Subscribe to Updates
Get the latest creative news from FooBar about art, design and business.
Author: kannadanewsnow05
ಮೈಸೂರು : ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ತಡರಾತ್ರಿ ಭೀಕರವಾದಂತಹ ಅಪಘಾತ ಸಂಭವಿಸಿದ್ದು ಲಾರಿ ಹಾಗೂ ಟಿಟಿ ವಾಹನದ ನಡುವೆ ಅಪಘಾತ ಸಂಭವಿಸಿದೆ ಈ ವೇಳೆ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು ಆರು ಜನರಿಗೆ ಗಂಭೀರವಾದಂತಹ ಗಾಯಗಳಾದ ಘಟನೆ ಚನ್ನಪಟ್ಟಣದ ಮೆಡಿಕಲ್ ಕಾಲೇಜು ಸಮೀಪ ನಡೆದಿದೆ. ಲಾರಿ ಹಾಗೂ ಟಿಟಿ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಟಿಟಿ ವಾಹನದಲ್ಲಿದ್ದ ಮೂರು ಸ್ಥಳದಲ್ಲಿ ಸಾವನಪ್ಪಿದ್ದಾರೆ. ಅತಂತ ವೇಗವಾಗಿ ರಭಸದಲ್ಲಿ ಬಂದ ಟಿಟಿವಾಹನಲಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಟಿಟಿ ವಾಹನದಲ್ಲಿದ ಮೂರು ಸಾವನ್ನಪ್ಪಿದ್ದು, ಆರ್ ಜನರಿಗೆ ಗಂಭೀರ ಗಾಯಗಳಾಗಿವೆ, ಗಾಯಕೊಂಡವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿದೆ. ಚನ್ನಪಟ್ಟಣ ಬಳಿಯ ಮೆಡಿಕಲ್ ಕಾಲೇಜುಗಳು ಈ ಘಟನೆ ಸಂಭವಿಸಿದೆ. ಧರೆನೆಯ ಕುರಿತಂತೆ ಚನ್ನಪಟ್ಟಣ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮೇ 31ರವರೆಗೆ ಅವಧಿ ವಿಸ್ತರಿಸಿ ಸಾರಿಗೆ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ. ಇದನ್ನೇ ದುರುಪಯೋಗಪಡಿಸಿಕೊಳ್ಳಲು ಹಲವು ಸೈಬರ್ ವಂಚಕರು ಮುಂದಾಗಿದ್ದು ನಕಲಿ ಕ್ಯೂ ಆರ್ ಕೋಡ್ ಗಳ ಮೂಲಕ ಗ್ರಾಹಕರ ಸಂಪೂರ್ಣ ಹಣವನ್ನು ಲಪಟಾಯಿಸಲು ಕಾದು ಕುಳಿತಿದ್ದಾರೆ. ಹೌದು ಈ ಬಗ್ಗೆ ರಕ್ಷಿತ್ ಪಾಂಡೆ ಎನ್ನುವ ವ್ಯಕ್ತಿ ಎಕ್ಸ್ ಆ್ಯಪ್ ಮೂಲಕ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಕ್ಯೂ ಆರ್ ಕೋಡ್ ಸಮೇತ ಪೊಲೀಸರಿಗೆ ದೂರು ನೀಡಿದ್ದು ಸೈಬರ್ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ನಂಬರ್ ಪ್ಲೇಟ್ ಅಳವಡಿಕೆಗಳು ಅವಧಿ ವಿಸ್ತರಣೆ ಆದೇಶ ಬಂದ ಬೆನ್ನಲ್ಲೇ ಇದೀಗ ಸೈಬರ್ ವಂಚಕರು ಫುಲ್ ಆಕ್ಟಿವ್ ಆಗಿದ್ದು, ಅಮಾಯಕ ಗ್ರಾಹಕರೇ ಇವರಿಗೆ ಟಾರ್ಗೆಟ್.ನೋಂದಣಿ ಬಳಿಕ ಸಿಗುವ ಕ್ಯೂ ಆರ್ ಕೋಡ್ಗಳನ್ನು ನಕಲಿ ಮಾಡುತ್ತಿದ್ದಾರೆ. ಕ್ಯೂ ಆರ್ ಕೋಡ್ ಟಚ್ ಮಾಡುತ್ತಿದ್ದಂತೆ ಅಪರಿಚಿತರ ಖಾತೆಗೆ ಲಿಂಕ್ ಹೋಗುತ್ತಿದ್ದು ಸ್ವಲ್ಪ ಎಮಾರಿದ್ರು…
ಬೆಂಗಳೂರು : ಲಾರಿ ಚಾಲಕನೊಬ್ಬ ನನ್ನನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾನೆ ಎಂದು ಮಾಜಿ ಬಿಗ್ ಬಾಸ್ ಸ್ಪರ್ಧಿ ಆಡಂ ಪಾಷಾ ಎಲೆಕ್ಟ್ರಾನಿಕ್ ಸಿಟಿ ಠಾಣೆಗೆ ದೂರು ಸಲ್ಲಿಸಿದರು ಆದರೆ ಪೊಲೀಸ್ ಅಧಿಕಾರಿಗಳು ಘಟನೆ ಕೋರಿದಂತೆ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಈಗ ಆಡಂಪಾಷ ಕಳ್ಳಾಟ ಬಯಲಾಗಿದ್ದು, ಆತನ ವಿರುದ್ಧ ಇದೀಗ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಎಫ್ಐಆರ್ ದಾಖಲಿಸುವ ವೇಳೆ ಆಡಂ ಪಾಷಾ ರಾಂಗ್ ನಂಬರ್ ಕೊಟ್ಟಿದ್ದಾರೆ. ತನಿಖೆ ವೇಳೆ ಆಡಂ ಪಾಷಾ ಸುಳ್ಳು ದೂರು ಕೊಟ್ಟಿರುವ ಶಂಕೆ ವ್ಯಕ್ತವಾಗಿದೆ. ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆಡಂ ಪಾಷಾ ಕಳ್ಳಾಟ ಬಯಲಾಗಿದೆ. ತನ್ನ ಬಟ್ಟೆಗಳನ್ನ ತಾನೇ ಹರಿದುಕೊಂಡು ಬಂದು ದೂರು ಕೊಟ್ಟಿರುವುದು ತಿಳಿದುಬಂದಿದೆ. ಈ ಹಿನೆಲೆಯಲ್ಲಿ ಸುಳ್ಳು ದೂರನ್ನು ಕೊಟ್ಟ ಆಡಂ ಪಾಷಾ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ ಆದ್ದರಿಂದ ಆಡಂ ಪಾಷಾ ಬಂಧನದ ಭೀತಿ…
ಬೆಂಗಳೂರು : ದೇಶ ವಿಭಜನೆಯ ಕುರಿತು ಹೇಳಿಕೆ ನೀಡಿರುವ ಸಂಸದ ಡಿಕೆ ಸುರೇಶ್ ಅವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಆದೇಶ ತರಬೇಕೆಂದು ಬಿಜೆಪಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದರು ಇದೀಗ ಸಂಸದ ಡಿಕೆ ಸುರೇಶ್ ಶೀಘ್ರದಲ್ಲಿ ಈಶ್ವರಪ್ಪರನ್ನು ಭೇಟಿ ಮಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಮಾಧ್ಯಮದ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಕರ್ನಾಟಕಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯದ ವಿಚಾರವಾಗಿ ನಾನು ಪ್ರತ್ಯೇಕ ದೇಶದ ಕೂಗು ಅನಿವಾರ್ಯತೆ ಎಂಬ ಹೇಳಿಕೆಗೆ ಈಗಲೂ ಬದಲಾಗಿದ್ದೇನೆ. ಈ ಹೇಳಿಕೆಗೆ ಕೆಎಸ್ ಈಶ್ವರಪ್ಪ ಅವರು ನನ್ನನ್ನು ಗುಂಡಿಕ್ಕಿ ಕೊಲ್ಲುವ ವಿಚಾರ ತಿಳಿಸಿದ್ದಾರೆ. ಈಗಾಗಲೇ ಈಶ್ವರಪ್ಪ ಅಧಿಕಾರ ಕಳೆದುಕೊಂಡಿದ್ದಾರೆ.ಆದ್ದರಿಂದ ನಾನು ಶೀಘ್ರದಲ್ಲಿ ಅವರನ್ನು ಭೇಟಿ ಮಾಡುತ್ತೇನೆ. ಅವರು ನನಗೆ ಒಂದೆರಡು ಹೊಡೆಯುತ್ತಾರೋ ಅಥವಾ ಕೊಲ್ಲುತ್ತಾರೋ ಏನು ಬೇಕಾದರೂ ಮಾಡಲಿ ಅವರಿಗೆ ನನ್ನನ್ನು ಕೊಲ್ಲುವುದರಿಂದ ಅಧಿಕಾರ ಸಿಗುವುದಾದರೆ ಕೊಲ್ಲಲಿ ಎಂದು ತಿರುಗೇಟು ನೀಡಿದರು.
ಮಂಗಳೂರು : ಎಐಸಿಸಿ ಸೂಚನೆಯ ಮೇರೆಗೆ ಎಂದು ಮಂಗಳೂರಿನಲ್ಲಿ ರಾಜ್ಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ.ಸಮಾವೇಶದ ಹಿನ್ನೆಲೆಯಲ್ಲಿ ಸಿಎಂ ಭಾಗವಹಿಸುವ ಕಂಬಳ ಕಾರ್ಯಕ್ರಮದಲ್ಲೂ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ವಾಮಂಜೂರಿನ ತಿರುಮೈಲ್ ನಲ್ಲಿ ಕಂಬಳದಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.ಸಿಎಂ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಬೆಳಿಗ್ಗೆ 8 ರಿಂದ ರಾತ್ರಿ 8:30ಗೆ ಅಡ್ಯಾರ್ ನ ಸಹ್ಯಾದ್ರಿ ಕಾಲೇಜು ಆವರಣದ ಸುತ್ತಮುತ್ತ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಲಾಗಿದೆ.ತಾತ್ಕಾಲಿಕವಾಗಿ ರೆಡ್ ಜೋನ್ ಎಂದು ಡೋನ್ ಹಾರಾಟಕ್ಕೆ ನಿರ್ಬಂಧಿಸಲಾಗಿದೆ. ಮಂಗಳೂರಿನಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರ ರಾಜಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಹಿನ್ನೆಲೆಯಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ. ಎಐಸಿಸಿ ಸೂಚನೆ ಮೇರೆಗೆ ರಾಜಮಟ್ಟದ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮಾವೇಶದಲ್ಲಿ ಎಐಸಿಐ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ…
ಬೆಂಗಳೂರು : ಸಂಸದ ಡಿಕೆ ಸುರೇಶ್ ನನ್ನು ಗುಂಡಿಕ್ಕಿಕೊಳ್ಳಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೆ ಎಸ್ ಈಶ್ವರಪ್ಪ ವಿರುದ್ಧ ದಾವಣಗೆರೆಯಲ್ಲಿ ಎಫ್ ದಾಖಲಾಗಿತ್ತು ಅಲ್ಲದೆ ಪೊಲೀಸರು ಕೂಡ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಆದರೆ ಇದೀಗ ಹೈಕೋರ್ಟ್ ಈ ಒಂದು FIR ಗೆ ನೀಡಿದೆ. ಪ್ರಕರಣ ತನಿಖೆಗೆ ಹೈಕೋರ್ಟ್ ತಡೆ ನೀಡಿದ್ದು, ನ್ಯಾ. ಕೃಷ್ಣದೀಕ್ಷಿತ್ ಪೀಠವು ಈ ಕುರಿತಂತೆ ಆದೇಶ ಹೊರಡಿಸಿದೆ.ಇದೆ ಸಂದರ್ಭದಲ್ಲಿ ಈಶ್ವರಪ್ಪ ಹೇಳಿಕೆಯನ್ನ ಖಂಡಿಸಿದ ಕೋರ್ಟ್ ಯಾವುದೇ ರಾಜಕಾರಣಿಗಳಿರಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದೆ. ನಮ್ಮ ರಾಜಕೀಯ ನಾಯಕರು ಭಾಷೆಯ ಮೇಲೆ ದೌರ್ಜನ್ಯ ಮಾಡ್ತಾ ಇದ್ದಾರೆ. ನಾಯಕರ ಮಾತುಗಳನ್ನು ಮಕ್ಕಳು ನೋಡುತ್ತಾ ಇರ್ತಾರೆ. ಇದರಿಂದ ಮಕ್ಕಳು ಏನನ್ನು ಕಲಿಯುತ್ತಾರೆ? ಸಂಸ್ಕೃತಿ ಬಿಂಬಿಸುವಂತೆ ಮಾತನಾಡಲು ಹೇಳಿ. ನಿಮ್ಮ ಕಕ್ಷಿದಾರರಿಗೆ ನೀವೆ ಸಲಹೆ ನೀಡಿ ಎಂದು ಕೋರ್ಟ್ ಕಿವಿಮಾತು ಹೇಳಿದೆ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಹೈಕೋರ್ಟ್ ಅಸಮಾಧಾನ ಹೊರಹಾಕಿದೆ. ನಮ್ಮದು ಬಹು ಭಾಷಾ, ಧರ್ಮ…
ಬೆಂಗಳೂರು : 2022ರಲ್ಲಿ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಗಲಭೆ ನಡೆಸಿದ್ದ ಆರೋಪದ ಮೇಲೆ ಜೈಲು ಸೇರಿದ್ದ 105 ಮಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಮಸೀದಿಯ ಮೇಲೆ ಭಗವಾಧ್ವಜ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದನ್ನು ಖಂಡಿಸಿ ಗಲಭೆ ನಡೆಸಿದ್ದ ಆರೋಪದಲ್ಲಿ 105 ಮಂದಿಗೆ ಇದೀಗ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇದೇ ಪ್ರಕರಣದಲ್ಲಿ ಆರೋಪಗಳಾಗಿದ್ದ ಇತರೆ 39 ಮಂದಿಗೆ ಸುಪ್ರೀಂಕೋರ್ಟ್ ಈಗಾಗಲೇ ಜಾಮೀನು ನೀಡಿತ್ತು ಎಂದು ಅರ್ಜಿದಾರರ ಪರ ವಕೀಲ ರಹಮತ್ವುಲ್ಲಾ ಕೊತ್ವಾಲ್ ಮಂಡಿಸಿದ್ದ ವಾದ ಪರಿಗಣಿಸಿದ ನ್ಯಾಯಪೀಠ, ಎಲ್ಲ ಅರ್ಜಿದಾರರಿಗೆ ಜಾಮೀನು ನೀಡಿದೆ. ಜತೆಗೆ, ಎಲ್ಲ ಅರ್ಜಿದಾರರು 2 ಲಕ್ಷ ರು. ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಷರತ್ತು ವಿಧಿಸಿದೆ ಎನ್ನಲಾಗಿದೆ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಸಾಮುದ್ರಿಕಾ ಶಾಸ್ತ್ರದ ಪ್ರಕಾರ ಅದೃಷ್ಟವಂತ ಹೆಣ್ಣಿನ 21 ಲಕ್ಷಣಗಳು ಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖವಾದಂತೆ ಮಹಿಳೆಯರ ದೇಹರ ಭಾಗಗಳ ಗುಣ-ಲಕ್ಷಣಗಳನ್ನು ನೋಡಿ ಅವರ ಅದೃಷ್ಟದ ಬಗ್ಗೆ ತಿಳಿಯಬಹುದಾಗಿದೆ. ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ. ಪುರಾತನ ಕಾಲದಿಂದಲೂ ದೇವಿಯ ಸ್ವರೂಪ ಎಂದು ಪೂಜಿಸುತ್ತಾರೆ. ಅದೃಷ್ಟವಂತ ಹೆಣ್ಣಿನ ಗುಣಲಕ್ಷಣ ಯಾವುದೆಂದರೆ- ಮನೆಯ ಹೆಣ್ಣು ಮಗಳು ಸದಾ ನಗು ನಗುತ ಇದ್ದರೆ ಮನೆ ಸದಾ ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರುತ್ತದೆ. ಹೆಣ್ಣಿನ ಹಣೆಯ ಭಾಗವು ಅಗಲವಾಗಿದ್ದರೆ ಆ ಹೆಣ್ಣು ಮಗಳು ತನ್ನ ಗಂಡನ ಮನೆಗೆ ಹೋದಾಗ ಆ ಮನೆಯಲ್ಲಿ ಸುಖವಾಗಿರುತ್ತಾಳೆ. ಉದ್ದನೆಯ ಬೆರಳುಗಳನ್ನು ಹೊಂದಿರುವ ಹೆಣ್ಣು ಮಕ್ಕಳು ತನ್ನ ಗಂಡಂದಿರ ಪಾಲಿಗೆ ಅದೃಷ್ಟದ ದೇವತೆ ಇದ್ದಂತೆ. ಹೆಣ್ಣು ಮಕ್ಕಳು ಉದ್ದನೆಯ ಕತ್ತನ್ನು ಹೊಂದಿದ್ದರೆ ಅವರು ಹುಟ್ಟಿದ ಮನೆ ಹೋದ ಮನೆ ಎರಡು ಕಡೆಯೂ ಸಂಪತ್ತು ತರುತ್ತಾಳೆ. ದಪ್ಪವಾಗಿರುವ ಹೆಣ್ಣು…
ಬೆಂಗಳೂರು : ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಧೆ ಸಾಲ ವಸೂತಿ ಕೇಸ್ ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇದೀಗ ಮೂವರನ್ನು ಬಂಧಿಸಿದ್ದಾರೆ. ಸೈಕಲ್ ರವಿ ಹಾಗೂ ಆತನ ಸಹಚರರ ಬಂಧನವಾಗಿದೆ ಎಂದು ತಿಳಿದುಬಂದಿದೆ. ಸೈಕಲ್ ರವಿ ಸಹಜರ ಉಮೇಶ್ ಸುರೇಶ್ ಮಂಜುನಾಥ್ ಅವರನ್ನು ಇದೀಗ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಟ್ರಾವೆಲ್ಸ್ ವ್ಯವಹಾರಕ್ಕಾಗಿ ಮಂಜುನಾಥ್ ಬಳಿ ರಂಗನಾಥ್ ಎನ್ನುವವರು ಸಾಲ ಪಡೆದಿದ್ದರು.ನಂತರ 23 ಲಕ್ಷ ಹಣವನ್ನು ರಂಗನಾಥ್ ಬಡ್ಡಿ ಸಮೇತವಾಗಿ ಹಿಂದಿರುಗಿಸಿದ್ದಾರೆ. ಆದರೆ ಮಂಜುನಾಥ್ ನಾನು ಮೀಟರ್ ಬಡ್ಡಿಗೆ ಹಣವನ್ನು ಕೊಟ್ಟಿರುವುದು ನೀನು ಇನ್ನೂ ಐದು ಲಕ್ಷ ಹಣ ಕೊಡಬೇಕು ಎಂದು ಮಂಜುನಾಥ್ ಪಟ್ಟು ಹಿಡಿದಿದ್ದಾನೆ. ಹಣ ಕೊಡಲು ರಂಗನಾಥರ ಕರಿಸಿದಾಗ ರೌಡಿಶೀಟರ್ ಗೆ ಹೇಳಿದ್ದ ಹಣ ವಸೂಲಿ ಮಾಡಿಕೊಡಲು ಮಂಜುನಾಥ್ ರೌಡಿಶೀಟರ್ ಉಮೇಶ್ ಗೆ ಹೇಳಿದ್ದ ಎನ್ನಲಾಗಿದೆ. ಹೊಸಕೆರೆ ಹಳ್ಳಿ ರೌಡಿಶೀಟರ್ ಉಮೇಶ್ ಎಂದು ಹೇಳಲಾಗುತ್ತಿದ್ದು.ರಂಗನಾಥ್ ಬಳಿ ಹಣವಸೂರಿಗೆ ಉಮೇಶ್ ಹಾಗೂ ಸುರೇಶನ್ನು ಅವರು ಮುಂದಾಗಿದ್ದಾರೆ.ಇವೇ ಹಣ ನೀಡುವಂತೆ ರಂಗನಾಥ್ ಗೆ…