Author: kannadanewsnow05

ಬೆಂಗಳೂರು : ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಬಸ್ ಟಿಕೆಟ್ ದರ ಶೇಕಡ 15ರಷ್ಟು ಹೆಚ್ಚಿಗೆ ಮಾಡಿ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಇದರ ಬೆನ್ನಲ್ಲೇ ಸಾರಿಗೆ ನೌಕರರಿಗೆ ಇದೀಗ ಸರ್ಕಾರ ಸಿಹಿ ಸುದ್ದಿ ಒಂದನ್ನು ನೀಡಿದ್ದು, ನೌಕರರ ಪಿಎಫ್ ಹಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಸಾವಿರ ಕೋಟಿ ರೂಪಾಯಿ ನೀಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೌದು ಕಳೆದ ವರ್ಷ ನವೆಂಬರ್ ನಲ್ಲಿ KSRTC, KKRTC, BMTC ಹಾಗೂ NWKRTC ಎಲ್ಲ ನಾಲ್ಕು ಸಾರಿಗೆ ನಿಗಮಗಳು ನೌಕರರ ಸುಮಾರು 2972 ಕೋಟಿ ಹಣವನ್ನು ಪಿಎಫ್ ಟ್ರಸ್ಟ್ ಗೆ ಜಮೆ ಮಾಡದೇ ದುರ್ಬಳಕೆ ಮಾಡಿ ಕೊಂಡಿವೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇದೀಗ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ನೌಕರರ ಪಿಎಫ್ ಟ್ರಸ್ಟ್ ಗೆ 2000 ಕೋಟಿ ಕೋಟಿ ಹಣ ನೀಡಲು ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಸಾರಿಗೆ ಸಿಬ್ಬಂದಿಗಳ ಪಿಎಫ್​ ಟ್ರಸ್ಟ್​ಗೆ ಎರಡು ಸಾವಿರ ಕೋಟಿ ರೂಪಾಯಿ ನೀಡಲು…

Read More

ಬಳ್ಳಾರಿ : ಕಳೆದ ವರ್ಷ ಬಳ್ಳಾರಿ ಜಿಲ್ಲೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಇಡೀ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ಇದೀಗ ಬಳ್ಳಾರಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ವಿಮ್ಸ್ ಆಸ್ಪತ್ರೆಯಲ್ಲಿ ಮಹಿಳಾ ಕಂಪ್ಯೂಟರ್ ಆಪರೇಟರ್ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀಕ್ಷಕ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಹೌದು ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಆಡಳಿತ ವಿಭಾಗದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದ್ದು, ಮಹಿಳಾ ಕಂಪ್ಯೂಟರ್ ಆಪರೇಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ. ಇಲಾಖೆಯ ಅಧೀಕ್ಷಕ ವಿ.ಕೆ ವೆಂಕಟೇಶ್ ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದೆ. ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀಕ್ಷಕ ವಿ.ಕೆ ವೆಂಕಟೇಶ್ ಮಹಿಳಾ ಕಂಪ್ಯೂಟರ್ ಆಪರೇಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳ್ಳಾರಿ ಮಹಿಳಾ ಠಾಣೆಯಲ್ಲಿ ವಿ.ಕೆ ವೆಂಕಟೇಶ್ ವಿರುದ್ಧ ಸಂತ್ರಸ್ತೆ ಇದೀಗ ದೂರು ನೀಡಿದ್ದಾಳೆ. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಇದೀಗ…

Read More

ತುಮಕೂರು : ಜಮೀನು ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಮಹಿಳೆ ಒಬ್ಬಳು ದೂರು ನೀಡಲು ಠಾಣೆಯ ಮೆಟ್ಟಿಲು ಏರಿದ್ದಾಳೆ. ಆದರೆ ಠಾಣೆಯಲ್ಲಿದ ಡಿವೈಎಸ್ಪಿ ಅಧಿಕಾರಿ ಒಬ್ಬ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಕ್ಷೇತ್ರ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ. ಹೌದು ಪಾವಗಡದ ಮಹಿಳೆಯೊಬ್ಬರು ಜಮೀನು ವ್ಯಾಜ್ಯದ ಬಗ್ಗೆ ದೂರು ನೀಡಲು ಮಹಿಳೆ ಪಾವಗಡದಿಂದ ಡಿವೈಎಸ್ಪಿ ಕಚೇರಿಗೆ ಬಂದಿದ್ದರು. ಮಹಿಳೆಯನ್ನು ಏಕಾಂತ ಕೊಠಡಿಗೆ ಕರೆದುಕೊಂಡು ಹೋದ ಡಿವೈಎಸ್​ಪಿ ರಾಮಚಂದ್ರಪ್ಪ ಲೈಂಗಿಕ ಕಿರುಕುಳ ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ರಾಮಚಂದ್ರಪ್ಪ ತಲೆಮರೆಸಿಕೊಂಡಿದ್ದಾನೆ. ಗೃಹ ಸಚಿವ ಜಿ. ಪರಮೇಶ್ವರ್‌ ಅವರ ಜಿಲ್ಲೆಯಲ್ಲಿಯೇ ಇಂತಹ ಘಟನೆ ನಡೆದಿದ್ದು, ಇದು ಇಡೀ ಪೊಲೀಸ್‌ ಇಲಾಖೆಯ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಡಿವೈಎಸ್ಪಿ ಕಚೇರಿಗೆ ಮಹಿಳೆಯ ಜೊತೆ ಆಗಮಿಸಿದ್ದ ಅನಿಲ್ ಎಂಬಾತನು ವಿಡಿಯೋ ಸೆರೆ ಹಿಡಿದಿದ್ದಾರೆ ಎಂದು ಶಂಕಿಸಲಾಗಿದೆ. ಬಳಿಕ, ಬಳಿಕ ವಾಟ್ಸ್‌ಅಪ್…

Read More

ಚಿತ್ರದುರ್ಗ : ಕಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಟೈರ್ ಸ್ಫೋಟಗೊಂಡು ಟ್ರಾಕ್ಟರ್ ನಲ್ಲಿದ್ದ ಓರ್ವ ಕಾರ್ಮಿಕ ಸಾವನಪ್ಪಿದ್ದು, ಉಳಿದ ಇಬ್ಬರು ಕಾರ್ಮಿಕರಿಗೆ ಗಾಯವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದಲ್ಲಿ ನಡೆದಿದೆ. ರೇಣುಕಾಪುರ ಬಳಿ ಟ್ರಾಕ್ಟರ್ ಪಲ್ಟಿಯಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ರೇಣುಕಾಪುರ ಗ್ರಾಮದ ಶಂಕರನಾಗ (40) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಟ್ರಾಕ್ಟರ್ ನಲ್ಲಿದ್ದ ಮತ್ತಿಬ್ಬರು ಕಾರ್ಮಿಕರಿಗೆ ಗಂಭೀರವಾದ ಗಾಯಗಳಾಗಿದ್ದು ಕಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಟೈಯರ್ ಸ್ಪೋಟಗೊಂಡು ಪಲ್ಟಿಯಾಗಿದೆ.ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳಗಾವಿ : ಕಳೆದ ಡಿಸೆಂಬರ್ 20ರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕುಡ ಗ್ರಾಮದಲ್ಲಿ ಗರ್ಭಿಣಿ ಸುವರ್ಣ (33) ಎನ್ನುವ ಮಹಿಳೆಯ ಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಅಪ್ಪಯ್ಯ ರಾಚಯ್ಯ ಮಠಪತಿಯನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಕೇವಲ 50 ಸಾವಿರ ಹಣಕ್ಕಾಗಿ ಆರೋಪಿ ಅಪ್ಪಯ್ಯ ಗರ್ಭಿಣಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಡಿಸೆಂಬರ್ 20ರಂದು ಅಥಣಿ ತಾಲೂಕಿನ ಚಿಕ್ಕೋಡು ಗ್ರಾಮದಲ್ಲಿ ಈ ಒಂದು ಕೊಲೆ ನಡೆದಿತ್ತು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೋಡು ಗ್ರಾಮ ಸುವರ್ಣಳನ್ನು ಭಾವ ಅಪ್ಪಯ್ಯ ಭೀಕರವಾಗಿ ಕೊಂದು ಪರಾರಿಯಾಗಿದ್ದ. ಬಾಗಲಕೋಟೆ ಜಿಲ್ಲೆಯ ತೆರದಾಳದಿಂದ ಬಂದು ಕೊಲೆ ಮಾಡಿ ಆತಪರಾರಿಯಾಗಿದ್ದ ಇದೀಗ ಪೊಲೀಸರು ಮಹಾರಾಷ್ಟ್ರದ ಮೀರಜ್ ನಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಕೆಲ ತಿಂಗಳ ಹಿಂದೆ 50,000 ಸಾಲವನ್ನು ಕೊಟ್ಟು ಸುವರ್ಣ ಕೊಟ್ಟಿದ್ದಳು. ಪದೇಪದೇ ಹಣ ಕೇಳಿದ್ದಕ್ಕೆ ಅಪ್ಪಯ್ಯ ಕೊಲೆಯ ನಿರ್ಧಾರಕ್ಕೆ ಬಂದಿದ್ದಾನೆ. ಕೊಂದರೆ ಐವತ್ತು ಸಾವಿರ ಉಳಿಯುತ್ತೆ, ಮೈ ಮೇಲಿನ ಚಿನ್ನ ಸಿಗುತ್ತದೆ ಎಂದು ಸಂಚು…

Read More

ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ನಮ್ಮ ಯಾತ್ರಿ ಆಪ್ ನಲ್ಲಿ ಮಹಿಳೆಯೋಬ್ಬರು ಆಟೋ ಬುಕ್ ಮಾಡಿರುತ್ತಾರೆ.ಆದರೆ ಕುಡಿದ ನಶೆಯಲ್ಲಿ ನಿಗದಿತ ಸ್ಥಳಕ್ಕೆ ತೆರಳದೆ ಆಟೋ ಚಾಲಕ ಬೇರೆ ಸ್ಥಳಕ್ಕೆ ತೆರಳಿದ್ದಾನೆ. ಈ ವೇಳೆ ಭೀತಾರಾದಂತಹ ಮಹಿಳೆ ಆಟೋದಿಂದ ಜಿಗಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಬೆಂಗಳೂರಲ್ಲಿ ಮಹಿಳೆಯ ಜೊತೆಗೆ ಆಟೋ ಚಾಲಕ ಕಿರಿಕ್ ಮಾಡಿಕೊಂಡಿದ್ದು, ಆಟೋ ಚಾಲಕನ ಕಿರುಕುಳಕ್ಕೆ ಮಹಿಳೆ ಭಯ ಭೀತಾರಾಗಿದ್ದಾರೆ.ನಮ್ಮ ಯಾತ್ರೆ ಆಪ್ ನಲ್ಲಿ ಆಟೋವನ್ನು ಮಹಿಳೆ ಬುಕ್ ಮಾಡಿದ್ದಾರೆ. ನಿಗದಿದ್ದ ಸ್ಥಳಕ್ಕೆ ಹೋಗದೆ ಆಟೋ ಚಾಲಕ ಬೇರೆ ಕಡೆ ಹೋಗಿದ್ದಾನೆ. ಕುಡಿದ ನಶೆಯಲ್ಲಿ ಮಹಿಳೆಯ ಜೊತೆ ಕಿರಿಕ್ ಮಾಡಿದ್ದಾನೆ. ಈ ವೇಳೆ ಗಾಡಿ ನಿಲ್ಲಿಸಲ್ಲ ಜಿಗಿದು ಹೋಗು ಎಂದು ಚಾಲಕ ಹೇಳಿದಾಗ, ಅನಿವಾರ್ಯವಾಗಿ ಮಹಿಳೆ ಚಲಿಸುತ್ತಿದ್ದ ಆಟೋದಿಂದ ಜಿಗಿದಿದ್ದಾಳೆ. ಹೊರಮಾವಿನಿಂದ ಥಣಿಸಂದ್ರಕ್ಕೆ ಮಹಿಳೆ ಆಟೋ ಬುಕ್ ಮಾಡಿದ್ದರು.ಆದರೆ ಚಾಲಕ ಹೆಬ್ಬಾಳದತ್ತ ಆಟೋ ತಿರುಗಿಸಿದ್ದಾನೆ ಎಂದು ಮಹಿಳೆಯ ಆರೋಪಿಸಿದ್ದಾರೆ. ನಿಲ್ಲಿಸುವಂತೆ ಹೇಳಿದಾಗ ಆಟೋ ಚಾಲಕ…

Read More

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಇಬ್ಬರು ಬಾಲಕರನ್ನು ಕಿಡ್ನಾಪ್ ಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯ ವೇಳೆ ಸತ್ಯಾಂಶ ತಿಳಿದು ಇದೀಗ ಪೊಲೀಸರೇ ಶಾಕ್ ಆಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಬಳಿ ಬಾಲಕರ ಕಿಡ್ನ್ಯಾಪ್ ಯತ್ನ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಮಕ್ಕಳ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ವಿಚಾರಣೆ ವೇಳೆ ಚಾಲಕರು ಕಥೆ ಕಟ್ಟಿದ್ದು ಬಯಲಾಗಿದೆ. ಹೋಂವರ್ಕ್ಹಾಗೂ ಟ್ಯೂಷನ್ ನಿಂದ ತಪ್ಪಿಸಿಕೊಳ್ಳಲು ಬಾಲಕರು ಕಿಡ್ನಾಪ್ ಕಥೆ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ. ಓಮಿನಿಯಲ್ಲಿ ಬಂದ ಮುಸುಕು ದಾರಿಗಳು ಕಿಡ್ನ್ಯಾಪ್ಗೆ ಯತ್ನಿಸಿದ್ದರು. ಅಪಹರಣಕಾರರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಈ ಬಾಲಕರಲ್ಲ ಎಂಬ ಕರೆ ಬಂದಾಗ ಬಿಟ್ಟು ಹೋದರು ಎಂದು ಬಾಲಕರು ತಿಳಿಸಿದ್ದಾರೆ. ಬಾಲಕರಿಬ್ಬರ ಅಪಹರಣ ಯತ್ನ ಆರೋಪ ಕೇಸ್ ಆತಂಕ ಸೃಷ್ಟಿ ಮಾಡಿತ್ತು. ಅಬ್ಬಿನಹೊಳೆ ಠಾಣೆ ಪೊಲೀಸರಿಂದ ತನಿಖೆಯ ವೇಳೆ ಈ ಒಂದು ಸತ್ಯಾಂಶ ಬಯಲಾಗಿದೆ.

Read More

ಬೆಂಗಳೂರು : ಕುಡಿದ ಮಾತಿನಲ್ಲಿ ಕುದುರೆ ಸವಾರಿ ಮಾಡುವ ವಿಚಾರಕ್ಕೆ ಎರಡು ಗ್ರಾಮಗಳ ಯುವಕರ ಗುಂಪುಗಳ ನಡುವೆ ಮಾರಮಾರಿ ನಡೆದಿದ್ದು ಈ ಒಂದು ಗಲಾಟೆಯಲ್ಲಿ ಆರು ಯುವಕರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬ್ಯಾಟರಾಯಸ್ವಾಮಿ ಜಾತ್ರೆಯಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ಮೋಟಗಾನಹಳ್ಳಿ ಹಾಗೂ ಯಂಟಗಾನಹಳ್ಳಿಯ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಮೋಟಗಾನಹಳ್ಳಿ ಹಾಗೂ ಯಂಟಗಾನಹಳ್ಳಿಯ ಯುವಕರ ನಡುವೆ ಗಲಾಟೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎರಡು ಗ್ರಾಮಗಳ ಯುವಕರ ಮಧ್ಯ ಮಾರಾಮಾರಿ ನಡೆದಿದೆ. ಈ ಒಂದು ಘಟನೆಯಲ್ಲಿ 6 ಜನರಿಗೆ ಗಂಭೀರವಾಗಿ ಗಾಯವಾಗಿದ್ದು, ನೆಲಮಂಗಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಕುಡಿದ ಮತ್ತಿನಲ್ಲಿ ಕುದುರೆ ಮೇಲೆ ಸವಾರಿ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದೆ. ಘಟನೆ ಸಂಭಂದ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹೈದ್ರಾಬಾದ್ : ಹೈದರಾಬಾದ್ ನಲ್ಲಿ ಸಂಧ್ಯಾ ಥಿಯೇಟರ್ ಬಳಿ ಪುಷ್ಪ-2 ಸಿನಿಮಾ ವೀಕ್ಷಣೆ ವೇಳೆ ಕಾಲ್ತುಳಿತದಲ್ಲಿ ಮಹಿಳೆ ಸಾವನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ನಟ ಅಲ್ಲು ಅರ್ಜುನ್ ಅವರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಜಾಮೀನು ಕುರಿತು ನಾಂಪಲ್ಲಿ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಅಲ್ಲು ಅರ್ಜುನ್ ಅವರು, ರೆಗ್ಯುಲರ್ ಬೇಲ್ ಅರ್ಜಿ ಸಲ್ಲಿಸಿದ್ದಾರೆ. ವಾದ ಮತ್ತು ಪ್ರತಿವಾದ ಆಲಿಸಿ, ನಾಂಪಲ್ಲಿ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಹಾಗಾಗಿ ಇಂದು ಜಾಮೀನು ಕುರಿತು ನಾಂಪಲ್ಲಿ ಕೋರ್ಟ್ ಆದೇಶ ಪ್ರಕಟಿಸಲಿದೆ. ಸದ್ಯ ಅಲ್ಲು ಅರ್ಜುನ್ ಅವರು ಮಧ್ಯಂತರ ಜಾಮೀನು ಮೇಲೆ ಹೊರಗಡೆ ಇದ್ದಾರೆ. ಮಳೆ ಕಾಲ್ ತೋಳಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಅಲ್ಲು ಅರ್ಜುನ್ ಅವರು ಅರೆಸ್ಟ್ ಆಗಿದ್ದರು ಬಳಿಕ ಹೈಕೋರ್ಟಿಗೆ ಗ್ರಾಮೀಣ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ತುರ್ತು ವಿಚಾರಣೆ ನಡೆಸಿದ ಹೈ ಕೋರ್ಟ್ ಅಲ್ಲು ಅರ್ಜುನ್ ಗೆ ಮಧ್ಯಂತರ ಜಾಮೀನು ನೀಡಿತ್ತು.

Read More

ಬೆಂಗಳೂರು : ಜಾತಿ ಗಣತಿ ವರದಿ ಜಾರಿಯಾಗುವ ಕುರಿತಂತೆ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿದ್ದು, ಶೀಘ್ರದಲ್ಲಿ ಜಾತಿಗಣತಿ ವರದಿ ಜಾರಿಯಾಗುವ ಕುರಿತು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತದೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಜಾರಿಯಾಗುವ ಕುರಿತು ಆದಷ್ಟು ಬೇಗ ನಿರ್ಧಾರ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಹೌದು ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ವರದಿ ಬಗ್ಗೆ ಚರ್ಚಿಸಿ ಆರ್ಥಿಕ, ಸಾಮಾಜಿಕ ವರದಿ ಪಡೆದಿದ್ದೇವೆ. ಅದರ ಮೇಲೆ ಯಾವುದೇ ಕ್ರಮವಾಗಿಲ್ಲ. ಆದಷ್ಟು ಶೀಘ್ರದಲ್ಲಿ ವರದಿಯನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾತಿ ಜನಗಣತಿ ಸಂಬಂಧ ಸಚಿವ ಸಂಪುಟ ಉಪ ಸಮಿತಿ ಅಥವಾ ತಜ್ಞರ ಸಮಿತಿ ರಚಿಸುವ ಬಗ್ಗೆಯೂ ಸಿಎಂ ಮಾತನಾಡಿದ್ದಾರೆ.‌ ಆದಷ್ಟು ಬೇಗ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

Read More