Subscribe to Updates
Get the latest creative news from FooBar about art, design and business.
Author: kannadanewsnow05
ಬಾಗಲಕೋಟೆ : ಪ್ರಕೃತಿ ವಿಕೋಪಗಳು, ಸುನಾಮಿ, ಭೂಕಂಪ, ರಾಜ್ಯ ರಾಜಕಾರಣ ಹಾಗೂ ದೇಶದ ಕುರಿತಂತೆ ಭವಿಷ್ಯ ಹೇಳಿ, ಕೋಡಿ ಮಠದ ಶ್ರೀಗಳು ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಮತ್ತೊಂದು ಸ್ಫೋಟವಾದ ಭವಿಷ್ಯ ನುಡಿದಿದ್ದು, ಜಗತ್ತಿನ ಎರಡು ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ ಎಂದು ಸ್ಫೋಟಕವಾದ ಭವಿಷ್ಯ ನುಡಿದಿದ್ದಾರೆ. ಬಾಗಲಕೊಟೆಯಲ್ಲಿಂದು ಮಾತನಾಡಿರುವ ಕೋಡಿಮಠದ ಸ್ವಾಮೀಜಿ, ದೊಡ್ಡ ದೊಡ್ಡ ನಾಯಕರಿಗೆ ಅಪಾಯವಿದೆ. ಸಾಮೂಹಿಕ ಹತ್ಯೆಯಾಗುವ ಲಕ್ಷಣವಿದೆ. ಜಗತ್ತಿನ ಎರಡು ಮೂರು ಜನ ಮಹಾನ್ ನಾಯಕರಿಗೆ ಅಪಮೃತ್ಯುವಿದೆ. ಕೊಲ್ಲಬಹುದು ಅಥವಾ ಅಪಘಾತದಲ್ಲಿ ಅವರು ಸಾಯಬಹುದು ಎಂದು ಆಘಾತಕಾರಿ ಭವಿಷ್ಯ ಹೇಳಿದ್ದಾರೆ. ಗೌರಿಶಂಕರ ಶಿಖರ ಶಿವಾ ಶಿವಾ ಎಂದೀತು. ಹಿಮಾಲಯದಲ್ಲಿ ಸುನಾಮಿ ಆದೀತು, ಅಲ್ಲಿಂದ ಬಂದು ಡೆಲ್ಲಿಗೆ ತಲುಪುತ್ತದೆ. ಹಿಮಾಲಯ ಸುನಾಮಿಯಿಂದ ಡೆಲ್ಲಿಗೂ ಅಪಾಯವಿದೆ. ಉತ್ತರ ರಾಷ್ಟ್ರಗಳಿಗೆ ಅಪಾಯವಿದೆ. ಜಲಬಾಧೆ ಇದೆ ಎಂದು ಕೋಡಿಮಠದ ಸ್ವಾಮೀಜಿ ಭಯಾನಕ ಭವಿಷ್ಯ ನುಡಿದಿದ್ದಾರೆ. 🔥 ಉಚಿತ ಸುದ್ದಿ…
ಹಾಸನ : ಚಲಿಸುತ್ತಿದ ಬೈಕ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಕೆಂಚನಹಳ್ಳಿ ಬಳಿ ನಡೆದಿದೆ. ಮೃತ ಪೊಲೀಸ್ ಕಾನ್ಸ್‌ಟೇಬಲ್ ನನ್ನು ಪ್ರಕಾಶ್ (38) ಎಂದು ತಿಳಿದುಬಂದಿದೆ. 11ನೇ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಪೊಲೀಸ್ ಕಾನ್ಸ್‌ಟೇಬಲ್ ಪ್ರಕಾಶ್ ಅವರು ಹಾಸನ ನಗರದಿಂದ ಸರ್ಕಾರಿ ದ್ವಿಚಕ್ರ ವಾಹನದಲ್ಲಿ ಗಾಡೇನಹಳ್ಳಿಗೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ : ಜಮೀನು ವಿವಾದ ಹಿನ್ನೆಲೆಯಲ್ಲಿ ಮನೆಗೆ ನುಗ್ಗಿ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ರನ್ನು ಮಚ್ಚಿನಿಂದ ಹಲ್ಲೆ ಮಾಡಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ಮಚ್ಚಿನಿಂದ ಕೊಚ್ಚಿ ವೃದ್ಧನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಲಕ್ಷ್ಮಿನರಸಪ್ಪ (65) ಎನ್ನುವವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಮನೆಗೆ ನುಗ್ಗಿ ಸಂಬಂಧಿಕ ನಂದೀಶ ಎಂಬುವವನಿಂದ ಲಕ್ಷ್ಮಿನರಸಪ್ಪನ ಕೊಲೆಯಾಗಿದೆ. ಘಟನೆಗೆ ಸಂಬಂಧಸಿದಂತೆ ಹಂತಕರು ನಂದೀಶನನ್ನು ಚಿಕ್ಕಬಳ್ಳಾಪುರ ಗ್ರಾಮದ ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಹತ್ಯೆಯ ಕುರಿತಂತೆ ಚಿಕ್ಕಬಳ್ಳಾಪುರ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ : ಕಾರಿನಿಂದ ಹಿಂಬಾಲಿಸಿಕೊಂಡು ಬಂದು ರಸ್ತೆಯಲ್ಲಿ ಬರುತ್ತಿದ್ದ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಹಿಲ್ ಗಾರ್ಡನ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹೌದು ಗೋಕಾಕ್ ನಗರದ ಹಿಲ್ ಗಾರ್ಡನ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮಾರಕಸ್ತ್ರಗಳಿಂದ ಕೊಚ್ಚಿ ಪರಶುರಾಮ್ (26) ಎನ್ನುವ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗೊಂದಳಿ ನಿವಾಸಿ ಎಂದು ತಿಳಿದುಬಂದಿದೆ. ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಪರಶುರಾಮ್ ನನ್ನು ದುಷ್ಕರ್ಮಿಗಳು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಗದಗ : ಮಸೀದಿಗೆ ಅನುದಾನ ನೀಡಲು ಪತ್ರ ಬರೆಯೋದಕ್ಕೆ ಗದಗ ಜಿಲ್ಲಾ ವಕ್ಫ್ ಅಧಿಕಾರಿ ರಹೆತ್ ಉಲ್ಲಾ ಪಂಡಾರಿ 1 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಗದಗದಲ್ಲಿ ನಡೆದಿದೆ. ಗದಗ ತಾಲೂಕಿನ ಮುಳಗುಂದದ ಮಸೀದಿಗೆ ಅನುದಾನ ನೀಡುವಣೆ ಪತ್ರ ಬರೆಯಲು 1000 ರೂಪಾಯಿ ಲಂಚ ಸ್ವೀಕರಿಸಿದ್ದಾರೆ. ಎಸ್.ಎ ಮಕಂದಾರ್ ಅವರಿಂದ ಲಂಚ ಸ್ಪೀಕರಿಸುವಾಗ ರೆಹತ್ ಉಲ್ಲಾ ಲೋಕಾಯುಕ್ತ ಬೆಳಗಿ ಬಿದ್ದಿದ್ದಾರೆ ಗದಗ ಜಿಲ್ಲಾ ವಕ್ಫ್ ಕಚೇರಿಯಲ್ಲೇ ರೆಹತ್ ಉಲ್ಲಾ ಪೆಂಡಾರಿ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ Dysp ವಿಜಯ್ ಬಿರಾದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಹುಬ್ಬಳ್ಳಿ : ಕಳೆದ ಏಪ್ರಿಲ್ 13 ರಂದು ಹುಬ್ಬಳ್ಳಿಯಲ್ಲಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ಎನ್ಕೌಂಟರ್ ನಲ್ಲಿ ಬಲಿಯಾಗಿದ್ದ ಬಿಹಾರ್ ಮೂಲದ ರಿತೇಶ್ ಕುಮಾರನ ಅಂತ್ಯ ಸಂಸ್ಕಾರ ಕೋರ್ಟ್‌ನ ನಿರ್ದೇಶನದಂತೆ ಇಂದು ಮಧ್ಯಾಹ್ನ ಇಲ್ಲಿನ ಬಿಡ್ನಾಳದ ರುದ್ರಭೂಮಿಯಲ್ಲಿ ನೇರವೇರಿತು. ರಿತೇಶ ಕುಮಾರ ಏ. 13ರಂದು ಬಾಲಕಿಯ ಮೇಲೆ ಪೈಶಾಚಿಕ ಕೃತ್ಯವೆಸಗಿ ಹತ್ಯೆ ಮಾಡಿದ್ದ. ಇದೇ ವಿಚಾರವಾಗಿ ಪೊಲೀಸರು ಆತನನ್ನು ಬಂಧಿಸಿ, ವಿಚಾರಣೆಗೆ ಕರೆದೊಯ್ದಿದ್ದಾಗ ಅವರ ಮೇಲೆ ಕಲ್ಲೆಸೆದು ಪರಾರಿಯಾಗಲು ಯತ್ನಿಸಿದ್ದ. ಆಗ ಪೊಲೀಸರು ಗುಂಡು ಹೊಡೆದಾಗ ಮೃತಪಟ್ಟಿದ್ದ. ಆತನ ಕುಟುಂಬಸ್ಥರು, ಸಂಬಂಧಿಕರ ಪತ್ತೆಗಾಗಿ ಪೊಲೀಸರು ಕಳೆದ 22 ದಿನಗಳಿಂದ ಬಿಹಾರ ಸೇರಿದಂತೆ ದೇಶದ ಇತರೆಡೆ ಹುಡುಕಾಟ ನಡೆಸಿದ್ದರು. ಆದರೆ, ಪತ್ತೆಯಾಗಿರಲಿಲ್ಲ. ಈ ಪ್ರಕರಣದ ತನಿಖೆಯನ್ನು ಸರ್ಕಾರವು ಸಿಐಡಿ ವಹಿಸಿದೆ. ಈತನ್ಮಧ್ಯೆ ಎನ್‌ಕೌಂಟರ್ ಗೆ ಸಂಬಂಧಿಸಿ ಬೆಂಗಳೂರಿನ ಹೈಕೋರ್ಟ್ ನಲ್ಲಿ ಓರ್ವರು ಪಿಐಎಲ್ ಸಲ್ಲಿಸಿದ್ದರಿಂದ, ಕೋರ್ಟ್ ಪ್ರಕರಣದ ಸಾಕ್ಷಿಗಾಗಿ ರಿತೇಶನ ಶವವನ್ನು ದಹನ ಮಾಡದೆ ಹೂಳಬೇಕೆಂದು…
ನವದೆಹಲಿ : ಪಾಕಿಸ್ತಾನಿ ಯುವತಿಯನ್ನು ಮದುವೆಯಾಗಿದ್ದನ್ನು ಗೌಪ್ಯವಾಗಿಟ್ಟಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಯೋಧನನ್ನು ಇದೀಗ ಸೇನೆ ಸೇವೆಯಿಂದ ವಜಾಗೊಳಿಸಿದೆ. ಹೌದು ಕೇಂದ್ರ ಮೀಸಲು ಪೊಲೀಸ್ ಪಡೆಯ (CRPF) ಮುನಿರ್ ಅಹಮದ್ ಸೇವೆಯಿಂದ ವಜಾಗೊಂಡ ಯೋಧ ಎಂದು ತಿಳಿದುಬಂದಿದೆ. ಮುನೀರ್ ಅಹಮದ್ ಅರಿಶಿನ ಪಡೆದ 41ನೇ ಬೆಟಾಲಿಯನ್ ಗೆ ಸೇರಿದು ಅವರನ್ನು ಇದೀಗ ಸೇವೆಯಿಂದ ವಜಾಗೊಳಿಸಲಾಗಿದೆ. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಸಿಆರ್‌ಪಿಎಫ್ ವಕ್ತಾರರೂ ಆದ ಡಿಐಜಿ ದಿನಕರನ್ ಮಾಹಿತಿ ನೀಡಿದ್ದಾರೆ. ತಾನು ವಿವಾಹವಾಗಿದ್ದು ಮತ್ತು ಯುವತಿ ಭಾರತದಲ್ಲಿ ವೀಸಾ ಅವಧಿ ಮೀರಿದ್ದರು ಇಲ್ಲಿಯೇ ನೆಲೆಸಿದ್ದನ್ನು ಯೋಧ ಅಹ್ಮದ್ ಗೋಪ್ಯವಾಗಿಟ್ಟಿದ್ದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ವಜಾಗೊಳಿಸಿ, ತನಿಖೆ ನಡೆಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಸಿಆರ್‌ಪಿಎಫ್ ವಕ್ತಾರರೂ ಆದ ಡಿಐಜಿ ದಿನಕರನ್ ಮಾಹಿತಿ ನೀಡಿದ್ದಾರೆ. ಏ. 22ರಂದು ಪಹಲ್ಲಾಮ್‌ನ ಭಯೋತ್ಪಾದಕರು ಅಮಾಯಕ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು.ಘಟನೆಯಲ್ಲಿ ಒಟ್ಟು 26 ಜನ ಮೃತಪಟ್ಟರು. ಘಟನೆ ನಂತರ ಭಾರತ ಮತ್ತು…
ಬೆಂಗಳೂರು : ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುವಾಗ ಯಾವ ರೀತಿ ಹೈ ವೋಲ್ಟೇಜ್ ಇರುತ್ತದೆಯೋ ಅದೇ ರೀತಿ ಐಪಿಎಲ್ ಅಂತ ಬಂದಾಗ ಆರ್ಸಿಬಿ ಮತ್ತು ಸಿಎಸ್‌ಕೆ ಪಂದ್ಯ ಕೂಡ ಅಷ್ಟೆ ಹೈ ವೋಲ್ಟೇಜ್ ಇಂದ ಕೂಡಿರುತ್ತೆ. ಆರ್ಸಿಬಿ ಅಭಿಮಾನಿಗಳಾಗಲಿ ಅಥವಾ ಸಿಎಸ್‌ಕೆ ಅಭಿಮಾನಿಗಳಾಗಲಿ ಟಿಕೆಟ್ ಬೆಲೆ ಕುರಿತು ಯೋಚಿಸುವುದೇ ಇಲ್ಲ. ದುಪ್ಪಟ್ಟು ಬೆಲೆಯಾದರೂ ಯೋಚಿಸದೇ ಟಿಕೆಟ್ ಖರೀದಿಸುತ್ತಾರೆ. ಇದೀಗ ಇದನ್ನೇ ಬಂಡವಾಳ ಮಾಡಿಕೊಂಡು ಬ್ಲಾಕ್‌ನಲ್ಲಿ ಟಿಕೆಟ್ ಮಾರಾಟ ಮಾಡ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯದ ಟಿಕೆಟ್‌ನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 32 ಟಿಕೆಟ್‌ಗಳು ಹಾಗೂ 1 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ನಿಂತು 1,200 ರೂ. ಬೆಲೆಯ ಟಿಕೆಟ್ ಅನ್ನು 10,000 ರೂ.ಗೆ ಮಾರಾಟ ಮಾಡುತ್ತಿದ್ದರು. ಮಾಹಿತಿ ತಿಳಿದ…
ಬೆಂಗಳೂರು : ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತೆರಿಗೆ ವಂಚನೆ ಮಾಡುತ್ತಿದೆ. 4.50 ಲಕ್ಷ ಕೋಟಿ ತೆರಿಗೆ ಸಂಗ್ರಹ ಆಗುತ್ತಿದೆ. 60 ಸಾವಿರ ಕೋಟಿ ರೂಪಾಯಿ ಕೊಡುತ್ತೇವೆ ಅಂತಾರೆ. ಮೋದಿ ಸಿಎಂ ಆಗಿದ್ದಾಗ ಆಡಿದ ಮಾತಿಗೆ ಬದ್ಧವಾಗಿರಬೇಕು ಅಲ್ವೇ? ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ತೆರಿಗೆ ವಂಚನೆ ಕುರಿತು ಮಾತನಾಡಿದ ಅವರು, ಸೆಸ್ ಹಾಗೂ ಸರ್ಚಾರ್ಜ್ ಕೂಡ ಸಂಗ್ರಹ ಮಾಡುತ್ತಾರೆ. ಅದರಲ್ಲಿ ಪಾಲು ಕೊಡುವುದಿಲ್ಲ. ನಾವು ಕೂಡ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ವಿ. ದಕ್ಷಿಣ ಭಾರತದ ರಾಜ್ಯಗಳು ಧರಣಿ ಮಾಡಬೇಕಾಗಿದೆ. 15ನೇ ಹಣಕಾಸು ಆಯೋಗದ ಪ್ರಕಾರ ಹಣ ಬೇಕು. 11 ಸಾವಿರ ಕೋಟಿ ನ್ಯಾಯಯುತವಾಗಿ ಕೊಡಬೇಕು. ಭದ್ರಾ ಮೇಲ್ದಂಡೆ ಯೋಜನೆಗೂ ಸಹ ಹಣ ಬಂದಿಲ್ಲ ಬಸವರಾಜ್ ಬೊಮ್ಮಾಯಿ ಸಿಎಂ ಆಗಿದ್ದಾಗಲೂ ರಾಜ್ಯಕ್ಕೆ ಅನ್ಯಾಯ ಆಗಿದೆ. ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಮಂಗಳೂರು : ಮಂಗಳೂರಿನಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೇ 6ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಹತೋಟಿಗೆ ಬಂದ ಹಿನ್ನೆಲೆಯಲ್ಲಿ ಮೇ 6ರ ಬದಲು ನಾಳೆ 6 ಗಂಟೆಯ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರುತ್ತದೆ ಎಂದು ಮಂಗಳೂರು ಕಮಿಷನರ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ. ಹೌದು ಮಂಗಳೂರಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯ ಅವಧಿಯಲ್ಲಿ ಮಾರ್ಪಾಡು ಮಾಡಿ ಇದೀಗ ಆದೇಶ ಹೊರಡಿಸಲಾಗಿದೆ. ಮೇ 6ರ ಬದಲು ನಾಳೆ 6 ಗಂಟೆಯ ವರೆಗೆ ಮಾತ್ರ ನಿಷೇಧಜ್ಞೆ ಜಾರಿಯಲ್ಲಿರುತ್ತದೆ ಎಂದು ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.













