Author: kannadanewsnow05

ಬೆಳಗಾವಿ : ಬೆಳಗಾವಿಯಲ್ಲಿ ಭೀಕರವಾದ ಕಾರು ಅಪಘಾತವಾಗಿದ್ದು ಮಾಜಿ ಶಾಸಕ ಆರ್ ವಿ ಪಾಟೀಲ್ ಪುತ್ರ ಹಾಗೂ ಇನ್ನೊಂದು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ಒಂದು ಅಪಘಾತದಲ್ಲಿ ಪತಿ ಪತ್ನಿ ಹಾಗೂ ಓರ್ವ ಮಗು ಸಾವನ್ನಪ್ಪಿದ್ದರೆ ಇನ್ನೂ ಮಾಜಿ ಶಾಸಕ ಆರ್ ವಿ ಪಾಟೀಲ್ ಪುತ್ರನಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ಈ ಒಂದು ಅಪಘಾತ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಹೊರ ವಲಯದ ಬೈಲಹೊಂಗಲ-ಬೆಳಗಾವಿಗೆ ಸಂಪರ್ಕಿಸುವ ಹೆದ್ದಾರಿಯಲ್ಲಿ ಸಂಭವಿಸಿದೆ.ಬೆಳಗಾವಿಯಿಂದ ಬೈಲಹೊಂಗಲ ಹೋಗುತ್ತಿದ್ದ ಕೀಯಾ ಕಾರು ಓವರ್ ಟೆಕ್ ಮಾಡಲು ಹೋಗಿ ಎದುರಗಡೆ ಬರುತ್ತಿದ್ದ ಅಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ. ಅಲ್ಟೋ ಕಾರಿನಲ್ಲಿದ್ದ ಗಂಡ ಅಯುಮ್, ಹೆಂಡತಿ, ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದೆ. ಮತ್ತೊಂದು ಮಗುವಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ. ಕೀಯಾ ಕಾರಿನಲ್ಲಿದ್ದ ಮಾಜಿ ಶಾಸಕ ಆರ್.ವಿ ಪಾಟೀಲ್ ಪುತ್ರ ಸೇರಿದಂತೆ ಮತ್ತೊಬ್ಬರು ಗಾಯಗೊಂಡಿದ್ದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಶವಗಳು…

Read More

ನವದೆಹಲಿ : ಸೆಕ್ಯೂರಿಟಿ ಗಾರ್ಡ್ ಒಬ್ಬರು ಕಾರಿನ ಚಾಲಕನಿಗೆ ಸುಖಾ ಸುಮ್ಮನೆ ಹಾರ್ನ್ ಮಾಡಬೇಡಿ ಎಂದು ಹೇಳಿದ್ದಾರೆ. ಈ ವೇಳೆ ಚಾಲಕ ಸೆಕ್ಯೂರಿಟಿ ಕಾರ್ಡ್ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಒಂದು ಘಟನೆ ನೈಋತ್ಯ ದೆಹಲಿ ವಸಂತ್ ಕುಂಜ್ ನಲ್ಲಿ ನಡೆದಿದೆ. ಥಾರ್ ಕಾರು ಚಾಲಕನೊಬ್ಬ ಹಾರ್ನ್ ಮಾಡಬೇಡಿ ಎಂದು ಹೇಳಿದ ಭದ್ರತಾ ಸಿಬ್ಬಂದಿ ಮೇಲೆ ಕಾರು ಹರಿಸಿರುವ ಭೀಕರ ಘಟನೆ ನಡೆದಿದೆ. ಕಾರು ಹರಿದ ಪರಿಣಾಮ ಸಿಬ್ಬಂದಿಯ ಎರಡೂ ಕಾಲುಗಳಲ್ಲಿ 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮೂಳೆಗಳು ಮುರಿದಿವೆ. ಗಾಯಾಳುವನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಸಂತ್ ಕುಂಜ್ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಥಾರ್ ಕಾರು ಚಾಲಕನನ್ನು ಪ್ರಸ್ತುತ ಬಂಧಿಸಲಾಗಿದೆ. ಬಂಧಿತ ಥಾರ್ ಚಾಲಕನನ್ನು ರಂಗಪುರಿ ನಿವಾಸಿ ವಿಜಯ್ ಅಲಿಯಾಸ್ ಲಾಲಾ (24) ಎಂದು ಗುರುತಿಸಲಾಗಿದೆ. ಘಟನೆ ಹಿನ್ನೆಲೆ? ಸಂತ್ರಸ್ಥ ಭದ್ರತಾ ಸಿಬ್ಬಂದಿ ರಾಜೀವ್ ಕುಮಾರ್ ತನ್ನ ಕುಟುಂಬದೊಂದಿಗೆ ಮಹಿಪಾಲ್‌ಪುರದಲ್ಲಿ…

Read More

ಕಲಬುರ್ಗಿ : ಕಲ್ಬುರ್ಗಿಯಲ್ಲಿ ಭೀಕರವಾದ ಕೊಲೆಯಾಗಿದ್ದು ಆಸ್ತಿಯ ವಿಚಾರವಾಗಿ ಅಳಿಯಂದರಿಬ್ಬರೂ ಸೇರಿ ಅತ್ತೆಯನ್ನೇ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲ್ಬುರ್ಗಿ ಜಿಲ್ಲೆಯ ಅಫ್ಜಲ್ ಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನ ಬಂದರವಾಡ್ ಗ್ರಾಮದ ನಿವಾಸಿ ಲಕ್ಕಮ್ಮ (40) ಎಂದು ಗುರುತಿಸಲಾಗಿದೆ.ಮನೆ ಕಟ್ಟುವ ವಿಚಾರದಲ್ಲಿ ಈ ಹಿಂದೆ ಕುಟುಂಬದಲ್ಲೇ ಜಗಳವಾಗಿತ್ತು. ಅದೇ ಹಳೆಯ ವೈಶಮ್ಯದಿಂದಾಗಿ ಈಗ ಮಹಿಳೆಯ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ. ಸದ್ಯ ಕೊಲೆ ಆರೋಪಿಗಳಾದ ಸಂತೋಷ್ (35) ಮಂಜುನಾಥ್ (25) ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಫಜಲಪುರ ವೃತ್ತ ನಿರೀಕ್ಷಕ ಚನ್ನಯ್ಯ ಅವರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ದುರು ಶ್ರೀನಿವಾಸಲು ಸೇರಿದಂತೆ ಮತ್ತಿತರ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕೋಲಾರ : ಸೀಜ್ ಮಾಡಿದ ಬೈಕ್ ಬಿಡಲು PSI 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಇದೀಗ ಪಿಎಸ್ಐನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸದ್ದಾರೆ. ಬೂದಿಕೋಟೆ ಪಿಎಸ್ಐ ಸುನಿಲ್ ಕುಮಾರನ್ನು ಈಗ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆಯಲ್ಲಿ ಮಧ್ಯವರ್ತಿಗಳಿಂದ 10,000 ಲಂಚ ಪಡೆದ ಆರೋಪ ಪಿಎಸ್ಐ ಸುನಿಲ್ ಕುಮಾರ್ ಮೇಲೆ ಬಂದಿದೆ. ಬೂದಿಕೋಟೆ ಪೊಲೀಸ್ ಠಾಣೆ ಬಾಗಿಲು ಹಾಕಿ ಇದೀಗ ಲೋಕಾಯುಕ್ತ ಪೊಲೀಸರು ಪಿಎಸ್ಐ ಸುನಿಲ್ ಕುಮಾರ್ ವಿಚಾರಣೆ ನಡೆಯುತ್ತಿದೆ.

Read More

ಬೆಂಗಳೂರು : ಕಾರ್ಯಕ್ರಮ ಒಂದರಲ್ಲಿ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿ ಫಿಲಂ ಚೇಂಬರ್ ನಿರ್ಧಾರ ಕೈಗೊಂಡಿತು ಈ ಕುರಿತು ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಅವರು ಸೋನು ನಿಗಮ್ ಅವರನ್ನು ಕನ್ನಡಿಗರ ಕ್ಷಮೆ ಕೇಳುವವರೆಗೂ ಬ್ಯಾನ್ ಮಾಡಲಾಗಿದೆ ಎಂದು ತಿಳಿಸಿದರು. ತನ್ನನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿರುವ ವಿಚಾರ ತಿಳಿದರೂ ಸಹ ಸೋನು ನಿಗಮ್ ತಮ್ಮ ಹೇಳಿಕೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಕನ್ನಡದಿಂದ ಸಹಕಾರ ಬೆನ್ನಲ್ಲೇ ಸೋನು ನಿಗಮ್ ನಾನು ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತಲೂ ಕೂಡ ಕನ್ನಡ ಹಾಡುಗಳನ್ನು ಅತಿ ಹೆಚ್ಚು ಗೌರವದಿಂದ ನೋಡಿದ್ದೇನೆ. ಈ ಮಾತಿಗೆ ಸಾಮಾಜಿಕ ಮಾಧ್ಯಮಗಳಲ್ಲಿನ ವಿಡಿಯೋಗಳು ಸಾಕ್ಷಿ ಎಂದಿದ್ದಾರೆ. ಕರ್ನಾಟಕದಲ್ಲಿನ ಕಾರ್ಯಕ್ರಮಕ್ಕಾಗಿ ತಯಾರಿ ನಡೆಸಿರುತ್ತೇನೆ. ಒಂದು ಗಂಟೆಗೂ ಹೆಚ್ಚು ಕಾಲ ತಯಾರಿಯನ್ನು ನಡೆಸಿರುತ್ತೇನೆ. ಅಂದು ನಾನು ಮೊದಲ ಹಾಡು ಹಾಡಿದ ತಕ್ಷಣ ಪ್ರಚೋದಿಸಿದರು. ನಾನು ಅವರಿಗೆ ತುಂಬಾ ಶಾಂತವಾಗಿ ಪ್ರೀತಿಯಿಂದ ಹೇಳಿದೆ. ಕಾರ್ಯಕ್ರಮ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಮತ್ತೊಂದು ಭೀಕರವಾದ ಕೊಲೆ ನಡೆದಿದ್ದು, ತನ್ನ ಕಣ್ಣೆದುರೇ ತಂದೆಯನ್ನು ಕೊಚ್ಚಿ ಕೊಲೆ ಮಾಡಿದ್ದ ಮಾವನನ್ನು ಅಳಿಯೊನೊಬ್ಬ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಹೌದು ಬೆಂಗಳೂರಿನಲ್ಲಿ ತಂದೆ ಕೊಲೆ ಪ್ರತೀಕಾರಕ್ಕೆ ಮಾವನ ಬರ್ಬರ ಹತ್ಯೆಯಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಮಾವ ಸಿರಾಜ್ (32) ಎನ್ನುವ ವ್ಯಕ್ತಿಯನ್ನು ಅಳಿಯ ಫಹಾದ್ ಹತ್ಯೆಗೈದಿದ್ದಾನೆ. ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಕೊಲೆ ನಡೆದಿದೆ. ಆರೋಪಿ ಚಿಕ್ಕವನಿದ್ದಾಗ ಆತನ ತಂದೆಯನ್ನು ಸಿರಾಜ್ ಕೊಲೆ ಮಾಡಿದ್ದ. ಕಣ್ಣೆದುರೇ ಆತನ ತಂದೆಯನ್ನು ಸಿರಾಜ್ ಕೊಚ್ಚಿ ಕೊಲೆ ಮಾಡಿದ್ದ. ಇದೀಗ 16 ವರ್ಷಗಳ ಸೇಡಿಗಾಗಿ ಮಾವ ಸಿರಾಜ್ ನನ್ನು ಫಹಾದ್ ಹತ್ಯೆಗೈದಿದ್ದಾನೆ. ತಂದೆ ಅನ್ಸರ್ ಪಾಷಾ ನನ್ನು ಸಿರಾಜ್ 16 ವರ್ಷಗಳ ಹಿಂದೆ ಕೊಲೆ ಮಾಡಿದ್ದ. ಅನ್ವರ್ ಪಾಷಾ ಹತ್ಯೆ ಪ್ರಕರಣದಲ್ಲಿ ಸಿರಾಜ್ 10 ವರ್ಷ ಜೈಲಿನಲ್ಲಿ ಇದ್ದ ಸದ್ಯ ಕೊಲೆಯಾದ ಸಿರಾಜ್ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದ. ನಿನ್ನೆ ರಾತ್ರಿ ನಡು ರಸ್ತೆಯಲ್ಲಿಯೇ…

Read More

ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೌದು ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ತಕ್ಷಣ ಅವರನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ನಟ ಉಪೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ. ಇಂದು ಬೆಳಗ್ಗೆ ಅವರು ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದು ಓವರ್ ಆಸಿಡಿಟಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಇದೀಗ ಉಪೇಂದ್ರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಪೇಂದ್ರ ಅವರು ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Read More

ಪಂಜಾಬ್ : ಪಹಲ್ಗಾಂ ನಲ್ಲಿ ಉಗ್ರರ ದಾಳಿಯ ಬಳಿಕ ಭಾರತ ಸರ್ಕಾರ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಆದೇಶ ನೀಡಿತ್ತು. ಬಳಿಕ ಪಾಕಿಸ್ತಾನ್ ಪ್ರಜೆಗಳು ಭಾರತ ಬಿಟ್ಟು ತೊಲಗಿದ್ದರು. ಇದೀಗ ಪಂಜಾಬ್ ನಲ್ಲಿ ಬಿಎಸ್ಎಫ್ ಯೋಧರು ಪಾಕಿಸ್ತಾನ ಪ್ರಸಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೌದು ಪಂಜಾಬ್ ನ ಗುರುದಾಸ್ಪುರದಲ್ಲಿ ಪಾಕಿಸ್ತಾನ ಪ್ರಜೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಬಳಿಕ ಬಿಎಸ್ಎಫ್ ಯೋಧರು ಪಾಕಿಸ್ತಾನ ಪ್ರಜೆಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ವೇಳೆ ಪಾಕಿಸ್ತಾನ ಪ್ರಜೆ ಬಳಿ ಇದ್ದ ಕರೆನ್ಸಿ ಮತ್ತು ಐಡಿ ಕಾರ್ಡ್ ಅನ್ನು ಜಪ್ತಿ ಮಾಡಲಾಗಿದೆ.

Read More

ಮಂಡ್ಯ : ಕಾರ್ಯಕ್ರಮ ಒಂದರಲ್ಲಿ ಕನ್ನಡ ಹಾಡು ಹಾಡಿ ಎಂದಿದ್ದಕ್ಕೆ ಪಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿಗೆ ಹೋಲಿಸಿ ಕನ್ನಡಿಗರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಸೋನು ನಿಗಮ್ ವಿರುದ್ಧ ಈ ಹಿಂದೆ ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಇದೀಗ ಇದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಡ್ಯದಲ್ಲಿ ಕೂಡ ಸೋನು ನಿಗಮ್ ವಿರುದ್ಧ ದೂರು ದಾಖಲಾಗಿದೆ. ಹೌದು ಮಂಡ್ಯದಲ್ಲೂ ಇದೀಗ ಗಾಯಕ ಸೋನು ನಿಗಮ್ ವಿರುದ್ಧ ದೂರು ದಾಖಲಾಗಿದೆ. ಮಂಡ್ಯ ASP ಗೆ ಕನ್ನಡ ಸೇನೆ ಕಾರ್ಯಕರ್ತರು ದೂರು ನೀಡಿದ್ದಾರೆ. ಗಾಯಕ ಸೋನು ನಿಗಮ್ ಬಂಧಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ರಿಯಲ್ ಸ್ಟಾರ್ ಉಪೇಂದ್ರ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೌದು ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ತಕ್ಷಣ ಅವರನ್ನು ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ನಟ ಉಪೇಂದ್ರ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ. ಇಂದು ಬೆಳಗ್ಗೆ ಅವರು ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದು ಓವರ್ ಆಸಿಡಿಟಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಅದು ಬಿಟ್ರೆ ಇನ್ನು ಯಾವುದೇ ಗಂಭೀರವಾದ ಸಮಸ್ಯೆ ಇಲ್ಲ ಎಂದು ಹೇಳಲಾಗುತ್ತಿದೆ.

Read More