Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆ ಒಂದರಲ್ಲಿ 13 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ ಇದು ಅತ್ಯಂತ ಆತಂಕಕಾರಿ ವಿಷಯವಾಗಿದ್ದು ಈ ವಿಚಾರವಾಗಿ, ರಾಜಾರಾಂ ಎನ್ನುವವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಇದೀಗ ತನಿಖೆಯಲ್ಲಿ ಸ್ಫೋಟಕವಾದ ಅಂಶ ಬಯಲಾಗಿದ್ದು 10 ನುರಿತ ವೈದ್ಯರ ತಂಡ ಯುವಕರ ಹಠಾತ್ ಸಾವಿನ ಬಗ್ಗೆ ತನಿಖೆ ನಡೆಸಿದೆ. 18 ರಿಂದ 45 ವರ್ಷದೊಳಗಡೆ ಹೃದಯಾಘಾತದಿಂದ ಸಾವನ್ನಪ್ಪಿದ 250 ಮಂದಿಯ ಸಾವಿನ ವರದಿಯನ್ನು ತನಿಖೆಗೊಳಪಡಿಸಿ, ನಾಲ್ಕು ತಿಂಗಳುಗಳ ಕಾಲ ಅಧ್ಯಯನ ನಡೆಸಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎನ್ನುವ ವರದಿ ಸಿದ್ಧಪಡಿಸಿದೆ. ಹೃದಯಾಘಾತಕ್ಕೆ ಯುವಕರು ಬಲಿಯಾಗಲು ಕೋವಿಡ್ ಲಸಿಕೆ ಕಾರಣ ಅಲ್ಲ ಎನ್ನುವುದು ಸಂಶೋಧಕರ ವರದಿಯಲ್ಲಿ ಬಯಲಾಗಿದೆ. ಸದ್ಯ ವೈದ್ಯರು ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಕೋವಿಡ್ ಲಸಿಕೆ ಕಾರಣ ಅಲ್ಲ, ಬದಲಾಗಿ ವಿವಿಧ ರೀತಿಯ ಕಾರಣಗಳಿವೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಮೃತಪಟ್ಟವರ ಪ್ರತಿಯೊಂದು ಮೆಡಿಕಲ್ ರಿಪೋರ್ಟ್ ಅನ್ನು…
ಗದಗ : ಶಾಲೆಯಲ್ಲಿ ಸೀಲಿಂಗ್ ಗಾರೆ ಬಿದ್ದು ಇಬ್ಬರು ಮಕ್ಕಳು ಓರ್ವ ಶಿಕ್ಷಕನಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಚಿಲಝರಿ ಎಂಬ ಗ್ರಾಮದಲ್ಲಿ ನಡೆದಿದೆ. ಚಿಲಝರಿ ಗ್ರಾಮದ ಹಿರಿಯ ಸರಕಾರಿ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಈ ಒಂದು ಅವಘಡ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಎಂ.ಡಿ ಒಂಟಿ ಅವರಿಗೆ ಗಂಭೀರವಾದ ಗಾಯಗಳಾಗಿವೆ. ಪ್ರಾರ್ಥನೆಯ ಬಳಿಕೆ ಕೊಠಡಿಗೆ ಬಂದಾಗ ಸೀಲಿಂಗ್ ಗಾರೆ ಏಕಾಏಕಿ ಕಳಚಿ ಬಿದ್ದಿದೆ. ಇಬ್ಬರು ವಿದ್ಯಾರ್ಥಿಗಳ ತಲೆ ಮತ್ತು ಶಿಕ್ಷಕನ ಭುಜಕ್ಕೆ ಗಾಂಭೀರವಾದ ಗಾಯಗಳಾಗಿವೆ. ಸರ್ಕಾರಿ ಶಾಲಾ ಕೊಠಡಿಯಲ್ಲಿ ಇದ್ದ ಹಲವು ಪೀಠೋಪಕರಣಗಳಿಗೂ ಹಾನಿಯಾಗಿದೆ. ತಕ್ಷಣ ಗಾಯಗೊಂಡ ಮಕ್ಕಳು ಹಾಗೂ ಶಿಕ್ಷಕನನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 25 ವರ್ಷಗಳ ಹಿಂದೆ ಈ ಒಂದು ಸರ್ಕಾರಿ ಶಾಲೆ ನಿರ್ಮಾಣವಾಗಿತ್ತು ಚಾಲಕಟ್ಟಡ ಶಿಥಿಲಾವಸ್ತೆ ತಲುಪಿದ ಬಗ್ಗೆ ಆರು ತಿಂಗಳ ಹಿಂದೆಯೇ ಮಾಹಿತಿ ಇದ್ದರೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿ…
ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ಭೀಕರ ಕೊಲೆಯಾಗಿದ್ದು, ಸಾಂಬಾರ್ ವಿಚಾರಕ್ಕೆ ಸ್ನೇಹಿತರ ನಡುವೆ ಗಲಾಟೆ ಆಗಿ, ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ತಲಘಟ್ಟಪುರದಲ್ಲಿ ತಡರಾತ್ರಿ ಈ ಒಂದು ಭೀಕರ ಕೊಲೆ ನಡೆದಿದೆ. ಕೊಲೆಯಾದ ವ್ಯಕ್ತಿ ನೇಪಾಳ ಮೂಲದ ಬಹದ್ದೂರ್ ಎಂದು ತಿಳಿದುಬಂದಿದೆ. ಬಹದ್ದೂರ್ ಸ್ನೇಹಿತ ಮಹೇಂದ್ರ ಸಾಂಬಾರ್ ಮಾಡುವ ವಿಚಾರವಾಗಿ ಕೊಲೆಗೈದಿದ್ದಾನೆ. ನಿನ್ನೆ ರಾತ್ರಿ ಸಾಂಬಾರ್ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಬಹದ್ದೂರ್ ಮೇಲೆ ಹಲ್ಲೆಗದು ಮಹೇಂದ್ರ ಕೊಂದಿದ್ದಾನೆ. ಸೆಕ್ಯೂರಿಟಿ ಕಾರ್ಡ್ ಆಗಿ ಬಹದ್ದೂರ್ ಕೆಲಸ ಮಾಡುತ್ತಿದ್ದ. ಕೆಲವು ವರ್ಷಗಳಿಂದ ಬಹದ್ದೂರ್ ಬೆಂಗಳೂರಿನಲ್ಲಿಯೇ ವಾಸವಿದ್ದ. ಘಟನಾ ಸ್ಥಳಕ್ಕೆ ತಲಘಟ್ಟಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
BIG NEWS : ಪ್ರಿಯತಮೆ ಕೊಂದು ಶವ ಮಣ್ಣಲ್ಲಿ ಹೂತು ಹಾಕಿದ್ದ ಕೇಸ್ : ಆರೋಪಿ ಮನೆಗೆ ಬೆಂಕಿ ಹಚ್ಚಿದ ಮಹಿಳೆ ಕುಟುಂಬಸ್ಥರು
ಚಾಮರಾಜನಗರ : ಪ್ರಿಯತಮೆ ಸೋನಾಕ್ಷಿ ಕೊಂದು ನದಿ ದಡದಲ್ಲಿ ಹೂತಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿ ಮಾದೇಶನ ಮನೆಯ ಮೇಲೆ ಸೋನಾಕ್ಷಿ ಕುಟುಂಬಬಸ್ಥರು ದಾಳಿ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮೊಳೆಯಲ್ಲಿ ಆರೋಪಿ ಮಾದೇಶನ ಮನೆಗೆ ಬೆಂಕಿ ಹಾಕಿದ್ದಾರೆ ಮನೆಯ ಮೇಲೆ ದಾಳಿ ನಡೆಸಿ ಸೋನಾಕ್ಷಿ ಕುಟುಂಬಸ್ಥರು ಮಾದೇಶನ ಮನೆಗೆ ಬೆಂಕಿ ಹಚ್ಚಿದ್ದಾರೆ. ಕಳೆದ ಐದು ದಿನದ ಹಿಂದೆ ಸೋನಾಕ್ಷಿ ತಲೆಗೆ ಹೊಡೆದು ಮಾದೇಶ ಕೊಲೆ ಮಾಡಿದ್ದ. ಹಳೆ ಹಂಪಾಪುರ ಬಳಿ ಸುವರ್ಣಾವತಿ ನದಿ ದಡದಲ್ಲಿ ಆಕೆಯ ಶವ ಹೂತಿದ್ದ. ಎರಡು ಅಡಿ ಹಳ್ಳ ನೋಡಿ ಸೋನಾಕ್ಷಿ ಶವ ಹೂತಿದ್ದ. ಬಳಿಕ ನಾಯಿಗಳು ಶವ ಎಳೆದು ಹೊರಗಡೆ ತಂದಾಗ ಸೋನಾಕ್ಷಿಯ ಕೊಲೆ ಬೆಳಕಿಗೆ ಬಂದಿತ್ತು ಶವ ಪತ್ತೆಯ ಬಗ್ಗೆ ದನ ಮೇಯಿಸುವವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ಮಾದೇಶನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಕೊಳ್ಳೇಗಾಲ ಟೌನ್ ಠಾಣೆ ಪೋಲಿಸರ ವಶದಲ್ಲಿ ಆರೋಪಿ ಮಾದೇಶ ಇದ್ದಾನೆ. ಪತಿ ಮತ್ತು…
ಬೆಂಗಳೂರು : ವಸತಿ ಯೋಜನೆ ಅಡಿ ಮನೆ ಹಂಚಿಕೆಯಲ್ಲಿ ಲಂಚ ಪಡೆದಿರುವ ಆರೋಪದ ಕುರಿತು ಶಾಸಕ ಬಿ ಆರ್ ಪಾಟೀಲ್ ಅವರ ಆಡಿಯೋ ವೈರಲ್ ಆಗಿರುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪ್ರತಿಕ್ರಿಯೆ ನೀಡಿದ್ದು, ಈ ಒಂದು ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಬಿ ಆರ್ ಪಾಟೀಲ್ ಅವರ ಬಾಯಿಮುಚ್ಚಿಸುವ ಪ್ರಯತ್ನ ಮಾಡಬಹುದು ಎಂದು ಗಂಭೀರವಾಗಿ ಆರೋಪಿಸಿದರು. ಇನ್ನು ಈ ಒಂದು ಘಟನೆ ಸಂಬಂಧ ಶಾಸಕ ರಾಜು ಕಾಗೆ ಸಹ ಇನ್ನೆರಡು ದಿನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಕೊಟ್ಟರು ಆಶ್ಚರ್ಯಪಡಬೇಕಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ವಿಚಾರವಾಗಿ, ಶಾಸಕ ರಾಜು ಕಾಗೆ ಮಾತ್ರ ಅಲ್ಲ ಅಂತಹ ಹತ್ತಾರು ಜನರು ಇದ್ದಾರೆ. ಒಬ್ಬೊಬ್ಬರಾಗಿ ಬಾಯಿ ಬಿಡುತ್ತಾರೆ ನೀವೇ ನೋಡ್ತಾ ಇರಿ ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಲಂಚ ಆರೋಪ ಮಾಡಿದ್ದಾರೆ ಸಿಎಂ ಮುಂದೆ ವಾಸ್ತವಿಕ ಸ್ಥಿತಿ ಹೇಳುತ್ತೇನೆ ಎಂದಿದ್ದಾರೆ. ಬಿ ಆರ್ ಪಾಟೀಲ್ ಬಾಯಿಮುಚ್ಚಿಸುವ…
ರಾಯಚೂರು : ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯಿಂದ ನನಗೆ ನೋವಾಗಿದೆ ಹಾಗಾಗಿ ಎರಡು ದಿನದಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಕೊಟ್ಟರು ಯಾವುದೇ ಆಶ್ಚರ್ಯ ಇಲ್ಲ ಎಂದು ಶಾಸಕ ರಾಜು ಕಾಗೆ ಎಚ್ಚರಿಸಿದ್ದಾರೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಅವರನ್ನು ಕರೆದು ನಾನು ಮಾತನಾಡುತ್ತೇನೆ ಎಂದು ತಿಳಿಸಿದರು. ರಾಯಚೂರಿನಲ್ಲಿ ಇದೆ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಅನುದಾನದಲ್ಲಿ ಕ್ಷೇತ್ರಕ್ಕೆ ಹಣ ಬಂದರೂ ಆರ್ಡರ್ ಕೊಟ್ಟಿಲ್ಲ ಎಂಬ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಸಿಎಂ ಅನುದಾನ ಅಂತ ಇದೆಯಾ? ಅವರು ಏನು ಬೇಕಾದರೂ ಹೇಳುತ್ತಾರೆ. ಆದರೆ ಸಿಎಂ ವಿಶೇಷ ಅನುದಾನ ಅಂತ ಎಲ್ಲಿಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇನ್ನು ಈ ವಿಚಾರವಾಗಿ ನೀವು ಕರೆ ಮಾಡಿ ಬಿ ಆರ್ ಪಾಟೀಲ್ ಗೆ ಕರೆದಿದ್ದೀರಿ ಅಂತ ಪ್ರಶ್ನೆ ಕೇಳಿದಾಗ ನಾನು ರಾಯಚೂರಿಗೆ ಬರುತ್ತೇನೆ ಅಂತ ಹೇಳಿದ್ದೆ. ಆಗ ಅವರು ರಾಯಚೂರಿಗೆ ನನ್ನ…
ಬೆಂಗಳೂರು : ವಸತಿ ಯೋಜನೆಯ ಅಡಿಯಲ್ಲಿ ಮನೆಗಳ ಹಂಚಿಕೆಯಲ್ಲಿ ಲಂಚ ಪಡೆದಿರುವ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಾಜ್ಯ ಕಾಂಗ್ರೆಸ್ ಪಕ್ಷದಲ್ಲೇ ಹಲವು ಶಾಸಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದರ ಬೆನ್ನಲ್ಲೆ ಇದೀಗ ರಾಜು ಕಾಗೆ ಆಡಳಿತ ವ್ಯವಸ್ಥೆಯಿಂದ ನನಗೆ ನೋವಾಗಿದ್ದು, ಎರಡು ದಿನದಲ್ಲೇ ರಾಜೀನಾಮೆ ಕೊಟ್ಟರು ಕೊಡಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಇದೀಗ ಮತ್ತೊರ್ವ ಶಾಸಕ ಬೇಳೂರು ಗೋಪಾಲಕೃಷ್ಣ ಸಚಿವ ಜಮೀರ್ ಅಹ್ಮದ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಒಳ್ಳೆಯದು ಎಂದು ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಮೀರ್ ರಾಜಿನಾಮೆ ಕೊಡೋದು ಒಳ್ಳೆಯದು. ಹಗರಣ ಆಗಿಲ್ಲ ಅಂದರೆ ಮತ್ತೆ ಸ್ಥಾನ ಪಡೆಯಲಿ ಈ ಹಿಂದೆ ಬೇರೆ ಬೇರೆ ಹಗರಣದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ ತನಿಖೆ ಆದಮೇಲೆ ಮತ್ತೆ ಸ್ಥಾನ ಪಡೆದರೆ ಒಳ್ಳೆಯದು.ಈ ಕುರಿತು ತನಿಖೆ ಮಾಡಿ ಆರೋಪ ಬಂದಿರುವ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ಕೊಡೋದು ಒಳ್ಳೆಯದು ತನಿಖೆ ಎದುರಿಸಿದ ಬಳಿಕ ಮತ್ತೆ ಹೊರಗಡೆ ಬಂದು…
ಬೆಂಗಳೂರು : ವಸತಿ ಯೋಜನೆಯಡಿಯಲ್ಲಿ ಮನೆ ಹಂಚಿಕೆ ವೇಳೆ ಲಂಚ ಪಡೆದಿರುವ ಬಿ.ಆರ್.ಪಾಟೀಲ್ ಆಡಿಯೋ ವೈರಲ್ ವಿಚಾರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದು, ಜನರಲ್ ಆಗಿ ಗ್ರಾಮಪಂಚಾಯ್ತಿಗೆ ಕಳಿಸ್ತೇವೆ ಮುನ್ಸಿಪಾಲಿಟಿಗೆ ಬಂದ್ರೆ ಮನೆ ಕೊಡ್ತಾರೆ ಇಷ್ಟು ಮಾತ್ರ ನನಗೆ ಗೊತ್ತಿರೋದು.ಬಿ.ಆರ್.ಪಾಟೀಲರು ಸೋಶಿಯಲ್ ಮೂವ್ ಮೆಂಟ್ ನಿಂದ ಬಂದವರು ಹಾಗಾಗಿ ಇದರ ಬಗ್ಗೆ ಹೆಚ್ಚು ಗೊತ್ತಿಲ್ಲ ಎಂದು ತಿಳಿಸಿದರು. ಮಧ್ಯಮಗಳೊಂದಿಗೆ ಮಾತನಾಡಿದ ಅವರು, ಮನೆಗಳನ್ನ ಆಯ್ಕೆ ಮಾಡೋದು ಪಂಚಾಯ್ತಿಗೆ ಇರುತ್ತೆ ಆದರೆ ವಕ್ಯಾನ್ಸಲ್ ಮಾಡೋದು ನಮಗಿರುತ್ತೆ. ಶಾಸಕರು ವಸತಿ ಹಂಚಿಕೆ ಅಧ್ಯಕ್ಷರಿರ್ತಾರೆ. ಗ್ರಾಮಪಂಚಾಯ್ತಿಯವರೇ ಮನೆ ಅಲಾಟ್ ಮಾಡೋದು. ಭ್ರಷ್ಟಾಚಾರದ ಬಗ್ಗೆ ನಾವು ಹೇಳ್ತೇವೆ. ನಾಗೇಂದ್ರ ಮೇಲೂ ಆರೋಪವಿತ್ತು. ಅವರು ಏನು ಡಿಸೈಡ್ ಮಾಡಿದ್ರು ಗೊತ್ತಲ್ಲ. ಜಮೀರ್ ಮೇಲೂ ಆರೋಪ ಬಂದಿದೆ.ಆದರೆ ಇದರಲ್ಲಿ ಜಮೀರ್ ಪಾತ್ರ ಏನು? ಪಂಚಾಯ್ತಿಯಲ್ಲಿ ನಡೆಯೋದು ಇವರೇಗೆ ಜವಾಬ್ದಾರಿ ಆಗ್ತಾರೆ ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದರು. ಕಾಂಗ್ರೆಸ್ ಶಾಸಕರ ಅಸಮಾಧಾನ ಹಾಗು ಸರ್ಕಾರದ ನಡೆಗೆ ರಾಜುಕಾಗೆ…
ಲಕ್ನೋ : ಉತ್ತರ ಪ್ರದೇಶದ ಲಕ್ನೋ ನಲ್ಲಿ ಘೋರವಾದ ದುರಂತ ನಡೆದಿದ್ದು ಬಾಲಕನೊಬ್ಬ ನದಿಯ ದಂಡೆಯಲ್ಲಿ ಎಮ್ಮೆಗೆ ಸ್ನಾನ ಮಾಡಿಸುತ್ತಿರುವಾಗಲೇ ಏಕಾಏಕಿ ಮೊಸಳೆ ದಾಳಿ ಮಾಡಿ ಬಾಲಕನನ್ನು ಎಳೆದೊಯ್ದಿರುವ ಘಟನೆ ನಡೆದಿದೆ. ಹೌದು ಈ ಒಂದು ಘಟನೆಯಿಂದ ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಿನ್ನೆ ಈ ಘಟನೆ ನಡೆದಿದೆ. ರಾಜಾ ಬಾಬು ಅಲಿಯಾಸ್ ನ್ಯಾನ್ ಯಾದವ್ ನಾಪತ್ತೆಯಾಗಿರುವ ಬಾಲಕ ಎನ್ನಲಾಗಿದೆ.ರಾಜಾ ಬಾಬು ತನ್ನ ಎಮ್ಮೆಗಳನ್ನು ಸ್ನಾನ ಮಾಡಿಸಲು ನದಿಗೆ ಕರೆದುಕೊಂಡು ಹೋಗಿದ್ದ.ಈ ವೇಳೆ ನದಿ ತೀರದಲ್ಲಿ ಮೊಸಳೆಯೊಂದು ಕಾಣಿಸಿಕೊಂಡಿದ್ದು, ಬಾಲಕನನ್ನು ಘಾಗ್ರಾ ನದಿಗೆ ಎಳೆದುಕೊಂಡು ಹೋಗಿದೆ. ಮೊಬೈಲ್‌ನಲ್ಲಿ ಈ ಆಘಾತಕಾರಿ ಘಟನೆಯ ವಿಡಿಯೋ ಸೆರೆಯಾಗಿದ್ದು, ಮೊಸಳೆ ಹಾಗೂ ಬಾಲಕನ ತಲೆ ವಿಡಿಯೋದಲ್ಲಿ ಕಾಣಿಸುತ್ತದೆ.ಮೊಸಳೆ ನದಿ ಆಳಕ್ಕೆ ಹೋದ ಬಳಿಕ ಸ್ಥಳೀಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿ ಬಾಲಕನ ಪತ್ತೆ ಕಾರ್ಯ ಶುರು ಮಾಡಿದ್ದಾರೆ. ಆದರೆ ಗಂಟೆಗಟ್ಟಲೇ ಹುಡುಕಿದರೂ ಬಾಲಕ ಪತ್ತೆಯಾಗಿಲ್ಲವೆಂದು ವರದಿ ತಿಳಿಸಿದೆ. https://twitter.com/sirajnoorani/status/1936882908905775596?t=5MQTLhh0wcEODQLqPcSKew&s=19
ಆಂಧ್ರಪ್ರದೇಶ : ಇತ್ತೀಚಿಗೆ ನವ ವಿವಾಹಿತ ಗಂಡು ಮಕ್ಕಳ ಕೊಲೆ ಪ್ರಕರಣಗಳು ಇಡೀ ದೇಶವನ್ನೇ ಬಿಚ್ಚಿಬಿಳಿಸುತ್ತಿವೆ. ಮದುವೆಯಾದ ಬಳಿಕ ಅಕ್ರಮ ಸಂಬಂಧ ಹೊಂದಿದ ಪತ್ನಿಯರು ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಭೀಕರವಾಗಿ ಕೊಲೆ ಮಾಡಿರುವ ಹಲವಾರು ಘಟನೆಗಳು ನಡೆದಿವೆ. ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಮೇಘಾಲಯಕ್ಕೆ ಹನಿಮೂನ್ ಗೆ ಎಂದು ತೆರಳಿದ್ದ ರಾಜಾ ರಘುವಂಶಿಯ ಕೊಲೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಇದೀಗ ಈ ಒಂದು ಕೊಲೆ ಮಾದರಿಯಲ್ಲಿಯೇ ಆಂಧ್ರಪ್ರದೇಶದಲ್ಲಿ ಮತ್ತೊಂದು ಘಟನೆ ನಡೆದಿದ್ದು, ಆಂಧ್ರಪ್ರದೇಶದ ಗದ್ವಾಲ್ ಪಟ್ಟಣದಲ್ಲಿ ನವವಿವಾಹಿತರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು ಮೇಘಾಲಯದಲ್ಲಿ ನಡೆದ ರಾಜಾ ರಘುವಂಶಿ ಕೊಲೆಯನ್ನು ನೆನಪಿಸುತ್ತದೆ. ತೆಲಂಗಾಣದ ಗದ್ವಾಲ್ನ ರಾಜವೀಧಿನಗರದ 32 ವರ್ಷದ ತೇಜೇಶ್ವರ್ ನಂದ್ಯಾಲ್ ಜಿಲ್ಲೆಯ ಪನ್ಯಂ ಪೊಲೀಸ್ ಠಾಣೆ ವ್ಯಾಪ್ತಿಯ ಸುಗಲಿಮೆಟ್ಟದ ಎಚ್‌ಎನ್‌ಎಸ್‌ಎಸ್ ಕಾಲುವೆಯ ಬಳಿ ಶವವಾಗಿ ಪತ್ತೆಯಾಗಿದ್ದು, ಅವರ ಪತ್ನಿ ಮೇಲೆ ಅನುಮಾನ ಮೂಡಿದೆ. ಹೌದು ತೆಜೇಶ್ವರ್ ಕರ್ನೂಲಿನ ಐಶ್ವರ್ಯಾ ಎಂಬುವವರನ್ನು ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.…














