Author: kannadanewsnow05

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿಗೆ ಬಿಗ್ ರಿಲೀಫ್ ಎನ್ನುವಂತೆ ಹೈಕೋರ್ಟ್, ಅವರ ವಿರುದ್ಧ ವಿಧಿಸಲಾಗಿದ್ದಂತ ಗಡಿಪಾರು ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ಧರ್ಮಸ್ಥಳ ಗ್ರಾಮದಲ್ಲಿನ ಬುರುಡೆ ಕೇಸ್ ಹಾಗೂ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹದ ಪ್ರಕರಣದಲ್ಲಿ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿಗೆ ವಿಧಿಸಿದ್ದಂತ ಗಡಿಪಾರು ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದ್ ಅವರಿದ್ದಂತ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಅಲ್ಲದೇ ಪುತ್ತೂರು ಉಪ ವಿಭಾಗಾಧಿಕಾರಿಗೆ ಸೂಕ್ತ ಕಾರಣ, ಸೆಕ್ಷನ್ ಗಳೊಂದಿಗೆ ಆದೇಶ ಹೊರಡಿಸಲು ಹೈಕೋರ್ಟ್ ಸೂಚಿಸಿದೆ.

Read More

ಧಾರವಾಡ : 10 ಜನಕ್ಕಿಂತ ಹೆಚ್ಚು ಜನ ಸೇರಿದರೆ ಅಕ್ರಮ ಕೂಟ ವೆಂದು ಪರಿಗಣಿಸಿದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಧಾರವಾಡ ಹೈಕೋರ್ಟ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ನಾಲ್ಕು ವಾರ ಕಾಲಾವಕಾಶ ಕೋರಿತು. ಮಧ್ಯಂತರ ಆದೇಶ ಅರ್ಜಿದಾರರಿಗೆ ಸೀಮಿತಗೊಳಿಸಲು ಎಜಿ ಮನವಿ ಮಾಡಿದರು. ಹುಬ್ಬಳ್ಳಿಯ ಪುನಶ್ಚೇತನ ಸೇವಾ ಸಂಸ್ಥೆ ರಿಟ್ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ವೇಳೆ ಸರ್ಕಾರದ ಆದೇಶ ನಾಗರೀಕರ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಿದೆ. ಹೀಗಾಗಿ ಮಧ್ಯಂತರ ಆದೇಶ ಅರ್ಜಿದಾರರಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಕಾನೂನಿನಿಂದಲ್ಲದೆ ಸರ್ಕಾರಿ ಆದೇಶದಿಂದ ಮೂಲಭೂತ ಹಕ್ಕು ನಿರ್ಭಂಧಿಸುವಂತಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿತು.

Read More

ತುಮಕೂರು : ತುಮಕೂರು ಜನತೆಗೆ ಸಿಹಿ ಸುದ್ದಿಯೊಂದ್ ಇದ್ದು ತುಮಕೂರಿನವರೆಗೂ ಮೆಟ್ರೋ ವಿಸ್ತರಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಬಿಎಂಆರ್‌ಸಿಎಲ್‌ ಈಗಾಗಲೇ ಟೆಂಡರ್‌ ಕರೆದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಈ ಕುರಿತಾಗಿ ರಾಜ್ಯ ಸರಕಾರ ಸಾಧಕ-ಬಾಧಕಗಳ ಚರ್ಚೆ ಮಾಡಿದೆ. ನಂತರ ಡಿಪಿಆರ್‌ ಮಾಡಲು ತೀರ್ಮಾನಿಸಲಾಗಿದೆ. ನಾಲ್ಕೈದು ತಿಂಗಳಲ್ಲಿ ಡಿಪಿಆರ್ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದ್ದೇವೆ ಎಂದು ಅವರು ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿ ಸ್ಫೋಟ ಕುರಿತು ಮಾಧ್ಯಮದವರ ಪ್ರಶ್ನೆಗೆ, ಕೇಂದ್ರದಲ್ಲಿ ವಿವಿಧ ಏಜೆನ್ಸಿಗಳಿವೆ. ಇವೆಲ್ಲವೂ ಒಟ್ಟಿಗೆ ಸೇರಿ ಕೆಲಸ ಮಾಡುತ್ತವೆ. ಅನುಮಾನದ ಮೇಲೆ ಆರೋಪಿಗಳನ್ನು ಹಿಡಿದುಕೊಂಡು ಬರುತ್ತಾರೆ. ಸಾಕ್ಷಿ ಸಿಗದಿದ್ದರೆ ಬಿಟ್ಟು ಕಳುಹಿಸುತ್ತಾರೆ ಎಂದು ಉತ್ತರಿಸಿದರು

Read More

ಬಾಂಗ್ಲಾದೇಶ : 2024ರ ಬಾಂಗ್ಲಾ ಹಿಂಸಾಚಾರದ ಪ್ರಕರಣದಲ್ಲಿ ಮಾಜಿ ಅಧ್ಯಕ್ಷೆ ಶೇಖ್ ಹಸೀನಾ ತಪ್ಪಿತಸ್ಥೆ ಎಂಬುದಾಗಿ ಅಂತಾರಾಷ್ಟ್ರೀಯ ಅಪರಾಧಿತ ನ್ಯಾಯಮಂಡಳಿ( ICT) ಘೋಷಣೆ ಮಾಡಿದೆ. ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಸೋಮವಾರ ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದ ಮೇಲೆ ಶಿಕ್ಷೆ ವಿಧಿಸಲಾಯಿತು. ಆಗಸ್ಟ್ 2024 ರಲ್ಲಿ ಅವರ ಸರ್ಕಾರವನ್ನು ಉರುಳಿಸಿದ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ಮೇಲೆ ಮಾರಕ ಕ್ರಮ ಕೈಗೊಳ್ಳಲು ಆದೇಶಿಸುವಲ್ಲಿ ಅವರ ಪಾತ್ರಕ್ಕಾಗಿ. ಗೈರುಹಾಜರಿಯಲ್ಲಿ ನೀಡಲಾದ ತೀರ್ಪು, ಫೆಬ್ರವರಿ 2026 ರಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗಳಿಗೆ ಮುಂಚಿತವಾಗಿ ದೇಶದ ರಾಜಕೀಯ ಪ್ರಕ್ಷುಬ್ಧತೆಯಲ್ಲಿ ನಾಟಕೀಯ ಏರಿಕೆಯನ್ನು ಸೂಚಿಸುತ್ತದೆ. ದಂಗೆಯ ಸಮಯದಲ್ಲಿ ಢಾಕಾದಿಂದ ಪಲಾಯನ ಮಾಡಿದ ನಂತರ 78 ವರ್ಷದ ಹಸೀನಾ ಭಾರತದಲ್ಲಿ ವಾಸಿಸುತ್ತಿದ್ದಾರೆ. ವಿಚಾರಣೆಗೆ ಹಾಜರಾಗಲು ಮತ್ತೆ ಮತ್ತೆ ನ್ಯಾಯಾಲಯದ ಆದೇಶಗಳನ್ನು ಅವರು ಧಿಕ್ಕರಿಸಿದ್ದರು, ಇದನ್ನು ಅವರು “ನ್ಯಾಯಶಾಸ್ತ್ರೀಯ ತಮಾಷೆ” ಎಂದು ಕರೆದಿದ್ದಾರೆ. ಕೊಲೆಯನ್ನು ತಡೆಯುವಲ್ಲಿ ವಿಫಲತೆ ಸೇರಿದಂತೆ ಐದು ಆರೋಪಗಳನ್ನು ಪ್ರಾಸಿಕ್ಯೂಟರ್‌ಗಳು ಅವರ ವಿರುದ್ಧ ದಾಖಲಿಸಿದ್ದರು, ಪ್ರತಿಭಟನೆಗಳ…

Read More

ಬೆಂಗಳೂರು : ಪ್ರಯಾಣಿಕರನ್ನು ಪಿಕಪ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲಾಟೆ ನಡೆದಿದೆ. ಚಾಲಕರಾದ ಸುಹೇಲ್ ಮತ್ತು ಜಗದೀಶ್ ನಡುವೆ ಗಲಾಟೆ ನಡೆದಿದೆ. ಈ ವೇಳೆ ಚಾಕು ಹಿಡಿದು ಸುಹೇಲ್ ಅಟ್ಟಹಾಸ ಮೆರೆದಿದ್ದಾನೆ. ಚಾಲಕ ಸುಹೇಲ್ ಮತ್ತೋರ್ವ ಚಾಲಕ ಜಗದೀಶ್ ಅನ್ನು ಅಟ್ಟಾಡಿಸಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ತಕ್ಷಣ ಸುಹೇಲ್ ನನ್ನ ಭದ್ರತಾ ಪಡೆಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಿಕಪ್ ಚಾಲಕರ ಹಾವಳಿ ಮಿತಿಮೀರಿದೆ. ಸೈಡ್ ಪಿಕಪ್ ಕಿಂಗ್ ಪಿನ್ ಗಳ ನಡುವೆ ನಿತ್ಯವೂ ಗಲಾಟೆ ನಡೆಯುತ್ತಲೇ ಇರುತ್ತದೆ. ಸೈಡ್ ಪಿಕಪ್ ಹಾವಳಿಗೆ ಪೊಲೀಸರು ಬ್ರೇಕ್ ಹಾಕದಿದ್ದರಿಂದ ಗಲಾಟೆಗಳು ನಡೆಯುತ್ತಿವೆ ಎಂದು ಏರ್ಪೋರ್ಟ್ ಪೊಲೀಸರ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

Read More

ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು ಟಿಪ್ಪರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರ ವಲಯದ ರಾಣಿ ಕ್ರಾಸ್ ನಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ಅನಂತಪುರ ಮೂಲದ ಅನಿತಾ (20) ಅಮೃತ ಯುವತಿ ಎಂದು ತಿಳಿದುಬಂದಿದೆ ಇನ್ನು ಬೈಕ್ ನ ಹಿಂಬದಿ ಕುಳಿತಿದ್ದ ಮತ್ತು ಮಹಿಳೆಗೆ ಗಂಭೀರವಾದ ಗಾಯಗಳಾಗಿದ್ದು ಟಿಪ್ಪರ್ ಜಪ್ತಿ ಮಾಡಿ ಪೊಲೀಸರು ಲಾರಿ ಚಾಲಕನನ್ನು ಅರೆಸ್ಟ್ ಮಾಡಿದ್ದಾರೆ. ಅಪಘಾತದ ಕುರಿತು ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಚಿತ್ರದುರ್ಗ,ನ,೧೬- ಜನಪ್ರಿಯ ಕತೆಗಳಿಗೆ ಚಲನಚಿತ್ರಗಳ ಸಂಭಾಷಣೆಯಲ್ಲಿ ಸಾಹಿತ್ಯದ ಸ್ಪರ್ಶ ಮೂಡಿಸುವ ಮೂಲಕ ಹೊಸ ಅಧ್ಯಾಯವನ್ನು ಬಿ.ಎಲ್.ವೇಣು ಸೃಷ್ಟಿಸಿದರು ಎಂದು ಚಿಂತಕ ಹಾಗೂ ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.ಕೆಂಧೂಳಿ ವಾರಪತ್ರಿಕೆ ಬಳಗದಿಂದ ಕೊಡಮಾಡುವ ಕೆಂಧೂಳಿ ರಾಜ್ಯೋತ್ಸವ ಪ್ರಶಸ್ತಿಯನ್ನು ಬಿ.ಎಲ್ ವೇಣು ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು, ಬಿ.ಎಲ್ ವೇಣು ಅವರು ಜನಪ್ರಿಯ ಕತೆ,ಕಾದಂಬರಿಕಾರರು ಸಹಜವಾಗಿಯೇ ಚಲನಚಿತ್ರಗಳ ಸಂಭಾಷಣೆಯ ಅವಕಾಶ ಬಂದಾಗ ಅದಕ್ಕೊಂದು ಸಾಹಿತ್ಯದ ಸ್ಪರ್ಶನೀಡಿ ಹೊಸ ಅರ್ಥ ಸೃಷ್ಟಿಸಿದರು ಎಂದು ಅವರು ಹೇಳಿದರು.ಸಮಾಜದ ದೊಡ್ಡ ಸಮಸ್ಯೆಯಾಗಿದ್ದ ಬೆತ್ತಲೆ ಸೇವೆಯಂತ ಸಾಮಾಜಿಕ ಸಮಸ್ಯೆಯ ಕುರಿತು ಬರೆದ ಕಾದಂಬರಿ ಲಕ್ಷಾಂತರ ಜನರಿಗೆ ಅದರ ಅರಿವು ಮೂಡಿಸುವ ಮೂಲಕ ಅನಿಷ್ಟ ಪದ್ದತಿಯನ್ನು ಹೋಗಲಾಡಿಲಸು ಕಾರಣವಾಯಿತು ಅಲ್ಲದೆ ಅದು ಚಲನಚಿತ್ರವಾಗುವ ಮೂಲಕ ಮತ್ತಷ್ಟು ಜನರಿಗೆ ಅರಿವು ಮೂಡಿಸಿದ ಕೆಲಸ ಮಾಡಿಸಿತು ಎಂದು ಅಭಿಪ್ರಾಯಪಟ್ಟರು. ಚಿತ್ರದುರ್ಗ ಇತಿಹಾಸವನ್ನು ಬರೆದ ವೇಣು ಅವರು ಅಪವಾದವಾಗಿದ್ದ ಹಿದು ಮುಸ್ಲಿಂ ನ ದ್ವೇಷಭಾವನೆಯನ್ನು ಅವರು ಕಲ್ಲರಳಿ ಹೂವಾಗಿ ಕಾದಂಬರಿ ಮೂಲಕ ಹಿಂದು ಮುಸ್ಲಿಂ…

Read More

ಬೆಂಗಳೂರು : ಬೆಂಗಳೂರಲ್ಲಿ ನಡು ರಸ್ತೆಯಲ್ಲಿಯೇ ಗ್ರಾಹಕ ನಿಂದ ಕ್ಯಾಬ್ ಡ್ರೈವರ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗ್ರಾಹಕ ಸಂತೋಷ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಸಾರ್ವಜನಿಕರು ಮತ್ತು ಪೊಲೀಸರ ಮೇಲು ಸಂತೋಷ್ ಎನ್ನುವವನಿಂದ ಹಲ್ಲೆ ನಡೆದಿದೆ ಮೈಸೂರು ನಿಂದ ಬೆಂಗಳೂರು ಏರ್ಪೋರ್ಟ್ಗೆ ಸಂತೋಷ್ ಕಾರ್ ಬುಕ್ ಮಾಡಿದ್ದ ಸಂತೋಷ್ ಕುಟುಂಬದ ಸದಸ್ಯರ ಜೊತೆಗೆ ಬದ್ರಿನಾಥ್ ಗೆ ತೆರಳುತ್ತಿದ್ದ. ಈ ವೇಳೆ ಕ್ಯಾಬ್ ಡ್ರೈವರ್ ಮೇಲೆ ಸಂತೋಷ ಹಲ್ಲೆ ಮಾಡಿದ್ದಾನೆ.

Read More

ಉತ್ತರಕನ್ನಡ : ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಪ್ರಜೆಯನ್ನು ರಕ್ಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೊಕಿನ ಕುಡ್ಲೆ ಬೀಚ್ನಲ್ಲಿ ಈ ಒಂದು ಘಟನೆ ನಡೆದಿದೆ. ಕುಡ್ಲೆ ಬೀಚ್ನಲ್ಲಿ ಕಜಕಿಸ್ತಾನ ಮೂಲದ ಐದಾಲಿ (25) ಎನ್ನುವ ವಿದೇಶಿ ಪ್ರಜೆಯನ್ನು ರಕ್ಷಿಸಲಾಗಿದೆ. ಐದಾಲಿ ಸಮುದ್ರದಲ್ಲಿ ಈಜಲು ತೆರಳಿದ್ದಾಗ ಅಲೆಗೆ ಸಿಲುಕಿದ್ದಾನೆ. ಮಂಜುನಾಥ ಹರಿಕನ್ತ್ರ, ಗಿರೀಶ್ ಗೌಡ ಹಾಗೂ ನಾಗೇಂದ್ರ ಎನ್ನುವವರು ವಿದೇಶ ಪ್ರಜೆಯನ್ನು ರಕ್ಷಿಸಿದ್ದಾರೆ. ಘಟನೆ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಕಿಡಿಗೇಡಿಗಳು ಕಾರಾಗೃಹದ ಎಡಿಜಿಪಿ ಆಗಿರುವಂತಹ ಬಿ.ದಯಾನಂದ್ ಅವರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ವರದಿಯಾಗಿದೆ. ಹೌದು ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಯಾನಂದ್ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದಿದ್ದಾರೆ. ಈ ಹಿಂದೆ ಮೂರು ಬಾರಿ ನಕಲಿ ಅಕೌಂಟ್ ಓಪನ್ ಆಗಿರುವ ಬಗ್ಗೆ ದಯಾನಂದ್‌ ಸೈಬರ್ ಪೊಲೀಸರ ಗಮನಕ್ಕೆ ತಂದಿದ್ದರು. ಆದರೂ ಸೈಬರ್ ಖದೀಮರು ಮುಂದುವರೆದು ಸೂಟ್ ಹಾಕಿರುವ ಹಾಗೂ ಮಕ್ಕಳ ಜೊತೆ ಇರುವ ಪೋಟೋ ಬಳಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಸದ್ಯ ಕಾರಾಗೃಹ ಎಡಿಜಿಪಿಯಾಗಿ ದಯಾನಂದ್ ಕರ್ತವ್ಯ ನಿರ್ವಹಿಸುತ್ತಿದ್ದು ಇತ್ತೀಚೆಗೆ ಜೈಲಿನ ಒಳಗಡೆ ಇರುವ ವಿಡಿಯೋ ವೈರಲ್‌ ಆಗಿತ್ತು. ದಯಾನಂದ್‌ ಅವರಿಗೆ ಕೆಟ್ಟ ಹೆಸರು ತರಲು ವಿಡಿಯೋ ವೈರಲ್ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಈಗ ನಕಲಿ ಎಫ್‌ಬಿ ಖಾತೆ ತೆರೆದುಹಲವು ಮಂದಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳಿಸಿದ ಬಗ್ಗೆ ದೂರು ದಾಖಲಿಸಿ…

Read More