Author: kannadanewsnow05

ಬೆಂಗಳೂರು : ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಈ ಒಂದು ಘಟನೆ ನಡೆದಿದೆ. ನಾಗರಬಾವಿಯ ವಿನಾಯಕ ಲೇಔಟ್ ನಲ್ಲಿ ಚಾಕು ಇರಿದಿರುವ ಘಟನೆ ನಡೆದಿದೆ ವಕೀಲ ದಳಪತಿ (70) ಎನ್ನುವವರಿಗೆ ರಾಘವೇಂದ್ರ ಎನ್ನುವ ವ್ಯಕ್ತಿ ಚಾಕು ಇರಿದಿದ್ದಾನೆ. ದಳಪತಿ ಮನೆಯ ಬಳಿ ರಾಘವೇಂದ್ರ ಚಾಕುವಿನಿಂದ ಇರದಿದ್ದಾನೆ. ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ನಡೆದಿದು, ಚಾಕುವಿನಿಂದ ಬೆನ್ನಿಗೆ ಚುಚ್ಚಿ ಆರೋಪಿ ರಾಘವೇಂದ್ರ ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಸದ್ಯ ನಾಗರಬಾವಿಯ ಜಿಎಂ ಆಸ್ಪತ್ರೆಯಲ್ಲಿ ವಕೀಲ ದಳಪತಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಈ ಬಗ್ಗೆ ಆರೋಪಿಯ ಕುಟುಂಬಸ್ಥರು ದೂರು ನೀಡಿದ್ದಾರೆ. ಕೊಲೆ ಯತ್ನ ಕೇಸ್ ದಾಖಲಿಸಿ ಪೊಲೀಸರು ರಾಘವೇಂದ್ರನನ್ನು ಅರೆಸ್ಟ್ ಮಾಡಿದ್ದಾರೆ.

Read More

ಹನುಮನ ಹೆಸರುಗಳ ರಹಸ್ಯವೇನು? ಭಗವಾನ್ ಹನುಮಂತನಿಗೆ ಹಲವು ಹೆಸರುಗಳಿವೆ ಮತ್ತು ಪ್ರತಿ ಹೆಸರಿನ ಹಿಂದೆ ಕೆಲವು ರಹಸ್ಯಗಳಿವೆ. ಹನುಮಂತನಿಗೆ ಸುಮಾರು 108 ಹೆಸರುಗಳಿವೆ. ಅವುಗಳಲ್ಲಿ ಆತನ 12 ಹೆಸರುಗಳನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಹನುಮಂತನು ಶಕ್ತಿಶಾಲಿಗಳಲ್ಲಿ ಶ್ರೇಷ್ಠನು. ಕಲಿಗಾಲದಲ್ಲಿ ಭಕ್ತನು ಭಕ್ತಿಯಿಂದ ಹನುಮಂತನನ್ನು ಪೂಜಿಸಿದರೆ ಆತನು ಉದ್ಧಾರವಾಗುತ್ತಾನೆ. ಹನುಮಂತನ ನಾಮ ಸ್ಮರಣೆಯನ್ನು ಮಾಡುವ ಭಕ್ತನು ತನ್ನೆಲ್ಲಾ ನೋವುಗಳಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾನೆ ಮತ್ತು ಅವನ ಎಲ್ಲಾ ಕೆಲಸಗಳು ಸರಾಗವಾಗಿ ಪೂರ್ಣಗೊಳ್ಳುತ್ತವೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ…

Read More

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಇದೀಗ ಜಾರಿ ನಿರ್ದೇಶನಾಲಯದ ಟೆನ್ಶನ್ ಶುರುವಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕುಮಾರ್ ನಾಯಕ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗಾಗಿ ಸಹಜವಾಗಿ ಸಿಎಂ ಸಿದರಾಮಯ್ಯ ಅವರಿಗೆ ಇದೀಗ ಇಡಿ ಅಧಿಕಾರಿಗಳ ಟೆನ್ಶನ್ ಹೆಚ್ಚಾಗಿದೆ. ಹಾಗಾಗಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ವಿಚಾರಣೆಗೆ ಹಾಜರಾಗುವಂತೆ ಶೀಘ್ರದಲ್ಲಿ ಇಡಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ತರಲಿ ಲೋಕಾಯುಕ್ತ ಅಧಿಕಾರಿಗಳ ವಿಚಾರಣೆಯನ್ನು ಕೂಡ ಎದುರಿಸಿದ್ದಾರೆ ಹಾಗಾಗಿ ಸಹಜವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿ ಅಧಿಕಾರಿಗಳ ಭಯ ಶುರುವಾಗಿದೆ ಎನ್ನಲಾಗುತ್ತಿದೆ.

Read More

ಚಿತ್ರದುರ್ಗ : ಡೆತ್ ನೋಟ್ ಬರೆದಿಟ್ಟು ಅಡಿಕೆ ವ್ಯಾಪಾರಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗದ ಸಿದ್ದಾಪುರ ಬಳಿ ನಡೆದಿದೆ. ಸಿದ್ದಾಪುರ ಸಮೀಪದಲ್ಲಿರುವ ಗೋದಾಮಿನಲ್ಲಿ ಶೈಲೇಶ್ (45) ಎನ್ನುವ ವ್ಯಾಪಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಡೆತ್ ನೋಟ್ ನಲ್ಲಿ ಉಲ್ಲೆಖಿಸಿರುವ ಶೈಲೇಶ್, ಅಡಿಕೆ ವರ್ತಕ ಉದಯ ಶೆಟ್ಟಿ ವಿರುದ್ಧ ವಂಚನೆ ಹಾಗೂ ನಿಂದನೆ ಆರೋಪ ಮಾಡಿದ್ದಾರೆ. ವ್ಯಾಪಾರಿ ಶೈಲೇಶ್ ಬಳಿ ಉದಯಶೆಟ್ಟಿ ಅಡಿಕೆಯನ್ನು ಖರೀದಿಸಿದ್ದರು. ಸುಮಾರು 6.60 ಕೋಟಿ ಮೌಲ್ಯದ ಅಡಿಕೆಯನ್ನು ಉದಯಶಟ್ಟಿ ಶೈಲೇಶ್ ಬಳಿ ಖರೀದಿಸಿದ್ದರು. ಅಡಿಕೆ ಖರೀದಿ ಮಾಡಿದ್ದರ ಹಣ ಕೇಳಲು ಹೋದಾಗ ಉದಯಶೆಟ್ಟಿ ನಿಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಶೈಲೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನನ್ನ ಸಾವಿಗೆ ಉದಯಶೆಟ್ಟಿ ಕಾರಣ ಎಂದು ಡೆತ್ ನೋಟ್ ನಲ್ಲಿ ಹೆಸರು ಉಲ್ಲೆಖಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಕೊರೋನಾ ಸಮಯದಲ್ಲಿ ಅಗತ್ಯವೇ ಇಲ್ಲದೆ ಇರುವ ಸಂದರ್ಭದಲ್ಲಿ ಸುಮಾರು 84.99 ಕೋಟಿ ವೆಚ್ಚದಲ್ಲಿ ಸಿಟಿ ಸ್ಕ್ಯಾನ್ ಯಂತ್ರೋಪಕರಣಗಳನ್ನು ಖರೀದಿಸಿದ್ದು ಅದರಲ್ಲಿ 15.83 ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ನ್ಯಾ.ಕುನ್ಹಾ ಆಯೋಗದ ವರದಿಯಲ್ಲಿನ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ಕೊರೋನಾ ವೈರಾಣು ಪತ್ತೆಗೆ ಯಾವ ರೀತಿಯಲ್ಲೂ ನೆರವಿಗೆ ಬರದ 17 ಸಿ.ಟಿ ಸ್ಕ್ಯಾನ್ ಯಂತ್ರಗಳನ್ನು, ಕೋವಿಡ್ ನಿರ್ವಹಣೆಗಾಗಿ ಬಿಡುಗಡೆ ಮಾಡಿದ ಅನುದಾನದಲ್ಲೇ ಖರೀದಿಸಲಾಗಿದೆ. ಇದರಿಂದ ಕೋವಿಡ್ ನಿಯಂತ್ರಣಕ್ಕೆ ಯಾವ ಪ್ರಯೋಜನವೂ ಆಗಿಲ್ಲ ಎಂದು ವರದಿ ಹೇಳಿದೆ.128 ಸ್ಟೈಸ್ ಸಾಮರ್ಥ್ಯದ ಸಿ.ಟಿ ಸ್ಕ್ಯಾನ್ ಯಂತ್ರಗಳ ಖರೀದಿಗೆ ಸಂಬಂಧಿಸಿದಂತೆ ಪಿಲಿಪ್ಸ್ ಇಂಡಿಯಾ 128 ಸ್ಟೈಸ್ ಸಾಮರ್ಥ್ಯದ ಯಂತ್ರಕ್ಕೆ ದರ ನಮೂದಿಸಿ, ಫೋರ್ಸಸ್ ಹೆಲ್ತ್ಕೇರ್ 160 ಸ್ಟೈಸ್ ಸಾಮರ್ಥ್ಯದ ಯಂತ್ರಕ್ಕೆ ದರ ನಮೂದಿಸಿ ಬಿಡ್ ಸಲ್ಲಿಸಿದ್ದವು. 2020-2022ರ ನಡುವೆ ವಿವಿಧ ಜಿಲ್ಲಾಸ್ಪತ್ರೆಗಳಿಗೆಂದು 128 ಸ್ಟೈಸ್ ಸಾಮರ್ಥ್ಯದ 11 ಸಿ.ಟಿ ಸ್ಕ್ಯಾನ್ ಯಂತ್ರಗಳನ್ನು ಖರೀದಿಸಲಾಗಿದೆ. ಸೇವ್ ಮೆಡಿಟೆಕ್ ಸಿಸ್ಟಮ್ಸ್ ಎಂಬ ಕಂಪನಿಯು 2020ರ ಆಗಸ್ಟ್‌ನಲ್ಲಿ ಒಂದು…

Read More

ಹಾಸನ : ಹಾಸನದಲ್ಲಿ ಭೀಕರವಾದಂತಹ ಕೊಲೆ ನಡೆದಿದ್ದು, ದುಷ್ಕರ್ಮಿಗಳು ರೌಡಿಶೀಟರ್ ಒಬ್ಬನಿಗೆ ಕಂಠಪೂರ್ತಿ ಕುಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನ ನಗರದ ಚನ್ನಪಟ್ಟಣದಲ್ಲಿ ಈ ಒಂದು ಕೊಲೆ ನಡೆದಿದೆ. ನಿನ್ನೆ ರಾತ್ರಿ ಸ್ನೇಹಿತರೊಂದಿಗೆ ರೌಡಿಶೀಟರ್ ರಖಿತಾ ಮದ್ಯ ಸೇವಿಸಿದ್ದ. ಆಟೋದಲ್ಲಿ ಕುಳಿತು ರಖಿತಾ ಮಧ್ಯ ಸೇವಿಸಿದ್ದ. ಇದೆ ವೇಳೆ ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆ ಯತ್ನ ಕೆಸ್ ನಲ್ಲಿ ರಖಿತಾ ಆರೋಪಿಯಾಗಿದ್ದ. ಹಳೆ ವೈಷ್ಯಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳಗಾವಿ : ವಕ್ಫ್ ವಿವಾದ ಹಿನ್ನೆಲೆಯಲ್ಲಿ ರೈತರಿಗೆ ನೀಡಿದ್ದ ನೋಟಿಸ್ ಗಳನ್ನು ಹಿಂಪಡೆದ ವಿಚಾರವಾಗಿ ಬೆಳಗಾವಿಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ನೋಟಿಸ್ಗಳನ್ನು ಹಿಂಪಡೆದಿದ್ದು ಶಾಶ್ವತವಲ್ಲ. ಆದರೆ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿಗೆ ಏನಾದರೂ ವಿರೋಧ ವ್ಯಕ್ತಪಡಿಸಿದರೆ ಕಾಂಗ್ರೆಸ್ ಸಂಸದರು ರಾಜ್ಯದಲ್ಲಿ ಓಡಾಡಲು ಕಠಿಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನಮ್ಮ ಹೋರಾಟದಿಂದ ವಕ್ಫ್ ನೋಟಿಸ್ ಹಿಂಪಡೆಯುತ್ತಿದ್ದಾರೆ. ಆದರೆ ಅದು ಶಾಶ್ವತ ಅಲ್ಲ. ಎಲ್ಲವನ್ನು ರದ್ದು ಮಾಡಬೇಕು. ಗೆಜೆಟ್ ನೋಟಿಫಿಕೇಶನ್ ಮಾಡಿದ್ದು ಎಲ್ಲಾ ರದ್ದುಪಡಿಸಬೇಕು. ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿಯನ್ನು ತರುತ್ತಿದೆ. ಒಂದು ವೇಳೆ ಕಾಯ್ದೆಗೆ ವಿರೋಧಿಸಿದರೆ ರೈತರು ಧರಣಿ ಮಾಡುತ್ತಾರೆ.ಕರ್ನಾಟಕದ ಕಾಂಗ್ರೆಸ್ ಸಂಸದರ ಮನೆಯ ಮುಂದೆ ಧರಣಿ ಮಾಡುತ್ತಾರೆ ಎಂದು ಅವರು ತಿಳಿಸಿದರು. ಅಕಸ್ಮಾತ್ ಬಿಲ್ ಗೆ ವಿರೋಧ ಮಾಡಿದರೆ, ಕೈ ಎಂಪಿಗಳು ಕರ್ನಾಟಕದಲ್ಲಿ ಓಡಾಡುವುದೇ ಕಠಿಣ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.ರೈತರ ಜಮೀನು, ಗುಡಿ ಗುಂಡಾರ ಮಠದ ಜಾಗ ಹೋಗುತ್ತಿವೆ. ನಮಾಜ್ ಮಾಡಲು…

Read More

ಹಾಸನ : ಇಂದಿನ ಯುವ ಜನತೆಯಂತೂ ಸಂಪೂರ್ಣವಾಗಿ ರೀಲ್ಸ್ ಎನ್ನುವ ಮಾಯಾಲೋಕದಲ್ಲಿ ಮುಳುಗಿ ಬಿಟ್ಟಿದೆ. ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಲೈಕ್ಸ್ ಹಾಗೂ ಕಮೆಂಟ್ಸ್ ಗೋಸ್ಕರ ಹುಚ್ಚಾಟಕ್ಕೆ ಇಳಿದಿದ್ದಾರೆ. ಇದೀಗ ಹಾಸನದಲ್ಲಿ ಹಂತದ್ದೇ ಘಟನೆ ನಡೆದಿದ್ದು ಪೆಟ್ರೋಲ್ ಬಾಂಬ್ ಸ್ಪೋಟಿಸಿ ಇನ್ಸ್ಟ್ರಾಗ್ರಾಮ್ ನಲ್ಲಿ ವಿಡಿಯೋ ಕೂಡ ಅಪ್ಲೋಡ್ ಮಾಡಿರುವ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಹೌದು ನಡು ರಸ್ತೆಯಲ್ಲಿ ಪೆಟ್ರೋಲ್ ಬಾಂಬ್ ಸ್ಪೋಟಿಸಿ ವಿದ್ಯಾರ್ಥಿಗಳು ಇದೀಗ ಪುಂಡಾಟ ನಡೆಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಪೆಟ್ರೋಲ್ ಬಾಂಬ್ ಸ್ಪೋಟದ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ. ಹಾಸನ ಹೊರವಲಯದಲ್ಲಿ ಬೊಮ್ಮನಾಯಕನ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿತ್ತು. ವಿದ್ಯಾರ್ಥಿಗಳ ಈ ಹುಚ್ಚಾಟಕ್ಕೆ ಸಹಜವಾಗಿ ಜನರು ಬೆಚ್ಚಿಬಿದ್ದಿದ್ದಾರೆ.

Read More

ಬೆಳಗಾವಿ : ಡಾ. ಬಿ ಆರ್ ಅಂಬೇಡ್ಕರ್ ಅವರು ಇಸ್ಲಾಂ ಧರ್ಮವನ್ನು ಸ್ವೀಕಾರ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು ಎಂದು ಕಾಂಗ್ರೆಸ್ ಮಾಜಿ ಶಾಸಕ ಅಜ್ಜಂಪಿರ್ ಖಾದ್ರಿ ಹೇಳಿಕೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದು ಅಜ್ಜಂಪೀರ್ ಖಾದ್ರಿ ಒಬ್ಬ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಾ. ಅಂಬೇಡ್ಕರ್ ಬಗ್ಗೆ ಅಜ್ಜಂಪೀರ್ ಖಾದ್ರಿ ಸರಿಯಾಗಿ ಅಧ್ಯಯನ ಮಾಡಿಲ್ಲ. ಆತನೊಬ್ಬ ನಾಲಾಯಕ್. ಅಂಬೇಡ್ಕರ್ ಅವರಿಗೆ ಹೈದರಾಬಾದ್ ನಿಜಾಮ ಆಸೆ ಹುಟ್ಟಿಸಿದ್ದ. ನೀವು ಇಸ್ಲಾಂ ಧರ್ಮಕ್ಕೆ ಸೇರಿದರೆ ಅರ್ಧ ಆಸ್ತಿ ಕೊಡುತ್ತೇನೆ ಅಂತ ಹೇಳಿದ್ದ. ನನ್ನ ಕುಟುಂಬದ ಉದ್ಧಾರಕ್ಕಾಗಿ ಇಂತಹ ಹೇಸಿಗೆ ಕೆಲಸ ಮಾಡಲ್ಲ. ನಾನು ಇಸ್ಲಾಂ ಧರ್ಮಕ್ಕೆ ಸೇರಿದರು ಮತ್ತೆ ನನ್ನನ್ನು ದಲಿತರ ಹಾಗೆ ಕಾಣುತ್ತಾರೆ. ಅದಕ್ಕೆ ಇಸ್ಲಾಂ ಧರ್ಮಕ್ಕೆ ಸೇರಲ್ಲ ಅಂತ ಅಂಬೇಡ್ಕರ್ ಅವರು ಹೇಳಿದರು. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದರು. ಭಾರತದಲ್ಲಿ ಬಂದು ಇಸ್ಲಾಂ ಸೇರಿದರೆ ದೇಶ ರಾಷ್ಟ್ರಾಂತರ ಆಗುತ್ತದೆ. ಇಂದು…

Read More

ರಾಯಚೂರು : ಕೆರೆಯಲ್ಲಿ ಕುದುರೆ ಮೈ ತೊಳೆಯಲು ಹೋಗಿದ್ದ ಯುವಕ ನೀರುಪಾಲಾಗಿರುವ ಘಟನೆ ರಾಯಚೂರು ಬಳಿ ಸಿದ್ರಾಮಪುರ ಕೆರೆಯಲ್ಲಿ ನಿನ್ನೆ ಈ ಒಂದು ದುರ್ಘಟನೆ ಸಂಭವಿಸಿದೆ. ನಗರದ ಜಹರಾಬಾದ್ ನಿವಾಸಿ ಅಜೀಮ್ (28) ನೀರುಪಾಲಾದ ಯುವಕ ಎಂದು ತಿಳಿದುಬಂದಿದೆ. ಮೇಲೆ ಕುಳಿತಿದ್ದ ಅಜೀನನ್ನು ಕುದುರೆ ಕೆರೆಯಲ್ಲಿ ಬೀಳಿಸಿದೆ. ಕೆರೆಯಲ್ಲಿ ಕೆಸರಿನಲ್ಲಿ ಸಿಲುಕಿ ಅಜೀಮ್ ಕೊನೆಯುಸಿರೆಳೆದಿದ್ದಾನೆ.ಅಜಿಂ ಮೃತದೇಹವನ್ನು ಇದೀಗ ಅಗ್ನಿಶಾಮಕದಳದ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.ಘಟನೆ ಕುರಿತಂತೆ ಯರಿಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More