Subscribe to Updates
Get the latest creative news from FooBar about art, design and business.
Author: kannadanewsnow05
ಪಂಜಾಬ್ : ಹನಿ ನೇ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದರು ಸಹ ಪಾಕಿಸ್ತಾನ ತನ್ನ ಬುದ್ಧಿ ಬಿಟ್ಟಿಲ್ಲ ಇದೀಗ ಭಾರತದ ಮೇಲೆ ಪಾಕಿಸ್ತಾನ ಮಿಸೆಲ್ ದಾಳಿ ನಡೆಸಿದ್ದು, ಭಾರತ ಕೂಡ ಇದಕ್ಕೆ ತಕ್ಕ ಪ್ರತಿತರ ನೀಡಿದ್ದು, ಪಾಕಿಸ್ತಾನದ ಮಿಶಲ್ ಅನ್ನು ಭಾರತದ ಏರ್ ಡಿಫೆನ್ಸ್ ಹೊಡೆದುರುಳಿಸಿದೆ. ಹೌದು ಭಾರತದ ಮೇಲೆ ಪಾಕಿಸ್ತಾನದಿಂದ ಮಿಸ್ಸೈಲ್ ದಾಳಿಗೆ ಯತ್ನ ಮಾಡಿದೆ. ನಿನ್ನೆ ಹಾಗೂ ಇವತ್ತು ಭಾರತ ನಡೆಸಿದ ದಾಳಿಗೆ ಪಾಠ ಕಲಿತರೂ ಸಹ ಪಾಕಿಸ್ತಾನ ತನ್ನ ನೀಚ ಬುದ್ಧಿ ಬಿಟ್ಟಿಲ್ಲ. ಇದೀಗ ಪಾಕಿಸ್ತಾನದ ಮಿಸೈಲ್ ಅನ್ನು ಭಾರತದ ಏರ್ ಡೀಫೈನ್ಸ್ ಹೊಡೆದುರುಳಿಸಿದೆ. ಪಂಜಾಬ್ ನ ಅಮೃತಸರ ಬಳಿ ಪಾಕಿಸ್ತಾನದ ಕ್ಷಿಪಣಿಯನ್ನು ಹೊಡೆದುರುಳಿಸಿದೆ.
ಉತ್ತರಪ್ರದೇಶ : ಉತ್ತರ ಪ್ರದೇಶದಲ್ಲಿ ಭೀಕರವಾದ ಕೊಲೆ ನಡೆದಿದ್ದು ಪ್ರೀತಿಸಿ ಮದುವೆಯಾಗಿದ್ದ ಪತಿಯೊಬ್ಬ ನನ್ನ ಎದುರಲ್ಲಿ ಬೇರೆಯವರೊಂದಿಗೆ ಮಾತಾಡುತ್ತಾಳೆ ಎಂದು ಪತ್ನಿಯ ಕತ್ತು ಸೀಳಿ ಬಳಿಕ ತನ್ನ ಅತ್ತೆಗೆ ಕರೆ ಮಾಡಿ ಪತ್ನಿಯನ್ನು ಕೊಂಡಿದ್ದೇನೆ ಎಂದು ಹೇಳಿರುವ ಘಟನೆ ಉತ್ತರಪ್ರದೇಶದ ಬಾಗ್ಪತ್ ನಲ್ಲಿ ನಡೆದಿದೆ.ಆರೋಪಿ ಅಪರಾಧ ಒಪ್ಪಿಕೊಂಡಿದ್ದಾನೆ. ಕೊಲೆಗೆ ಬಳಸಿದ್ದ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ತನಿಖೆ ಮುಂದುವರೆಸಿದ್ದಾರೆ. ಹೌದು ಪತಿ ಪ್ರಶಾಂತ್ ಪತ್ನಿ ನೇಹಾಳನ್ನು ಕೊಲೆ ಮಾಡಿ ಬಳಿಕ ನೇಹಾಳ ತಾಯಿಗೆ ಕರೆ ಮಾಡಿ ನನ್ನ ಎದುರಲ್ಲೇ ಬೇರೆಯವರ ಜೊತೆ ಫೋನಿನಲ್ಲಿ ಮಾತಾಡುತ್ತಾಳೆ. ಹಾಗಾಗಿ ಅವಳನ್ನು ಕೊಂದಿದ್ದೇನೆ ಎಂದು ಕರೆ ಮಾಡಿ ತಿಳಿಸಿದ್ದಾನೆ. ಆರೋಪಿ ಪ್ರಶಾಂತ್ ಆಟೋ ಚಾಲಕನಾಗಿದ್ದು ಕಳೆದ ಎಂಟು ವರ್ಷಗಳ ಹಿಂದೆ ಪ್ರಶಾಂತ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಇಬ್ಬರಿಗೆ ನಾಲ್ಕು ವರ್ಷದ ಮಗ ಸಹ ಇದ್ದಾನೆ. ಆರೋಪಿಯು ಸುಮಾರು 15 ನಿಮಿಷಗಳ ಕಾಲ ಶವದ ಬಳಿ ಓಡಾಡಿ ಬಳಿಕ ಅತ್ತೆಗೆ ಕರೆ ಮಾಡಿದ್ದಾನೆ. ನಾನು ಆಕೆಯನ್ನು ಕೊಂದು…
ಶ್ರೀನಗರ : ಆಪರೇಷನ್ ಸಿಂಧೂರ್ ಬೆನ್ನಲ್ಲೆ ಗಡಿರೇಖೆಯ (LoC) ಆಚೆಗೆ ಪಾಕಿಸ್ತಾನ ಗುಂಡಿನ ದಾಳಿ ಮುಂದುವರೆಸಿದ್ದರಿಂದ, ಪೂಂಚ್‌ನಲ್ಲಿ ಭಾರತೀಯ ಸೇನಾ ಸಿಬ್ಬಂದಿ 32 ವರ್ಷದ ಲಾನ್ಸ್ ನಾಯಕ್ ದಿನೇಶ್ ಕುಮಾರ್‌ನ ಮೃತಪಟ್ಟಿದ್ದಾರೆ. 5 ಫೀಲ್ಡ್ ರೆಜಿಮೆಂಟ್‌ನ ಲಾನ್ಸ್ ನಾಯಕ್ ದಿನೇಶ್ ಕುಮಾರ್ ಹುತಾತ್ಮರಾಗಿದ್ದಾರೆ. ನಿನ್ನೆ ತಡರಾತ್ರಿ ಆರಂಭವಾದ ಶೆಲ್ ದಾಳಿಯು ಭಾರತದ ಮುಂಚೂಣಿ ಠಾಣೆಗಳು ಮತ್ತು ಹತ್ತಿರದ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆದಿದೆ. ಮೋರ್ಟರ್ ಗುಂಡುಗಳು ಮತ್ತು ಫಿರಂಗಿ ಗುಂಡಿನ ದಾಳಿಗಳು ಹಳ್ಳಿಗಳ ಬಳಿ ಅಪಾಯಕಾರಿಯಾಗಿ ಬಿದ್ದವು. ಭಾರತದ ಇತ್ತೀಚಿನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯೆಯಾಗಿ ಈ ಕೃತ್ಯವನ್ನು ಸ್ಪಷ್ಟ ಕದನ ವಿರಾಮ ಉಲ್ಲಂಘನೆ ಮತ್ತು ಉದ್ದೇಶಪೂರ್ವಕ ಪ್ರಚೋದನೆ ಎಂದು ಭಾರತೀಯ ಅಧಿಕಾರಿಗಳು ಖಂಡಿಸಿದ್ದಾರೆ. ಹುತಾತ್ಮರಾದ 32 ವರ್ಷದ ಜವಾನ್ ದಿನೇಶ್ ಕುಮಾರ್ ಶರ್ಮಾ, ಹರಿಯಾಣದ ಪಲ್ವಾಲ್‌ನ ಮೊಹಮ್ಮದ್‌ಪುರ ಗ್ರಾಮದವರು. ಅವರು ಪಾಕಿಸ್ತಾನದ ಆಕ್ರಮಣಕ್ಕೆ ಆಗಾಗ್ಗೆ ಒಡ್ಡಿಕೊಳ್ಳುವ ಹೈಟೆನ್ಷನ್ ಪ್ರದೇಶವಾದ ಎಲ್‌ಒಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಸಮರ್ಪಣೆ ಮತ್ತು ಶೌರ್ಯ ಅನುಕರಣೀಯ…
ಬಾಗಲಕೋಟೆ : ಬಾಗಲಕೋಟೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಬಾಲಕರು ಸ್ಥಳದಲ್ಲಿ ಸಾವನಪ್ಪಿರುವ ಘಟನೆ, ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬೈಪಾಸ್ ನಲ್ಲಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರು ಮೂವರು ಎಲ್ಲರೂ ಬಾಲಕರು ಎಂದು ತಿಳಿದು ಬಂದಿದ್ದು, ಬಾಲಕರು ಗದ್ದನಕೆರೆ ಕ್ರಾಸ್ನಿಂದ ಹುಬ್ಬಳ್ಳಿ ಮಾರ್ಗವಾಗಿ ಬೈಕ್ ನಲ್ಲಿ ತೆರಳುತ್ತಿದ್ದರು ಈ ವೇಳೆ ಕ್ಯಾಂಟರ್ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಬಾಲಕರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗಾವಿ : ಪಹಲ್ಗಾಮ್ ದಾಳಿ ಅಧಿಕಾರಕ್ಕೆ ನಿನ್ನೆ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ದಾಳಿ ಮಾಡಿದ ಪರಿಣಾಮ 100ಕ್ಕೂ ಅಧಿಕ ಉಗ್ರರು ಸಾವನಪ್ಪಿದ್ದಾರೆ. ಈ ಮಾಹಿತಿಯನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದು ಕರ್ನಲ್ ಸೋಫಿಯಾ ಖುರೇಶಿ. ಮತ್ತೊಂದು ಹೊಸ ವಿಚಾರ ಎಂದರೆ ಇವರು ಕರ್ನಾಟಕದ ಸೊಸೆ ಎಂಬುವುದು ಹೆಮ್ಮೆಯ ಸಂಗತಿಯಾಗಿದೆ. ಹೌದು ನಿನ್ನೆ ದಾಳಿಯ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೆಷಿ ಕನ್ನಡದ ಸೊಸೆ ಎಂದು ಗೊತ್ತಾಗಿದೆ. ಕರ್ನಲ್ ಸೋಫಿಯ ಕರ್ನಾಟಕದ ಬೆಳಗಾವಿ ಮೂಲದವರು ಎಂದು ತಿಳಿದುಬಂದಿದೆ. ಸೋಫಿಯ ಬೆಳಗಾವಿಯ ಸೊಸೆ ಎಂಬುವುದೇ ಹೆಮ್ಮೆಯಾಗಿದೆ. ಅಲ್ಲದೇ ಸೋಫಿಯಾ ಪತಿ ಕೂಡ ಭಾರತೀಯ ಸೇನಾಧಿಕಾರಿ ಎನ್ನುವುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ. ಸೋಫಿಯ ಪತಿ ಹೆಸರು, ತಾಜುದ್ದೀನ್ ಬಾಗೇವಾಡಿ ಎಂದು ತಿಳಿದುಬಂದಿದೆ. ಗೋಕಾಕಿನ ಕೊಣ್ಣೂರು ನಿವಾಸಿಯಾಗಿದ್ದು, ಭಾರತೀಯ ಸೇನೆಯಲ್ಲಿ ಇಬ್ಬರು ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2015ರಲ್ಲಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ ಸದ್ಯ ಸೋಫಿಯಾ ಜಮ್ಮುನಲ್ಲಿ ಕರ್ನಲ್ ಆಗಿ ಸೇವಿ ಸಲ್ಲಿಸುತ್ತಿದ್ದು, ಪತಿ ತಾಜುದ್ದೀನ್…
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಕಳೆದ ಕೆಲವು ತಿಂಗಳ ಹಿಂದೆ ಕಲ್ಕತ್ತಾದಲ್ಲಿ ಟ್ರೇನಿ ವೈದ್ಯೆಯ ಮೇಲೆ ನಡೆಡ್ಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಭಾರತದಲ್ಲಿ 18 ವರ್ಷ ತುಂಬೋಕು ಮುನ್ನ ಶೇ.30 ರಷ್ಟು ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತೆ ಎಂದು ತಿಳಿದುಬಂದಿದೆ. ಹೌದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ ವಿಶ್ಲೇಷಣೆಯ ಪ್ರಕಾರ, 2023 ರಲ್ಲಿ ಭಾರತದಲ್ಲಿ ಶೇಕಡಾ 30 ಕ್ಕೂ ಹೆಚ್ಚು ಹುಡುಗಿಯರು ಮತ್ತು ಶೇಕಡಾ 13 ಕ್ಕೂ ಹೆಚ್ಚು ಹುಡುಗರು 18 ವರ್ಷ ತುಂಬುವ ಮೊದಲು ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ. 1990 ರಿಂದ 2023 ರ ನಡುವೆ 200 ಕ್ಕೂ ಹೆಚ್ಚು ದೇಶಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಹರಡುವಿಕೆಯನ್ನು ಅಂದಾಜಿಸಿದಾಗ, ದಕ್ಷಿಣ ಏಷ್ಯಾದಲ್ಲಿ ಹುಡುಗಿಯರಿಗೆ ಅತಿ ಹೆಚ್ಚು ದರಗಳು ದಾಖಲಾಗಿವೆ ಎಂದು ಅಧ್ಯಯನವು ಕಂಡುಹಿಡಿದಿದೆ. ಬಾಂಗ್ಲಾದೇಶದಲ್ಲಿ ಶೇ.…
ಬೆಂಗಳೂರು : ಮೇ 10 ರವರೆಗೆ ಕರ್ನಾಟಕದ ಉತ್ತರ ಒಳನಾಡು ಮತ್ತು ಕರ್ನಾಟಕದ ದಕ್ಷಿಣ ಒಳನಾಡುಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತ ಹವಾಮಾನ ಇಲಾಖೆ (IMD) ನ ಪ್ರಕಾರ, ರಾಜ್ಯದಲ್ಲಿ ಮತ್ತೆ ಮಳೆಯ ಮುನ್ಸೂಚನೆಗಳು ಕೇಳಿಬರುತ್ತಿದ್ದು, ಬಂಗಾಳಕೊಲ್ಲಿಯ ಚಂಡಮಾರುತದ ಪರಿಣಾಮವಾಗಿ ಹಲವು ಜಿಲ್ಲೆಗಳಲ್ಲಿ ವಾತಾವರಣ ಬದಲಾಗುತ್ತಿದೆ. ಬೆಂಗಳೂರಿನಲ್ಲಿ ಬರುವ ದಿನಗಳಲ್ಲಿ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉಂಟಾಗಿದ್ದು, ಕ್ರಮೇಣ ಕರ್ನಾಟಕ ಮತ್ತು ತಮಿಳುನಾಡು ಕಡೆಗೆ ಚಲಿಸುತ್ತಿದ್ದು, ಬೆಂಗಳೂರು, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ಮಂಡ್ಯ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. https://twitter.com/KarnatakaSNDMC/status/1919946136758190102?t=GI_O4pMwesGWxgurRAA70Q&s=19
ಉತ್ತರಾಖಂಡ : ಉತ್ತರಾಖಂಡದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಉತ್ತರಕಾಶಿ ಜಿಲ್ಲೆಯ ಗಂಗಾನನಿ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಗರ್ವಾಲ್ ವಿಭಾಗೀಯ ಆಯುಕ್ತ ವಿನಯ್ ಶಂಕರ್ ಪಾಂಡೆ ದೃಢಪಡಿಸಿದ್ದಾರೆ. ಬೆಳಿಗ್ಗೆ ಉತ್ತರಾಖಂಡದ ಉತ್ತರಕಾಶಿ ಬಳಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಸುಮಾರು ಆರು ಜನರಿದ್ದರು, ಅದರಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಯಾಣಿಕರಿಂದ ತುಂಬಿದ್ದ ಹೆಲಿಕಾಪ್ಟರ್ ಡೆಹ್ರಾಡೂನ್‌ನಿಂದ ಹರ್ಸಿಲ್ ಹೆಲಿಪ್ಯಾಡ್‌ಗೆ ತೆರಳುತ್ತಿತ್ತು. ಪೊಲೀಸರು, ಸೇನಾ ಪಡೆ, ವಿಪತ್ತು ನಿರ್ವಹಣಾ ತಂಡ ಮತ್ತು ಆಂಬ್ಯುಲೆನ್ಸ್‌ಗಳು ಉತ್ತರಕಾಶಿ ಬಳಿಯ ಘಟನಾ ಸ್ಥಳಕ್ಕೆ ತೆರಳಿವೆ. ಅಪಘಾತದ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. https://twitter.com/PyaraUKofficial/status/1920334595469214138?t=u67v5l1Pj5FYTUJ4xd59Vg&s=19
ಬೆಂಗಳೂರು : ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ಹಿನ್ನೆಲೆಯಲ್ಲಿ ಇದೀಗ ರಾಜ್ಯಾದ್ಯಂತ ಮುಜರಾಯಿ ಇಲಾಖೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು. ಮುಜರಾಯಿ ಇಲಾಖೆಯ ಸೂಚನೆಯಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು. ಗಡಿಯಲ್ಲಿ ಪಾಕಿಸ್ತಾನ ವಿರುದ್ಧ ಹೋರಾಡುತ್ತಿರುವ ವೀರ ಯೋಧರಿಗಾಗಿ ಪ್ರಾರ್ಥಿಸಿ ದೇವಸ್ಥಾನಗಳಲ್ಲಿ ಇದೀಗ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯಿತು. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅದೇ ರೀತಿಯಾಗಿ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಸ್ಥಾನ, ಕಲ್ಬುರ್ಗಿ ಜಿಲ್ಲೆಯ ಆಫಜಲ್ಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನ, ಮೈಸೂರಿನ ಚಾಮುಂಡಿ ಬೆಟ್ಟ, ನಂಜನಗೂಡು ಸೇರಿದಂತೆ ಹಲವು ದೇಗುಲದಲ್ಲಿ ಸೈನಿಕರ ಹೆಸರಲ್ಲಿ ಪೂಜೆ ಸಲ್ಲಿಸಲಾಯಿತು
ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಕೊಲೆಯಾಗಿದ್ದು, ಯುವಕನನ್ನು ಕೊಂದ ಬಳಿಕ ಶವಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಂಗಳೂರು ನಗರ ಆನೇಕಲ್ ತಾಲೂಕಿನ ಶೀಲಿಂದ್ರದೊಡ್ಡಿ ಎಂಬಲ್ಲಿ ನಡೆದಿದೆ. ಶಿಲೀಂದ್ರದೊಡ್ಡಿ ಬಳಿ ಸುಮಾರು 25 ವರ್ಷದ ಯುವಕನ ಶವ ಪತ್ತೆಯಾಗಿದ್ದು, ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಶಿಲೀಂದ್ರದೊಡ್ಡಿ ಬಳಿ ಯುವಕನನ್ನು ಕೊಲೆಗೈದು ಬಳಿಕ ಬೆಂಕಿ ಹಚ್ಚಿ ಹಂತಕರು ಪರಾರಿ ಆಗಿದ್ದಾರೆ.ಮೃತದೇಹ ಪತ್ತೆಯಾದ ಸಮೀಪ ಟಿವಿಎಸ್ ಎನ್ ಕೋರ್ಟ್ ಕಾರ್ಟ್ ಬೈಕ್ ಸಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.














