Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಮರ್ಡರ್ ಆಗಿದ್ದು, ಕೆಲಸ ಮಾಡುವ ವಿಚಾರಕ್ಕೆ ಇಬ್ಬರು ಕಾರ್ಮಿಕರ ನಡುವೆ ಗಲಾಟೆಯಾಗಿದ್ದು, ಓರ್ವ ಕಾರ್ಮಿಕನನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿಯ ಆಕಾಶವಾಣಿ ಲೇಔಟ್ನಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ಸೈಯದ್ ಮೆಹಬೂಬ್ ಪಾಷ ಎಂದು ತಿಳಿದುಬಂದಿದ್ದು, ಇನ್ನು ಹತ್ಯೆಗೈದ ವ್ಯಕ್ತಿಯನ್ನು ಖಾನಿಯ ಎಂದು ತಿಳಿದುಬಂದಿದೆ. ಈ ಇಬ್ಬರು ಜೆಲ್ಲಿ, ಮರಳು ಟಾಟಾ ಏಸ್ ಗಾಡಿಗಳಿಗೆ ಲೋಡ್ ಮಾಡುವ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ರಾಜು ಎನ್ನುವ ವ್ಯಕ್ತಿ ಜೊತೆಗೂಡಿ ಮೃತ ಮೆಹಬೂಬ್ ಜೆಲ್ಲಿ, ಮರಳು ವ್ಯಾಪಾರ ಮಾಡುತ್ತಿದ್ದರು. ರಾಜು, ಮೆಹಬೂಬ್ಗೆ ಕರೆ ಮಾಡಿ ಬಾಡಿಗೆಯಿದೆ ಬಾ ಎಂದು ಕರೆದಿದ್ದ. 8:40ಕ್ಕೆ ಸ್ಥಳಕ್ಕೆ ಹೋಗಿದ್ದ ಮೆಹಬೂಬ್ ಖಾನ್ ಅಲ್ಲಿದ್ದ ಖಾನಿಯಾ ಎನ್ನುವ ಮತ್ತೊಬ್ಬ ಕಾರ್ಮಿಕ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಸಿಮೆಂಟ್ ಚೀಲ ಕಟ್ ಮಾಡಲು ಬಳಸುತ್ತಿದ್ದ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಖಾನಿಯಾ ಅಲ್ಲಿಂದ ಪರಾರಿಯಾಗಿದ್ದಾನೆ.ಸದ್ಯ ಸಂಪಿಗೆ ಹಳ್ಳಿ…
ಹೈದ್ರಾಬಾದ್ : ಕೇವಲ ಅಸ್ತಿಗಾಗಿ ದುಷ್ಟ ಮೊಮ್ಮಗನೊಬ್ಬ ತನ್ನ ತಾತನನ್ನೆ ಚಾಕುವಿನಿಂದ ಇರಿದು ಸುಮಾರು 70ಕ್ಕೂ ಹೆಚ್ಚು ಬಾರಿ ಚುಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹೈದರಾಬಾದ್ನ ಪಂಜಗುಟ್ಟದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ವೆಲ್ಜನ್ ಗ್ರೂಪ್ ಚೇರ್ಮನ್ ಜನಾರ್ಧನ್ ರಾವ್ (86) ಎಂದು ತಿಳಿದುಬಂದಿದೆ. ಕೊಲೆ ಮಾಡಿದ ಮೊಮ್ಮಗನನ್ನು ಕೀರ್ತಿತೇಜ್ (29) ಎಂದು ತಿಳಿದುಬಂದಿದೆ. ಕಳೆದ ಫೆ.6ರಂದು ಆರೋಪಿ ಕೀರ್ತಿ ತೇಜ್ ತನ್ನ ತಾತ ಜನಾರ್ಧನ್ ರಾವ್ಗೆ ಬರೋಬ್ಬರಿ 73 ಬಾರಿ ಚಾಕುವಿನಿಂದ ಇರಿದಿದ್ದ. ಹೈದರಾಬಾದ್ನ ಪಂಜಗುಟ್ಟದಲ್ಲಿ ಈ ಘಟನೆ ನಡೆದಿತ್ತು. ತೀವ್ರ ರಕ್ತಸ್ರಾವವಾಗಿ ಜನಾರ್ಧನ್ ರಾವ್ ಅವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಘಟನೆ ವೇಳೆ ಅಡ್ಡಬಂದ ತಾಯಿಗೂ ಆರೋಪಿ ಚಾಕುವಿನಿಂದ ಇರಿದಿದ್ದು, ಅವರಿಗೂ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.ನಗರದ ಇನ್ನೊಂದು ಪ್ರದೇಶದಲ್ಲಿ ವಾಸವಾಗಿರುವ ತೇಜ ಹಾಗೂ ಆತನ ತಾಯಿ ಗುರುವಾರ ಸೋಮಾಜಿಗುಡದಲ್ಲಿರುವ ರಾವ್ ಅವರ ಮನೆಗೆ ಭೇಟಿ ನೀಡಿದ್ದರು. ತಾಯಿ ಕಾಫಿ ಮಾಡಲು ಹೋದಾಗ ತೇಜಾ ಹಾಗೂ…
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ. ಹೌದು ಬೇಗೂರು ಬಳಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಾಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿ ಬೈಕ್ನಲ್ಲಿದ್ದ ಚಲಿಸುತ್ತಿದ್ದ ಪೆಮ್ಮನಹಳ್ಳಿ ನಿವಾಸಿ ಕೆಂಪಗಂಗಯ್ಯ (55) ಸಾವನಪ್ಪಿದ್ದಾರೆ. ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಬಸ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಬೇಗೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಕೆಎಸ್ಆರ್ಟಿಸಿ ಬಸ್ ಸಮೇತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಅಪಘಾತದ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ : ತವರು ಮನೆಗೆ ಹೋಗಿದ್ದಕ್ಕೆ ಪತಿಯೊಬ್ಬ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದಿದ್ದ ಅತ್ತೆಯ ಮೇಲು ಅಳಿಯ ಹಲ್ಲೆ ನಡೆಸಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಪತ್ನಿ ರೂಪ ಅತ್ತೆ ಯಲ್ಲವ ಮೇಲೆ ಬಸವರಾಜ್ ಅವ್ವಣ್ಣನವರ್ ಎನ್ನುವ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ಧಾರವಾಡದ ಬನಶ್ರೀ ನಗರದಲ್ಲಿ ಈ ಒಂದು ದಂಪತಿಗಳು ವಾಸವಾಗಿದ್ದರು. ಪತ್ನಿಯ ಮೇಲೆ ಬಸವರಾಜ್ ಅವಣ್ಣನವರ್ ಅನುಮಾನ ಪಡುತ್ತಿದ್ದ ಪತಿ ಬಸವರಾಜನ ನಡೆಯಿಂದ ಪತ್ನಿ ರೂಪ ತೀವ್ರವಾಗಿ ಬೇಸತ್ತು ತವರಿಗೆ ಹೋಗಿದ್ದಳು. ಒಂದು ವಾರದ ಹಿಂದೆ ತವರು ಗರಗಕ್ಕೆ ರೂಪ ಬಂದಿದ್ದಾಳೆ. ಇದರಿಂದ ಸಿಟ್ಟಿಗೆದ್ದು ಗ್ರಾಮಕ್ಕೆ ಬಂದು ಪತ್ನಿಯ ಮೇಲೆ ಬಸವರಾಜ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ.ಈ ವೇಳೆ ಜಗಳ ಬಿಡಿಸಲು ಬಂದಿದ್ದ ಅತ್ತೆ ಯಲ್ಲವ ಮೇಲು ಬಸವರಾಜ್ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದಂತಹ ರೂಪ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪೊಲೀಸರು ಬಸವರಾಜ್ ಅವಣ್ಣನವರನ್ನು ಅರೆಸ್ಟ್…
ಬೆಂಗಳೂರು : KSRTC ಬಸ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದರೆ. ಘಟನೆಯಲ್ಲಿ ಓರ್ವ ಸವಾರ ಗಾಯಗೊಂಡಿದ್ದ. ಆದರೆ ಚಿಕಿತ್ಸೆ ಫಲಿಸದೇ ಆತ ಕೂಡ ಸಾವನ್ನಪ್ಪಿರುವ ಘಟನೆ ಬೊಮ್ಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರಾಮದಲ್ಲಿ ಅಪಘಾತ ನಡೆದಿತ್ತು. ಅಪಘಾತದಲ್ಲಿ ಈ ವೇಳೆ ಗಾಯಗೊಂಡಿದ್ದ ಬೈಕ್ ಸವಾರ ಕಾಶಪ್ಪ (45) ಚಿಕಿತ್ಸೆ ಫಲಿಸದೇ ಇದೀಗ ಸಾವನಪ್ಪಿದ್ದಾರೆ. ಯಾದಗಿರಿ ಮೂಲದ ಹನುಮಂತ (55) ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದರು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕೆಎಸ್ಆರ್ಟಿಸಿ ಬಸ್ ತೆರಳುತ್ತಿದ್ದ ವೇಳೆ ಬೈಕಿಗೆ ಬಸ್ ಡಿಕ್ಕಿ ಹೊಡೆದಿತ್ತು. KSRTC ಬಸ್ ನ ಕೆಳಗಡೆ ಸಿಲುಕಿ ಬೈಕ್ ನಜ್ಜುಗುಜ್ಜಾಗಿತ್ತು. ಅಪಘಾತದ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ನಾಳೆಯಿಂದ ಬೆಂಗಳೂರಿನ ಯಲಹಂಕದ ಬಳಿ ಏರ್ ಶೋ ಆರಂಭವಾಗಲಿದ್ದು, ಫೆಬ್ರವರಿ 14ರ ವರೆಗೆ ಈ ಒಂದು ಏರ್ ಶೋ ನಡೆಯಲಿದೆ. ಈಗಾಗಲೇ ಏರ್ ಶೋ ಗೆ ಸಕಲ ಸಿದ್ಧತೆಗಳನ್ನು ಮಾಡಿಕೊಡಲಾಗಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫೆಬ್ರವರಿ 12ರವರೆಗೆ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹೌದು ಫೆಬ್ರವರಿ 12ರ ವರೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ರಾಜ್ಯ ಪ್ರವಾಸಕ್ಕೆ ಗೊಳ್ಳಲಿದ್ದಾರೆ. ಹಾಗಾಗಿ ಇಂದು ಸಂಜೆ 5 ಗಂಟೆಗೆ ರಾಜನಾಥ್ ಸಿಂಗ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಭಾಗಿಯಾಗಲಿದ್ದಾರೆ. ನಾಳೆ ಬೆಳಗ್ಗೆ 9:30ಕ್ಕೆ ರಾಜನಾಥ್ ಸಿಂಗ್ ಏರ್ ಶೋ ಉದ್ಘಾಟಿಸಲಿದ್ದಾರೆ. ಫೆಬ್ರವರಿ 12ರವರೆಗೆ ಏರ್ ಶೋ ವಿವಿಧ ಕಾರ್ಯಕ್ರಮಗಳಲ್ಲಿ ರಾಜನಾಥ್ ಸಿಂಗ್ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ಪ್ರಖ್ಯಾತ ಗಾಯಕ ಎಡ್ ಶೆರಾನ್ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯ ಚರ್ಚ್ ಸ್ಟ್ರೀಟ್ ಫುಟ್ಪಾತ್ ನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಅನುಮತಿ ಇಲ್ಲದೆ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಅರ್ಧಕ್ಕೆ ಹಾಡು ನಿಲ್ಲಿಸಿ ಕಳುಹಿಸಿರುವ ಘಟನೆ ನಡೆದಿದೆ. ಹೌದು ಪ್ರಖ್ಯಾತ ಗಾಯಕ ಎಡ್ ಶೆರಾನ್ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದರು. ಅನುಮತಿ ಇಲ್ಲದೆ ಈ ಒಂದು ಗಾಯಕ ಸಂಗೀತ ಹಾಡು ಹಾಡುತ್ತಿದ್ದ. ಈ ವೇಳೆ ಹೆಚ್ಚು ಜನ ಸೇರುತ್ತಿದ್ದಂತೆ ಮಧ್ಯದಲ್ಲಿ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಪೊಲೀಸರು ಅರ್ಧಕ್ಕೆ ಸಂಗೀತ ಕಾರ್ಯಕ್ರಮ ನಿಲ್ಲಿಸಿದ್ದಾರೆ. ರಸ್ತೆ ಬದಿಯಲ್ಲಿ ಸಂಗೀತ ಕಾರ್ಯಕ್ರಮ ನಡೆಸಲು ಯಾವುದೆ ರೀತಿಯಾದ ಅನುಮತಿ ಎಡ್ ಶೆರಾನ್ ಯಾವುದೇ ಅನುಮತಿ ಪಡೆದಿರಲಿಲ್ಲ. ಫುಟ್ಪಾತ್ ನಲ್ಲಿ ಹಾಡು ಹಾಡುತ್ತಿದ್ದ ಹಾಗಾಗಿ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಅರ್ಧಕ್ಕೆ ಹಾಡು ನಿಲ್ಲಿಸಿ ಪೊಲೀಸರು ಅಲ್ಲಿಂದ ಕಳಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ನಾಳೆಯಿಂದ ಫೆಬ್ರವರಿ 14 ರವರೆಗೆ ಬೆಂಗಳೂರಿನ ಯಲಹಂಕದ ಬಳಿ ಏರ್ ಶೋ ಹಮ್ಮಿಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಏರ್ ಶೋ ರಿಹರ್ಸಲ್ ಕೂಡ ನಡೆಯುತ್ತಿದೆ. ಇದೀಗ ರಿಹರ್ಸಲ್ ವೇಳೆ ಪೊಲೀಸರಿಗೆ ನೀಡಿದ ಊಟದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ವರದಿಯಾಗಿದೆ. ಹೌದು ಬೆಂಗಳೂರಿನ ಯಲಹಂಕ ಸಮೀಪ ಇಂದು ಏರ್ ಶೋ ರಿಹರ್ಸಲ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ನೀಡಿದ ಊಟದಲ್ಲಿ ಜಿರಳೆ ಪತ್ತೆಯಾಗಿದೆ. ಏರ್ ಶೋ ಗೆ ಬಂದಂತಹ ಪೊಲೀಸ್ ಸಿಬ್ಬಂದಿಗಳಿಗೆ ಇನ್ಸ್ಪೆಕ್ಟರ್ ಊಟದ ವ್ಯವಸ್ಥೆ ಮಾಡಿಸಿದ್ದರು. ಯಲಹಂಕ ಠಾಣೆ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಊಟದ ವ್ಯವಸ್ಥೆ ಮಾಡಿಸಿದ್ದರು. ಯಲಹಂಕ ಪೊಲೀಸ್ ಠಾಣೆಯಿಂದ ಸಿಬ್ಬಂದಿಗಳಿಗೆ ಊಟ ನೀಡಲಾಗಿತ್ತು. ಜಿರಳೆ ಕಂಡುಬಂದ ಹಿನ್ನೆಲೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿಗಳು ಊಟ ಬಿಟ್ಟಿದ್ದಾರೆ. ಒಂದು 200 ಊಟಕ್ಕೆ ನೀಡುವುದಾಗಿ ಆದೇಶ ಹೊರಡಿಸಲಾಗಿದೆ. ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದ ಫೆಬ್ರವರಿ 4ರಂದು ಆದೇಶ ಪ್ರಕಟವಾಗಿದೆ ಆದೇಶವಾಗಿದ್ದು, ಕೆಲವೇ ದಿನಗಳಲ್ಲಿ ಗುಣಮಟ್ಟ ಮತ್ತು ಶುಚಿತ್ವ…
ರಾಯಚೂರು : ಸ್ನೇಹಿತರ ಮನೆಗೆ ಹೋಗಿ ಬರುತ್ತೇನೆ ಎಂದು ಪೋಷಕರಿಗೆ ತಿಳಿಸಿ ರಾಯಚೂರಿನ ರಿಮ್ಸ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಇಂದು ನಡೆದಿದೆ. ನಾಪತ್ತೆಯಾದ ವಿದ್ಯಾರ್ಥಿನಿಯನ್ನು ಕಲಬುರಗಿ ಮೂಲದ MS ವಿದ್ಯಾರ್ಥಿನಿ ಡಾ.ಭಾಗ್ಯಲಕ್ಷ್ಮಿ ಕಾಣೆಯದ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಈಕೆ ಕಳೆದ 15 ದಿನಗಳ ಹಿಂದೆ ರಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದಳು. ಭಾಗ್ಯಲಕ್ಷ್ಮಿ ಸ್ನೇಹಿತರ ಮನೆ ಹೋಗುವುದಾಗಿ ಹೇಳಿ ತೆರಳಿದ್ದು, ಮರಳಿ ಬಂದಿಲ್ಲ. ಮಗಳ ಪೋನ್ ಸ್ವಿಚ್ ಆಫ್ ಆಗಿದಕ್ಕೆ ಆತಂಕಗೊಂಡ ಪೋಷಕರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದಾವಣಗೆರೆ : ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇದೀಗ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ಮುಂದುವರಿಸಿದ್ದು, ಯತ್ನಾಳ ಸುತ್ತಮುತ್ತಲು ಇರುವವರೇ ಅವರನ್ನು ಕೊಬ್ಬಿದ ಕೋಣ ಬಲಿಕೊಡುವ ಹಾಗೆ ಬಲಿಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಾತ್ರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಮಾತನಾಡಿ, ನಮ್ಮ ಬಗ್ಗೆ ಮಹಾನುಭಾವ ಯತ್ನಾಳ್ ಏನೇನೋ ಮಾತನಾಡುತ್ತಾರೆ. ಕೊಬ್ಬಿದ ಕೋಣ ಬಲಿ ಕೊಡುವಂತೆ ಶಾಸಕ ಯತ್ನಾಳ್ ಅವರನ್ನು ಬಲಿಕೊಡುತ್ತಾರೆ. ಅವರ ಜೊತೆಯಲ್ಲಿ ಇರುವವರೇ ಅವರನ್ನು ಬಲಿಕೊಡುತ್ತಾರೆ. ಎಂದು ವಾಗ್ದಾಳಿ ನಡೆಸಿದರು. ಶಾಸಕ ಯತ್ನಾಳ್ ಜೊತೆಗೆ ಒಂದು ತಂಡ ಇದೆ.ಅದೇ ತಂಡ ಯತ್ನಾಳ್ ಅವರನ್ನು ಮುಗಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ದೇವರಿಗೆ ಬಲಿ ಕೊಡಲು ಕೋಣವನ್ನು ಬಿಟ್ಟಿರುತ್ತಾರೆ. ಸುಣ್ಣದ ನೀರು ಹಾಗೂ ಉಪ್ಪಿನ ನೀರು ಕುಡಿಸಿ ಕೋಣ ಬಲಿಕೊಡುತ್ತಾರೆ. ಕೊಬ್ಬಿದ ಕೋಣವನ್ನು ಬಲಿ ಕೊಡುವಂತೆ ಯತ್ನಾಳನ್ನು ಬಲಿಕೊಡುತ್ತಾರೆ.ನನ್ನ…














