Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬಿಜೆಪಿಯ ಮಾಜಿ ಸಚಿವ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಬಹುತೇಕ ಖಚಿತವಾಗಿದೆ. ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆಯಲ್ಲಿ ಎನ್ ಡಿಎ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದ ಸಿ.ಪಿ.ಯೋಗೇಶ್ವರ್ ಇದೀಗ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಿದ್ದು, ಕಾಂಗ್ರೆಸ್ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ನಾಯಕರ ಒಂದು ಸಂದೇಶಕ್ಕಾಗಿ ಕಾದು ಕುಳಿತಿದ್ದ ಸಿಪಿ ಯೋಗೇಶ್ವರ್ ನಿನ್ನೆ ರಾತ್ರಿಯವರೆಗೂ ಬಿಜೆಪಿ ನಾಯಕರ ಒಂದು ನಿರ್ಧಾರಕ್ಕೆ ಕಾದು ನೋಡುವ ತಂತ್ರ ಅನುಸರಿಸಿದರು. ಆದರೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆಗೆ ಸಿಪಿ ಯೋಗೇಶ್ವರ್ ಚರ್ಚಿಸಿದ್ದು ಬಹುತೇಕ ಅವರು ಇಂದೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ನಾಯಕರ ನಡೆಗೆ ಸಿಪಿ ಯೋಗೇಶ್ವರ್ ತೀವ್ರ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ನಾಯಕರ ರೆಸ್ಪಾನ್ಸ್ ಗಾಗಿ ಸಿಪಿ ಯೋಗೇಶ್ವರ್ ಕಾದು ಕುಳಿತಿದ್ದರು. ಚನ್ನಪಟ್ಟಣದ ಕಾಸಿಗೆ…
ಮೈಸೂರು : ವಯನಾಡ್ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ವಿಶೇಷ ವಿಮಾನದಲ್ಲಿ ಇಂದು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಶಾಸಕರು ಬರಮಾಡಿಕೊಂಡರು. ರಾಹುಲ್ ಗಾಂಧಿ ಅವರಿಂದ ತೆರವಾಗಿರುವ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನಾಳೆ ಕಾಂಗ್ರೆಸ್‌ನ ಹಿರಿಯ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ನಂತರ ರಸ್ತೆಯ ಮೂಲಕ ಗುಂಡ್ಲುಪೇಟೆ ಮಾರ್ಗವಾಗಿ ವಯನಾಡ್‌ಗೆ ತೆರಳಿದರು.ಈ ವೇಳೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಸಂಸದ ಸುನಿಲ್ ಬೋಸ್, ಶಾಸಕರಾದ ರವಿಶಂಕರ್, ದರ್ಶನ್ ದ್ರುವನಾರಾಯಣ್, ಎ.ಆರ್.ಕೃಷ್ಣಮೂರ್ತಿ, ವಿಧಾನ ಪರಿಷತ್…
ಬಳ್ಳಾರಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನವರು ಬಳ್ಳಾರಿ ಜೈಲಿನಲ್ಲಿ ಇದ್ದು ಅವರಿಗೆ ತೀವ್ರವಾಗಿ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾಗಿ ಇಂದು ಅವರು ಕೊನೆಗೂ ಪತ್ನಿಯ ಮಾತಿಗೆ ಬೆಲೆ ಕೊಟ್ಟು, ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ. ಆದ್ದರಿಂದ ಇದೀಗ ಬಳ್ಳಾರಿಯ ಕೇಂದ್ರ ಕಾರಾಗೃಹದ ಪೊಲೀಸರು ನಟ ದರ್ಶನ್ ಅವರನ್ನು ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ನಟ ದರ್ಶನ್ ಅವರನ್ನ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ರಸ್ತೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇದಕ್ಕೂ ಮುನ್ನ ನಟ ದರ್ಶನ್ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮಿ ಹಾಗೂ ಭಾವ ಜೈಲಿಗೆ ಆಗಮಿಸಿದ್ದರು.ಈ ವೇಳೆ ಪತ್ನಿ ವಿಜಯಲಕ್ಷ್ಮಿ ಅವರು ನಟ ದರ್ಶನ್ ಅವರಿಗೆ ಚಿಕಿತ್ಸೆ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ನಟ ದರ್ಶನ ಅವರು ಪತ್ನಿಯ ಮಾತಿಗೆ ಬೆಲೆ ಕೊಟ್ಟು ಚಿಕಿತ್ಸೆ ಪಡೆದುಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ. ಇದೀಗ ನಟ ದರ್ಶನ್ ಅವರನ್ನು…
ಚಿಕ್ಕಮಗಳೂರು : ಮನೆ ಮಾರಾಟ ಮಾಡಿದ್ದರು ಸಹ ಮನೆಯನ್ನು ತೊರೆದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಾವನನ್ನೇ ಬಾಮೈದ ಹತ್ಯೆಗೈದಿರುವ ಘಟನೆ ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಮಂಜು (50) ಎಂದು ತಿಳಿದುಬಂದಿದೆ.ಇನ್ನು ಬಾವನನ್ನೇ ಕೊಂದ ಬಾಮೈದನನ್ನು ಗೋಪಾಲ್ ಎಂದು ಹೇಳಲಾಗುತ್ತಿದೆ. ಕೊಲೆಯಾದ ಮಂಜು ತನ್ನ ಬಾಮೈದನಿಗೆ ಕಳೆದ 3 ವರ್ಷಗಳ ಹಿಂದೆ 25,000 ಕ್ಕೆ ಮನೆಯನ್ನು ಮಾರಾಟ ಮಾಡಿದ್ದಾನೆ. 3 ವರ್ಷಗಳ ಹಿಂದೆಯೇ ಮನೆ ಮಾರಾಟ ಮಾಡಿದ್ದರು ಸಹ ಮಂಜು ಮನೆಯನ್ನು ಬಿಟ್ಟಿರಲಿಲ್ಲ. ಹೀಗಾಗಿ ಗೋಪಾಲ್ ಎಷ್ಟೇ ಬಾರಿ ಎಚ್ಚರಿಕೆ ನೀಡಿದರೂ ಸಹ ಮಂಜು ಮನೆಯನ್ನು ತೊರೆದಿರಲಿಲ್ಲ. ಆದರೆ ಇಂದು ಇಬ್ಬರ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಗೋಪಾಲ ಅಲ್ಲೇ ಇದ್ದ ಇಟ್ಟಿಗೆ ಯನ್ನು ತೆಗೆದುಕೊಂಡು ಮಂಜು ತಲೆಗೆ ಹೊಡೆದಿದ್ದಾನೆ. ತಕ್ಷಣ ಮಂಜುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮಂಜು ಸಾವನ್ನಪ್ಪಿದ್ದಾನೆ.
ವಿಜಯಪುರ : ವಿಜಯಪುರ ನಗರದ ನವಭಾಗ್ ರಸ್ತೆಯಲ್ಲಿ ಬೃಹತ್ ಫಿಶ್ ಟನಲ್ ಎಕ್ಸ್ಪೋ ಹಮ್ಮಿಕೊಂಡಿದ್ದು, ಈ ಒಂದು ಮನೋರಂಜನ ಆಟಗಳಲ್ಲಿ ಯುವತಿಯೊಬ್ಬಳು ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದಾಗ ಬೆಲ್ಟ್ ಕಟ್ ಆಗಿ ಬಿದ್ದು ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಹೌದು ಮೃತ ಯುತಿಯನ್ನು ನಿಕಿತಾ ಎಂದು ಗುರುತಿಸಲಾಗಿದ್ದು, ಅಕ್ಟೋಬರ್ 20ರಂದು ಈ ಒಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಒಂದು ರೇಂಜರ್ ಸ್ವಿಂಗ್ ನಲ್ಲಿ ಮೂವರು ಯುವತಿಯರು ಒಟ್ಟಿಗೆ ಕುಳಿತಿದ್ದು, ಅದರಲ್ಲಿ ನಿಖಿತಾಳ ಸೊಂಟಕ್ಕೆ ಕಟ್ಟಿದ್ದ ಬೆಲ್ಟ್ ಕಟ್ಟಾಗಿ ಕೆಳಗೆ ಬಿದ್ದಿದ್ದಾಳೆ. ತಲೆ ಕೆಳಗಾಗಿ ಬಿದ್ದ ಪರಿಣಾಮ ನಿಖಿತಾ ತ್ರೀವವಾಗಿ ಗಾಯಗೊಂಡಿದ್ದರು. ತಕ್ಷಣ ನಿಖಿತಾಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಯುವತಿ ಮೃತಪಟ್ಟಿದ್ದಾಳೆ. ಘಟನೆ ಕುರಿತಂತೆ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡ : ರಾಜ್ಯಾದ್ಯಂತ ಕಳೆದ ಕೆಲವು ದಿನಗಳಿಂದ ಬಾರಿ ಮಳೆ ಆಗುತ್ತಿದ್ದು, ಸಾಕಷ್ಟು ಅವಾಂತರ ಕಳಾಗಿವೆ, ಅಲ್ಲದೆ ಹಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಇದೀಗ ಧಾರವಾಡದಲ್ಲಿ ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಗಾಯಗೊಂಡಿದ್ದ ಮಹಿಳೆ ಸಾವನಪ್ಪಿದ್ದಾರೆ. ಹೌದು ಮಳೆಯಿಂದ ಮನೆಗೋಡೆ ಕುಸಿದು ಗಾಯಗೊಂಡಿದ್ದ ಮಹಿಳೆ ಸಾವನ್ನಾಪ್ಪಿದ್ದರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ಅಕ್ಟೊಬರ್ 18 ರಂದು ಮನೆ ಗೋಡೆ ಕುಸಿದು ಮಹಿಳೆ ಮಂಗಳಾ ಪಾಟೀಲ್ ಗಾಯಗೊಂಡಿದ್ದರು. ಗಾಯಗೊಂಡ ಮಹಿಳೆಯನ್ನು ಕೂಡಲೇ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಚಿಕಿತ್ಸೆ ಫಲಿಸದೆ ಮಂಗಳಾ ಪಾಟೀಲ್ ಸಾವನಪ್ಪಿದ್ದಾರೆ. ಮೃತ ಮಹಿಳೆಯ ಕುಟುಂಬಸ್ಥರಿಗೆ ನವಲಗುಂದದ ಮಾಜಿ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಸಾಂತ್ವನ ಹೇಳಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆ ದಂಧೆಗೆ ತಳಲ್ಪಟ್ಟ ಸುಮಾರು 12 ಬಾಲಕಿಯರನ್ನು ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸರು ರಕ್ಷಿಸಿದ್ದಾರೆ. ಕರ್ನಾಟಕ ರಾಜ್ಯ ಸೇರಿದಂತೆ ಪಂಜಾಬ್ ಮಹಾರಾಷ್ಟ್ರ ತಿಪುರ ಹಾಗೂ ನೆರೆಯ ಬಾಂಗ್ಲಾದೇಶದ ಬಾಲಕಿಯರನ್ನು ರಕ್ಷಿಸಲಾಗಿದೆ. ಹೌದು ಕಳೆದ ಮೇ ತಿಂಗಳಿನಿಂದ i ಎನ್‌ಜಿಓ ಸಹಯೋಗದೊಂದಿಗೆ ಸಿಸಿಬಿ ಸುಮಾರು 11 ಕಡೆಗೆ ದಾಳಿ ಮಾಡಿದ್ದರು. ಈ ವೇಳೆ ಸುಮಾರು ವೇಶ್ಯಾವಾಟಿಕೆ ದಂಧೆಗೆ ತಳಲ್ಪಟ್ಟಿದ್ದ 14 ರಿಂದ 17 ವರ್ಷದ ವಯಸ್ಸಿನ 12 ಬಾಲಕಿಯರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರು ಸ್ಥಳೀಯ ಬಾಲಕಿಯರು, ತ್ರಿಪುರಾ, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳ ತಲಾ ಒಬ್ಬರು, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಮೂಲದ ತಲಾ ಮೂವರು ಸೇರಿದಂತೆ ಒಟ್ಟು 12 ಬಾಲಕಿಯರನ್ನು ರಕ್ಷಿಸಲಾಗಿದೆ. ದಾಳಿಯ ಬಳಿಕ ಸರ್ಕಾರೆತರ ಸಂಸ್ಥೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬಾಲಕಿಯರಿಗೆ ಮನೋ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲಾಗಿದೆ. ವಿದೇಶಿ ಮೂಲದ…
ಬಳ್ಳಾರಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಈ ವೇಳೆ ಅವರಿಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊನೆಗೂ ಅವರು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ನಟ ದರ್ಶನ್ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಕಳೆದ ಕೆಲವು ದಿನಗಳ ಹಿಂದೆ ಕೂಡ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಈ ವೇಳೆ ವಿಮ್ಸ್ ಆಸ್ಪತ್ರೆಯ ವೈದ್ಯರು ಜೈಲಿಗೆ ಭೇಟಿ ನೀಡಿ ನಟ ದರ್ಶನ್ ಅವರ ಆರೋಗ್ಯವನ್ನು ತಪಾಸಣೆ ಮಾಡಿದ್ದರು. ಈ ವೇಳೆ ವೈದ್ಯರು ಆಸ್ಪತ್ರೆಗೆ ದಾಖಲಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಇದೆ ವೇಳೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅಕ್ಟೋಬರ್ 28ಕ್ಕೆ ಮುಂದೂಡಿದೆ. ಜೈಲಾಧಿಕಾರಿಗಳಿಂದ ದರ್ಶನ್ ಬೆನ್ನು ನೋವಿನ ಬಗ್ಗೆ ವೈದ್ಯರು…
ಗದಗ : ಕೌಟುಂಬಿಕ ಕಲಹ ಹಾಗೂ ಸಾಲಬಾಧೆ ತಾಳದೆ ಮನನೊಂದ ಯುವಕನೊಬ್ಬ ತುಂಗಭದ್ರಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿಯ ಹಮ್ಮಗಿ ಬ್ಯಾರೇಜ್ ಬಳಿ ನಡೆದಿದೆ. ಘಟನೆಯು ಮೂರು ದಿನಗಳ ಹಿಂದೆ ನಡೆದಿದ್ದು, ಕಳೆದ ಮೂರು ದಿನಗಳ ಹಿಂದೆ ಯುವಕ ಹಮ್ಮಗಿ ಬ್ಯಾರೇಜ್ ಬಳಿ ಬಂದು ತನ್ನ ಬಳಿ ಇರುವಂತಹ ಮೊಬೈಲ್, ಚಪ್ಪಲಿ ಹಾಗೂ ಬೈಕ್ ಸೇರಿದಂತೆ ಎಲ್ಲ ವಸ್ತುಗಳನ್ನ ಅಲ್ಲಿಯೇ ಬಿಟ್ಟು ತುಂಗಭದ್ರಾ ನದಿಗೆ ಹಾರಿದ್ದಾನೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿ, ಈಜು ತಜ್ಞರು ಸೇರಿದಂತೆ ಸ್ಥಳೀಯರು ಕೂಡ ಯುವಕನ ಶವಕ್ಕಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಇಂದು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೊಂಬಳಿ ಬಳಿ ಶವ ಪತ್ತೆಯಾಗಿದೆ.
ತುಮಕೂರು : ಕಲುಷಿತ ನೀರು ಸೇವಿಸಿ ಸುಮಾರು 10ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದು, ಓರ್ವ ಮಹಿಳೆ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಸೋರಲಮಾವು ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಕಲುಷಿತ ನೀರು ಸೇವಿಸಿ ಗುಂಡಮ್ಮ (60) ಸಾವನ್ನಪ್ಪಿದ್ದರೆ. ಅಲ್ಲದೆ ಸೋರಲಮಾವು ಗ್ರಾಮದಲ್ಲಿ 10ಕ್ಕೂ ಹೆಚ್ಚು ಜನರು ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ.ಇನ್ನು ಘಟನೆಯಲ್ಲಿ ಅಸ್ವಸ್ಥಗೊಂಡಂತಹ ಎಲ್ಲಾ 10 ಜನರನ್ನು ಚಿಕ್ಕನಾಯಕನಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.