ಧ. ಯತ್ತಾಳ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಅವರಿಗೆ ಸಂಪೂರ್ಣವಾಗಿ ಸ್ವಾಗತ. ಅಕಸ್ಮಾತ್ ಹೈಕಮಾಂಡ್ ಈ ಕುರಿತು ಹೇಳಿದರೆ ಅವರನ್ನು ಪಕ್ಷಕ್ಕೆ ಕರೆತರಲು ನಾನು ಸಿದ್ಧನಿದ್ದೇನೆ ಎಂದು ಹುಬ್ಬಳ್ಳಿಯಲ್ಲಿ ತಿಳಿಸಿದರು.
ಬೆಂಗಳೂರು : ಬಿಜೆಪಿಯ ಶಾಸಕ ಉದಯ್ ಗರುಡಾಚಾರ್ ಅವರ ತಂದೆ ಹಾಗೂ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿಎನ್ ಗರುಡಾಚಾರ್ ಇಂದು ನಿಧಾನರಾಗಿದ್ದಾರೆ. ಬಿಎನ್ ಗರುಡಾಚಾರ್ ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ ಗರುಡಾಚಾರ್ ಅವರ ತಂದೆ ನಿಧನರಾಗಿದ್ದಾರೆ. ಇಂದು ಬೆಂಗಳೂರಿನ ನಿವಾಸದಲ್ಲಿ ಬಿ ಎನ್ ಗರುಡಾಚಾರ್ಯ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಿಎನ್ ಗರುಡಾಚಾರ್ ಅವರು ಬೆಂಗಳೂರು ಕಮಿಷನರ್ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು. ಬೆಂಗಳೂರಿನಲ್ಲಿ ಮೊದಲ ಟ್ರಾಫಿಕ್ ಸಿಗ್ನಲ್ ಸ್ಥಾಪನೆ ಮಾಡಿದಾಗ ಡಿಸಿಪಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.ಟ್ರಾಫಿಕ್ ಸಿಗ್ನಲ್ ಸ್ಥಾಪನೆ ಮಾಡಿದಾಗ ಟ್ರಾಫಿಕ್ ಡಿಸಿಪಿಯಾಗಿ ಸೇವೆ ಸಲ್ಲಿಸಿದರು. 1963 ರಲ್ಲಿ ಎನ್ ಆರ್ ಜಂಕ್ಷನ್ ನಲ್ಲಿ ಟ್ರಾಫಿಕ್ ಸಿಗ್ನಲ್ ಸ್ಥಾಪನೆಯಾಗಿತ್ತು. ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲೂಕಿನ, ಬಿಂಡಿಗೆನವಿಲೇ ಗ್ರಾಮದ ಮೂಲದವರಾದ ಬಿ.ಎನ್.ಗರುಡಾಚಾರ್ ರವರು ತಮ್ಮ ಶಿಕ್ಷಣವನ್ನು ಪೂರೈಸಿ, ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಯಾಗಿ ನೇಮಕಗೊಂಡು, ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ,…
ಬೆಂಗಳೂರು : ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆಯು 2025-26 ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಟೆಕ್ಸ್ ಟೈಲ್ ಟೆಕ್ನಲಜಿ ಕೋರ್ಸಿಗೆ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾದ ನಂತರ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಈ ಡಿಪ್ಲೊಮಾ ಕೋರ್ಸ್ 3 ವರ್ಷದ ಅವಧಿಯದ್ದಾಗಿದ್ದು. ಬೆಂಗಳೂರು ಕೆ.ಆರ್.ಸರ್ಕಲ್ನ್ಲ್ಲಿರುವ ಸರ್ಕಾರಿ ಜವಳಿ ತಾಂತ್ರಿಕ ಸಂಸ್ಥೆಯಲ್ಲಿ ಪ್ರವೇಶ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಾಲತಾಣ https://gpt.karnataka.gov.in/gittbengaluru/public/ ಹಾಗೂ ಪ್ರಾಂಶುಪಾಲರಾದ ಶ್ರೀಮತಿ ಉಷಾ ಎಸ್. ಮೊಬೈಲ್ ಸಂಖ್ಯೆ: 9481101049, ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸಯ್ಯ ವಿ. ಮೊಬೈಲ್ ಸಂಖ್ಯೆ: 9448705205 ಇವರನ್ನು ಸಂರ್ಕಿಸಬಹುದಾಗಿದೆ. ಅಥವಾ ಸಂಸ್ಥೆಗೆ ಭೇಟಿ ನೀಡಿ ಕಾರ್ಯಾಲಯದಿಂದ ಮಾಹಿತಿ ಪಡೆಯಬುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.













