Author: kannadanewsnow05

ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಭಾರಿ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿರುವ ಘಟನೆ ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೋಡಿಹಳ್ಳಿ ಬಳಿ ನಡೆದಿದೆ. ತಿರುವಿನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೋಡಿಹಳ್ಳಿ ಬಳಿ ಗ್ಯಾಸ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಅಡ್ಡಲಾಗಿ ಬಿದ್ದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ತರೀಕೆರೆ ಎಸಿ ಭೇಟಿ ನೀಡಿದ್ದಾರೆ. ಗ್ಯಾಸ್ ಸೋರಿಕೆ ತಡೆಗಟ್ಟಲು ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಪಾಕಿಸ್ತಾನ್ : ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪಾಕಿಸ್ತಾನದ ರಕ್ಷಣಾ ಸಚಿವ ಹುಚ್ಚುತನದ ಹೇಳಿಕೆ ನೀಡಿದ್ದಾರೆ ಭಾರತ ನಮ್ಮ ತಂಟೆಗೆ ಏನಾದರೂ ಬಂದರೆ ಜೀವನಪರ್ಯಂತ ನೆನಪಿಟ್ಟುಕೊಳ್ಳುವಂತೆ ಉತ್ತರ ನೀಡುತ್ತೇವೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದರೆ ನಮ್ಮ ಜೊತೆ ಇಡೀ ವಿಶ್ವವನ್ನೇ ನಾಶ ಮಾಡುತ್ತೇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬಡಾಯಿ ಹುಚ್ಚುತನದ ಹೇಳಿಕೆ ನೀಡಿದ್ದಾರೆ. ಭಾರತ ನಮ್ಮ ತಂಟೆಗೆ ಬಂದರೆ ಮರೆಯಲಾಗದ ಉತ್ತರ ನೀಡುತ್ತೇವೆ. ಇದುವರೆಗೂ ಯಾರು ನೀಡದಂತಹ ಪ್ರತ್ಯುತ್ತರ ನೀಡುತ್ತೇವೆ. ಜೀವನ ಪರ್ಯಂತ ನೆನಪಿಟ್ಟುಕೊಳ್ಳುವಂತೆ ಉತ್ತರ ನೀಡುತ್ತೇವೆ. ನಮ್ಮ ಮೇಲೆ ಇಸ್ರೇಲ್ ರೀತಿ ದಾಳಿಗೆ ಭಾರತ ಪ್ಲಾನ್ ಮಾಡಿದೆ. ನೆತನ್ಯಾಹೂ ಮಾಡಿದಂತೆ ದಾಳಿ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದರೆ ಸರ್ವನಾಶ ಮಾಡುತ್ತೇವೆ. ನಮ್ಮ ಜೊತೆ ಯಾರನ್ನು ಕೂಡ ಉಳಿಸುವುದಿಲ್ಲ. ಇಡೀ ವಿಶ್ವವನ್ನೇ ನಾಶ ಮಾಡುತ್ತೇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಬಡಾಯಿ ಹುಚ್ಚುತನದ ಹೇಳಿಕೆ ನೀಡಿದ್ದಾರೆ.

Read More

ಶ್ರೀನಗರ : ಜಮ್ಮು ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ಭಯೋತ್ಪಾದಕರ ಜೊತೆ ನಂಟು ಹೊಂದಿದ್ದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರ ಬಳಿ ಇದ್ದ 1 ಪಿಸ್ತೂರ್, 1 ಗ್ರೇನೆಡ್ ಹಾಗು ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಜಮ್ಮು ಕಾಶ್ಮೀರದ ಪಹಲ್ಗಾಂ ನಲ್ಲಿ ಕಳೆದ ಏಪ್ರಿಲ್ 22ರಂದು ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಕನ್ನಡಿಗರು ಸೇರಿ 26 ಜನ ಅಮಾಯಕರು ಬಲಿಯಾಗಿದ್ದರು. ಇದೀಗ ಘಟನೆ ನಡೆದ ಸ್ಥಳದಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಓಡಾಡುತ್ತಿದ್ದ ಶಂಕಿತನನ್ನು ಅರೆಸ್ಟ್ ಮಾಡಲಾಗಿದೆ. ಎಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಘಟನಾ ಸ್ಥಳದಲ್ಲಿ ಓಡಾಡುತ್ತಿದ್ದ ಶಂಕಿತ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಓಡಾಡುತ್ತಿದ್ದ ಶಂಕಿತನನ್ನು ಇದೀಗ ಭದ್ರತಾಪಡೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

Read More

ಚಿತ್ರದುರ್ಗ : ಚಿತ್ರದುರ್ಗದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಕೆರೆಯಲ್ಲಿ ಕುರಿ ತೊಳೆಯಲು ತೆರಳಿದ್ದ ದಂಪತಿಗಳು ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ದುರ್ಗ ತಾಲೂಕಿನ ಕಾನೆಹಳ್ಳದಲ್ಲಿ ನಡೆದಿದೆ. ಹೌದು ಕಾನೆಹಳ್ಳದಲ್ಲಿ ಕುರಿ ತೊಳೆಯಲು ತೆರಳಿದ್ದ ದಂಪತಿಗಳು ನೀರು ಪಾಲಾಗಿದ್ದಾರೆ. ಅತ್ತಿಮಗೆ ಗ್ರಾಮದ ತಿಮ್ಮಯ್ಯ (35) ಮತ್ತು ಪುಟ್ಟಮ್ಮ (32) ನೀರು ಪಾಲಾಗಿದ್ದಾರೆ. ಪತ್ನಿ ಪುಟ್ಟಮ್ಮಳ ಶವ ಪತ್ತೆಯಾಗಿದ್ದು, ಪತಿ ತಿಮ್ಮಯ್ಯ ಶವಕ್ಕಾಗಿ ಇದೀಗ ಅಗ್ನಿಶಾಮಕ ದಳ ಸಿಬ್ಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ.ಘಟನೆ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಡಿಕೇರಿ : ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆಯಂತೆ ಇದೀಗ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಗನ್ ನಿಂದ ಗುಂಡು ಹಾರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಭ್ಯತ್ ಮಂಗಲದಲ್ಲಿ ನಡೆದಿದೆ. ಅಣ್ಣನಿಂದ ಹತ್ಯೆಯಾದ ತಮ್ಮನನ್ನು ಕೊಳಂಬೆ ವಿನು ಬೆಳ್ಯಪ್ಪ (53) ಎಂದು ತಿಳಿದುಬಂದಿದೆ. ಇನ್ನು ತಮ್ಮನನ್ನು ಕೊಂದವನನ್ನು ಮಣಿ ಎಂದು ತಿಳಿದುಬಂದಿದೆ.ಅಭ್ಯತ್ ಮಂಗಲದಲ್ಲಿ ತೋಟದ ಗೋದಾಮಿನಲ್ಲಿ ಪೈಪ್ ಗಳ ಪರಿಶೀಲನೆಗೆಂದು ವಿನು ಬೆಳ್ಯಪ್ಪ ತೆರಳಿದ್ದರು. ಈ ವೇಳೆ ಹಿಂದಿನಿಂದ ಬಂದ ಸಹೋದರಮಣಿ ಏಕಾಏಕಿ ತಮ್ಮನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟಿಗೆ ವಿನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಮ್ಮನನ್ನು ಕೊಂದ ಬಳಿಕ ಅಣ್ಣಮಣಿ ಪರಾರಿಯಾಗಲು ಯತ್ನಿಸಿದ್ದಾನೆ ಈ ವೇಳೆ ಪೊಲೀಸರು ಪ್ರಾಣಿ ಆಗೋದಕ್ಕೆ ಮನಿಗೆ ಅವಕಾಶ ನೀಡದೆ ತಕ್ಷಣ ಅರೆಸ್ಟ್ ಮಾಡಿದ್ದಾರೆ ಕೊಲೆ ಕುರಿತಂತೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಶ್ರೀನಗರ : ಜಮ್ಮು ಕಾಶ್ಮೀರದ ಪಹಲ್ಗಾಂ ನಲ್ಲಿ ಕಳೆದ ಏಪ್ರಿಲ್ 22ರಂದು ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಕನ್ನಡಿಗರು ಸೇರಿ 26 ಜನ ಅಮಾಯಕರು ಬಲಿಯಾಗಿದ್ದರು. ಇದೀಗ ಘಟನೆ ನಡೆದ ಸ್ಥಳದಲ್ಲಿ ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಓಡಾಡುತ್ತಿದ್ದ ಶಂಕಿತನನ್ನು ಅರೆಸ್ಟ್ ಮಾಡಲಾಗಿದೆ. ಹೌದು ಎಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಘಟನಾ ಸ್ಥಳದಲ್ಲಿ ಓಡಾಡುತ್ತಿದ್ದ ಶಂಕಿತ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದೆ. ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಓಡಾಡುತ್ತಿದ್ದ ಶಂಕಿತನನ್ನು ಇದೀಗ ಭದ್ರತಾಪಡೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

Read More

ಉತ್ತರಪ್ರದೇಶ : ನಾವು ಗ್ಯಾಸ್ ಹಾಗೂ ಗೀಸರ್ ಸ್ಫೋಟವಾಗುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಉತ್ತರಪ್ರದೇಶದಲ್ಲಿ ಟಾಯ್ಲೆಟ್ ಸೀಟ್ ಸ್ಪೋಟ ವಾಗಿ ಶೌಚಾಲಯಕ್ಕೆ ತೆರಳಿದ್ದ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಕೊಟ್ಟಾಲಿ ಪ್ರದೇಶದಲ್ಲಿ ನಡೆದಿದೆ. ಹೌದು ಶೌಚಾಲಯದ ವೆಸ್ಟರ್ನ್ ಟಾಯ್ಲೆಟ್ ಸೀಟ್ ಸ್ಫೋಟಗೊಂಡು 20 ವರ್ಷದ ಯುವಕನಿಗೆ ಗಂಭೀರ ಗಾಯಗಳಾಗಿವೆ. ಮನೆಯ ಮಾಲೀಕ ಸುನಿಲ್ ಪ್ರಧಾನ್ ಅವರ 20 ವರ್ಷದ ಮಗ ಆಶು ನಗರ್ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೌಚಾಲಯದಲ್ಲಿದ್ದರು. ಮಲವಿಸರ್ಜನೆಯ ನಂತರ ಫ್ಲಶ್ ಮಾಡಿದರು. ಈ ವೇಳೆ ವೆಸ್ಟರ್ನ್ ಟಾಯ್ಲೆಟ್ ಸೀಟ್ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಈ ಸ್ಫೋಟದಿಂದ ಆಶು ಅವರ ಮುಖ, ಕೈಗಳು, ಕಾಲುಗಳು ಮತ್ತು ಖಾಸಗಿ ಭಾಗಗಳು ಸುಟ್ಟುಹೋಗಿವೆ.ಸ್ಫೋಟದ ಶಬ್ದ ಕೇಳಿ ಕುಟುಂಬ ಸದಸ್ಯರು ಶೌಚಾಲಯಕ್ಕೆ ಧಾವಿಸಿದರು. ಆಶು ಅವರನ್ನು ಬೆಂಕಿಯಿಂದ ರಕ್ಷಿಸಿ, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣವೇ ಗ್ರೇಟರ್ ನೋಯ್ಡಾದ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಶು…

Read More

ಹೈದ್ರಾಬಾದ್ : ಅನಂತಪುರ ಜಿಲ್ಲೆಯ ಓಬಳಾಪುರಂ ಮೈನಿಂಗ್ ಕಂಪನಿ (OMC) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇದೀಗ ಹೈದ್ರಾಬಾದ್ ಸಿಬಿಐ ವಿಶೇಷ ನ್ಯಾಯಾಲಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಅಪರಾಧಿ ಎಂದು ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಕೋರ್ಟ್ ಶಿಕ್ಷೆ ಪ್ರಕಟಿಸಿದ್ದು ಶಾಸಕ ಜನಾರ್ಧನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಹೌದು ಓಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಈ ಕುರಿತು ತೀರ್ಪು ಪ್ರಕಟಿಸಿದೆ. ಪ್ರಕರಣ ಸಂಬಂಧ ಹಿಂದೂ ದೆಹಲಿಯ ಸೀಬೆ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ವಿಚಾರಣೆಯ ಬಳಿಕ ಸಿಬಿಐ ನ್ಯಾಯಾಲಯವು ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ಧನರೆಡ್ಡಿ ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ಯಡಿಯೂರಪ್ಪ ಆಡಳಿತದಲ್ಲಿ ಈ ಒಂದು ಅಕ್ರಮ ಗಣಿಗಾರಿಕೆ ನಡೆದಿತ್ತು. ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಭಾಗದ ಓಬಳಾಪುರಂ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರಕರಣ ಇದಾಗಿದ್ದು,…

Read More

ನವದೆಹಲಿ : ಅನಂತಪುರ ಜಿಲ್ಲೆಯ ಓಬಳಾಪುರಂ ಮೈನಿಂಗ್ ಕಂಪನಿ (OMC) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಇದೀಗ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಅಪರಾಧಿ ಎಂದು ತೀರ್ಪು ನೀಡಿದೆ. ಹೌದು ಓಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಈ ಕುರಿತು ತೀರ್ಪು ಪ್ರಕಟಿಸಿದೆ. ಪ್ರಕರಣ ಸಂಬಂಧ ಹಿಂದೂ ದೆಹಲಿಯ ಸೀಬೆ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ವಿಚಾರಣೆಯ ಬಳಿಕ ಸಿಬಿಐ ನ್ಯಾಯಾಲಯವು ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ಧನರೆಡ್ಡಿ ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ಪ್ರಕರಣ ಹಿನ್ನೆಲೆ? 2009 ರಲ್ಲಿ ಅಂದಿನ ಆಂಧ್ರಪ್ರದೇಶ ಸರ್ಕಾರದ ಕೋರಿಕೆಯ ಮೇರೆಗೆ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಸಿಬಿಐ ತನಿಖೆಯನ್ನು ಪ್ರಾರಂಭಿಸಿತು. ಸಿಬಿಐ 2011 ರಲ್ಲಿ ತನ್ನ ಮೊದಲ ಚಾರ್ಜ್‌ಶೀಟ್ ಸಲ್ಲಿಸಿತು, ನಂತರ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ, ಗಾಲಿ ಜನಾರ್ದನ ರೆಡ್ಡಿ ಅವರ ಆಪ್ತ…

Read More

ಮೈಸೂರು : ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ ಪ್ರಜೆಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಆದೇಶ ನೀಡಲಾಗಿತ್ತು. ಇದೆ ವಿಚಾರಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಮೂವರು ಪಾಕಿಸ್ತಾನಿ ಮಕ್ಕಳಿಂದ ಇದೀಗ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪಾಕಿಸ್ತಾನಿ ತಂದೆಮೈಸೂರು ತಾಯಿಗೆ ಮೂವರು ಮಕ್ಕಳು ಜನಿಸಿದ್ದಾರೆ. ಬೀಬಿ ಯಮೀನಾ, ಮೊಹಮ್ಮದ್ ಮುದಸ್ಸಿರ್ ಹಾಗು ಮೊಹಮ್ಮದ್ ಯೂಸುಫ್ ಎಂಬ ಮಕ್ಕಳ ಪರವಾಗಿ ತಾಯಿ ರಾಂಷಾ ಜಹಾನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಮಕ್ಕಳ ಪರವಾಗಿ ತಾಯಿ ಮೈಸೂರಿನ ರಾಂಷಾ ಜಹಾನ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ಕುರಿತಂತೆ ಕೇಂದ್ರಕ್ಕೆ ನೋಟಿಸ್ ಮತ್ತು ವಿಚಾರಣೆ ಮೇ 8 ರಂದು ಹೈಕೋರ್ಟ್ ನಿಗದಿಪಡಿಸಿತು. ಪಾಕಿಸ್ತಾನದ ಮೊಹಮ್ಮದ್ ಫಾರೂಕ್ ಎಂಬಾತನೊಂದಿಗೆ ರಾಂಷ ಜಹಾನ್ ಮದುವೆಯಾಗಿದ್ದಾರೆ. 2015 ಸೆಪ್ಟೆಂಬರ್ 9 ರಲ್ಲಿ ಪಾಕಿಸ್ತಾನದ ಪಿಶಿನ್ ಎಂಬಲ್ಲಿ ಷರಿಯತ್ ನಂತೆ ವಿವಾಹವಾಗಿದ್ದಾರೆ. ಪಾಕಿಸ್ತಾನದ ಮಕ್ಕಳಿಗೆ ಪಾಕಿಸ್ತಾನಿ ಪೌರತ್ವ ನೀಡಲಾಗಿದ್ದು, ಆದರೆ ತಾಯಿ ರಾಂಷಾ ಜಹಾನ್ ಪಾಕಿಸ್ತಾನಿ ಪೌರತ್ವವನ್ನು ಪಡೆದಿರಲಿಲ್ಲ. 2025…

Read More