Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮಿನು ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ದರ್ಶನ್ ಪರ ವಕೀಲ ಸಿವಿ ನಾಗೇಶ್ ಪ್ರಬಲವಾಗಿ ವಾದ ಮಂಡಿಸಿದರು. ವಾದವನ್ನು ಆಲಿಸಿದ ನ್ಯಾ.ವಿಶ್ವಜೀತ್ ಶೆಟ್ಟಿ ಅವರು, ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿ ಆದೇಶ ಹೊರಡಿಸಿದರು. ದರ್ಶನ್ ಪರ ವಕೀಲ ಸಿವಿ ನಾಗೇಶ್ ಅವರು ವಾದ ಮಂಡಿಸಿದ್ದು, ಆರು ಜನ ಪ್ರತ್ಯಕ್ಷ ಸಾಕ್ಷಿಗಳೆಂದು ಪ್ರಾಸಿಕ್ಯೂಷನ್ ಅವರು ಹೇಳಿದ್ದಾರೆ. ಸಾಕ್ಷಿ ನರೇಂದ್ರ ಸಿಂಗ್, ಮಲ್ಲಿಕಾರ್ಜುನ್, ವಿಜಯ್ ಕುಮಾರ್ ಸೇರಿದಂತೆ ಆರು ಜನರು ಪ್ರತ್ಯಕ್ಷದರ್ಶಿಗಳೆಂದು ಹೆಸರಿಸಿದ್ದಾರೆ. ನರೇಂದ್ರ ಸಿಂಗ್ ನ ಸಿಆರ್ಪಿಸಿ 164 ಹೇಳಿಕೆಯನ್ನು ದಾಖಲಿಸಿದ್ದಾರೆ. ಈತ ರೇಣುಕಾ ಸ್ವಾಮಿ ಮೇಲೆ ಹಲ್ಲೆಯ ಬಗ್ಗೆ ಏನನ್ನು ಹೇಳಿಲ್ಲ ಎಂದು ವಾದಿಸಿದರು. ಸಿಆರ್ಪಿಸಿ 164 ಹೇಳಿಕೆಗೆ 161 ಹೇಳಿಕೆಗಿಂತ ಹೆಚ್ಚಿನ ಮೌಲ್ಯವಿದೆ. ಹೀಗಾಗಿ ಅದನ್ನು ಓದಿದಾಗ ಹಲ್ಲೆಯನ್ನು ನೋಡಿದ್ದಾಗಿ ಹೇಳಿಲ್ಲ. ಯಾವುದೇ ಆರೋಪಿಗಳನ್ನು ನೋಡಿರುವುದಾಗಿಯೂ…
ಬೆಂಗಳೂರು : ವಕ್ಫ್ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ ಒಂದು ತಂಡ ಈಗಾಗಲೇ ಬೀದರ್ ನಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ಈ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಬಿವೈ ವಿಜಯೆಂದ್ರ ವಿರುದ್ಧ ಹೊಸದೊಂದು ಬಾಂಬ್ ಸಿಡಿಸಿದ್ದು, ಡಿಕೆ ಶಿವಕುಮಾರ್ ಬಳಿಗೆ ಹೋಗಿ ವಿಜಯೇಂದ್ರ 20 ಪತ್ರಕ್ಕೆ ಸಹಿ ಹಾಕಿಸಿಕೊಂಡು ಬಂದಿರುವ ವಿಡಿಯೋ ನನ್ನ ಬಳಿ ಇದೆ ಎಂದು ಸ್ಪೋಟಕ ಹೇಳಿಕೆ ನೀಡಿದರು. ವಿಜಯಪುರ ಜಿಲ್ಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೋಗಿ ಡಿಕೆಶಿ ಬಳಿ 20 ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದರು. ಆ ವಿಡಿಯೋ ನನ್ನ ಬಳಿ ಇದೆ. ನಾನು ಕಾಂಗ್ರೆಸ್ ಜೊತೆಗೆ ಕೈ ಜೋಡಿಸುವ ಕೆಲಸ ಮಾಡಲ್ಲ. ಪಕ್ಷಕ್ಕೆ ದ್ರೋಹ ಮಾಡುವುದಿಲ್ಲ. ಕೆಲವರೆಲ್ಲ ರಾತ್ರಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು. ನಾನು ಯಾರ ಮನೆಗೆ ಹೋಗಿ ಕೆಲಸ ಮಾಡಿಕೊಡಿ ಎಂದು ಕೇಳುವ ವ್ಯಕ್ತಿಯಲ್ಲ. ಅದಕ್ಕೆ ನನ್ನ…
ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಘೋರವಾದ ದುರಂತ ಒಂದು ನಡೆದಿದ್ದು, ಮೂತ್ರ ವಿಸರ್ಜನೆ ಮಾಡಲು ತೆರಳಿದ್ದ ವೇಳೆ, ತುಂಡಾದಂತಹ ಸರ್ವಿಸ್ ವಿದ್ಯುತ್ ವೈರ್ ತಗುಲಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಬಳಿ ನಡೆದಿದೆ. ಮೃತ ಬಾಲಕಿಯನ್ನು 2ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಬಸವರಾಜ ಗೌಳಿ(8) ಮೃತ ವಿದ್ಯಾರ್ಥಿನಿ. ಬೋರ್ವೆಲ್ ಅಳವಡಿಸಲು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದ್ದು, ವೈರ್ ತುಂಡಾಗಿ ಶಾಲೆಯ ಶೌಚಾಲಯ ಒಳಗೆ ಬಿದ್ದಿತ್ತು. ಆದ್ರೆ, ವಿಶ್ರಾಂತಿ ಸಮಯದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ಸಾನ್ವಿ, ಆ ತುಂಡಾಗಿ ಸರ್ವಿಸ್ ವಿದ್ಯುತ್ ವೈರ್ ತಗುಲಿ ಸಾವನ್ನಪ್ಪಿದ್ದಾಳೆ. ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿ ಎಂದಿನಂತೆ ವಿಶ್ರಾಂತಿ ಸಮಯದಲ್ಲಿ ಮೂತ್ರ ವಿಸರ್ಜನೆಗೆ ಶಾಲೆಯ ಶೌಚಾಲಯದೊಳಗೆ ಹೋಗಿದ್ದಾಳೆ. ಈ ವೇಳೆ ಹೊರಗಡೆ ಶೌಚಾಲಯದ ಬಳಿಯೇ ಬೋರ್ವೆಲ್ಗೆ ಹಾಕಿದ್ದ ಅನಧಿಕೃತ ವಿದ್ಯುತ್ ಸಂಪರ್ಕ ಮಾಡಲಾಗಿದ್ದ ವೈರ್ ಶೌಚಾಲಯದೊಳಗೆ ಬಿದ್ದಿದೆ. ಅದನ್ನು ಗಮನಿಸದ ಮಗು ಹಾಗೆ ಒಳ…
ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ನಲ್ಲಿ ನಟ ದರ್ಶನ್ ಅವರು ಸಲ್ಲಿಸಿದ ಜಾಮಿನು ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ಬಳಿಕ ದರ್ಶನ್ ಪರ ವಕೀಲ ಸಿವಿ ನಾಗೇಶ್ ಪ್ರಬಲವಾಗಿ ವಾದ ಮಂಡಿಸಿದ್ದು, ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಸಲ್ಲಿಸಲಾಗಿರುವ ಫೋಟೋದಲ್ಲಿ ಪ್ಯಾಂಟ್ ಹಾಗೂ ಟಿ-ಶರ್ಟ್ ಗಳನ್ನೇ ಪೊಲೀಸರು ತಿರುಚಿದ್ದಾರೆ. ರಿಟ್ರಿವ್ ಮಾಡಿದ ಫೋಟೋಗೆ ಬಟ್ಟೆ ಮ್ಯಾಚ್ ಮಾಡಲು ಯತ್ನಿಸಿದ್ದಾರೆ ಎಂದು ವಾದಿಸಿದರು. ಪೊಲೀಸರು ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸುವ ವೇಳೆ ಆರೋಪಿಯೊಬ್ಬನ ವೈಟ್ ಶರ್ಟ್, ಬ್ಲೂ ಜೀನ್ಸ್ ಹಾಕಿರುವ ಫೋಟೋ ಇದೆ. ಈ ಬಟ್ಟೆಗಳನ್ನು ಪೊಲೀಸರು ಹಾಜರುಪಡಿಸಿದ್ದಾರೆ.ಪ್ಯಾಂಟನ್ನೇ ಬದಲಿಸಿದ್ದಾರೆ ಎಂದರೆ ತಿರುಚಿರುವುದು ಬಹಳ ಚೆನ್ನಾಗಿದೆ. ಎಂದು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಸಲ್ಲಿಸಿರುವ ಫೋಟೋ ತೋರಿಸಿ ರೇಣುಕಾ ಸ್ವಾಮಿಯನ್ನು ಕರೆತಂದ ಆರೋಪಿಯ ಫೋಟೋ ತೋರಿಸಿ ವಾದ ಮಂಡಿಸಿದರು. ಕೃತ್ಯದ ದಿನ ಬಟ್ಟೆಗಳನ್ನು ತೋರಿಸುತ್ತೇನೆ ಎಂದು ಆರೋಪಿ ಹೇಳಿದ್ದ ಜೂನ್ 15ರಂದು ಪೊಲೀಸರು ರಿಕವರಿ…
BREAKING : ‘ನಗ್ನ’ ಫೋಟೋ ವೈರಲ್ ಮಾಡೋದಾಗಿ ಬೆದರಿಕೆ : ಬೆಂಗಳೂರಲ್ಲಿ ಖಾಸಗಿ ಚಾನೆಲ್ ‘ಕ್ಯಾಮರಾ ಮ್ಯಾನ್’ ಆತ್ಮಹತ್ಯೆ!
ಬೆಂಗಳೂರು : ಆಪ್ ಮೂಲಕ ಸಾಲ ಪಡೆದಿದ್ದ ವ್ಯಕ್ತಿಗೆ ಸಾಲದ ಹಣ ವಾಪಸ್ ನೀಡದಿದ್ದರೆ, ನಗ್ನ ಚಿತ್ರ ವೈರಲ್ ಮಾಡುವುದಾಗಿ ಕರೆ ಮಾಡಿ ಕಿರುಕುಳ ನೀಡಲಾಗುತ್ತಿತ್ತು. ಕಿರುಕುಳದಿಂದ ಬೇಸತ್ತು ಖಾಸಗಿ ಚಾನೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಮೆರಾ ಮ್ಯಾನ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕಿರಣ್ (32) ಎಂದು ತಿಳಿದುಬಂದಿದೆ. ಆಪ್ ಒಂದರ ಮೂಲಕ ಕಿರಣ್ ಸಾಲ ಪಡೆದಿದ್ದ. ಸಾಲದ ಹಣ ವಾಪಸ್ ನೀಡದಿದ್ದರೆ, ನಗ್ನ ಚಿತ್ರ ವೈರಲ್ ಮಾಡುವುದಾಗಿ ಕರೆ ಮಾಡಿ ಕಿರುಕುಳ ನೀಡಲಾಗುತ್ತಿತ್ತು. ಸಾಲದ ಹಣ ವಾಪಸ್ ನೀಡದಿದ್ದರೆ ನಗ್ನ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಕಿರಣ್ ಫೋಟೋ ಎಡಿಟ್ ಮಾಡಿ ನಗ್ನ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹಾಗಾಗಿ ಕಿರಣ್ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರಣ್ ಖಾಸಗಿ ಚಾನೆಲ್ ಒಂದರಲ್ಲಿ ಕ್ಯಾಮೆರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸದ್ಯ ಅವರ ಮೃತ ದೇಹವನ್ನು ನೆಲಮಂಗಲದ ಆಸ್ಪತ್ರೆಗೆ…
ಬೆಳಗಾವಿ : ನಿಯಂತ್ರಣ ತಪ್ಪಿ ಕಾರು ಒಂದು ಸೇತುವೆ ಮೇಲಿಂದ ಕೃಷ್ಣಾ ನದಿಗೆ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಾವನಪ್ಪಿದ್ದರೆ, ಉಳಿದ ಮೂವರಿಗೆ ಗಾಯಗಳಾಗಿರುವ ಘಟನೆ ಕೊಲ್ಹಾಪುರ-ಸಾಂಗ್ಲಿ ಹೆದ್ದಾರಿಯ ಅಂಕಲಿ ಸೇತುವೆ ಬಳಿ ಈ ಒಂದು ಘಟನೆ ನಡೆದಿದೆ. ಈ ಒಂದು ಅಪಘಾತದಲ್ಲಿ ಮೃತಪಟ್ಟವರನ್ನು ಪ್ರಸಾದ್ ಭಾಲಚಂದ್ರ ಖೇಡೇಕರ್ (35) ಅವರ ಪತ್ನಿ ಪ್ರೇರಣಾ ಪ್ರಸಾದ್ ಖೇಡೇಕರ್ ಹಾಗೂ ವೈಷ್ಣವಿ, ಸಂತೋಷ್ ನಾರ್ವೇಕರ್ ಎಂದು ಗುರುತಿಸಲಾಗಿದೆ. ಇನ್ನು ಕಾರಿನಲ್ಲಿದ್ದ ಉಳಿದವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಸಮರ್ಜಿತ್ ಪ್ರಸಾದ ಖೇಡೇಕರ್ (7) ವರದ ಸಂತೋಷ್ ನಾರ್ವೇಕರ್ (19) ಮತ್ತು ಸಾಕ್ಷಿ ಸಂತೋಷ್ ನಾರ್ವೇಕರ್ (42) ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಜೈಸಿಂಗ್ ಪುರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಚಿತ್ರದುರ್ಗ : ಚಿತ್ರದುರ್ಗದಲ್ಲಿ ಭೀಕರವಾದಂತಹ ಕೊಲೆಯಾಗಿದ್ದು, ಪ್ರೀತಿಸಿ ಮದುವೆಯಾಗಿದ್ದ ವ್ಯಕ್ತಿಯನ್ನು, ಯುವತಿಯ ಮನೆಯ ಸುಮಾರು 20 ಜನರು ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಕೋಣನೂರು ಗ್ರಾಮದಲ್ಲಿ ನಡೆದಿದೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಚಿತ್ರದುರ್ಗದ ಎಸ್ ಪಿ ರಂಜಿತ್ ಕುಮಾರ್ ಬಂಡಾರು ಮಾಹಿತಿ ನೀಡಿದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ 6 ಆರೋಪಿಗಳ ಬಂಧನವಾಗಿದೆ. ಕಾವ್ಯ, ದಿವ್ಯ, ಶಂಕರಮ್ಮ, ಬಸವರಾಜ,ಪ್ರಸನ್ನ ಮತ್ತು ಹರ್ಷ ಎನ್ನುವ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಭರಮಸಾಗರ ಠಾಣೆಯ ಪೊಲೀಸರಿಂದ ಇದೀಗ 6 ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಯಾದ ಮಂಜುನಾಥ ತಂದೆ ಚಂದ್ರಪ್ಪ ಅವರು ದೂರು ನೀಡಿದ್ದರು. ಜಗದೀಶ್ ಸೇರಿದಂತೆ 20 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 7 ರಂದು ಯುವತಿಯನ್ನು ಕರೆದುಕೊಂಡು ಹೋಗಿ ಮಂಜುನಾಥ್ ವಿವಾಹವಾಗಿದ್ದಾನೆ. ಅಕ್ಟೋಬರ್ 7ರಂದು ಯುವತಿ ನಾಪತ್ತೆ ಆಗಿರುವ ಕುರಿತಂತೆ ಪೋಷಕರು ದೂರು ದಾಖಲಿಸಿದ್ದಾರೆ. ಚಿತ್ರದುರ್ಗದ…
ಮಂಡ್ಯ : ವಕ್ಫ್ ವಿರುದ್ಧ ಬಿಜೆಪಿಯ ಇನ್ನೊಂದು ತಂಡವು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದೆ. ಈ ಒಂದು ಪ್ರತಿಭಟನೆ ನೇತೃತ್ವವನ್ನು ಶಾಸಕ ಬಸನಗೌಡ ಪಾಟೀಲ ವಹಿಸಿದ್ದು, ಈ ತಂಡದಲ್ಲಿ ಶಾಸಕರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಸಿರಿದಂತೆ ಬಿಜೆಪಿಯ ಅಸಮಾಧಾನದ ಹಲವು ಭಾಗಿಯಾಗಿದ್ದಾರೆ. ಪ್ರತಿಭಟನೆಯ ವೇಳೆ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿವೈ ವಿಜಯೇಂದ್ರ ವಿರುದ್ಧ ಕೂಡ ವಾಗ್ದಾಳಿ ನಟಿಸಿದ್ದಾರೆ. ಇದೆ ವೇಳೆ ಮಂಡ್ಯದಲ್ಲಿ ಬಿಜೆಪಿಯ ಮುಖಂಡರೊಬ್ಬರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರದಲ್ಲಿ ರಕ್ತದಲ್ಲಿ ಸಹಿ ಮಾಡುವ ಮೂಲಕ ಶಾಸಕ ಯತ್ನಾಳ ಹೇಳಿಕೆಗೆ ಕಡಿವಾಣ ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮಂಡ್ಯದ ಅಂಚೆ ಕಚೇರಿ ಮೂಲಕ ಹೈಕಮಾಂಡ್ಗೆ ಪತ್ರ ಬರೆದಿದ್ದಾರೆ. ಶಾಸಕ ಯತ್ನಾಳ್ ಮಾತಿನಿಂದ ಪಕ್ಷಕ್ಕೆ ಬಹಳ ಡ್ಯಾಮೇಜ್ ಆಗುತ್ತಿದೆ ಎಂದು ಪತ್ರದ ಮೂಲಕ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಪತ್ರ ಬರೆದಿದ್ದಾರೆ. ಬಸನಗೌಡ ಯತ್ನಾಳ್ ಅವರು ಕಾಂಗ್ರೆಸ್ ಪಕ್ಷ…
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಈ ಹಿಂದೆ ಕಂಬಾಳು ಗೊಲ್ಲರಹಟ್ಟಿ ಬಳಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದವು. ಮೂರು ಚಿರತೆಗಳನ್ನು ಸೆರೆ ಹಿಡಿದು ಅರಣ್ಯ ಅಧಿಕಾರಿಗಳು ಬನ್ನೆರುಘಟ್ಟ ಉದ್ಯಾನವನಕ್ಕೆ ಬಿಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕಂಬಾಳು ಗೊಲ್ಲರಹಟ್ಟಿ ಗ್ರಾಮದಲ್ಲಿ ಕರೆಮ್ಮ ಎನ್ನುವ ಮಹಿಳೆಯನ್ನು ಚಿರತೆ ಬಳಿ ಪಡೆದಿತ್ತು. ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಅರಣ್ಯ ಇಲಾಖೆ 2 ಚಿರತೆಗಳನ್ನು ಸೆರೆ ಹಿಡಿದಿತ್ತು. ಈ ಬೆನ್ನಲ್ಲೇ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದ್ದು, ಚಿರತೆಯನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಲಬುರ್ಗಿ : ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಪೆಟ್ರೋಲ್ ಸುರಿದು ಒಂದು ಇಡಿ ಕುಟುಂಬವನ್ನು ಸಾಮೂಹಿಕ ಹತ್ಯೆಗೆ ಯತ್ನಿಸಿರುವ ಘಟನೆ ಕಲ್ಬುರ್ಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಕುಟುಂಬದ ಸುಮಾರು 6 ಜನರು ಕಲಬುರ್ಗಿ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೌದು 4 ಜಮೀನು ವ್ಯಾಜ್ಯವಾಗಿ ಸಾಮೂಹಿಕ ಹತ್ಯೆಗೆ ಯತ್ನಿಸಲಾಗಿದೆ. ಶಿವಲಿಂಗಪ್ಪ ಕರಿಕಲ್ ಎಂಬಾತನಿಂದ ಗುಂಡೆರಾವ್ ಎನ್ನುವವರ ಕುಟುಂಬದ ಹತ್ಯೆಗೆ ಯತ್ನಿಸಲಾಗಿದೆ. ಬಟ್ಟೆಯ ಉಂಡೆಗಳನ್ನು ಪೆಟ್ರೋಲ್ ನಲ್ಲಿ ತೊಯಿಸಿ ಮನೆಗೆ ನುಗ್ಗಿ ಕೀಟನಾಶಕದ ಸ್ಪ್ರೇಯಿಂದ ಪೆಟ್ರೋಲ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿದ್ದಾನೆ. ಸಾಮೂಹಿಕ ಸಾಯಿಸಬೇಕು ಎಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಈ ಒಂದು ಘಟನೆ ನಡೆದಿದೆ. ಶಿವಲಿಂಗಪ್ಪ ಎಂಬಾತ ಗುಂಡೆರಾವ್ ಎನ್ನುವವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಯತ್ನ ಮಾಡಿದ್ದಾರೆ. ಗ್ರಾಮಸ್ಥರ ಒಂದು ಜಾಗೃತೆಯಿಂದ ಇಡಿ ಕುಟುಂಬ ಇದೀಗ ಪ್ರಾಣಾಪಾಯದಿಂದ ಪಾರಾಗಿದೆ. ಶಿವಲಿಂಗಪ್ಪ 4 ಎಕರೆ…












